ಸಂಗೀತ ನಾಟಕ ಅಕಾಡೆಮಿ

ಸಂಗೀತ ನಾಟಕ ಅಕಾಡೆಮಿ (ಆಂಗ್ಲ: The National Academy for Music, Dance and Drama) ಸಂಗೀತ, ನಾಟಕ ಮತ್ತು ನೃತ್ಯ ಕಲೆಗಳನ್ನು ಪೋಷಿಸಲು ಭಾರತ ಸರಕಾರ ಹುಟ್ಟುಹಾಕಿದ ರಾಷ್ಟ್ರ ಮಟ್ಟದ ಸಂಸ್ಥೆ. [೧]

Sangeet Natak Akademi
ಸಂಕ್ಷಿಪ್ತ ಹೆಸರುಎಸ್ಎನ್ಎ
ಸ್ಥಾಪನೆಮೇ 31, 1952; 26193 ದಿನ ಗಳ ಹಿಂದೆ (1952-೦೫-31)
ಪ್ರಧಾನ ಕಚೇರಿರವೀಂದ್ರ ಭವನ್, ಫಿರೋಜ್ಶಾ ರಸ್ತೆ, ನವ ದೆಹಲಿ, ಭಾರತ
ಪ್ರದೇಶ served
ಭಾರತ
ಪೋಷಕ ಸಂಸ್ಥೆಗಳು
ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ
ಅಧಿಕೃತ ಜಾಲತಾಣsangeetnatak.org

ಇತಿಹಾಸ ಬದಲಾಯಿಸಿ

೧೯೫೨ಮೇ ೩೧ರಂದು ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯವು ಹುಟ್ಟುಹಾಕಿದ ಈ ಸಂಸ್ಥೆ ಅದರ ಮುಂದಿನ ವರ್ಷದಿಂದ ಕೆಲಸ ಪ್ರಾರಂಭಿಸಿತು. ಡಾ. ಪಿ.ವಿ.ರಾಜಮನ್ನಾರ್‍ ಅದರ ಮೊದಲ ಅಧ್ಯಕ್ಷರಾಗಿದ್ದರು. ಭಾರತದ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಪಾರ್ಲಿಮೆಂಟ್ ಹೌಸಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಸಂಸ್ಥೆಯನ್ನು ಉದ್ಘಾಟಿಸಿದರು. [೨]

ಅಕಾಡೆಮಿ ಕೊಡಮಾಡುವ ಫೆಲೋಶಿಪ್ ಮತ್ತು ಪ್ರಶಸ್ತಿಗಳಿಗೆ ಅಪಾರ ಪ್ರತಿಷ್ಟೆಯಿದೆ.

ಕಾರ್ಯಗಳು ಬದಲಾಯಿಸಿ

ಸಂಗೀತ , ನಾಟಕ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಭಾರತದ ಶ್ರೀಮಂತ ಪರಂಪರೆಯನ್ನು ಕಾಪಾಡಿ , ಬೆಳೆಸುವ ಹೊಣೆ ಹೊತ್ತಿರುವ ಈ ಅಕಾಡೆಮಿ ಈ ಕ್ಷೇತ್ರದಲ್ಲಿ ಭಾರತದ ಅತ್ಯುಚ್ಚ ಸಂಸ್ಥೆ. ಇದು ರಾಜ್ಯ ಸರಕಾರಗಳು ಮತ್ತು ದೇಶಾದ್ಯಂತ ಹರಡಿರುವ ವಿವಿಧ ಕಲಾ ಅಕಾಡೆಮಿಗಳೊಂದಿಗೂ ಕೆಲಸ ಮಾವಡುತ್ತದೆ.

ಇದು ರಾಷ್ಟ್ರ ಮಟ್ಟದ ಸಂಸ್ಥೆಗಳನ್ನು ಹುಟ್ಟುಹಾಕಿ ನಡೆಸುತ್ತದೆ. ಇದರ ಆಶ್ರಯದಲ್ಲಿ ನಡೆಯುತ್ತಿರುವ ಕೆಲವು ಅಂಥಾ ಸಂಸ್ಥೆಗಳು

 • ರಾಷ್ಟ್ರೀಯ ನಾಟಕ ಶಾಲೆ (National School of Drama (NSD), ನವದೆಹಲಿ ೧೯೫೯ .
 • ಜವಹರಲಾಲ್ ನೆಹರೂ ಮಣಿಪುರ ನೃತ್ಯ ಅಕಾಡೆಮಿ , ಇಂಫಾಲ್
 • ಕಥಕ್ ಕೇಂದ್ರ (National Institute of Kathak Dance), ನವದೆಹಲಿ ೧೯೬೪
 • ಕೇರಳದ ಪುರಾತನ ಸಂಸ್ಕೃತ ರಂಗಭೂಮಿ "ಗುಡಿಯಾಟ್ಟಂ" ಬೆಂಬಲಕ್ಕಾಗಿ ರಾಷ್ಟ್ರೀಯ ಯೋಜನೆಗಳು.
 • ಸಂಗೀತ, ನೃತ್ಯ ಮತ್ತು ನಾಟಕ ಕ್ಷೇತ್ರಗಳ ಶಿಕ್ಷಣ, ಪ್ರದರ್ಶನ ಅಥಾ ಪ್ರೋತ್ಸಾಹದ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಸ್ಥೆಗಳಿಗೆ ಸಹಾಯ ನೀಡುವುದು
 • ಈ ಕ್ಷೇತ್ರಗಳಲ್ಲಿ ಸಂಶೋಧನೆ, ದಾಖಲಾತಿ ಮತ್ತು ಪ್ರಕಟಣೆಗಳಿಗೆ ಧನಸಹಾಯ ನೀಡುವುದು.
 • ವಿದ್ವಾಂಸರಿಂದ ಸೆಮಿನಾರುಗಳನ್ನು ಸಮ್ಮೇಳನಗಳನ್ನು ಏರ್ಪಡಿಸುವುದು
 • ದಾಖಲೆಗಳನ್ನು ಮತ್ತು ರೆಕಾರ್ಡುಗಳನ್ನು ತನ್ನ ದೃಶ್ಯ ಶ್ರಾವ್ಯ ಮಾಧ್ಯಮ ಸಂಗ್ರಹಾಲಯದಲ್ಲಿ ಜೋಪಾನವಾಗಿಡುವುದು.
 • ಈ ಕ್ಷೇತ್ಗಳಿಗೆ ಸಂಬಂಧಪಟ್ಟಂತೆ ನೀತಿನಿಯಮಗಳನ್ನು ರೂಪುಗೊಳಿಸಲು ಮತ್ತು ಜಾರಿಗೆ ತರಲು ಭಾರತ ಸರಕಾರಕ್ಕೆ ಸಹಾಯ ಮಾಡುವುದು.
 • ದೇಶದ ವಿವಿಧ ಪ್ರದೇಶಗಳ, ಹಾಘೂ ಭಾರತ ಮತ್ತು ಹೊರ ದೇಶಗಳ, ಸಾಂಸ್ಕೃತಿಕ ಸಂಬಂದಗಳನ್ನು ಬಲಪಡಿಸುವುಧು ಈ ಸಂಸ್ಥೆಯ ಕಾರ್ಯದಲ್ಲಿ ಸ್ವಲ್ಪಮಟ್ಟಿಗೆ ಬರುತ್ತದೆ.[೩]

ಸೌಲಭ್ಯಗಳು ಬದಲಾಯಿಸಿ

ಅಕಾಡೆಮಿ ಈ ಮಾಹಿತಿಯ ಒಂದು ಬಹುಮುಖ್ಯ ಆಕರವಾಗಿದ್ದು ಈ ಕೆಳಕಂಡ ಸೌಲಭ್ಯಗಳನ್ನು ಹೊಂದಿದೆ.

ದೃಶ್ಯ ಶ್ರಾವ್ಯ ಮಾಧ್ಯಮ ಸಂಗ್ರಹಾಲಯ ಬದಲಾಯಿಸಿ

ಇಲ್ಲಿ ಅನೇಕ ದೃಶ್ಯ ಶ್ರಾವ್ಯ ಟೇಪುಗಳು , ಛಾಯಾಚಿತ್ರಗಳು, ಫಿಲಮ್ಮುಗಳ ಸಂಗ್ರಹವಿದೆ. ಭಾರತದಲ್ಲಿಯೇ ಅತಿ ದೊಡ್ಡದಾದ ಈ ಸಂಗ್ರಹಾಲಯವನ್ನು ಸಂಶೋಧನೆಗಳಿಗಾಗಿ ಉಪಯೋಗಿಸಲಾಗುತ್ತದೆ.

ಗ್ರಂಥಾಲಯ ಬದಲಾಯಿಸಿ

ಇಲ್ಲಿಯ ಗ್ರಂಥಾಲಯದಲ್ಲಿ ಸುಮಾರು ೨೨,೦೦೦ ಪುಸ್ತಕಗಳಿವೆ. ನೃತ್ಯ, ನಾಟಕ, ಸಂಗೀತ, ರಂಗಭೂಮಿ, ಸಮಾಜಶಾಸ್ತ್ರ, ಜಾನಪದ, ಆದಿವಾಸಿ ಅಧ್ಯಯನಗಳು, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ , ಭಾರತೀಯ ಕಲೆ, ಧರ್ಮ ಮತ್ತು ಪುರಾಣಗಳು , ಮಾನವ ವಂಶ ಶಾಸ್ತ್ರ , ಈ ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳಲ್ಲದೆ, ವಿಶ್ವಕೋಶಗಳು, ಶಬ್ದಕೋಶಗಳು , ವಾರ್ಷಿಕ ಸಂಚಿಕೆಗಳು, ಪುಸ್ತಕಪಟ್ಟಿಗಳು, ಸೂಚಿಗಳು, ಮತ್ತು ಸಂಬಂಧಪಟ್ಟ ಪತ್ರಿಕೆಗಳ ಕಟಿಂಗುಗಳು ಮುಂತಾದ ಆಕರಗಳು ಸಹಾ ಇಲ್ಲಿವೆ.

ಇವಲ್ಲದೇ , ೧೯೫೩ರಿಂದ ಪ್ರಶಸ್ತಿ ವಿಜೇತರಾದವರ ಮತ್ತು ಇತರ ಪ್ರಸಿದ್ಧರ ಮಾಹಿತಿಗಳನ್ನೂ ಇದು ಕಲೆಹಾಕುತ್ತದೆ.[೪]

ಸಂಗೀತ ವಾದ್ಯಗಳ ಗ್ಯಾಲರಿ ಬದಲಾಯಿಸಿ

ನವದೆಹಲಿಯ ರವೀಂದ್ರ ಭವನದಲ್ಲಿರುವ ವಸ್ತುಸಂಗ್ರಹಾಲಯ ಮತ್ತು ಗ್ಯಾಲರಿಯಲ್ಲಿ ೨೦೦ಕ್ಕೂ ಹೆಚ್ಚು ಸಂಗೀತ ವಾದ್ಯಗಳ ಸಂಗ್ರಹವಿದೆ.

ದಾಖಲೆ ವಿಭಾಗ ಬದಲಾಯಿಸಿ

 
Rabindra Bhawan, Delhi which houses the Sangeet Natak Akademi, Lalit Kala Akademi and Sahitya Akademi.

ಈ ವಿಭಾಗವು ಸಂಗೀತ , ನೃತ್ಯ ಮತ್ತು ನಾಟಕಕ್ಕೆ ಸಂಬಂಧಿಸಿದಂತೆ ದಿಗ್ಗಜರ ದಾಖಲೆಗಳನ್ನು, ರೆಕಾರ್ಡುಗಳನ್ನು ಕಲೆಹಾಕಿ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ. ಅಕಾಡೆಮಿ ತನ್ನದೇ ಆದ ಪುಸ್ತಕಗಳ ಪ್ರಕಟಣೆಯನ್ನೂ ಮಾಡುತ್ತದೆ.

ಪ್ರಶಸ್ತಿ ಮತ್ತು ಫೆಲೋಶಿಪ್ ಬದಲಾಯಿಸಿ

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಬದಲಾಯಿಸಿ

ಈ ಪ್ರಶಸ್ತಿ ಈ ರಂಗಗಳಲ್ಲಿ ಭಾರತದಲ್ಲಿಯೇ ಅತ್ಯುಚ್ಚವಾದುದೆಂದು ಪರಿಗಣಿಸಲಾಗುತ್ತದೆ. ೫೦,೦೦೦ ಸಾವಿರ ರೂಪಾಯಿ, ಶಾಲು ಮತ್ತು ತಾಮ್ರ ಪತ್ರ ಈ ಪ್ರಶಸ್ತಿಯ ಭಾಗ.

ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ "ರತ್ನ ಸದಸ್ಯ" ಬದಲಾಯಿಸಿ

ಕಲೆ, ಸಂಗೀತ, ನೃತ್ಯ, ಮತ್ತು ನಾಟಕ ರಂಗಗಳಲ್ಲಿ ಮಹಾನ್ ಸೇವೆ ಸಲ್ಲಿಸಿದವರಿಗೆ ಅಕಾಡೆಮಿ ಪ್ರತಿವರ್ಷ ಈ ಸನ್ಮಾನವನ್ನು ನೀಡುತ್ತದೆ. [೫]

ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಬದಲಾಯಿಸಿ

ಸಂಗೀತ, ನೃತ್ಯ, ಮತ್ತು ನಾಟಕ ರಂಗಗಳಲ್ಲಿ ಹೆಸರು ಮಾಡುತ್ತಿರುವ್ ಯುವಕಲಾವಿದರಿಗೆ ಮೀಸಲಾದ ಈ ಪ್ರಶಸ್ತಿಯನ್ನು , ಖ್ಯಾತ ಶಹನಾಯ್ ವಾದಕ ಬಿಸ್ಮಿಲ್ಲಾ ಖಾನರ ನೆನಪಿನಲ್ಲಿ ೨೦೦೬ರಿಂದ ಕೊಡಲಾಗುತ್ತಿದೆ.[೬]

ಉಲ್ಲೇಖಗಳು ಬದಲಾಯಿಸಿ

 1. "Institutions of the Sangeet Natak Akademi". SNA. Archived from the original on 27 ಜುಲೈ 2011. Retrieved 8 November 2010.
 2. "Centres of the Akademi". SNA. Archived from the original on 27 ಜುಲೈ 2011. Retrieved 8 November 2010.
 3. Central stage Live Mint, 15 July 2009.
 4. "ಆರ್ಕೈವ್ ನಕಲು". Archived from the original on 2016-01-03. Retrieved 2017-07-09.
 5. "Ustad Bismillah Khan Yuva Puruskar". Archived from the original on 2007-07-02. Retrieved 2017-07-09.
 6. "ಆರ್ಕೈವ್ ನಕಲು". Archived from the original on 2013-10-14. Retrieved 2017-07-09.

ಬಾಹ್ಯ ಸಂಪರ್ಕಗಳು ಬದಲಾಯಿಸಿ