ಉತ್ಪಲ್ ದತ್
ಉತ್ಪಲ್ ದತ್ (ಬಂಗಾಳಿ:উত্পল দত্ত, utpôl dôtto) (29 ಮಾರ್ಚ್ 1929 – 19 ಆಗಸ್ಟ್ 1993) ಅವರು ಭಾರತೀಯ ನಟರು, ನಿರ್ದೇಶಕರು ಮತ್ತು ನಾಟಕ ರಚನೆಕಾರರಾಗಿದ್ದಾರೆ. ಇವರು ಪ್ರಮುಖವಾಗಿ ಬಂಗಾಳಿ ರಂಗಭೂಮಿಯ ನಟರಾಗಿದ್ದು, ಅಲ್ಲಿ ಅವರು 1942 ರಲ್ಲಿ 'ಲಿಟ್ಲ್ ಥಿಯೇಟರ್ ಗ್ರೂಪ್' ಅನ್ನು ಸ್ಥಾಪಿಸಿದರು ಮತ್ತು ಇದೀಗ 'ನಾಟಕ ಮಹಾಕಾವ್ಯ'ದ ಅವಧಿ ಎಂದು ಕರೆಯಲಾಗುವ ಆ ಅವಧಿಯಲ್ಲಿ ಈ ಸಮೂಹವು ಹಲವು ಇಂಗ್ಲೀಷ್, ಶೇಕ್ಸ್‌ಪಿಯರ್ ಮತ್ತು ಬ್ರೆಚ್ಟ್ ಅವರ ನಾಟಕಗಳನ್ನು ಅಭಿನಯಿಸಿತು ಹಾಗೂ ಆನಂತರ ಅದು ಸಂಪೂರ್ಣವಾಗಿ ಹೆಚ್ಚಾಗಿ ರಾಜಕೀಯ ಮತ್ತು ಸುಧಾರಣಾವಾದದ ನಾಟಕಶಾಲೆಯಾಗಿ ಹೊರಹೊಮ್ಮಿತು, ಈ ಮೂಲಕ ಉತ್ಪಲ್ ದತ್ ಅವರು ಆಧುನಿಕ ಭಾರತೀಯ ನಾಟಕರಂಗದ ಪ್ರವರ್ತನೆಯ ವ್ಯಕ್ತಿಯಾಗಿದ್ದಾರೆ. ಇವರ ನಾಟಕಗಳು ಅವರ ಮಾರ್ಕ್ಸಿಸ್ಟ್ ಚಿಂತನೆಗಳ ಪ್ರತಿರೂಪದ ವಸ್ತುವಾಗಿದ್ದಿತು ಮತ್ತು ಅವುಗಳನ್ನು ಅವರ ಸಾಮಾಜಿಕ- ರಾಜಕೀಯ ನಾಟಕಗಳಾದ ಕಲ್ಲೋಲ್ (1965), ಮಾನುಷೇರ್ ಅಧಿಕಾರ್ , ಲೌಹಾ ಮಾನೋಬ್ (1964), ಟೈನರ್ ಟೋಲೋರ್ ಮತ್ತು ಮಹಾ-ಬಿದ್ರೋಹ ದಲ್ಲಿ ಕಾಣಬಹುದು. ಉತ್ಪಲ್ ದತ್ ಅವರು ತಮ್ಮ 40 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 100 ಕ್ಕೂ ಹೆಚ್ಚು ಬಂಗಾಳಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅವರು ಮೃಣಾಲ್ ಸೇನ್ ಅವರ ಭುವನ್ ಶೋಮೆ (1969), ಸತ್ಯಜಿತ್ ರೇ ಅವರ ಆಗಂತುಕ್ (1991) ಮತ್ತು ಗೌತಮ್ ಘೋಷ್ ಅವರ ಪದ್ಮಾ ನಾಡಿರ್ ಮಾಝಿ (1993) ಮತ್ತು ಹಿಂದಿ ಹಾಸ್ಯ ಚಿತ್ರಗಳಾದ ಗೋಲ್ ಮಾಲ್ (1980) ಮತ್ತು ರಂಗ ಬಿರಂಗಿ ಯಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ(1983)[೧][೨][೩][೪]. ಉತ್ಪಲ್ ದತ್ ಅವರು 1970 ರಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಮೂರು ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಯನ್ನು ಪಡೆದರು. 1990 ರಲ್ಲಿ ಸಂಗೀತ, ನೃತ್ಯ ಮತ್ತು ರಂಗಕಲೆಯ ಭಾರತೀಯ ರಾಷ್ಟ್ರೀಯ ಅಕಾಡಮೆಯಾದ ಸಂಗೀತ ನಾಟಕ ಅಕಾಡೆಮಿಯು ಉತ್ಪಲ್ ದತ್ ಅವರು ರಂಗಭೂಮಿಯಲ್ಲಿ ಸಲ್ಲಿಸಿದ ಜೀವಮಾನದ ಕೊಡುಗೆಯನ್ನು ಪರಿಗಣಿಸಿ ಅದರ ಅತ್ಯುನ್ನತ ಪ್ರಶಸ್ತಿಯಾದ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಅನ್ನು ಪ್ರದಾನ ಮಾಡಿತು.
Utpal Dutt | |||||||||||
---|---|---|---|---|---|---|---|---|---|---|---|
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
Barisal, East Bengal, British India | ೨೯ ಮಾರ್ಚ್ ೧೯೨೯||||||||||
ನಿಧನ | August 19, 1993 ಕೊಲ್ಕತ್ತ, West Bengal, India | (aged 64)||||||||||
ವೃತ್ತಿ | Actor, director, playwright | ||||||||||
ವರ್ಷಗಳು ಸಕ್ರಿಯ | 1947–1993 | ||||||||||
ಪತಿ/ಪತ್ನಿ |
Shobha Sen (m. ೧೯೬೦–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".) | ||||||||||
|
ಆರಂಭಿಕ ಜೀವನ ಹಾಗು ಶಿಕ್ಷಣ
ಬದಲಾಯಿಸಿಗಿರಿರಂಜನ್ ದತ್ ಅವರು ಇವರ ತಂದೆಯವರಾಗಿದ್ದರು. ಉತ್ಪಲ್ ದತ್ ಅವರು ಶಿಲ್ಲಾಂಗ್ನ ಹಿಂದೂ ಕುಟುಂಬವೊಂದರಲ್ಲಿ 1929 ರ ಮಾರ್ಚ್ 29 ರಂದು ಜನಿಸಿದರು ಮತ್ತು ಅವರು ಅಲ್ಲಿನ ಸೇಂಟ್ ಎಡ್ಮಂಡ್ಸ್ ಶಾಲೆಯಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಪಡೆದರು ನಂತರ ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು 1945 ರಲ್ಲಿ ಕೊಲ್ಕತ್ತಾದ ಸೇಂಟ್ ಕ್ಸೇವಿಯರ್ಸ್ ಕಾಲೇಜಿಯೇಟ್ ಸ್ಕೂಲ್ ನಿಂದ ಪಡೆದರು. 1949 ರಲ್ಲಿ, ದತ್ ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದ ಸೇಂಟ್ ಕ್ಸೇವಿಯರ್ಸ್ ಕಾಲೇಜ್, ಕಲ್ಕತ್ತಾದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿಯನ್ನು ಪಡೆದರು [೫].
ವೃತ್ತಿಜೀವನ
ಬದಲಾಯಿಸಿಅವರು ಮೂಲಭೂತವಾಗಿ ಬಂಗಾಳಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರೂ ಸಹ ಅವರು ಇಂಗ್ಲೀಷ್ ರಂಗಭೂಮಿಯಲ್ಲೂ ವೃತ್ತಿಯನ್ನು ಪ್ರಾರಂಭಿಸಿದರು. 1940 ರಲ್ಲಿ ಹದಿಹರೆಯದವರಿದ್ದಾಗಲೇ, ದತ್ ಅವರು ಇಂಗ್ಲೀಷ್ ರಂಗಭೂಮಿಯಲ್ಲಿ ಬಲವಾದ ಉತ್ಸಾಹ ಮತ್ತು ಕೌಶಲ್ಯವನ್ನು ಬೆಳೆಸಿಕೊಂಡರು, ಇದು 1947 ರಲ್ಲಿ "ದಿ ಷೇಕ್ಸ್‌ಪಿಯರ್" ನಿರ್ಮಾಣಕ್ಕೆ ಕಾರಣವಾಯಿತು. ಮೊದಲ ಪ್ರದರ್ಶನವು ಷೇಕ್ಸ್‌ಪಿಯರ್‌ನ ರಿಚರ್ಡ್ IIIನ ಪ್ರಭಾವಪೂರ್ಣವಾದ ನಿರ್ಮಾಣವಾಗಿತ್ತು ಮತ್ತು ಇದರಲ್ಲಿ ದತ್ ಅವರು ರಾಜನ ಪಾತ್ರವನ್ನು ನಿರ್ವಹಿಸಿದರು. ಇದು ಸಂಚಾರಿ 'ಷೇಕ್ಸ್‌ಪಿಯರೇನಾ ಥಿಯೇಟರ್ ಕಂಪನಿ'ಯ ಮುಂದಾಳುವಾದ ಜೆಫ್ರಿ ಕೆಂಡಲ್ ಮತ್ತು ಲೌರಾ ಕೆಂಡಲ್ (ನಟಿ ಜೆನ್ನಿಫರ್ ಕೆಂಡಲ್ನ ತಾಯಿ) ಅವರಿಗೆ ಭಾರಿ ಪ್ರಭಾವವನ್ನುಂಟು ಮಾಡಿತು ಮತ್ತು ಅವರು ತಕ್ಷಣವೇ ಅವರನ್ನು ಕೆಲಸಕ್ಕೆ ತೆಗೆದುಕೊಂಡರು ಮತ್ತು ಅವರೊಂದಿಗೆ ಮೊದಲು 1947-49 ಮತ್ತು ನಂತರ 1953-54 ರವರೆಗೆ ಷೇಕ್ಸ್‌ಪಿಯರ್‌ನ ನಾಟಕಗಳನ್ನು ಪ್ರದರ್ಶಿಸುತ್ತಾ ಭಾರತ ಮತ್ತು ಪಾಕಿಸ್ತಾನದಾದ್ಯಂತ ದತ್ ಎರಡು ವರ್ಷಗಳ ದೀರ್ಘಾವಧಿಯ ಪ್ರವಾಸವನ್ನು ಕೈಗೊಂಡರು; ಮತ್ತು ಒಥೆಲೋ ಅವರ ಭಾವೋದ್ರಿಕ್ತ ನಿರೂಪಣೆಯು ದತ್ ಅವರಿಗೆ ಪ್ರಶಂಸೆಯನ್ನು ತಂದು ಕೊಟ್ಟಿತು. 1949 ರಲ್ಲಿ ಜೆಫ್ರಿಯವರು ಮೊದಲ ಬಾರಿಗೆ ಭಾರತದಿಂದ ತೆರಳಿದ ಬಳಿಕ, ಉತ್ಪಲ್ ದತ್ ಅವರು ತಮ್ಮ ಸಮೂಹವನ್ನು 'ಲಿಟ್ಲ್ ಥಿಯೇಟರ್ ಗ್ರೂಪ್' (ಎಲ್‌ಟಿಜಿ) ಎಂಬುದಾಗಿ ಮರುಹೆಸರಿಸಿದರು, ಮತ್ತು ಮುಂದಿನ ಮೂರು ವರ್ಷಗಳಲ್ಲಿ ಇಬ್ಸೆನ್, ಶಾಹ್, ಗೋರ್ಕಿ ಮತ್ತು ಕೊನ್‌ಸ್ಟಾಂಟಿನ್ ಸಿಮೋನೋವ್ ಅವರ ನಾಟಕಗಳನ್ನು ಪ್ರದರ್ಶಿಸುವುದನ್ನು ಮತ್ತು ನಿರ್ಮಾಣ ಮಾಡುವುದನ್ನು ಮುಂದುವರಿಸಿದರು. ಆದರೆ ಸಮೂಹವು ಹಲವು ಬಂಗಾಳಿ ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದರಿಂದ ಅಂತಿಮವಾಗಿ ನಿರ್ಮಾಣ ಕಂಪನಿಯಾಗಿ ರೂಪುಗೊಳ್ಳಲಾಗುವಂತೆ ಸಮೂಹವು ಕೇವಲ ಬಂಗಾಳಿ ನಾಟಕಗಳನ್ನು ಪ್ರದರ್ಶಿಸಲು ಮಾತ್ರ ನಿರ್ಧರಿಸಿತು. ದತ್ ಅವರು ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನವನ್ನು ನೀಡಿದ ಗಾನನಾಟ್ಯ ಸಭಾ ದ ಸಕ್ರಿಯ ಸದಸ್ಯರಾಗಿಯೂ ಸಹ ಉಳಿದರು.[೬]. ದತ್ ಅವರು ವಾಮಪಂಥೀಯ ಒಲವಿನ ಸಂಸ್ಥೆಯಾದ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಶನ್ (ಐಪಿಟಿಎ)ದ ಸ್ಥಾಪಕ ಸದಸ್ಯರೂ ಸಹ ಆಗಿದ್ದರು. ದತ್ ಅವರು ಬಂಗಾಳದಲ್ಲಿ ಚರ್ಚೆಯನ್ನು ಮತ್ತು ಬದಲಾವಣೆಯನ್ನು ತರಲು "ಎಪಿಕ್ ಥಿಯೇಟರ್" ಎನ್ನುವುದನ್ನು ಬರೆದರು ಮತ್ತು ನಿರ್ದೇಶಿಸಿದರು, ಈ ಪದವನ್ನು ಬರ್ಟೋಲ್ಟ್ ಬ್ರೆಚ್ಟ್ನಿಂದ ಪಡೆದುಕೊಳ್ಳಲಾಗಿತ್ತು. ಇವರ ಬ್ರೆಚ್ಟ್ ಸೊಸೈಟಿಯು 1948 ರಲ್ಲಿ ರೂಪುಗೊಂಡಿತು ಮತ್ತು ಸತ್ಯಜಿತ್ ರೇ ಅವರು ಅದರ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಗ್ರೂಪ್ ಥಿಯೇಟರ್ ಚಳುವಳಿಯ ಭಾರಿ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದರು. ರಂಗಭೂಮಿಯಲ್ಲಿ ಪ್ರೇಕ್ಷಕರು "ಸಹ-ಲೇಖಕರು" ಆಗುವ ಬ್ರೆಚ್ಟ್ ಅವರ ನಂಬಿಕೆಯನ್ನು ದತ್ ಅವರು ಒಪ್ಪಿದರೂ, 'ಎಪಿಕ್ ಥಿಯೇಟರ್' ನ ಸಾಂಪ್ರದಾಯಿಕತೆಗಳು ಭಾರತದಲ್ಲಿ ಕಾರ್ಯಸಾಧ್ಯವಲ್ಲವೆಂದು ಅದನ್ನು ತಿರಸ್ಕರಿಸಿದರು.[೭] ದತ್ ಅವರು ಕೊಲ್ಕತ್ತಾದ ಸೌತ್ ಪಾಯಿಂಟ್ ಸ್ಕೂಲ್ನ ಇಂಗ್ಲೀಷ್ ಶಿಕ್ಷಕರಾಗಿಯೂ ಸಹ ಕಾರ್ಯನಿರ್ವಹಿಸಿದರು. ಶೀಘ್ರದಲ್ಲೇ ಅವರು ಹಲವು ಷೇಕ್ಸ್‌ಪಿಯರ್‌ನ ಗಂಭೀರ ನಾಟಕಗಳನ್ನು ಮತ್ತು ರಷ್ಯಾದ ಕ್ಲಾಸಿಕ್ ಶೈಲಿಗಳ ಕೃತಿಗಳನ್ನು ಬಂಗಾಳಿ ಭಾಷೆಗೆ ಭಾಷಾಂತರ ಮಾಡುವ ಕಾರ್ಯವನ್ನು ಮಾಡಲು ತಮ್ಮ ಮಾತೃಭಾಷೆ ಬಂಗಾಳಿಯತ್ತ ಹಿಂತಿರುಗಿದರು. 1954 ರಿಂದ ಪ್ರಾರಂಭಿಸಿ ದತ್ ಅವರು ವಿವಾದಾತ್ಮಕ ಬಂಗಾಳಿ ರಾಜಕೀಯ ನಾಟಕಗಳನ್ನು ಬರೆದರು ಮತ್ತು ನಿರ್ದೇಶಿಸಿದರು ಮತ್ತು 1957 ರಲ್ಲಿ ಮ್ಯಾಕ್ಸಿಮ್ ಗೋರ್ಖಿ ಅವರ ಲೋವರ್ ಡೆಪ್ತ್ ಅನ್ನು ಬಂಗಾಳಿಯಲ್ಲಿ ಬರೆದು ನಿರ್ದೇಶಿಸಿದರು. 1959 ರಲ್ಲಿ, ಮಿನರ್ವಾ ಥಿಯೇಟರ್, ಕೊಲ್ಕತ್ತಾದ ಗುತ್ತಿಗೆಯನ್ನು ಎಲ್‌ಟಿಜಿ ಪಡೆಯಿತು ಮತ್ತು ಅಲ್ಲಿ ಪ್ರಮುಖವಾಗಿ ಕಲ್ಲಿದ್ದಲು ಗಣಿ ಕಾರ್ಮಿಕರ ಶೋಷಣೆಯ ಆಧಾರಿತ ಅಂಗಾರ್ (ಬೆಂಕಿ) (1959) ಅನ್ನು ಪ್ರದರ್ಶಿಸಲಾಗುತ್ತಿತ್ತು. ಮುಂದಿನ ದಶಕಗಳ ಕಾಲ ಸಮೂಹವು ದತ್ ಅವರ ಸಂಚಾಲಕತ್ವದಲ್ಲಿ ಹಲವು ನಾಟಕಗಳನ್ನು ಇಲ್ಲಿ ಪ್ರದರ್ಶಿಸಿತು ಮತ್ತು ದತ್ ಅವರನ್ನು ಇಂದಿಗೂ ಸಹ ಭಾರತದ ರಂಗಭೂಮಿಯ ಒಂದು ಕೊನೆಯ ಅಗ್ರಗಣ್ಯ ನಟ-ನಿರ್ವಾಹಕರೆಂದು ನೆನಪಿಸಿಕೊಳ್ಳಲಾಗುತ್ತದೆ. ದತ್ ಅವರು ಆರ್ಜೋ ಒಪೆರಾ ಮತ್ತು ಬೈಬೆಕ್ ಯಾತ್ರಾ ಸಮಾಜ ನಂತಹ ಸಮೂಹಗಳನ್ನು ಸಹ ಸ್ಥಾಪಿಸಿದರು.[೮] ಈ ಮಧ್ಯೆ, ದತ್ ಅವರು ಒಥೆಲೋ ಪಾತ್ರವನ್ನು ನಿರ್ವಹಿಸುತ್ತಿರುವಾಗ ಚಿತ್ರ ನಿರ್ಮಾತೃರಾದ ಮಧು ಭೋಸ್ ಅವರು ದತ್ ಅವರ ಪ್ರದರ್ಶನವನ್ನು ಕಂಡು ಅವರಿಗೆ ತಮ್ಮ ಇಂಡೋ-ಆಂಗ್ಲಿಯನ್ ಕವಿ ಮೈಕೆಲ್ ಮಧುಸೂದನ್ ದತ್ ಅವರ ಜೀವನಾಧಾರಿತ ಚಿತ್ರವಾದ ಮೈಕೆಲ್ ಮಧುಸೂದನ್ (1950) ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿದರು ಮತ್ತು ಈ ಮೂಲಕ ದತ್ ಅವರ ರಂಗಭೂಮಿಯಿಂದ ಚಿತ್ರ ಜಗತ್ತಿಗಿನ ಪರಿವರ್ತನೆ ಸಂಭವಿಸಿತು. ನಂತರದಲ್ಲಿ, ಅವರು ಸ್ವತಃ ವಿಚ್ಛಿದ್ರ ವಸಾಹತುಶೈಲಿಯ ಚೈತನ್ಯ ಮತ್ತು ಮೈಕೆಲ್ ಮಧುಸೂದನ್ ದತ್ ಹಾಗೂ "ವಸಾಹತು ಶೈಲಿಯ" ಮೆಚ್ಚುಗೆ ಮತ್ತು "ವಸಾಹತು ಶೈಲಿ ವಿರೋಧಿ" ದಂಗೆಯ ನಡುವೆ ತೊನೆದಾಡದ ಬಗ್ಗೆ ನಾಟಕವೊಂದನ್ನು ಬರೆದರು. ಅವರು ಹಲವಾರು ಸತ್ಯಜಿತ್ ರೇ ಅವರ ಹಲವಾರು ಚಿತ್ರಗಳನ್ನು ಒಳಗೊಂಡು ಹಲವಾರು ಬಂಗಾಳಿ ಚಲನಚಿತ್ರಗಳಲ್ಲಿ ನಟಿಸಿದರು.[೨] ದತ್ ಅವರು ಕೆಲವೇ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದರೂ ಕೂಡ ಅವರು ಹಿಂದಿ ಚಲನಚಿತ್ರಗಳಲ್ಲಿ ಅತೀ ಜನಪ್ರಿಯ ಹಾಸ್ಯ ನಟರಾಗಿದ್ದರು. ಅವರು ಹಲವು ಹಾಸ್ಯ ಚಲನಚಿತ್ರಗಳಲ್ಲಿ ನಟಿಸಿದರು, ಅವುಗಳಲ್ಲಿ ಗುಡ್ಡಿ , ಗೋಲ್‌ಮಾಲ್ , ನರಮ್ ಗರಮ್ , ರಂಗ ಬಿರಂಗಿ ಮತ್ತು ಶೌಕೀನ್ ಪ್ರಮುಖವಾಗಿವೆ. ದತ್ ಅವರು ಗೋಲ್‌ಮಾಲ್ , ನರಮ್ ಗರಮ್ ಮತ್ತು ರಂಗ ಬಿರಂಗಿ ಚಿತ್ರದಲ್ಲಿನ ಅಭಿನಯಕ್ಕೆ ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಂಗಾಳಿ ಸಿನಿಮಾದಲ್ಲಿ, ಇವರು ಭುವನ್ ಶೋಮ್ ಚಿತ್ರದಲ್ಲಿ ನಟಿಸಿದರು ಮತ್ತು ಇದಕ್ಕೆ ಅವರಿಗೆ ಅತ್ಯುತ್ತಮ ನಟನೆಗಾಗಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಯನ್ನು ನೀಡಲಾಯಿತು, ಈ ಜೊತೆಗೆ ದತ್ ಅವರು ಮೃಣಾಲ್ ಸೇನ್ ಅವರ ಏಕ್ ಅಧೂರಿ ಕಹಾನಿ ಮತ್ತು ಕೋರಸ್ ಚಿತ್ರಗಳಲ್ಲಿ; ಸತ್ಯಜಿತ್ ರೇ ಅವರ ಆಗಂತುಕ್ , ಜಾನಾ ಅರನ್ಯಾ , ಜೋಯ್ ಬಾಬಾ ಫೇಲುನಾಥ್ ಮತ್ತು ಹಿರ್ಕರ್ ರಾಜರ್ ದೇಶೆ ಚಿತ್ರಗಳಲ್ಲಿ ; ಗೌತಮ್ ಘೋಷ್ ಅವರ ಪಾರ್ ಮತ್ತು ಪದ್ಮಾ ನಾಡಿರ್ ಮಾಝಿ ಚಿತ್ರಗಳಲ್ಲಿ ; ಜೇಮ್ಸ್ ಐವರಿ ಯವರ ಬಾಂಬೆ ಟಾಕಿ , ದಿ ಗುರು , ಮತ್ತು ಷೇಕ್ಸ್‌ಪಿಯರ್‌ವಾಲ್ಲಾಹ್ ; ರಿತ್ವಿಕ್ ಘಟಕ್ ಅವರ ಜುಕ್ತಿ ಟಕ್ಕೋ ಆರ್ ಗಪ್ಪೋ ; ಹೃಷಿಕೇಶ್ ಮುಖರ್ಜಿ ಅವರ ಗುಡ್ಡಿ ; ಬಸು ಚಟರ್ಜಿ ನಿರ್ದೇಶನದ ಸ್ವಾಮಿ ಮತ್ತು ಗೋಲ್ ಮಾಲ್ ಮತ್ತು ಶಕ್ತಿ ಸಾಮಂತ್ ಅವರ ಅಮಾನುಷ್ ಚಿತ್ರಗಳಲ್ಲಿ ಅಭಿನಯಿಸಿದರು. ಹಿಂದಿನ ಚಲನಚಿತ್ರದಲ್ಲಿ ಉಲ್ಲಾಸದ ಹಾಸ್ಯ ಪಾತ್ರಗಳನ್ನು ಮಾಡುವುದರ ಜೊತೆಗೇ ಬಂಗಾಳದಲ್ಲಿ ಅತೀ ಗಂಭೀರ ನಾಟಕಕಾರರು ಮತ್ತು ನಿರ್ದೇಶಕರ ವೃತ್ತಿಯನ್ನೂ ಸರಿಸಮನಾಗಿ ಯಶಸ್ವಿಯಾಗಿ ಸರಿತೂಗಿಸಿದರು. ದತ್ ಅವರು 20 ನೇ ಶತಮಾನದ ಏಳ್ಗೆ ಹೊಂದುತ್ತಿರುವ ಬಂಗಾಳಿ ರಂಗಭೂಮಿಯ ಅತ್ಯುತ್ತಮ ನಾಟಕಕಾರರಲ್ಲಿ ಓರ್ವರಾಗಿದ್ದಾರೆ.
Utpal Dutt[೭]
ದತ್ ಅವರು ಅಜೀವಪರ್ಯಂತ ಮಾರ್ಕ್ಸಿಸ್ಟ್ ಆಗಿದ್ದರು ಮತ್ತು ಕಮ್ಯುನಿಸ್ಟ್ ಪಕ್ಷ ಸಿಪಿಐಎಂ ಅಥವಾ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸಿಸ್ಟ್[೯] ನ ಸಕ್ರಿಯ ಬೆಂಬಲಿಗರಾಗಿದ್ದರು, ಮತ್ತು ಅವರ ವಾಮಪಂಥೀಯ "ಕ್ರಾಂತಿಕಾರಿ ರಂಗ ಕೃತಿ"ಗಳು ಸಮಕಾಲೀನ ಬಂಗಾಳಿ ರಂಗ ಕ್ಷೇತ್ರದಲ್ಲಿ ಅಸಾಧಾರಣವಾಗಿದೆ. ದತ್ ಅವರು ಕಮ್ಯುನಿಸ್ಟ್ ಪಾರ್ಟಿ ಪರವಾಗಿ ಹಲವಾರು ಬೀದಿ ನಾಟಕಗಳನ್ನು ಪ್ರದರ್ಶಿಸಿದರು. 1965 ರಲ್ಲಿ ಪಶ್ಚಿಮ ಬಂಗಾಳದ ಕಾಂಗ್ರೆಸ್ ಸರ್ಕಾರವು ದತ್ ಅವರನ್ನು ಜೈಲಿಗೆ ಕಳುಹಿಸಿತ್ತು ಮತ್ತು ಹಲವು ತಿಂಗಳವರೆಗೆ ಬಂಧನದಲ್ಲಿಟ್ಟಿತ್ತು, ಏಕೆಂದರೆ ಅವರ ನಾಟಕವಾದ ಕಲ್ಲೋಲ್ (ಅಲೆಗಳ ಧ್ವನಿಗಳು) ಎನ್ನುವುದು 1946 ರ ರಾಯಲ್ ಇಂಡಿಯನ್ ನೇವಿ ದಂಗೆಯನ್ನು ಆಧರಿಸಿತ್ತು ಮತ್ತು ಇದು ಕಲ್ಕತ್ತಾದ ಮಿನರ್ವ ಥಿಯೇಟರ್‌ನಲ್ಲಿ ತುಂಬಿದ ಗೃಹಗಳ ಪ್ರದರ್ಶನವನ್ನು ಕಂಡಿತು ಹಾಗೂ ಈ ನಾಟಕದ ವಿಧ್ವಂಸಕ ಸಂದೇಶವು ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ-ವಿರೋಧಿ ಪ್ರತಿಭಟನೆಯನ್ನು ಪ್ರಚೋದಿಸಬಹುದು ಎಂದು ಸರ್ಕಾರವು ಭೀತಿಗೊಂಡಿತ್ತು. ಈ ನಾಟಕವು ಮಿನರ್ವದಲ್ಲಿ ದೀರ್ಘಕಾಲ ಪ್ರದರ್ಶಿತಗೊಂಡ ದತ್ ಅವರ ನಾಟಕವಾಯಿತು. 1968 ರಲ್ಲಿ ಮಾನುಶೆರ್ ಅಧಿಕಾರೆ (ಜನರ ಹಕ್ಕುಗಳು) ಅನ್ನು ಸಾಕ್ಷಾಧಾರಿತ ನಾಟಕವಾಗಿ ಪ್ರದರ್ಶಿಸಲಾಯಿತು ಮತ್ತು ಇದು ಬಂಗಾಳಿ ರಂಗಕ್ಷೇತ್ರದಲ್ಲಿ ಹೊಸ ಶೈಲಿಯದ್ದಾಗಿತ್ತು, ದತ್ ಸಮೂಹವು ಥಿಯೇಟರ್ ಅನ್ನು ಅತಿ ಶೀಘ್ರದಲ್ಲೇ ತೊರೆದಿದ್ದರಿಂದ ಇದು ಮಿನರ್ವದಲ್ಲಿ ಅವರ ಸಮೂಹದ ಕೊನೆಯ ನಿರ್ಮಾಣವಾಯಿತು. ಈ ನಂತರ, ಸಮೂಹವು ಹೊಸ ಗುರಿಯತ್ತ ಸಾಗುವಂತೆ 'ಪ್ಯೂಪಲ್ಸ್ ಲಿಟಲ್ ಥಿಯೇಟರ್' ಎಂಬ ಹೊಸ ಹೆಸರನ್ನು ನೀಡಲಾಯಿತು ಮತ್ತು ದತ್ ಅವರ ಕಾರ್ಯವು ಜನರಿಗೆ ಹತ್ತಿರವಾಯಿತು ಹಾಗೂ ಅವರು ರಸ್ತೆಗಳು ಕೂಡುವ ಸ್ಥಳದಲ್ಲಿ ಮತ್ತು ತೆರೆದ ಸ್ಥಳದಲ್ಲಿ ಯಾವುದೇ ಸಹಾಯ ಅಥವಾ ಅಲಂಕರಣಗಳಿಲ್ಲದೇ ಅಗಾಧ ಜನಸಮುದಾಯದ ಎದುರು 'ಪೋಸ್ಟರ್' ನಾಟಕಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದ್ದರಿಂದ ಈ ಹಂತವು ಭಾರತೀಯ ಬೀದಿ ನಾಟಕವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ವರ್ಷದಲ್ಲೇ ಬಹು ಪ್ರಮಾಣದಲ್ಲಿ ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶದಲ್ಲಿ ಪ್ರದರ್ಶಿಸಲಾಗುವ ಬಂಗಾಳಿ ಜಾನಪದ ನಾಟಕ ರೂಪವಾದ ಜಾತ್ರಾ ಅಥವಾ ಯಾತ್ರಾ ಪಾಲಾ ವಿಭಾಗಕ್ಕೂ ಅವರು ಪರಿವರ್ತನೆಯನ್ನು ಮಾಡಿದರು. ಅವರು ಜಾತ್ರಾ ಕಥಾವಸ್ತುಗಳನ್ನು ಬರೆಯಲು ಪ್ರಾರಂಭಿಸಿದರು ಮತ್ತು ಅವುಗಳನ್ನು ನಿರ್ಮಾಣ ಮಾಡಿ ನಟಿಸಿದರು ಹಾಗೂ ಅವರ ಸ್ವಂತ ಜಾತ್ರಾ ತಂಡವನ್ನು ಸಹ ರೂಪಿಸಿದರು. ಅವರ ಜಾತ್ರಾ ರಾಜಕೀಯ ನಾಟಕಗಳನ್ನು ತೆರೆದ- ರಂಗ ಮಂದಿರಗಳಲ್ಲೂ ಆಗಾಗ್ಗೆ ಪ್ರದರ್ಶಿಸಲಾಯಿತು ಮತ್ತು ಅವರ ಕಮ್ಯುನಿಸ್ಟ್ ಸಿದ್ಧಾಂತದ ಬದ್ಧತೆಯನ್ನು ನಿರೂಪಿಸಿತು ಮತ್ತು ಇಂದು ಅವರ ಶಾಶ್ವತವಾದ ಪರಂಪರೆಯನ್ನು ನಿರ್ಮಿಸಿದೆ.[೧೦] 1970 ರಲ್ಲಿ ಅವರ ಬ್ಯಾರಿಕೇಡ್ , ದುಸ್ವಪ್ನೇರ್ ನಗರಿ (ದುಸ್ವಪ್ನದ ನಗರ), ಎಬಾರ್ ರಾಜರ್ ಪಾಲಾ (ರಾಜರ ಪ್ರವೇಶ) ನಾಟಕಗಳನ್ನು ಅಧಿಕೃತವಾಗಿ ನಿಷೇಧಿಸಲಾದರೂ ಜನಸಮುದಾಯವನ್ನು ಆಕರ್ಷಿಸಿತು.[೧][೮][೧೧][೧೨] ಅವರು ಜೈಲಿನಲ್ಲಿರುವಾಗಲೇ 1964 ರಲ್ಲಿ ಸ್ಟಾಲಿನ್-ಪರ, ಮಾಜಿ-ಪಾಲಿಟ್‌ಬ್ಯೂರೋ ಸದಸ್ಯರೊಬ್ಬರ ವಿರುದ್ದ 1963 ರಲ್ಲಿ ಮಾಸ್ಕೋದಲ್ಲಿ ಕ್ರಸ್ಚೆವೈಟ್ಗಳು ನೀಡಿದ ನೈಜ ತೊಂದರೆಯನ್ನು ಆಧರಿಸಿದ ಲೌಹಾ ಮಾನಬ್ (ಕಬ್ಬಿಣದ ಮನುಷ್ಯ) ನಾಟಕವನ್ನು ಬರೆದರು. ಇದನ್ನು ಮೊಟ್ಟ ಮೊದಲ ಬಾರಿಗೆ 1965 ರಲ್ಲಿ ಅಲಿಪೋರ್ ಜೈಲಿನಲ್ಲಿ ಪ್ಯೂಪಲ್ ಲಿಟ್ಲ್ ಥಿಯೇಟರ್‌ನವರು ಪ್ರದರ್ಶಿಸಿದರು. ಅವರ ಜೈಲುವಾಸವು ಬಂಡಾಯದ ಮತ್ತು ರಾಜಕೀಯವಾಗಿ ಪ್ರೇರಿತವಾದ ನಾಟಕಗಳ ರಚನೆಗೆ ಕಾರಣವಾಯಿತು, ಅವುಗಳಲ್ಲಿ ಭಾಗಶಃ ಪೈಗಮೋಲಿಯನ್ ಆಧರಿಸಿದ ಟೈನರ್ ಟೋಲೋರ್ (ಲೋಹದ ಕತ್ತಿ), ದುಸ್ವಪ್ನೇರ್ ನಗರಿ (ದುಸ್ವಪ್ನಗಳ ನಗರ), ಸ್ಕೋಟ್ಸ್‌ಬೊರೆ ಬಾಯ್ಸ್ ಪ್ರಕರಣ ಮತ್ತು 1931 ರಸ್ಕೋಟ್ಸ್‌ಬರೋಹ್ ವಿಚಾರಣೆಯಲ್ಲಿನ ಜನಾಂಗೀಯ ತಾರತಮ್ಯ ಮತ್ತು ಅನ್ಯಾಯದ ವಿರುದ್ಧದ ಪ್ರತಿಭಟನೆಯನ್ನು ಆಧರಿಸಿದ ಮಾನುಷೇರ್ ಓಧಿಕಾರೆ (ಮಾನವ ಹಕ್ಕುಗಳು), ಸೂರ್ಯ-ಶಿಖರ್ (ಸೂರ್ಯನ ಹುಡುಕಾಟ) (1978), ಮಹಾ-ಬಿದ್ರೋಹ (ಮಹಾ ದಂಗೆ) (1989), ಮತ್ತು ಕಾಲ್ಪನಿಕ ಪೂರ್ವ ಯುರೋಪಿಯನ್ ರಾಷ್ಟ್ರದಲ್ಲಿ ಪ್ರಾರಂಭವಾದ, ಕಮ್ಯೂನಿಸಮ್‌ನ ಅಂತ್ಯದ ಬಗೆಗಿನ ಲಾಲ್ ದರ್ಗೋ (ಕೆಂಪು ಕೋಟೆ) (1990) (ವಿನಾಶದ ಕೆಂಪು ದೇವತೆ) ಮತ್ತು ಲಾಭಕ್ಕಾಗಿ ಧರ್ಮವನ್ನು ಶೋಷಣೆ ಮಾಡುವ ಭಾರತೀಯ ರಾಜಕೀಯ ಪಕ್ಷಗಳ ಬಗ್ಗೆ ವಿಷಾದದ ಜನಾತರ್ ಆಫೀಮ್ (ಜನರ ನಿಷ್ಕ್ರಿಯತೆ), (1990) ಇವುಗಳು ಒಳಗೊಂಡಿತ್ತು.[೪] ಒಟ್ಟಾರೆಯಾಗಿ, ದತ್ ಅವರು ಇಪ್ಪತ್ತೆರಡು ಪೂರ್ಣ ಪ್ರಮಾಣದ ನಾಟಕಗಳು, 15 ಪೋಸ್ಟರ್ ನಾಟಕಗಳನ್ನು, ಹತ್ತೊಂಬತ್ತು ಜಾತ್ರಾ ಕಥಾವಸ್ತುಗಳನ್ನು ಬರೆದರು, ಸಾವಿರಾರು ನಾಟಕಗಳಲ್ಲಿ ಅಭಿನಯಿಸಿದರು, 60 ಕ್ಕೂ ನಿರ್ಮಾಣಗಳಿಗೆ ನಿರ್ದೇಶನವನ್ನು ಮಾಡಿದರು, ಈ ಜೊತೆಗೆ ಷೇಕ್ಸ್‌ಪಿಯರ್, ಗಿರೀಶ್ ಘೋಷ್, ಸ್ಟೈಸ್ಲೇವ್ಸ್‌ಕಿ, ಬ್ರೆಚ್ಟ್ ಮತ್ತು ಕ್ರಾಂತಿಕಾರಿ ನಾಟಕಗಳ ಕುರಿತಂತೆ ಅಧ್ಯಯನಗಳನ್ನು ಬರೆದರು ಮತ್ತು ಷೇಕ್ಸ್‌ಪಿಯರ್ ಮತ್ತು ಬ್ರೆಚ್ಟ್ ಅವರ ಬರಹಗಳನ್ನು ಭಾಷಾಂತರಿಸಿದರು. ದತ್ ಅವರು ಮೇಘ್ (1961) a ಮನೋವೈಜ್ಞಾನಿಕ ಥ್ರಿಲ್ಲರ್, ಘೂಮ್ ಬಾಂಗರ್ ಗಾನ್ (1965), ಯುವ ಬಂಗಾಳ ಚಳುವಳಿಯನ್ನು ಆಧರಿಸಿದ ಜಾರ್ (ಬಿರುಗಾಳಿ) (1979), ಬೈಸಾಕಿ ಮೇಘ್ (1981), ಮಾ (1983) ಮತ್ತು ಇಂಕಿಲಾಬ್ ಕೇ ಬಾದ್ (1984) ನಂತಹ ಹಲವಾರು ಚಲನಚಿತ್ರಗಳನ್ನು ನಿರ್ದೇಶಿಸಿದರು. ದತ್ ಅವರು 1993 ರ 19 ನೇ ಆಗಸ್ಟ್‌ರಂದು ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ನಿಧನರಾದರು.[೮]
ಪರಂಪರೆ
ಬದಲಾಯಿಸಿಅರೇಬಿಯನ್ ಸಮುದ್ರದಲ್ಲಿ ಬ್ರಿಟಿಷರ ವಿರುದ್ಧ ಭಾರತೀಯ ನಾವಿಕರ ದಂಗೆಯ ಕಥೆಯನ್ನು ಒಳಗೊಂಡ ಅತ್ಯುತ್ಕೃಷ್ಟ ನಾಟಕವಾದ ಕಲ್ಲೋಲ್ ಅನ್ನು ಪ್ರದರ್ಶಿಸಿದ ನಲ್ವತ್ತು ವರ್ಷಗಳ ನಂತರ ಅದನ್ನು 2005 ರಲ್ಲಿ ರಾಜ್ಯ ಸರ್ಕಾರಿ ಅನುದಾನದ ಭಾಗವಾದ 'ಉತ್ಪಲ್ ದತ್ ನಾಟ್ಯೋತ್ಸವ' (ಉತ್ಪಲ್ ದತ್ ನಾಟಕ ಹಬ್ಬ) ದಲ್ಲಿ ಕೊಲ್ಕತ್ತಾದ ಹೂಗ್ಲಿ ನದಿ ತೀರದಲ್ಲಿ ಗ್ಯಾಂಗ್‌ಬೋಕ್ಷೆ ಕಲ್ಲೋಲ್ ಆಗಿ ಪ್ರದರ್ಶಿಸಲಾಯಿತು.[೧೩] ದತ್ ಅವರ ಷೇಕ್ಸ್‌ಪಿಯರ್ ವಿಕೇಂದ್ರಿಯ ರಿತುಪರ್ಣ ಘೋಷ್ ನಟಿಸಿ,ನಿರ್ದೇಶಿಸಿದ ಆಜ್‌ಕೆರ್ ಶಹಜಹಾನ್ ನಾಟಕದ ಆಧಾರಿತ 2007 ರ ಇಂಗ್ಲೀಷ್ ಚಲನಚಿತ್ರವಾದ ದಿ ಲಾಸ್ಟ್ ಲಿಯರ್ ಚಿತ್ರವು ನಂತರ ಇಂಗ್ಲೀಷ್‌ನಲ್ಲಿನ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ವೈಯಕ್ತಿಕ ಜೀವನ
ಬದಲಾಯಿಸಿ1960 ರಲ್ಲಿ, ದತ್ ಅವರು ನಾಟಕ ಮತ್ತು ಚಲನಚಿತ್ರ ತಾರೆ ಶೋಭಾ ಸೇನ್ ಅವರನ್ನು ವಿವಾಹವಾದರು. ಅವರ ಏಕೈಕ ಪುತ್ರಿಯಾದ ಬಿಷ್ಣುಪ್ರಿಯಾ ದತ್ ಅವರು ನವದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿನ ಕಲಾ ಮತ್ತು ಸೌಂದರ್ಯಶಾಸ್ತ್ರದ ಶಾಲೆಯ ನಾಟಕ ಇತಿಹಾಸದ ಪ್ರೊಫೆಸರ್ ಆಗಿದ್ದಾರೆ.[೧೪]
ಪ್ರಶಸ್ತಿಗಳು ಮತ್ತು ಮಾನ್ಯತೆ
ಬದಲಾಯಿಸಿ- 1970:ವಿಜಯಿ : ಅತ್ಯುತ್ತಮ ನಟನಿಗೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಭುವನ್ ಶೋಮೆ
- 1980:ವಿಜಯಿ : ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ: ಗೋಲ್ ಮಾಲ್
- 1980:ನಾಮಾಂಕಿತ :ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ-ಗೋಲ್ ಮಾಲ್
- 1982: ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ: ನರಮ್ ಗರಮ್
- 1984: ಫಿಲ್ಮ್‌ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ: ರಂಗ್ ಬಿರಂಗಿ
- 1986:ನಾಮಾಂಕಿತ :ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ-ಸಾಹೇಬ್
- 1990: ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್
- 1993: ಬಂಗಾಳಿ ಪತ್ರಕರ್ತರುಗಳ ಅಸೋಸಿಯೇಶನ್ ಪ್ರಶಸ್ತಿ: ಅತ್ಯುತ್ತಮ ನಟ ಪ್ರಶಸ್ತಿ: ಆಗಂತುಕ್
ಚಲನಚಿತ್ರಗಳ ಪಟ್ಟಿ
ಬದಲಾಯಿಸಿಇದು ಉತ್ಪಲ್ ದತ್ ಅವರ ಚಲನಚಿತ್ರಗಳ ಅಪೂರ್ಣ ಪಟ್ಟಿಯಾಗಿದೆ.
- ದಿ ಲಾಸ್ಟ್ ಇಯರ್ (2007) (ಆಜಿಕೆರ್ ಸಾಜಹಾನ್ ಅವರ ಕಥೆ ಆಧಾರಿತ ದತ್ ಅವರಿಂದ )
- ಮೇರಾ ದಾಮದ್ (1995)
- ಪದ್ಮಾ ನಾಡಿರ್ ಮಾಜಿ (1993)
- ಆಗಂತುಕ್ (1991)
- ಜಾನ್ ಪೇಚಾನ್ (1991)
- ಪಾಥ್-ಓ-ಪ್ರಸಾದ್ (1991)
- ಜವಾನಿ ಜಿಂದಾಬಾದ್ (1990)
- ಮೇರಾ ಪತಿ ಸಿರ್ಫ್ ಮೇರಾ ಹೈ (1990)
- ಬಹುರಾನಿ (1989)
- ಮಹಾವೀರ (1988)
- ಲಾ ನ್ಯೂಟ್ ಬೆಂಗಾಲಿ (1988)
- ಪ್ಯಾರ್ ಕೆ ಕಾಬಿಲ್ (1987)
- ಆಜ್ ಕಾ ರಾಬಿನ್ ಹುಡ್ (1987)
- ಆಪ್ ಕೆ ಸಾಥ್ (1986)
- ಬಾತ್ ಬನ್ ಜಾಯೆ (1986)
- ಕಿರಾಯಾದಾರ್ (1986)
- ಮೈ ಬಲವಾನ್ (1986)
- ಪಾತ್‌ಬೋಲಾ (1986)
- ಸಾದಾ ಸುಹಾಗನ್ (1986)
- ಸಾಹೆಬ್ (1985)
- ಆರ್ ಪಾರ್ (1985) ಅಕಾ ಅನ್ಯಾಯ್ ಅಬಚಾರ್
- ಉಲ್ಟಾ ಸೀದಾ (1985)
- ಲವ್ ಮ್ಯಾರೇಜ್ (1984)
- ಜಾನ್ ಜಾನಿ ಜನಾರ್ಧನ್ (1984)
- ಲಾಖೋಂಕಿ ಬಾತ್ (1984)
- ಇಂಕಿಲಾಬ್ (1984)
- ಪಾರ್ (1984)
- ಯೇ ದೇಶ್ (1984)
- ಅಚ್ಚಾ ಬೂರಾ (1983)
- ರಂಗ್ ಬಿರಂಗಿ (1983)
- ಕಿಸ್ಸಿ ಸೇ ನಾ ಕೆಹನಾ (1983)
- ಪಸಂದ್ ಅಪ್ನಿ ಅಪ್ನಿ (1983)
- ಶುಭ ಕಾಮನಾ (1983)
- ರಾಸ್ತೆ ಪ್ಯಾರ್ ಕೇ (1982)
- ಹಮಾರಿ ಬಹು ಅಲ್ಕಾ (1982)
- ಅಂಗೂರ್ (1982)
- ಅಗ್ನಿ ಪರೀಕ್ಷಾ (1981)
- ನರಮ್ ಗರಮ್ (1981)
- ಬರಸಾತ್ ಕೀ ಏಕ್ ರಾತ್ (1981) ಅಕಾ ಅನಸಂಧಾನ್ (ಭಾರತ: ಬಂಗಾಳಿ ಶೀರ್ಷಿಕೆ)
- ಚಾಲಚಿತ್ರಾ (1981)
- ಮೇಘಮುಕ್ತಿ (1981)
- ಶೌಕೀನ್ (1981)
- ಅಗ್ರೀಮೆಂಟ್ (1980)
- ದಾದರ್ ಕೀರ್ತಿ (1980)
- ಹಿರಕ್ ರಾಜರ್ ದೇಶೆ (1980)
- ಅಪ್ನೆ ಪರಾಯೆ (1980)
- ಹೀರಕ್ ರಾಜರ್ ದೇಶೆ (1980)
- ರಾಮ್ ಬಲರಾಮ್ (1980)
- ಕರ್ತವ್ಯ (1979)
- ಗೋಲ್ ಮಾಲ್ (1979)
- ದಿ ಗ್ರೇಟ್ ಗ್ಯಾಂಬ್ಲರ್ (1979)
- ಜೋರ್ (1979)
- ಪ್ರೇಮ್ ವಿವಾಹ್ (1979)
- ಅತಿಥಿ (1978)
- ಜೋಯಿ ಬಾಬಾ ಫೇಲುನಾಥ್ (1978)
- ಟೂಟೆ ಕಿಲೋನೆ (1978)
- ಕೊತ್ವಾಲ್ ಸಾಬ್ (1977)
- ಯೆಹಿ ಹೈ ಜಿಂದಗಿ (1977)
- ಇಮಾನ್ ಧರಮ್ (1977)
- ಆನಂದ ಆಶ್ರಮ್ (1977)
- ಅನುರೋಧ್ (1977)
- ದುಲ್ಹನ್ ವಹಿ ಜೋ ಪಿಯಾ ಮನ್ ಬಾಯೆ (1977)
- ಫರಿಶ್ತಾ ಯಾ ಕಟೀಲ್ (1977)
- ಕಿಸ್ಸಾ ಖುರ್ಸಿ ಕಾ (1977)
- ಪ್ರಿಯತಮಾ (1977)
- ಸಫೇದ್ ಹಾತಿ (1978)
- ಜೋಯಿ ಬಾಬಾ ಫೇಲುನಾಥ್ (1978)
- ಸ್ವಾಮಿ (1977)
- ಜಾನಾ ಅರಣ್ಯ (1976)
- ದತ್ತ (1976)
- ದೋ ಅಂಜಾನೆ (1976)
- ಸಂತನ್ (1976)
- ಸೇಯಿ ಚೋಕ್ (1976)
- ಶಾಕ್ (1976)
- ಅಮಾನುಷ್ (1975)
- ಜೂಲಿ (1975) (ಉತ್ಪಲ್ ದತ್ ಆಗಿ)
- ಅನಾರಿ (1975)
- ಪಲಂಕಾ (1975)
- ಅಸತಿ (1974)
- ಕೋರಸ್ (1974 ರ ಚಿತ್ರ) (1974)
- ಜುಕ್ತಿ, ಟಕ್ಕೋ ಆರ್ ಗಪ್ಪೋ (1974)
- ಮಿ. ರೋಮಿಯೋ (1974)
- ತಾಗಿನಿ (1974)
- ಹನಿಮೂನ್ (1973)
- ಮರಿಜಿನಾ ಅಬ್ದುಲ್ಲಾ (1973)
- ಶ್ರೀರಾಮ್ ಪೃಥ್ವಿರಾಜ್ (1973)
- ಏಕ್ ಅಧೂರಿ ಕಹಾನಿ (1972)
- ಮೇರಾ ಜೀವನ್ ಸಾಥಿ (1972)
- ಸಬಸೆ ಬಡಾ ಸುಖ್ (1972)
- ಕಲ್ಲತ್ತಾ 71 (1971)
- ಗುಡ್ಡಿ (1971)
- ಕುಂಜೆಯ್ ಬೆರಾಯಿ (1971)
- ಬಾಂಬೆ ಟಾಕೀ (1970)
- ಕಲಂಕಿತ ನಾಯಕ್ (1970)
- ದಿ ಗುರು (1969)
- ಭುವನ್ ಶೋಮೆ (1969)
- ಸಾಥ್ ಹಿಂದೂಸ್ತಾನಿ (1969)
- ಚೌರಿಂಗೀ (1968)
- ಶೇಕ್ಸ್‌ಪಿಯರ್-ವಲ್ಲಾಹ್ (1965)
- ಮೋಮರ್ ಅಲೋ (1964)
- ಶೇಶ್ ಅಂಕಾ (1963)
- ಸೂರ್ಯ ಸಿಖಾ (1963)
- ರಕ್ತ ಪಲಾಶ್ (1962)
- ಸಪ್ತಪದಿ (1961) (voice)
- ಹರನೋ ಸುರ್ (1957)
- ಶುಭಲಗ್ನ (1956)
- ವಿಕ್ರಮ್ ಊರ್ವಶಿ (1954)
- ಮೈಕೆಲ್ ಮಧುಸೂದನ್ (1950)
- ವಿದ್ಯಾಸಾಗರ್ (1950)
ನಾಟಕಗಳು
ಬದಲಾಯಿಸಿ- ಮಿರ್ಕಾಸ್ಸಿಮ್
- ಟಿನರ್ ಟಲೋವರ್
- ಫೆರಾರಿ ಫೌಜ್
- ಬೋನಿಕೆರ್ ರಾಜಡಂಡೋ
- ಬ್ಯಾರಿಕೇಡ್
- ಛಾಯಾನಾಥ್
- ಕಾಂಗೋರ್ ಕರಾಗರೆ
- ಕಲ್ಲೋಲ್
- ಆಜಕೆರ್ ಶಾಹಜಹಾನ್
ಕಾರ್ಯಗಳು
ಬದಲಾಯಿಸಿ- ಗಿರೀಶ್ ಚಂದ್ರ ಘೋಷ್ . ಸಾಹಿತ್ಯ ಅಕಾಡೆಮಿ ಪ್ರಕಟಣೆಗಳು. 1992. ISBN 0688168949 ಆಯ್ದ ಭಾಗಗಳು
- ದಿ ಗ್ರೇಟ್ ರೆಬೆಲಿಯನ್, 1857 (ಮಹಾಬಿದ್ರೋಹ ), ಸೀಗಲ್ ಬುಕ್ಸ್, 1986. ISBN 0688168949
- ಆನ್ ಥಿಯೇಟರ್ , ಸೀಗಲ್ ಬುಕ್ಸ್. 2009. ISBN 0688168949
- ಟುವರ್ಡ್ಸ್ ಎ ರೆವಲ್ಯೂಷನರಿ ಥಿಯೇಟರ್ . ಸೀಗಲ್ ಬುಕ್ಸ್, 2009. ISBN 0688168949
- ಆನ್ ಸಿನೆಮಾ . ಸೀಗಲ್ ಬುಕ್ಸ್, 2009. ISBN 0688168949
- ರೈಟ್ಸ್ ಆಫ್ ಮ್ಯಾನ್ (ಮನುಷೇರ್ ಅಧಿಕಾರೆ ). ಸೀಗಲ್ ಬುಕ್ಸ್, 2009. ISBN 0688168949
- 3 ಪ್ಲೇಯ್ಸ್ ಸೀಗಲ್ ಬುಕ್ಸ್, 2009. ISBN 0688168949
ಹೆಚ್ಚಿನ ಓದಿಗಾಗಿ
ಬದಲಾಯಿಸಿ- ರೆಪ್ರೆಸೆಂಟೇಶನ್ ಎಂಡ್ ಕ್ಲಾಸ್ ಪೊಲಿಟಿಕ್ಸ್ ಇನ್ ದಿ ಥಿಯೇಟರ್ ಆಫ್ ಉತ್ಪಲ್ ದತ್ , ಹಿಮಾನಿ ಬ್ಯಾನರ್ಜಿ ಅವರಿಂದ. ಸಾಮಾಜಿಕ ವಿಜ್ಞಾನದ ಅಧ್ಯಯನಗಳ ಕೇಂದ್ರ, 1988.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ ಇನ್‌ಸೈಡ್ ದಿ ಆಕ್ಟರ್ಸ್ ಮೈಡ್ ಮಿಂಟ್ (ಸುದ್ದಿಪತ್ರಿಕೆ), 3 ಜುಲೈ 2009.
- ↑ ೨.೦ ೨.೧ ರಿಮೆಂಬರಿಂಗ್ ಉತ್ಪಲ್ ದತ್ ಶೋಮಾ ಎ ಚಟರ್ಜಿ, ಸ್ಕ್ರೀನ್ (ನಿಯತಕಾಲಿಕ), 20 ಆಗಸ್ಟ್ 2004.
- ↑ ದಿ ಮಿರರ್ ಆಫ್ ಕ್ಲಾಸ್: ಎಸ್ಸೇಸ್ ಆನ್ ಬೆಂಗಾಳಿ ಥಿಯೇಟರ್ ಬೈ ಹಿಮಾನಿ ಬ್ಯಾನರ್ಜಿ Archived 2007-10-21 ವೇಬ್ಯಾಕ್ ಮೆಷಿನ್ ನಲ್ಲಿ. ಫ್ರಂಟ್‌ಲೈನ್ (ನಿಯತಕಾಲಿಕ), ಸಂ 18 - ಸಂ 12, ಜೂನ್. 09 - 22, 2001.
- ↑ ೪.೦ ೪.೧ ಸ್ಟೇಜ್ ಆನ್ & ಆಫ್: ಮ್ಯಾನ್ ಇನ್ ಐರನ್ ಮಾಸ್ಕ್ Archived 2012-10-23 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಟೆಲಿಗ್ರಾಫ್ (ಕೊಲ್ಕತ್ತಾ), 26 ಆಗಸ್ಟ್ 2006.
- ↑ ಉತ್ಪಲ್ ದತ್ Archived 2007-12-30 ವೇಬ್ಯಾಕ್ ಮೆಷಿನ್ ನಲ್ಲಿ. ಕಲ್ಲತ್ತಾ ವೆಬ್.
- ↑ ಉತ್ಪಲ್ ದತ್ ದಿ ಕೊಲಂಬಿಯಾ ಎನ್‌ಸೈಕ್ಲೋಪೀಡಿಯಾ ಆಫ್ ಮಾಡರ್ನ್ ಡ್ರಾಮಾ, ಸಂಪುಟ 1 , ಗ್ಯಾಬ್ರಿಯೆಲಾ ಹೆಚ್ ಕೋಡಿ, ಎವರ್ಟ್ ಸ್ಪ್ರಿಂಕೋರ್ಮ್ ಅವರಿಂದ. ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್, 2007. ISBN 0688168949 ಪುಟ 382-383 .
- ↑ ೭.೦ ೭.೧ ಉತ್ಪಲ್ ದತ್ಥಿಯೇಟರ್ಸ್ ಆಫ್ ಇಂಡೆಪೆಂಡೆನ್ಸ್: ಡ್ರಾಮಾ, ಥಿಯರಿ, ಎಂಡ್ ಅರ್ಬನ್ ಪರ್ಫಾಮೆನ್ಸ್ ಇನ್ ಇಂಡಿಯಾ ಸಿನ್ಸ್ ೧೯೪೭: ಸ್ಟಡೀಸ್ ಇನ್ ಥಿಯೇಟರ್ ಹಿಸ್ಟರಿ ಎಂಡ್ ಕಲ್ಪರ್ ಅಪರ್ಣಾ ಭಾರ್ಗವ ಅವರಿಂದ. ಐವೋವಾ ಯೂನಿವರ್ಸಿಟಿ ಪ್ರೆಸ್, 2005. ISBN 0688168949 ಪುಟ 114.
- ↑ ೮.೦ ೮.೧ ೮.೨ ಆಬಿಚುವರಿ: ಉತ್ಪಲ್ ದತ್ ದಿ ಇಂಡೆಪೆಂಡೆಂಟ್, 21 ಆಗಸ್ಟ್ 1993.
- ↑ Saubhadro Chatterji (11 March 2009). "Poll-bound Bengal turns to artistes". Business Standard. Retrieved 13 March 2009.
- ↑ ರಿಹರ್ಸಲ್ಸ್ ಆಫ್ ರೆವಲ್ಯೂಷನ್: ದಿ ಪೊಲಿಟಿಕಲ್ ಥಿಯೇಟರ್ ಆಫ್ ಬೆಂಗಾಳ್ , ರುಸ್ತುಮ್ ಭರುಚಾ ಅವರಿಂದ. ಹವಾಯಿ ಯೂನಿವರ್ಸಿಟಿ ಪ್ರೆಸ್, 2005. ISBN 0688168949 ಪುಟ 55
- ↑ ಪ್ರೊ-ಕಮ್ಯೂನಿಸ್ಟ್ ಡ್ರಾಮಾ ಗೆಟ್ಸ್ ಕ್ರೌಡ್ಸ್ ಇನ್ ಕೊಲ್ಕತ್ತಾ ನ್ಯೂಯಾರ್ಕ್ ಟೈಮ್ಸ್, 25 ನವೆಂಬರ್ 1965.
- ↑ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಆರ್ಟಿಕಲ್ ಆನ್ ಉತ್ಪಲ್ ದತ್ Britannica.com.
- ↑ ದತ್ಸ್ ಕಲ್ಲೋಲ್ ಟು ರೈಡ್ ದಿ ಹೂಗ್ಲಿ Archived 2012-10-23 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಟೆಲಿಗ್ರಾಫ್ (ಕೊಲ್ಕತ್ತಾ), 5 ನವೆಂಬರ್ 2005.
- ↑ ದತ್ ಎಂಡ್ ಹಿಸ್ ಡೈಮೆನ್ಶನ್ಸ್ Archived 2012-11-07 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಹಿಂದೂ, 26 ಅಕ್ಟೋಬರ್ 2007.
- ಪಾಪ್ಯುಲರ್ ಥಿಯೇಟರ್: ಎ ಸೋರ್ಸ್ಬುಕ್, ವರ್ಡ್ಸ್ ಆಫ್ ಪರ್ಫಾರ್ಮೆನ್ಸ್ , ಜೋಯಲ್ ಶೆಟ್ಚರ್ ಅವರಿಂದ. ರೌಲೆಟ್ಜ್, 2003. ISBN 0688168949 ಥಿಯೇಟ್ಸ್ ಆಸ್ ವೆಪನ್: ಉತ್ಪಲ್ ದತ್
ಬಾಹ್ಯ ಕೊಂಡಿಗಳು
ಬದಲಾಯಿಸಿ- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ದತ್
- Calcuttaweb.com ನಲ್ಲಿನ ವ್ಯಕ್ತಿ ವಿವರ Archived 2007-12-30 ವೇಬ್ಯಾಕ್ ಮೆಷಿನ್ ನಲ್ಲಿ.