ಎಒಎಲ್

(AOL ಇಂದ ಪುನರ್ನಿರ್ದೇಶಿತ)

AOL (ಎಒಎಲ್) ಇಂಕ್. (NYSEAOL) ಅಮೆರಿಕಾದ ಜಾಗತಿಕ ಇಂಟರ್ನೆಟ್‌ ಸೇವೆ ಮತ್ತು ಮಾಧ್ಯಮ ಕಂಪೆನಿಯಾಗಿದೆ. ಇದು ಹಿಂದೆ ಅಮೆರಿಕ ಆನ್‌ಲೈನ್‌ ಎಂದು ಹೆಸರಾಗಿತ್ತು ಮತ್ತು ಇದು 'Aol.' ಎಂಬ ಲೋಗೊವನ್ನು ಹೊಂದಿದೆ. ಈ ಕಂಪೆನಿಯು ಅದರ ಸ್ಥಾಪನೆಯಾದ ದಿನದಿಂದ 2007ರವರೆಗೆ ಉತ್ತರ ವರ್ಜಿನಿಯಾದಲ್ಲಿ ನೆಲೆಯಾಗಿತ್ತು.[][] ಪ್ರಸ್ತುತ ಇದರ ಪ್ರಧಾನ ಕಛೇರಿಯು ನ್ಯೂಯಾರ್ಕ್‌ನ 770 ಬ್ರಾಡ್‌ವೇಯಲ್ಲಿದೆ.[][] 1983ರಲ್ಲಿ ಕ್ವಾಂಟಮ್ ಕಂಪ್ಯೂಟರ್ ಸರ್ವಿಸಸ್‌ ಆಗಿ ಸ್ಥಾಪಿತವಾದ ಇದು ಪ್ರಪಂಚದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಹಲವಾರು ಕಂಪೆನಿಗಳಿಗೆ ಅದರ ಸೇವೆಗಳನ್ನು ಮಾರುವ ಅಥವಾ ಅದರ ಸೇವೆಗಳ ಅಂತಾರಾಷ್ಟ್ರೀಯ ಆವೃತ್ತಿಗಳನ್ನು ಸ್ಥಾಪಿಸುವ ಅಧಿಕಾರವನ್ನು ನೀಡಿತು.[] AOL (ಎಒಎಲ್) ಅದರ ಆನ್‌ಲೈನ್‌ ಸಾಫ್ಟ್‌ವೇರ್‌ ಸೂಟ್‌ಗೆ ಹೆಚ್ಚು ಜನಪ್ರಿಯವಾಗಿದೆ. ಇದನ್ನು AOL ಎಂದೂ ಕರೆಯುತ್ತಾರೆ. ಇದು ಗ್ರಾಹಕರಿಗೆ ಪ್ರಪಂಚದ ಅತ್ಯಂತ ದೊಡ್ಡ "ವಾಲ್ಡ್ ಗಾರ್ಡನ್" ಆನ್‌ಲೈನ್‌ ಸಮುದಾಯವನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಹಾಗೂ ಒಟ್ಟಿನಲ್ಲಿ ಅಂತಿಮವಾಗಿ ಇಂಟರ್ನೆಟ್‌‌ನ ಮೂಲಕ ಹೆಚ್ಚಿನವರನ್ನು ತಲುಪುತ್ತದೆ. ಏಳಿಗೆಯ ಉನ್ನತ ಸ್ಥಾನದಲ್ಲಿದ್ದಾಗ AOL (ಎಒಎಲ್)ನ ಸದಸ್ಯತ್ವವು ಪ್ರಪಂಚದಾದ್ಯಂತ ಸುಮಾರು 30 ದಶಲಕ್ಷ ಮಂದಿಯನ್ನು ಒಳಗೊಂಡಿತ್ತು.[] ಅವರಲ್ಲಿ ಹೆಚ್ಚಿನವರು AOL ಸೇವೆಯನ್ನು ಸಾಫ್ಟ್‌ವೇರ್‌ ಸೂಟ್ ಮೂಲಕ ಪಡೆದಿದ್ದರು. 2009ರ ಮೇ 28ರಂದು ಟೈಮ್ ವಾರ್ನರ್, AOLನ್ನು ಒಂದು ಪ್ರತ್ಯೇಕ ಸಾರ್ವಜನಿಕ ಕಂಪೆನಿಯಾಗಿ ಸ್ಪಿನ್‌ಆಫ್ ಮಾಡುವುದಾಗಿ ಘೋಷಿಸಿತು. ಎರಡು ಕಂಪೆನಿಗಳೊಂದಿಗಿನ 8 ವರ್ಷದ ಸಂಬಂಧವನ್ನು ಕೊನೆಗೊಳಿಸಿ 2009ರ ಅಕ್ಟೋಬರ್ 9ರಂದು[] ಒಂದು ಪ್ರತ್ಯೇಕ ಕಂಪೆನಿಯಾಯಿತು.[೧೦]

AOL Inc.
ಸಂಸ್ಥೆಯ ಪ್ರಕಾರPublic (NYSEAOL)
ಸ್ಥಾಪನೆ2009 as AOL Inc.
1983 as Quantum Computer Services, Vienna, Virginia[]
ಮುಖ್ಯ ಕಾರ್ಯಾಲಯNew York City, New York, United States
ಪ್ರಮುಖ ವ್ಯಕ್ತಿ(ಗಳು)Tim Armstrong
(Chairman and CEO)
ಉದ್ಯಮInternet & Communications
ಉತ್ಪನ್ನOnline advertising
ಉದ್ಯೋಗಿಗಳುIncrease 6,700 (12-31-2009)[]
ಜಾಲತಾಣAOL.com portal & AOL.com Corporate site

ವಿವರಣೆ

ಬದಲಾಯಿಸಿ
 
ಅಮೆರಿಕ ಆನ್‌ಲೈನ್‌‌ನ ಆರಂಭಿಕ ಲೋಗೊ 1991–2006

ಪ್ರಪಂಚದಾದ್ಯಂತ ಹಲವಾರು ಪ್ರಾದೇಶಿಕ ಶಾಖೆಗಳನ್ನು ಹೊಂದುವುದರೊಂದಿಗೆ ಹಿಂದಿನ ಅಮೆರಿಕಾದ "ದೈತ್ಯ ಇಂಟರ್ನೆಟ್‌ ಸೇವೆ ಪೂರೈಕೆದಾರರು"[] ಅನೇಕ ಖಂಡಗಳಲ್ಲಿ 30 ದಶಲಕ್ಷಕ್ಕಿಂತಲೂ ಹೆಚ್ಚು ಚಂದಾದಾರರನ್ನು[] ಹೊಂದಿತ್ತು.. 2000ರ ಜನವರಿಯಲ್ಲಿ AOL ಮತ್ತು ಟೈಮ್ ವಾರ್ನರ್‌ ವಿಲೀನಗೊಳ್ಳುವ ಯೋಜನೆಗಳನ್ನು ಘೋಷಿಸಿದವು. ಮಾತುಕತೆಯ ಒಪ್ಪಂದದ ಷರತ್ತುಗಳಲ್ಲಿ,AOL ಷೇರುದಾರರಿಗೆ ಹೊಸ,ವಿಲೀನಗೊಂಡ ಕಂಪೆನಿಯ 55%ನಷ್ಟು ಸ್ವಾಮ್ಯತೆಯನ್ನು ಪಡೆಯುವಂತೆ ಕರೆ ನೀಡಲಾಯಿತು. ಈ ಹೊಸ ಒಪ್ಪಂದ FTC, FCC ಮತ್ತು ಯುರೋಪಿಯನ್ ಯೂನಿಯನ್ ಮೊದಲಾದವುಗಳಿಂದ ನಿಯಂತ್ರಕ ಅಂಗೀಕಾರವನ್ನು ಪಡೆದ ನಂತರ 2001ರ ಜನವರಿ 11ರಂದು ಕೊನೆಗೊಂಡಿತು. ಈ ಕಂಪೆನಿಯನ್ನು ನಂತರ ಅಮೆರಿಕ ಆನ್‌ಲೈನ್‌, ಇಂಕ್ ಎಂದು ಕರೆಯಲಾಯಿತು. ಇದನ್ನು AOL, SBI ಮತ್ತು ಟೈಮ್ ವಾರ್ನರ್‌‌ನ ಕಾರ್ಯನಿರ್ವಾಹಕರು ಮುಂದಾಳತ್ವವಹಿಸಿದರು. ಟೈಮ್ ವಾರ್ನರ್‌ನ CEO ಆಗಿ ಕಾರ್ಯನಿರ್ವಹಿಸುತ್ತಿದ್ದ ಗೆರಾಲ್ಡ್ ಲೆವಿನ್‌ ಹೊಸ ಕಂಪೆನಿಯ CEO ಆದರು. ಸ್ಟೀವ್ ಕೇಸ್ ಕಾಯಂ ಅಧ್ಯಕ್ಷರಾಗಿ ನೇಮಕಗೊಂಡರು, J. ಮೈಕೆಲ್ ಕೆಲ್ಲಿಯು (AOL ನಿಂದ) ಮುಖ್ಯ ಹಣಕಾಸಿನ ಅಧಿಕಾರಿಯಾದರು, ರಾಬರ್ಟ್‌ W. ಪಿಟ್‌ಮ್ಯಾನ್ (AOL ನಿಂದ) ಮತ್ತು ಡಿಕ್ ಪಾರ್ಸನ್ಸ್ (ಟೈಮ್ ವಾರ್ನರ್‌ನಿಂದ‌) ಸಹ-ಮುಖ್ಯ ಕಾರ್ಯಕಾರಿ ಅಧಿಕಾರಿಗಳಾದರು. ನಂತರ AOL ಸ್ಟಾಕಿನ ಒಟ್ಟು ಮೌಲ್ಯವು $226 ಶತಕೋಟಿಯಿಂದ ಸುಮಾರು $20 ಶತಕೋಟಿಗೆ ಇಳಿಯಿತು.[೧೧] ಅದೇ ರೀತಿ ಅದರ ಗ್ರಾಹಕರ ನೆಲೆಯು 2007ರ ನವೆಂಬರ್‌ನ ದಾಖಲೆಯ ಪ್ರಕಾರ 10.1 ದಶಲಕ್ಷ ಚಂದಾದಾರರಿಗೆ ಕುಸಿಯಿತು[೧೨], ಈ ಪ್ರಮಾಣವು ಕಾಮ್‌ಕಾಸ್ಟ್‌ ಮತ್ತು AT&T ಯಾಹೂ! ಗಿಂತ ಸ್ವಲ್ಪ ಹೆಚ್ಚಾಗಿತ್ತು. AOL ಬದಲಾವಣೆಯಾಗುತ್ತಿರುವ ಒಂದು ಕಂಪೆನಿಯಾಗಿದೆ.AOLನ ಚಂದಾದಾರರ ನೆಲೆಯಲ್ಲಿ ಪರಿಣಾಮಕಾರಿ ಕುಸಿತದ ಸಂದರ್ಭದಲ್ಲಿ ಖರೀದಿಗಳು ಮತ್ತು ಜಂಟಿ-ಉದ್ಯಮಗಳ ಮಾತುಕತೆಗಳ ಮೂಲಕ ಇದನ್ನು ಸ್ಪಷ್ಟಪಡಿಸಿದೆ.[][neutrality is disputed]

 
2006–2009 ರಿಂದ ಬಳಸಿದ AOL ನ ಹೊಸ ಲೋಗೊ

2005ರ ಉತ್ತರಾರ್ಧದ ವರದಿಗಳು, ಯಾಹೂ!, ಮೈಕ್ರೊಸಾಫ್ಟ್ ಮತ್ತು ಗೂಗಲ್ ಮೊದಲಾದ ಕಂಪೆನಿಗಳು AOL ಅನ್ನು ಜಂಟಿ ಉದ್ಯಮವಾಗಿ ಪರಿವರ್ತಿಸಲು ಸದಸ್ಯರೆಂದು ಗುರುತಿಸಿದವು;[೧೩] 2005ರ ಡಿಸೆಂಬರ್ 20ರಂದು ಗೂಗಲ್ AOLನ 5% ಷೇರನ್ನು $1 ಶತಕೋಟಿಗೆ ಖರೀದಿಮಾಡುವುದಾಗಿ ಪ್ರಕಟಿಸಿದಾಗ ಅಂತಹ ಯೋಜನೆಗಳನ್ನು ಕೈಬಿಡಲಾಯಿತು. BBC ವಾಚ್‌ಡಾಗ್‌ನ ಸಮೀಕ್ಷೆ ಪ್ರಕಾರ, AOL UKಯಲ್ಲಿ ಒಂದು ಅತ್ಯುತ್ತಮ ಮತ್ತು ಅತ್ಯಂತ ಕೆಟ್ಟ ಇಂಟರ್ನೆಟ್‌ ಪೂರೈಕೆದಾರವೆಂಬ ಸ್ಥಾನಗಳಿಸಿತು.[೧೪] 1997ರ ಮಾರ್ಚ್ 31ರಂದು, ಅಲ್ಪ-ಕಾಲದ ಇವರ್ಲ್ಡ್ಅನ್ನು AOL ಖರೀದಿಸಿತು. AOL UKಯ ISP ಭಾಗವನ್ನು ಅದರ 100,000 LLU ಗ್ರಾಹಕರ ಪ್ರಯೋಜನವನ್ನು ಪಡೆಯುವುದಕ್ಕಾಗಿ ದಿ ಕಾರ್ಫೋನ್ ವೇರ್‌ಹೌಸ್ 2006ರ ಅಕ್ಟೋಬರ್‌ನಲ್ಲಿ ಖರೀದಿಸಿತು. ಇದರಿಂದ ದಿ ಕಾರ್ಫೋನ್ ವೇರ್‌ಹೌಸ್ UKಯಲ್ಲಿ ಅತ್ಯಂತ ದೊಡ್ಡ LLU ಪೂರೈಕೆದಾರ ಎನಿಸಿತು.[೧೫] 2009ರ ಮೇ 28ರಂದು[೧೬] ಹಣಕಾಸಿನ ವರ್ಷದ ಕೊನೆಯಲ್ಲಿ ಗೂಗಲ್‌‌ನ ಷೇರುಗಳು ಕೊನೆಗೊಂಡಾಗ ಟೈಮ್ ವಾರ್ನರ್‌ AOLಅನ್ನು ಸ್ವತಂತ್ರ ಕಂಪೆನಿಯಾಗಿ ಪರಿವರ್ತಿಸುವುದಾಗಿ ಘೋಷಿಸಿತು. ಆನಂತರ AOLನ ಪುಟ ಮತ್ತು ಲೋಗೊ ಬದಲಾಯಿತು.[೧೭] AOL ಟೈಮ್ ವಾರ್ನರ್‌ ಒಂದಿಗಿನ ಪಾಲುದಾರಿಕೆಯನ್ನು 2009ರ ಡಿಸೆಂಬರ್ 9ರಂದು ಕೊನೆಗೊಳಿಸಿತು. ಅದನ್ನು ಷೇರು ಚಿಹ್ನೆ NYSE:AOL ಅಡಿಯಲ್ಲಿ 9ರಂದು IPOಎಂದು ಘೋಷಿಸಲಾಯಿತು.[೧೮]

ಇತಿಹಾಸ

ಬದಲಾಯಿಸಿ
AOL ಬಿಡುಗಡೆಯ ಸಮಯ
1989 ಮ್ಯಾಕಿಂಟೋಶ್‌ ಅಮೆರಿಕ ಆನ್‌ಲೈನ್‌, ಪ್ರಸಿದ್ಧ ಆಪಲ್ ಮ್ಯಾಕಿಂಟೋಶ್ BBS ಆಗಿ ಪಡೆಯಲಾಯಿತು
ಫೆಬ್ರವರಿ 1991 DOSಗಾಗಿ AOL ಆರಂಭವಾಯಿತು
ಜನವರಿ 1993 ಆಪಲ್ ಮ್ಯಾಕಿಂಟೋಶ್‌ಗಾಗಿ AOL 2.0 ಬಿಡುಗಡೆಯಾಯಿತು.
Microsoft Windows 3.xಗಾಗಿ AOL 1.0 ಆರಂಭವಾಯಿತು
ಜೂನ್ 1994 Microsoft Windows 3.xಗಾಗಿ AOL 1.5 ಆರಂಭವಾಯಿತು
ಸೆಪ್ಟೆಂಬರ್ 1994 Microsoft Windows 3.xಗಾಗಿ AOL 2.0 ಬಿಡುಗಡೆಗೊಂಡಿತು
ಜೂನ್ 1995 Microsoft Windows 3.xಗಾಗಿ AOL 2.5 ಬಿಡುಗಡೆಗೊಂಡಿತು
ಜೂನ್ 1995 Windows 3.x/Windows 95/Windows NT ಗಾಗಿ AOL 3.0 (Win16) ಬಿಡುಗಡೆಗೊಂಡಿತು
ಜೂನ್ 1996 Windows 95 ಗಾಗಿ AOL 3.0 ಬಿಡುಗಡೆಗೊಂಡಿತು
ಜುಲೈ 1998 / ಜೂನ್ 1999 AOL 4.0 (ಕ್ಯಾಸಬ್ಲಾಂಕ) ಮತ್ತು ರಿಫ್ರೆಶ್ 2 ಬಿಡುಗಡೆಗೊಂಡಿತು
ಸೆಪ್ಟೆಂಬರ್ 1999 AOL 5.0 (ಕಿಲಿಮ್ಯಾಂಜಾರೊ) ಬಿಡುಗಡೆಗೊಂಡಿತು
ಜೂನ್ 2000 9x/NT/2K (ನೈಯಗರ)ಗಾಗಿ AOL 5.0 ಬಿಡುಗಡೆಗೊಂಡಿತು
ಅಕ್ಟೋಬರ್ ಮತ್ತು ಡಿಸೆಂಬರ್ 2000 AOL 6.0 (K2 – ಕ್ಯಾರಕೋರಮ್) ಮತ್ತು ರಿಫ್ರೆಶ್ ಬಿಡುಗಡೆಗೊಂಡವು
ಸೆಪ್ಟೆಂಬರ್ 2001 XP (Steppenwolf) ಗಾಗಿ AOL 6.0.2 ಬಿಡುಗಡೆಗೊಂಡಿತು
ಅಕ್ಟೋಬರ್ ಮತ್ತು ಡಿಸೆಂಬರ್ 2001, ಮೇ ಮತ್ತು ಜುಲೈ 2002 AOL 7.0 (Taz) ಮತ್ತು ರಿಫ್ರೆಶ್ 1, ರಿಫ್ರೆಶ್ 2, ಮತ್ತು ರಿಫ್ರೆಶ್ 2 ಪ್ಲಸ್ ಬಿಡುಗಡೆಗೊಂಡವು
ಅಕ್ಟೋಬರ್ 2002 AOL 8.0 (ಸ್ಪೇಸ್ಲಿ) ಬಿಡುಗಡೆಗೊಂಡಿತು
ಏಪ್ರಿಲ್ 2003 AOL 8.0 ಪ್ಲಸ್ (ಎಲ್ರಾಯ್) ಬಿಡುಗಡೆಗೊಂಡಿತು
ಆಗಸ್ಟ್ ಮತ್ತು ಸೆಪ್ಟೆಂಬರ್ 2003 AOL 9.0 ಆಪ್ಟಿಮೈಸ್ಡ್ (ಬಂಕರ್ ಹಿಲ್ / ಬ್ಲೂ ಹವಾಯಿ) ಮತ್ತು ರಿಫ್ರೆಶ್ ಬಿಡುಗಡೆಗೊಂಡವು
ಮೇ 2004 AOL 9.0 ಆಪ್ಟಿಮೈಸ್ಡ್ SE/LE (ಥೈಲ್ಯಾಂಡ್/ ಟ್ಯಾಹಿಟಿ) ಬಿಡುಗಡೆಗೊಂಡಿತು
ನವೆಂಬರ್ 2004, ಜುಲೈ 2005 AOL 9.0 ಸೆಕ್ಯೂರಿಟಿ ಎಡಿಶನ್ SE/LE (ಸ್ಟ್ರಾಸ್) ಮತ್ತು ರಿಫ್ರೆಶ್ ಬಿಡುಗಡೆಗೊಂಡುವು
2005ರ ಆಗಸ್ಟ್‌ನಿಂದ 2006ರ ಮಾರ್ಚ್‌ವರೆಗೆ AOL ಸ್ಟೂಟ್ ಬೀಟಾ ಬಿಡುಗಡೆಗೊಂಡಿತು (ರದ್ದುಗೊಂಡಿತು)
ಸೆಪ್ಟೆಂಬರ್ 2006, ಮಾರ್ಚ್ 2007 AOL ಓಪನ್‌ರೈಡ್ (ಸ್ಟ್ರೀಮ್‌ಲೈನರ್) ಬಿಡುಗಡೆಗೊಂಡಿತು
ನವೆಂಬರ್ 2006, ಎಪ್ರಿಲ್ 2007 AOL 9.0 VR ಮತ್ತು ರಿಫ್ರೆಶ್ (ರಾಗ) ಬಿಡುಗಡೆಗೊಂಡಿತು (Microsoft Windows Vista ಗಾಗಿ AOL 9.0, ಆದರೂ Microsoft Windows 98, ME, 2000 ಮತ್ತು XP ಒಂದಿಗೆ ಕಾರ್ಯನಿರ್ವಹಿಸುತ್ತದೆ)
ಸೆಪ್ಟೆಂಬರ್ 2007 ಮ್ಯಾಕ್ ಬೀಟಾಕ್ಕಾಗಿ AOL ಡೆಸ್ಕ್‌ಟಾಪ್ ಬಿಡುಗಡೆಗೊಂಡಿತು
ಅಕ್ಟೋಬರ್‌ 31, 2007 AOL 9.1 (ಟರಾನ) ಬಿಡುಗಡೆಗೊಂಡಿತು
ಡಿಸೆಂಬರ್ 2007 AOL ಡೆಸ್ಕ್‌ಟಾಪ್ (a.k.a.AOL 10.0 ) ಬಿಡುಗಡೆಗೊಂಡಿತು
ಮೇ 2008 ಮ್ಯಾಕ್ 1.0 ಗಾಗಿ AOL ಡೆಸ್ಕ್‌ಟಾಪ್ ಅಧಿಕೃತವಾಗಿ ಬಿಡುಗಡೆಗೊಂಡಿತು
ಸೆಪ್ಟೆಂಬರ್ 2008 AOL ಡೆಸ್ಕ್‌ಟಾಪ್ 10.1 ಬಿಡುಗಡೆಗೊಂಡಿತು
ಫೆಬ್ರವರಿ 2009 AOL 9.5 ಬಿಡುಗಡೆಗೊಂಡಿತು (ಕ್ಲಾಸಿಕ್) (2009ರಲ್ಲಿ ಬೀಟಾ ಚುರುಕುಗೊಂಡಿತು)
ಅಕ್ಟೋಬರ್ 2009 AOL 9.5 ರಿಫ್ರೆಶ್ ಬಿಡುಗಡೆಗೊಂಡಿತು, XP, Vista ಮತ್ತು Windows 7 ಒಂದಿಗೆ ಹೊಂದಿಕೊಳ್ಳುತ್ತದೆ

AOL ಬಿಲ್ ವನ್ ಮೈಸ್ಟರ್ ಸ್ಥಾಪಿಸಿದ ಕಂಟ್ರೋಲ್ ವೀಡಿಯೊ ಕಾರ್ಪೊರೇಶನ್ (ಅಥವಾ CVC ) ಎನ್ನುವ ಒಂದು ಅಲ್ಪ-ಕಾಲದ ಉದ್ಯಮವಾಗಿ ಆರಂಭಗೊಂಡಿತು. ಅದರ ಏಕೈಕ ಉತ್ಪನ್ನವೆಂದರೆ ಅಟಾರಿ 2600 ವೀಡಿಯೊ ಗೇಮ್ ಕನ್ಸೋಲ್‌ಗಾಗಿ ಗೇಮ್‌ಲೈನ್ ಎನ್ನುವ ಒಂದು ಆನ್‌ಲೈನ್‌ ಸೇವೆಯಾಗಿತ್ತು. ಸಂಗೀತವನ್ನು ಆದೇಶದ ಮೇರೆಗೆ ಖರೀದಿಸುವ ವಾನ್ ಮೈಸ್ಟರ್‌ನ ಯೋಚನೆಯನ್ನು ವಾರ್ನರ್ ಸಹೋದರರು ನಿರಾಕರಿಸಿದ ನಂತರ ಇದು ಆರಂಭಗೊಂಡಿತು.[೧೯] ಚಂದಾದಾರರು ಈ ಕಂಪೆನಿಯಿಂದ ಮೋಡೆಮ್ಅನ್ನು $49.95 ಬೆಲೆಗೆ ಖರೀದಿಸಿದರು ಹಾಗೂ ಒಂದೇ $15ನಷ್ಟು ಸ್ಥಾಪನೆ ಶುಲ್ಕವಾಗಿ ನೀಡಿದರು. ಗೇಮ್‌ಲೈನ್‌ ಚಂದಾದಾರರಿಗೆ ತಾತ್ಕಾಲಿಕವಾಗಿ ಗೇಮ್‌ಗಳನ್ನು ಡೌನ್‌ಲೋಡ್ ಮಾಡಲು ಅವಕಾಶ ನೀಡಿತು ಹಾಗೂ ಅಧಿಕ ಸ್ಕೋರುಗಳ ಜಾಡು ಹಿಡಿಯಲು ಪ್ರತಿ ಗೇಮ್‌ಗೆ $1ನಷ್ಟು ದರವನ್ನು ನಿಗದಿಮಾಡಿತ್ತು. ದೂರವಾಣಿಯ ಸಂಪರ್ಕ ಕಡಿತಗೊಳಿಸಿ, ಡೌನ್‌ಲೋಡ್ ಮಾಡಿದ ಗೇಮ್ ಗೇಮ್‌ಲೈನ್‌ನ ಮಾಸ್ಟರ್ ಮಾಡ್ಯೂಲ್‌ನಲ್ಲಿ ಉಳಿಯುತ್ತದೆ ಹಾಗೂ ಬಳಕೆದಾರ ಕನ್ಸೋಲ್ಅನ್ನು ಆಫ್ ಮಾಡುವವರೆಗೆ ಅಥವಾ ಮತ್ತೊಂದು ಗೇಮ್ಅನ್ನು ಡೌನ್‌ಲೋಡ್ ಮಾಡುವವರೆಗೆ ಆಡಬಹುದು. ಆರಂಭಿಕ ತಾಂತ್ರಿಕ ತಂಡವು ಮಾರ್ಕ್ ಶೆರಿಫ್, ಟಾಮ್ ರಾಲ್‌ಸ್ಟನ್, ಕೆನ್ ಹಂಟ್ಸ್‌ಮ್ಯಾನ್, ಜ್ಯಾನೆಟ್ ಹಂಟರ್, ಡೇವ್ ಬ್ರೌವ್ನ್, ಸ್ಟೀವ್ ಟ್ರೂಸ್, ರೇ ಹೈನ್ರಿಚ್, ಕ್ರೈಗ್ ಡಿಕ್‌ಸ್ಟ್ರಾ ಮತ್ತು ಡೌಗ್ ಕೊವಾರ್ಡ್ ಮೊದಲಾದವರನ್ನು ಒಳಗೊಂಡಿತ್ತು. 1983ರ ಜನವರಿಯಲ್ಲಿ ಸ್ಟೀವ್ ಕೇಸ್ ಅವನ ಸಹೋದರ ಹೂಡಿಕೆದಾರ ಬ್ಯಾಂಕರ್ ಡ್ಯಾನ್ ಕೇಸ್‌ನ ಶಿಫಾರಸಿನ ಮೇರೆಗೆ ಕಂಟ್ರೋಲ್ ವೀಡಿಯೊದ ಮಾರುಕಟ್ಟೆ ಸಲಹಾರ್ಥಿಯಾಗಿ ನೇಮಕಗೊಂಡನು. 1983ರ ಮೇನಲ್ಲಿ ಜಿಮ್ ಕಿಮ್ಸೆಯು ದಿವಾಳಿತನದ ಅಂಚಿನಲ್ಲಿದ್ದ ಕಂಟ್ರೋಲ್ ವೀಡಿಯೋದ ತಯಾರಕಾ ಸಲಹಾರ್ಥಿಯಾದನು. ಕಿಮ್ಸೆಯು ಕಂಪೆನಿಯಲ್ಲಿ ಆ ಸ್ಥಾನವನ್ನು ವೆಸ್ಟ್ ಪಾಯಿಂಟ್‌ನ ಸ್ನೇಹಿತ ಬಂಡವಾಳ ಹೂಡಿಕೆದಾರ ಫ್ರ್ಯಾಂಕ್ ಕಾಫೀಲ್ಡ್‌ನಿಂದಾಗಿ‌ ಪಡೆದನು.[೧೯] ವನ್ ಮೈಸ್ಟರ್ 1985ರ ಆರಂಭದಲ್ಲಿ ಮೌನವಾಗಿ ಕಂಪೆನಿಯನ್ನು ತೊರೆದನು. ಕಂಟ್ರೋಲ್ ವೀಡಿಯೊ ಕ್ವಾಂಟಮ್ ಕಂಪ್ಯೂಟರ್ ಸರ್ವಿಸಸ್‌, ಇಂಕ್. ಆಗಿ 1985ರ ಮೇ 24ರಂದು ಮರುಸಂಘಟನೆಯಾಯಿತು. ಅದರಲ್ಲಿ ಕಿಮ್ಸೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದರು ಮತ್ತು ಮಾರ್ಕ್ ಶೆರಿಫ್ ಮುಖ್ಯ ತಾಂತ್ರಿಕ ಅಧಿಕಾರಿಯಾದರು. ಕಂಟ್ರೋಲ್ ವೀಡಿಯೊದ ಒಟ್ಟು 100 ನೌಕರರಲ್ಲಿ ಕೇವಲ 10 ಮಂದಿ ನೌಕರರು ಮಾತ್ರ ಹೊಸ ಕಂಪೆನಿಯಲ್ಲಿ ಉಳಿದರು.[೧೯] ಕೇಸ್ ಅತಿ ಶೀಘ್ರದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತಾ ಹೋದನು; ಕಿಮ್ಸೆಯು CEO ಆದ ಸ್ವಲ್ಪದರಲ್ಲಿ ಅವನನ್ನು ಮಾರುಕಟ್ಟೆಯ ಉಪಾಧ್ಯಕ್ಷನಾಗಿ ನೇಮಿಸಿದನು. ಆನಂತರ ಮತ್ತೆ 1987ರಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷನಾಗಿ ಬಡ್ತಿ ನೀಡಿದನು. ಕಿಮ್ಸೆಯು ಕೇಸ್‌ನನ್ನು CEO ಸ್ಥಾನಕ್ಕೆ ಅಭ್ಯರ್ಥಿಯಾಗಿ ತಯಾರು ಮಾಡಲು ಆರಂಭಿಸಿದನು. ಅವನು ಆ ಸ್ಥಾನವನ್ನು ಕಿಮ್ಸೆ 1991ರಲ್ಲಿ ನಿವೃತ್ತಿ ಹೊಂದಿದಾಗ ಪಡೆದನು. ಕಿಮ್ಸೆಯು ಕಂಪೆನಿಯ ಕಾರ್ಯವಿಧಾನವನ್ನು ಬದಲಾಯಿಸಿದನು ಹಾಗೂ 1985ರಲ್ಲಿ ಕೊಮೊಡೊರ್ 64 ಮತ್ತು 128 ಕಂಪ್ಯೂಟರ್‍ಗಳಿಗೆ ಮೀಸಲಾದ ಒಂದು ಆನ್‌ಲೈನ್‌ ಸೇವೆಯನ್ನು ಬಿಡುಗಡೆಗೊಳಿಸಿದನು. ಅದನ್ನು ಆರಂಭದಲ್ಲಿ ಕ್ವಾಂಟಮ್ ಲಿಂಕ್ (ಸಂಕ್ಷಿಪ್ತವಾಗಿ "Q-ಲಿಂಕ್") ಎಂದು ಕರೆಯಲಾಯಿತು. ಕ್ವಾಂಟಮ್ ಲಿಂಕ್‌ನ ಸಾಫ್ಟ್‌ವೇರ್‌ ಪ್ಲೇನೆಟ್, ಇಂಕ್‌ನಿಂದ ಪರವಾನಗಿ ಪಡೆದ ಸಾಫ್ಟ್‌ವೇರ್‌ಅನ್ನು ಆಧರಿಸಿತ್ತು. 1988ರ ಮೇಯಲ್ಲಿ ಕ್ಯಾಂಟಮ್ ಮತ್ತು ಆಪಲ್, ಆಪಲ್ II ಮತ್ತು ಮ್ಯಾಕಿಂಟೋಶ್‌ ಕಂಪ್ಯೂಟರ್‌ಗಳಿಗಾಗಿ ಆಪಲ್‌ಲಿಂಕ್ ಪರ್ಸನರ್ ಎಡಿಶನ್ಅನ್ನು ಬಿಡುಗಡೆಗೊಳಿಸಿತು. 1988ರ ಆಗಸ್ಟ್‌ನಲ್ಲಿ ಕ್ವಾಂಟಮ್, PC ಲಿಂಕ್ಅನ್ನು ಬಿಡುಗಡೆಗೊಳಿಸಿತು. ಇದು IBM-ಹೊಂದಿಕೆಯಾಗುವ PCಗಳಿಗಾಗಿರುವ ಒಂದು ಸೇವೆಯಾಗಿದೆ. ಇದು ಟ್ಯಾಂಡಿ ಕಾರ್ಪೊರೇಶನ್‌ ಒಂದಿಗೆ ಜಂಟಿ-ಉದ್ಯಮವಾಗಿ ಅಭಿವೃದ್ಧಿಗೊಂಡಿತು. ಕಂಪೆನಿಯು 1989ರ ಅಕ್ಟೋಬರ್‌ನಲ್ಲಿ ಆಪಲ್‌‌ನಿಂದ ದೂರವಾದ ಬಳಿಕ, ಕ್ವಾಂಟಮ್ ಸೇವೆಗಳ ಹೆಸರನ್ನು ಅಮೆರಿಕ ಆನ್‌ಲೈನ್‌ ಆಗಿ ಬದಲಾಯಿಸಿತು.[೨೦][೨೧] ಆರಂಭದಲ್ಲಿ AOL ಅದರ ಉತ್ಪನ್ನಗಳೊಂದಿಗೆ ಆನ್‌ಲೈನ್‌ ಗೇಮ್‌‌ಗಳನ್ನೂ ಸೇರಿಸಿಕೊಂಡಿತು; ಅನೇಕ ಶ್ರೇಷ್ಠ ಮತ್ತು ಕ್ರಮವಿಲ್ಲದ ಗೇಮ್‍‌ಗಳು ಮೂಲ ಪ್ಲೇನೆಟ್ ಸಾಫ್ಟ್‌ವೇರ್‌ ವ್ಯವಸ್ಥೆಯಲ್ಲಿ ಸೇರಿಕೊಂಡವು. AOLನ ಆರಂಭಿಕ ದಿನಗಳಲ್ಲಿ ಕಂಪೆನಿಯು ಅನೇಕ ನೂತನ ಆನ್‌ಲೈನ್‌ ಪರಸ್ಪರ-ಸಂಪರ್ಕದ ಶೀರ್ಷಿಕೆಗಳು ಮತ್ತು ಗೇಮ್‌ಗಳನ್ನು ಆರಂಭಿಸಿತು, ಅವುಗಳೆಂದರೆ:

2008ರಲ್ಲಿ ನೆವರ್‌ವಿಂಟರ್ ನೈಟ್ಸ್‌ನ್ನು MMORPG ಗೇಮ್‌ಗಳ ಕಲಾತ್ಮಕತೆಯನ್ನು ಅಭಿವೃದ್ಧಿಗೊಳಿಸಿದುದಕ್ಕಾಗಿ 59ನೇ ವಾರ್ಷಿಕ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಎಮ್ಮಿ ಪ್ರಶಸ್ತಿಗಳ ಸಮಾರಂಭದಲ್ಲಿ ಎವರ್‌ಕ್ವೆಸ್ಟ್ ಮತ್ತು ವರ್ಲ್ಡ್ ಆಫ್ ವಾರ್‌ಕ್ರಾಫ್ಟ್ ಒಂದಿಗೆ) ಗೌರವಿಸಲಾಯಿತು. 1991ರ ಫೆಬ್ರವರಿಯಲ್ಲಿ DOSಗಾಗಿ AOL, ಜಿಯೊವರ್ಕ್ಸ್ಇಂಟರ್‌ಫೇಸ್ ಬಳಸಿಕೊಂಡು ಬಿಡುಗಡೆಗೊಂಡಿತು. ಅದಾದ ಒಂದು ವರ್ಷದ ನಂತರ ವಿಂಡೋಸ್‌‌ಗಾಗಿ AOL ಬಿಡುಗಡೆಗೊಂಡಿತು. ಆನಂತರ ಪ್ರಾಡಿಗಿ, ಕಂಪ್ಯೂಸರ್ವ್ ಮತ್ತು ಜಿಎನೈ(GEnie) ಮೊದಲಾದ ಪಾವತಿಸುವ-ಆಧಾರದ ಆನ್‌ಲೈನ್‌ ಸೇವೆಗಳು ಅಭಿವೃದ್ಧಿಯೊಂದಿಗೆ ಇದು ಹೊಂದಿಕೆಯಾಯಿತು. AOL 1994ರ ಕೊನೆಯಲ್ಲಿ Q-ಲಿಂಕ್ ಮತ್ತು PC ಲಿಂಕ್ ಒಂದಿಗಿನ ಸಂಪರ್ಕವನ್ನು ನಿಲ್ಲಿಸಿತು.

ಅಭಿವೃದ್ಧಿ

ಬದಲಾಯಿಸಿ

ಸ್ಟೀವ್ ಕೇಸ್‌ AOLಅನ್ನು ಕಂಪ್ಯೂಟರ್‌ಗಳ ಬಗ್ಗೆ ಪರಿಚಯವಿರದ ಜನರಿಗೆ ಆನ್‌ಲೈನ್‌ ಸೇವೆಯಾಗಿ, ತಾಂತ್ರಿಕ ಸಮುದಾಯಕ್ಕೆ ಸುದೀರ್ಘ ಸೇವೆ ಸಲ್ಲಿಸಿದ ಕಾಂಪ್ಯುಸರ್ವ್‌ಗೆ ತದ್ವಿರುದ್ಧವಾಗಿ ಸ್ಥಾನ ಕಲ್ಪಿಸಿದರು. AOL ಪರವಾನಗಿ ಪಡೆದ ಪ್ಲೇನೆಟ್ ವ್ಯವಸ್ಥೆಯು ಪ್ರಮಾಣಿತ ಟರ್ಮಿನಲ್ ಪ್ರೋಗ್ರಾಂನ ಬದಲಿಗೆ ಪ್ರೊಪ್ರೈಟರಿ ಸಾಫ್ಟ್‌ವೇರ್‌‌ನ ಬಳಕೆಯ ಅತ್ಯಗತ್ಯದ ಮೊದಲ ಆನ್‌ಲೈನ್‌ ಸೇವೆಯಾಗಿದೆ; ಆದ್ದರಿಂದ ಇದು ಕಮಾಂಡ್ ಲೈನ್‌ಗಳ ಬದಲಿಗೆ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ (GUI)ಅನ್ನು ಒದಗಿಸಲು ಸಮರ್ಥವಾಗಿದೆ. ಅಲ್ಲದೆ ಇದು ವಿಶೇಷ ಆಕರ್ಷಣೆಯಾಗಿ ಬಳಕೆದಾರರ ಮಧ್ಯೆ ಸಂವಹನಕ್ಕೆ ಹೆಚ್ಚು ಒತ್ತುಕೊಡುವುದರಲ್ಲಿ ಅಗ್ರ ಸ್ಥಾನದಲ್ಲಿದೆ.[ಸೂಕ್ತ ಉಲ್ಲೇಖನ ಬೇಕು] CB-ಶೈಲಿಯ ಚಾನೆಲ್‌ಗಳ ಹಿಂದಿನ ಮಾದರಿಗೆ ವಿರುದ್ಧವಾಗಿ ವಿಶೇಷವಾಗಿ ಪ್ಲೇನೆಟ್‌ನ ಚಾಟ್ ರೂಮ್ ಕಲ್ಪನೆಯನ್ನು ಒದಗಿಸಿತು. ಚಾಟ್ ರೂಮ್‌ಗಳು ಒಂದೇ ರೀತಿಯ ಆಸಕ್ತಿಯ ಅತಿ ಹೆಚ್ಚಿನ ಜನರನ್ನು ನೈಜ ಸಮಯದಲ್ಲಿ ಸೇರಲು ಮತ್ತು ಸಂಭಾಷಣೆಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿತು, ಅವುಗಳೆಂದರೆ:

  • ಪ್ರೈವೇಟ್ ರೂಮ್ಸ್ - ಯಾವುದೇ ಬಳಕೆದಾರನಿಂದ ರಚಿಸಲ್ಪಡುತ್ತದೆ. ಸುಮಾರು 23 ಮಂದಿಯನ್ನು ಹೊಂದಿರುತ್ತದೆ.
  • ಕಾನ್ಫರೆನ್ಸ್ ರೂಮ್ಸ್ - AOLನ ಅನುಮತಿಯೊಂದಿಗೆ ರಚಿಸಲ್ಪಡುತ್ತದೆ. ಸುಮಾರು 48 ಮಂದಿಯನ್ನು ಹೊಂದಿರುತ್ತದೆ ಮತ್ತು ಹೆಚ್ಚಾಗಿ ವ್ಯತ್ಯಾಸಗೊಳ್ಳುತ್ತದೆ.
  • ಆಡಿಟೋರಿಯಮ್ – AOLನ ಅನುಮತಿಯೊಂದಿಗೆ ರಚಿಸಲ್ಪಡುತ್ತದೆ. ಒಂದು ವೇದಿಕೆಯನ್ನು ಮತ್ತು ಅಸಂಖ್ಯಾತ ಸಾಲುಗಳನ್ನು ಒಳಗೊಂಡಿರುತ್ತದೆ. ಆಡಿಟೋರಿಯಮ್‌ನಲ್ಲಿ ವೇದಿಕೆಯ ಮೇಲೆ ಸಂಭವಿಸುವುದನ್ನು ಎಲ್ಲರೂ ವೀಕ್ಷಿಸಬಹುದು. ಆದರೆ ಸುಮಾರು 27 ಮಂದಿಯವರೆಗೆ ವೈಯಕ್ತಿಕ ಸಾಲುಗಳಲ್ಲಿ ಸಂಭವಿಸುವುದನ್ನು ಆ ಸಾಲುಗಳಲ್ಲಿರುವವರು ಮಾತ್ರ ವೀಕ್ಷಿಸಲು ಸಾಧ್ಯವಾಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]

1993ರ ಸೆಪ್ಟೆಂಬರ್‌ನಲ್ಲಿ AOL ಅದರ ವೈಶಿಷ್ಟ್ಯಗಳಿಗೆ USENET ಪ್ರವೇಶವನ್ನು ಸೇರಿಸಿತು.[೨೨] ಇದನ್ನು ಸಾಮಾನ್ಯವಾಗಿ "ಎಟರ್ನಲ್ ಸೆಪ್ಟೆಂಬರ್" ಎಂದು ಕರೆಯಲಾಗುತ್ತದೆ. AOL ಜಿಎನೈಗಿಂತ ಅತಿ ಶೀಘ್ರದಲ್ಲಿ ಮೇಲುಗೈ ಸಾಧಿಸಿತು. 1990ರ ದಶಕದ ಮಧ್ಯದಲ್ಲಿ, ಇದು ಪ್ರಾಡಿಗಿ (ಇದು ಅನೇಕ ವರ್ಷಗಳ ಕಾಲ AOL ಜಾಹೀರಾತಿಗೆ ಅವಕಾಶ ನೀಡಿತ್ತು) ಮತ್ತು ಕಂಪ್ಯೂಸರ್ವ್‌ಅನ್ನೂ ಮೀರಿಸಿತು. ಆರಂಭದಲ್ಲಿ AOL ಅದರ ಬಳಕೆದಾರರಿಗೆ ಗಂಟೆಯ ಆಧಾರದಲ್ಲಿ ಶುಲ್ಕವಿಧಿಸುತ್ತಿತ್ತು. ಆದರೆ 1996ರಲ್ಲಿ ಇದನ್ನು $19.19 ನಿವ್ವಳ ತಿಂಗಳ ದರಕ್ಕೆ ಬದಲಾಯಿಸಿತು. ಮೂರು ವರ್ಷಗಳೊಳಗಾಗಿ AOLನ ಬಳಕೆದಾರರ ಸಂಖ್ಯೆಯು 10 ದಶಲಕ್ಷಕ್ಕೆ ಏರಿತು. ಆ ಸಂದರ್ಭದಲ್ಲಿ AOL ಸಂಪರ್ಕಗಳು ಅಧಿಕ ಬಳಕೆದಾರರನ್ನು ಪಡೆಯುವುದಕ್ಕಾಗಿ ಹೆಚ್ಚು ಪ್ರಯತ್ನಿಸಿದವು ಹಾಗೂ ಯಾವಾಗಲೂಹೆಚ್ಚು ದಟ್ಟಣೆಯ ಸಂಕೇತ(ಬ್ಯುಸಿ)ಗಳಿಂದಾಗಿ ಹೆಚ್ಚಿನವರು ಅವರ ಖಾತೆಗಳನ್ನು ರದ್ದುಗೊಳಿಸಿದರು (ಇದನ್ನು ಹೆಚ್ಚಾಗಿ "AOL" "ಸದಾ ಆಫ್-ಲೈನ್"ನಲ್ಲಿರುತ್ತದೆಂದು ಪರಿಹಾಸ್ಯ ಮಾಡಲಾಗುತ್ತಿತ್ತು).[ಸೂಕ್ತ ಉಲ್ಲೇಖನ ಬೇಕು] 1995ರಲ್ಲಿ AOL, ವಿಯೆನ್ನಾ ನಗರದ ಹತ್ತಿರ ವರ್ಜಿನಿಯಾಸಂಘಟಿತವಾಗಿರದ ಫೇರ್‍‌ಫಾಕ್ಸ್ ಕೌಂಟಿ‌ಯ[೨೩][೨೪] ಟೈಸನ್ಸ್ ಕಾರ್ನರ್ CDPಯ 8619 ವೆಸ್ಟ್‌ವುಡ್ ಸೆಂಟರ್ ಡ್ರೈವ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿತ್ತು.[೨೫] AOL 1996ರಲ್ಲಿ ಫೇರ್‌ಫಾಕ್ಸ್ ಕೌಂಟಿ ಕ್ಯಾಂಪಸ್‌ನಲ್ಲಿನ ಅದರ ಜಾಲಕ್ಕಾಗಿ ಶೀಘ್ರದಲ್ಲಿ ಸ್ಥಳಾವಕಾಶದ ಕೊರತೆ ಎದುರಿಸಿತು. 1996ರಲ್ಲಿ[ಸೂಕ್ತ ಉಲ್ಲೇಖನ ಬೇಕು] AOL, ವರ್ಜಿನಿಯಾದ ಸಂಘಟಿತವಾಗದಲೌಡೌನ್ ಕೌಂಟಿಡಲ್ಲೆಸ್‌ನ 22000 AOL ವೇಗೆ ಸ್ಥಳಾಂತರಗೊಂಡಿತು.[೨೬] ಡಲ್ಲೆಸ್‌ಗೆ ಅದರ ಸ್ಥಳಾಂತರವು 1996ರ ಮಧ್ಯದಲ್ಲಿ ಕಂಡುಬಂದಿತು ಹಾಗೂ ಇದು ಭವಿಷ್ಯದ ಅಭಿವೃದ್ಧಿಗೆ ಆಧಾರವನ್ನು ಒದಗಿಸಿತು. ಇಂದು ಮುಂಚೂಣಿಯಲ್ಲಿರುವ ಆಪರೇಟಿಂಗ್ ಸಿಸ್ಟಮ್‌ನ ಜೊತೆಗಿನ ಐದು ವರ್ಷದ ಮಹತ್ವದ ಒಪ್ಪಂದದಲ್ಲಿ ವಿಂಡೋಸ್‌ ಜತೆಗೂಡಿದ AOL ಜಯಶಾಲಿಯಾಯಿತು.[ಸೂಕ್ತ ಉಲ್ಲೇಖನ ಬೇಕು]

ಗಮನ, ಕುಸಿತ ಮತ್ತು ಮರುಬ್ರ್ಯಾಂಡ್ ನೀಡುವ ಬದಲಾವಣೆಗಳು

ಬದಲಾಯಿಸಿ
 
U.S. AOL ಚಂದಾರಾರರ 2Q 2001 – 2Q 2009

2001ರಲ್ಲಿ ಟೈಮ್ ವಾರ್ನರ್‌ (ಸೂಚಿತ ವಾರ್ನರ್ ಬ್ರದರ್ಸ್ ಮಾಲಿಕ ಸಂಸ್ಥೆ) ಒಂದಿಗೆ ಜತೆಗೂಡಿದಾಗಿನಿಂದ AOLನ ಮೌಲ್ಯವು $240 ಶತಕೋಟಿಯ ಉನ್ನತಸ್ಥಾನದಿಂದ ಗಮನಾರ್ಹವಾಗಿ ಕೆಳಕ್ಕಿಳಿಯಿತು. ಅದರ ಚಂದಾದಾರರ ಸಂಖ್ಯೆಯು 2002ರಿಂದ ಕಾಲುಭಾಗದಷ್ಟೂ ಸಹ ಬೆಳೆಯಲಿಲ್ಲ. ಆನಂತರ AOL ಇಂಟರ್ನೆಟ್‌ ಸೇವೆ ಪೂರೈಕೆದಾರ ಸಂಸ್ಥೆಗೆ ವಿರುದ್ಧವಾಗಿ ಯಾಹೂ! ಮೊದಲಾದ ಕಂಪೆನಿಗಳಂತೆ ಕಂಟೆಂಟ್ ಪೂರೈಕೆದಾರನಾಗಿ ಸ್ಥಾನಬದಲಿಸಿಕೊಳ್ಳಲು ಪ್ರಯತ್ನಿಸಿತು.

  • 2004ರಲ್ಲಿ AOL 9.0 ಆಪ್ಟಿಮೈಸ್ಡ್‌ನ ಬಿಡುಗಡೆಯೊಂದಿಗೆ, AOL ವೈಯಕ್ತಿಕ ಶುಭಾಶಯಗಳನ್ನು ನೀಡುವ ಆಯ್ಕೆಯನ್ನೂ ಒದಗಿಸುತ್ತದೆ. ಇದು ಬಳಕೆದಾರರಿಗೆ ಮೂಲ ಕ್ರಿಯೆಗಳು ಮತ್ತು ಮೇಲ್ ಎಚ್ಚರಿಕೆಗಳನ್ನು ಪಡೆಯುವಾಗ ಅಥವಾ ಲಾಗಿನ್ ಅಥವಾ ಲಾಗ್ಔಟ್ ಆಗುವಾಗ ಅವನ ಅಥವಾ ಅವಳ ಹೆಸರನ್ನು ಕೇಳುವಂತೆ ಮಾಡುತ್ತದೆ.
  • AOL ಅಂತಿಮವಾಗಿ [ಸೂಕ್ತ ಉಲ್ಲೇಖನ ಬೇಕು] ಅದರ ಹೊಸ IN2TV ಸೇವೆಯ ಮೂಲಕ ಅಳವಡಿಸಲಾದ ಜಾಹೀರಾತುಗಳೊಂದಿಗೆ ಚಂದಾದಾರಿಗೆ ಉಚಿತವಾಗಿ ಉತ್ತಮ ದರ್ಜೆಯ ಕಾರ್ಯಕ್ರಮಗಳನ್ನು ಒದಗಿಸುವ ಯೋಜನೆಗಳನ್ನು ಘೋಷಿಸಿತು. ಬಿಡುಗಡೆಯಾದ ಸಂದರ್ಭದಲ್ಲಿ AOL, ವೆಲ್ಕಮ್ ಬ್ಯಾಕ್ ಕಾಟ್ಟರ್ ಅದರ ಮಾರ್ಕ್ವೀ ಕೊಡುಗೆಯಾಗಿ ವಾರ್ನರ್ ಬ್ರೋಸ್. ಟೆಲಿವಿಷನ್‌ನ ವ್ಯಾಪಕ ಲೈಬ್ರರಿ ಕಾರ್ಯಕ್ರಮಗಳು ಲಭ್ಯವಾಗುವಂತೆ ಮಾಡಿತು.[ಸೂಕ್ತ ಉಲ್ಲೇಖನ ಬೇಕು]
  • 2005ರಲ್ಲಿ AOL ಲೈವ್ 8-ಸಂಗೀತ ಕಛೇರಿಯನ್ನು ಇಂಟರ್ನೆಟ್‌‌ನಲ್ಲಿ ಪ್ರಸಾರ ಮಾಡಿತು. ಆನಂತರದ ಕೆಲವು ತಿಂಗಳವರೆಗೆ ಸಾವಿರಾರು ಬಳಕೆದಾರರು ಈ ಸಂಗೀತ-ಕಛೇರಿಯ ದೃಶ್ಯ-ತುಣುಕುಗಳನ್ನು ಡೌನ್‌ಲೋಡ್ ಮಾಡಿಕೊಂಡರು.
  • 2005ರಲ್ಲಿ AOL (ಟೆಲಿಪಿಕ್ಚರ್ಸ್ ಪ್ರೊಡಕ್ಷನ್ಸ್ ಒಂದಿಗೆ) TMZ.comಅನ್ನು ಬಿಡುಗಡೆಗೊಳಿಸಿತು. ಇದು ವೆಬ್‌ನಲ್ಲಿ ಪ್ರಸಿದ್ಧವ್ಯಕ್ತಿಗಳ ಸುದ್ದಿಗಳು ಮತ್ತು ಗಾಸಿಪ್‌ಗಳನ್ನು ಪ್ರಕಟಿಸುವ ಮೂಲಗಳಲ್ಲಿ ಒಂದಾಗಿದೆ. TMZ.com ಅತಿ ಶೀಘ್ರವಾಗಿ ಪ್ರಸಿದ್ಧ ವ್ಯಕ್ತಿಗಳ ಸುದ್ದಿಗಳನ್ನು ಪ್ರಕಟಿಸುವುದಕ್ಕೆ ಹೆಚ್ಚು ಜನಪ್ರಿಯವಾಯಿತು. ಇದರೊಂದಿಗೆ ಕೆಲವೊಮ್ಮೆ ವಿಶೇಷ ವೀಡಿಯೊ ಮತ್ತು ಫೋಟೊಗಳೂ ಸಹ ಜತೆಗೂಡುತ್ತಿದ್ದವು.
  • 2006ರಲ್ಲಿ AOL ಅದರ ಅಮೆರಿಕಾದ ಗ್ರಾಹಕರಿಗೆ ಅದರ ಡೈಯಲ್-ಅಪ್ ಪ್ರವೇಶವನ್ನು $25.90 ಮೌಲ್ಯಕ್ಕೆ ಏರಿಸುವುದಾಗಿ ಸೂಚಿಸಿತು. ಈ ಏರಿಕೆಯು ಸೇವೆಯ ಉಳಿದ ಡೈಯಲ್-ಅಪ್ ಬಳಕೆದಾರರನ್ನು ಬ್ರಾಡ್‌ಬ್ಯಾಂಡ್‌ಗೆ ಬದಲಾಯಿಸುವ ಪ್ರಯತ್ನವಾಗಿತ್ತು, ಏಕೆಂದರೆ ಏರಿಸಿದ ದರವು ಅವರ ತಿಂಗಳ DSL ಪ್ರವೇಶಕ್ಕೆ ಪಾವತಿಸುವ ದರದಷ್ಟೇ ಇತ್ತು.[೨೭] ಆದರೆ AOL ಅದರ ಸೇವೆಗಳ ಒಂದು ತಿಂಗಳ ಅನಿಯಮಿತ ಡೈಯಲ್-ಅಪ್ ಪ್ರವೇಶದ ಸೇವೆಗಳನ್ನು ಮಾಸಿಕ $9.95 ಮೌಲ್ಯಕ್ಕೆ ಒದಗಿಸಲು ಆರಂಭಿಸಿತು.[೨೮]
  • 2006ರ ಎಪ್ರಿಲ್ 3ರಂದು AOL ಅದರ ಸಂಪೂರ್ಣ ಹೆಸರು "ಅಮೆರಿಕ ಆನ್‌ಲೈನ್‌"ಅನ್ನು ಬಿಟ್ಟುಬಿಡುತ್ತದೆಂದು ಘೋಷಿಸಿತು; ಈಗಿರುವ ಸೇವೆಯ ಅಧಿಕೃತ ಹೆಸರು "AOL" ಹಾಗೂ ಟೈಮ್ ವಾರ್ನರ್‌ನ ಉಪವಿಭಾಗದ ಸಂಪೂರ್ಣ ಹೆಸರು "AOL, LLC".[೨೯]
  • 2006ರ ಆಗಸ್ಟ್ 2ರಂದು AOL, ಈ ಹಿಂದೆ ಅದರ ಪಾವತಿಸುವ-ಗ್ರಾಹರಿಗೆ ಮಾತ್ರ ಲಭ್ಯವಾಗಿದ್ದ ಇ-ಮೇಲ್ ಖಾತೆಗಳನ್ನು ಮತ್ತು ಸಾಫ್ಟ್‌ವೇರ್‌ಅನ್ನು ಬಿಟ್ಟುಬಿಡುತ್ತದೆಂದು ಸಾರಿತು. ಅದು ಗ್ರಾಹಕರಿಗೆ ನಾನ್-AOL-ಓನ್ಡ್ ಪ್ರವೇಶ ವಿಧಾನದ ಮೂಲಕ AOL ಅಥವಾ AOL.comಅನ್ನು ಪ್ರವೇಶಿಸಲು ಅವಕಾಶ ಒದಗಿಸಿತ್ತು.("ಥರ್ಡ್ ಪಾರ್ಟಿ ಟ್ರಾನ್ಸಿಟ್", "ನಿಮ್ಮ ಸ್ವಂತ ಪ್ರವೇಶವನ್ನು ತರುವುದು" ಅಥವಾ "BYOA") ಈ ಬದಲಾವಣೆಯನ್ನು "ವಾಲ್ಡ್ ಗಾರ್ಡನ್" ವ್ಯವಹಾರ ಮಾದರಿಯೊಂದಿಗೆ ಸಂಬಂಧಿಸಿದ ಖರ್ಚುಗಳನ್ನು ಕಡಿಮೆಗೊಳಿಸಲು ಮಾಡಲಾಯಿತು. AOL- ಸ್ವಾಮ್ಯದ ಪ್ರವೇಶದ ಬಿಂದುಗಳನ್ನು ಕಡಿಮೆಗೊಳಿಸುವ ಮೂಲಕ ಮತ್ತು ಹೆಚ್ಚು-ವೇಗದ ಇಂಟರ್ನೆಟ್‌ ಪ್ರವೇಶವನ್ನು ಹೊಂದಿರುವ ಸದಸ್ಯರನ್ನು ಗ್ರಾಹಕ-ಆಧಾರಿತ ಬಳಕೆಯಿಂದ ಅಧಿಕ ಲಾಭದಾಯಕ ಜಾಹೀರಾತು ಪೂರೈಕೆದಾರ AOL.com ಆಗಿ ಬದಲಾಯಿಸುವ ಮೂಲಕ ಸಾಧಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] ಖಾತೆಗಳನ್ನು ರದ್ದುಗೊಳಿಸಿ, ಮೈಕ್ರೊಸಾಫ್ಟ್ ಹಾಟ್‌ಮೇಲ್, ಯಾಹೂ! ಅಥವಾ ಇತರ ಇ-ಮೇಲ್ ಪೂರೈಕೆದಾರಗಳಿಗೆ ಸ್ಥಳಾಂತರ ಮಾಡುವ ಸದಸ್ಯರ ಸಂಖ್ಯೆಯನ್ನು ತಗ್ಗಿಸಲು ಶುಲ್ಕ ಪಾವತಿಯಿಂದ ಉಚಿತ ಸೇವೆಗೆ ವಿನ್ಯಾಸಗೊಳಿಸಲಾಯಿತು. AOL CEO ರಾಂಡಿ ಫಾಲ್ಕೊ ಪ್ರಕಾರ, 2007ರ ಡಿಸೆಂಬರ್‌ನಲ್ಲಿ ಪಾವತಿಸುವ ಪ್ರವೇಶದಿಂದ ಉಚಿತ ಪ್ರವೇಶವಾಗಿ ಖಾತೆಗಳನ್ನು ಬದಲಾಯಿಸಿದ ದರವು 80%ನಷ್ಟಿತ್ತು.[೩೦]
  • 2006ರ ಡಿಸೆಂಬರ್‌ನಲ್ಲಿ, ಕಾರ್ಯನಿರ್ವಹಿಸುವ ಖರ್ಚುಗಳನ್ನು ಕಡಿಮೆಗೊಳಿಸಲು AOL, U.S.-ಆಧಾರಿತ ಕಾಲ್ ಸೆಂಟರ್‌ಗಳನ್ನು ಬಳಸಿಕೊಂಡು ಗ್ರಾಹಕ-ಸೇವೆಯನ್ನು ಒದಗಿಸುವುದನ್ನು ನಿಲ್ಲಿಸಲು ನಿರ್ಧರಿಸಿತು.[ಸೂಕ್ತ ಉಲ್ಲೇಖನ ಬೇಕು] AOL ಕ್ರಮೇಣ U.S. ಸಹಯೋಗದ ಕಾರ್ಯಾಚರಣೆಗಳನ್ನೂ ಕಡಿಮೆಗೊಳಿಸಿತು. 2007ರ ಜನವರಿ 28ರಂದು, ಕೊನೆಯ ಸ್ವದೇಶದ AOL ಸ್ವಾಮ್ಯದ ಮತ್ತು ನಿರ್ವಹಣೆಯ ಕಾಲ್-ಸೆಂಟರ್ (ಓಕ್ಲಹೋಮ ನಗರದಲ್ಲಿದ್ದ)ಬಾಗಿಲು ಮುಚ್ಚಿತು.[ಸೂಕ್ತ ಉಲ್ಲೇಖನ ಬೇಕು] ಹಾಗೂ 2007ರ ಅಕ್ಟೋಬರ್‌ನಲ್ಲಿ ಕೆನಡಾದಲ್ಲಿನ ಕೊನೆಯ ಕಾಲ್-ಸೆಂಟರ್‌ನ್ನು ಸಹ ಮುಚ್ಚಲಾಯಿತು.[ಸೂಕ್ತ ಉಲ್ಲೇಖನ ಬೇಕು] ಎಲ್ಲಾ ಗ್ರಾಹಕ ಸೇವಾ ಕರೆಗಳನ್ನು ಈಗ ರೊಮೇನಿಯಾ, ಫಿಲಿಪೈನ್ಸ್ ಮತ್ತು ಭಾರತದಲ್ಲಿನ ಹೊರಗುತ್ತಿಗೆಯ ಪ್ರತಿನಿಧಿಗಳು ನಿರ್ವಹಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು]
  • 2007ರ ಸೆಪ್ಟೆಂಬರ್ 17ರಂದು, AOL ಅದರ ಕಾರ್ಪೊರೇಟ್ ಪ್ರಧಾನ-ಕಛೇರಿಗಳಲ್ಲಿ ಒಂದನ್ನು ವರ್ಜಿನಿಯಾದ ಡಲ್ಲೆಸ್‌‌ನಿಂದ ನ್ಯೂಯಾರ್ಕ್[೩೧] ಗೆ ಸ್ಥಳಾಂತರಿಸುವುದಾಗಿ ಹಾಗೂ ಅದರ ವಿವಿಧ ಜಾಹೀರಾತು ಘಟಕಗಳನ್ನು ಪ್ಲ್ಯಾಟ್‌ಫಾರ್ಮ್ A ಎಂಬ ಒಂದು ಹೊಸ ಉಪಾಂಗವಾಗಿ ಒಂದುಗೂಡಿಸುವುದಾಗಿ ಘೋಷಿಸಿತು. ಆ ಕಾರ್ಯವು ಅನೇಕ ಜಾಹೀರಾತು ಸ್ವಾಧೀನಗಳು, ಗಮನಾರ್ಹವಾಗಿ Advertising.comಸ್ವಾಧೀನಕ್ಕೆ ಕಾರಣವಾಯಿತು ಹಾಗೂ ಕಂಪೆನಿಯು ಜಾಹೀರಾತು-ಆಧಾರಿತ ವ್ಯವಹಾರ ಮಾದರಿಗಳ ಮೇಲೆ ಹೊಸದಾಗಿ ಗಮನಹರಿಸಿದ್ದನ್ನು ತೋರಿಸುತ್ತದೆ. AOL ನಿರ್ವಹಣೆಯು "ಪ್ರಮುಖ ಕಾರ್ಯಾಚರಣೆ"ಗಳು ಡಲ್ಲೆಸ್‌ನಲ್ಲಿ ಉಳಿಯುತ್ತವೆಂದು ಒತ್ತಿಹೇಳಿತು, ಅವು ಕಂಪೆನಿಯ ಪ್ರವೇಶ ಸೇವೆಗಳು ಮತ್ತು ಮೋಡೆಮ್ ಬ್ಯಾಂಕ್‌ಗಳನ್ನು ಒಳಗೊಳ್ಳುತ್ತವೆ.
  • AOL 2008ರಲ್ಲಿ ಅದರ ಬಳಕೆದಾರರಿಗೆ ನಡವಳಿಕೆಯ ಗುರಿಗಳನ್ನು ವಿವರಿಸಲು ಆನಿಮೇಟೆಡ್ ಕಾರ್ಟೂನುಗಳನ್ನು ರಚಿಸಿತು. ಇದು ಬಳಕೆದಾರರು ಇತರ ವೆಬ್‌ಸೈಟ್‌ಗಳಿಗೆ ನೀಡಿದ ಹಿಂದಿನ ಭೇಟಿಗಳು ಹೇಗೆ ಅವರು ಭವಿಷ್ಯದಲ್ಲಿ ಕಾಣಬಹುದಾದ ಜಾಹೀರಾತಿನ ಅಂಶಗಳನ್ನು ನಿರ್ಧರಿಸುತ್ತವೆ ಎಂಬುದನ್ನು ತೋರಿಸುತ್ತದೆ.[೩೨] ಆ ವರ್ಷದ ನಂತರ AOL ಖಾಸಗಿ ಸಂಶೋಧನೆಯನ್ನು ಆರಂಭಿಸಿತು ಹಾಗೂ ಆನಿಮೇಟೆಡ್ ಕಾರ್ಟೂನುಗಳ ಕಾರ್ಯಾಚಣೆಯನ್ನು ಯುನೈಟೆಡ್ ಕಿಂಗ್ಡಮ್‌ಗೆ ವಿಸ್ತರಿಸಿತು.[೩೩]
  • AOL ಉತ್ತರ ವರ್ಜಿನಿಯಾದ ಅದರ ಮೂರು ಮಾಹಿತಿ ಕೇಂದ್ರಗಳಲ್ಲಿ ಒಂದಾದ ರೆಸ್ಟಾನ್ ಟೆಕ್ನಾಲಜಿ ಸೆಂಟರ್ಅನ್ನು ಮುಚ್ಚಿತು ಹಾಗೂ ಅದನ್ನು 2008ರ ಜನವರಿಯಲ್ಲಿ CRG ವೆಸ್ಟ್‌ಗೆ ಮಾರಾಟ ಮಾಡಿತು.[೩೪] ಈ ಮಾರಾಟವು AOL ಅದರ ಉತ್ತರ ವರ್ಜಿನಿಯಾದ ಕಾರ್ಯಾಚರಣೆಗಳನ್ನು ಮೂರು ಪ್ರದೇಶಗಳಿಂದ (ಡಲ್ಲೆಸ್, ಮ್ಯಾನಸ್ಸಾಸ್, ರೆಸ್ಟಾನ್) ಎರಡಾಗಿ ಬಲಪಡಿಸಲು ಅವಕಾಶ ನೀಡಿತು. ಮೂರು ಪ್ರದೇಶಗಳನ್ನು ಎರಡಾಗಿ ಏಕೀಕರಿಸಿದ ನಂತರ AOL ಅದರ ಒಟ್ಟು ಹಾರ್ಡ್‌ವೇರ್ ಸಾಧನಗಳನ್ನು ಕಡಿಮೆಮಾಡಲು ಮತ್ತು ಅದರ ನೆಟ್‌ವರ್ಕ್ ಆಪರೇಶನ್ಸ್ ಸೆಂಟರ್‌ನ ಸಿಬ್ಬಂದಿ ಸಂಖ್ಯೆಯನ್ನು ಸರಿಯಾಗಿ ನಿರ್ಣಯಿಸಲು ಈ ಬದಲಾವಣೆಯ ಪ್ರಯೋಜನವನ್ನು ಪಡೆಯಿತು. [ಸೂಕ್ತ ಉಲ್ಲೇಖನ ಬೇಕು]
  • 2007ರಲ್ಲಿ AOL ಅದರ ಇತರ ಪ್ರಧಾನ ಕಛೇರಿಗಳಲ್ಲಿ ಒಂದನ್ನು ವರ್ಜಿನಿಯಾದ ಲೌಡೌನ್ ಕೌಂಟಿಯಿಂದ ನ್ಯೂಯಾರ್ಕ್ ನಗರಕ್ಕೆ ಸ್ಥಳಾಂತರಿಸುವುದಾಗಿ ಘೋಷಿಸಿತು; ಅದು ಅದರ ವರ್ಜಿನಿಯಾ ಕಛೇರಿಗಳನ್ನು ನಿರ್ವಹಿಸುವುದನ್ನು ಮುಂದುವರಿಸುತ್ತದೆ.[] ನ್ಯೂಯಾರ್ಕ್‌ಗೆ ಸ್ಥಳಾಂತರ ಸನ್ನಿಹಿತದ ಭಾಗವಾಗಿ ಮತ್ತು ರೆಸ್ಟಾನ್‌ನಿಂದ ಸ್ಥಳಾಂತರಗೊಂಡ ನಂತರ ಡಲ್ಲೆಸ್‌ನ ಪ್ರಧಾನ ಕಛೇರಿಯ ಸಂಕೀರ್ಣದಲ್ಲಿ ಜವಾಬ್ದಾರಿಗಳನ್ನು ಪುನರ್ರಚಿಸುವುದರ ಭಾಗವಾಗಿ, AOL CEO ರಾಂಡಿ ಫಾಲ್ಕೊ 2007ರ ಅಕ್ಟೋಬರ್ 15ರಂದು, 2007ರ ಕೊನೆಯೊಳಗೆ ಪ್ರಪಂಚದಾದ್ಯಂತ 2000 ನೌಕರರನ್ನು ತೆಗೆದುಹಾಕುವ ಯೋಜನೆಗಳು "ತಕ್ಷಣ"ದಲ್ಲಿ ಆರಂಭವಾಗುತ್ತದೆಂದು ಘೋಷಿಸಿದನು.[೩೫] ಅದೇ ಸಂಜೆ ಡಲ್ಲೆಸ್‌ನ ಸುಮಾರು 750 ನೌಕರರು ಮರುದಿನ ಬೆಳಿಗ್ಗಿನ ಸಭೆಗಳಲ್ಲಿ ಭಾಗವಹಿಸುವಂತೆ ಸೂಚನೆಗಳನ್ನು ಪಡೆದರು;[೩೬] 2007ರ ಅಕ್ಟೋಬರ್‌17ರಂದು ನೌಕರರನ್ನು ತೆಗೆದುಹಾಕಿದರೂವರ್ಕರ್ ಅಡ್ಜಸ್ಟ್‌ಮೆಂಟ್ ಆಂಡ್ ರಿಟ್ರೈನಿಂಗ್ ನೋಟಿಫಿಕೇಶನ್ ಆಕ್ಟ್‌ನ ಪ್ರಕಾರ 2007ರ ಡಿಸೆಂಬರ್ 12ರವರೆಗೆ ಸಂಬಳದಾರರ ಪಟ್ಟಿಯಲ್ಲಿ ಇರುತ್ತಾರೆ. ಮರುರಚನೆಯ ಭಾಗವಾಗಿ ತೆಗೆಯಲಾಗುವ ಇತರ ಗುಂಪಿನ ನೌಕರರಿಗೆ ಯಾವುದೇ ನೆನೆಗುದಿಗೆ ಬಿದ್ದ ಕಾರ್ಯಗಳನ್ನು ಪೂರ್ಣಗೊಳಿಸಲು 2007ರ ಡಿಸೆಂಬರ್ 14ರವರೆಗೆ ಮಾತ್ರ ಇಟ್ಟುಕೊಳ್ಳಲಾಗುತ್ತದೆ ಹಾಗೂ ಆನಂತರ ಅವರನ್ನು ತೆಗೆಯಲಾಗುತ್ತದೆಂದು 2007ರ ಅಕ್ಟೋಬರ್ 16ರಂದು ಸೂಚಿಸಲಾಯಿತು. ನೌಕರರನ್ನು ತಗ್ಗಿಸಿದ ಸಂಖ್ಯೆಯು ಎಷ್ಟು ದೊಡ್ಡದಾಗಿತ್ತೆಂದರೆ, ಡಲ್ಲಸ್ ಸಂಕೀರ್ಣದ ಪ್ರತಿಯೊಂದು ಸಮಾಲೋಚನಾ ಕೊಠಡಿಯನ್ನು ದಿನದ "ವಿಶೇಷ ಉದ್ದೇಶದ ಕೊಠಡಿ"ಯಾಗಿ ಮೀಸಲಾಗಿಡಲಾಗುತ್ತಿತ್ತು. ಅಲ್ಲಿ ಹೊರಹೋಗುವ ನೌಕರರಿಗಾಗಿ ವಜಾಗೊಳಿಸುವ ಪ್ರಕ್ರಿಯೆಯ ವಿವಿಧ ಅಂಶಗಳನ್ನು ನಡೆಸಲಾಗುತ್ತಿತ್ತು; ಡಲ್ಲೆಸ್‌ನಲ್ಲಿ ಉಳಿದ ನೌಕರರು ಸಾಮೂಹಿಕ ವಜಾಗೊಳಿಸುವಿಕೆಯನ್ನು "ಬ್ಲಡಿ ಟ್ಯೂಸ್ಡೆ" ಹೆಸರಲ್ಲಿ ಆನ್‌ಲೈನ್‌ ಬ್ಲಾಗ್‌ಗಳಲ್ಲಿ ಮತ್ತು ಸುದ್ದಿ ವರದಿಗಳಲ್ಲಿ ಅತಿಶೀಘ್ರದಲ್ಲಿ ಪ್ರಕಟಿಸಿದರು.[೩೬] ಓಹಿಯೊದ ಕೊಲಂಬಸ್‌ನ ಹಿಂದಿನ ಕಂಪ್ಯೂಸರ್ವ್‌ ಕಂಪೆನಿಯ ಅನಿರ್ದಿಷ್ಟ ಸಂಖ್ಯೆಯ ನೌಕಕರನ್ನೂ ಸಹ ತೆಗೆದುಹಾಕಲಾಯಿತು. ಅಲ್ಲದೆ ಎಲ್ಲಾ ಟಕ್ಸನ್ ಕ್ವಾಲಿಟಿ ಅನಾಲಿಸಿಸ್ ಶಾಪ್, ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನ ಹಿಂದಿನ ನೆಟ್‌ಸ್ಕೇಪ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ AOL ನೌಕರರು, ಫ್ರಾನ್ಸ್‌ನ ಅಭಿವೃದ್ಧಿ ತಂಡಗಳು ಹಾಗೂ ಕಾರ್ಯತಃ ಇಡೀಕೆನಡಾದ ನ್ಯೂ ಬ್ರೂನ್ಸ್‌ವಿಕ್‌ನ ಮಾಂಕ್ಟನ್‌ನ ಕಾಲ್ ಸೆಂಟರ್ ಸೈಟ್ ಸದಸ್ಯ ಸೇವೆಗಳನ್ನು ವಜಾಗೊಳಿಸಲಾಯಿತು. ಅಂತಿಮ ಪರಿಣಾಮವೆಂದರೆ ಗಮನಾರ್ಹ ಸಂಖ್ಯೆಯ ಸಿಸ್ಟಮ್ಸ್ ಓಪರೇಶನಲ್ ಸಿಬ್ಬಂದಿಯನ್ನೂ ಒಳಗೊಂಡಂತೆ AOLನಲ್ಲಿ ಒಟ್ಟಾರೆ ಸುಮಾರು 40%ನಷ್ಟು ಮಂದಿಯನ್ನು ವಜಾಗೊಳಿಸಲಾಯಿತು. ಹಿಂದಿನ ಭಾರಿ ಸಣ್ಣಪುಟ್ಟ ಪ್ರಮಾಣದ ಸಿಬ್ಬಂದಿ ವಜಾಗಳನ್ನು SysOpsನೌಕರರು ಎದುರಿಸಿದ್ದರು. ಈ ಬಾರಿ ಹಿಂದಿನ ವಜಾಗಳಿಗಿಂತ ಗಮನಾರ್ಹ ಬದಲಾವಣೆಯಾಗಿತ್ತು. ನೋವ ಸ್ಕೋಟಿಯಾದ ಹ್ಯಾಲಿಫ್ಯಾಕ್ಸ್‌ನ AOL ವಾಯ್ಸ್ ಸರ್ವಿಸಸ್‌ನ ತಂಡ ಮತ್ತು ವಿಶ್ಲೇಷಣೆ ಸಮೂಹಗಳಿಗೆ ಬಹುತೇಕ ಸೀಮಿತವಾದ ಹೆಚ್ಚುವರಿ ಸುತ್ತಿನ ವಜಾಗಳು 2007ರ ಡಿಸೆಂಬರ್ 11 ಮತ್ತು 12ರಂದು ಘಟಿಸಿತು.[ಸೂಕ್ತ ಉಲ್ಲೇಖನ ಬೇಕು]
  • 2008ರ ಫೆಬ್ರವರಿ 6ರಂದು ಟೈಮ್ ವಾರ್ನರ್‌ CEO ಜೆಫ್ ಬೆವ್ಕೆಸ್, ಟೈಮ್ ವಾರ್ನರ್‌ AOLನ ಇಂಟರ್ನೆಟ್‌ ಪ್ರವೇಶ ಮತ್ತು ಜಾಹೀರಾತು ವ್ಯವಹಾರವನ್ನು ಎರಡಾಗಿ ವಿಭಾಗಿಸುತ್ತದೆ ಹಾಗೂ ನಂತರ ಇಂಟರ್ನೆಟ್‌ ಪ್ರವೇಶ ವಿಭಾಗವನ್ನು ಮಾರಾಟಮಾಡುವ ಸಂಭಾವ್ಯತೆ ಇದೆ ಎಂದು ಘೋಷಿಸಿದನು.[೩೭]
  • 2009ರ ನವೆಂಬರ್ 23ರಂದು AOL ಹೊಸ ಬ್ರ್ಯಾಂಡ್ ಗುರುತಿನ ಬಗೆಗಿನ ಒಂದು ರಹಸ್ಯ ಮುನ್ನೋಟವನ್ನು ಪ್ರಕಟಿಸಿತು. ಅದು ಚಿತ್ರಗಳ (ಉದಾ. ಗೋಲ್ಡ್‌ಫಿಶ್, ಕಾಮನಬಿಲ್ಲು, ಮರ, ಅಂಚೆಕಾರ್ಡ್) ಮೇಲೆ ಅಧ್ಯಾರೋಪಿಸಿದ ಹೊಸ ಲೋಗೊ Aol. ವನ್ನು ಹೊಂದಿದೆ. ಹೊಸ ಗುರುತನ್ನು ಟೈಮ್ ವಾರ್ನರ್ AOLನಿಂದ ಪ್ರತ್ಯೇಕವಾದ ನಂತರ 2009ರ ಡಿಸೆಂಬರ್ 10ರಂದು AOLನ ಎಲ್ಲಾ ಸೇವೆಗಳ ಮೇಲೆ ವಿಧಿಸಲಾಯಿತು.

ವಿವಾದಗಳು

ಬದಲಾಯಿಸಿ

ಸಮುದಾಯ ಮುಖಂಡರು

ಬದಲಾಯಿಸಿ

2005ರ ಮಧ್ಯಾವಧಿಗಿಂತ ಮೊದಲು AOL ಚಾಟ್‌ರೂಮ್‌ಗಳು, ಸಂದೇಶ ಬೋರ್ಡ್‌ಗಳು ಮತ್ತು ಲೈಬ್ರರಿಗಳನ್ನು ನಿರ್ವಹಿಸಲು ಸಮುದಾಯ ಮುಖಂಡರು(ಕಮ್ಯೂನಿಟಿ ಲೀಡರ್) ಅಥವಾ CLಗಳೆಂಬ ಆನ್‌ಲೈನ್‌ ಸ್ವಯಂಸೇವಕರನ್ನು ಬಳಸಿಕೊಂಡಿತು. AOLನ ರಿಮೋಟ್ ಸ್ವಯಂ-ಸೇವಕರ ಬಳಕೆಯು 1985ರಲ್ಲಿ ಅದರ ಕ್ವಾಂಟಮ್ ಲಿಂಕ್ ಸೇವೆಯ ಸ್ಥಾಪನೆಯಾದಾಗ ಆರಂಭವಾಯಿತು. ಕೆಲವು ಸಮುದಾಯ ಮುಖಂಡರನ್ನು ಪ್ರೊಪ್ರೈಟರಿ ಭಾಷೆ ಮತ್ತು RAINMAN ಎನ್ನುವ ಇಂಟರ್ಫೇಸ್ಅನ್ನು ಬಳಸಿಕೊಂಡು ಪರಿವಿಡಿ ವಿನ್ಯಾಸ ಮತ್ತು ನಿರ್ವಹಣೆಗಾಗಿ ನೇಮಕ ಮಾಡಲಾಗುತ್ತಿತ್ತು. ಆದರೂ ಹೆಚ್ಚಿನ ಪರಿವಿಡಿ ನಿರ್ವಹಣೆಯನ್ನು ಪಾರ್ಟ್ನರ್ ಮತ್ತು ಆಂತರಿಕ ನೌಕರರು ಮಾಡುತ್ತಿದ್ದರು. 1999ರಲ್ಲಿ CLಗಳ ಬಳಕೆಯಲ್ಲಿ U.S.ನ ಕಾರ್ಮಿಕರ ಕಾನೂನನ್ನು ಉಲ್ಲಂಘಿಸಿದೆ ಎಂದು ಸೂಚಿಸಿ AOLನ ವಿರುದ್ಧ ಕ್ಲಾಸ್ ಆಕ್ಷನ್ ಮೊಕದ್ದಮೆಯೊಂದನ್ನು ಹೂಡಲಾಯಿತು. ಡಿಪಾರ್ಟ್ಮೆಂಟ್ ಆಫ್ ಲೇಬರ್ ವಿಚಾರಣೆ ನಡೆಸಿತು. ಆದರೆ ಯಾವುದೇ ನಿರ್ಧಾರಕ್ಕೆ ಬರದೆ ವಿಚಾರಣೆಯನ್ನು 2001ರಲ್ಲಿ ಕೊನೆಗೊಳಿಸಿತು.[೩೮] AOL 2000ರಲ್ಲಿ ಅದರ ಸ್ವಯಂ-ಸೇವಕರ ಜವಾಬ್ದಾರಿಗಳು ಮತ್ತು ಸವಲತ್ತುಗಳನ್ನು ಕ್ರಮೇಣ ಕಡಿಮೆ ಮಾಡಲು ಆರಂಭಿಸಿತು. ಕಾರ್ಯಕ್ರಮವು ಅಂತಿಮವಾಗಿ 2005ರ ಜೂನ್ 8ರಂದು ಕೊನೆಗೊಂಡಿತು. ಆ ಸಂದರ್ಭದಲ್ಲಿದ್ದ ಸಮುದಾಯ ಮುಖಂಡರಿಗೆ ಅವರ ಸೇವೆಗೆ ಪ್ರತಿಯಾಗಿ ಅವರ ಖಾತೆಗಳಿಗೆ 12 ತಿಂಗಳ ಹಣವನ್ನು ಜಮಾ ಮಾಡಲಾಯಿತು. 2010ರ ಫೆಬ್ರವರಿಯಲ್ಲಿ ಕ್ಲಾಸ್ ಆಕ್ಷನ್ ಮೊಕದ್ದಮೆಯಲ್ಲಿ ಒಂದು ಇತ್ಯರ್ಥಕ್ಕೆ ಬರಲಾಯಿತು. ಈ ಇತ್ಯರ್ಥದ ಪ್ರಕಾರ $15 ದಶಲಕ್ಷದಷ್ಟು USD ಹಣವನ್ನು ಹಿಂದಿನ 7,000ಕ್ಕಿಂತಲೂ ಹೆಚ್ಚು ಸಮುದಾಯ ಮುಖಂಡರಿಗೆ ಹಂಚುವಂತೆ ಸೂಚಿಸಲಾಗಿತ್ತು.

ಬಿಲ್ಲಿಂಗ್ ವಿವಾದಗಳು

ಬದಲಾಯಿಸಿ

ಖಾತೆಗಳು ಕಂಪೆನಿ ಅಥವಾ ಬಳಕೆದಾರರಿಂದ ರದ್ದುಗೊಂಡ ನಂತರವೂ ಗ್ರಾಹಕರಿಗೆ ಬಿಲ್-ಕಳುಹಿಸುವುದನ್ನು ನಿಲ್ಲಿಸುವಲ್ಲಿ ತುಂಬಾ ನಿಧಾನವಾಗಿದೆಯೆಂದು ಸೂಚಿಸುವ ಅನೇಕ ಮೊಕದ್ದಮೆಗಳನ್ನು AOL ಎದುರಿಸಿತು. ಇದಕ್ಕೆ ಹೆಚ್ಚುವರಿಯಾಗಿ, AOL ಕ್ಲಾಸ್ ಆಕ್ಷನ್ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ಬಳಕೆಯಾದ ನಿಮಿಷಗಳನ್ನು ಉಪಯೋಗಿಸಿಕೊಂಡು ಲೆಕ್ಕಮಾಡುವ ವಿಧಾನವನ್ನು ಬದಲಾಯಿಸಿತು. ಹಿಂದೆ AOL ಬಳಕೆದಾರನೊಬ್ಬನು ಸೇವೆಗೆ ಸಂಪರ್ಕವಾದ ಸಮಯಕ್ಕೆ ಹದಿನೈದು ಸೆಕೆಂಡುಗಳನ್ನು ಸೇರಿಸಿ, ಮುಂದಿನ ನಿಮಿಷಕ್ಕೆ ಪೂರ್ಣಾಂಕಗೊಳಿಸುತ್ತಿತ್ತು (ಆದ್ದರಿಂದ 11 ನಿಮಿಷಗಳು ಮತ್ತು 46 ಸೆಕೆಂಡುಗಳಷ್ಟು ಕಾಲ ಸೇವೆಯನ್ನು ಬಳಸಿದ ವ್ಯಕ್ತಿಗೆ 13 ನಿಮಿಷಗಳ ಶುಲ್ಕವನ್ನು ವಿಧಿಸಲಾಗುತ್ತಿತ್ತು). AOL ಇದು ಸೈನ್ ಇನ್/ಸೈನ್ ಆಫ್ ಸಮಯವನ್ನೂ ಲೆಕ್ಕಮಾಡುತ್ತದೆಂದು ವಾದಿಸಿತು. ಆದರೆ ಈ ಅಭ್ಯಾಸವು ಅದರ ಗ್ರಾಹಕರಿಗೆ ತಿಳಿದಿರಲಿಲ್ಲವಾದ್ದರಿಂದ, ಫಿರ್ಯಾದಿಗಳು ಜಯಗಳಿಸಿದರು (ಕೆಲವರು ವಿಶೇಷವಾಗಿ ಮತ್ತೊಂದು ISP ನ ಮೂಲಕ ಸಂಪರ್ಕಿಸುವಾಗ ಸೈನ್ ಇನ್ ಮತ್ತು ಸೈನ್ ಆಫ್ 15 ಸೆಕೆಂಡುಗಳನ್ನು ತೆಗೆದುಕೊಳ್ಳುವುದಿಲ್ಲವೆಂದೂ ಸೂಚಿಸಿದರು). AOL ಅದರ ಎಲ್ಲಾ ಗ್ರಾಹಕರಿಗೆ ಸಂಪರ್ಕ-ಸಮಯ ಲೆಕ್ಕಮಾಡುವ ವಿಧಾನಗಳನ್ನು ಬಹಿರಂಗಗೊಳಿಸಿತು ಹಾಗೂ ಅವರಿಗೆ ಹೆಚ್ಚುವರಿ ಉಚಿತ ಸಮಯವನ್ನು ನೀಡಿತು. ಇದಕ್ಕೆ ಹೆಚ್ಚುವರಿಯಾಗಿ AOL ಸಾಫ್ಟ್‌ವೇರ್‌, ಬಳಕೆದಾರರು ಎಷ್ಟು ಹೊತ್ತು ಸಂಪರ್ಕದಲ್ಲಿರುತ್ತಾರೆ ಮತ್ತು ಎಷ್ಟು ನಿಮಿಷಗಳ ಶುಲ್ಕವನ್ನು ಅವರಿಗೆ ವಿಧಿಸಲಾಗುತ್ತದೆ ಎಂಬುದನ್ನು ತಿಳಿಯಪಡಿಸುತ್ತದೆ. AOL ಸರಿಯಾಗಿ ಬಿಲ್-ಕಳುಹಿಸುವ ರೂಢಿಯನ್ನು ಹೊಂದಿಲ್ಲವೆಂದು ಅದರ ವಿರುದ್ಧ 2003ರ ಅಕ್ಟೋಬರ್‌ನಲ್ಲಿ ಓಹಿಯೊ ಅಟ್ಟರ್ನಿ ಜನರಲ್‌ ದಾವೆ-ಹೂಡಿದರು. ಆ ಮೊಕದ್ದಮೆಯು 2005ರ ಜೂನ್ 8ರಂದು ತೀರ್ಮಾನಗೊಂಡಿತು. AOL ಓಹಿಯೊ AG ಕಚೇರಿಯಲ್ಲಿ ದಾವೆ ಹೂಡಿದ ಯಾವುದೇ ಗ್ರಾಹಕ-ದೂರುಗಳನ್ನು ಇತ್ಯರ್ಥ ಮಾಡಲು ಒಪ್ಪಿಕೊಂಡಿತು. 2006ರ ಡಿಸೆಂಬರ್‌ನಲ್ಲಿ, ಫ್ಲೋರಿಡಾ ಗ್ರಾಹಕರ ವಿರುದ್ಧ ಫ್ಲೋರಿಡಾ ಅಟರ್ನಿ ಜನರಲ್ ಹೂಡಿದ ಮೊಕದ್ದಮೆಯನ್ನು ತೀರ್ಮಾನಿಸಿ, ಅವರಿಗೆ ಪರಿಹಾರ ನೀಡಲು AOL ಒಪ್ಪಿತು.[೩೯]

ಖಾತೆ ರದ್ದುಗೊಳಿಸುವಿಕೆ

ಬದಲಾಯಿಸಿ

ಸರಿಸುಮಾರು 300 ಗ್ರಾಹಕ-ದೂರುಗಳಿಗೆ ಪ್ರತಿಕ್ರಿಯೆಯಾಗಿ, ನ್ಯೂಯಾರ್ಕ್ ಅಟೆರ್ನಿ ಜನರಲ್‌ನ ವಿಚಾರಣಾ ಕಛೇರಿಯು AOLನ ಗ್ರಾಹಕ-ಸೇವಾ ನೀತಿಗಳ ತನಿಖೆ ನಡೆಸಲು ಆರಂಭಿಸಿತು. ಕಂಪೆನಿಯು ಇಂಟರ್ನೆಟ್‌ ಸೇವೆಯನ್ನು ರದ್ದುಗೊಳಿಸಲು ನಿರ್ಧರಿಸಿದ ಚಂದಾದಾರರನ್ನು ಉಳಿಸಿಕೊಳ್ಳುವಪ್ರಯತ್ನ ಮಾಡುವ ನೌಕರರಿಗೆ ಬಹುಮಾನ ನೀಡುವ ವ್ಯಾಪಕ ಯೋಜನೆಯನ್ನು ಹೊಂದಿದೆ ಎಂದು ಆ ತನಿಖೆಯು ಬಹಿರಂಗ ಪಡಿಸಿತು. ಅನೇಕ ಸಂದರ್ಭಗಳಲ್ಲಿ, ಅಂತಹ ಉಳಿಸಿಕೊಳ್ಳುವ ಕಾರ್ಯವನ್ನು ಚಂದಾದಾರರ ಇಷ್ಟದ ವಿರುದ್ಧ ಅಥವಾ ಅವರ ಒಪ್ಪಿಗೆಯಿಲ್ಲದೆಯೇ ಮಾಡಲಾಗಿತ್ತು. ಆ ಯೋಜನೆಯಡಿಯಲ್ಲಿ, ಸೇವೆಯನ್ನು ರದ್ದುಗೊಳಿಸಲು ಕರೆ ಮಾಡಿದ ಗ್ರಾಹಕರಲ್ಲಿ ಅರ್ಧದಷ್ಟು ಮಂದಿಯನ್ನು ಉಳಿಸುವಲ್ಲಿ ಅಥವಾ ಅವರ ಮನವೊಲಿಸುವಲ್ಲಿ ಯಶಸ್ವಿಯಾದ ಗ್ರಾಹಕ-ಸೇವಾ ಸಿಬ್ಬಂದಿ ಹತ್ತಾರು ಸಾವಿರ ಡಾಲರ್‍‌ಗಳಷ್ಟು ಮೌಲ್ಯದ ಬೋನಸ್‌ಗಳನ್ನು ಪಡೆದರು. ಅನೇಕ ವರ್ಷಗಳವರೆಗೆ ಗ್ರಾಹಕ ಪ್ರತಿನಿಧಿಗಳಿಗೆ ಕನಿಷ್ಠ ಉಳಿಸಿಕೊಳ್ಳುವ ಶೇಖಡಾವಾರುಗಳನ್ನು ಸ್ಥಾಪಿಸಿತು.ಇದನ್ನು ಗ್ರಾಹಕ ಪ್ರತಿನಿಧಿಗಳು ಪೂರೈಸಬೇಕೆಂದು ನಿರೀಕ್ಷಿಸಲಾಗಿತ್ತು. ಈ ಬೋನಸ್‌ಗಳು ಮತ್ತು ಅವುಗಳೊಂದಿಗೆ ಉಳಿಸುವ ಕನಿಷ್ಠ ದರಗಳು ನೌಕರರು, ಗ್ರಾಹಕರಿಗೆ ರದ್ದುಗೊಳಿಸುವ ಆಯ್ಕೆಯನ್ನು ಮಾನ್ಯ ಮಾಡದ ಹಾಗೆ ಅಥವಾ ರದ್ದುಗೊಳಿಸುವಿಕೆಯನ್ನು ಅತಿ ಹೆಚ್ಚು ಕಷ್ಟಗೊಳಿಸುವ ಹಾಗೆ ಪರಿಣಾಮ ಬೀರಿದವು. ಸೇವೆಯನ್ನು ರದ್ದುಗೊಳಿಸಿ, ಬಿಲ್-ಕಳುಹಿಸುವುದನ್ನು ನಿಲ್ಲಿಸುವ ಬೇಡಿಕೆಗಳನ್ನು AOL ಸಿಬ್ಬಂದಿಗಳು ನಿರಾಕರಿಸಿದ್ದಾರೆಂದು ಅನೇಕ ಗ್ರಾಹಕರು ದೂರಿದ್ದಾರೆ. 2005ರ ಆಗಸ್ಟ್ 24ರಂದು ಅಮೆರಿಕ ಆನ್‌ಲೈನ್‌, ನ್ಯೂಯಾರ್ಕ್ ನಗರಕ್ಕೆ $1.25 ದಶಲಕ್ಷದಷ್ಟು ಪಾವತಿಸಲು ಒಪ್ಪಿಕೊಂಡಿತು ಹಾಗೂ ಅದರ ಗ್ರಾಹಕ-ಸೇವಾ ಕಾರ್ಯಗಳನ್ನು ಪುನಃರೂಪಿಸಿತು. ಈ ಒಪ್ಪಂದದಡಿಯಲ್ಲಿ, ಗ್ರಾಹಕ-ಸೇವಾ ಪ್ರತಿನಿಧಿಗಳು ಬೋನಸ್‌ ಪಡೆಯುವುದಕ್ಕಾಗಿ ಗ್ರಾಹಕರನ್ನು ಉಳಿಸಲು ಕನಿಷ್ಠ ಕೋಟಾ ಪೂರೈಸುವುದು AOLಗೆ ಅವಶ್ಯಕತೆ ಇರಲಿಲ್ಲ.[೪೦] 2006ರ ಜೂನ್ 13ರಂದು, ವಿನ್ಸೆಂಟ್ ಫೆರಾರಿ ಎಂಬುವವನು ಅವನ ಖಾತೆ ರದ್ದುಗೊಳಿಸುವ ಬಗೆಗಿನ ಫೋನ್ ಕರೆಯ ಬಗ್ಗೆ ಬ್ಲಾಗ್‌ನಲ್ಲಿ ಪ್ರಕಟಿಸಿದನು Archived 2010-12-31 ವೇಬ್ಯಾಕ್ ಮೆಷಿನ್ ನಲ್ಲಿ., ಅದರಲ್ಲಿ ಅವನು ಹಿಂದೆ ಬ್ರಾಡ್‌ಬ್ಯಾಂಡ್ ವರ್ಷಗಳಿಗೆ ಬದಲಾವಣೆಗೊಂಡಿದ್ದನೆಂದು ಸೂಚಿಸಿದ್ದಾನೆ. ರೆಕಾರ್ಡ್ ಆದ ಫೋನ್ ಕರೆಯಲ್ಲಿ, 30-ವರ್ಷದ ಫೆರಾರಿಯು ಅದರಲ್ಲಿ AOL ಸಮಯವು ಯಾಕೆ ಇನ್ನೂ ದಾಖಲಾಗುತ್ತಿದೆಯೆಂದು ಹೇಳುವವರೆಗೆ AOL ಪ್ರತಿನಿಧಿಯು ಖಾತೆಯನ್ನು ರದ್ದುಗೊಳಿಸಲು ನಿರಾಕರಿಸಿದನು. AOL ಸಾಫ್ಟ್‌ವೇರ್‌ ಕಂಪ್ಯೂಟರ್‌ನಲ್ಲಿ ಅದುವರೆಗೂ ಇನ್‌ಸ್ಟಾಲ್ ಸಹ ಆಗಿಲ್ಲವೆಂದು ಫೆರಾರಿ ಸೂಚಿಸಿದನು. ಫೆರಾರಿಯು ಯಾವುದನ್ನೂ ಲೆಕ್ಕಿಸದೆ ಖಾತೆಯನ್ನು ರದ್ದುಗೊಳಿಸುವಂತೆ ಕೋರಿಕೊಂಡಾಗ, AOL ಪ್ರತಿನಿಧಿಯು ಖಾತೆಯು-ಸರಿಹೊಂದುವ ಫೆರಾರಿಯ ತಂದೆಯೊಂದಿಗೆ ಮತ್ತೊಮ್ಮೆ ಮಾತನಾಡುವಂತೆ ಆತನಿಗೆ ಹೇಳಿದನು. ಆ ಮಾತುಕತೆಯು CNBC ಯಲ್ಲಿ ಪ್ರಸಾರವಾಯಿತು. CNBC ವರದಿಗಾರರು AOLನ ಖಾತೆಯನ್ನು ರದ್ದುಗೊಳಿಸಲು ಪ್ರಯತ್ನಿಸಿದಾಗ, ಅವರ ಸಂಭಾಷಣೆ ಸ್ಥಗಿತಗೊಳಿಸಲಾಯಿತು ಹಾಗೂ ಅಂತಿಮವಾಗಿ ಖಾತೆಯನ್ನು ರದ್ದುಗೊಳಿಸಲು 45 ನಿಮಿಷಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿತು.[೪೧] 2006ರ ಜುಲೈ 19ರಂದು, AOLನ ಸಂಪೂರ್ಣವಾಗಿ ಉಳಿಸಿಕೊಂಡಿರುವುದರ ಬಗೆಗಿನ ಕೈಪಿಡಿಯು ಇಂಟರ್ನೆಟ್‌‌ನಲ್ಲಿ ಬಿಡುಗಡೆಗೊಂಡಿತು.[೪೨] (7MB PDF). 2006ರ ಆಗಸ್ಟ್ 3ರಂದು ಟೈಮ್ ವಾರ್ನರ್‌ ಕಂಪೆನಿಯು AOL ನ ಉಳಿಸಿಕೊಳ್ಳುವ ಕೇಂದ್ರಗಳನ್ನು ವಿಸರ್ಜನೆ ಮಾಡುವುದೆಂದು ಪ್ರಕಟಿಸಿತು, ಏಕೆಂದರೆ ಅದರ ಲಾಭಗಳು $1 ಶತಕೋಟಿಯಷ್ಟು ವೆಚ್ಚಗಳ ಕಡಿತವನ್ನು ಆಧರಿಸಿತ್ತು. ಕಂಪೆನಿಯು ನಂತರದ ವರ್ಷದಲ್ಲಿ ಆರು ದಶಲಕ್ಷಕ್ಕಿಂತಲೂ ಹೆಚ್ಚು ಚಂದಾದಾರರನ್ನು ಕಳೆದುಕೊಳ್ಳುತ್ತದೆಂದು ಅಂದಾಜಿಸಿತು.[೪೩]

ಡಿಸ್ಕ್‌ಗಳ ನೇರ ಮಾರಾಟ

ಬದಲಾಯಿಸಿ

2006 ರಿಂದ ಹಿಂದೆ, AOL ಅದರ ಸಾಫ್ಟ್‌ವೇರ್‌ಅನ್ನು ಹೊಂದಿರುವ CD-ROMಗಳ (ಮತ್ತು ಹಿಂದಿನ 312ಫ್ಲಾಪಿ ಡಿಸ್ಕ್‌ಗಳು) ಬಗೆಗಿನ ಕೋರದ ಭಾರೀ ನೇರ ಮೇಲ್‌ಗಾಗಿ ಅತಿ ಪ್ರಸಿದ್ಧವಾಗಿತ್ತು. ಇಂತಹ ಮಾರಾಟ ಮಾಡುವ ತಂತ್ರದಲ್ಲಿ ಅವೆಲ್ಲಾ ಹೆಚ್ಚು ರೂಢಿಯಲ್ಲಿರುವ ಬಳಕೆಯಾಗಿವೆ. ಅಲ್ಲದೆ ಅದು ಅಭಿಯಾನದ ಪರಿಸರ ವೆಚ್ಚದಿಂದಾಗಿ ಟೀಕೆಗಳನ್ನು ಎದುರಿಸಿತು.[೪೪]

ಸಾಫ್ಟ್‌ವೇರ್

ಬದಲಾಯಿಸಿ
  • 2000ರಲ್ಲಿ AOL $8 ಶತಕೋಟಿಯಷ್ಟು ಮೌಲ್ಯದ ಮೊಕದ್ದಮೆಯನ್ನು ಎದುರಿಸಿತು. ಅದರಲ್ಲಿ AOL 5.0 ಸಾಫ್ಟ್‌ವೇರ್‌ ಥರ್ಡ್-ಪಾರ್ಟಿ ಇಂಟರ್ನೆಟ್‌ ಸೇವೆ ಪೂರೈಕೆದಾರ ಸಂಸ್ಥೆಗಳ ಬಳಕೆಗೆ ಪ್ರಯತ್ನಿಸುವ ಬಳಕೆದಾರರಿಗೆ ಗಮನಾರ್ಹ ಸಮಸ್ಯೆಗಳನ್ನು ಉಂಟುಮಾಡಿದೆಯೆಂಬ ಆಪಾದನೆಗೊಳಗಾಯಿತು. ಮೊಕದ್ದಮೆಯ ಸಂದರ್ಭದಲ್ಲಿ ಸೂಚಿಸಲಾದ ಸಾಫ್ಟ್‌ವೇರ್‌ಅನ್ನು ಡೌನ್‌ಲೋಡ್ ಮಾಡಿದ ಪ್ರತಿಯೊಬ್ಬ ಬಳಕೆದಾರನಿಗೆ ಮೊಕದ್ದಮೆಯಲ್ಲಿ ಸುಮಾರು $1000ದಷ್ಟು ಹಾನಿಪರಿಹಾರವನ್ನು ಕೋರಲಾಯಿತು. AOL ನಂತರ ತನ್ನ ತಪ್ಪನ್ನು ಅಂಗೀಕರಿಸದೇ $15 ದಶಲಕ್ಷದ ಪರಿಹಾರಕ್ಕೆ ಒಪ್ಪಿತು.[೪೫] ಈಗ AOL ಸಾಫ್ಟ್‌ವೇರ್‌, ಮ್ಯಾಕ್ OS X ಅಲ್ಲಿ AOL ಡೈಯಲರ್ ಅಥವಾ AOL ಕನೆಕ್ಟ್ ಎನ್ನುವ ಒಂದು ವೈಶಿಷ್ಟ್ಯವನ್ನು ಹೊಂದಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಸಂಪೂರ್ಣ ಇಂಟರ್ಫೇಸ್ ಅನ್ನು ಓಡಿಸದೇ ISP ಗೆ ಸಂಪರ್ಕಿಸಲು ಅನುವು ಮಾಡುತ್ತದೆ. ಇದು ಬಳಕೆದಾರರಿಗೆ, ವಿಶೇಷವಾಗಿ ಅವರು AOL ಬ್ರೌಸರ್‌ ಅನ್ನು ಬಳಸಲು ಇಷ್ಟಪಡದಿದ್ದರೆ, ಅವರು ಬಯಸುವ ಅನ್ವಯಿಕ ತಂತ್ರಾಂಶಗಳನ್ನು ಉಪಯೋಗಿಸಲು ಅವಕಾಶ ಮಾಡಿಕೊಡುತ್ತದೆ.
  • AOL 9.0 ಒಮ್ಮೆ ಬಹಿರಂಗಪಡಿಸದೆ ಹೆಚ್ಚುವರಿ ಸಾಫ್ಟ್‌ವೇರ್‌ ಅನ್ನು ಇನ್‌ಸ್ಟಾಲ್ ಮಾಡಿದ್ದಕ್ಕಾಗಿ ಹಾಗೂ ಬ್ರೌಸರ್ ಆದ್ಯತೆಗಳು, ಟೂಲ್‌ಬಾರ್‌ಗಳು ಮತ್ತು ಐಕಾನ್‌ಗಳನ್ನು ಮಾರ್ಪಡಿಸಿದ್ದಕ್ಕಾಗಿ ಸ್ಪಾಪ್‌ಬ್ಯಾಡ್‌ವೇರ್‌ನಿಂದ ತನಿಖೆಯಡಿಯಲ್ಲಿರುವುದಾಗಿ [೪೬] ಗುರುತಿಸಲ್ಪಟ್ಟಿತು. ಆದರೂ AOL 9.0 VR (ವಿಸ್ತಾ ರೆಡಿ) 2007ರ ಜನವರಿ 26ರಂದು ಬಿಡುಗಡೆಯಾದ ನಂತರ, ಇದು AOL ಸಾಫ್ಟ್‌ವೇರ್‌ನಲ್ಲಿ ಮಾಡಿದ ಪರಿವರ್ತನೆಗಳಿಂದಾಗಿ ಬ್ಯಾಡ್‌ವೇರ್‌ನ್ನು ಪರಿಗಣಿಸಲಿಲ್ಲ.[೪೭]

ಯೂಸ್‌ನೆಟ್ ಸುದ್ದಿಗುಂಪುಗಳು

ಬದಲಾಯಿಸಿ

AOL 1993ರಲ್ಲಿ ಯೂಸ್‌ನೆಟ್‌ಗೆ ಗ್ರಾಹಕ-ಪ್ರವೇಶವನ್ನು ನೀಡಿದಾಗ, ಅದು ಪ್ರಮಾಣಿತ ಪಟ್ಟಿ ವೀಕ್ಷಣೆಯಲ್ಲಿ ಕನಿಷ್ಠ ಒಂದು ಸುದ್ದಿಗುಂಪನ್ನು ಮರೆಯಾಗಿರಿಸಿತು: alt.aol-sucks . AOL ಸುದ್ದಿಗುಂಪನ್ನು ಪರ್ಯಾಯ ವಿವರಣಾ ವೀಕ್ಷಣೆಯಲ್ಲಿ ಪಟ್ಟಿಮಾಡಿತು. ಆದರೆ ವಿವರಣೆಯನ್ನು "ಅಮೆರಿಕ ಆನ್‌ಲೈನ್‌ ಬಗೆಗಿನ ಟೀಕೆ ಮತ್ತು ದೂರು"ಗಳಾಗಿ ಬದಲಾಯಿಸಿತು. ಯೂಸ್‌ನೆಟ್ ಸುದ್ದಿಗುಂಪುಗಳನ್ನು ಕೂಡಿಕೊಂಡಿರುವ AOL ಗ್ರಾಹಕರೊಂದಿಗೆ, ಪ್ರಸ್ತುತವಿದ್ದ ಬಳಕೆದಾರರ ನೆಲೆಯು AOL ಮತ್ತು ಅದರ ಗ್ರಾಹಕರ ಬಗ್ಗೆ ಬಲವಾದ ಅನಾಸಕ್ತಿ ತೋರಿಸಲು ಆರಂಭಿಸಿತು. ಈ ಹೊಸ ಸ್ಥಿತಿಯನ್ನು ಎಟರ್ನಲ್ ಸೆಪ್ಟೆಂಬರ್ ಎಂದು ಸೂಚಿಸಿದರು. ನಂತರ AOL 2005ರ ಜೂನ್ 25ರಂದು ಯೂಸ್‌ನೆಟ್‌ಗೆ ಪ್ರವೇಶ ಒದಗಿಸುವುದನ್ನು ರದ್ದುಗೊಳಿಸಿತು.[೪೮] ಯೂಸ್‌ನೆಟ್ ಪ್ರವೇಶವನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ಅಧಿಕೃತ ವಿವರಗಳನ್ನು ನೀಡಲಿಲ್ಲ. ಬಳಕೆದಾರರರಿಗೆ ಯೂಸ್‌ನೆಟ್ ಸೇವೆಗಳಿಗೆ ಥರ್ಡ್-ಪಾರ್ಟಿ ಗೂಗಲ್‌ ಗ್ರೂಪ್ಸ್‌ನಿಂದ ಪ್ರವೇಶ ಪಡೆಯುವಂತೆ ಸೂಚನೆಯನ್ನು ಮಾತ್ರ ಒದಗಿಸಿತು. ಪ್ರಸ್ತುತ AOL ಯೂಸ್‌ನೆಟ್‌ನ ಬದಲಿಗೆ ಸಮುದಾಯ-ಆಧಾರಿತ ಮೆಸೇಜ್ ಬೋರ್ಡ್ಸ್ಅನ್ನು ಒದಗಿಸುತ್ತಿದೆ.

ಸೇವೆಯ ನಿಬಂಧನೆಗಳು (ಟರ್ಮ್ಸ್ ಆಫ್ ಸರ್ವಿಸ್) (TOS)

ಬದಲಾಯಿಸಿ

AOL ಬಳಕೆದಾರರಿಗಾಗಿ ಅವರ ಸೇವೆಗಳಲ್ಲಿ ಅನೇಕ ವಿವರವಾದ ಮಾರ್ಗದರ್ಶನಗಳು ಮತ್ತು ನಿರೀಕ್ಷೆಗಳನ್ನು ಹೊಂದಿದೆ. ಅವನ್ನು ಸೇವೆಯ ನಿಬಂಧನೆಗಳು (TOS, UKಯಲ್ಲಿ ಕಂಡೀಷನ್ಸ್ ಆಫ್ ಸರ್ವಿಸ್ (ಸೇವೆಯ ನಿಮಯಗಳು) ಅಥವಾ COS ಎಂದೂ ಕರೆಯುತ್ತಾರೆ) ಎಂದು ಕರೆಯಲಾಗುತ್ತದೆ. ಇದನ್ನು ಮೂರು ವಿವಿಧ ವಿಭಾಗಗಳಾಗಿ ಬೇರ್ಪಡಿಸಲಾಗಿದೆ: ಸದಸ್ಯರ ಒಪ್ಪಂದ , ಸಮುದಾಯ ಮಾರ್ಗದರ್ಶನಗಳು ಮತ್ತು ಗೋಪ್ಯತೆಯ ನಿಯಮಗಳು .[೪೯][೫೦] ಈ ಎಲ್ಲಾ ಮೂರು ಒಪ್ಪಂದಗಳನ್ನು ಬಳಕೆದಾರರೊಂದಿಗೆ ನೋಂದಣಿಯ ಸಂದರ್ಭದಲ್ಲಿ ಮಾಡಲಾಗುತ್ತದೆ ಹಾಗೂ ಅಂಕಿಯ ಒಪ್ಪಿಗೆಯನ್ನು ಅವರು AOL ಸೇವೆಯನ್ನು ಪ್ರವೇಶಿಸುವಾಗ ಪಡೆಯಲಾಗುತ್ತದೆ. AOL ಬಳಕೆದಾರರ ವರ್ತನೆಯನ್ನು ನಿಯಂತ್ರಿಸುವ ನಿಯಮಗಳ ಬಗ್ಗೆ ಅನೇಕ ದೂರುಗಳಿವೆ. ಕೆಲವು ಬಳಕೆದಾರರು TOS ಅನ್ನು ಒಪ್ಪುವುದಿಲ್ಲ. ಈ ಮಾರ್ಗದರ್ಶನಗಳು ಅನುಸರಿಸಲು ತುಂಬಾ ಕಟ್ಟುನಿಟ್ಟಾಗಿವೆ ಹಾಗೂ ಬಳಕೆದಾರರ ಗಮನಕ್ಕೆ ಬರದೆ TOS ಬದಲಾವಣೆಯಾಗಬಹುದೆಂದು ಉಲ್ಲೇಖಿಸುತ್ತಾರೆ. ಇದಕ್ಕೆ ಒಂದು ಗಮನಾರ್ಹ ಕಾರಣವೆಂದರೆ AOLನ ಅಭಿವೃದ್ಧಿಯ ಆರಂಭಿಕ ವರ್ಷಗಳ ಸಂದರ್ಭದಲ್ಲಿ ಬಳಕೆದಾರರು-ರಚಿಸಿದ ಪರಿವಿಡಿಗೆ ವಿಧಿಸಿದ ಸೆನ್ಸರ್‌ಶಿಪ್ ಎಂದು ಆರೋಪಿಸಲಾಗಿದೆ.[೫೧][೫೨][೫೩][೫೪]

ಪ್ರಮಾಣೀಕೃತ ಈ-ಮೇಲ್

ಬದಲಾಯಿಸಿ

2005ರ ಆರಂಭದಲ್ಲಿ, AOL ಗುಡ್‌ಮೇಲ್ ಎನ್ನುವ ಒಂದು ಪ್ರಮಾಣೀಕೃತ ಇ-ಮೇಲ್ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವ ಉದ್ದೇಶವನ್ನು ಹೊಂದಿರುವುದಾಗಿ ಸೂಚಿಸಿತು. ಇದು ಕಂಪೆನಿಗಳಿಗೆ ಮೊದಲಿನಿಂದಲೂ ವ್ಯವಹಾರ ಸಂಬಂಧಗಳನ್ನು ಹೊಂದಿರುವ ಬಳಕೆದಾರರಿಗೆ ಇಮೇಲ್ ಕಳುಹಿಸಲು ಅವಕಾಶ ಮಾಡಿಕೊಡುತ್ತದೆ. ಇಮೇಲ್ ನಂಬಿಕಸ್ಥ ಮೂಲದಿಂದ ಬರುತ್ತಿದೆ ಎಂಬ ಸ್ಪಷ್ಟ ಸೂಚನೆಯೊಂದಿಗೆ ಮತ್ತು ಇಮೇಲ್ ಸಂದೇಶಗಳು ತಡೆಯಾಗಬಹುದೆಂಬ ಅಥವಾ ಸ್ಪಾನ್ ಫಿಲ್ಟರ್‌ಗಳಿಂದ ಕಳೆದುಹೋಗಬಹುದೆಂಬ ಅಪಾಯವಿಲ್ಲದೆ ಇಮೇಲ್ ಕಳುಹಿಸಲು ಇದು ಅನುವು ಮಾಡುತ್ತದೆ. ಈ ನಿರ್ಧಾರವು ಮೂವ್ಆನ್‌ ಮತ್ತು EFFನಿಂದ ಟೀಕೆಗೊಳಗಾಯಿತು. ಮೂವ್ಆನ್ ಅದನ್ನು "ಇ-ಮೇಲ್ ಟ್ಯಾಕ್ಸ್" ಎಂದು ಹಾಗೂ EFF ಇದನ್ನು ಲಾಭವಿಲ್ಲದ ಸುಲಿಗೆಯೆಂದು ನಿರೂಪಿಸಿದೆ.[೫೫] Dearaol.com ಎಂಬ ಒಂದು ವೆಬ್‌ಸೈಟ್ ಒಂದು ಆನ್‌ಲೈನ್‌ ಕೋರಿಕೆ ಮತ್ತು ಬ್ಲಾಗ್ ಒಂದಿಗೆ ಬಿಡುಗಡೆಗೊಂಡಿತು. ಆ ಬ್ಲಾಗ್ AOL ನ ಗುಡ್‌ಮೇಲ್ ಬಳಕೆಯನ್ನು ವಿರೋಧಿಸುವ ಹಲವಾರು ಮಂದಿಯಿಂದ ಮತ್ತು ಸಂಸ್ಥೆಗಳಿಂದ ನೂರಾರು ಸಹಿಗಳನ್ನು ಪಡೆಯಿತು. ಎಸ್ತರ್ ಡೈಸನ್ ಈ ನಿರ್ಧಾರವನ್ನು ನ್ಯೂಯಾರ್ಕ್ ಟೈಮ್ಸ್ ‌ನ ಸಂಪಾದಕ ಬರಹದಲ್ಲಿ ಹೀಗೆಂದು ಸಮರ್ಥಿಸಿದ್ದಾನೆ - "ಗುಡ್‌ಮೇಲ್ ಯಶಸ್ಸಾಗುತ್ತದೆಂದು ನಾನು ಭಾವಿಸುತ್ತೇನೆ. ಅದು ಹಲವಾರು ಪೈಪೋಟಿಗಳನ್ನು ಹೊಂದಿದೆ. ಅದು ಮತ್ತು ಅದರ ಪ್ರತಿಸ್ಪರ್ಧಿಗಳು ಅಂತಿಮವಾಗಿ ಮೇಲ್ ಸ್ವೀಕೃತರ ಆಸಕ್ತಿಗಳನ್ನು ನೇರವಾಗಿ ನಿರ್ವಹಿಸುವ ಸೇವೆಗಳಾಗಿ ಬದಲಾಗುತ್ತವೆಯೆಂದು ನಾನು ಭಾವಿಸುತ್ತೇನೆ. ಶುಲ್ಕಗಳು ಗುಡ್‌ಮೇಲ್ ಮತ್ತು EON ಗೆ ಹೋಗುವುದರ ಬದಲಿಗೆ, ಅವು ವೈಯಕ್ತಿಕ ಸ್ವೀಕೃತಗಾರರೊಂದಿಗೂ ಹಂಚಿಕೆಯಾಗುತ್ತದೆ."[೫೬] ಆಂಟಿಸ್ಪ್ಯಾಮ್ ಮತ್ತು ಬ್ಲಾಗಿಂಗ್ ಸಮುದಾಯದ ಇತರ ಸದಸ್ಯರು moveon.orgಮತ್ತು EFFಇದಕ್ಕೆ ಸುಲಿಗೆಯ ಲಕ್ಷಣ ನೀಡಿದ ಪ್ರಯತ್ನಗಳನ್ನು ಟೀಕಿಸಿದರು. ಟೆಕ್ನಾಲಜಿ ಲಿಬರೇಶನ್ ಫ್ರಂಟ್ Archived 2008-08-07 ವೇಬ್ಯಾಕ್ ಮೆಷಿನ್ ನಲ್ಲಿ.‌ನ ಟಿಮ್ ಲೀ ಒಂದು ಲೇಖನವನ್ನು ಪ್ರಕಟಿಸಿದನು. ಅದು ಖಾಸಗಿ ಕಂಪೆನಿಗಳೊಂದಿಗೆ ವ್ಯವಹರಿಸುವಾಗ EFFನ ಘರ್ಷಣೆಯ ಮನೋಭಾವವನ್ನು ಪ್ರಶ್ನಿಸಿತು. ಲೀಯ ಬರಹವು ಡೆಕ್ಲಾನ್ ಮ್ಯಾಕ್‌ಕುಲ್ಲಾಘ್‌ನ ಪಾಲಿಟೆಕ್‌ಬಾಟ್ ಮೇಲ್-ಮಾಡುವ ಪಟ್ಟಿಯಲ್ಲಿ EFFಯ ಡ್ಯಾನಿ ಒಬ್ರೀನ್ ಮತ್ತು ಆಂಟಿಸ್ಪ್ಯಾಮರ್ ಸುರೇಶ್ ರಾಮಸುಬ್ರಮಣ್ಯನ್ ಮಧ್ಯೆ ಈ ವಿಷಯದ ಬಗ್ಗೆ ಅನೇಕ ಚರ್ಚೆ Archived 2006-04-25 ವೇಬ್ಯಾಕ್ ಮೆಷಿನ್ ನಲ್ಲಿ. ಗಳನ್ನು ಉದಾಹರಿಸಿತು. ರಾಮಸುಬ್ರಮಣ್ಯನ್ ಗುಡ್‌ಮೇಲ್ ಅನ್ನು ವಿರೋಧಿಸುವ EFF ನ ತಂತ್ರಗಳನ್ನು ಪ್ರಜಾಪ್ರಭುತ್ವ ರಾಜಕೀಯ ಚತುರ ಕಾರ್ಲ್ ರೋವ್‌ ಬಳಸಿದ ತಂತ್ರೋಪಾಯಗಳೊಂದಿಗೆ ಹೋಲಿಸಿದ್ದಾನೆ. ಸ್ಪ್ಯಾಮೇಸ್ಸೇಸ್ಸಿನ್ ಅಭಿವೃದ್ಧಿಕಾರ ಜಸ್ಟಿನ್ ಮ್ಯಾಸನ್, ಈ ಯೋಜನೆಯ ಬಗ್ಗೆ ವಿರೋಧದಲ್ಲಿ EFF ನ ಮತ್ತು ಮೂವ್‌ಆನ್‌ ಮಿತಿಮೀರಿ ಹೋಗುತ್ತಿರುವುದನ್ನು ಟೀಕಿಸಿದ್ದಾರೆ. dearaol.com ಚಳವಳಿಯು ಆವೇಗ ಕಳೆದುಕೊಂಡು ಕಣ್ಮರೆಯಾಯಿತು. ಇದು ಈಗಿಲ್ಲದ dearaol.com ಬ್ಲಾಗ್‌‌ನಲ್ಲಿ 2006ರ ಮೇ 9ರಂದು ಕೊನೆಯ ಪೋಸ್ಟ್—"AOL ಸ್ಟಾರ್ಟ್ಸ್ ದಿ ಶೇಕ್‌ಡೌನ್"ಅನ್ನು ಪ್ರಕಟಿಸಿತು.

ಶೋಧಕ ದತ್ತಾಂಶ

ಬದಲಾಯಿಸಿ

2006ರ ಆಗಸ್ಟ್ 4ರಂದು AOL, ಸುಮಾರು 650,000 ಬಳಕೆದಾರರಿಗೆ ಇಪ್ಪತ್ತು ದಶಲಕ್ಷ ಹುಡುಕಾಟದ ಮುಖ್ಯ-ಪದಗಳನ್ನು ಹೊಂದಿರುವ ಅದರ ಒಂದು ವೆಬ್‌ಸೈಟ್‌ನಲ್ಲಿ 2006ರ ಮಾರ್ಚ್ 1ರಿಂದ ಮೇ 31ರವರೆಗೆ ಸುಮಾರು 3-ತಿಂಗಳ ಅವಧಿಯಲ್ಲಿ ಸಂಶೋಧನಾ ಕಾರಣಗಳಿಗಾಗಿ ಸಂಕುಚಿತ ಟೆಕ್ಸ್ಟ್ ಫೈಲ್ಅನ್ನು ಬಿಡುಗಡೆಗೊಳಿಸಿತು. AOL ಆ ಫೈಲ್ ಅನ್ನು ಸಾರ್ವಜನಿಕ ಪ್ರವೇಶದಿಂದ ಆಗಸ್ಟ್ 7ರಂದು ಹಿಂತೆಗೆದುಕೊಂಡಿತು. ಆದರೆ ಅಷ್ಟರೊಳಗೆ ಇತರರು ಅದನ್ನು ಇಂಟರ್ನೆಟ್‌‌ನಲ್ಲಿ ವ್ಯಾಪಕವಾಗಿ ಹಂಚಿಕೆ ಮಾಡಿದರು. ಎ ಪಿಕ್ಚರ್ ಆಫ್ ಸರ್ಚ್ Archived 2006-08-19 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಶೀರ್ಷಿಕೆಯ ಉತ್ಪನ್ನ-ಸಂಶೋಧನೆಯನ್ನು ಪಾಸ್, ಚೌಧರಿ ಮತ್ತು ಟಾರ್ಗೆಸನ್ ಲೇಖಕರು ದಿ ಫರ್ಸ್ಟ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಆನ್ ಸ್ಕೇಲೇಬಲ್ ಇನ್ಫರ್ಮೇಶನ್ ಸಿಸ್ಟಮ್ಸ್‌ Archived 2011-09-27 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ಪ್ರಕಟಿಸಿದರು. ದತ್ತಾಂಶವು AOLstalker Archived 2006-10-19 ವೇಬ್ಯಾಕ್ ಮೆಷಿನ್ ನಲ್ಲಿ. ಮೊದಲಾದ ವೆಬ್‌ಸೈಟ್‌ಗಳಿಂದ ಮನರಂಜನಾ ಕಾರಣಗಳಿಗಾಗಿ ಬಳಸಲಾಗುತ್ತಿದೆ. ಅಲ್ಲಿ AOLstalker ನ ಬಳಕೆದಾರರು ಹುಡುಕಾಟದಿಂದ ಬಹಿರಂಗಗೊಂಡ ವೈಯಕ್ತಿಕ ವಿವರಗಳ ಹಾಸ್ಯಮಯತೆಯ ಆಧಾರದಲ್ಲಿ AOL ಗ್ರಾಹಕರ ಬಗ್ಗೆ ನಿರ್ಣಯಿಸಲು ಪ್ರೋತ್ಸಾಹಿಸಲಾಗುತ್ತದೆ.

ಬಳಕೆದಾರರ ಪಟ್ಟಿ ಪ್ರಕಟಿಸುವಿಕೆ

ಬದಲಾಯಿಸಿ

AOL ನೌಕರ ಜ್ಯಾಸನ್ ಸ್ಮಾಥರ್ಸ್ ಅಮೆರಿಕ ಆನ್‌ಲೈನ್‌ನ 92 ದಶಲಕ್ಷ ಸ್ಕ್ರೀನ್ ಹೆಸರುಗಳನ್ನು ಕದ್ದು, ಅದನ್ನು ಅಜ್ಞಾತ ಸ್ಪ್ಯಾಮರ್‌ಗಳಿಗೆ ಮಾರಾಟ ಮಾಡಿದ್ದಕ್ಕೆ ತಪ್ಪಿತಸ್ಥನೆನಿಸಿದ.[೫೭][೫೮]

ಕಂಪೆನಿ ಖರೀದಿಗಳು

ಬದಲಾಯಿಸಿ

ಕಂಪೆನಿ ಮಾರಾಟಗಳು

ಬದಲಾಯಿಸಿ

AOL (ಟೈಮ್ ವಾರ್ನರ್‌) ಅದರ ಅನೇಕ ಉಪ-ಕಂಪೆನಿಗಳನ್ನು ಯುರೋಪ್‌ನಲ್ಲಿ ಮಾರಾಟ ಮಾಡಿತು. AOL ಯುರೋಪ್ ಆರು ದಶಲಕ್ಷ ಬಳಕೆದಾರರನ್ನು ಹೊಂದಿದೆ. ಆದರೆ ಅದರ ಚಂದಾದಾರರ ಸಂಖ್ಯೆಯು ಒಂದೇ ಸಮನಾಗಿ ಕ್ಷೀಣಿಸುತ್ತಿದೆ. 2005ರಲ್ಲಿ 287,000 ಯುರೋಪಿಯನ್ AOL ಆನ್‌ಲೈನ್‌ ಬಳಕೆದಾರರು ಇತರ ಸೇವಾ ಪೂರೈಕೆದಾರರ ಸೇವೆಗಳನ್ನು ಬಳಕೆಗೆ ಸ್ಥಳಾಂತರಗೊಂಡರು.[೫೯] 2006ರ ಸೆಪ್ಟೆಂಬರ್‌ನಲ್ಲಿ, AOL ಜರ್ಮನಿಯ ISP ವ್ಯವಹಾರವು(AOL ಡ್ಯೂಟ್ಸ್‌ಸ್ಕ್ಲಾಂಡ್ GmbH & Co. KG ) $863m (€675m) ಮೌಲ್ಯಕ್ಕೆ ಟೆಲಿಕಾಮ್ ಇಟಾಲಿಯಕ್ಕೆ ಮಾರಾಟವಾಯಿತು.[೬೦] AOL ಯ ಜರ್ಮನ್ ವೆಬ್ ಪೋರ್ಟಲ್ (AOL ಡ್ಯೂಟ್ಸ್‌ಸ್ಕ್ಲಾಂಡ್)ಅನ್ನು ಈಗ ಹೊಸದಾಗಿ ಸ್ಥಾಪಿತವಾದ AOL ಡ್ಯೂಚೆಲ್ಯಾಂಡ್ ಮೀಡಿಯನ್ GmbH ಕಾರ್ಯನಡೆಸುತ್ತಿದೆ, ಇದು ಈಗಲೂ ಟೈಮ್ ವಾರ್ನರ್‌‌ನ ಉಪಾಂಗವಾಗಿದೆ. ಇಂದು, AOL ಡ್ಯೂಚೆಲ್ಯಾಂಡ್ ವಾಸ್ತವಿಕವಾಗಿ AOL.com (ಕೆಳಗೆ ಗಮನಿಸಿ)ನ ಎಲ್ಲಾ ಉಚಿತ ಸೇವೆಗಳನ್ನು ಜರ್ಮನ್ ಆವೃತ್ತಿಗಳಲ್ಲಿ ಒದಗಿಸುತ್ತಿದೆ. ಮಾತ್ರವಲ್ಲದೆ ಇದು AOL VISA ಕಾರ್ಡ್‌ನಂತಹ ಕೆಲವು ಅದರ ಸ್ವಂತ ಉತ್ಪನ್ನಗಳನ್ನೂ ಒದಗಿಸುತ್ತಿದೆ .[೬೧] 2006ರ ಅಕ್ಟೋಬರ್‌ನಲ್ಲಿ AOL UKಯ ISP ವ್ಯವಹಾರವು $688m (£370m)ನಷ್ಟು ಮೌಲ್ಯಕ್ಕೆ ಕಾರ್ಫೋನ್ ವೇರ್‌ಹೌಸ್‌ಗೆ ಮಾರಾಟವಾಯಿತು.[೬೨][೬೩]

AOL ಗೆ ಸಂಬಂಧಿಸಿದ ಗಮನಾರ್ಹ ವ್ಯಕ್ತಿಗಳು

ಬದಲಾಯಿಸಿ

ಅಂತಾರಾಷ್ಟ್ರೀಯ ಆವೃತ್ತಿಗಳು

ಬದಲಾಯಿಸಿ

AOL ವಿವಿಧ ರಾಷ್ಟ್ರಗಳಲ್ಲಿ ಅನೇಕ ಆವೃತ್ತಿಗಳ ಅದರ ಸೇವೆಗಳನ್ನು ಹೊಂದಿದೆ.[೭೮]

ಆನ್‌ಲೈನ್‌ ಭದ್ರತಾ ಸೇವೆಗಳು

ಬದಲಾಯಿಸಿ

AOL ನ ಇತ್ತೀಚಿನ ಸಾಫ್ಟ್‌ವೇರ್‌ ರೂಪಗಳು ವಿವಿಧ ರೀತಿಯ ಭದ್ರತಾ ವೈಶಿಷ್ಟ್ಯಗಳನ್ನು ನೀಡುತ್ತವೆ, ಅವು ಸಾಮಾನ್ಯವಾಗಿ ಮ್ಯಾಕ್ಅಫೀಯ ವೈರಸ್‌ಸ್ಕ್ಯಾನ್ ಮತ್ತು ಫೈರ್‌ವಾಲ್ ಸಾಫ್ಟ್‌ವೇರ್‌ ಮೊದಲಾದವನ್ನು ಒಳಗೊಳ್ಳುತ್ತವೆ.

ಕಾಲಾವಧಿ

ಬದಲಾಯಿಸಿ
  • 2005ರ ಉತ್ತರಾರ್ಧದಲ್ಲಿ, AOL ಸೇಫ್ಟಿ ಆಂಡ್ ಸೆಕ್ಯೂರಿಟಿ ಸೆಂಟರ್, ಅನೇಕ ಮ್ಯಾಕ್‌ಅಫೀ ಆಂಟಿ-ವೈರಸ್‌ಗಳು, CA ಆಂಟಿ-ಸ್ಪೈವೇರ್ ಹಾಗೂ ಪ್ರಪ್ರೈಟರಿ ಫೈರ್‌ವಾಲ್ ಮತ್ತು ಫಿಶಿಂಗ್ ರಕ್ಷಣಾ ಸಾಫ್ಟ್‌ವೇರ್‌‌ನ್ನು AOLಬಿಡುಗಡೆ ಮಾಡಿತು. ಸಾಫ್ಟ್‌ವೇರ್‌ ಅನ್ನು ಉಚಿತವಾಗಿ ಒದಗಿಸಲಾಯಿತು. ಆದರೆ ಕೇವಲ AOL ಇ-ಮೇಲ್ ವಿಳಾಸ ಅಥವಾ AOL ಮೈ ಇ-ಅಡ್ರೆಸ್ ಕಾರ್ಯನಿರ್ವಹಿಸುವ Microsoft Windows XP ಅಥವಾ 2000 ಅನ್ನು ಹೊಂದಿರುವ ಬಳಕೆದಾರರಿಗೆ ಮಾತ್ರ ನೀಡಿತು.
  • 2006ರ ಆಗಸ್ಟ್ 7ರಂದು[೭೯] AOL AOL ಆಕ್ಟಿವ್ ವೈರಸ್ ಶೀಲ್ಡ್ ಅನ್ನು ಬಿಡುಗಡೆಗೊಳಿಸಿತು. ಈ ಸಾಫ್ಟ್‌ವೇರ್‌ಅನ್ನು ಕ್ಯಾಸ್ಪರ್ಸ್ಕಿ ಲ್ಯಾಬ್ ಅಭಿವೃದ್ಧಿಪಡಿಸಿತು. ಆಕ್ಟಿವ್ ವೈರಸ್ ಶೀಲ್ಡ್ ಸಾಫ್ಟ್‌ವೇರ್‌ ಉಚಿತವಾಗಿತ್ತು ಹಾಗೂ AOL ಖಾತೆಯಿರಬೇಕಾಗಿರಲಿಲ್ಲ, ಕೇವಲ ಇಂಟರ್ನೆಟ್‌ ಇ-ಮೇಲ್ ವಿಳಾಸವು ಸಾಕಾಗಿತ್ತು.
  • 2006ರ ಜೂನ್ 8ರಂದು,[೮೦] AOL ಒಂದು ಹೊಸ ಪ್ರೋಗ್ರಾಂ AOL ಆಕ್ಟಿವ್ ಸೆಕ್ಯುರಿಟಿ ಮಾನಿಟರ್ಅನ್ನು ಒದಗಿಸಿತು. ಇದು ಸ್ಥಳೀಯ PCಯ ಭದ್ರತೆಯ ಸ್ಥಿತಿಯನ್ನು ಪರಿಶೀಲಿಸುವ ಒಂದು ವಿಶ್ಲೇಷಾತ್ಮಕ ಸಾಧನವಾಗಿದೆ. ಇದು AOL ಅಥವಾ Download.comನಿಂದ ಹೆಚ್ಚುವರಿ ಭದ್ರತಾ ಸಾಫ್ಟ್‌ವೇರ್ಅನ್ನು ಶಿಫಾರಸು ಮಾಡುತ್ತದೆ. ಈ ಪ್ರೋಗ್ರಾಂ ಭದ್ರತೆ ಮತ್ತು ಸಾಮಾನ್ಯ ಕಂಪ್ಯೂಟರ್‌ ಸ್ಥಿತಿಯ ವಿವಿಧ ವಲಯಗಳಲ್ಲಿ ಕಂಪ್ಯೂಟರ್‌ನ ಬೆಲೆಯನ್ನು ಅಂದಾಜು ಮಾಡುತ್ತದೆ. ಪ್ರಸ್ತುತ ಆವೃತ್ತಿಯು ಕೇವಲ ಇಂಟರ್ನೆಟ್‌ ಎಕ್ಲ್‌ಪ್ಲೋರರ್ 5.0 ಅಥವಾ ಅದಕ್ಕಿಂತ ಹೆಚ್ಚಿನೊಂದಿಗೆ ವಿಂಡೋಸ್ 2000/XP ಅನ್ನು ಮಾತ್ರ ಬೆಂಬಲಿಸುತ್ತದೆ.
  • 2007ರ ಜುಲೈ 18ರಂದು[೮೧] AOL ಅದರ ಉಚಿತ ಸದಸ್ಯರಿಗಾಗಿ "ಮ್ಯಾಕ್ಅಫೀ ವೈರಸ್‌ಸ್ಕ್ಯಾನ್ ಪ್ಲಸ್: AOL ನ ವಿಶೇಷ ಆವೃತ್ತಿ" (VSP)ಅನ್ನು ಹಾಗೂ ಅದರ ಪಾವತಿಸುವ ಚಂದಾದಾರರಿಗಾಗಿ ಅತ್ಯಂತ ಹೆಚ್ಚು ಮೌಲ್ಯದ ಆವೃತ್ತಿ "ಮ್ಯಾಕ್ಅಫೀ ಇಂಟರ್ನೆಟ್‌ ಸೆಕ್ಯುರಿಟಿ ಸ್ಯೂಟ್: AOL ನ ವಿಶೇಷ ಆವೃತ್ತಿ" (MIS) ಅನ್ನು ಬಿಡುಗಡೆಗೊಳಿಸಿತು. ಇದು "AOL ಸೇಫ್ಟಿ ಮತ್ತು ಸೆಕ್ಯುರಿಟಿ ಸೆಂಟರ್" ಮತ್ತು ಈಗಿಲ್ಲದ "AOL ಆಕ್ಟಿವ್ ವೈರಸ್ ಶೀಲ್ಡ್" ಇವೆರಡನ್ನೂ ಸ್ಥಾನಾಂತರಿಸುತ್ತದೆ. MIS VSP ಪ್ಲಸ್‌ನ ಎಲ್ಲಾ ಘಟಕಗಳನ್ನು ಹೊಂದಿದೆ ಹಾಗೂ ಇದು ಸ್ವಯಂಚಾಲಿತ ಬ್ಯಾಕಪ್‌ನಂತಹ ಸಾಧನಗಳನ್ನು ಒಳಗೊಳ್ಳುತ್ತದೆ.

ಉಚಿತ ಸೇವೆಗಳು

ಬದಲಾಯಿಸಿ

2006ರ ಆಗಸ್ಟ್ 2ರಂದು, ಇಂಟರ್ನೆಟ್‌ ಸಂಪರ್ಕವಿದ್ದು ಅಥವಾ ಇಲ್ಲದೆ ಅದರ ಹೆಚ್ಚಿನ ಸೇವೆಗಳನ್ನು ಉಚಿತವಾಗಿ ಒದಗಿಸುವ ಯೋಜನೆಯೊಂದನ್ನು AOL ಪ್ರಕಟಿಸಿತು.[೮೨]

  • ಪ್ರಕಟಿಸಿದ ಯೋಜನೆಗಳಲ್ಲಿ ಒಂದು ಉಚಿತ ಇಮೇಲ್ ಸೇವೆಗಳು .
  • ಚಾಟ್ ರೂಮ್‌ಗಳನ್ನು ಉಚಿತ ಸೇವೆಯೊಂದಿಗೆ ಸೇರಿಸಲಾಯಿತು. ಆದರೆ ಬಳಕೆದಾರರು ಉಚಿತ ಯೋಜನೆಯಡಿಯಲ್ಲಿ ರಚಿಸಿದ ಖಾತೆಯ ಅವಧಿಯನ್ನು ಕ್ರೆಡಿಟ್ ಕಾರ್ಡ್ಅನ್ನು ಬಳಸಿಕೊಂಡು ಪರಿಶೀಲಿಸುವುದು ಅಗತ್ಯವಾಗಿರುತ್ತದೆ. AOL ಒದಗಿಸಿದ ಕ್ರೆಡಿಟ್ ಕಾರ್ಡ್‌ಗೆ $1ನಷ್ಟು ಶುಲ್ಕ ವಿಧಿಸುತ್ತದೆ ಹಾಗೂ ನಂತರ ತಕ್ಷಣವೇ ಆ ಶುಲ್ಕವನ್ನು ಹಿಂದಿರುಗಿಸುತ್ತದೆ.
  • AOL ವೀಡಿಯೊ ವೃತ್ತಿಪರ ವಿಷಯವನ್ನು ಒಳಗೊಂಡಿರುತ್ತದೆ ಹಾಗೂ ಬಳಕೆದಾರರಿಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಅನುವು ಮಾಡುತ್ತದೆ. ಆರಂಭಿಕ ಬಳಕೆದಾರ-ಆಧಾರಿತ ವೀಡಿಯೊ ಸೇವೆಯೆಂದರೆ ಅನ್‌ಕಟ್ ವೀಡಿಯೊ, ಆದರೆ ನಂತರ ಅದು ರದ್ದುಗೊಂಡಿತು.
  • AOL ಲೋಕಲ್ ಅದರ ಸಿಟಿಗೈಡ್ Archived 2010-01-12 ವೇಬ್ಯಾಕ್ ಮೆಷಿನ್ ನಲ್ಲಿ., ಯೆಲ್ಲೊ ಪೇಜಸ್ Archived 2010-07-28 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಲೋಕಲ್ ಸರ್ಚ್ Archived 2009-06-12 at the Stanford Web Archive ಸೇವೆಗಳನ್ನು ಒಳಗೊಳ್ಳುತ್ತದೆ. ಇದು ಬಳಕೆದಾರರಿಗೆ ರೆಸ್ಟಾರೆಂಟ್‌ಗಳಂತಹ ಸ್ಥಳೀಯ ಮಾಹಿತಿ, ಸ್ಥಳೀಯ ಘಟನೆಗಳು ಮತ್ತು ಮಾರ್ಗದರ್ಶಕ ಪಟ್ಟಿಗಳ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.
  • AOL ಪ್ರಸ್ತುತ ಗ್ರಾಹಕ ಡೊಮೇನ್ ಹೆಸರಿನ ಉಚಿತ ಬಳಕೆಯನ್ನು ಒದಗಿಸುತ್ತದೆ, ಅದನ್ನು ಅದು AOL ಮೈ ಇಅಡ್ರೆಸ್ ಎಂದು ಕರೆಯುತ್ತದೆ. ಇದು ಬಳಕೆದಾರರಿಗೆ 'example@whateveryouwant.com' ನಂತಹ ಇ-ಮೇಲ್ ವಿಳಾಸವನ್ನು ರಚಿಸಲು ಹಾಗೂ ಸುಮಾರು 100 ಇತರ ವಿಳಾಸಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಈ ಇ-ಮೇಲ್ ಖಾತೆಗಳನ್ನು ಇತರ AOL ಮತ್ತು AIM ಇ-ಮೇಲ್ ಖಾತೆಗಳ ರೀತಿಯಲ್ಲಿಯೇ ಪ್ರವೇಶಿಸಬಹುದು.
  • Xdrive - AOL ಒದಗಿಸಿದ ಒಂದು ಸೇವೆ. ಇದು ಬಳಕೆದಾರರಿಗೆ ಇಂಟರ್ನೆಟ್‌‌ನಲ್ಲಿ ಅವರ ಫೈಲ್‌ಗಳ ರಕ್ಷಿತ-ನಕಲನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.[೮೩] ಇದು 2009ರ ಜನವರಿ 12ರಂದು ಮುಚ್ಚಲ್ಪಟ್ಟಿತು.[೮೪]
  • Games.com - ಬ್ರೌಸರ್-ಆಧಾರಿತ ಗೇಮ್‌ಗಳನ್ನೊಳಗೊಂಡ ಒಂದು ಆನ್‌ಲೈನ್‌ ಪುಟ. ಇದು ಮುಖ್ಯ AOL ವೆಬ್‌ಸೈಟ್‌ನ ಒಂದು ಭಾಗವಾಗಿದೆ.

ಇತರ ಅಭಿವೃದ್ಧಿಗಳು

ಬದಲಾಯಿಸಿ
  • 2006ರ ಉತ್ತರಾರ್ಧದಲ್ಲಿ AOL ಉಚಿತ ಮತ್ತು ಪಾವತಿಸುವ ಖಾತೆಗಳೆರಡಕ್ಕೂ ಉಚಿತ ಮತ್ತು ಅನಿಯಮಿತ ಡಿಜಿಟಲ್ ಚಿತ್ರ ಸಂಗ್ರಹ ಒದಗಿಸುವುದನ್ನು ಆರಂಭಿಸಿತು. ಆರಂಭಿಕ ಪೃಥಕ್ಕರಣ ಸಾಮರ್ಥ್ಯವನ್ನು ಉಳಿಸಿಕೊಳ್ಳಲಾಗಿದೆ ಹಾಗೂ ಆಕ್ಟಿವ್X ನಿಯಂತ್ರಣವು ವೆಬ್ ಬ್ರೌಸರ್‌ಗಳಲ್ಲಿ ಡ್ರ್ಯಾಗ್-ಆಂಡ್-ಡ್ರಾಪ್ ಇಂಟರ್ಫೇಸ್ಅನ್ನು ಒದಗಿಸುತ್ತದೆ. ಇದು ಬಳಕೆದಾರರಿಗೆ ವೆಬ್ ಪುಟದಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡಲು ಅವುಗಳ ಸಂಪೂರ್ಣ ಫೋಲ್ಡರ್ಅನ್ನು ಇಡಲು ಅನುವು ಮಾಡಿಕೊಡುತ್ತದೆ.
  • 2006ರ ಅಕ್ಟೋಬರ್ 4ರಂದು, AOL ಒಂದು ಉಚಿತ ಇಂಟರ್ನೆಟ್‌ ಸೂಟ್ AOL ಓಪನ್‌ರೈಡ್ ಅನ್ನು ಬಿಡುಗಡೆಗೊಳಿಸಿತು. ಅದು ಒಂದು ವೆಬ್ ಬ್ರೌಸರ್, ತ್ವರಿತ ಮೆಸೆಂಜರ್, ಇಮೇಲ್ ಗ್ರಾಹಕ ಮತ್ತು ಮೀಡಿಯ ಪ್ಲೇಯರ್ ಮೊದಲಾದವನ್ನು ಒಳಗೊಂಡಿದೆ.
  • 2007ರ ಫೆಬ್ರವರಿ 16ರಂದು, AOL OpenID ಅನ್ನು ಬೆಂಬಲಿಸುತ್ತದೆಂದು ಪ್ರಕಟಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು]
  • 2008ರ ಮಾರ್ಚ್ 13ರಂದು, AOL ಪ್ರಸಿದ್ಧ ನೆಟ್‌ವರ್ಕ್ ಸೈಟ್ ಬೆಬೊಅನ್ನು $850m (£417m) ಮೌಲ್ಯಕ್ಕೆ ಖರೀದಿಸಿತು .[೮೫]
  • 2008ರ ಜುಲೈ 25ರಂದು AOL ಖರ್ಚುವೆಚ್ಚಗಳನ್ನು ಉಳಿಸಲು ಮತ್ತು ಅದರ ಪ್ರಮುಖ ಜಾಹೀರಾತು ವ್ಯವಹಾರದ ಮೇಲೆ ಹೆಚ್ಚು ಗಮನ ಹರಿಸಲು Xdrive, AOL ಪಿಕ್ಚರ್ಸ್ ಮತ್ತು ಬ್ಲೂಸ್ಟ್ರಿಂಗ್ ಮೊದಲಾದವನ್ನು ಕೈಬಿಡುವುದಾಗಿ ಪ್ರಕಟಿಸಿತು. Xdriveಅನ್ನು ಮಾರಾಟಕ್ಕೆ ಇಡಬಹುದು.[೮೬] AOL ಪಿಕ್ಚರ್ಸ್ 2008ರ ಡಿಸೆಂಬರ್ 31ರಂದು ಕೊನೆಗೊಂಡಿತು.
  • AOL ಹೋಮ್‍ಟೌನ್ (AOL ಗ್ರಾಹಕರ ವೆಬ್‌ಸೌಟ್‌ಗಳಿಗೆ ವೆಬ್ ಒದಗಿಸುವ ಸೇವೆ) ಮತ್ತು AOL ಜರ್ನಲ್ ಬ್ಲಾಗ್ ಹಾಸ್ಟಿಂಗ್ ಸೇವೆಗಳು ಸದ್ಯದಲ್ಲೇ ರದ್ದುಗೊಳ್ಳುತ್ತವೆಂದು 2008ರ ಸೆಪ್ಟೆಂಬರ್ 30ರಂದು ಪ್ರಕಟಿಸಿದ ನಂತರ 2008ರ ಅಕ್ಟೋಬರ್ 31ರಂದು ತೆಗೆದುಹಾಕಲಾಯಿತು[೮೭].[೮೮]
  • 2009ರ ಫೆಬ್ರವರಿ 25ರಂದು AOL, AIM ಪ್ರೊಫೈಲ್ಸ್ಅನ್ನು Bebo ಒಂದಿಗೆ ವಿಲೀನಗೊಳಿಸಿತು.
  • 2010ರ ಎಪ್ರಿಲ್ 6ರಂದು AOL, Beboಅನ್ನು ರದ್ದುಗೊಳಿಸಲು ಅಥವಾ ಮಾರಾಟ ಮಾಡಲು ಯೋಜಿಸುತ್ತಿದೆಯೆಂದು ಪ್ರಕಟಿಸಿತು.[೮೯]
  • 2009ರ ಜನವರಿಯಿಂದ AOL ನ್ಯೂಸ್, ಬಳಕೆದಾರರಿಂದ ಅಶ್ಲೀಲ ಅಥವಾ ಆಕ್ರಮಣಶೀಲ ಪೋಸ್ಟಿಂಗ್‌ಗಳನ್ನು ಕೈಬಿಡಲು ಕಾಮೆಂಟ್ಸ್ ಪುಟ(ಪ್ರತಿಕ್ರಿಯೆಗಳ ಪುಟ)ದ ಪುನರ್ರಚನೆಗಾಗಿ ಸ್ಥಗಿತಗೊಳಿಸಿತು.

ಚಲನಚಿತ್ರ ಸ್ಟುಡಿಯೊಗಳ ಪಾಲುದಾರಿಕೆ

ಬದಲಾಯಿಸಿ
 
AOL ನ ಬೆವೆರ್ಲಿ ಹಿಲ್ಸ್‌ ಶಾಖೆ
ಚಿತ್ರ:Aolsiliconvalleyoffice.jpg
AOL ನ ಸಿಲಿಕಾನ್ ವ್ಯಾಲಿ ಶಾಖೆ

2006ರ ಆಗಸ್ಟ್ 25ರ ಶುಕ್ರವಾರದಂದು, AOL ಅನೇಕ ಪ್ರಮುಖ ಚಲನಚಿತ್ರ ಸ್ಟುಡಿಯೊಗಳೊಂದಿಗೆ ಆನ್‌ಲೈನ್‌ ವೀಡಿಯೊ ಸ್ಟೋರ್ ತೆರೆಯುವ ಒಂದು ವ್ಯವಹಾರ ಒಪ್ಪಂದಕ್ಕೆ ಸಹಿಹಾಕಿದೆಯೆಂದು ಪ್ರಕಟಿಸಿತು. ಅದು ಬಳಕೆದಾರರಿಗೆ ಸಂಪೂರ್ಣ ಚಲನಚಿತ್ರಗಳನ್ನು ಮತ್ತು ದೂರದರ್ಶನ ಪ್ರದರ್ಶನಗಳನ್ನು ಸ್ವಂತಕ್ಕೆ ಡೌನ್‌ಲೋಡ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಆ ವ್ಯವಹಾರ ಒಪ್ಪಂದದ ಬಗ್ಗೆ ನ್ಯೂಸ್ ಕಾರ್ಪೊರೇಶನ್‌ನ 20ಯತ್ ಸೆಂಚುರಿ ಫಾಕ್ಸ್, ಸೋನಿ ಕಾರ್ಪ್‌.ನ ಸೋನಿ ಪಿಕ್ಚರ್ಸ್ ಹೋಮ್ ಎಂಟರ್ಟೈನ್ಮೆಂಟ್, NBC ಯೂನಿವರ್ಸಲ್‌ಯೂನಿವರ್ಸಲ್‌ ಪಿಕ್ಚರ್ಸ್ ಹಾಗೂ ಹಿಂದಿನ ಸಂಸ್ಥೆಯ ಸಹೋದರ ಸಂಸ್ಥೆ ವಾರ್ನರ್ ಹೋಮ್ ಎಂಟರ್ಟೈನ್ಮೆಂಟ್ ಗ್ರೂಪ್ ಮೊದಲಾದವುಗಳೊಂದಿಗೆ ಸಹಿಹಾಕಿತು.[೯೦]

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. America, Online!
  2. "AOL LLC 2009 10k filing". Archived from the original on 2011-10-18. Retrieved 2010-03-19.
  3. AOL ಮುಖ್ಯ ತಾಂತ್ರಿಕ ಅಧಿಕಾರಿ ಟೆಡ್ ಕೆಹಾಲ್ ನ್ಯೂವರ್ಜಿನಿಯಾ ಟೆಕ್ನಾಲಜಿ ಬೋರ್ಡ್‌ಗೆ ನೇಮಕಗೊಂಡನು
  4. AOL ಕಾರ್ಯಾಂಗ ಪ್ರಧಾನ ಕಛೇರಿಗಳನ್ನು ನ್ಯೂಯಾರ್ಕ್‌ಗೆ ಸ್ಥಳಾಂತರಿಸುತ್ತದೆ
  5. "ಕಂಪೆನಿ ಸ್ಥೂಲಸಮೀಕ್ಷೆ." AOL. 2009ರ ಮೇ 7ರಂದು ಮರುಸಂಪಾದಿಸಲಾಗಿದೆ.
  6. ೬.೦ ೬.೧ ಗೋಲ್ಡ್‌ಫಾರ್ಬ್, ಜ್ಯಾಕರಿ ಮತ್ತು ಸ್ಯಾಮ್ ಡಯಾಜ್. "ವಾಷಿಂಗ್ಟನ್ ಪೋಸ್ಟ್ - AOL ಕಾರ್ಯನಿರ್ವಾಹಕ ಪ್ರಧಾನ ಕಛೇರಿಯನ್ನು ನ್ಯೂಯಾರ್ಕ್‌ಗೆ ಸ್ಥಳಾಂತರಿಸುತ್ತದೆ." ದಿ ವಾಷಿಂಗ್ಟನ್ ಪೋಸ್ಟ್ . ಮಂಗಳವಾರ ಸೆಪ್ಟೆಂಬರ್ 18, 2007. 2009ರ ಮೇ 7ರಂದು ಮರುಸಂಪಾದಿಸಲಾಗಿದೆ.
  7. "ಇಂಟರ್‌ನ್ಯಾಷನಲ್ ಸರ್ವಿಸಸ್ - ಎಬೌಟ್ AOL (AOL.com)". Archived from the original on 2008-02-15. Retrieved 2010-07-29.
  8. ೮.೦ ೮.೧ ೮.೨ ೮.೩ Holahan, Catherine (2006-07-31). "Will Less Be More for AOL?". BusinessWeek. Retrieved 2006-08-01.
  9. "ಟೈಮ್ ವಾರ್ನರ್‌ ಟು ಸ್ಪಿನ್ ಆಫ್ AOL ಆನ್ ಡಿಸೆಂಬರ್ 9 " 2009ರ ನವೆಂಬರ್ 16ರಂದು ಮರುಸಂಪಾದಿಸಲಾಗಿದೆ.
  10. "ಟೈಮ್ ವಾರ್ನರ್‌ ಟು ಸ್ಪಿನ್ ಆಫ್ AOL, ಎಂಡಿಂಗ್ ಇಲ್-ಫೇಟೆಡ್ ಡೀಲ್ ." 2009ರ ಮೇ 28ರಂದು ಮರುಸಂಪಾದಿಸಲಾಗಿದೆ.
  11. Li, Kenneth (2006-07-26). "AOL expected to scrap charges". Yahoo!. Archived from the original on 2006-08-18. Retrieved 2006-08-09.
  12. Rosencrance, Linda (2007-11-08). "AOL revenue, subscribers plummet". ComputerWorld. Archived from the original on 2007-11-17. Retrieved 2007-11-12.
  13. Yang, Catherine (2005-11-11). "Has AOL Met Its Match?". BusinessWeek. Retrieved 2006-08-01.
  14. "Broadband survey results". BBC News. 2007-03-21. Archived from the original on 2012-07-20. Retrieved 2007-12-04.
  15. "Carphone Warehouse buying AOL UK". BBC News. October 11, 2006. Retrieved April 25, 2010.
  16. "Topupguru.com". Archived from the original on 2009-10-23. Retrieved 2010-07-29.
  17. "MSN.com". Archived from the original on 2011-06-23. Retrieved 2010-07-29.
  18. BetaNews.com
  19. ೧೯.೦ ೧೯.೧ ೧೯.೨ Klein, Alec. Stealing Time: Steve Case, Jerry Levin, and the Collapse of AOL Time Warner. New York: Simon & Schuster. ISBN 0-7432-5984-X.
  20. "History of Computing Industrial Era (1985–1990)". The History of Computing Project. 2006-03-20. Archived from the original on 2005-11-03. Retrieved 2005-09-24.
  21. "Apple II history chapter 22". 2002-12-31. Archived from the original on 2005-08-28. Retrieved 2005-09-24.
  22. Catb.org
  23. "Encyclopedia.com" ದಿ ವಾಷಿಂಗ್ಟನ್ ಪೋಸ್ಟ್ . ಎಪ್ರಿಲ್ 17, 2005. 2009ರರ ಮೇ 7ರಲ್ಲಿ ಮರುಸಂಪಾದಿಸಲಾಗಿದೆ.
  24. "ಟೈಸನ್ಸ್ ಕಾರ್ನರ್ CDP, ವರ್ಜಿನಿಯಾ Archived 2011-11-10 ವೇಬ್ಯಾಕ್ ಮೆಷಿನ್ ನಲ್ಲಿ.." ಯುನೈಟೆಡ್ ಸ್ಟೇಟ್ಸ್ ಸೆನ್ಸಸ್ ಬ್ಯೂರೊ. 2009ರ ಮೇ 7ರಲ್ಲಿ ಮರುಸಂಪಾದಿಸಲಾಗಿದೆ.
  25. ಸ್ಯುಗಾವರ, ಸಾಂದ್ರ. "ಅಮೆರಿಕ ಆನ್‌ಲೈನ್‌ ಟು ರೆಡ್ಯೂಸ್ ರೇಟ್ಸ್; ಫರ್ಮ್ ಫೇಸಸ್ ಸಬ್‌ಸ್ಕ್ರೈಬರ್ ಬಾಯ್ಕಟ್ ಪ್ರೆಶರ್ ಫ್ರಮ್ ಕಾಂಪೀಟಿಟರ್ಸ್ Archived 2013-07-29 ವೇಬ್ಯಾಕ್ ಮೆಷಿನ್ ನಲ್ಲಿ.." ದಿ ವಾಷಿಂಗ್ಟನ್ ಪೋಸ್ಟ್ . ಅಕ್ಟೋಬರ್ 13, 1994. ಫೈನಾನ್ಶಿಯಲ್ B09. 2009ರರ ಮೇ 7ರಲ್ಲಿ ಮರುಸಂಪಾದಿಸಲಾಗಿದೆ.
  26. "ಕಂಪೆನಿ ಸ್ಥೂಲಸಮೀಕ್ಷೆ." AOL . ಫೆಬ್ರವರಿ 8, 2008. 2009ರ ಮೇ 7ರಲ್ಲಿ ಮರುಸಂಪಾದಿಸಲಾಗಿದೆ.
  27. Mills, Elinor. "AOL hanging up on dial-up customers?". CNET. Archived from the original on ಡಿಸೆಂಬರ್ 8, 2012. Retrieved August 3, 2006.
  28. "AOL price plans". Retrieved October 29, 2006.
  29. "America Online Changes Its Name to AOL". 2006-04-03. Archived from the original on 2006-07-15. Retrieved 2006-07-24.
  30. "AOL (TWX): Randy Falco's Year-End Love Note to AOLers". Archived from the original on ಡಿಸೆಂಬರ್ 18, 2007. Retrieved December 18, 2007.
  31. "AOL Moves Headquarters To New York City". 2007-09-17. Retrieved 2007-09-17.
  32. Story, Louise (10 March 2008). "AOL Brings Out the Penguins to Explain Ad Targeting". The New York Times. in Story, Louise (10 March 2008). "To Aim Ads, Web Is Keeping Closer Eye on You". The New York Times. The New York Times Company. Retrieved 2008-03-09.
  33. Bearne, Suzanne (11 August 2008). "AOL campaign explains behavioural targeting". NMA. Centaur Media. Retrieved 2008-08-15.
  34. "CRG West accounces the acquisition of Data Center in Reston, Virginia" (PDF). 2008-01-03. Archived from the original (PDF) on 2008-12-17. Retrieved 2008-11-16.
  35. Hansell, Saul (2007-10-15). "Tuesday is Layoff Day at AOL". The New York Times. Retrieved 2007-10-17.
  36. ೩೬.೦ ೩೬.೧ "AOL (TWX): Live Layoff Coverage". 2007-10-15. Archived from the original on 2009-02-04. Retrieved 2007-10-27.
  37. ಟೈಮ್ ವಾರ್ನರ್‌ ವಿಲ್ ಸ್ಪ್ಲಿಟ್ AOL: ಫೈನಾನ್ಶಿಯಲ್ ನ್ಯೂಸ್ - ಯಾಹೂ! ಫೈನಾನ್ಸ್
  38. Postigo, Hector (2009). "America Online volunteers". International Journal of Cultural Studies. 12 (5). SAGE Publications: 451–469. {{cite journal}}: |access-date= requires |url= (help); Cite has empty unknown parameters: |doi_brokendate= and |coauthors= (help); External link in |publisher= (help); Italic or bold markup not allowed in: |journal= (help)
  39. "AOL". Better Business Bureau. Archived from the original on 2010-07-18. Retrieved 2008-01-22.
  40. "AOL". Better Business Bureau. Archived from the original on 2010-07-18. Retrieved 2008-01-22.
  41. Wells, Jane (2006-06-21). "How hard can it be to cancel an AOL account?". CNBC. Archived from the original on 2006-07-22. Retrieved 2006-07-24.
  42. "ಅಮೆರಿಕ ಆನ್‌ಲೈನ್‌: AOL ರಿಟೆನ್ಶನ್ ಮ್ಯಾನ್ವಲ್ ಅಪ್‌ಲೋಡೆಡ್ ಇನ್ ಫುಲ್". Archived from the original on 2009-06-03. Retrieved 2010-07-29.
  43. "AOL: ಟೈಮ್‌ವಾರ್ನರ್ ಡಿಸಾಲ್ವ್ಸ್ AOL ರಿಟೆನ್ಶನ್ ಸೆಂಟರ್ಸ್". Archived from the original on 2009-11-01. Retrieved 2010-07-29.
  44. Rusty Dornin (2002-10-18). "Campaign: Send AOL CDs back". CNN.com. Archived from the original on 2013-05-19. Retrieved 2010-07-29.
  45. Gardencitygroup.com
  46. "Stopbadware.org". Archived from the original on 2007-02-20. Retrieved 2010-07-29.
  47. "StopBadware.org". Archived from the original on 2012-07-29. Retrieved 2010-07-29.
  48. ಬೀಟಾನ್ಯೂಸ್ | AOL ಪುಲ್ಸ್ ಪ್ಲಗ್ ಆನ್ ನ್ಯೂಸ್‌ಗ್ರೂಪ್ ಸರ್ವಿಸ್
  49. AOL ಮೆಂಬರ್ ಅಗ್ರಿಮೆಂಟ್
  50. ಕಂಡೀಷನ್ಸ್ ಆಫ್ ಸರ್ವಿಸ್ - AOL ಹೆಲ್ಪ್
  51. Aolwatch.org
  52. Thetruthseeker.co.uk Archived 2010-09-13 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಟ್ರುತ್ ಸೀಕರ್ - ಇಂಟರ್ನೆಟ್‌ ಸೆನ್ಸರ್ಶಿಪ್
  53. ಸೆನ್ಸರ್ಶಿಪ್ ಆನ್ AOL ಲೇಟ್ 1998–1999
  54. "EFF.org". Archived from the original on 2007-10-26. Retrieved 2007-10-26.
  55. Cindy Cohn (2006-02-08). "AOL, Yahoo and Goodmail: Taxing Your Email for Fun and Profit". EFF.
  56. Dyson, Esther (2006-03-17). "You've Got Goodmail". New York Times. Retrieved 2006-07-24.
  57. Ex-AOL ವರ್ಕರ್ ಹು ಸ್ಟೋಲ್ ಇ-ಮೇಲ್ ಲಿಸ್ಟ್ ಸೆಂಟೆನ್ಸ್‌ಡ್ Archived 2010-04-20 ವೇಬ್ಯಾಕ್ ಮೆಷಿನ್ ನಲ್ಲಿ.. MSNBC.com
  58. ೫೮.೦ ೫೮.೧ ಪೇರ್ ನೈಲ್ಡ್ ಇನ್ AOL ಸ್ಪ್ಯಾಮ್ ಸ್ಕೀಮ್. TheSmokingGun.com . ಜೂನ್ 23, 2004.
  59. "AOL Germany for sale?". The Register. 2006-04-15. Retrieved 2006-11-08.
  60. "Telecom Italia buys AOL Germany". 18 September 2006. Retrieved 2006-11-11.
  61. (German) AOL.de
  62. "Carphone Warehouse to acquire Time Warner's AOL Internet access business in the UK for £370 million". Carphone Warehouse Press Release. 2006-10-11. Archived from the original on 2006-10-30. Retrieved 2006-10-27.
  63. "Carphone Warehouse buying AOL UK". BBC News. 2006-10-11. Retrieved 2006-10-11.
  64. http://elpub.pbworks.com/Marc-Andreessen
  65. "ಆರ್ಕೈವ್ ನಕಲು". Archived from the original on 2010-06-21. Retrieved 2010-07-29.
  66. http://topics.nytimes.com/topics/reference/timestopics/people/b/james_l_barksdale/index.html
  67. http://www.techlawjournal.com/internet/80622aol.htm
  68. "ಆರ್ಕೈವ್ ನಕಲು". Archived from the original on 2008-07-24. Retrieved 2010-07-29.
  69. http://archives.starbulletin.com/2006/08/01/business/story03.html
  70. ಪೆರ್ರಿ, ಸೈಮನ್. (ಎಪ್ರಿಲ್ 5, 2007) ಮೇರಿ ಚೆನಿ ಎಕ್ಸ್ಪೆಕ್ಟಿಂಗ್ ಎ ಬಾಯ್, ಹರ್ ಡ್ಯಾಡ್ ರಿವೀಲ್ಸ್ Archived 2012-06-28 ವೇಬ್ಯಾಕ್ ಮೆಷಿನ್ ನಲ್ಲಿ. People.com. 2007ರ ಮೇ 28ರಂದು ಸಂಕಲನಗೊಂಡಿದೆ.
  71. http://www.imdb.com/name/nm0249977/
  72. "ಆರ್ಕೈವ್ ನಕಲು". Archived from the original on 2008-08-07. Retrieved 2010-07-29.
  73. http://www.betanews.com/article/Justin-Frankel-Reveals-Life-After-Winamp/1104776162
  74. "ಆರ್ಕೈವ್ ನಕಲು". Archived from the original on 2013-01-02. Retrieved 2013-01-02.
  75. "ಆರ್ಕೈವ್ ನಕಲು". Archived from the original on 2008-08-28. Retrieved 2010-07-29.
  76. "ಆರ್ಕೈವ್ ನಕಲು". Archived from the original on 2013-04-30. Retrieved 2010-07-29.
  77. Ex-AOL ವರ್ಕರ್ ಹು ಸ್ಟೋಲ್ ಇ-ಮೇಲ್ ಲಿಸ್ಟ್ ಸೆಂಟೆನ್ಸ್ಡ್ Archived 2010-04-20 ವೇಬ್ಯಾಕ್ ಮೆಷಿನ್ ನಲ್ಲಿ.. MSNBC.com
  78. AOL.com
  79. "AOL ನ್ಯೂಸ್ ಆಂಡ್ ಬ್ರಾಡ್‌ಕಾಸ್ಟ್ ಸೆಂಟರ್". Archived from the original on 2007-06-23. Retrieved 2010-07-29.
  80. "AOL ಲಾಂಚಸ್ ಫ್ರೀ ಸಾಫ್ಟ್‌ವೇರ್‌ ಟು ಇಂಪ್ರೂ PC ಸೆಕ್ಯೂರಿಟಿ ಫಾರ್ ಆಲ್ ಇಂಟರ್ನೆಟ್‌ ಯೂಸರ್ಸ್". Archived from the original on 2007-09-29. Retrieved 2010-07-29.
  81. "AOL ನ್ಯೂಸ್ ಆಂಡ್ ಬ್ರಾಡ್‌ಕಾಸ್ಟ್ ಸೆಂಟರ್". Archived from the original on 2007-09-14. Retrieved 2010-07-29.
  82. "AOL Uses Refurbished Software to Woo Customers". The Money Times. 4 October 2006. Archived from the original on 2006-11-10. Retrieved 2006-11-11.
  83. Pogue, David (6 January 2007). "Fewer excuses for not doing a PC backup". The New York Times. Archived from the original on 2013-01-02. Retrieved 2007-01-06. {{cite news}}: Cite has empty unknown parameter: |coauthors= (help) ಹೇಳಿಕೆ: "ಇಂಟರ್ನೆಟ್‌‌ನಲ್ಲಿ ಸುರಕ್ಷಿತವಾಗಿ ಉಳಿಯುವ ಆನ್‌ಲೈನ್‌ ರಕ್ಷಿತ-ನಕಲು-ಪ್ರತಿಗಳು ತಕ್ಷಣ ಸುಲಭ, ವಿಶಾಲ ಮತ್ತು ಉಚಿತವಾಗುತ್ತಿವೆ."
  84. "Xdrive storage site to close". Webuser. IPC Media Limited. January 5, 2009. Retrieved 2009-01-19.
  85. BBC NEWS | ಬ್ಯುಸಿನೆಸ್ AOL ಅಕ್ವೈರ್ಸ್ ಬೆಬೊ ಸೋಷಿಯಲ್ ನೆಟ್ವರ್ಕ್
  86. Washingtonpost.com, AOL ಶಟ್ಟಿಂಗ್ 3 ಸರ್ವಿಸಸ್ ಟು ಕಟ್ ಕಾಸ್ಟ್ಸ್, ಫೋಕಸ್ ಆನ್ ಆಡ್ಸ್
  87. AOL ನ PeopleConnectionBlog.com Archived 2008-10-28 ವೇಬ್ಯಾಕ್ ಮೆಷಿನ್ ನಲ್ಲಿ.: ವಿ ಆರ್ ಕ್ಲೋಸಿಂಗ್ ಅವರ್ ಡೋರ್ಸ್
  88. ವಿ ಆರ್ ಕ್ಲೋಸಿಂಗ್ ಅವರ್ ಡೋರ್ಸ್ Archived 2008-10-28 ವೇಬ್ಯಾಕ್ ಮೆಷಿನ್ ನಲ್ಲಿ. – ನೋಟಿಸ್ ದಾಟ್ ವಾಸ್ ಲಿಂಕ್ಡ್ ಫ್ರಮ್ ಬ್ಯಾನರ್ಸ್ ಆನ್ ಹೋಮ್‌ಟೌನ್ ಸೈಟ್ಸ್
  89. AOL ಪ್ರಿಪ್ಯಾರ್ಸ್ ಟು ಶಟ್ ಡೌನ್ ಬೆಬೊ 2010ರ ಎಪ್ರಿಲ್ 6ರಂದು ಮರುಸಂಪಾದಿಸಲಾಯಿತು.
  90. Jesdanun, Anick (2006-08-25). "AOL Goes Hollywood With Video Portal". The Washington Post. Retrieved March 31, 2010.


ಹೊರಗಿನ ಕೊಂಡಿಗಳು

ಬದಲಾಯಿಸಿ

ರಾಷ್ಟ್ರೀಯ ಪೋರ್ಟಲ್‌ಗಳು

ಬದಲಾಯಿಸಿ
"https://kn.wikipedia.org/w/index.php?title=ಎಒಎಲ್&oldid=1204767" ಇಂದ ಪಡೆಯಲ್ಪಟ್ಟಿದೆ