ಉಳ್ಳಾಲ ಇದು ಮಂಗಳೂರಿನಿಂದ ೮ ಕಿ.ಮೀ. ದಕ್ಷಿಣಕ್ಕೆ ನೇತ್ರಾವತಿ ನದಿಯ ದಡದಲ್ಲಿರುವ ಒಂದು ಪಟ್ಟಣ.ಇದು ೧೬ ನೆಯ ಶತಮಾನದಲ್ಲಿದ್ದ ಅಬ್ಬಕ್ಕ ರಾಣಿಯ ರಾಜಧಾನಿಯಾಗಿತ್ತು.ಇವಳ ಕುಲದೈವವಾದ ಸೋಮನಾಥ ದೇವರ ಸುಂದರ ದೇವಾಲಯವಿದೆ. ಮುಸ್ಲಿಂ ಸಮುದಾಯದ ಪ್ರಸಿದ್ದ ಮಸೀದಿಯೊಂದು ಇಲ್ಲಿದೆ. ಇಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಬಹಳ ಪ್ರಸಿದ್ಧಿಯಾಗಿದೆ. ಸೋಮೇಶ್ವರ ಕಡಲ ಕಿನಾರೆ ಪ್ರವಾಸಿ ಆಕರ್ಷಣೆಯ ಕೇಂದ್ರ.[]

ಉಳ್ಳಾಲ
Ullal
Ullal 1
ನಗರ
ಉಳ್ಳಾಲ ರಾಣಿ ಅಬ್ಬಕ್ಕ ಸರ್ಕಲ್
ಉಳ್ಳಾಲ ರಾಣಿ ಅಬ್ಬಕ್ಕ ಸರ್ಕಲ್
ದೇಶ ಭಾರತ
ರಾಜ್ಯ ಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
Government
 • Typeನಗರಸಭೆ
 • Bodyಉಳ್ಳಾಲ ನಗರಸಭೆ
Area
 • Total೧೧.೮ km (೪.೬ sq mi)
Elevation
೫ m (೧೬ ft)
Population
 (2011)
 • Total೫೩,೮೦೮
 • Density೪,೬೦೦/km (೧೨,೦೦೦/sq mi)
ಭಾಷೆಗಳು
 • ಅಧಿಕೃತಕನ್ನಡ
 • Otherಬ್ಯಾರಿ ಭಾಷೆ, ಕೊಂಕಣಿ, ತುಳು
Time zoneUTC+5:30 (IST)
ಪಿನ್ ಕೋಡ್
575020
Vehicle registrationKA 19
ಲೋಕ ಸಭೆದಕ್ಷಿಣ ಕನ್ನಡ
ವಿಧಾನ ಸಭೆಮಂಗಳೂರು
Literacy92.87%
Websitewww.ullalcity.mrc.gov.in

ಕವಿ ಉಲ್ಲಾಳ ಮಂಗೇಶರಾಯರು ಈ ಊರಿನವರು.

ಇತಿಹಾಸ

ಬದಲಾಯಿಸಿ

ಪುತ್ತಿಗೆಯ ಚೌಟ ಅರಸುಮನೆತನದ ಒಂದು ಶಾಖೆಯ ರಾಜರು ಉಳ್ಳಾಲವನ್ನು ಆಳುತ್ತಿದ್ದರು. ಇಲ್ಲಿಯ ಸೋಮನಾಥ ಅವರ ಕುಲದೇವರು. 16ನೆಯ ಶತಮಾನದಲ್ಲಿ ರಾಜ್ಯಭಾರ ಮಾಡುತ್ತಿದ್ದ ಅಬ್ಬಕ್ಕ ಈ ಶಾಖೆಯಲ್ಲಿ ಪ್ರಸಿದ್ಧಳು. ವಿದೇಶಿಯರ ಬಲವನ್ನು ಮುರಿಯಲು ಸರ್ವಪ್ರಯತ್ನಮಾಡಿದ ಈ ವೀರರಾಣಿ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದಳು. ಆಕೆಯ ತರುವಾಯ ಉಲ್ಲಾಳ ರಾಜ್ಯವನ್ನಾಳಿದ ಆಕೆಯ ಮಗಳು ಕಾರ್ಕಳದ ಅರಸರೊಡನೆ ಯುದ್ಧ ಮಾಡಿ ಸತ್ತಳು. ಆಕೆಯ ಮಗ ಚಿಕ್ಕರಾಯ (1606-28) ಬಿದನೂರು ವೆಂಕಟಪ್ಪನಾಯಕನ ನೆರವನ್ನು ಪಡೆದು ಕಾರ್ಕಳದ ಅರಸನನ್ನು ಸೋಲಿಸಿದ (1608). ಭೋಜರಾಜನ ಆಳ್ವಿಕೆಯಲ್ಲಿ (1630-44) ಉಳ್ಳಾಲ ಬಿದನೂರು ಸಂಸ್ಥಾನಕ್ಕೆ ಸೇರಿತು.

ಆಕರ್ಷಣೆಗಳು

ಬದಲಾಯಿಸಿ

ಉಳ್ಳಾಲದಲ್ಲಿ - ಕೋಟೆಪುರ, ಕೋಡಿ,ಅಬ್ಬಕ ನಗರ,ಉಳ್ಳಾಲ ಉಳಿಯ, ಉಳ್ಳಾಲ ಪೇಟೆ, ಮುಕ್ಕಚೇರಿ, ಮಾಸ್ತಿಕಟ್ಟೆ, ಒಂಬತ್ತು ಕೆರೆ, ಮೊಗವೀರ ಪಟ್ಟಣ, ಮದನಿ ನಗರ, ಹಳೆ ಕೋಟೆ ಇದು ಕೆಲವು ಸ್ಥಳಗಳ ಹೆಸರು.

ಉಳ್ಳಾಲದಲ್ಲಿ ಕೋಟೆ ಮತ್ತು ಅರಮನೆಯ ಅವಶೇಷಗಳಿವೆ. ಸೋಮನಾಥ ದೇವಾಲಯದಲ್ಲಿ ಇಟಾಲಿಯನ್ ಶೈಲಿಯ ಹಲವು ಸುಂದರ ಶಿಲ್ಪಗಳಿವೆ. ಊರಿನಿಂದ ಸು.9ಕಿಮೀ ದೂರದಲ್ಲಿ ಉಳ್ಳಾಲ ಅರಸರ ಭದ್ರತಾಣವಾಗಿದ್ದ ಉಚ್ಚಿಲ ಕೋಟೆ ಮತ್ತು ಮಣೇಲ ಅರಮನೆ ಇವೆ. ಕಾರ್ಕಳದ ಭೈರರಸ ಒಡೆಯರೂ ಇಲ್ಲಿ ಅರಮನೆಗಳನ್ನು ಕಟ್ಟಿದ್ದರೆಂದು ಹೇಳಿಕೆ.

ಸಯ್ಯದ್ ಮೊಹಮ್ಮದ್ ಶರೇಫ಼ುಲ್ ಮದನಿ ದರ್ಗಾ, ಶ್ರೀ ಚೀರುಂಬ ಬಗವಥಿ ದೇವಾಲಯ, ಸೋಮೇಶ್ವರ ದೇವಾಲಯ, ಕಡಪರ ಜಾರ ದರ್ಗಾ, ಬೇಸಿಗೆ ಸ್ಯಾಂಡ್ಸ್ ಬೀಚ್ ರೆಸಾರ್ಟ್, ರಾಣಿಪುರ ರಾಣಿ ಅಬ್ಬಕ್ಕ ಚೌಟ ಫೋರ್ಟ್, ಕೆ ಪಂಡ್ಯರಾಜ ಬಲ್ಲಾಳ್ ಇನ್ಸ್ಟಿಟ್ಯೂಟ್ ಮತ್ತು ನರ್ಸಿಂಗ್ ಕಾಲೇಜು, ಸಯ್ಯಿದ್ ಮದನಿ ಕಾಲೇಜುಗಳಂತೆ ಐತಿಹಾಸಿಕ ನೆಲೆಗಳಿಗೆ ಅತ್ಯಂತ ಪ್ರಸಿದ್ಧವಾಗಿದೆ. ಇಲ್ಲಿನ ಮೀನು ಊಟ ಮತ್ತು ತೈಲ ಸಸ್ಯ ತುಂಬಾ ಪ್ರಸಿದ್ಧ. []

16ನೆಯ ಶತಮಾನದಲ್ಲಿ ಫ್ರಾನ್‍ಸಿಸ್ಕನ್ ಪಾದ್ರಿಗಳು ಕಟ್ಟಿಸಿದ ಚರ್ಚ್ ನಗರದಲ್ಲಿದೆ. .

ಸೈಯದ್‍ಮಹಮ್ಮದ್ ಷರೀಫ ಮದನೀ ದರ್ಗಾ

ಬದಲಾಯಿಸಿ

ಉಲ್ಲಾಳದಲ್ಲಿರುವ ಸೈಯದ್ ಮಹಮ್ಮದ್ ಷರೀಫ ಮದನೀ ಅವರ ದರ್ಗಾ ಬಹು ಪ್ರಸಿದ್ಧ. ಈ ಸಂತರು ಸು.400 ವರ್ಷಗಳ ಹಿಂದೆ ಮದೀನಾದಿಂದ ಬಂದು ಇಲ್ಲಿನ ಮೇಲಂಗಡಿ ಮಸೀದಿಯಲ್ಲಿ ನೆಲಸಿ ಇಲ್ಲಿಯೇ ಮದುವೆಯಾಗಿ ಅನೇಕ ಪವಾಡಗಳನ್ನು ಮೆರೆಸಿ ಜನಮನ್ನಣೆ ಗಳಿಸಿದರೆಂದು ಪ್ರತೀತಿ. ಇವರ ಗೌರವಾರ್ಥ ಐದು ವರ್ಷಗಳಿಗೊಮ್ಮೆ ಉರುಸ್ ನಡೆಯುತ್ತದೆ. ಎಲ್ಲ ಜಾತಿಮತಗಳ ಜನ ಇಲ್ಲಿಗೆ ಬರುತ್ತಾರೆ. ಸಂತರ ಮರಣಾನಂತರ ಕಟ್ಟಿದ ದರ್ಗಾ ನಾಲ್ಕು ಬಾರಿ ಪುನರ್ನಿರ್ಮಾಣವಾಯಿತು. ಇಂದು ಇರುವ ಭವ್ಯ ಕಟ್ಟಡ 1970ರ ರಚನೆ. ಈ ದರ್ಗಾದ ಆಡಳಿತವರ್ಗ ಅರಬ್ಬೀ ಕಾಲೇಜು ಮತ್ತು ಪ್ರೌಢಶಾಲೆಯನ್ನು ನಡೆಸುತ್ತಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

ಬದಲಾಯಿಸಿ
  1. http://beach-tours.tourtravelworld.com/exoctic-beaches/ullal-beach.htm
  2. "ಉಳ್ಳಾಲ". Archived from the original on 2017-01-02. Retrieved 2016-11-28.


"https://kn.wikipedia.org/w/index.php?title=ಉಳ್ಳಾಲ&oldid=1175908" ಇಂದ ಪಡೆಯಲ್ಪಟ್ಟಿದೆ