ಅಭಿಮನ್ಯುಪುರ್

ಭಾರತ ದೇಶದ ಗ್ರಾಮಗಳು

ಹಿಂದೆ ಅಮೀನ್ ಎಂದು ಕರೆಯಲ್ಪಡುತ್ತಿದ್ದ ಅಭಿಮನ್ಯುಪುರ್ ಭಾರತದ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿರುವ ಒಂದು ಹಳ್ಳಿ.[] ಈ ಗ್ರಾಮವು ಕುರುಕ್ಷೇತ್ರ ನಗರದಿಂದ 8 ಕಿಲೋಮೀಟರ್ ದೂರದಲ್ಲಿದೆ. ಮಹಾಭಾರತ ಯುದ್ಧದಲ್ಲಿ ಅರ್ಜುನನ ಮಗ ಅಭಿಮನ್ಯು ನಿಧನನಾದ ಸ್ಥಳವಾಗಿ ಈ ಗ್ರಾಮವು ಪ್ರಸಿದ್ಧವಾಗಿದೆ. ಕೌರವರು ಮಾರಣಾಂತಿಕ "ಚಕ್ರವ್ಯೂಹ" ರಚನೆಯನ್ನು ಸಿದ್ಧಗೊಳಿಸಿ ಅಭಿಮನ್ಯುನನ್ನು ಸಿಕ್ಕಿಹಾಕಿಸಿ ಕೊಂದ ಸ್ಥಳ ಇದು. ಈ ಗ್ರಾಮವು ಕುರುಕ್ಷೇತ್ರದ 48 ಕೋಸ್ ಪರಿಕ್ರಮಾದ ಭಾಗವಾಗಿದೆ. ಈ ಗ್ರಾಮವು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅನೇಕ ಪವಿತ್ರ ಸ್ಥಳಗಳನ್ನು ಹೊಂದಿದೆ.

ಪ್ರಮುಖ ತಾಣಗಳು

ಬದಲಾಯಿಸಿ

ಅಭಿಮನ್ಯುಪುರ್ ಕೋಟೆ[] : ಇಲ್ಲಿ 10 ಮೀಟರ್ ಎತ್ತರದ ದಿಬ್ಬವಿದ್ದು, ಇದು ಒಂದು ಕಾಲದಲ್ಲಿ ಅಭಿಮನ್ಯುವಿಗೆ ಸೇರಿದ ಒಂದು ಕೋಟೆಯ ಅವಶೇಷಗಳು ಎಂದು ಹೇಳಲಾಗಿದೆ.

ಅದಿತಿ ಕುಂಡ್ ಮತ್ತು ಅದಿತಿ ದೇವಸ್ಥಾನ: ಅಭಿಮನ್ಯುಪುರ್‌ನಲ್ಲಿ ಪವಿತ್ರವಾದ "ಕುಂಡ್" (ನೀರಿನ ಕೊಳ) ಇದೆ. ಇಲ್ಲಿ ಅದಿತಿ ದೇವಿಯು ಸೂರ್ಯ ದೇವನಿಗೆ ಜನ್ಮ ನೀಡಿದಳು ಎಂದು ಹೇಳಲಾಗುತ್ತದೆ. ಇಲ್ಲಿ ಒಂದು ಸಣ್ಣ ದೇವಾಲಯವೂ ಇದೆ.

ಸೂರ್ಯ ಕುಂಡ್ ಮತ್ತು ಸೂರ್ಯ ದೇವಾಲಯ: ಅದಿತಿ ಕುಂಡ್‍ನ ಮತ್ತು ದೇವಾಲಯದ ಪಕ್ಕಕ್ಕೆ ಸೂರ್ಯನಿಗೆ ಮೀಸಲಾಗಿರುವ ಒಂದು ಸಣ್ಣ ಕೊಳ ಮತ್ತು ದೇವಸ್ಥಾನವಿದೆ. ಗ್ರಾಮಸ್ಥರು ಸಾಮಾನ್ಯವಾಗಿ ಸತ್ತವರ "ಅಸ್ಥಿ ಕಲಶ"ವನ್ನು (ಮೃತರ ಅವಶೇಷಗಳು) ಸೂರ್ಯ ಕುಂಡ್‍ನಲ್ಲಿ ಇರಿಸುತ್ತಾರೆ. ಯಾವುದೇ ಗರ್ಭಿಣಿ ಮಹಿಳೆಯು ಈ ಪವಿತ್ರ ಕುಂಡದಲ್ಲಿ ಸ್ನಾನ ಮಾಡಿ ಅದಿತಿ ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಅವಳಿಗೆ ಹುಟ್ಟುವ ಗಂಡು ಮಗು ಧೈರ್ಯಶಾಲಿಯಾಗಿರುತ್ತದೆ ಎಂದು ಹೇಳಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "Amin". 2011 Census of India. ಭಾರತ ಸರ್ಕಾರ. Archived from the original on 19 September 2017. Retrieved 19 September 2017.
  2. Cunningham, Alexander (1871-01-01). The ancient geography of India (in ಇಂಗ್ಲಿಷ್). Dalcassian Publishing Company.