ಅರಿಶಿನ ಬುರುಡೆ
ಮೇಲಿನ ಚಿತ್ರ (ಗಂಡು). ಕೆಳಗೆ ಗೂಡಿನಲ್ಲಿ (ಹೆಣ್ಣು)
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
O. kundoo
Binomial name
Oriolus kundoo
(Sykes, 1832)
ಅಂದಾಜು ವ್ಯಾಪ್ತಿ

ಅರಿಶಿನ ಬುರುಡೆ ಹಕ್ಕಿ ಬದಲಾಯಿಸಿ

  • ಅರಿಶಿನ ಬುರುಡೆ ಹಕ್ಕಿ ಒರಿಯಲ್ ಕುಂಡೂ (Oriolus kundoo ಕ-ಅರಿಶಿನ-ಬುರುಡೆ) ಜಾತಿಗೆ ಸೇರಿದ ಗುಬಚ್ಚಿ ಗಾತ್ರದ ಹಕ್ಕಿ. ಇದನ್ನು ಭಾರತ ಉಪಖಂಡ ಹಾಗು ಮಧ್ಯ ಏಷ್ಯದೆಲ್ಲೆಡೆ ಕಾಣಬಹುದು. ಕೆಲವೆಡೆ ಈ ಹಕ್ಕಿ 'ಮದುವಣಗಿತ್ತಿ' ಎಂಬ ಹೆಸರಿ ನಿಂದಲೂ ಕರೆಯಲ್ಪಡುತ್ತದೆ.
  • ಮದುವಣಗಿತ್ತಿ (ಮದುಮಗಳು) ಎಂಬ ಹೆಸರಿಗೆ ತಕ್ಕಂತೆ ಮುಖ ಮೈ ಎಲ್ಲವೂ ಅರಿಶಿನ. ಹಣೆಯ ಕುಂಕುಮದಂತೆ ಕೆಂಪು ಕೊಕ್ಕು. ಕಾಡಿಗೆ ತೀಡಿದ ಕಣ್ಣಿನಂತೆ ಕಣ್ಣಿನ ಪಕ್ಕಕ್ಕೆ ಕಪ್ಪು ಬಣ್ಣ ತೀಡಿರುವುದರಿಂದ ಮದುವಣಗಿತ್ತಿ ಎಂಬ ಹೆಸರು ಈ ಹಕ್ಕಿಯ ರೂಪವನ್ನು ಸೂಕ್ತವಾಗಿ ಸೂಚಿಸುತ್ತದೆ. ಆದರೆ ಈ ಹೆಸರು ಸೂಚಿಸುವಂತೆ ಇದು ಹೆಣ್ಣ ಹಕ್ಕಿಯ ರೂಪ ಲಕ್ಷಣಗಳಲ್ಲ - ಇದು ಗಂಡು ಹಕ್ಕಿಯ ರೂಪ ಲಕ್ಷಣಗಳಾಗಿವೆ.
  • ಈ ಹಕ್ಕಿಯನ್ನು ಇನ್ನೂ ಬೇರೆ ಬೇರೆ ಹೆಸರುಗಳಿಂದಲೂ ಕರೆಯುವುದುಂಟು. ಸುವರ್ಣ ಪಕ್ಷಿ, ಹೊನ್ನಕ್ಕಿ, ಮಂಜಲಪಕ್ಕಿ, ಮಂಜಲಕ್ಕಿ ( ತುಳು), ಮಂಜಪಕ್ಷಿ (ಕೊಡವ), ಪಿಳಿಕ, ಪಿಪೀಲಾಯ (ಸಂಸ್ಕೃತ).
  • ಹಿಂದೆ ಇವುಗಳನ್ನು ಯುರೇಷ್ಯದ ಹಳದಿ ಓರಿಯಲ್ ಓರಿಯೊಲಸ್ (Eurasian Golden Oriole) ( Oriolus oriolus , ಓ-ಅರಿಶಿನ-ಬುರುಡೆ )ಗಳ ಉಪಜಾತಿ ಎಂದು ವಿಂಗಡಿಸಲ್ಪಟ್ಟಿತ್ತು. ಆದರೆ ಇವುಗಳ ಬಣ್ಣ ಮಾರ್ಪಾಡು, ಕೂಗುಗಳಲ್ಲಿನ ವ್ಯತ್ಯಾಸ ದಿಂದಾಗಿ ಇವು ಈಗ ತಮ್ಮದೇ ಆದ ಮೂಲ ಜಾತಿಯ ಸ್ಥಾನ ಪಡೆದಿವೆ[೧].
  • ಇವು ಯುರೇಷ್ಯದ ಹಳದಿ ಗಂಡು ಒರಿಯಲ್ ಗಳಿಗಿಂತ ವಿಭಿನ್ನ ಎಂಬುದನ್ನು ಅದರ ಕಣ್ಣ ಹಿಂದಕ್ಕೆ ವಿಸ್ತರಿಸುವ ಕಪ್ಪು ಪಟ್ಟಿಯಿಂದ ಗುರುತಿಸಬಹುದು.
  • ಪಾಕಿಸ್ತಾನ, ಉಸ್ಬೇಕಿಸ್ತಾನ್ , ತುರ್ಕ್ಮೆನಿಸ್ತಾನ್, ಕಝೆಕ್ಸ್ತಾನ್, ತಜಿಕಿಸ್ತಾನ್, ಆಫ್ಗಾನಿಸ್ತಾನ್ ಹಾಗು ನೇಪಾಳ ಹಾಗು ಭಾರತದ ಬಹುತೇಕ ಕಡೆ ಇವು ಕಾಣಿಸಿಕೊಂಡರೂ, ಬೇರೆಡೆಯ ಅರಿಶಿನ-ಬುರುಡೆಗಳು ಭಾರತಪರ್ಯಾಯದ್ವೀಪದಲ್ಲಿನ ಅರಿಶಿನ-ಬುರುಡೆಗಳು ವಲಸೆ ಹೋಗುವುದಿಲ್ಲ.[೧]

ವಿವರ ಬದಲಾಯಿಸಿ

 
ಗಂಡು ಹಕ್ಕಿಯ ಕೆಳಭಾಗ
  • ಯುರೇಷ್ಯಾದ ತಮ್ಮ ಬಳಗಕ್ಕಿಂತಲೂ, ಬಾಲದಲ್ಲಿ ಹೆಚ್ಚು ಹಳದಿ ಹೊಂದಿದ್ದು, ಕೊಕ್ಕಿನಲ್ಲಿನ ಹಾಗು ಕಣ್ಣುಗಳಲ್ಲಿನ ಕೆಂಪು ಮಂದವಾಗಿರುವ ಭಾರತದ ಅರಿಶಿನ-ಬುರುಡೆಯ ಗಂಡು ಹಕ್ಕಿಗಳಿಗೆ ಕಾಡಿಗೆ ಹಚ್ಚಿರುವಂತೆ ಕಣ್ಣಿನಿಂದ ಪಕ್ಕಕ್ಕೆ ಕಪ್ಪು ಬಣ್ಣ ತೀಡಿದ್ದು, ಕಪ್ಪು ರೆಕ್ಕೆಯ ಎರಡನೆ ಹಾಗು ಮೂರನೆ ಮಡಿಚಿನಲ್ಲಿರುವ ಪುಕ್ಕಗಳ ತುದಿ ಹಳದಿಯಾಗಿರುತ್ತದೆ.
  • ಹೆಣ್ಣು ಹಕ್ಕಿಗಳ ಕೆಳಭಾಗದಲ್ಲಿನ ಬೂದಿಬಣ್ಣದ ಕಿರುಪಟ್ಟೆಗಳು ಯುರೇಷ್ಯಾದ ಹೆಣ್ಣು ಬಳಗಕ್ಕಿಂತಲೂ ತೀಕ್ಷ್ಣವಾಗಿರುತ್ತದೆ.[೨][೩][೪]
  • ಯುರೇಷ್ಯಾದ ಮದುವಣಗಿತ್ತಿ ಗಂಡು ಹಕ್ಕಿಗಳ ರೆಕ್ಕೆ ೧೪೯-೧೬೨ cm ಆದರೆ ಭಾರತದ ಗಂಡು ಹಕ್ಕಿಗಳ ರೆಕ್ಕೆ ೧೩೬-೧೪೪. ರೆಕ್ಕೆಯ ಪುಕ್ಕಗಳ ಸೂತ್ರದಲ್ಲೂ ವ್ಯತ್ಯಾಸವಿದೆ. ಓ-ಮದುವಣಗಿತ್ತಿಯರ ಮೂಲ ೫ ನೆಯದಕ್ಕಿಂತ ೨ ನೆಯದು ಉದ್ದ. ಕ-ಮದುವಣಗಿತ್ತಿಯರ ಮೂಲ 2 ನೆಯದಕ್ಕಿಂತ 5 ನೆಯದು ಉದ್ದವಿರುತ್ತದೆ.[೫]

ವ್ಯಾಪ್ತಿ ಮತ್ತು ವಾಸ ಬದಲಾಯಿಸಿ

ಆಹಾರ ಮತ್ತು ಪರಿಸರ ಬದಲಾಯಿಸಿ

 
ಗಂಡು ಗೂಡಿನಲ್ಲಿ ( ಹೈದರಾಬಾದ್, ಭಾರತ )
  • ಹಣ್ಣುಗಳು, ಕೀಟಗಳು, ಹೂವಿನ ಮಕರಂದ [೨] ಅರಿಶಿನ ಬುರುಡೆ ಹಕ್ಕಿಗಳ ಆಹಾರ. ಇವು ಬಯಲು ಸೀಮೆಯ ಸಾಲುಮರಗಳಲ್ಲಿ ಅತ್ತಿ, ಗೋಣಿ, ಆಲ, ಬಸರಿ ಮೊದಲಾದ ಮರಗಳು ಹಣ್ಣು ಬಿಟ್ಟಾಗ ಇತರ ಹಕ್ಕಿಗಳ ಗುಂಪಿನಲ್ಲಿ ಇವೂ ಸೇರಿ ಗಲಾಟೆ ಮಾಡುತ್ತಾ ಹಣ್ಣು ತಿನ್ನುವುದನ್ನು ನೋಡಬಹುದು.
  • ಅವು ಲಂಟ್ರಾಣಿ ( ಲಾಂಟೆನ ) ಹಾಗು ಇತರ ಬಗೆಯ ಕಿರಿ ಹಣ್ಣುಗಳ ಬೀಜಪ್ರಸಾರಕ್ಕೆ ಕಾರಣವಾಗಿವೆ.[೬]
  • ಇವು ಹಾರುವ ಹಲ್ಲಿಯನ್ನು (Draco dussumieri) ಬೇಟೆ ಆಡಿದ ಪುರಾವೆಯೂ ಇದೆ.[೭]
  • ಇವುಗಳ ಹಾರಾಟ ತಗ್ಗು-ಧುಮುಕುವ ಶೈಲಿಯದಾದರೂ, ಇವು ಗಂಟೆಗೆ ೪೦ ಕಿ.ಮಿ ವೇಗ ಮುಟ್ಟಬಲ್ಲವು. ಇವು ಕೆಲವೊಮ್ಮೆ ನಿಂತ ನೀರಿನಲ್ಲಿ ಮತ್ತೆ ಮತ್ತೆ ಮೀಯುವ ಸಡಗರವನ್ನು ಗಮನಿಸಲಾಗಿದೆ. ಗುಜರಾತ್ ರಾಜ್ಯದಲ್ಲಿ ಗುರುತಿಸಿದ ಮದುವಣಗಿತ್ತಿಯೊಂದು - ೯ ವರ್ಷಗಳ ನಂತರ ತಜಕಿಸ್ತಾನದಲ್ಲಿ ಕಂಡಿರುವ ದಾಖಲೆ ಇದೆ.[೮]
  • ಏಪ್ರಿಲ್ ನಿಂದ ಆಗಸ್ಟ್ ಮಾಸಗಳಲ್ಲಿ ಸಂತಾನ ಅಭಿವೃದ್ಧಿ ನಡೆಸಿ ಇವು ಜೇಡರ ಬಲೆಯನ್ನೂ, ಹುಲ್ಲು, ನಾರು, ಮತ್ತು ಎಲೆಗಳಿಂದ ಎರಡು ಕೊಂಬೆಗಳ ಮಧ್ಯದಲ್ಲಿ ತೊಟ್ಟಿಲಿನಂತಹ ಗೂಡನ್ನು ಕಟ್ಟುತ್ತವೆ.
  • ಸಾಧಾರಣವಾಗಿ ಇವು ಕಾಜಾಣ/ಕರಿ-ಭುಜಂಗ (Black Drongo) ಹಕ್ಕಿಯ ಗೂಡಿನ ಅಕ್ಕಪಕ್ಕದಲ್ಲಿ ತಮ್ಮ ಗೂಡನ್ನು ಮಾಡುತ್ತವೆ.[೨]
  • ಬಿಳಿಯ ತೊಗಟಿನ ಮೇಲೆ ಮಣ್ಣು ಹಾಗು ಕಪ್ಪು ಬಣ್ಣದ ಬೊಟ್ಟುಗಳುಳ್ಳ ೨-೩ ಮೊಟ್ಟೆಗಳನ್ನು ಹಾಕಿ, ತಾಯಿ ಮತ್ತು ತಂದೆ ಹಕ್ಕಿಗಳೆರಡೂ ಗೂಡು ಹಾಗು ಮರಿಗಳನ್ನು ಪಾಲಿಸುತ್ತವೆ. ಇವುಗಳ ಸಂತತಿಗೆ ಕಾಗೆ, ಗಿಡುಗ ಮತ್ತು ಇತರ ಭಕ್ಷಕರಿಂದ ಆತಂಕ ಹೆಚ್ಚು.[೮]
  • ಹೀಮೊಪ್ರೋಟಿಯಸ ಎಂಬ ಪರಾವಲಂಬ ರಕ್ತ ಜೀವಿ ಅರಿಶಿನ-ಬುರುಡೆಗಳಲ್ಲಿ ಸಾಧಾರಣವಾಗಿ ಕಾಣಿಸಿಕೊಳುತ್ತವೆ.[೯]

ಮೂಲಗಳು ಬದಲಾಯಿಸಿ

  1. ೧.೦ ೧.೧ ೧.೨ Walther, B; Jones, P (2008). "Family Oriolidae (Orioles and Figbirds)]". In Josep, del Hoyo; Andrew, Elliott; David, Christie (eds.). Handbook of the Birds of the World. Volume 13, Penduline-tits to Shrikes. Barcelona: Lynx Edicions. pp. 692–723. ISBN 978-84-96553-45-3{{cite book}}: CS1 maint: postscript (link)
  2. ೨.೦ ೨.೧ ೨.೨ ೨.೩ Rasmussen PC & JC Anderton (2005). Birds of South Asia. The Ripley Guide. Volume 2. Washington DC & Barcelona: Smithsonian Institution and Lynx Edicions. p. 586.
  3. Jønsson, KA; Rauri C. K. Bowie, Robert G. Moyle, Martin Irestedt, Les Christidis, Janette A. Norman and Jon Fjeldsa (2010). /18.25ba04a 21296cc 434f980005871/J%25C3%25B6nsson%2Bet%2Bal%2BOriolidae.pdf "Phylogeny and biogeography of Oriolidae (Aves: Passeriformes)" (PDF). Ecography. 33: 232–241. doi:10.1111/j.1600-0587.2010.06167.x. {{cite journal}}: Check |url= value (help)CS1 maint: multiple names: authors list (link)[ಶಾಶ್ವತವಾಗಿ ಮಡಿದ ಕೊಂಡಿ]
  4. Kollibay, Paul (1915). "Einige Bemerkungen über Oriolus oriolus kundoo Sykes". Journal of Ornithology (in German). 64 (2): 241–243. doi:10. 1007/BF02250522. {{cite journal}}: Check |doi= value (help)CS1 maint: unrecognized language (link)
  5. Vaurie, Charles. "Systematic notes on Palearctic birds. No. 32, Oriolidae, Dicruridae, Bombycillidae, Pycnonotidae, Nectariniidae, and Zosteropidae". American Museum novitates. 1869: 1–28.
  6. Ali, Salim (1936). "Economic ornithology in India" (PDF). Current Science. 4: 472–478.
  7. Balachandran, S (1998). "Golden oriole Oriolus oriolus preying on flying lizard Draco dussumieri Dum. & Bibr". J. Bombay Nat. Hist. Soc. 95 (1): 115.
  8. ೮.೦ ೮.೧ Ali S & SD Ripley. Handbook of the Birds of India and Pakistan. Volume 5 (2 ed.). New Delhi: Oxford University Press. pp. 102–104.
  9. Peirce, MA (1984). "Haematozoa of Zambian birds VII. Redescription of Haemoproteus orioli from Oriolus oriolus (Oriolidae)". Journal of Natural History. 18 (5): 785–787. doi:10.1080/00222938400770651.

ಬಾಹ್ಯ ಕೊಂಡಿಗಳು ಬದಲಾಯಿಸಿ