೨೦೧೮ರ ಭೀಮಾ ಕೋರೆಗಾಂವ್ ಕದನ
೨೦೧೮ರ ಭೀಮಾ ಕೋರೆಗಾಂವ್ ಹಿಂಸಾಚಾರ ಭೀಮಾ ಕೋರೆಗಾಂವ್ ಕದನದ ೨೦೦ನೇ ವಾರ್ಷಿಕೋತ್ಸವವನ್ನು ಆಚರಿಸಲು ೧ ನೇ ಜನವರಿ ೨೦೧೮ ರಂದು ಭೀಮಾ ಕೋರೆಗಾಂವ್‌ನಲ್ಲಿ ಸಂಭ್ರಮಾಚರಣೆಯನ್ನು ಮಾಡುತ್ತಿರುವ ಸಂದರ್ಭದಲ್ಲಿ ಹಿಂಸಾಚಾರ ನಡೆಯಿತು.[೧] ಈ ಸಭೆಯ ಮೇಲೆ ಕಲ್ಲು ತೂರಾಟ ನಡೆದಾಗ ಜನಸಂದಣಿಯಿಂದ ಹಿಂಸಾಚಾರ ಉಂಟಾಗಿ ೨೮ ವರ್ಷದ ಯುವಕ ಸ್ಥಳದಲ್ಲಿ ಅಸುನೀಗಿದರು ಮತ್ತು ಇತರ ಐವರಿಗೆ ಗಂಭೀರ ಗಾಯಗಳಾಗುತ್ತವೆ. ವಾರ್ಷಿಕವಾಗಿ ಆಚರಣೆ ಮಾಡುವ ಈ ಸಮಾವೇಶವನ್ನು[೨] ಎಲ್ಗರ್ ಪರಿಷತ್ ಸಮಾವೇಶ ಎಂದೂ ಕರೆಯಲಾಗುತ್ತದೆ. ಇದನ್ನು ನಿವೃತ್ತ ನ್ಯಾಯಮೂರ್ತಿಗಳಾದ ಬಿಜಿ ಕೋಲ್ಸೆ ಪಾಟೀಲ್ [೩] ಮತ್ತು ಪಿಬಿ ಸಾವಂತ್ ಅವರು ಆಯೋಜಿಸಿದ್ದರು.[೪]ಎಲ್ಗರ್ ಪದವು ಜೋರಾಗಿ ಆಹ್ವಾನ ಅಥವಾ ಜೋರಾಗಿ ಘೋಷಣೆ ಎಂಬ ಅರ್ಥ ನೀಡುತ್ತದೆ ಎಂದು ನ್ಯಾಯಮೂರ್ತಿ ಪಿಬಿ ಸಾವಂತ್ ಹೇಳಿದ್ದಾರೆ.[೫]
ಐತಿಹಾಸಿಕ ಹಿನ್ನೆಲೆ
ಬದಲಾಯಿಸಿಭೀಮಾ ಕೋರೆಗಾಂವ್ ಕದನ
ಬದಲಾಯಿಸಿ೧೮೧೮ ರ ಕೋರೆಗಾಂವ್ ಕದನವು ದಲಿತರಿಗೆ ಪ್ರಾಮುಖ್ಯವಾದ ಕದನ . ೧ ಜನವರಿ ೧೮೧೮ ರಂದು, ಈಸ್ಟ್ ಇಂಡಿಯಾ ಕಂಪನಿಯ ಬಾಂಬೆ ಪ್ರೆಸಿಡೆನ್ಸಿ ಆರ್ಮಿಯ ೮೦೦ ಪಡೆಗಳು ಇದರಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರು ಮಹಾರ್‌ಗಳು ಇವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದ ೨ ನೇ ಪೇಶ್ವೆ ಬಾಜಿ ರಾವ್ ನ(೨೮,೦೦೦) ಪಡೆಯನ್ನು ಸೋಲಿಸಿದರು.ಇದರ ಸ್ಮರರ್ಣಾಥವಾಗಿ ಬ್ರಿಟಿಷರು ಕೋರೆಗಾಂವ್‌ನಲ್ಲಿ ವಿಜಯಸ್ತಂಭ (ವಿಜಯ್ ಸ್ತಂಭ)ವನ್ನು ಸ್ಥಾಪಿಸಿದರು. ಈ ಮೂಲಕ ಯುದ್ದದಲ್ಲಿ ಸತ್ತ ಸೈನಿಕರನ್ನು ಸ್ಮರಿಸಿದರು. ೧೯೨೮ ರಲ್ಲಿ ನಡೆದ ಮೊದಲ ಸ್ಮರಣಾರ್ಥ ಸಮಾರಂಭದ ನೇತೃತ್ವವನ್ನು ಬಿ.ಆರ್.ಅಂಬೇಡ್ಕರ್ ಅವರು ವಹಿಸಿದ್ದರು. ಅಂದಿನಿಂದ ಪ್ರತಿ ವರ್ಷ ಜನವರಿ ೧ ರಂದು ಅಂಬೇಡ್ಕರ್ವಾದಿಗಳು ಭೀಮಾ ಕೋರೆಗಾಂವ್‌ನಲ್ಲಿ ತಮ್ಮನ್ನು ಕೀಳಾಗಿ ಕಾಣುವ ಮರಾಠ ಸಾಮ್ರಾಜ್ಯದ ಮೇಲ್ಜಾತಿ ಪೇಶ್ವೆ ಆಡಳಿತದ ವಿರುದ್ಧ ತಮ್ಮ ಪ್ರತಿರೋಧವನ್ನು ತೋರಿಸಲು ವಿಜಯ ದಿನವನ್ನು ಆಚರಿಸಲು ಸೇರುತ್ತಾರೆ. [೬] [೭] [೮] [೯] [೧೦] [೫]
ವಧು ಬುದ್ರುಕ್ ಪ್ರಚೋದಕ
ಬದಲಾಯಿಸಿಒಂದು ದಂತಕಥೆಯ ಪ್ರಕಾರ ಔರಂಗಜೇಬ್ ೧೬೮೯ ರಲ್ಲಿ ಸಂಭಾಜಿ ಮಹಾರಾಜನನ್ನು ಕೊಂದು ಅವನ ದೇಹದ ಭಾಗಗಳನ್ನು ವಿರೂಪಗೊಳಿಸಿದ್ದರು. ವಧು ಬುದ್ರುಕ್, ಭೀಮಾ ಕೋರೆಗಾಂವ್ ಸಮೀಪದ ಗ್ರಾಮದಿಂದ ಗೋವಿಂದ್ ಮಹಾರ್ ಎಂಬುವವರು ಅವರ ದೇಹದ ಭಾಗಗಳನ್ನು ಸಂಗ್ರಹಿಸಿ ಅಂತಿಮ ವಿಧಿಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದರು. ಆ ಗ್ರಾಮದಲ್ಲಿ ಸಂಭಾಜಿ ಮಹಾರಾಜರ ಸ್ಮಾರಕವನ್ನು ಆ ಗ್ರಾಮದ ದಲಿತ ಮಹಾರರು ನಿರ್ಮಿಸಿದ್ದರು ಮತ್ತು ಗೋವಿಂದ್ ಮಹಾರ್ ಅವರ ಮರಣದ ನಂತರ ಆ ಗ್ರಾಮದಲ್ಲಿ ಅವರ ಸಮಾಧಿಯನ್ನೂ ನಿರ್ಮಿಸಲಾಯಿತು. ಆದರೆ ಮರಾಠರು ಸಂಭಾಜಿ ಮಹಾರಾಜರ ಕೊನೆಯ ವಿಧಿಗಳಲ್ಲಿ ಗೋವಿಂದ್ ಗಾಯಕ್ವಾಡ್ ಮತ್ತು ಇತರ ಮಹರ್‌ಗಳ ಪಾತ್ರವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು, ಏಕೆಂದರೆ ಆ ಗ್ರಾಮದ ಮರಾಠರು ಶಿವಲೆ (ಹೊಲಿಗೆ ಎಂದು ಅರ್ಥ) ಎಂಬ ಉಪನಾಮವನ್ನು ಹೊಂದಿದ್ದರು ಮತ್ತು ಜನವರಿ ಹಿಂಸಾಚಾರದ ಹಿಂದಿನ ದಿನಗಳಲ್ಲಿ ಇವರು ಹೆಚ್ಚು ಸಕ್ರಿಯರಾಗಿದ್ದರು. ೨೦೧೮ ರಲ್ಲಿ ಭೀಮಾ ಕೋರೆಗಾಂವ್ ನ ಮಹರ್‌ಗಳ ಕೊಡುಗೆಗಳನ್ನು ಅಂಗೀಕರಿಸುವ ಸೈಟ್‌ನಲ್ಲಿನ ಚಿಹ್ನೆಗೆ ಅವರು ನಿರ್ದಿಷ್ಟ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರು. [೧] [೧೧]
ಜನವರಿ ೨೦೧೮ ರ ಘಟನೆಗಳು
ಬದಲಾಯಿಸಿಕೋರೆಗಾಂವ್ ಕದನದ ಸ್ಮರಣಾರ್ಥದ ಮೊದಲ ಬಾರಿಗೆ ಬಲಪಂಥೀಯ ದಲಿತ ಸಂಘಟನೆಗಳ ಸುಮಾರು ೨೫೦ ಗುಂಪುಗಳು ಎಲ್ಗಾರ್ ಪರಿಷದ್ ಬ್ಯಾನರ್ ಅಡಿಯಲ್ಲಿ ಒಟ್ಟುಗೂಡಿದವು ಮತ್ತು ಪೇಶ್ವೆಗಳ ಹಿಂದಿನ ಮುಖ್ಯ ಸ್ಥಾನವಾದ ಪುಣೆಯ ಶನಿವಾರ ವಾಡದಲ್ಲಿ ಸಮಾವೇಶವನ್ನು ಆಯೋಜಿಸಿದವು. ಭಾಷಣಕಾರರಲ್ಲಿ ಇಬ್ಬರು ನಿವೃತ್ತ ನ್ಯಾಯಾಧೀಶರು, ಬಿಜಿ ಕೋಲ್ಟೆ-ಪಾಟೀಲ್ ಮತ್ತು ಪಿಬಿ ಸಾವಂತ್, [೪] ಮತ್ತು ಇನ್ನೊಬ್ಬರು ಜಿಗ್ನೇಶ್ ಮೇವಾನಿ, ಗುಜರಾತ್ ವಿಧಾನಸಭೆಯ ಚುನಾಯಿತ ಸದಸ್ಯರು. ಪೇಶ್ವೆಗಳೊಂದಿಗೆ ಹಿಂದುತ್ವವನ್ನು ಸಮೀಕರಿಸುವುದು ಹಿಂದೂ ಗುಂಪುಗಳನ್ನು ಕೆರಳಿಸಿದೆ ಎಂದು ಹೇಳಲಾಗುತ್ತದೆ. [೬]
ಪ್ರತಿ ವರ್ಷದಂತೆ ಜನವರಿ ೧ ರಂದು ಭೀಮಾ ಕೋರೆಗಾಂವ್‌ಗೆ ದಲಿತ ಸಂಘಟನೆಗಳು ಹರಿದು ಬಂದವು. ಮರಾಠಾ ದೊರೆ ಸಂಭಾಜಿಯ ಅಂತಿಮ ಸಂಸ್ಕಾರವನ್ನು ಯಾವ ಸಮುದಾಯದವರು ನಡೆಸಿದರು - ಮಹಾರ್ ಅಥವಾ ಮರಾಠಾ? ಎಂಬ ಪ್ರಶ್ನೆಗೆ ಪಕ್ಕದ ಹಳ್ಳಿಯಲ್ಲಿ ಉದ್ವಿಗ್ನತೆ ಪ್ರಾರಂಭವಾಯಿತು. ಭೀಮಾ ಕೋರೆಗಾಂವ್‌ನ ಪಂಚಾಯತ್ ಆ ದಿನ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಕರೆ ನೀಡುವ ಮೂಲಕ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ನಿವಾಸಿಗಳಿಗೆ ನೋಟಿಸ್ ನೀಡಿತು. [೧೨]
ಸನಸವಾಡಿ ಪಂಚಾಯತ್‌ಗಳಲ್ಲಿ ಸಂಪೂರ್ಣ ಮುಷ್ಕರ ಮತ್ತು ಜನವರಿ ೧, ೨೦೧೮ ಅನ್ನು ಕರಾಳ ದಿನವನ್ನಾಗಿ ಆಚರಿಸಲು ಆದೇಶ ನೀಡಿಲಾಯಿತು. ಈ ಆದೇಶದ ನಂತರ ಜನವರಿ ೧ ರಂದು ವಧು ಬದ್ರುಕ್ ಪ್ರದೇಶದಲ್ಲಿ ಗುಂಪೊಂದು ವಿಜಯ ಸ್ತಂಭದ ಸುತ್ತ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದ ದಲಿತರ ಮೇಲೆ ಹಲ್ಲೆ ನಡೆಸಿತು. ಹಿಂದೂ ಮುಖಂಡರಾದ ಮಿಲಿಂದ್ ಎಕ್ಬೋಟೆ ಮತ್ತು ಸಂಭಾಜಿ ಭಿಡೆ ಅವರು ದಲಿತರ ಮೆರವಣಿಗೆಯ ವಿರುದ್ಧ ಗುಂಪನ್ನು ಪ್ರಚೋದಿಸಿದರು, ಹಾಗಾಗಿ ಅಲ್ಲಿ ಅಶಾಂತಿ ನೆಲೆಸಿತ್ತು ಎಂದು ಆರೋಪಿಸಲಾಗಿದೆ. ನಂತರ ಅವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಯಿತು. ಆದರೆ ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಕಾರಣಕ್ಕಾಗಿ [೧೩] ದಲಿತ ಸಂಘಟನೆಗಳು ಮಹಾರಾಷ್ಟ್ರದಾದ್ಯಂತ ರಸ್ತೆಗಳನ್ನು ತಡೆದು ಪ್ರತಿಭಟನೆಗಳನ್ನು ಆರಂಭಿಸಿದವು. ಈ ಸಮಯದಲ್ಲಿ [೧೪] ಹಿಂಸಾಚಾರವು ಪುಣೆಯಾದ್ಯಂತ ವರದಿಯಾಯಿತು - ಹಿಂಸಾಚಾರದ ಸಮಯದಲ್ಲಿ ೧೬ ವರ್ಷದ ಬಾಲಕ ಕೊಲ್ಲಲ್ಪಟನು. [೧೫] ೩ ನೇ ಜನವರಿ ೨೦೧೮ ರಂದು ಪ್ರಕಾಶ್ ಅಂಬೇಡ್ಕರ್ ಅವರು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದರು. ಇದರ ಪರಿಣಾಮವು ಮಹಾರಾಷ್ಟ್ರದಾದ್ಯಂತ ವಿವಿಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಯಿತು, ಇದರ ಪರಿಣಾಮವಾಗಿ ೩೦ ಪೊಲೀಸರು ಗಾಯಗೊಂಡರು ಮತ್ತು ೩೦೦ ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. [೧೬] ಮಹಾರಾಷ್ಟ್ರದಾದ್ಯಂತ ಪ್ರತಿಭಟನೆಗಳುನಡೆದವು. ಮುಂಬೈನಲ್ಲಿ ಸಬ್‍ಅರ್ಬನ್ ರೈಲುಗಳ ಮೇಲೆ ಪರಿಣಾಮ ಬೀರಿದ್ದರಿಂದ ಡಬ್ಬಾವಾಲಾಗಳು ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಬೇಕಾಯಿತು. [೧೭]
ನಂತರದ ಪರಿಣಾಮ
ಬದಲಾಯಿಸಿ- ೨ ಜನವರಿ ೨೦೧೮ ರಂದು ದಲಿತರ ಮೇಲೆ ಹಿಂಸಾಚಾರವನ್ನು ಪ್ರಚೋದಿಸಿದಕ್ಕಾಗಿ ಸಂಭಾಜಿ ಭಿಡೆ ಮತ್ತು ಮಿಲಿಂದ್ ಎಕ್ಬೋಟೆ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. [೧೮]
- ಫೆಬ್ರವರಿ ೨೦೧೮ ರಲ್ಲಿ, ಮಿಲಿಂದ್ ಎಕ್ಬೋಟೆ ವಿರುದ್ಧದ ತನಿಖೆಯಲ್ಲಿ ನಿಧಾನಗತಿಯ ಪ್ರಗತಿಗಾಗಿ ರಾಜ್ಯ ಸರ್ಕಾರ ಮತ್ತು ತನಿಖಾ ಸಂಸ್ಥೆಗಳನ್ನು ಸುಪ್ರೀಂ ಕೋರ್ಟ್ ಟೀಕಿಸಿತು, ಅವರು 'ಪತ್ತೆಹಚ್ಚಲು ಸಾಧ್ಯವಿಲ್ಲ' ಎಂದು ಹೇಳಲಾದ ಏಜೆನ್ಸಿಗಳ ಹೇಳಿಕೆಗಳನ್ನು ನ್ಯಾಯಾಲಯ ಪ್ರಶ್ನಿಸಿತು. ಏಕ್ಬೋಟೆ ಪತ್ತೆಗಾಗಿ ಪೊಲೀಸರು ಪುಣೆ ಮತ್ತು ಕೊಲ್ಹಾಪುರದ ಎಲ್ಲಾ ಹೋಟೆಲ್‌ಗಳು ಮತ್ತು ಲಾಡ್ಜ್‌ಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯ ವಿಧಾನಸಭೆಯಲ್ಲಿ ಹೇಳಿದರು ಕೂಂಬಿಂಗ್ ಕಾರ್ಯಾಚರಣೆಗಳನ್ನು ನಡೆಸಿ ಅವರ ಅನುಯಾಯಿಗಳನ್ನು ವಶಕ್ಕೆ ತೆಗೆದುಕೊಂಡರು ಮತ್ತು ೧೦೦ ಕ್ಕೂ ಹೆಚ್ಚು ಕರೆ ದಾಖಲೆಗಳನ್ನು ಪರಿಶೀಲಿಸಿದರು ಆದರೂ ಅವರನ್ನು ಪತ್ತೆಹಚ್ಚಲು ಪೋಲಿಸರು ವಿಫಲರಾದರು. [೧೯]
- ಕೊನೆಗೆ ೧೪ ನೇ ಮಾರ್ಚ್ ೨೦೧೮ ರಂದು ಪುಣೆಯ ಜಿಲ್ಲಾ ಗ್ರಾಮಾಂತರ ಪೊಲೀಸರು ಮಿಲಿಂದ್ ಎಕ್ಬೋಟೆಯನ್ನು ಬಂಧಿಸಿದರು ಮತ್ತು ಇವರಿಗೆ ವಿಚಾರಣೆಗೆ ಐದು ಬಾರಿ ಸಮನ್ಸ್ ನೀಡಿದರೂ ತನಿಖಾ ಸಂಸ್ಥೆಗಳಿಗೆ ಸಹಕರಿಸದ ಮತ್ತು ಅವರ ಮೊಬೈಲ್ ಫೋನ್ ನೀಡಲು ನಿರಾಕರಿಸಿದ ಕಾರಣ ಸುಪ್ರೀಂ ಕೋರ್ಟ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ರದ್ದುಗೊಳಿಸಿತು. [೨೦] [೨೧]
- ೨೨ ಏಪ್ರಿಲ್ ೨೦೧೮ ರಂದು, ಹಿಂಸಾಚಾರದಲ್ಲಿ ಮನೆ ಸುಟ್ಟುಹೋದ ಹತ್ತೊಂಬತ್ತು ವರ್ಷದ ದಲಿತ ಸಾಕ್ಷಿಯು ಬಾವಿಯಲ್ಲಿ ಶವವಾಗಿ ಪತ್ತೆಯಾಯಿತು . ಆಕೆಯ ಹೇಳಿಕೆಯನ್ನು ಹಿಂಪಡೆಯುವಂತೆ ಆಕೆಯ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದರು. [೨೨] ಆಕೆಯ ಸಹೋದರ ಜೈದೀಪ್ ಸಹ ಸಾಕ್ಷಿಯಾಗಿದ್ದು ಅವನನ್ನು ಯಾವದೋ ಕೊಲೆ ಯತ್ನದ ಆರೋಪದ ಮೇಲೆ ಪುಣೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. [೨೩]
- ನಂತರದ ತಿಂಗಳುಗಳಲ್ಲಿ ಪೋಲೀಸರ ತನಿಖೆಯು ವಿವಿಧ ವ್ಯಕ್ತಿಗಳ ಬಂಧನಕ್ಕೆ ಕಾರಣವಾಯಿತು. ಉದಾಹರಣೆಗೆ ಜೂನ್ ೨೦೧೮ ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ರೋನಾ ವಿಲ್ಸನ್ ಅವರನ್ನು ಬಂಧಿಸಲಾಯಿತು. [೨೪]
- ಆಗಸ್ಟ್ ೨೦೧೮ ರಲ್ಲಿ ವರವರ ರಾವ್, ಅರುಣ್ ಫೆರೇರಾ, ಸುಧಾ ಭಾರದ್ವಾಜ್ ಮತ್ತು ಗೌತಮ್ ನವ್ಲಾಖಾ ಸೇರಿದಂತೆ ಐವರು ದಲಿತ ಕಾರ್ಯಕರ್ತರ ಮೇಲೆ ದೇಶಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಲಾಯಿತು,ಇವರ ಭೀಮಾ ಕೋರೆಗಾಂವ್ ಘಟನೆಯ ಸಂಬಂಧವನ್ನು ಹೊರತುಪಡಿಸಿ ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆಂದು ಪೊಲೀಸರು ಆರೋಪಿಸಿದರು. [೨೫]
- ಜನವರಿ ೨೨, ೨೦೨೦ ರಂದು, ಹೊಸದಾಗಿ ಚುನಾಯಿತವಾದ ಮಹಾರಾಷ್ಟ್ರ ಸರ್ಕಾರವು ತನಿಖೆಯನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡವನ್ನು ರಚಿಸಿ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿತು. [೨೬]
- ಜನವರಿ ೨೫, ೨೦೨೦ ರಂದು, ಕೇಂದ್ರ ಗೃಹ ಸಚಿವಾಲಯದ ಕೇಂದ್ರ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ದಳ ಮಹಾರಾಷ್ಟ್ರ ಸರ್ಕಾರದಿಂದ ಪ್ರಕರಣವನ್ನು ವಹಿಸಿಕೊಂಡಿದೆ. ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮೊದಲು ಕೇಂದ್ರ ಸರ್ಕಾರವು ರಾಜ್ಯದ ಒಪ್ಪಿಗೆಯನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. [೨೭]
- ಅಕ್ಟೋಬರ್ ೨೦೨೦ ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಘಟನೆಯ ಬಗ್ಗೆ ೧೦,೦೦೦ ಪುಟಗಳ ಚಾರ್ಜ್‌ಶೀಟ್ ಅನ್ನು ಬಿಡುಗಡೆ ಮಾಡಿತು ಇದರಲ್ಲಿ ಜೆಸ್ಯೂಟ್ ಪಾದ್ರಿ ಫ್ರಾ ಸ್ಟಾನ್ ಸ್ವಾಮಿ ಸೇರಿದಂತೆ ಇತರರು[೨೮] ದಲಿತ ಮತ್ತು ಮುಸ್ಲಿಂ ಶಕ್ತಿಗಳನ್ನು ಒಟ್ಟುಗೂಡಿಸಲು ಸಂಚು ರೂಪಿಸಿದ್ದಾರೆ ಎಂದು ಎನ್ಐಎ ಆರೋಪಿಸಿದೆ.ಮತ್ತು ಕೇಂದ್ರದಲ್ಲಿ ಇರುವದು ಫ್ಯಾಸಿಸ್ಟ್ ಸರ್ಕಾರ ಎಂದು ಉಲ್ಲೇಖಿಸಲಾಗಿದೆ. ಇವರು ನಿಷೇಧಿತ ಎಡಪಂಥೀಯ ಭಯೋತ್ಪಾದಕ ಸಂಘಟನೆಯಾದ ಸಿಪಿಐ (ಮಾವೋವಾದಿ) ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಎನ್ಐಎ ಆರೋಪಿಸಿದೆ. [೨೯]
- ಮ್ಯಾಸಚೂಸೆಟ್ಸ್ ಮೂಲದ ಡಿಜಿಟಲ್ ಫೊರೆನ್ಸಿಕ್ಸ್ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್‌ನ ವರದಿಯ ಪ್ರಕಾರ, ರೋನಾ ವಿಲ್ಸನ್ ವಿರುದ್ಧ ದೋಷಾರೋಪಣೆಯ ಸಾಕ್ಷ್ಯವನ್ನು ಯಾವದೆ ರೀತಿಯಲ್ಲಿ ಕದಿಯದ ಹಾಗೆ ರಕ್ಷಣಾತ್ಮಕವಾದ ತಂತ್ರಜ್ಞಾನವನ್ನು ಬಳಸಿಕೊಂದು ಅವರ ಲ್ಯಾಪ್‌ಟಾಪ್‌ನಲ್ಲಿ ಇರಿಸಿದ್ದಾರೆ, ಆದರೆ ಅವರ ಲ್ಯಾಪ್‌ಟಾಪ್ ೨೨ ತಿಂಗಳುಗಳಿಗಿಂತ ಹೆಚ್ಚು ಕಾಲ ರಕ್ಷಣೆಯನ್ನು ಹೊಂದಿದೆ. [೩೦] [೩೧]
ಸತ್ಯಶೋಧನಾ ಆಯೋಗ
ಬದಲಾಯಿಸಿಫೆಬ್ರವರಿ ೨೦೧೮ ರಲ್ಲಿ, ಮಹಾರಾಷ್ಟ್ರ ಗೃಹ ಇಲಾಖೆಯು ಸತ್ಯಶೋಧನಾ ಆಯೋಗವನ್ನು ಸ್ಥಾಪಿಸಿತು. ಈ ಆಯೋಗವು ಕಲ್ಕತ್ತಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಜೆಎನ್ ಪಟೇಲ್ ಮತ್ತು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಸುಮಿತ್ ಮುಲ್ಲಿಕ್ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ ೨೦೧೮ ರಲ್ಲಿ ಕಾರ್ಯಾರಂಭ ಮಾಡಿತು. [೩೨] ಆಯೋಗದ ಅಧಿಕಾರಾವಧಿಯು ೮ ಏಪ್ರಿಲ್ ೨೦೨೦ ರಂದು ಮುಕ್ತಾಯಗೊಂಡಿತು ಮತ್ತು ಅವರು ಆರು ತಿಂಗಳ ಕಾಲ ವಿಸ್ತರಿಸಲು ವಿನಂತಿಸಿದ್ದರು.
ಬಂಧನಗಳು
ಬದಲಾಯಿಸಿ- ೮ ಜೂನ್ ೨೦೧೮: ಪುಣೆ ಪೊಲೀಸರು ಸುರೇಂದ್ರ ಗಡ್ಲಿಂಗ್, ಸುಧೀರ್ ಧವಳೆ, ರೋನಾ ವಿಲ್ಸನ್, ಶೋಮಾ ಸೇನ್ ಮತ್ತು ಮಹೇಶ್ ರಾವುತ್ ಅವರನ್ನು ಗಲಭೆಗಳನ್ನು ಪ್ರಚೋದಿಸುವ ಆರೋಪದ ಮೇಲೆ ಮಾವೋವಾದಿ ಸಂಪರ್ಕದೊಂದಿಗೆ ಬಂಧಿಸಿದರು. [೩೩] [೩೪]
- ೨೮ ಆಗಸ್ಟ್ ೨೦೧೮: ಪುಣೆ ಪೋಲೀಸರು ಒಂಬತ್ತು ಬಲಪಂಥೀಯ ಹಕ್ಕುಗಳ ಕಾರ್ಯಕರ್ತರನ್ನು ಹುಡುಕಾಡಿ, ಅವರಲ್ಲಿ ಐವರನ್ನು ಬಂಧಿಸಿದರು. ಬಂಧಿತರಲ್ಲಿ ಕಾರ್ಯಕರ್ತರಾದ ವರವರ ರಾವ್, ವಕೀಲೆ ಸುಧಾ ಭಾರದ್ವಾಜ್ ಮತ್ತು ಕಾರ್ಯಕರ್ತರಾದ ಅರುಣ್ ಫೆರೇರಾ, ಗೌತಮ್ ನವ್ಲಾಖಾ ಮತ್ತು ವೆರ್ನಾನ್ ಗೊನ್ಸಾಲ್ವಿಸ್ ಸೇರಿದ್ದಾರೆ. [೩೫] ಅವರನ್ನು ‘ಗೃಹಬಂಧನ’ದಲ್ಲಿರಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. [೩೬]
- ೧೨ ಸೆಪ್ಟೆಂಬರ್ ೨೦೧೮: ಸುಪ್ರೀಂ ಕೋರ್ಟ್ ಗೃಹ ಬಂಧನವನ್ನು ೧೭ ಸೆಪ್ಟೆಂಬರ್ ೨೦೧೮ ರವರೆಗೆ ವಿಸ್ತರಿಸಿತು. [೩೬]
- ೨೮ ಸೆಪ್ಟೆಂಬರ್ ೨೦೧೮: ಸುಪ್ರೀಂ ಕೋರ್ಟ್ ಗೃಹ ಬಂಧನವನ್ನು ಇನ್ನೂ ನಾಲ್ಕು ವಾರಗಳವರೆಗೆ ವಿಸ್ತರಿಸಿತು. ಆದರೆ ವಿಶೇಷ ತನಿಖಾ ತಂಡದ ನೇಮಕಾತಿಯನ್ನು ರದ್ದುಮಾಡಿತು. [೩೭] [೩೮]
- ೨೬ ಅಕ್ಟೋಬರ್ ೨೦೧೮: ಆರೋಪಿಗಳಾದ ಅರುಣ್ ಫೆರೇರಾ ಮತ್ತು ವೆರ್ನಾನ್ ಗೊನ್ಸಾಲ್ವಿಸ್ ಅವರನ್ನು ಪೊಲೀಸರು ಬಂಧಿಸಿದ್ದರು. ಮರುದಿನ ಮತ್ತೊಬ್ಬ ಆರೋಪಿ ಸುಧಾ ಭಾರದ್ವಾಜ್ ಅವರನ್ನು ವಶಕ್ಕೆ ಪಡೆಯಲಾಯಿತು.
- ೧೭ ನವೆಂಬರ್ ೨೦೧೮ ರ ರಾತ್ರಿ: ಪುಣೆ ಪೊಲೀಸರು ಕಾರ್ಯಕರ್ತ ವರವರ ರಾವ್ ಅವರನ್ನು ಬಂಧಿಸಿದರು.
- ಪೊಲೀಸರ ಪ್ರಕಾರ, ಬಂಧಿತ ಎಲ್ಲ ಕಾರ್ಯಕರ್ತರು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದರು ಅವರು ೩೧ ಡಿಸೆಂಬರ್ ೨೦೧೭ ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಕಾರ್ಯಕ್ರಮವನ್ನು ಬೆಂಬಲಿಸಿದರು. 1 ಜನವರಿ ೨೦೧೮ ರಂದು ಭೀಮಾ ಕೋರೆಗಾಂವ್ ಕದನದ ೨೦೦ ನೇ ವಾರ್ಷಿಕೋತ್ಸವವನ್ನು ಸಂಭ್ರಮಿಸಲು ಸಾವಿರಾರು ಜನರು ಅಲ್ಲಿ ಜಮಾಯಿಸಿದಾಗ ಎಲ್ಗರ್ ಪರಿಷದ್ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.
- ರಾವ್ ಬಂಧನದೊಂದಿಗೆ ಒಂದು ವಾರದ ಹಿಂದೆಯಷ್ಟೇ ಐವರು ಬಲಪಂತೀಯ ಹಕ್ಕುಗಳ ಕಾರ್ಯಕರ್ತರು ಸೇರಿದಂತೆ ೧೦ ಜನರ ವಿರುದ್ಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಡಿಸೆಂಬರ್ ೩೧ ರಂದು ನಿಷೇಧಿತ ಸಿಪಿಐ (ಮಾವೋವಾದಿ) ಯೋಜನೆಯ ಪ್ರಕಾರ ದಲಿತ ಗುಂಪುಗಳು ಮತ್ತು ಇತರ ಸಂಘಟನೆಗಳನ್ನು ಆಡಳಿತ ಸರಕಾರದ ವಿರುದ್ದ ಸಜ್ಜುಗೊಳಿಸಲಾಗಿತ್ತು ಎಂದು ಅದು ಹೇಳಿದೆ. ಸಮಾರಂಭದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಜನಸಾಮಾನ್ಯರನ್ನು ಪ್ರಚೋದಿಸಿದವು ಮತ್ತು ಅಂದಿನ ಹಿಂಸಾಚಾರವನ್ನು ಈ ಘಟನೆಗಳು ಹೆಚ್ಚಿಸಿದವು ಎಂದು ಅದು ಹೇಳಿದೆ. ಪೊಲೀಸ್ ದಾಖಲೆಯ ಪ್ರಕಾರ ಕಾರ್ಯಕರ್ತರು ಮತ್ತು ಇತರರ ಸಿಪಿಐ (ಮಾವೋವಾದಿ) ಸಕ್ರಿಯ ಸದಸ್ಯರಷ್ಟೆ ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೂ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. [೩೯]
- ೧೪ ಏಪ್ರಿಲ್ ೨೦೨೦ ರಂದು, ಡಾ ಅಂಬೇಡ್ಕರ್ ಅವರ ೧೨೯ ನೇ ಜನ್ಮದಿನದಂದು ಅವರ ಮೊಮ್ಮಗ ಆನಂದ್ ತೇಲ್ತುಂಬ್ಡೆ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಬಂ.ಐ.ಎ ಬಂಧಿಸಿತು. ಏಪ್ರಿಲ್ ೮ ರಂದು ಅವರ ಬಂಧನಕ್ಕೆ ಒಂದು ವಾರದ ಮೊದಲು ಭಾರತದ ಸುಪ್ರೀಂ ಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತು. [೪೦] ಆನಂದ್ ತೇಲ್ತುಂಬ್ಡೆ ತನ್ನ ಸಹಚರರೊಂದಿಗೆ ಆರ್‌ಡಿಎಫ್ ( ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ) ಮತ್ತು ಸಿಪಿಐ (ಮಾವೋವಾದಿ) ನೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಕೊರ್ಚಿ ಅರಣ್ಯ ಪ್ರದೇಶದಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತರಬೇತಿಯನ್ನು ಆಯೋಜಿಸಿದ್ದರು ಎಂದು ಎನ್‌ಐಎ ನಂತರ ಬಹಿರಂಗಪಡಿಸಿತು. ಮಹಾರಾಷ್ಟ್ರ . [೪೧] [೪೨]
- ೯ ಅಕ್ಟೋಬರ್ ೨೦೨೦ ರಂದು, ಪ್ರಕರಣಕ್ಕೆ ಸಂಬಂಧಿಸಿದಂತೆ ೮೩ ವರ್ಷದ ಫಾದರ್ ಸ್ಟಾನ್ ಸ್ವಾಮಿಯನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತು. ಸ್ವಾಮಿ ಮತ್ತು ಸುಧಾ ಭಾರದ್ವಾಜ್ ಸಹ-ಸಂಘಟಿಸಿದ ಕಿರುಕುಳಕ್ಕೊಳಗಾದ ಕೈದಿಗಳ ಐಕ್ಯತಾ ಸಮಿತಿ (ಪಿಪಿಎಸ್‌ಸಿ) ಮಾವೋವಾದಿಗಳ ಮುಂಭಾಗವಾಗಿದೆ ಎಂದು ಎನ್ಐಎ ಆರೋಪಿಸಿದೆ. [೪೩] [೪೪]
ಸ್ವತಂತ್ರ ವರದಿಗಳು
ಬದಲಾಯಿಸಿಮುಖ್ಯವಾಗಿ ನಿವೃತ್ತ ಸೇನಾ ಅಧಿಕಾರಿಗಳನ್ನು ಒಳಗೊಂಡ ಫೋರಮ್ ಫಾರ್ ಇಂಟಿಗ್ರೇಟೆಡ್ ನ್ಯಾಶನಲ್ ಸೆಕ್ಯುರಿಟಿ (ಎಫ್‌ಐಎನ್‌ಎಸ್) ಎಂಬ ಆರ್‌ಎಸ್‌ಎಸ್ ಬೆಂಬಲಿತ ಚಿಂತಕರ ಚಾವಡಿಯು ಭೀಮಾ ಕೋರೆಗಾಂವ್ ಗಲಭೆಯ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯು ಬಿಜೆಪಿ ಕಾರ್ಪೊರೇಟರ್ ಮಿಲಿಂದ್ ಎಕ್ಬೋಟೆ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತ ಸಂಭಾಜಿ ಭಿಡೆ ಅವರನ್ನು ನೇರ ಬಾಗವಹಿಸುವಿಕೆಯಿಂದ ಮುಕ್ತಗೊಳಿಸಿದೆ. ಬದಲಾಗಿ ದಲಿತ ಕಾರ್ಯಕರ್ತರನ್ನು ಪ್ರಚೋದಿಸಲು ಮಾವೋವಾದಿಗಳನ್ನು (ಅತಿ ಎಡಪಂಥೀಯ ಸಂಘಟನೆಗಳು) ದೂಷಿಸಿದೆ. ಇದು ಮಹಾರಾಷ್ಟ್ರ ಪೊಲೀಸರನ್ನು ಸಹ ಉದಾಸೀನತೆ ಮತ್ತು ಸಾಕ್ಷ್ಯವನ್ನು ಕಡೆಗಣಿಸುವುದಕ್ಕಾಗಿ ದೂಷಿಸಿದೆ. [೪೫] [೪೬] [೪೭] [೪೮] ಪುಣೆ ಪೊಲೀಸರು ನ್ಯಾಯಾಲಯದಲ್ಲಿ ಫ಼ಿನ್ಸ್ ವರದಿಯನ್ನು ಹೋಲುವ ಹಕ್ಕುಗಳನ್ನು ಮಾಡಿದ್ದಾರೆ ಎಂದು ವಿಶ್ಲೇಷಣೆ ತೋರಿಸುತ್ತದೆ. [೪೯] ಇದಕ್ಕೆ ವ್ಯತಿರಿಕ್ತವಾಗಿ, ಬಲಪಂಥೀಯ ಕಾರ್ಯಕರ್ತರಾದ ಸಂಭಾಜಿ ಭಿಡೆ ಮತ್ತು ಮಿಲಿಂದ್ ಎಕ್ಬೋಟೆ ಅವರು ಸಂಪೂರ್ಣ ಹಿಂಸಾಚಾರವನ್ನು ಮೊದಲೇ ಯೋಜಿಸಿದ್ದರು ಎಂದು ಉಪಮೇಯರ್ ಸಿದ್ಧಾರ್ಥ್ ಧೆಂಡೆ ನೇತೃತ್ವದ ಬಹು-ಸದಸ್ಯ ವಾಸ್ತವಶೋಧನಾ ಸಮಿತಿಯ ವರದಿ ಸಲ್ಲಿಸಿತು. [೫೦] ಎಫ್‌ಐಆರ್‌ನಲ್ಲಿ ಆರಂಭದಲ್ಲಿ ಹೆಸರಿಸಲಾದ ಬಲಪಂಥೀಯ ಕಾರ್ಯಕರ್ತರು ವಿಭಜಕ ವಾತಾವರಣವನ್ನು ಸೃಷ್ಟಿಸುತ್ತಿರುವಾಗ ಇನ್ನೂ ಹೇಗೆ ಸಂದರ್ಶನಗಳನ್ನು ನೀಡಲು ಸಾಧ್ಯವಾಯಿತು ಎಂದು ರಾಷ್ಟ್ರ ಸೇವಾ ದಳ (ಆರ್‌ಎಸ್‌ಡಿ) ವರದಿ ಪ್ರಶ್ನಿಸಿತು. ಯಾವುದೇ ಲೋಪದೋಷಗಳಿಗೆ ಆಡಳಿತವನ್ನು ಹೊಣೆಗಾರರನ್ನಾಗಿ ಮಾಡಲು ನ್ಯಾಯಾಂಗ ತನಿಖೆಗೆ ಆರ್.ಎಸ್.ಡಿ ಕರೆ ನೀಡಿತು. [೫೧]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Pol, Prabodhan (2018-01-04). "Understanding Bhima Koregaon". The Hindu (in Indian English). ISSN 0971-751X. Retrieved 2018-09-01.
- ↑ "Dalits protest death of 28-year-old in Bhima Koregaon clashes". Hindustantimes (in Indian English). 2018-01-02. ISSN 0971-751X. Retrieved 2018-01-02.
- ↑ Staff, The Wire. "'Pune ATS Spreading Panic in My Neighbourhood': Justice (Retd) B. G. Kolse Patil". The Wire. The Wire. Retrieved 25 October 2020.
- ↑ ೪.೦ ೪.೧ Katakam, Anupama. "Elgar Parishad case: Victims of vendetta". Frontline. Retrieved 25 October 2020.
- ↑ ೫.೦ ೫.೧ Aarefa Johari, Abishek Dey, Mridula Chari & Shone Satheesh, From Pune to Paris: How a police investigation turned a Dalit meeting into a Maoist plot, Scroll.in, 1 September 2018.
- ↑ ೬.೦ ೬.೧ Bhima Koregaon: How and Why the January Violence Snowballed Into Arrest of Rights Activists, News18, 29 August 2018.
- ↑ "Caste violence erupts in India over 200-year-old faultline". CNN. 5 January 2018. Retrieved 8 January 2018.
- ↑ "Monument at Koregaon". The Indian Express (in ಅಮೆರಿಕನ್ ಇಂಗ್ಲಿಷ್). 2018-01-02. Retrieved 2018-01-07.
- ↑ Banerjee, Shoumojit (2 January 2018). "How a British war memorial became a symbol of Dalit pride". The Hindu. Retrieved 8 January 2018.
- ↑ Let’s Rewind 200 Years to Understand Bhima Kore Violence, The Quint, 4 January 2018.
- ↑ "Removal of Mahar samadhi board near Pune sparked clashes". The Indian Express (in ಅಮೆರಿಕನ್ ಇಂಗ್ಲಿಷ್). 2018-01-04. Retrieved 2018-09-01.
- ↑ Aarefa Johari, Abhishek Dey. "From Pune to Paris: How a police investigation turned a Dalit meeting into a Maoist plot". Scroll.in (in ಅಮೆರಿಕನ್ ಇಂಗ್ಲಿಷ್). Retrieved 2019-04-15.
- ↑ https://thewire.in/law/independent-inquiry-pune-police-inaction-bhima-koregaon-violence.
{{cite news}}
: Missing or empty|title=
(help) - ↑ Banerjee, Shoumojit (2018-01-02). "Protests spread in Maharashtra post clashes during bicentenary celebrations of Bhima-Koregaon battle". The Hindu (in Indian English). ISSN 0971-751X. Retrieved 2018-08-31.
- ↑ "Maharashtra bandh: Minor boy killed as shutdown called by Dalit parties paralyses state". Retrieved 2018-01-07.
- ↑ PTI (2018-01-04). "Maharashtra protests: Over 30 cops injured, 300 persons detained". livemint.com/. Retrieved 2018-01-07.
- ↑ Srinivasan, Madhuvanti (2018-01-04). "Trains hit, dabbawalas suspend services". The Hindu (in Indian English). ISSN 0971-751X. Retrieved 2018-01-07.
- ↑ "Bhima Koregaon Violence: Petition Before Bombay HC Seeking Arrest Of Sambhaji Bhide". Live Law (in ಅಮೆರಿಕನ್ ಇಂಗ್ಲಿಷ್). 2018-08-31. Retrieved 2018-08-31.
- ↑ "Bhima Koregaon Violence: Maharashtra to Withdraw All Cases Barring Major Ones". The Wire. Retrieved 2018-08-31.
- ↑ Banerjee, Shoumojit (2018-03-14). "Bhima-Koregaon violence: prime accused Milind Ekbote arrested". The Hindu (in Indian English). ISSN 0971-751X. Retrieved 2018-08-31.
- ↑ "Right-Wing Leader Milind Ekbote Arrested After SC Rejects His Anticipatory Bail Plea". The Wire. Retrieved 2018-08-31.
- ↑ "Dalit Girl, Witness To Bhima Koregaon Violence, Found Dead In Well Near Pune". NDTV.com. Retrieved 2018-08-31.
- ↑ "Bhima Koregaon shadow over death of Dalit witness". The Indian Express (in ಅಮೆರಿಕನ್ ಇಂಗ್ಲಿಷ್). 2018-04-25. Retrieved 2018-08-31.
- ↑ "Bhima Koregaon: How and Why the January Violence Snowballed Into Arrest of Rights Activists". News18. Retrieved 2018-09-01.
- ↑ "Bhima Koregaon violence probe: Police claim conclusive proof against activists, seize 'letters' planning 'big action' - Firstpost". firstpost.com. 31 August 2018. Retrieved 2018-09-01.
- ↑ "Maharashtra Home Minister Seeks Probe Report On Bhima Koregaon Case". NDTV. NDTV. Retrieved 9 October 2020.
- ↑ "NIA takes over Koregaon-Bhima probe, Maharashtra minister Anil Deshmukh hits out at Centre". India Today. India Today. Retrieved 9 October 2020.
- ↑ Gupta, Saurabh (23 October 2020). "NIA Court Rejects Tribal Activist Stan Swamy's Bail Plea". NDTV. Retrieved 23 October 2020.
- ↑ Sandhu, Kamaljit Kaur (2020-10-13). "This is what NIA's Bhima Koregaon chargesheet says about Stan Swamy". India Today (in ಇಂಗ್ಲಿಷ್). Retrieved 2020-10-13.
- ↑ "They were accused of plotting to overthrow the Modi government. The evidence was planted, new report says". The Washington Post. 10 February 2021. Retrieved 11 February 2021.
- ↑ "Evidence planted in Bhima Koregaon accused Rona Wilson's computer: US firm". The Tribune. 11 February 2021. Retrieved 11 February 2021.
- ↑ Ganapatye, Shruti (19 June 2020). "Bhima Koregaon commission to 'wind up'?". Mumbai Mirror. Retrieved 1 November 2020.
- ↑ "Bhima-Koregaon violence: Police arrest 5 with alleged Maoist links for inciting riots". hindustantimes.com/ (in ಇಂಗ್ಲಿಷ್). 6 June 2018. Retrieved 30 October 2018.
- ↑ "Activists case: Pune police gets 90 more days for probe - Times of India". The Times of India. Retrieved 30 October 2018.
- ↑ After Arrest Of Activists Over "Maoist Plot", A Midnight Drama: 10 Facts, NDTV News, 29 August 2018.
- ↑ ೩೬.೦ ೩೬.೧ "Bhima Koregaon violence case: Five activists will remain under house arrest till September 17, says SC". The Indian Express (in ಅಮೆರಿಕನ್ ಇಂಗ್ಲಿಷ್). 2018-09-12. Retrieved 2018-09-12.
- ↑ Rautray, Samanwaya (2018-09-28). "Bhima-Koregaon case: Supreme Court refuses to interfere with arrests of five activists". The Economic Times. Retrieved 2018-09-28.
- ↑ "Supreme Court Extends Activists' House Arrest By 4 Weeks: LIVE Updates". NDTV.com. Retrieved 2018-09-28.
- ↑ "Bhima Koregaon case: Activist Varavara Rao arrested from Hyderabad". November 18, 2018.
- ↑ MN, Parth. "India arrests activist Anand Teltumbde over 2018 caste violence". www.aljazeera.com (in ಇಂಗ್ಲಿಷ್). Retrieved 2020-10-14.
- ↑ "Bhima Koregaon: Milind Teltumbde organised weapons training in forests, says NIA". mid-day (in ಇಂಗ್ಲಿಷ್). 2020-10-14. Retrieved 2020-10-15.
- ↑ "Bhima Koregaon: Teltumbde organised weapons training in forests". Sify (in ಇಂಗ್ಲಿಷ್). Retrieved 2020-10-15.
- ↑ "In 10,000-page chargsheet, NIA names 8 accused in Elgar Parishad case". Hindustan Times (in ಇಂಗ್ಲಿಷ್). 2020-10-09. Retrieved 2020-10-13.
- ↑ "NIA arrests activist Stan Swamy in Bhima-Koregaon violence case". Hindustan Times (in ಇಂಗ್ಲಿಷ್). 2020-10-09. Retrieved 2020-10-13.
- ↑ Vivek Bhavsar, Bhima-Koregaon violence: RSS-linked committee blames police apathy, The Free Press Journal, 3 March 2018.
- ↑ Mridula Chari, Bhima Koregaon case: A curiously prescient report puts focus on a Mumbai security think tank, Scroll.in, 31 August 2018.
- ↑ ‘Maoists call urban mass organisations weapons … battle is for control of civil society through subversion’ (Interview of Smita Gaikwad), The Times of India, The Interviews Blog, 2 May 2018.
- ↑ Kiran Tare, Gunning for Maoists, India Today, 10 May 2018.
- ↑ Chari, Mridula. "Bhima Koregaon case: A curiously prescient report puts focus on a Mumbai security think tank". Scroll. Retrieved 31 October 2020.
- ↑ "Bhima-Koregaon Violence Was "Pre-Planned", Says Pune Committee". PTI. 11 September 2018. Retrieved 1 November 2020.
- ↑ "Fact finding report of Bhima Koregaon Violence by Rashtra Seva Dal". Kractivist. Archived from the original on 2 ನವೆಂಬರ್ 2020. Retrieved 1 November 2020.