ಹುಳ ಹಾವು (ಕುರುಡು ಮರಿ)

ಹುಳ ಹಾವು(ಕುರುಡುಮರಿ ಎಂಬ ಹೆಸರೂ ಇದೆ) ವಿಷರಹಿತ ಹಾವುಗಳಲ್ಲಿ ಅತ್ಯಂತ ಚಿಕ್ಕ ಸರಿಸೃಪ ಪ್ರಾಣಿ. ನೋಡಲು ಎರೆಹುಳುವಿನ ರೀತಿ ಇದ್ದು, ಹೊಳೆಯುವ ನುಣುಪಾದ ಮೈ, ದುಂಡಗಿನ ತಲೆ ಮತ್ತು ಬಾಲವನ್ನು ಈ ಹಾವು ಹೊಂದಿರುತ್ತದೆ. ತುಳು ಭಾಷೆಯಲ್ಲಿ ಈ ಹಾವಿಗೆ ಕುಮೆಮಣ್ಣ್, ಹಿಂದಿಯಲ್ಲಿ ಅಂಧಾ ಸಾಂಫ್, ಆಂಗ್ಲಭಾಷೆಯಲ್ಲಿ Worm snake ಅಥವಾ Blind Snake ಮುಂತಾದ ಹೆಸರುಗಳಿಂದ ಕರೆಯುತ್ತಾರೆ.

Indotyphlops braminus
Conservation status
Scientific classification e
Unrecognized taxon (fix): Indotyphlops
ಪ್ರಜಾತಿ:
I. braminus
Binomial name
Indotyphlops braminus
(Daudin, 1803)
Synonyms
 • Eryx braminus Daudin, 1803
 • [Tortrix] Russelii
  Merrem, 1820
 • Typhlops braminus
  Cuvier, 1829
 • Typhlops Russeli
  Schlegel, 1839
 • Argyrophis truncatus
  Gray, 1845
 • Argyrophis Bramicus
  Gray, 1845
 • Eryx Bramicus
  — Gray, 1845
 • Tortrix Bramicus
  — Gray, 1845
 • Onychocephalus Capensis A. Smith, 1846
 • Ophthalmidium tenue Hallowell, 1861
 • T[yphlops]. (Typhlops) inconspicuus Jan, 1863
 • T[yphlops]. (Typhlops) accedens Jan, 1863
 • T[yphlops]. accedens
  — Jan & Sordelli, 1864
 • Typhlops (Typhlops) euproctus Boettger, 1882
 • Typhlops bramineus A.B. Meyer, 1887
 • Tortrix russellii
  Boulenger, 1893
 • Typhlops russellii
  — Boulenger, 1893
 • Typhlops braminus
  — Boulenger, 1893
 • Typhlops accedens
  — Boulenger, 1893
 • Typhlops limbrickii Annandale, 1906
 • Typhlops braminus var. arenicola Annandale, 1906
 • [Typhlops braminus] var. pallidus Wall, 1909
 • Typhlops microcephalus F. Werner, 1909
 • Glauconia braueri Sternfeld, 1910
 • [Typhlops] braueri
  — Boulenger, 1910
 • Typhlopidae braminus
  Roux, 1911
 • Typhlops fletcheri
  Wall, 1919
 • Typhlops braminus braminus Mertens, 1930
 • Typhlops braminus
  — Nakamura, 1938
 • Typhlops pseudosaurus Dryden & Taylor, 1969
 • Typhlina (?) bramina
  McDowell, 1974
 • Ramphotyphlops braminus
  Nussbaum, 1980[೧]
 • Indotyphlops braminus
  Hedges et al., 2014[೨]

ಟೈಫ್ಲೊಪಿಡೆ(Typhlopidae) ಕುಟುಂಬದ, ಇಂಡೋಟೈಫ್ಲಾಪ್ಸ್(Indotyphlops) ಕುಲಕ್ಕೆ ಸೇರಿದ ಈ ಹಾವಿನ ಪ್ರಾಣಿಶಾಸ್ತ್ರೀಯ ಹೆಸರು ಟೈಫ್ಲಿನಾ ಬ್ರಾಮಿನ(Typhlina bramina). ಈ ಹಿಂದೆ ಟೈಫ್ಲಾಪ್ಸ್ ಬ್ರಾಮಿನ ಎಂಬ ಹೆಸರು ಇದ್ದು, ಸಂಶೋಧನೆಗಳ ನಂತರ, ಈ ಹಾವಿನ ಕುಲದಲ್ಲಿ ಇನ್ನೂ ಕೆಲವು ಉಪಕುಲಗಳನ್ನು ಕಂಡು ಹಿಡಿಯಲಾಗಿದೆ[೩].

ಶರೀರ ವಿನ್ಯಾಸ ಬದಲಾಯಿಸಿ

 
ಹುಳ ಹಾವಿನ ಪೂರ್ಣ ಚಿತ್ರ(ಮೇಲಿನ ಚಿತ್ರ), ಮೈಮೇಲಿನ ಹುರುಪೆ ಮತ್ತು ಪುಟ್ಟ ಕಣ್ಣುಗಳು(ಕೆಳಗಿನ ಚಿತ್ರ)

ಹುಳ ಹಾವಿನ ಸರಾಸರಿ ಉದ್ದ ಹುಟ್ಟಿದಾಗ ೩ರಿಂದ ೪ಸೆಂ.ಮೀ. ಇದ್ದು, ಪೂರ್ಣ ಬೆಳೆದ ಹಾವು ಸುಮಾರು ೧೫ ಸೆಂ.ಮೀ ವರೆಗೂ ಇರುತ್ತದೆ. ಮೇಲ್ನೋಟಕ್ಕೆ ಎರೆಹುಳುವನ್ನು ಹೋಲುವ ಈ ಹಾವಿನ ಚಲನೆಯನ್ನು ಗಮನಿಸಿದಾಗ ಇದು ಹುಳಹಾವು ಎಂದು ತಿಳಿಯಬಹುದು. ಹೊರಮೈ ನುಣುಪಾಗಿದ್ದು ಕೆಂಪು ಕಂದು, ಬೆಳ್ಳಿ ಬೂದು, ಕಪ್ಪು ಬೂದು ಬಣ್ಣವನ್ನು ಹೊಂದಿರುತ್ತವೆ.ಮೈ ಮೇಲೆ ನುಣುಪಾದ ಹುರುಪೆಗಳು ಅಗಲವಾಗಿ ವ್ಯಾಪ್ತವಾಗಿರುತ್ತವೆ. ಹುಳ ಹಾವಿನ ಶರೀರದ ಅಡಿಭಾಗ ತಿಳಿಯಾದ ಬಣ್ಣವನ್ನು ಹೊಂದಿರುತ್ತದೆ.

ಈ ಹಾವಿನ ಬಾಲ ಮತ್ತು ತಲೆ ಮೊಂಡಗಿದ್ದು, ತಲೆಯ ಭಾಗದಲ್ಲಿ ಕಂಡೂ ಕಾಣದಂತೆ ಇರುವ ಪುಟ್ಟ ಕಣ್ಣುಗಳಿವೆ. ಕಣ್ಣುಗಳನ್ನು ಹುರುಪೆಗಳು ಆವರಿಸಿಕೊಂಡಿರುತ್ತವೆ. ಬಾಲದಲ್ಲಿ ಪುಟ್ಟದಾದ ಮುಳ್ಳಿನಂತಹ ಅಂಗ ಇರುತ್ತದೆ[೪].

ಆವಾಸ ಮತ್ತು ಆಹಾರ ಬದಲಾಯಿಸಿ

ಸಾಮನ್ಯವಾಗಿ ಹುಳ ಹಾವಿನ ಕುಲದ ಹಾವುಗಳು ಮೃದುವಾದ ಶರೀರರಚನೆಯನ್ನು ಹೊಂದಿರುವುದರಿಂದ, ಅತಿಯಾದ ಬಿಸಿಲು ಅಥವಾ ತಾಪಮಾನವನ್ನು ಸಹಿಸಲಾರವು. ಹಾಗಾಗಿ ತಂಪು ಹವೆ ಇರುವ, ಹೆಚ್ಚು ತೇವಾಂಶ ಇರುವ ಪ್ರದೇಶಗಳಾದ ಕೊಳೆತ ಗೊಬ್ಬರದ ರಾಶಿ, ಹಸಿ ಮಣ್ಣು, ಹುತ್ತ, ಕೊಳೆತ ಮರಗಳ ಒಳಗೆ ಅಥವಾ ಹಸಿರು ಗಿಡಗಳ ಅಡಿಭಾಗದಲ್ಲಿ ಇವು ವಾಸಿಸುವುದನ್ನು ಕಾಣಬಹುದು. ಹಗಲಿನಲ್ಲಿ ಹೆಚ್ಚು ತಾಪಮಾನ ಇರುವುದರಿಂದ, ರಾತ್ರಿ ಸಮಯದಲ್ಲಿ ಇವುಗಳು ಚಟುವಟಿಕೆಯಿಂದ ಇರುತ್ತವೆ[೩].

ಕುರುಡುಮರಿ ಹಾವು ಗೆದ್ದಲು, ಇರುವೆ, ಎರೆಹುಳುವಿನ ಮರಿ, ಗೆದ್ದಲು, ಇರುವೆಯ ಮೊಟ್ಟೆ ಇತ್ಯಾದಿಗಳನ್ನು ತಿಂದು ಬದುಕುತ್ತದೆ[೫].

ಸಂತಾನೋತ್ಪತ್ತಿ ಬದಲಾಯಿಸಿ

ಹುಳ ಹಾವುಗಳು ಸ್ವ-ಫಲೀಕೃತ ವಿಧಾನದಲ್ಲಿ ತಮ್ಮ ಸಂತಾನವನ್ನು ವೃದ್ಧಿಸಿಕೊಳ್ಳುತ್ತವೆ. ಅಂದರೆ ಈ ಹಾವುಗಳಲ್ಲಿ ಗಂಡು ಹಾವುಗಳು ಇಲ್ಲದಿರುವುದು ವಿಶೇಷ. ಹಾಗಾಗಿ ಸಂತಾನ ವೃದ್ಧಿಗಾಗಿ ಹೆಣ್ಣು-ಗಂಡು ಕೂಡುವ ಸಂದರ್ಭ ಇರುವುದಿಲ್ಲ. ಈ ಎರಡೂ ಲಿಂಗದ ವೈಶಿಷ್ಟ್ಯತೆಗಳು ಒಂದೇ ಹೆಣ್ಣು ಹಾವಿನಲ್ಲಿ ಮಿಳಿತವಾಗಿರುತ್ತವೆ. ಎಪ್ರಿಲ್- ಮೇ ತಿಂಗಳ ಸಮಯದಲ್ಲಿ, ಬೆಳ್ತಿಗೆ ಅಕ್ಕಿಕಾಳಿನ ಗಾತ್ರದ ೪ರಿಂದ ೧೪ರಷ್ಟು ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ[೩].

ಸ್ವಭಾವ ಬದಲಾಯಿಸಿ

ಕುರುಡು ಮರಿ ಕಚ್ಚಿದರೆ ಕಚ್ಚಿದ ಭಾಗ ಕೊಳೆಯುತ್ತದೆ ಎಂಬ ಮೂಢನಂಬಿಕೆ ಹಳ್ಳಿಯ ಜನರಲ್ಲಿ ಇದೆ. ಆದರೆ ಕುರುಡು ಮರಿ ಸ್ವಭಾವತಃ ವಿಷರಹಿತವಾದ ಹಾವು. ಕಚ್ಚಿದಾಗ ಕಚಗುಳಿಯ ಅನುಭವ ಆಗುತ್ತದೆ. ಹಾವನ್ನು ಕ್ಕೈಯಲ್ಲಿ ಹಿಡಿದರೆ ತನ್ನ ಬಾಲದಲ್ಲಿರುವ ಪುಟ್ಟ ಮುಳ್ಳಿನ ಕೊಂಡಿಯಿಂದ ಚುಚ್ಚುತ್ತದೆ. ಕೊಂಡಿಯ ಮೂಲಕ ಮಲ ಮೂತ್ರವನ್ನು ವಿಸರ್ಜಿಸಿ ತೀಕ್ಷ್ಣವಾದ ವಾಸನೆಯನ್ನು ಹರಡುತ್ತದೆ[೩].

ವ್ಯಾಪ್ತಿ ಬದಲಾಯಿಸಿ

ಜಗತ್ತಿನ ಅತ್ಯಂತ ವಿಶಾಲ ಪ್ರದೇಶಗಳಲ್ಲಿ ವ್ಯಾಪಿಸಿರುವ ಹಾವಿನ ಪ್ರಭೇದವೆಂದರೆ ಹುಳಹಾವು ಎನ್ನಬಹುದು. ಹೂ ನೆಡುವ ಕುಂಡಗಳ ಮೂಲಕ ಈ ಹಾವುಗಳು ಜಗತ್ತಿನ ಇತರ ಭಾಗಗಳಿಗೆ ವ್ಯಾಪಿಸಿರಬಹುದು ಎಂದು ನಂಬಲಾಗುತ್ತದೆ.

ಭಾರತದಲ್ಲಿ ಬದಲಾಯಿಸಿ

ಕುರುಡು ಹಾವು ಭಾರತದಾದ್ಯಂತ ಕಂಡುಬರುತ್ತದೆ. ಸಮುದ್ರ ಮಟ್ಟದಿಂದ ೧,೦೦೦ ಮೀ. ಎತ್ತರದ ಪ್ರದೇಶಗಳಲ್ಲೂ ಈ ಹಾವು ಕಾಣಸಿಗುತ್ತದೆ. ಲಕ್ಷದ್ವೀಪದಲ್ಲಿ ಕಂಡುಬರುವ ಏಕೈಕ ಹಾವು ಕುರುಡುಮರಿ[೬].

ವಿಶ್ವ ಬದಲಾಯಿಸಿ

ಆಫ್ರಿಕಾ ದೇಶಗಳು, ಏಷ್ಯಾ, ಆಸ್ಟ್ರೇಲಿಯಾ, ಅಮೇರಿಕಾ, ಯುರೋಪ್- ಈ ಎಲ್ಲಾ ದೇಶಗಳಲ್ಲಿ ಹುಳಹಾವು ವಾಸಿಸುತ್ತದೆ[೭].

ಇವುಗಳನ್ನೂ ಓದಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

 1. McDiarmid RW, Campbell JA, Touré TA. 1999. Snake Species of the World: A Taxonomic and Geographic Reference, Volume 1. Washington, District of Columbia: Herpetologists' League. 511 pp. ISBN 1-893777-00-6 (series). ISBN 1-893777-01-4 (volume).
 2. Uetz, P.; Freed, P.; Aguilar, R.; Hošek, J. (eds.). "Indotyphlops braminus (Daudin, 1803)". The Reptile Database.
 3. ೩.೦ ೩.೧ ೩.೨ ೩.೩ ಭಾರತದ ಸಾಮಾನ್ಯ ಸರ್ಪಗಳು-ರೋಮುಲಸ್ ವಿಟೇಕರ್ (ಅನುವಾದ- ಹೆಚ್ ಎಸ್ ನಿರಂಜನಾರಾಧ್ಯ) (1 ed.). ನ್ಯಾಶನಲ್ ಬುಕ್ ಟ್ರಸ್ಟ್. 2002. p. 190. ISBN 81-237-3663-0. {{cite book}}: |access-date= requires |url= (help)
 4. "Brahminy Blindsnake Indotyphlops braminus". floridamuseum.ufl.edu. The Florida Museum of Natural History (formerly known as the Florida State Museum). Retrieved 30 December 2022.
 5. "Brahminy Blindsnake Indotyphlops braminus". floridamuseum.ufl.edu. The Florida Museum of Natural History (formerly known as the Florida State Museum). Retrieved 30 December 2022.
 6. "Indotyphlops braminus (Daudin, 1803)". indiabiodiversity.org. India Biodiversity Portal (IBP). Retrieved 30 December 2022.
 7. "Indotyphlops braminus (DAUDIN, 1803)". reptile-database.reptarium.cz. Peter Uetz (database content) and Jakob Hallermann, Zoological Museum Hamburg (new species and updates). Web pages and scripting Jiri Hosek. Retrieved 30 December 2022.