ತೋಟ ಸಸ್ಯಗಳು ಮತ್ತು ಪ್ರಕೃತಿಯ ಇತರ ರೂಪಗಳ ಪ್ರದರ್ಶನ, ಕೃಷಿ ಮತ್ತು ಅವುಗಳನ್ನು ಆನಂದಿಸುವುದಕ್ಕೆ ಮೀಸಲಿಡಲಾದ, ಸಾಮಾನ್ಯವಾಗಿ ಹೊರಾಂಗಣದಲ್ಲಿರುವ ಒಂದು ಯೋಜಿತ ಸ್ಥಳ. ತೋಟವು ನೈಸರ್ಗಿಕ ಮತ್ತು ಮಾನವ ನಿರ್ಮಿತ ವಸ್ತುಗಳು ಎರಡನ್ನೂ ಒಳಗೊಂಡಿರಬಹುದು. ಇಂದು, ಅತ್ಯಂತ ಸಾಮಾನ್ಯ ರೂಪವನ್ನು ನಿವಾಸದ ತೋಟವೆಂದು ಕರೆಯಲಾಗುತ್ತದೆ, ಆದರೆ ಸಾಂಪ್ರದಾಯಿಕವಾಗಿ ತೋಟ ಪದವು ಹೆಚ್ಚು ವಿಸ್ತೃತವಾಗಿದೆ. ಪಾಶ್ಚಾತ್ಯ ತೋಟಗಳು ಬಹುತೇಕ ಸಾರ್ವತ್ರಿಕವಾಗಿ ಸಸ್ಯಗಳ ಮೇಲೆ ಆಧಾರಿತವಾಗಿವೆ, ಮತ್ತು ಹಲವುವೇಳೆ ತೋಟ ಪದವು ಸಸ್ಯೋದ್ಯಾನ ಪದದ ಸಂಕ್ಷಿಪ್ತ ರೂಪವನ್ನು ಸೂಚಿಸುತ್ತದೆ.

ಜೋಧ್‍ಪುರ್‍ನ ಉಮೇದ್ ಭವನ್ ಅರಮನೆಯ ತೋಟ

ಜ಼ೆರಸ್ಕೇಪ್ ತೋಟಗಳು ನೀರಾವರಿ ಅಥವಾ ಇತರ ಸಂಪನ್ಮೂಲಗಳ ವ್ಯಾಪಕ ಅಗತ್ಯವಿಲ್ಲದ ಸ್ಥಳೀಯ ಸಸ್ಯಗಳನ್ನು ಬಳಸುತ್ತವೆ, ಆದರೂ ಒಂದು ತೋಟದ ಪರಿಸರದ ಪ್ರಯೋಜನಗಳನ್ನು ಒದಗಿಸುತ್ತವೆ. ತೋಟಗಳು ಕೆಲವೊಮ್ಮೆ ಹುಚ್ಚುಮಹಲುಗಳು ಎಂದು ಕರೆಯಲ್ಪಡುವ, ರಚನಾತ್ಮಕ ವರ್ಧನೆಗಳನ್ನು ಪ್ರದರ್ಶಿಸಬಹುದು. ಇವುಗಳಲ್ಲಿ ಕಾರಂಜಿಗಳು, ಕೊಳಗಳು, ಜಲಪಾತಗಳು ಅಥವಾ ತೊರೆಗಳು, ಒಣ ತೊರೆ ತಳ, ಪ್ರತಿಮೆ, ಲತಾಮಂತಪಗಳು, ಹಂದರಗಳಂತಹ ಜಲ ವೈಶಿಷ್ಟ್ಯಗಳು ಸೇರಿರುತ್ತವೆ.

ಕೆಲವು ತೋಟಗಳು ಅಲಂಕಾರಿಕ ಉದ್ದೇಶಗಳಿಗೆ ಮಾತ್ರ ಇರುತ್ತವೆ, ಮತ್ತು ಕೆಲವು ತೋಟಗಳು ಆಹಾರ ಬೆಳೆಗಳನ್ನೂ ಉತ್ಪಾದಿಸುತ್ತವೆ, ಕೆಲವೊಮ್ಮೆ ಪ್ರತ್ಯೇಕ ಪ್ರದೇಶಗಳಲ್ಲಿ, ಅಥವಾ ಕೆಲವೊಮ್ಮೆ ಅಲಂಕಾರಿಕ ಸಸ್ಯಗಳೊಂದಿಗೆ ಜೊತೆ ಸಮ್ಮಿಶ್ರಮಾಡಿ. ಆಹಾರ ಉತ್ಪಾದನಾ ತೋಟಗಳು ಹೊಲಗದ್ದೆಗಳಿಂದ ಬೇರೆಯಾಗಿವೆ ಏಕೆಂದರೆ ಅವುಗಳ ಪ್ರಮಾಣ ಸಣ್ಣದು, ಹೆಚ್ಚು ಶ್ರಮಿಕ ಪ್ರಧಾನವಾಗಿರುತ್ತವೆ ಮತ್ತು ಅವುಗಳ ಉದ್ದೇಶ ಬೇರೆಯಾಗಿರುತ್ತದೆ (ಮಾರಾಟಕ್ಕಾಗಿ ಉತ್ಪಾದಿಸುವ ಬದಲು ಹವ್ಯಾಸವಾಗಿ). ಹೂ ತೋಟಗಳು ಆಸಕ್ತಿ ಸೃಷ್ಟಿಸಲು ಮತ್ತು ಇಂದ್ರಿಯಗಳನ್ನು ಸಂತೋಷಪಡಿಸಲು ಭಿನ್ನ ಎತ್ತರಗಳು, ಬಣ್ಣಗಳು, ರಚನೆಗಳು ಮತ್ತು ಪರಿಮಳಗಳ ಸಸ್ಯಗಳನ್ನು ಒಗ್ಗೂಡಿಸುತ್ತವೆ.

ತೋಟ ವಿನ್ಯಾಸದ ಅಂಶಗಳಲ್ಲಿ ದಾರಿಗಳು, ಬಂಡೆ ವಿನ್ಯಾಸ, ಗೋಡೆಗಳು, ಜಲ ವೈಶಿಷ್ಟ್ಯಗಳು, ಕೂರುವ ಪ್ರದೇಶಗಳು ಹಾಗೂ ಅಲಂಕಾರದಂತಹ ಭೂದೃಶ್ಯದ ವಿನ್ಯಾಸ, ಜೊತೆಗೆ ಅವುಗಳ ತೋಟಗಾರಿಕಾ ಅಗತ್ಯಗಳು, ಋತುವಿಂದ ಋತುವಿನ ನೋಟ, ಆಯಸ್ಸು, ಬೆಳವಣಿಗೆ ಅಭ್ಯಾಸ, ಗಾತ್ರ, ಬೆಳವಣಿಗೆಯ ವೇಗ, ಮತ್ತು ಇತರ ಸಸ್ಯಗಳು ಹಾಗೂ ಭೂದೃಶ್ಯ ವೈಶಿಷ್ಟ್ಯಗಳೊಂದಿಗೆ ಸಂಯೋಜನೆಯ ಪರಿಗಣನೆಯೊಂದಿಗೆ ಸ್ವತಃ ಸಸ್ಯಗಳೇ ಸೇರಿರುತ್ತವೆ. ಬೆಳವಣಿಗೆಯ ವೇಗ, ಸಸ್ಯಗಳ ಹರಡಿಕೆ ಅಥವಾ ಸ್ವಯಂ ಬಿತ್ತನೆ, ವಾರ್ಷಿಕ ಅಥವಾ ಬಹುವಾರ್ಷಿಕವೇ ಎಂಬ ಸಂಗತಿ, ಹೂಬಿಡುವ ಸಮಯಕ್ಕೆ ಸಂಬಂಧಿಸಿದಂತೆ, ಸಸ್ಯಗಳ ಆಯ್ಕೆ ಮೇಲೆ ಪ್ರಭಾವ ಬೀರುವ ನಿಯಮಿತ ನಿರ್ವಹಣೆಗೆ ಲಭ್ಯವಾದ ಸಮಯ ಮತ್ತು ಹಣ ಸೇರಿದಂತೆ ತೋಟದ ನಿರ್ವಹಣಾ ಅಗತ್ಯಗಳು ಮತ್ತು ಇತರ ಅನೇಕ ಗುಣಲಕ್ಷಣಗಳನ್ನು ಪರಿಗಣಿಸಲಾಗುತ್ತದೆ. ತೋಟ ವಿನ್ಯಾಸವನ್ನು ಸ್ಥೂಲವಾಗಿ ಎರಡು ಗುಂಪುಗಳಲ್ಲಿ ವಿಭಜಿಸಬಹುದು, ಔಪಚಾರಿಕ ಮತ್ತು ನಿಸರ್ಗವಾದಿ ತೋಟಗಳು.[]

ಉಲ್ಲೇಖಗಳು

ಬದಲಾಯಿಸಿ
  1. Chen, Gang (2010). Planting design illustrated (2nd ed.). Outskirts Press, Inc. p. 3. ISBN 978-1-4327-4197-6.


"https://kn.wikipedia.org/w/index.php?title=ತೋಟ&oldid=799553" ಇಂದ ಪಡೆಯಲ್ಪಟ್ಟಿದೆ