ರಿಷಿಕೇಶ
ರಿಷಿಕೇಶ ( ಮೂಲ ಹೆಸರು ಹೃಷಿಕೇಶ ) ಭಾರತದ ಉತ್ತರಾಖಂಡ ರಾಜ್ಯದ ಡೆಹ್ರಾ ಡೂನ್ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಪ್ರಸಿದ್ಧ ತೀರ್ಥಕ್ಷೇತ್ರವಾಗಿರುವ ರಿಷಿಕೇಶ ಹಿಂದೂ ಧರ್ಮೀಯರಿಗೆ ಅತಿ ಪಾವನ ಧಾಮವಾಗಿದೆ. ರಿಷಿಕೇಶವು ಹಿಮಾಲಯಕ್ಕೆ ಹೆಬ್ಬಾಗಿಲೆನಿಸಿಕೊಳ್ಳುತ್ತದೆ. ಹಿಮಾಲಯದ ಪವಿತ್ರ ಚತುರ್ಧಾಮಗಳ ಯಾತ್ರೆಯು ಸಾಮಾನ್ಯವಾಗಿ ರಿಷಿಕೇಶದಿಂದಲೇ ಆರಂಭವಾಗುತ್ತದೆ. ಹಿಮಾಲಯ ಪರ್ವತಗಳ ಪಾದದಲ್ಲಿ ಗಂಗಾ ನದಿಯ ದಡದಲ್ಲಿರುವ ರಿಷಿಕೇಶ ದೇವಾಲಯಗಳು, ಆಶ್ರಮಗಳು, ತಪೋವನಗಳು ಮತ್ತು ಯೋಗಾಭ್ಯಾಸ ಕೇಂದ್ರಗಳಿಗೆ ಹೆಸರಾಗಿದೆ.
ರಿಷಿಕೇಶ
ಹೃಷಿಕೇಶ | |
---|---|
city | |
Population (2001) | |
• Total | ೫೯,೬೭೧ |
ಪುರಾಣೇತಿಹಾಸಗಳು
ಬದಲಾಯಿಸಿಹೃಷಿಕೇಶ ವಿಷ್ಣುವಿನ ಒಂದು ಹೆಸರು. ಇದರ ಅರ್ಥ ಇಂದ್ರಿಯಗಳ ಒಡೆಯ ಎಂಬುದಾಗಿದೆ. ಈ ಸ್ಥಳದಲ್ಲಿ ರೈಭ್ಯ ಋಷಿಯ ತಪಸ್ಸಿಗೆ ಒಲಿದು ವಿಷ್ಣು ಹೃಷಿಕೇಶನಾಗಿ ಪ್ರತ್ಯಕ್ಷನಾದನೆಂದು ಒಂದು ಕಥೆಯಿದೆ. ಸ್ಕಂದ ಪುರಾಣದಲ್ಲಿ ಈ ಸೀಮೆಯು ಕುಬ್ಜಾಮ್ರಕ ಎಂದು ಹೆಸರಿಸಲ್ಪಟ್ಟಿದೆ. ಐತಿಹಾಸಿಕವಾಗಿ ರಿಷಿಕೇಶ ಕೇದಾರಖಂಡದ ಭಾಗ. ಇಂದಿನ ಗಢ್‌ವಾಲ್ ಪ್ರದೇಶವು ಹಿಂದೆ ಕೇದಾರಖಂಡವೆಂದು ಕರೆಯಲ್ಪಡುತ್ತಿತ್ತು. ರಾಮನು ಲಂಕೆಯ ಅರಸ ರಾವಣನನ್ನು ಯುದ್ಧದಲ್ಲಿ ಸಂಹರಿಸಿದ ಬಳಿಕ ಇಲ್ಲಿ ತಪವನ್ನೈದಿದನೆಂದೂ ಹಾಗೂ ಲಕ್ಷ್ಮಣನು ಇಲ್ಲಿ ನಾರಿನ ಹಗ್ಗಗಳಿಂದ ರಚಿಸಲ್ಪಟ್ಟ ಸೇತುವೆಯ ಮೂಲಕ ಗಂಗಾ ನದಿಯನ್ನು ದಾಟಿದನೆಂದೂ ಹೇಳಲಾಗುತ್ತದೆ.
ಗಂಗಾ ನದಿಯು ರಿಷಿಕೇಶ ಪಟ್ಟಣದ ಮೂಲಕ ಹಾದುಹೋಗುತ್ತದೆ. ರಿಷಿಕೇಶದಲ್ಲಿ ಗಂಗಾ ನದಿಯು ಶಿವಾಲಿಕ ಪರ್ವತಗಳಿಂದ ಇಳಿದು ಉತ್ತರ ಭಾರತದ ಬಯಲುಸೀಮೆಯನ್ನು ಸೇರುವುದು. ನದಿಯ ದಂಡೆಗುಂಟ ಹಲವು ದೇವಾಲಯಗಳು, ಆಶ್ರಮಗಳಿವೆ. ನಗರದ ತ್ರಿವೇಣಿ ಘಾಟ್‌ನಲ್ಲಿ ಪ್ರತಿದಿನ ಸಂಜೆ ನಡೆಯುವ ಗಂಗಾ ಆರತಿ ಬಲು ಪ್ರಸಿದ್ಧ. ನೀಲಕಂಠ ಮಹಾದೇವ ಮಂದಿರ, ರಾಮ ಝೂಲಾ, ವಸಿಷ್ಠ ಗುಹೆ ಮುಂತಾದವು ಪ್ರವಾಸಿಗರನ್ನು ಮತ್ತು ಯಾತ್ರಾರ್ಥಿಗಳನ್ನು ಬಹುವಾಗಿ ಆಕರ್ಷಿಸುತ್ತವೆ.
ಬಾಹ್ಯ ಸಂಪರ್ಕಕೊಂಡಿಗಳು
ಬದಲಾಯಿಸಿ- ಡೆಹ್ರಾ ಡೂನ್ ಜಿಲ್ಲೆಯ ಅಧಿಕೃತ ಮಾಹಿತಿತಾಣ Archived 2006-01-01 ವೇಬ್ಯಾಕ್ ಮೆಷಿನ್ ನಲ್ಲಿ.
- ರಿಷಿಕೇಶ ಮತ್ತು ಯೋಗ Archived 2019-05-14 ವೇಬ್ಯಾಕ್ ಮೆಷಿನ್ ನಲ್ಲಿ.
- ರಿಷಿಕೇಶದ ೫೦೦ ಚಿತ್ರಗಳು
- ರಾಮ್ ಝೂಲಾ