ಹ್ಯಾಝೆಲ್ ಜಾಯ್ಸ್ ಮ್ಯಾರಿಯೊಟ್ (ನೀ ವಿಲೆಟ್; ೯ ಜುಲೈ ೧೯೨೦ - ೨೨ ನವೆಂಬರ್ ೨೦೧೫) ಇವರು ಬ್ರಿಟಿಷ್ ನಟಿ, ಚಿತ್ರಕಥೆಗಾರ ಮತ್ತು ರೇಡಿಯೋ ಮತ್ತು ದೂರದರ್ಶನಕ್ಕಾಗಿ ಸೋಪ್ ಒಪೆರಾಗಳ ಸೃಷ್ಟಿಕರ್ತ. ಇವರನ್ನು ಹ್ಯಾಝೆಲ್ ಅಡೈರ್ ಎಂದು ಸಹ ಕರೆಯುತ್ತಾರೆ. ಇವರು ಪೀಟರ್ ಲಿಂಗ್‌ನೊಂದಿಗೆ ಕ್ರಾಸ್‌ರೋಡ್ಸ್‌ನ ಸಹ-ರಚನೆಯನ್ನು ಮಾಡಿದ್ದಾರೆ.

ಹ್ಯಾಝೆಲ್ ಅಡೈರ್
ಜನನಹ್ಯಾಝೆಲ್ ಜಾಯ್ಸ್ ವಿಲೆಟ್
(೧೯೨೦-೦೭-೦೯)೯ ಜುಲೈ ೧೯೨೦
ಡಾರ್ಜಿಲಿಂಗ್‌, ಬ್ರಿಟಿಷ್ ಭಾರತ
ಮರಣ22 November 2015(2015-11-22) (aged 95)
ಇಂಗ್ಲೆಂಡ್, ಯುಕೆ
ಕಾವ್ಯನಾಮಹ್ಯಾಝೆಲ್ ಅಡೇರ್
ಕ್ಲೇರ್ ನಿಕೋಲ್
ವೃತ್ತಿ
  • ನಟಿ
  • ಚಿತ್ರಕಥೆಗಾರ
  • ರೇಡಿಯೋ ಬರಹಗಾರ
  • ಸೋಪ್ ಒಪೆರಾ ಸೃಷ್ಟಿಕರ್ತ
ಭಾಷೆಆಂಗ್ಲ ಭಾಷೆ
ರಾಷ್ಟ್ರೀಯತೆಬ್ರಿಟಿಷ್
ಬಾಳ ಸಂಗಾತಿಗಾರ್ಡನ್ ಮೆಕೆಂಜಿ (೧೯೪೦-೧೯೪೯)
ರೊನಾಲ್ಡ್ ಮ್ಯಾರಿಯೊಟ್ (೧೯೫೦-೧೯೭೨)
ಮಕ್ಕಳು

ಆರಂಭಿಕ ಜೀವನ ಮತ್ತು ವೃತ್ತಿಜೀವನ

ಬದಲಾಯಿಸಿ

ಹ್ಯಾಝೆಲ್ ಜಾಯ್ಸ್ ವಿಲೆಟ್ ಅವರು ೧೯೨೦ ರಲ್ಲಿ ಬ್ರಿಟಿಷ್ ಇಂಡಿಯಾದ ಡಾರ್ಜಿಲಿಂಗ್‌ನಲ್ಲಿ ಜನಿಸಿದರು.[] ಅದಾ "ಅಲ್ಮಾ" (ರೇಮ್ಸ್) ಮತ್ತು ಕಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಎಡ್ವರ್ಡ್ ವಿಲೆಟ್ ಅವರ ಪುತ್ರಿ. ೯ ತಿಂಗಳ ವಯಸ್ಸಿನಲ್ಲಿ, ಅವರ ಕುಟುಂಬ ಇಂಗ್ಲೆಂಡ್‌ಗೆ ಮರಳಿತು. ಅಲ್ಲಿ ೧೯೨೩ ರಲ್ಲಿ ಆಕೆಯ ಪೋಷಕರು ವಿಲೆಟ್ ಅವರಿಗೆ ಎರಡು ವರ್ಷದವಳಿದ್ದಾಗ ವಿಚ್ಛೇದನ ಪಡೆದರು. ಆಕೆಯ ತಾಯಿ ನಂತರ ಎಡ್ವರ್ಡ್ ಹ್ಯಾಂಬ್ಲಿನ್ ಅವರನ್ನು ಮರುಮದುವೆಯಾದರು. ೧೯೪೦ ರಲ್ಲಿ, ಹ್ಯಾಝೆಲ್ ಬ್ರೆಜಿಲ್‌ನ ರಾಂಚರ್ ಗಾರ್ಡನ್ ಮೆಕೆಂಜಿ ಅವರನ್ನು ವಿವಾಹವಾದರು. ಅವರಿಬ್ಬರಿಗೆ ಕಾಲಿನ್ ಎಂಬ ಮಗನಿದ್ದನು. ಡಬ್ಯ್ಲೂ‌ಡಬ್ಯ್ಲೂ‌ಐ‌ಐ(WWII) ನಂತರ ಅವರ ಪತಿ ಬ್ರೆಜಿಲ್‌ಗೆ ಮರಳಿದರು. ೧೯೪೯ ರಲ್ಲಿ ಅವರು ವಿಚ್ಛೇದನ ಪಡೆದರು. ೧೯೫೦ ರಲ್ಲಿ ಹ್ಯಾಝೆಲ್ ಅವರು ಬರಹಗಾರ ರೊನಾಲ್ಡ್ ಮ್ಯಾರಿಯೊಟ್ ಅವರನ್ನು ಮರುಮದುವೆಯಾದರು. ಅವರಿಬ್ಬರಿಗೆ ೫ ಮಕ್ಕಳಿದ್ದರು.[] ೧೯೭೨ ರಲ್ಲಿ ರೊನಾಲ್ಡ್ ಮ್ಯಾರಿಯೊಟ್ ಅವರು ನಿಧನರಾದರು.

ಹ್ಯಾಝೆಲ್ ಅವರು ರೇಡಿಯೋ ಮತ್ತು ದೂರದರ್ಶನಕ್ಕೆ ಸ್ಕ್ರಿಪ್ಟ್ ಬರೆಯುತ್ತಿದ್ದರು. ತನ್ನ ಎರಡನೇ ಪತಿ ರೊನಾಲ್ಡ್ ಮ್ಯಾರಿಯೊಟ್ ಜೊತೆಯಲ್ಲಿ, ಅವರು ಸ್ಟ್ರೇಂಜರ್ ಫ್ರಮ್ ಸ್ಪೇಸ್ (೧೯೫೧-೫೨) ಅನ್ನು ಬರೆದರು.[][]

ಜಾಂಕ್ವಿಲ್ ಆಂಟೋನಿ (ನಂತರ ಪೀಟರ್ ಲಿಂಗ್) ಜೊತೆಯಲ್ಲಿ, ಅವರು ರೇಡಿಯೊ ಸೋಪ್ ಒಪೆರಾ ಶ್ರೀಮತಿ ಡೇಲ್ಸ್ ಡೈರಿಗಾಗಿ ಸ್ಕ್ರಿಪ್ಟ್‌ಗಳನ್ನು ಬರೆದರು. ಆಂಟನಿ ಜೊತೆಗೂಡಿ ಐಟಿವಿ(ITV) ಯ ಮೊದಲ ಸೋಪ್ ಸಿಕ್ಸ್‌ಪೆನ್ನಿ ಕಾರ್ನರ್ ಅನ್ನು ಸಹ-ಸೃಷ್ಟಿಸಿದರು. ಇದು ೧೯೫೫ ಮತ್ತು ೧೯೫೬ ರ ಅವಧಿಯಲ್ಲಿ ಎಂಟು ತಿಂಗಳ ಕಾಲ ನಡೆಯಿತು.[]

ಸೋಪ್ ಒಪೆರಾ

ಬದಲಾಯಿಸಿ

ಹ್ಯಾಝೆಲ್ ಅವರು ಕಾಂಪ್ಯಾಕ್ಟ್ (೧೯೬೨–೬೫) ಅನ್ನು ರಚಿಸಿದರು.[] ಅವರು ಲಿಂಗ್‌ನೊಂದಿಗೆ, ಚಾಂಪಿಯನ್ ಹೌಸ್ (೧೯೬೭-೬೮) ನಂತಹ ಕಾರ್ಯಕ್ರಮಗಳಿಗೆ ಬರೆದರು.[]

ಇತರೆ ಕೆಲಸ

ಬದಲಾಯಿಸಿ

ಹ್ಯಾಝೆಲ್ ಅವರು ಚಲನಚಿತ್ರೋದ್ಯಮದಲ್ಲಿ ಮಧ್ಯಂತರ ವೃತ್ತಿಜೀವನವನ್ನು ಹೊಂದಿದ್ದರು. ಅವರು ಲೈಫ್ ಇನ್ ಎಮರ್ಜೆನ್ಸಿ ವಾರ್ಡ್ ೧೦ (೧೯೫೮) ಗಾಗಿ ಸ್ಕ್ರಿಪ್ಟ್ ಅನ್ನು ಬರೆದರು. ೧೯೭೦ ರ ದಶಕದಲ್ಲಿ ಅವರು ಕುಸ್ತಿಯ ಪ್ರಸಾರಕರಾದ ಕೆಂಟ್ ವಾಲ್ಟನ್ ಅವರೊಂದಿಗೆ ಪಿರಮಿಡ್ ಫಿಲ್ಮ್ಸ್ ಅನ್ನು ರಚಿಸಿದರು.

ಹ್ಯಾಝೆಲ್ ಅವರು ೨೨ ನವೆಂಬರ್ ೨೦೧೫ ರಂದು ತಮ್ಮ ೯೫ ನೇ ವಯಸ್ಸಿನಲ್ಲಿ ನಿಧನರಾದರು. ಅವರು ತಮ್ಮ ಆರು ಮಕ್ಕಳು, ೧೧ ಮೊಮ್ಮಕ್ಕಳು ಮತ್ತು ೮ ಮೊಮ್ಮಕ್ಕಳನ್ನು ಅಗಲಿದ್ದಾರೆ.[]

ಉಲ್ಲೇಖಗಳು

ಬದಲಾಯಿಸಿ
  1. https://trove.nla.gov.au/work/17365393?q=%22Hazel+Adair%22&c=book
  2. "Hazel Adair, scriptwriter - obituary". The Telegraph. 26 ನವೆಂಬರ್ 2015. Retrieved 17 ಆಗಸ್ಟ್ 2021.
  3. "Hazel Adair". The Times. London. 25 ನವೆಂಬರ್ 2015. Retrieved 28 ನವೆಂಬರ್ 2015. (subscription required)
  4. "Missing or incomplete episodes for programme Whirligig", lostshows.com, Kaleidoscope, archived from the original on 4 ಮಾರ್ಚ್ 2016, retrieved 28 ನವೆಂಬರ್ 2015
  5. "Missing or incomplete episodes for programme Sixpenny Corner". lostshows.com. Kaleidoscope. Archived from the original on 3 ಏಪ್ರಿಲ್ 2015. Retrieved 27 ನವೆಂಬರ್ 2015.
  6. Currie (2004), p. 57
  7. https://www.theguardian.com/tv-and-radio/2015/nov/23/hazel-adair
  8. "Crossroads creator Hazel Adair dies aged 95". BBC News. 23 ನವೆಂಬರ್ 2015. Retrieved 23 ನವೆಂಬರ್ 2015.

ಬಾಹ್ಯ ಕೊಂಡಿಗಳು

ಬದಲಾಯಿಸಿ