ಇರ್ವಿನ್ ಶ್ರೋಡಿಂಗರ್

ಗಣಿತಜ್ಞ

ಇರ್ವಿನ್ ಶ್ರೋಡಿಂಗರ್ (1887-1961) ಆಸ್ಟ್ರಿಯದ ಭೌತವಿಜ್ಞಾನಿ ಮತ್ತು ಚಿಂತಕ. ನೊಬೆಲ್ ಪಾರಿತೋಷಿಕ ಪುರಸ್ಕೃತ.

೧೯೩೩ರಲ್ಲಿ ಶ್ರೋಡಿಂಗರ್

ಈತನಿಗೆ ಚಿಕ್ಕಂದಿನಿಂದಲೇ ವಿಜ್ಞಾನದಲ್ಲಿ ಆಸಕ್ತಿ. ವ್ಯಾಕರಣ ಮತ್ತು ಜರ್ಮನ್ ಪದ್ಯಗಳ ಬಗ್ಗೆ ಅಪಾರ ಒಲವು. ಗ್ರೀಕ್ ಸಾಹಿತ್ಯ ಓದಿದ. 1906-1910ರ ತನಕ ವಿಯನ್ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ (1906-10). ಒಂದನೆಯ ಮಹಾಯುದ್ಧದಲ್ಲಿ (1914-18) ಫಿರಂಗಿದಳ ಅಧಿಕಾರಿಯಾಗಿ ಕೆಲಸ. ಮುಂದೆ ಸ್ಟಟ್‌ಗಾರ್ಟ್, ಬ್ರೆಸ್ಲೊ[] ಮತ್ತು ಜ಼ೂರಿಚ್ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ ಹುದ್ದೆ. ಜೂ಼ರಿಚ್ಚಿನಲ್ಲಿದ್ದ 6 ವರ್ಷಗಳು ಬಲು ತೃಪ್ತಿದಾಯಕವಾಗಿದ್ದುವು. ಅಲ್ಲಿ ಈತನ ಆತ್ಮೀಯ ಗೆಳೆಯರಾದ ಹರ್ಮನ್ ವೈಲ್ (1885-1955) ಮತ್ತು ಪೀಟರ್ ಡಿಬೈ (1884-1966) ಇದ್ದರು. ಈತನ ಹೆಸರಿನಿಂದಲೇ ಪ್ರಸಿದ್ಧವಾಗಿರುವ ತರಂಗ ಸಮೀಕರಣವನ್ನು ಈತ ಸ್ಥಾಪಿಸಿದ್ದು ಇಲ್ಲೇ(1926).

ಈತನಿಗೆ ನೀಲ್ಸ್ ಬೋರ್‌ನ (1885-1962) ತತ್‌ಕ್ಷಣಿಕ ರೀತಿಯ ಶಕಲ ಸಿದ್ಧಾಂತ ಹಿಡಿಸಿರಲಿಲ್ಲ. ಯಾವುದಾದರೊಂದು ಬಗೆಯ ಐಗನ್ ಮೌಲ್ಯ ಸಮಸ್ಯೆಯಿಂದ ಪರಮಾಣು ರೋಹಿತ ನಿರ್ಧರಿತವಾಗಬೇಕೆಂದು ಯೋಚಿಸುತ್ತಿದ್ದ. ಕಣಗಳೂ ತರಂಗಗಳಂತೆ ವರ್ತಿಸುತ್ತವೆ ಎಂಬ ಅಭಿಪ್ರಾಯವನ್ನು ಲೂಯಿ ಡಿ ಬ್ರಾಗ್ಲೀ (1892-1987) ಮಂಡಿಸಿದಾಗ ಇದನ್ನು ಗಣನೆಗೆ ತೆಗೆದುಕೊಂಡು ಎರಡನೆಯ ವರ್ಗದ ಒಂದು ಅವಕಲ ಸಮೀಕರಣವನ್ನು ಸ್ಥಾಪಿಸಿದ. ಇದಕ್ಕೆ ಶ್ರೋಡಿಂಗರ್ ಸಮೀಕರಣ ಎಂದು ಹೆಸರು.[]   ಇಲ್ಲಿ   ತರಂಗ ಫಲನ (ವೇವ್ ಫಂಕ್ಷನ್), ಕಣಚಲಿಸುವ V(r,t) = ವಿಭವ, (h=ಪ್ಲಾಂಕ್ ಸ್ಥಿರಾಂಕ). ಈ ಸಮೀಕರಣದಿಂದ ಈತ ಹೈಡ್ರೊಜನ್ ಪರಮಾಣುವಿನ ರೋಹಿತವನ್ನು ವಿವರಿಸಿದ. ಪರಮಾಣುಗಳ ಆಲ್ಫ ಕ್ಷಯಯನ್ನು (ಆಲ್ಫ ಡಿಕೇ) ಜಾರ್ಜ್ ಗ್ಯಾಮೊ (1904-68) ವಿವರಿಸಿದ. ಪರಮಾಣು ಮತ್ತು ನ್ಯೂಕ್ಲಿಯರ್ ಭೌತವಿಜ್ಞಾನದ ಅಧ್ಯಯನಕ್ಕೆ ಈ ಸಮೀಕರಣ ಅಡಿಗಲ್ಲಾಯಿತು. ಈ ಸಾಧನೆಗೆ ಈತನಿಗೆ 1933ರ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ದೊರೆಯಿತು.[] 1927ರಲ್ಲಿ ಈತ ಪ್ಲಾಂಕ್‌ನ (1858-1947) ಉತ್ತರಾಧಿಕಾರಿಯಾಗಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ. ಆಗ ಜರ್ಮನಿಯ ರಾಜಧಾನಿ ವಿದ್ವತ್ತಿನ ಗಣಿಯಾಗಿತ್ತು. 1938ರಲ್ಲಿ ಹಿಟ್ಲರ್ (1889-1945) ಆಸ್ಟ್ರಿಯವನ್ನು ವಶಪಡಿಸಿಕೊಂಡಾಗ ಈತ ತಲೆಮರೆಸಿಕೊಂಡು ಇಟಲಿಗೆ ಹೋದ. ಮುಂದೆ ಡಬ್ಲಿನ್‌ನಲ್ಲಿ ಸೈದ್ಧಾಂತಿಕ ಭೌತವಿಜ್ಞಾನ ಶಾಲೆಯ ನಿರ್ದೇಶಕನಾಗಿ ನೇಮಕಗೊಂಡ.[] ನಿವೃತ್ತನಾಗುವ ತನಕ ಅಲ್ಲಿಯೇ ಇದ್ದ. 1953ರಲ್ಲಿ ವಿಯನ್ನಕ್ಕೆ ಹಿಂತಿರುಗಿದ. 1961 ಜನವರಿ 4ರಂದು ನಿಧನನಾದ. ಈತ ‘ವಾಟ್ ಈಸ್ ಲೈಫ್’ ಎಂಬ ಕೃತಿಯನ್ನು ರಚಿಸಿದ್ದಾನೆ.

ಉಲ್ಲೇಖಗಳು

ಬದಲಾಯಿಸಿ
  1. "The Nobel Prize in Physics 1933". NobelPrize.org (in ಅಮೆರಿಕನ್ ಇಂಗ್ಲಿಷ್). Retrieved 2023-02-19.
  2. Moore 1992, p. 194.
  3. "The Nobel Prize in Physics 1933". The Nobel Foundation. Retrieved 13 August 2021.
  4. Daugherty, Brian. "Brief Chronology". Erwin Schrödinger. Archived from the original on 9 March 2012. Retrieved 10 December 2012.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: