‍ನಿಕ್ಕಿನ್ ತಿಮ್ಮಯ್ಯ

ಹಾಕಿ ಛಾಂಪಿಯನ್ ನಿಕ್ಕಿನ್ ತಿಮ್ಮಯ್ಯ

ಬದಲಾಯಿಸಿ
ನಿಕ್ಕಿನ್ ತಿಮ್ಮಯ್ಯ
Personal information
ಜನನ (1991-01-18) ೧೮ ಜನವರಿ ೧೯೯೧ (ವಯಸ್ಸು ೩೩)
ವಿರಾಜಪೇಟೆ, ಕರ್ನಾಟಕ, ಭಾರತ
ಎತ್ತರ 170 cm (5 ft 7 in)
Playing position ಫೀಲ್ಡ್ ಹಾಕಿ (ಫಾರ್ವರ್ಡ್]]
ರಾಷ್ಟ್ರೀಯ ತಂಡ
2012-present ಭಾರತದ ಪುರುಷರ ಹಾಕಿ ತಂಡ
Last updated on: 8 July 2016

ಚಂದಂದ ನಿಕ್ಕಿನ್ ತಿಮ್ಮಯ್ಯ (ಜನನ ೧೮ ಜನವರಿ ೧೯೯೧) ಒಬ್ಬ ಭಾರತೀಯ ಹಾಕಿ ಆಟಗಾರನಾಗಿದ್ದು ಫಾರ್ವರ್ಡ್ ಸ್ಥಾನದಲ್ಲಿ ಆಡುತ್ತಾರೆ. [][] ಇವರ ಹೆಸರು ೨೦೧೨ರ ಒಲಂಪಿಕ್ ಕ್ರೀಡಾಕೂಟರ. ಭಾರತೀಯ ತಂಡದಲ್ಲಿತ್ತು.

  • ಇವರ ಹುಟ್ಟೂರು ವಿರಾಜಪೇಟೆ. ಇವರ ಹಿರಿಯ ಅಣ್ಣ ನಿತಿನ್ ತಿಮ್ಮಯ್ಯ ಕೂಡಾ ಭಾರತವನ್ನು ಹಾಕಿಯಲ್ಲಿ ಪ್ರತಿನಿದಿಸಿದ್ದಾರೆ.

ಏಷ್ಯನ್ ಗೇಮ್ಸ್ ಚಾಂಪಿಯನ್ಸ್ ೨೦೧೫ರ ಮೊದಲ ಪಂದ್ಯದಲ್ಲಿ ಕರ್ನಾಟಕದ ಮತ್ತೊಬ್ಬ ಆಟಗಾರ ರಘುನಾಥ್‍ರವರೊಂದಿಗೆ ಸೇರಿ ಗೋಲ್‍‍ಗಳಿಸುವುದರ ಮೂಲಕ ಕೊರಿಯಾ ಎದುರು 2-2 ಗೋಲುಗಳಿಂದ ಡ್ರಾ ಫಲಿತಾಂಶ ಸಿಗುವಂತೆ ಮಾಡಿದರು[].

  • (ಇದೇ ಹೆಸರಿನ ಬೇರೆ ಪುಟದಿಂದ ಸೇರಿಸಿದೆ)
  • ನಿಕ್ಕಿನ್ ತಿಮ್ಮಯ್ಯನವರು ಭಾರತದ ಪ್ರಮುಖ ಹಾಕಿ ಆಟಗಾರರು. ಅವರು ೨೦೧೨ರಲ್ಲಿ ಭಾರತದ ಹಾಕಿ ತಂಡದಲ್ಲಿ ಆಡುವುದನ್ನು ಪ್ರಾರಂಭಿಸಿದರು. ಅವರು ಸಂತ ಜೋಸೆಫ್ ಕಾಮರ್ಸ್ ಕಾಲೇಜಿನಿಂದ ಪದವಿಯನ್ನು ಪಡೆದರು. ಸಂತ ಜೋಸೆಫ್ ಇಂಡಿಯನ್ ಪ್ರೌಢಶಾಲೆಯಲ್ಲಿ ೬ನೇ ತರಗತಿಯನ್ನು ಓದುತ್ತಿದ್ದಾಗ ಅವರು ಹಾಕಿಯನ್ನು ಆಡಲು ಆರಾಂಭ ಮಾಡಿದರು. ಆದರೆ ೧೫ ವರ್ಷಗಳ ವಯಸ್ಸಿನಲ್ಲಿ ಹಾಕಿ ಆಡುವುದು ಬಿಟ್ಟು ಅಥ್ಲೆಟಿಕ್ಸ್ ಅಲ್ಲಿ ಸೇರಿಕೊಂಡರು. ಅವರು ಓಪೆನ್ ನ್ಯಾಷನಲ್ಸ್ ಪಂದ್ಯಾವಳಿಯ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಲಿ ಪದಕವನ್ನೂ ಪಡೆದರು. ಹಾಕಿ ಆಡುವುದು ಬಿಟ್ಟು ಓಂದು ವರ್ಷ ಕಳೆದ ನಂತರ, ಅವರ ತಂದೆಯ ಸಲಹೆಯ ಪ್ರಕಾರ ಮತ್ತೆ ಹಾಕಿ ಆಡತೊಡಗಿದರು. ಅವರು ಶ್ರದ್ಧೆಯಿಂದ ಹಾಕಿ ಆಡುವುದನ್ನು ಅಭ್ಯಾಸ ಮಾಡಿದ ನಂತರ ಅವರು ಭಾರತದ ಹಾಕಿ ತಂಡದಲ್ಲಿ ಆಯ್ಕೆಯಾದರು. ೨೦೧೨ರಲ್ಲಿ ಅವರು ಎರಡೇ ನಿಮಿಷಗಳಲ್ಲಿ ೨ ಗೋಲ್ಸ್ ಗಳಿಸಿ ಮುಂಬಯಿ ಮೆರೈನ್ಸ್ ತಂಡವನ್ನು ಸೋಲಿಸಿದರು. ಅವರು ೨೦೧೪ರಲ್ಲಿ ಅಪಘಾತಕ್ಕೆ ಈಡಾದರು. ವೈದ್ಯರು ಒಂದು ತಿಂಗಳಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ನಿರ್ದೇಶಿಸಿದರು. ಆದ್ದರಿಂದ ಅವರು ಹಾಕಿ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಲಿಲ್ಲ. ನಂತರ ಕೊರಿಯಾನಲ್ಲಿ ನಡೆದ ಏಷಿಯಾ ಗೇಮ್ಸ್ ಮತ್ತು ಕಾಮನ್‍ವೆಲ್ಥ್ ಗೇಮ್ಸ್ ಪಂದ್ಯಾವಳಿಯಲ್ಲಿ ಹಾಕಿ ಆಡಿದರು. ೨೦೧೫ರಲ್ಲಿ ಸುಲ್ತಾನ್ ಅಜಲಾನ್ ಷಾಹ್ ಕಪ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದರು. ಆದರೆ ಅನಿರೀಕ್ಷಿತವಾಗಿ ಅವರ ಬಲಗಡೆಯ ಭುಜ ತೀವ್ರವಾಗಿ ಗಾಯಗೊಂಡಿತು. ಆದ್ದರಿಂದ ಅವರು ಹಾಕಿ ವಿಷ್ವ ಲೀಗ್ ಫೈನಲ್ಸ್ ಅಲ್ಲಿ ಆಡುವುದು ಸಾಧ್ಯವಾಗಲಿಲ್ಲ. ಆದರೂ ಅವರು ಭರವಸೆಯನ್ನು ಬಿಡದೆ ಪಟ್ಟುಹಿಡಿದು ಅಭ್ಯಾಸಯನ್ನು ಮುಂದುವರೆಸಿದರು. ೨೦೧೬ರಲ್ಲಿ ಅವರು ಹೀರೋ ಹಾಕಿ ಲೀಗ್ ಅಲ್ಲಿ ಪಾಲ್ಗೊಂಡು ಮತ್ತೆ ಹಾಕಿ ಆಡುವುದನ್ನು ಪುನರಾಗಮನ ಮಾಡಿದರು. ೨೦೧೬ರಲ್ಲಿ ಅವರು ಲಂಡನ್ ಅಲ್ಲಿ ನಡೆದ ಹಾಕಿ ಚಾಂಪಿಯನ್ಸ್ ಟ್ರೋಫಿ ಕ್ರೀಡೆಯಲ್ಲಿ ಭಾಗಿಯಾಗಿ ಸ್ಪರ್ಧೆಯಲ್ಲಿ ಗೆದ್ದರು.

[]

ಉಲ್ಲೇಖಗಳು

ಬದಲಾಯಿಸಿ

ಬಾಹ್ಯಕೊಂಡಿಗಳು

ಬದಲಾಯಿಸಿ