ಹರಿಹರ ರಾಯ II

ಸಂಗಮ ರಾಜವಂಶದ ಚಕ್ರವರ್ತಿ, ವಿಜಯನಗರ ಸಾಮ್ರಾಜ್ಯ

೨ನೆಯ ಹರಿಹರ (1377-1404 CE)  ವಿಜಯನಗರ ಸಾಮ್ರಾಜ್ಯದ, ಸಂಗಮ ರಾಜವಂಶದ ಚಕ್ರವರ್ತಿ.[] ಜೈನ ಕನ್ನಡ ಕವಿ ಮಧುರ ಈತನ ಆಸ್ಥಾನ ಕವಿ.  ವೇದಗಳ ಪ್ರಮುಖ ಕೆಲಸ  ಈತನ ಸಮಯದಲ್ಲಿ ಪೂರ್ಣಗೊಂಡಿತು. ವೈದಿಕ ಮಾರ್ಗ ಸ್ಥಾಪನಾಚರ್ಯ ಮತ್ತು  ವೇದಮಾರ್ಗ ಪ್ರವರ್ತಕ ೨ನೆಯ ಹರಿಹರನ ಬಿರುದುಗಳು.

ಹರಿಹರ ರಾಯ II
ಆಳ್ವಿಕೆ 1377—1404
ಪೂರ್ವಾಧಿಕಾರಿ ಬುಕ್ಕ ರಾಯ I
ಉತ್ತರಾಧಿಕಾರಿ ವಿರೂಪಾಕ್ಷ ರಾಯ
ವಿಜಯನಗರ ಸಾಮ್ರಾಜ್ಯ
ಸಂಗಮ ವಂಶ
ಹರಿಹರ I 1336–1356
ಬುಕ್ಕ ರಾಯ I 1356–1377
ಹರಿಹರ ರಾಯ II 1377–1404
ವಿರೂಪಾಕ್ಷ ರಾಯ 1404–1405
ಬುಕ್ಕ ರಾಯ II 1405–1406
ದೇವ ರಾಯ I 1406–1422
ರಾಮಚಂದ್ರ ರಾಯ 1422
ವೀರ ವಿಜಯ ಬುಕ್ಕ ರಾಯ 1422–1424
ದೇವ ರಾಯ II 1424–1446
ಮಲ್ಲಿಕಾರ್ಜುನ ರಾಯ 1446–1465
ವಿರೂಪಾಕ್ಷ ರಾಯ II 1465–1485
ಪ್ರೌಢ ರಾಯ 1485
ಸಾಳ್ವ ವಂಶ
ಸಾಳ್ವ ನರಸಿಂಹ ದೇವ ರಾಯ 1485–1491
ತಿಮ್ಮ ಭೂಪಾಲ 1491
ನರಸಿಂಹ ರಾಯ II 1491–1505
ತುಳುವ ವಂಶ
ತುಳುವ ನರಸ ನಾಯಕ 1491–1503
ವೀರ ನರಸಿಂಹ ರಾಯ 1503–1509
ಕೃಷ್ಣ ದೇವ ರಾಯ 1509–1529
ಅಚ್ಯುತ ದೇವ ರಾಯ 1529–1542
ವೆಂಕಟ I 1542
ಸದಶಿವ ರಾಯ 1542–1570
ಅರವೀಡು ವಂಶ
ಆಳಿಯ ರಾಮ ರಾಯ 1542–1565
ತಿರುಮಲ ದೇವ ರಾಯ 1565–1572
ಶ್ರೀರಂಗ I 1572–1586
ವೆಂಕಟ II 1586–1614
ಶ್ರೀರಂಗ II 1614
ರಾಮ ದೇವ ರಾಯ 1617–1632
ವೆಂಕಟ III 1632–1642
ಶ್ರೀರಂಗ III 1642–1646

ಜೀವನಚರಿತ್ರೆ

ಬದಲಾಯಿಸಿ

೧ನೆಯ ಬುಕ್ಕ ರಾಯನ ಮರಣಾನಂತರ, 1377ರಲ್ಲಿ  ೨ನೆಯ ಹರಿಹರ ಅಧಿಕಾರಕ್ಕೆ  ಬಂದು, 1404ರಲ್ಲಿ ಸಾಯುವ ತನಕ ವಿಜಯನಗರದ ಆಳ್ವಿಕೆ ನಡೆಸಿದನು. ವೀರೂಪಾಕ್ಷ ರಾಯ ಈತನ ಉತ್ತರಾಧಕಾರಿ. 

ತನ್ನ ಆಳ್ವಿಕೆಯ ಸಮಯದಲ್ಲಿ, ವಿಜಯನಗರವನ್ನು ವಿಸ್ತರಿಸುವುದನ್ನು  ಮುಂದುವರಿಸಿದ. ಕೊಂಡವೀಡುವಿನ ರೆಡ್ಡಿಗಳೊಂದಿಗೆ, ನೆಲ್ಲೂರು ಮತ್ತು ಕಳಿಂಗದ ನಡುವಿನ ಆಂಧ್ರ ದ ಪ್ರದೇಶಕ್ಕಾಗಿ ಯುದ್ಧ ಮಾಡಿದನು.  ಕೊಂಡವೀಡುವಿನ ರೆಡ್ಡಿಗಳಿಂದ, ಅಡ್ಡಂಕಿ ಮತ್ತು ಶ್ರೀಶೈಲಮ್ ಗಳನ್ನಲ್ಲದೇ, ಕೃಷ್ಣ ನದಿಯ ದಕ್ಷಿಣದ ಪ್ರಸ್ಥಭೂಮಿಯನ್ನೂ ಸಹ ವಶಪಡಿಸಿಕೊಂಡನು. ಈ ಘಟನೆ,  ತೆಲಂಗಾಣದಲ್ಲಿನ, ರಚ್ಚಕೊಂಡದ ವೇಲಮರೊಂದಿಗಿನ ಯುದ್ಧಕ್ಕೂ ನಾಂದಿಯಾಯಿತು. 1378ರಲ್ಲಿನ ಮುಝಾಹಿದ್ ಬಹಮನಿಯ ಸಾವನ್ನು ಉಪಯೋಗಿಸಿಕೊಂಡು, ವಾಯವ್ಯದಲ್ಲಿ ತನ್ನ ಹಿಡಿತವನ್ನು ಬಲಗೊಳಿಸಿದನಲ್ಲದೇ, ಗೋವ, ಚೌಲ್ ಮತ್ತು ದಾಭೊಳ್ ಗಳಲ್ಲಿನ ಬಂದರುಗಳನ್ನೂ ವಶಪಡಿಸಿಕೊಂಡನು.

ಹರಿಹರ II ಆಳ್ವಿಕೆ ರಾಜಧಾನಿ, ವಿಜಯನಗರ ಈಗ ಹೆಚ್ಚು ಜನಪ್ರಿಯವಾಗಿರುವ ಹಂಪಿ.  ಹಂಪಿಯ ಅವಶೇಷಗಳಲ್ಲಿ ಹರಿಹರನ ಅರಮನೆಯೂ ಸೇರಿದೆ. []

ಜೈನ ಶಿಕ್ಷಕ ಸಿಂಹಾನಂದದ ಶಿಷ್ಯ, ಇರುಗುಪ್ಪ ಈತನ ಸೈನ್ಯಾಧಿಕಾರಿಯಾಗಿದ್ದ. ಇರುಗುಪ್ಪ  ವಿಜಯನಗರದಲ್ಲಿ,  ಗೊಮ್ಮಟೇಶ್ವರನಿಗೆ ಒಂದು ಕೆರೆ ಮತ್ತು ಕುಮ್ತು-ಜೀನಾನಾಥ ಶಿಲ್ಪ ದೇವಾಲಯವನ್ನು ಕಟ್ಟಿಸಿದನು.[]

ಕೊಂಡವೀಡುವಿನ ರೆಡ್ಡಿಗಳೊಂದಿಗಿನ ಹೋರಾಟದಲ್ಲಿ, ಆತ ಮೈಸೂರಿನಲ್ಲಿ, ದಳವಾಯಿಗಳ ವಿರುದ್ಧ ಹೋರಾಡಲು ಯದುರಾಯನನ್ನು ನೇಮಿಸಿ,  ಭವಿಷ್ಯದ ಇನ್ನೊಂದು ಪ್ರಬಲ ಸಾಮ್ರಾಜ್ಯದ ಹುಟ್ಟಿಗೆ ಕಾರಣವಾಗುತ್ತಾನೆ.

ಮೂಲಗಳು

ಬದಲಾಯಿಸಿ
  1. Sen, Sailendra (2013). A Textbook of Medieval Indian History. Primus Books. pp. 103–106. ISBN 978-9-38060-734-4.
  2. "Palace of Vira Harihara". Archived from the original on 21 June 2010. Retrieved 11 ನವೆಂಬರ್ 2018. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help); Unknown parameter |dead-url= ignored (help)
  3. Sangave 1981.

ಬಾಹ್ಯ ಕೊಂಡಿಗಳು

ಬದಲಾಯಿಸಿ
ಪೂರ್ವಾಧಿಕಾರಿ
ಚಂದ್ರಗಿರಿ ರಾಯ
ವಿಜಯನಗರ ಸಾಮ್ರಾಜ್ಯ
1377-1404
ಉತ್ತರಾಧಿಕಾರಿ
ಬುಕ್ಕ ರಾಯ I

೧. http://hampi.in/a-forgotten-empire-chapter-2

೨. ಕರ್ನಾಟಕದ ಇತಿಹಾಸ

  ಈ ಲೇಖನವನ್ನು ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೮ರ ಅಂಗವಾಗಿ ಸೃಷ್ಟಿಸಲಾಗಿದೆ ಅಥವಾ ಸಂಪಾದಿಸಲಾಗಿದೆ.