ಚಕ್ರವ್ಯೂಹ ಅಥವಾ ಪದ್ಮವ್ಯೂಹವು ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ನಿರೂಪಿಸಲ್ಪಟ್ಟ ಒಂದು ಸೇನಾ ರಚನೆ. ಮೇಲಿನಿಂದ ನೋಡಿದಾಗ ಚಕ್ರವ್ಯೂಹವು ಅರಳುತ್ತಿರುವ ಕಮಲ ಅಥವಾ ಚಕ್ರದಂತೆ ಕಾಣುವ ಬಹು ಹಂತದ ರಕ್ಷಣಾ ರಚನೆಯಾಗಿದೆ. ಪ್ರತಿ ಅಂತರವಲಯ ಸ್ಥಾನದಲ್ಲಿನ ಯೋಧರು ಹೋರಾಡಲು ಹೆಚ್ಚು ಕಠಿಣ ಸ್ಥಿತಿಯಲ್ಲಿರುತ್ತಾರೆ.