ಹಾ.ಮಾ.ನಾಯಕ
ಡಾ. ಹಾ. ಮಾ. ನಾಯಕ ಅವರು ಕನ್ನಡದ ಖ್ಯಾತ ಕವಿ, ಅಂಕಣಕಾರ, ಭಾಷಾಶಾಸ್ತ್ರಜ್ಞ ಮತ್ತು ಜಾನಪದ ವಿದ್ವಾಂಸ. ಹಾಮಾನಾ ಎಂದೇ ಪ್ರಸಿದ್ಧರಾಗಿದ್ದ ಹಾ. ಮಾ. ನಾಯಕರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ಅಂಕಣ ಬರಹಗಳನ್ನು ಮುನ್ನೆಲೆಗೆ ತಂದವರಲ್ಲಿ ನಾಯಕರೂ ಒಬ್ಬರು. "ಕನ್ನಡ ತನ್ನ ಮೊದಲ ಪ್ರೀತಿ; ಎರಡನೆಯ ಪ್ರೀತಿಯೂ ಅದೇ" ಎಂದು ಹೇಳುತ್ತ ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಬದುಕು ಸವೆಸಿದ ಹೋರಾಟಗಾರ.
ಹಾ.ಮಾ.ನಾಯಕ | |
---|---|
ಜನನ | ಮಾನಪ್ಪ ನಾಯಕ ೧೦ ಸೆಪ್ಟೆಂಬರ್ ೧೯೩೧ ಹಾರೋಗದ್ದೆ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ |
ಮರಣ | 10 November 2000 ಬೆಂಗಳೂರು, ಕರ್ನಾಟಕ, ಭಾರತ | (aged 69)
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಅಂಕಣಕಾರ, ಭಾಷಾಶಾಸ್ತ್ರಜ್ಞ, ಲೇಖಕ, ಸಂಪಾದಕ, ಕವಿ |
ಹೆಸರಾಂತ ಕೆಲಸಗಳು | ಸಂಪ್ರತಿ (೧೯೮೮) |
ಸಂಗಾತಿ | ಬಿ. ಎಸ್. ಯಶೋದಮ್ಮ |
ಮಕ್ಕಳು | ಕವಿತಾ |
ಪ್ರಶಸ್ತಿಗಳು | ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೯) |
ಜನನ-ಕುಟುಂಬ
ಬದಲಾಯಿಸಿ೧೯೩೧ರ ಸೆಪ್ಟೆಂಬರ್ ೧೨ರಂದು (ಸರಕಾರಿ ದಾಖಲೆಗಳಲ್ಲಿ ಫ಼ೆಬ್ರುವರಿ ೫) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದ ಹಾಮಾನಾ ಹುಟ್ಟು ಹೆಸರು ಮಾನಪ್ಪ. ಇವರ ತಂದೆ ಶ್ರೀನಿವಾಸ ನಾಯಕ, ತಾಯಿ ಎನ್. ಡಿ. ರುಕ್ಮಿಣಿಯಮ್ಮ.
ಮೇ ೧೦, ೧೯೫೫ರಂದು ಬಿ. ಎಸ್. ಯಶೋದಮ್ಮರವರೊಡನೆ ಮದುವೆಗಯಾಗಿ, ಜುಲೈ ೧೭, ೧೯೫೬ರಂದು ಮಗಳು ಕವಿತಾರವರ ಜನನವಾಯಿತು. [೧]
ವ್ಯಾಸಂಗ - ವೃತ್ತಿ
ಬದಲಾಯಿಸಿಆಗುಂಬೆ ಹತ್ತಿರದ ನಾಲೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮೇಗರವಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣ, ನಂತರ ತೀರ್ಥಹಳ್ಳಿಯಲ್ಲಿ ಪ್ರೌಢಶಾಲೆ ಮುಗಿಸಿ, ಶಿವಮೊಗ್ಗದಲ್ಲಿ ಇಂಟರ್ ಮುಗಿಸಿದರು. ಮೈಸೂರು ಮಹರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಗಳಿಸಿದರು. ೧೯೫೬ರಲ್ಲಿ ಎಂ. ಎ. ಅಧ್ಯಯನಕ್ಕಾಗಿ ಮೈಸೂರು ವಿವಿ ವಿದ್ಯಾರ್ಥಿವೇತನ ದೊರೆಯಿತು.
ನಂತರ ತುಮಕೂರು ಪ್ರಥಮ ದರ್ಜೆ ಕಾಲೇಜು(೧೯೫೫-೧೯೫೭), ಶಿವಮೊಗ್ಗ ಸಹ್ಯಾದ್ರಿ ಕಾಲೇಜುಗಳಲ್ಲಿ (೧೯೫೮-೧೯೬೦) ಕನ್ನಡ ಅಧ್ಯಾಪಕರಾಗಿದ್ದು, ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸೇರಿದರು.
ಮೈಸೂರು ವಿಶ್ವವಿದ್ಯಾನಿಲಯದ ವ್ಯಾಸಂಗ ವೇತನ ಪಡೆದು, ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದಲ್ಲಿ ಚಿನ್ನದ ಪದಕದೊಂದಿಗೆ ೧೯೮೫ರಲ್ಲಿ, ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಫುಲ್‍ಬ್ರೈಟ್ ವಿದ್ಯಾರ್ಥಿ ವೇತನ ಪಡೆದು, ೧೯೬೨ರಲ್ಲಿ ಅಮೆರಿಕಾಕ್ಕೆ ತೆರಳಿದರು. "ಕನ್ನಡ ಸಾಹಿತ್ಯಿಕ ಮತ್ತು ಆಡು ಭಾಷೆ" ಎಂಬ ಮಹಾ ಪ್ರಬಂಧವನ್ನು ಸಾದರ ಪಡಿಸಿ, ಅಮೆರಿಕಾದ ಇಂಡಿಯಾನಾ ವಿಶ್ವವಿದ್ಯಾಲಯದಿಂದ ೧೯೬೪ರಲ್ಲಿ ಡಾಕ್ಟರೇಟ್ ಪಡೆದಿದ್ದರು.[೨]
ಅಮೆರಿಕಾದಿಂದ ಮರಳಿ, ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು (೧೯೬೯-೧೯೮೪). ೧೯೮೪ರಿಂದ ೧೯೮೭ರ ವರೆಗೆ ಗುಲ್ಬರ್ಗಾ ವಿವಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿದರು. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಹಿಂತಿರುಗಿದರು.[೧]
ಸಾಹಿತ್ಯ
ಬದಲಾಯಿಸಿಪ್ರಬಂಧಗಳು ಮತ್ತು ಕಥಾಸಂಕಲನ
ಬದಲಾಯಿಸಿ- ನಮ್ಮ ಮನೆಯ ದೀಪ (೧೯೫೬) - ಲಲಿತ ಪ್ರಬಂಧಗಳ ಸಂಕಲನ
- ಬಾಳ್ನೋಟಗಳು (೧೯೫೦) - ೧೫ ಕಿರುಗತೆಗಳು
- ಹಾವು ಮತ್ತು ಹೆಣ್ಣು (೧೯೬೬) - ಸ್ವಂತ ಮತ್ತು ಅನುವಾದಿತ ಒಟ್ಟೂ ೧೧ ಕತೆಗಳು (ಬೊಂಬಾಯಿ ಬಳೆ, ಹೆಣ್ಣು ಹೃದಯ, ಆಶಾವಾದಿ)
- ಜಾನಪದ ಸ್ವರೂಪ (೧೯೭೧)
- ಬೆಳ್ಳಿ ಕರ್ನಾಟಕ (೧೯೮೧)
- ಸಂಕೀರ್ಣ (೧೯೬೬)
- ಸಂಗ್ರಹ (೧೯೭೬)
- ಸಂಚಯ (೧೯೬೯) - ೧೩ ಲೇಖನಗಳು
- ಸಂದರ್ಭ (೧೯೭೮) - ಭಾಷಣಗಳ ಸಂಕಲನ
- ಸಂವಾದ (೧೯೭೨) - ೧೨ ಬರಹಗಳು - ಲೇಖನ, ಅನುವಾದ ಮತ್ತು ಭಾಷಣಗಳ ಸಂಕಲನ
- ಸಪ್ತಕ (೧೯೮೯) - ೭ ಲೇಖನಗಳು - ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಪೂರಕ ನೆಲೆ
- ಸಮೀಕ್ಷೆ (೧೯೬೭) - ವಿಮರ್ಶಾ ಲೇಖನಗಳ ಸಂಗ್ರಹಣ
- ಸಿಂಗಾರ (೧೯೮೧) - ೧೨ ಲೇಖನಗಳು - ಮುನ್ನುಡಿಗಳ ಸಂಕಲನ
- ಸೃಜನ (೧೯೮೧) - ೧೩ ಪ್ರಬಂಧಗಳು
- ಸ್ತವನ (೧೯೮೦) - ೧೭ ವ್ಯಕ್ತಿ ಚಿತ್ರಗಳು
- ಸ್ಮರಣ (೧೯೮೧) - ವ್ಯಕ್ತಿ ಚಿತ್ರಣ
- ಸಿವುಡು (೧೯೯೧) - ೧೫ ಲೇಖನಗಳು ("ಅರವತ್ತರ ಅರಲು" ಕೃತಿಮಾಲೆ)
- ಸಂಭ್ರಮ (೧೯೯೧) - ೧೫ ಮುನ್ನುಡಿಗಳು ("ಅರವತ್ತರ ಅರಲು" ಕೃತಿಮಾಲೆ)
- ಸೊಡರು (೧೯೯೧) - ೧೪ ವ್ಯಕ್ತಿಚಿತ್ರ, ಸಾಂಧರ್ಬಿಕ ಭಾಷಣ ಮತ್ತು ಸಂಸ್ಮರಣ ಗ್ರಂಥಗಳ ಲೇಖನ ("ಅರವತ್ತರ ಅರಲು" ಕೃತಿಮಾಲೆ)
- ಸಿಂಚನ (೧೯೯೧) - ೧೫ ಲೇಖನಗಳು ("ಅರವತ್ತರ ಅರಲು" ಕೃತಿಮಾಲೆ)
- ಕನ್ನಡ ಮನಸ್ಸು (೧೯೯೧) - ೧೬ ಲೇಖನಗಳು ("ಅರವತ್ತರ ಅರಲು" ಕೃತಿಮಾಲೆ)
ಅಂಕಣ ಬರಹಗಳು
ಬದಲಾಯಿಸಿ- ಸಂಪ್ರತಿ - ಪ್ರಜಾವಾಣಿ ದಿನಪತ್ರಿಕೆ
- ಸಾಹಿತ್ಯ ಸಲ್ಲಾಪ - ಸೋಮವಾರದ ಸಾಹಿತ್ಯ ಪುಟ, ಕನ್ನಡಪ್ರಭ ದಿನಪತ್ರಿಕೆ
- ತಿಂಗಳ ಪುಸ್ತಕ - ಗ್ರಂಥಲೋಕ
- ಹಾ. ಮಾ. ನಾಯಕ ಬರೆಯುತ್ತಾರೆ - ಪ್ರಜಾಮತ
- ವರ್ತಮಾನ - ಇಂಚರ ಮಾಸಪತ್ರಿಕೆ
- ಪುಸ್ತಕ ಪ್ರಪಂಚ - ಸಂಕೇತ ಪಾಕ್ಷಿಕಪತ್ರಿಕೆ
- ಸ್ವಗತ - ತರಂಗ (ವಾರಪತ್ರಿಕೆ)
ಅಂಕಣ ಬರಹಗಳ ಸಂಕಲನ
ಬದಲಾಯಿಸಿ- ಸಂಪುಟ (೧೯೮೦) - "ತಿಂಗಳ ಪುಸ್ತಕ"ದ ೨೨ ಪುಸ್ತಕ ವಿಮರ್ಶೆ - (ಮೊದಲನೆಯ ಸಂಪುಟ)
- ಗ್ರಂಥಲೋಕದ ಸುತ್ತಮುತ್ತ (೧೯೮೪) - ೨೭ ಲೇಖನಗಳು - ೧೯೮೧ ಅಕ್ಟೋಬರ - ೧೯೮೩ ಡಿಸೆಂಬರ್ ವರೆಗಿನ ಗ್ರಂಥಲೋಕಗದಲ್ಲಿ ಪ್ರಕಟವಾದ ಲೇಖನಗಳು
- ಸಂಪದ (೧೯೮೧) - ೧೯೭೯-೧೯೮೦ರಲ್ಲಿ ಪ್ರಕಾಶಿತಗೊಂಡ ಕನ್ನಡದ ಪುಸ್ತಕಗಳ ವಿಮರ್ಶೆ
- ಸಂಪರ್ಕ (೧೯೮೨)
- ಸೂಲಂಗಿ (೧೯೮೫) - ೩೦ ಚಿಂತನಾ ಪ್ರಧಾನ ಬರಹಗಳು (ಆಕಾಶವಾಣಿ ಪ್ರಸಾರಕ್ಕಾಗಿ ಬರೆದವು)
- ಸಂಪ್ರತಿ (೧೯೮೮) - ಪ್ರಸಂಗ ಪ್ರಧಾನ ಬರಹಗಳು (ಆಕಾಶವಾಣಿ ಪ್ರಸಾರಕ್ಕಾಗಿ ಬರೆದವು)
- ಸಂಪಣ (೧೯೯೦) - ಕಿರು ಪ್ರಬಂಧಗಳು
- ಸಂವಹನ (೧೯೮೩) -
- ಸಮೂಹ (೧೯೮೨)
- ಸಾಹಿತ್ಯ ಸಲ್ಲಾಪ (೧೯೭೦) - "ಸಾಹಿತ್ಯ ಸಲ್ಲಾಪ"ದ ಮೊದಲ ೧೦೦ ಲೇಖನಗಳು[೩]
- ಸಲ್ಲಾಪ (೧೯೭೨) - "ಸಾಹಿತ್ಯ ಸಲ್ಲಾಪ"ದ ಮೊದಲ ೧೨೩ ಲೇಖನಗಳು - ೨ನೇಯ ಕಂತು
- ಸಾಂಪ್ರತ (೧೯೮೩) - "ಹಾ. ಮಾ. ನಾಯಕ ಬರೆಯುತ್ತಾರೆ" ಅಂಕಣದ ೫೨ ಲೇಖನಗಳು
- ಸಂಬಲ (೧೯೯೦) - "ಪುಸ್ತಕ ಪ್ರಪಂಚ"ದ ಸಂಕಲನ ಆಗಷ್ಟ ೩, ೧೯೮೯ - ನವೆಂಬರ್ ೧೧, ೧೯೯೦
- ಸಂಪ್ರತಿ - ೨ (೧೯೯೧) - ೯೬ ಲೇಖನಗಳು (ಜನವರಿ ೪, ೧೯೮೭ - ಡಿಸೆಂಬರ್ ೨೫, ೧೯೮೮)
- ಸಂಪ್ರತಿ - ೩ (೧೯೯೧) - ೮೮ ಲೇಖನಗಳು (ಜನವರಿ ೧, ೧೯೮೯ - ಸೆಪ್ಟೆಂಬರ್ ೨, ೧೯೯೦)
- ಸಂಪುಟ - ೧ (೧೯೯೫)
- ಸ್ಪಂದನ - ೧೮ ಅಂಕಣ ಬರಹಗಳು (ವರ್ತಮಾನ, ಇಂಚರ ಮಾಸಪತ್ರಿಕೆ)
- ಅರವತ್ತರ ಅರಳು - ೯೧ ಲೇಖನಗಳು ("ಸ್ವಗತ" ಅಂಕಣ)
ಅನುವಾದ
ಬದಲಾಯಿಸಿ- ಪ್ರಣಯ ಪದಾವಳಿ (೧೯೮೪) - ಮೈಥಿಲಿ ಭಾಷೆಯಲ್ಲಿನ ವಿದ್ಯಾಪತಿಯ ಪದಾವಳಿಯ ೬೧ ಹಾಡುಗಳ ಕನ್ನಡ ಅನುವಾದ
- ಶಾಂತಿ ಸ್ವರೂಪ್ ಭಟ್ನಾಗರ್ (೧೯೫೪) - ಕೆ. ವಿ. ಶ್ರೀನಾಥ್ ಅವರ ಅಪ್ರಕಟಿತ ಆಂಗ್ಲ ಮೂಲ
- ಸುನೇರಿ (೧೯೮೬) - ಅಮೃತಾ ಪ್ರೀತಮ್ ಪಂಜಾಬಿ ಕವನಗಳ ಅನುವಾದ
ಪಿ.ಎಚ್ ಡಿ ಮಹಾ ಪ್ರಬಂಧ
ಬದಲಾಯಿಸಿ- ಕನ್ನಡ ಸಾಹಿತ್ಯಿಕ ಮತ್ತು ಆಡು ಭಾಷೆ
ಜೀವನ ಚರಿತ್ರೆ
ಬದಲಾಯಿಸಿ- ರವೀಂದ್ರನಾಥ ಠಾಕೋರ್ (೧೯೬೦)
- ಬಸವ ಪುರುಷ
- ಎ.ಆರ್.ಕೃ.ಜೀವನ ಸಾಧನೆ
- ಮುದ್ದಣ
- ವಿನಾಯಕ ವಾಙ್ಮಯ
- ದೇಜಗೌ ಮತ್ತು ವ್ಯಕ್ತಿ ಸಾಹಿತ್ಯ
ಮಕ್ಕಳ ಸಾಹಿತ್ಯ
ಬದಲಾಯಿಸಿ- ಅಕ್ಕ ಮಹಾದೇವಿ (೧೯೭೫)
- ಗುರುದೇವ ರವಿಂದ್ರರು (೧೯೬೧) - ೧೦ ಅಧ್ಯಾಗಳು
- ಮಹಮ್ಮದ್ ಪೈಗಂಬರ್ (೧೯೫೨)
ಇತರೆ ಕೃತಿಗಳು
ಬದಲಾಯಿಸಿ- ಬಾಳನೋಟ (೧೯೫೦) - ಎಸ್ ಎಸ್ ಎಲ್ ಸಿ ಯಲ್ಲಿ ಪ್ರಕಟಗೊಂಡ ಮೊದಲ ಪುಸ್ತಕ
- ಕನ್ನಡ ಸಾಹಿತ್ಯ ಚರಿತ್ರೆ (೫ ಸಂಪುಟಗಳು)
- ಇಂಡಿಯಾ ದೇಶದ ಸಾರ್ವಜನಿಕ ಆಯ ವ್ಯಯ
- ಗೊರೂರು ಗೌರವ ಗ್ರಂಥ
- ಚಿನ್ನದ ಗರಿ
- ಕನ್ನಡ ಜಾನಪದ ಗ್ರಂಥಸೂಚಿ (೧೯೭೪)
- ಬಿಡುಗಡೆಯ ಬಳ್ಳಿ
- ಕಾವ್ಯ ಸಂಚಯ
- ವಿಜ್ಞಾನ ಸಾಹಿತ್ಯ ನಿರ್ಮಾಣ
- ಗದ್ಯ ವಿಹಾರ (೧ ಮತ್ತು ೨).
- ಕನ್ನಡ ಮನಸ್ಸು (೧೯೯೧)
- ವೆಂಕಣ್ಣಯ್ಯ ಕೆಲವು ಪ್ರಸಂಗಗಳು (೧೯೯೧)
- ಹಕ್ಕಿಯ ಪಯಣ
- ಹಾವು ಮತ್ತು ಹೆಣ್ಣು
- ಸ್ವಂತ
- ಸನ್ನುಡಿ
ಸಂಪಾದನೆ
ಬದಲಾಯಿಸಿ- ಕಾದಂಬರಿ ಲೋಕ
ಗೌರವ-ಪುರಸ್ಕಾರ
ಬದಲಾಯಿಸಿ- ೧೯೫೪ - ಹೊನ್ನಶೆಟ್ಟಿ ಬಹುಮಾನ (ಮೈಸೂರು ವಿವಿ)
- ೧೯೬೯ - ಅಖಿಲ ಕರ್ನಾಟಕ ೨ನೇ ಜಾನಪದ ಸಮ್ಮೇಳನದ ವಿಚಾರಗೋಷ್ಠಿ ಅಧ್ಯಕ್ಷ (ಮಂಗಳೂರು)
- ೧೯೭೩ - ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ
- ೧೯೭೩ - "ಹೊಂಗನ್ನಡಿಗ" ಪ್ರಶಸ್ತಿ, ನಿಡುಮಾಮಿಡಿ ಜಗದ್ಗುರುಗಳಿಂದ
- ೧೯೮೦ - "ಸಲ್ಲಾಪ"ಕ್ಕೆ ಮೈಸೂರು ವಿವಿ ಸುವರ್ಣ ಮಹೋತ್ಸವ ಪ್ರಶಸ್ತಿ
- ೧೯೮೪-೧೯೮೭ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ
- ೧೯೮೫ ಬೀದರ್ನ ಐವತ್ತೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷ
- ೧೯೮೫ - ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ೧೯೮೨ - ರಾಜ್ಯ ಪ್ರಶಸ್ತಿ, ನವೆಂಬರ್ ೧, ೧೯೮೩, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಂದ
- ೧೯೮೯ - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - "ಸಂಪ್ರತಿ" ಅಂಕಣ ಬರಹಗಳ ಸಂಕಲನಕ್ಕೆ (ಇದು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ, ಅಂಕಣ ಬರಹಗಳಿಗೆ ಸಂದ ಮೊಟ್ಟ ಮೊದಲನೆಯ ಗೌರವ)
- ೧೯೮೯ - ಐಬಿಎಚ್ ಎಜುಕೇಷನ್ ಟ್ರಸ್ಟ್ ಪ್ರಶಸ್ತಿ
- ೧೯೮೯ - 'ಪ್ರಣಯ ಪದಾವಳಿ'ಗೆ ವರ್ಧಮಾನ ಪ್ರಶಸ್ತಿ
- ಮೈಸೂರು ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ (1969-84) [೪]
ನಿಧನ
ಬದಲಾಯಿಸಿಹಾಮಾನಾ ಅವರು ಹೃದಯಾಘಾತದಿಂದ ನವೆಂಬರ್ ೧೦, ೨೦೦೦ರಂದು ಮೈಸೂರಿನಲ್ಲಿ ನಿಧನ ಹೊಂದಿದರು.
ಉಲ್ಲೇಖ
ಬದಲಾಯಿಸಿ- ↑ ೧.೦ ೧.೧ "ಡಾ. ಹಾ. ಮಾ. ನಾಯಕ", ಡಾ. ಮಂಜುನಾಥ ಬೇವಿನಕಟ್ಟೆ, ನಮ್ಮವರು ಪುಸ್ತಕ ಮಾಲೆ-೧೬, ಕನ್ನಡ ವಿಶ್ವವಿದ್ಯಾಲಯ - ಹಂಪಿ ೧೯೯೬, https://archive.org/embed/kvh.drhamanayak0000drma
- ↑ EbOOK AND Texts> Universa Library>'EPIGRAPHIA CARNATICA VOL 3 (1974'
- ↑ https://kannadasahithyaparishattu.in/?p=103255
- ↑ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಾಯಕ ಹಾ ಮಾ