ಎಂ. ಪಿ. ಶಂಕರ್

(ಎಂ.ಪಿ.ಶಂಕರ ಇಂದ ಪುನರ್ನಿರ್ದೇಶಿತ)

(೨೦, ಆಗಸ್ಟ್, ೧೯೩೫-೧೭, ಜುಲೈ ೨೦೦೮) ಮೈಸೂರು ಪುಟ್ಟಲಿಂಗಪ್ಪ ಶಂಕರ್ ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ಇವರು ಅನೇಕ ಖಳನಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯ ಹರಿಶ್ಚಂದ್ರ, ಶನಿ ಪ್ರಭಾವ, ಬಂಗಾರದ ಮನುಷ್ಯ, ಗಂಧದ ಗುಡಿ,ಭೂತಯ್ಯನ ಮಗ ಅಯ್ಯು ಇವರ ಕೆಲವು ಪ್ರಮುಖ ಚಿತ್ರಗಳು. ಇವರು ಪೋಷಕ ನಟರಾಗಿ ಕೂಡ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ, ದಿಗ್ದರ್ಶನ, ಚಿತ್ರನಿರ್ಮಾಣ, ವಿತರಣೆ ಹಾಗೂ ಸಂಬಂಧಿಸಿದ ಎಲ್ಲಾ ಮಜಲುಗಳನ್ನು ಚೆನ್ನಾಗಿ ಅರಿತಿದ್ದರು. ಕಾಡು, ಪರಿಸರ ಸಂರಕ್ಷಣೆಯ ಬಗ್ಗೆ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಹಲವು ಚಿತ್ರಗಳ ನಿರ್ಮಾಪಕರಾಗಿದ್ದಾರೆ..

ಚಿತ್ರ:MPShankar.jpg
'ಎಂ. ಪಿ. ಶಂಕರ್'

ಜನನ ಹಾಗೂ ಬಾಲ್ಯ

ಬದಲಾಯಿಸಿ

ಪುಟ್ಟಲಿಂಗಪ್ಪ, ಗಂಗಮ್ಮ ದಂಪತಿಗಳ ಪ್ರೀತಿಯ ಮೂರನೆಯ ಸಂತಾನವಾಗಿ ಭರಣಿ ನಕ್ಷತ್ರ ದಲ್ಲಿ ಜನಿಸಿದರು. ೧೬ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪತ್ನಿ, ಮಂಜುಳಾ, ಪುತ್ರಿ, ಶೋಭಾ, ಇಬ್ಬರು ಪುತ್ರರು, ತಿಲಕ್, ಹಾಗೂ ವಿರೂಪಾಕ್ಷ. ಕೊನೆಯ ಮಗ ತೀರಿಕೊಂಡಿದ್ದಾರೆ. ಎಮ್.ಪಿ.ಶಂಕರ್, ಶ್ರೇಷ್ಠ ಖಳನಾಯಕನೆಂದು ಹೆಸರುಮಾಡಿದ್ದರು. ೧೯೬೨ ರಲ್ಲಿ ಬಿಡುಗಡೆಯಾದ ಸತ್ಯಹರಿಶ್ಚಂದ್ರ ಕಪ್ಪು-ಬಿಳುಪಿನ ಚಲನಚಿತ್ರದಲ್ಲಿ ವೀರಬಾಹು ವಿನ ಪಾತ್ರದಲ್ಲಿ ಒಳ್ಳೆಯ ಅಭಿನಯವನ್ನು ತೋರಿಸಿ ಚಿತ್ರರಸಿಕರ ಮನವೊಲಿಸಿಕೊಂಡರು. ಅವರ ನಿರ್ದೇಶನದ, ಡಾ.ರಾಜ್ ನಟಿಸಿದ ಗಂಧದಗುಡಿ ಚಿತ್ರ ಎಲ್ಲರ ಗಮನ ಸೆಳೆಯಿತು. ಇದರ ಎರಡನೆಯ ಆವರ್ತಿಯಲ್ಲಿ ಶಿವರಾಜಕುಮಾರ್ ಅಭಿನಯಿಸಿದ್ದರು. ಕಾಡಿನ ಸಂರಕ್ಷಣೆ ಹಾಗೂ, ಪರಿಸರದ ಬಗ್ಗೆ ಅವರು ಯಾವಾಗಲು ಕಾಳಜಿ ವಹಿಸುತ್ತಿದ್ದರು. ರತ್ನಮಂಜರಿ,ಚಿತ್ರದಿಂದ ಕನ್ನಡಚಿತ್ರರಂಗವನ್ನು ಪ್ರವೇಶಿಸಿದ ಶಂಕರ್ ರವರು, ೧೯೬೮ ರಲ್ಲಿ, ’ಕಾಡಿನ ರಹಸ್ಯ’ ಚಿತ್ರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಕಲ್ಲರಳಿ ಹೂವಾಗಿ’ ಚಿತ್ರ, ಅವರ ವೃತ್ತಿಜೀವನದ ಕೊನೆಯದು. ಕೆಲವು ಹಾಸ್ಯಸನ್ನಿವೇಶಗಳಿಂದ ತುಂಬಿದ, 'ನಾರದವಿಜಯ', ಹಾಗೂ 'ಗಿಡ್ಡೂದಾದ', ಎಂಬ ಚಿತ್ರಗಳನ್ನು ತಯಾರಿಸಿದ್ದರು.

ಭರಣಿ ಕಲಾತಂಡ, ಅವರ ನೆಚ್ಚಿನ, ಪ್ರೀತಿಯ ನಾಟಕರಂಗಪ್ರಾಕಾರ

ಬದಲಾಯಿಸಿ

ಇದರಡಿಯಲ್ಲಿ ’ಗೌತಮ ಬುದ್ಧ’, 'ಸೊಹ್ರಾಬ್ ರುಸ್ತುಂ', 'ಗದಾಯುದ್ಧ', 'ಕನಕದಾಸ 'ನಾಟಕಗಳನ್ನು ಆಡಿಸಿ, ತಾವೂ ಅಭಿನಯಿಸಿದ್ದರು. ಅವರ ಪೂಜ್ಯ ತಂದೆಯವರ ಅಭಿಲಾಷೆಯಂತೆ, ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ್ದರು. ೭೩ ವರ್ಷದ, ಮೈಸೂರು ಪುಟ್ಟಲಿಂಗಪ್ಪ ಶಂಕರ್ ರವರು, ಮೈಸೂರಿನ, ’ಕಾಳಿದಾಸ ರಸ್ತೆಯಲ್ಲಿರುವ ತಮ್ಮ ಸ್ವಗೃಹ, ಮಂಜುನಾಥನಿಲಯದಲ್ಲಿ, ದಿನಾಂಕ ೧೭, ಜುಲೈ ೨೦೦೮ ರಂದು, ದೈವಾಧೀನರಾದರು. ಮನೆಯಲ್ಲೇ ಜಾರಿಬಿದ್ದು ಸೊಂಟದ ಮೂಳೆಗೆ ಪೆಟ್ಟಾಗಿತ್ತು. 'ವಿಕ್ರಮ್ ನರ್ಸಿಂಗ್ ಹೋಂ ,' ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ವಲ್ಪ ಗುಣಹೊಂದಿ ಮನೆಗೆ ವಾಪಸ್ ಬಂದಿದ್ದರು. ಆದರೆ, ಪಿತ್ತಕೋಶದ ಕ್ಯಾನ್ಸರ್ ಅವರನ್ನು ಬಹಳ ಸಮಯದಿಂದ ಕಾಡಿಸುತ್ತಿತ್ತು. ಅವರ ಅಂತಿಮ ಸಂಸ್ಕಾರವನ್ನು, ವಿದ್ಯಾರಣ್ಯಪುರದ,’ ವೀರಶೈವ ರುದ್ರಭೂಮಿ,’ ಯಲ್ಲಿ ನೆರವೇರಿಸಲಾಯಿತು.

ಪ್ರಶಸ್ತಿಗಳು, ಹಾಗೂ ಬಿರುದು-ಬಾವಲಿಗಳು

ಬದಲಾಯಿಸಿ
  • ನಟಶಾರ್ದೂಲ,
  • ಕಲಾಶಾರ್ದೂಲ,
  • ಮೈಸೂರುಹುಲಿ,
  • ಕಲಾಸೇವಾಧುರೀಣ,
  • ಕನ್ನಡಭೂಷಣ,
  • ಸಾಹಸೀಚಿತ್ರರತ್ನ,
  • ಕರುಣಾರತ್ನ,
  • ಸಾಗರ, ಪ್ರಶಸ್ತಿಗಳು.

೧೯೫೩-೫೪ ರಲ್ಲಿ ಬನುಮಯ್ಯ ಹೈಸ್ಕೂಲ್ ನಲ್ಲಿ ತಮ್ಮ 'ಪ್ರೌಢಶಾಲೆಯ ವಾರ್ಷಿಕೋತ್ಸ'ವದಲ್ಲಿ 'ಕಾಡುಕುರುಬ' ನ ಪಾತ್ರವನ್ನು ಯಶಸ್ವಿಯಾಗಿ ಅಭಿನಯಿಸಿದ್ದರು. 'ಮೈಸೂರ್ ವಿದ್ಯುಚ್ಛಕ್ತಿ ಆಫೀಸ್' ನಲ್ಲಿ ದಿನಗೂಲಿ ಕೆಲಸಮಾಡುತ್ತಿದ್ದರು. ೧೯೫೫ ರಲ್ಲಿ, 'ಮೈಸೂರಿನ ರೈಲ್ವೆಕಾರ್ಖಾನೆ'ಯಲ್ಲಿ ನೌಕರಿಮಾಡಿದ್ದರು. ೧೯೫೬ ರಲ್ಲಿ 'ಮೈಸೂರ್ ದಸರಾಹಬ್ಬ'ದ ಸಮಯದ 'ಕುಸ್ತಿ-ಪಂದ್ಯಾವಳಿ'ಯಲ್ಲಿ ಭಾಗವಹಿಸಿದ್ದರು. ಆಗಿನ ಮೈಸೂರಿನ ಮುಖ್ಯಮಂತ್ರಿ, 'ಬಿ.ಡಿ.ಜತ್ತಿ'ಯವರ ಹಸ್ತದಿಂದ ಬಹುಮಾನ ಗಿಟ್ಟಿಸಿದ್ದರು. ತಮ್ಮ ಕೊನೆಯದಿನಗಳಲ್ಲಿ ವಿನಿವಿಂಕ್ ಶಾಸ್ತ್ರಿ ಗಳ ಜೊತೆ ವ್ಯವಹಾರ ಸಂಬಂಧಬೆಳೆಸಿ, ಸುಮಾರು ೧೫ ಲಕ್ಷರೂಪಾಯಿಗಳಷ್ಟು ಹಣವನ್ನು ನಷ್ಟ ಮಾಡಿಕೊಂಡಿದ್ದರು. ಇದರಿಂದ ಬಹಳವಾಗಿ ನೊಂದಿದ್ದರು.

ಅವರು ಕೆಲಸಮಾಡಿದ ಚಲನಚಿತ್ರಗಳು

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ