ಅಮೀರ್ ಖುಸ್ರೋ-ಅಬ್ದುಲ್ ಹಸನ್ ಯಾಮಿನ್ ಅಲ್-ದಿನ್ ಖುಸ್ರೋ (೧೨೫೩-೧೩೨೫ ಸಿಇ), ಅಮೀರ್ ಖುಸ್ರೋ ಎಂದೇ ಪ್ರಚಲಿತರಾದವರು. ಆವರು ಸೂಫಿ ಪಂಥಕ್ಕೆ ಸೇರಿದ ಭಾರತದ ಶ್ರೇಷ್ಥ ಸಂಗೀತಕಾರ, ಕವಿ ಹಾಗೂ ವಿದ್ವಾಂಸರಾಗಿದ್ದಾರೆ. ಅವರು ಅತೀಂದ್ರಿಯರು ಅಲ್ಲದೇ ದೆಹಲಿಯ ನಿಜಾಮುದ್ದಿನ್ ಆಲಿಯಾ ಎಂಬುವವನ ಆಧ್ಯಾತ್ಮಿಕ ಪರಿಪಾಲಕರಾಗಿದ್ದರು. ಅವರನ್ನು 'ಖವಾಲಿಯ ಜನಕ' ಎಂದೇ ಪರಿಗಣಿಸಲಾಗಿದೆ.[] ಇವರು ಗಝಲ್ ಶೈಲಿಯ ಹಾಡುಗಳನ್ನು ಭಾರತ ಹಾಗೂ ಪಾಕಿಸ್ತಾನ ದೇಶಗಳಿಗೆ ತಂದದಲ್ಲದೇ ಪರ್ಷಿಯನ್, ಅರಬಿಕ್ ಹಾಗೂ ಟರ್ಕಿಶ್ ಅಂಶಗಳನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ತಂದರು.ಅವರು ಖಾಯಲ್ ಹಾಗೂ ತಾರಾನಾ ಶೈಲಿಯ ಸಂಗೀತಕ್ಕೆ ಜನಕರಾಗಿದ್ದಾರೆ.

ಅಮೀರ್ ಖುಸ್ರೋ
ಜನನಅಬ್ದುಲ್ ಹಸನ್ ಯಾಮಿನ್ ಅಲ್-ದಿನ್ ಖುಸ್ರೋ
೧೨೫೩
ಮರಣಅಕ್ಟೋಬರ್ ೧೩೨೫
ದೆಹಲಿ
ವೃತ್ತಿಸೂಫಿ ಸಂಗೀತಕಾರ, ಕವಿ, ಸಂಯೋಜಕ, ಲೇಖಕ, ವಿದ್ವಾಂಸ
ಪ್ರಕಾರ/ಶೈಲಿಗಜಲ್, ಖಯಾಲ್, ಖವಾಲಿ, ರುಬಾ'ಹಿ, ತಾರಾನಾ

ಆರಂಭಿಕ ಜೀವನ ಮತ್ತು ಹಿನ್ನೆಲೆ

ಬದಲಾಯಿಸಿ
 
ಅಮೀರ್ ಖುಸ್ರೋರವರ ಖಂಸ

ಅಮೀರ್ ಖುಸ್ರೋರವರು ಉತ್ತರ ಪ್ರದೇಶದ ಇಟಾ ಜಿಲ್ಲೆಯ ಪಟಿಯಾಲ ಎಂಬ ಊರಿನಲ್ಲಿ ಜನಿಸಿದರು.ಆವರ ತಂದೆ ಅಮೀರ್ ಸೈಫ್ ಅಲ್ಲಾವುದ್ದೀನ್ ಮಹಮೂದ್ ಟರ್ಕಿ ದೇಶದ ಅಧಿಕಾರಿಯಾಗಿದ್ದರು ಮತ್ತು ತಮ್ಮನ್ನು ಕಾರಾ-ಖಿತೇಸ್ ಸೇರಿದ ಮಧ್ಯ ಏಷ್ಯಾ ಹಾಗೂ ಲಾಚಿನ್ ಬುಡಕಟ್ಟಿನ ಸದಸ್ಯರಾಗಿದ್ದರು. ಆದರೆ ಅಮೀರ್ ಖುಸ್ರೋರವರು ಬುದ್ಧಿವಂತ ಮಗುವಾಗಿದ್ದರು. ಅವರು ತಮ್ಮ ಎಂಟನೇ ವಯಸ್ಸಿನಲ್ಲಿಯೇ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದರು. ತನ್ನ ತಂದೆಯ ಮರಣದ ನಂತರ ದೆಹಲಿಯ ತಮ್ಮ ಅಜ್ಜ ಇಮಾದುಲ್ ಅವರ ಮನೆಗೆ ಬಂದರು. ೧೨೭೧ ಸಿಇಯಲ್ಲಿ ೧೧೩ ವರ್ಷದ ತನ್ನ ಅಜ್ಜ ನಿಧನರಾದರು. ಅಮೀರ್ ಖುಸ್ರೋರವರನ್ನು ಭಾರತದ ಗಿಳಿ ಎಂದೇ ಕರೆಯಲಾಗುತ್ತದೆ.

ವೃತ್ತಿ

ಬದಲಾಯಿಸಿ

ಖುಸ್ರೋ ತನ್ನ ಅಜ್ಜನ ಮರಣದ ನಂತರ ತನ್ನ ಸಹೋದರರಾದ ಮಲಿಕ್ ಚಜ್ಜು ಹಾಗೂ ಸುಲ್ತಾನ್ ಬಲ್ಬಾನ್ ಇವರ ಸೇನೆಗೆ ಸೈನಿಕನಾಗಿ ಸೇರಿಕೊಂಡರು. ತಮ್ಮ ಕವಿತೆಗಳನ್ನು ಕುರಿತು ರಾಯಲ್ ಕೋರ್ಟ್ ಆಫ್ ಅಸೆಂಬ್ಲಿಯಲ್ಲಿ ಖುಸ್ರೋರವರಿಗೆ ಗೌರವಿಸಲಾಯಿತು. ಅವರು ನಲವತ್ತು ವರ್ಷದವರಿದ್ದಾಗ ಅವರ ತಾಯಿ ಹಾಗೂ ಸಹೋದರನನ್ನು ಕಳೆದುಕೊಂಡರು. ಬಲಬಾನ್ ಅವರ ಮಗ ಬುಗ್ರಾ ಖಾನ್ ರವರನ್ನು ಅಮೀರ್ ಖುಸ್ರೋರವರ ಸಂಗೀತವನ್ನು ಕೇಳಲು ಆಹ್ವಾನಿಸಲಾಗಿತ್ತು. ಅವರು ಖುಸ್ರೋರವರ ಸಂಗೀತಕ್ಕೆ ಪ್ರಭಾವಿತರಾದರು. ಕ್ರಿ.ಶ.೧೨೭೭ರಲ್ಲಿ ಬುಗ್ರಾ ಖಾನ್ ಬಂಗಾಳದ ಆಡಳಿತಗಾರನಾಗಿ ನೇಮಕಗೊಂಡರೆ ಅಮೀರ್ ಖುಸ್ರೋರವರು ದೆಹಲಿಗೆ ತೆರಳಲು ನಿರ್ಧರಿಸಿದರು. ಒಮ್ಮೆ ಬಲಬಾನರ ಹಿರಿಯ ಪುತ್ರ ಖಾನ್ ಮಹಮ್ಮದ್ ದೆಹಲಿಗೆ ಬೇಟಿ ನೀಡಿದರು. ಅವರು ಅಮೀರ್ ಖುಸ್ರೋರವರ ಬಗ್ಗೆ ಕೇಳಿದಾಗ ಅವರನ್ನು ಸಂತೋಷದಿಂದ ಆಹ್ವಾನಿಸಿದರು.ಕ್ರಿ.ಶ.೧೨೭೯ರಲ್ಲಿ ಖುಸ್ರೋರವರು ಮುಲ್ತಾನರ ಜೊತೆಯಲ್ಲಿ ಸೇರಿಕೊಂಡರು. ಆ ಸಮಯದಲ್ಲಿ ಬಾಗ್ದಾದ್, ಅರೇಬಿಯ ಹಾಗೂ ಇರಾನಿನ ವಿದ್ವಾಂಸರು, ವ್ಯಾಪಾರಿಗಳು ಮತ್ತು ಗುಪ್ತಚರರು ತಂಡಗಳಾಗಿ ಮುಲ್ತಾನಿನ ಮೂಲಕ ದೆಹಲಿಗೆ ಬಂದರು. ಅಮೀರ್ ಖುಸ್ರೋರವರು ಒಂದು ವಾಕ್ಯವನ್ನು ಹೇಳುತ್ತಾರೆ:"ನಾನು ಸೇವೆ ಎಂಬ ಪಟ್ಟಿಯನ್ನು ನನ್ನ ಸೊಂಟಕ್ಕೆ ಕಟ್ಟಿಕೊಂಡೆ ಹಾಗೂ ಒಡನಾಟ ಎನ್ನುವ ಟೋಪಿಯನ್ನು ಐದು ವರ್ಷಗಳ ಕಾಲ ಧರಿಸಿದೆ. ಮುಲ್ತಾನಿನ ಸಾಗರದ ನೀರನ್ನು ನಾನು ನನ್ನ ಹೊಳಪಾಗಿ ಕಂಡುಕೊಂಡೆ.

ಜೀವನದ ಕಾಲಾನುಕ್ರಮದ ಮುಖ್ಯ ಘಟನೆಗಳು

ಬದಲಾಯಿಸಿ

ಅಮೀರ್ ಖುಸ್ರೋರವರು ಉತ್ತರಪ್ರದೇಶ ರಾಜ್ಯದ ಕಸಿಯಾಂಗ್ ಜಿಲ್ಲೆಯ ಇಟಾನಗರದ ಹತ್ತಿರವಿರುವ ಪಟಿಯಾಲಿಯಲ್ಲಿ ಜನಿಸಿದರು. ಅವರ ತಂದೆ ಅಮೀರ್ ಸೈಫುದ್ದೀನ್ ಆಫ್ಘಾನಿಸ್ತಾನದ ಬಲ್ಕ್ ಪ್ರದೇಶದಿಂದ ಬಂದವರು ಹಾಗು ಅವರ ತಾಯಿ ದೆಹಲಿಯವರಾಗಿದ್ದರು.

  • ೧೨೬೦ ಅವರ ತಂದೆಯ ಸಾವಿನ ನಂತರ ತಮ್ಮ ತಾಯಿಯ ಜೊತೆ ದೆಹಲಿಗೆ ಹೋದರು.
  • ೧೨೭೧ ಖುಸ್ರೋರವರ ಕಾವ್ಯದ ಮೊದಲ ದಿವಾನರ ಸಂಕಲನ "ತುಹ್ಫತ್-ಉಸ್-ಸಿಗ್ರ್".
  • ೧೨೭೨ ರಾಜ ಬಲಬಾನರ ಸೋದರ ಅಳಿಯ ಮಲಿಕ್ ಚಜ್ಜು ರವರ ಆಸ್ಥಾನದಲ್ಲಿ ಅಸ್ಥಾನ ಕವಿಯಾಗಿ ಸೇರಿಕೊಂಡರು.
  • ೧೨೭೬ ಬಲಬಾನರ ಮಗ ಭುಘ್ರ ಖಾನ್ ರವರ ಜೊತೆ ಕವಿಯಾಗಿ ಕೆಲಸಮಾಡುವುದಕ್ಕೆ ಶುರುಮಾಡಿದರು.
  • ೧೨೭೯ ತಮ್ಮ ಎರಡನೇ ದಿವಾನ ವಾಸ್ತುಲ್-ಹಾಯತ್ ರವರ ಬಗ್ಗೆ ಬರೆಯುವಾಗ ಬಂಗಾಳಕ್ಕೆ ಬೇಟಿ ನೀಡಿದರು.
  • ೧೨೮೧ ಬಲಬಾನರ ಎರಡನೇ ಮಗ ಸುಲ್ತಾನ್ ಮೊಹಮ್ಮದ್ ರವರ ಬಳಿ ಕೆಲಸಕ್ಕೆ ಹೋಗಿ ನಂತರ ಅವರ ಜೊತೆ ಮುಲ್ತಾನಿಗೆ ಹೋದರು.
  • ೧೨೮೫ ಮೊಂಗಲರ ವಿರುದ್ಧ ರಣರಂಗದಲ್ಲಿ ಸೈನಿಕನಾಗಿ ಭಾಗವಹಿಸಿದರು. ಅವರನ್ನು ಜೈಲಿಗೆ ಹಾಕಲಾಯಿತು ಆದರೆ ಅವರು ಅಲ್ಲಿಂದ ತಪ್ಪಿಸಿಕೊಂಡರು.
  • ೧೨೮೭ ಅವರ ಮತ್ತೊಬ್ಬ ಪ್ರೋತ್ಸಾಹಕ ಅಮೀರ್ ಅಲಿ ಹಾತಿಮ್ ರವರ ಜೊತೆ ಹಾಥಿಮ್ ಎಂಬ ಊರಿಗೆ ಹೋದರು.
  • ೧೨೮೮ ಅವರ ಮೊದಲ ಮಸ್ನಾವಿ "ಖಿರಾನ್-ಉಸ್-ಸಾಧೈನ್" ಪೂರ್ಣಗೊಂಡಿತು.
  • ೧೨೯೦ ಜಲಾಲ್-ಉದ್-ದ್ದೀನ್ ಫಿರೂಜ್ ಖಿಲ್ಜಿ ಆಡಳಿತಕ್ಕೆ ಬಂದಾಗ ಖುಸ್ರೋ ರವರ ಎರಡನೇ ಮಸ್ನಾವಿ "ಮಿಫ್ತಾಹುಲ್-ಫಿಥಾ" ಸಿದ್ಧವಾಯಿತು.
  • ೧೨೯೪ ಖುಸ್ರೋರವರ ಮೂರನೇ ದಿವಾನ "ಘುರ್ರಾತುಲ್-ಕಮಲ್" ಪೂರ್ಣಗೊಂಡಿತು.
  • ೧೨೯೫ ಅಲ್ಲಾವುದ್ದೀನ್ ಖಿಲ್ಜಿ ಆಡಳಿತಕ್ಕೆ ಬಂದು ದೇವಗಿರಿ ಹಾಗೂ ಗುಜರಾತ್ ಸ್ಥಳಗಳಿಗೆ ದಾಳಿ ನಡೆಸಿದರು.[]
  • ೧೨೯೮ ಖುಸ್ರೋರವರ "ಖಂಸ"ವನ್ನು ಪೂರ್ಣಗೊಳಿಸಿದರು.
  • ೧೩೦೧ ಖಿಲ್ಜಿರವರು ರಣಥಂಬೂರು, ಚಿತ್ತೂರ್, ಮಲ್ವ ಹಾಗೂ ಮತ್ತಿತರ ಸ್ಥಳಗಳಿಗೆ ದಾಳಿ ನಡೆಸಿದರು.ಖುಸ್ರೋರವರು ಘಟನೆಗಳ ಪಟ್ಟಿ ಮಾಡುವ ಸಲುವಾಗಿ ಆ ರಾಜನ ಬಳಿಯೇ ಉಳಿದುಕೊಂಡರು.
 
ನಿಜಾಮುದ್ದೀನ್ ದರ್ಗಾ,ಎಡದಲ್ಲಿ ಅಮೀರ್ ಖುಸ್ರೋರವರ ಸಮಾಧಿ
  • ೧೩೧೦ ಖುಸ್ರೋರವರು ನಿಜಾಮುದ್ದೀನ್ ಆಲಿಯಾ ರವರಿಗೆ ಹತ್ತಿರವಾದರು ಹಾಗೂ "ಖುಜೈನ್-ಉಲ್-ಫುತಹ"ವನ್ನು ಪೂರ್ಣಗೊಳಿಸಿದರು.
  • ೧೩೧೫ ಅಲ್ಲಾವುದ್ದೀನ್ ಖಿಲ್ಜಿ ತೀರಿಕೊಂಡರು. ಖುಸ್ರೋರವರ ಪ್ರಣಯಮಯವಾದ ಮಸ್ನಾವಿ "ಧುವಲ್ ರಾಣಿ-ಖಿಜ್ರ್ ಖಾನ್" ಪೂರ್ಣಗೊಂಡಿತು.
  • ೧೩೧೬ ಖುತುಬ್ ಉದ್ ದ್ದೀನ್ ಮುಬಾರಕ್ ಶಾ ಅರಸನಾದನು. ಅವರ ನಾಲ್ಕನೇ ಐತಿಹಾಸಿಕ ಮತ್ನಾವಿ "ನುಹ್ ಸುಫಿಹಿರ್" ಪೂರ್ಣಗೊಂಡತು.
  • ೧೩೨೧ ಮುಬಾರಕ್ ಖಿಲ್ಜಿರವರನ್ನು ಹತ್ಯೆಗೈಯಲಾಹಿತು ಹಾಗೂ ಘಿಯಾತ್ ಆಲ್ ದಿನ್ ತುಗಲಕ್ ರವರು ಆಡಳಿತಕ್ಕೆ ಬಂದರು. ಖುಸ್ರೋ ರವರು ತುಗಲಕ್ ನಾಮವನ್ನು ಬರೆಯಲು ಪ್ರಾರಂಭಿಸಿದರು.
  • ೧೩೨೫ ಸುಲ್ತಾನ್ ಮೊಹಮ್ಮದ್ ಬಿನ್ ಕುಗಲಕ್ ಆಡಳಿತಕ್ಕೆ ಬಂದರು. ನಿಜಾಮುದ್ದೀನ್ ಆಲಿಯಾ ತೀರಿಕೊಂಡರು, ಆರು ತಿಂಗಳ ನಂತರ ಅಮೀರ್ ಖುಸ್ರೋರವರು ಸಹ ತೀರಿಕೊಂಡರು. ದೆಹಲಿಯಲ್ಲಿ ಅವರ ಗುರು ನಿಜಾಮುದ್ದೀನರ ದರ್ಗಾದ ಪಕ್ಕದಲ್ಲಿ ಖುಸ್ರೋ ಸಮಾಧಿಯನ್ನು ಮಾಡಲಾಯಿತು.

ಖುಸ್ರೋ ಎಂಬ ಗಾಂಭೀರ್ಯದ ಕವಿ

ಬದಲಾಯಿಸಿ

ಅಮೀರ್ ಖುಸ್ರೋರವರು ದೆಹಲಿಯ ಸುಲ್ತಾನರ ಸುಮಾರು ಏಳು ರಾಜರ ಆಳ್ವಿಕೆಯ ಸಮಯದಲ್ಲಿ ಆಸ್ಥಾನ ಕವಿಯಾಗಿ ಮೆರೆದವರು. ಇವರು ಅನೇಕ ತಮಾಷೆಯ ಒಗಟುಗಳು, ಹಾಡುಗಳು ಮತ್ತು ಪುರಾಣಗಳು ದಕ್ಷಿಣ ಏಷ್ಯಾದಲ್ಲಿಯೇ ಪ್ರಸಿದ್ಧಿಯಾಗಿವೆ. ಬಹುಸಂಸ್ಕೃತಿ ಹಾಗೂ ಸಾಂಸ್ಕೃತಿಕ ಗುರುತುಗಳನ್ನು ಪ್ರತಿನಿಧಿಸುವ ಖುಸ್ರೋರವರು ತಮ್ಮ ಸಾಹಿತ್ಯ ಭಂಡಾರದಿಂದ ಭಾರತದ ಪ್ರತಿನಿಧಿಯಾಗಿದ್ದಾರೆ.

ಹಿಂದವಿ ಭಾಷೆ ಹಾಗೂ ಅದರ ಬೆಳವಣಿಗೆ

ಬದಲಾಯಿಸಿ
 
ಖುಸ್ರೋರವರ ಒಂದು ಕವನದ ಹಸ್ತಪ್ರತಿ

ಪರ್ಷಿಯನ್ ಪುರಾಣಗಳಲ್ಲಿ ಒಂದಾದ ನಿಜಾಮಿ ಗಾಂಜವಿಯನ್ನು ಅನುಕರಿಸಿ ಖಾಂಸಿ ಎಂಬ ಪುರಾಣವನ್ನು ಖುಸ್ರೋರವರು ಹೊರಹಾಕಿದರು. ಆ ಶತಮಾನದಲ್ಲಿ ಪರ್ಷಿಯನ್ ಕಾವ್ಯದ ಶ್ರೇಷ್ಠ ಲೇಖಕ ಎಂದು ಪರಿಗಣಿಸಲಾಗಿದೆ.ಮೊದಲಿಗೆ ಅವರು ಪರ್ಷಿಯನ್ ಹಾಗೂ ಹಿಂದುಸ್ತಾನಿ ಭಾಷೆಯಲ್ಲಿ ಬರೆಯುತ್ತಿದ್ದರು. ಅವರು ಪಂಜಾಬಿ ಭಾಷೆಯಲ್ಲಿ ಯುದ್ಧವನ್ನು ಕುರಿತು ಜನಪದ ಕಾವ್ಯವನ್ನು ಬರೆದಿದ್ದಾರೆ. ಅಲ್ಲದೇ ಅವರು ಸಂಸ್ಕೃತ ಹಾಗೂ ಅರೇಬಿಕ್ ಭಾಷೆಯನ್ನು ಮಾತನಾಡಬಲ್ಲರು. ಅವರ ಸೂಫಿ ಕಾವ್ಯಗಳು ಈಗಲು ಸಹ ಭಾರತ ಹಾಗೂ ಪಾಕಿಸ್ತಾನದ ಅನೇಕ ಕಡೆಗಳಲ್ಲಿ ಹಾಡಲಾಗುತ್ತದೆ. ಅವರ ಅನೇಕ ಒಗಟುಗಳು ಪ್ರಚಲಿತವಾಗಿವೆ. ಕಾವ್ಯರೂಪದಲ್ಲಿರುವ ಈ ಒಗಟುಗಳು ನವಿರಾದ ಹಾಸ್ಯವನ್ನು ಒಳಗೊಂಡಿವೆ []. []

ಸಂಗೀತಕ್ಕೆ ಕಾಣಿಕೆ

ಬದಲಾಯಿಸಿ

ಅಮೀರ್ ಖುಸ್ರೋ 'ಸಿತಾರ್' ಎಂಬ ವಾದ್ಯದ ಆವಿಷ್ಕಾರಕ. ಖುಸ್ರೋವಿನ ಕಾಲಕ್ಕಾಗಲೇ ಹಲವಾರು ರೀತಿಯ ವೀಣೆಗಳು ಬಳಕೆಯಲ್ಲಿದ್ದವು. ಖುಸ್ರೋ ೩ ತಂತಿಯ ನವೀನ ರೀತಿಯ ವೀಣೆಯನ್ನು ಪರಿಚಯಿಸಿದ ಮತ್ತು "ಸೆಹತಾರ್" (ಪರ್ಷಿಯನ್ ಭಾಷೆಯಲ್ಲಿ 3 ತಂತಿ ಎಂಬ ಅರ್ಥವನ್ನು ನೀಡುತ್ತದೆ) ಎಂದು ಅದನ್ನು ಕರೆಯಲಾಯುತು. ಕ್ರಮೇಣ ಅದನ್ನೇ 'ಸಿತಾರ್' ಎಂದು ಕರೆಯುವ ರೂಢಿ ಜಾರಿಯಾಯಿತು.

ಪ್ರಮುಖ ಕೆಲಸಗಳು

ಬದಲಾಯಿಸಿ
  • 'ತುಹ್ಫತ್-ಉಸ್-ಸಿಗರ್' ಅವರ ಮೊದಲ ದಿವಾನ್, ಸಾಮಾನ್ಯವಾಗಿ ೧೬ ರಿಂದ ೧೯ ವಯಸ್ಸಿನೊಳಗೆ ರಚಿಸಲ್ಪಟ್ಟ ಪದ್ಯಗಳು.
  • 'ವಾಸ್ಟ್-ಉಲ್-ಹಯಾತ್', ಅವರ ಎರಡನೆಯ ದಿವಾನ್.
  • 'ಘುರ್ರತ್-ಉಲ್-ಕಮಾಲ್', ಸಾಮಾನ್ಯವಾಗಿ ೩೪ ರಿಂದ ೪೩ ವಯಸ್ಸಿನೊಳಗೆ ರಚಿಸಲ್ಪಟ್ಟ ಪದ್ಯಗಳು.
  • 'ನಿಹಾಯತುಲ್-ಕಮಾಲ್ ಅವರ ಸಾವಿನ ಕೆಲ ದಿನಗಳ ಮುಂಚೆ ರಚಿಸಲ್ಪಟ್ಟ ಕೃತಿಗಳು.

ಉಲ್ಲೇಖಗಳು

ಬದಲಾಯಿಸಿ