ಹೆಜ್ಜೆ ಕೃಷ್ಟರಾಯರು

ವೃತ್ತಿಯಲ್ಲಿ ಲಾಯರ್ಸಂಪಾದಿಸಿ

'ಶ್ರೀ.ಎಚ್.ಜೆ.ಕೃಷ್ಣರಾಯರು,'ಚಿತ್ರದುರ್ಗದ ಪ್ರಮುಖ ಅಡ್ವೊಕೇಟ್, ಗಳಲ್ಲಿ ಒಬ್ಬರಾಗಿದ್ದರು. ಅವರನ್ನು ಎಲ್ಲರೂ ಹೆಜ್ಜೆ ಕೃಷ್ಟರಾಯರೆಂದು ಕರೆಯತ್ತಿದ್ದರು. ಅವರಿದ್ದ ಕಾಲ, ಸುಮಾರು ೧೯೫೪ ಇರಬಹುದು. ಅವರು ಕೇವಲ ಲಾಯರ್ ಆಗಿರದೆ, ಅನೇಕ ವಿಷಯಗಳಲ್ಲಿ ತಮ್ಮ ಆಸಕ್ತಿಯನ್ನು ತೋರಿಸುತ್ತಿದ್ದರು. ವೃತ್ತಿಯಲ್ಲಿ ಲಾಯರ್; ಪ್ರವೃತ್ತಿಯಲ್ಲಿ ವೈಜ್ಞಾನಿಕ ಮನೋಭಾವಿಗಳಾಗಿದ್ದರು.[೧] ತಮ್ಮ ಜಮೀನಿನಲ್ಲಿ ಅವರು, ಕೋರ್ಟಿಗೆ ರಜೆ, ಘೋಷಿಸಿದಾಗ, ಹೋಗಿ ಅಲ್ಲಿ ದಿನ-ವಿಡೀ ಇದ್ದು ಕೃ‍ಷಿಯಲ್ಲಿ ಜೋಳ,ಹತ್ತಿ, ರಾಗಿ, ಬೆಳೆಗಳಲ್ಲಿ ಪ್ರಯೋಗಗಳನ್ನು ಅನುಸಂಧಾನಮಾಡುತ್ತಿದ್ದರು.[೨]

ಆಂಗ್ಲ ಭಾಷೆಯ ಕೈಪಿಡಿಯ ರಚನೆಸಂಪಾದಿಸಿ

ಒಂದು ಆಂಗ್ಲ ಪತ್ರಿಕೆಯಲ್ಲಿ Electroculture for Plants[೩] ಬಗ್ಗೆ ಪ್ರಕಟಿಸಿದ್ದ ವೈಜ್ಞಾನಿಕ ಲೇಖನ, ಅವರಿಗೆ ವಿಸ್ಮಯವನ್ನು ಆಸಕ್ತಿಯನ್ನೂ ತಂದಿತ್ತು. ಕೆಲವು ಗಿಡಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿದ್ಯುಚ್ಛಕ್ತಿಯನ್ನು ಪ್ರವಹಿಸಿದರೆ, ಕ್ರಮೇಣ ಅದರ ಬೆಳವಣಿಗೆಯಲ್ಲಿ ಗಮನಾರ್ಹ ಪ್ರಗತಿ ಕಂಡು ಬರುವುದಾಗಿ ತಿಳಿಸಲಾಗಿದ್ದ ಲೇಖನವನ್ನು ಅವರು, ಪದೇ ಪದೇ ಓದಿಕೊಂಡು ಅದರಂತೆಯೇ ತಮ್ಮ ಹೊಲದಲ್ಲಿ ಒಂದು ವೈಜ್ಞಾನಿಕ ಪರೀಕ್ಷೆಗಳನ್ನೇ ನಡೆಸಿ, ಅದರಲ್ಲಿ ಹಲವಾರು ವಿಶಿಷ್ಟ ಸಂಗತಿಗಳನ್ನು ಕಂಡು ಕೊಂಡರು. ಅವುಗಳನ್ನೆಲ್ಲಾ ತಮ್ಮ ಸ್ವಂತ ಖರ್ಚಿನಲ್ಲಿ ಅಚ್ಚು ಕಟ್ಟಾಗಿ ಪ್ರಕಟಿಸಿ ತಮ್ಮ ಹಸ್ತಪ್ರತಿಯಲ್ಲಿ ದಾಖಲಿದ್ದಾರೆ. ಹಳ್ಳಿಯ ರೈತರಿಂದ ಹಿಡಿದು, ನಗರದ ಪರಿಚಯಸ್ಥರೆಲ್ಲರಿಗೂ ಆ ಪುಟ್ಟ ಕೈಪಿಡಿ ಲಭ್ಯವಾಗಿತ್ತು.

ಮೀಡಿಯಾ ಪ್ರಭಾವವಿಲ್ಲದ ಸರಳಜೀವನಸಂಪಾದಿಸಿ

ಇಂದಿನ ದಿನಗಳಲ್ಲಿಮೀಡಿಯ ಎಷ್ಟು ಪ್ರಭಾವವನ್ನು ಬೀರುತ್ತದೆ. ಕೆಲವೇ ನಿಮಿಷಗಳಲ್ಲಿ ಒಬ್ಬ ವ್ಯಕ್ತಿ,ರಾಜ್ಯ,ದೇಶ, ಮತ್ತುವಿಶ್ವಕ್ಕೇ ಪರಿಚಯಿಸಲ್ಪಡುತ್ತಾನೆ. ಹಾಗೆ ಇರಲಿಲ್ಲ ; ಆ ದಿನಗಳು. ಹೇಗಾದರೂ ಇರಲಿ, ಏನು ಬರೆದಿದ್ದಾರೆ ಎಂದು ಓದಿ ಪರಿಶೀಲಿಸುವಷ್ಟು ಉದಾರ ಮನಸ್ಸಿನ ಜನ, ಕಡಿಮೆಯಾಗಿದ್ದ ಕಾಲಘಟ್ಟ ಅದು. ಚಿತ್ರದುರ್ಗದ ಒಬ್ಬಕೃಷಿ ಅನುಸಂಧಾನಕರ್ತರೆಂದು ಕೆಲವರು ಅವರನ್ನು ಮೆಚ್ಚಿ ಕೊಂಡಿದ್ದರು. ವೈಜ್ಞಾನಿಕ ಮನೋವೃತ್ತಿಯನ್ನು ಆಗಿನ ಕಾಲದಲ್ಲೇ ಬೆಳಸಿಕೊಂಡು, ತಮ್ಮ ವೃತ್ತಿಯ ಜೊತೆಯಲ್ಲೇ ಪ್ರವೃತ್ತಿಯನ್ನೂ ಸಮತೂಗಿಸಿಕೊಂಡು ತಮ್ಮದೇ ಆದ ವಿಶಿಷ್ಠ ಕೊಡುಗೆಯನ್ನು ಅವರು ಕೊಟ್ಟಿದ್ದಾರೆ.

ಆ ಪುಟ್ಟ ಕೈಪಿಡಿಯ ಹೆಸರುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. 'The idea of using electricity to make plants grow faster' ೧೯೧೮-೧೯೩೬, 'Reinvention : an International Journal of Undergraduate Research'
  2. A Brief Overview of Growing Plants with Electricity : Electroculture 101
  3. Scientific Background of Electroculture, 'Electroculture, Good vibes for Agriculture'