ವಿರೂಪಾಕ್ಷ ರಾಯ
ವಿರೂಪಾಕ್ಷ ರಾಯ (1404-1405 CE) ವಿಜಯನಗರ ಸಾಮ್ರಾಜ್ಯ ದ ಓರ್ವ ಚಕ್ರವರ್ತಿ.
ವಿಜಯನಗರ ಸಾಮ್ರಾಜ್ಯ | |||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
|
1404ರಲ್ಲಿ, ೨ನೇ ಹರಿಹರನ ಮರಣಾನಂತರ ಸಿಂಹಾಸನವು ಆತನ ಮಕ್ಕಳಾದ ದೇವ ರಾಯ I, ಬುಕ್ಕ ರಾಯ II ಮತ್ತು ವಿರೂಪಾಕ್ಷ ರಾಯರ ನಡುವೆ ವಿವಾದವುಂಟಾಯಿತು. ವಿರೂಪಾಕ್ಷ ರಾಯ, ತನ್ನ ಮಕ್ಕಳಿಂದಲೇ ಹತ್ಯೆಯಾಗುವ ಮುನ್ನ, ಕೆಲವೇ ತಿಂಗಳುಗಳ ಕಾಲ ಮಾತ್ರ ರಾಜ್ಯಭಾರ ನಡೆಸಲು ಸಾಧ್ಯವಾಗುತ್ತದೆ.
ತದನಂತರ, ೨ ವರ್ಷಗಳ ಕಾಲ ಬುಕ್ಕ ರಾಯ II ಆಡಳಿತ ನಡೆಸುತ್ತಾನೆ. ಆ ತರುವಾತ, ದೇವರಾಯ I ಸಹ ರಾಜ್ಯಭಾರ ನಡೆಸುತ್ತಾನೆ.
ವಿರೂಪಾಕ್ಷ ರಾಯನ ಆಡಳಿತ ಕೇವಲ ಕೆಲವೇ ತಿಂಗಳುಗಳಾದ್ದರಿಂದ, ಮಹತ್ವದ ಯಾವುದೇ ಘಟನೆಗಳು ಅಥವಾ ಬದಲಾವಣೆಗಳು ನಡೆಯಲಿಲ್ಲ. ಪ್ರವಾಸಿ ನುನಿಜ್ ಪ್ರಕಾರ, ವಿರೂಪಾಕ್ಷ ರಾಯನ ಅವಧಿಯಲ್ಲಿ, ಗೋವ, ಚೌಲ್ ಮತ್ತು ಧಾಭ್ಹೊಳ್ ಒಳಗೊಂಡಂತೆ ಹಲವು ಪ್ರಾಂತ್ಯಗಳನ್ನು ಮುಸ್ಲಿಮ್ ರಾಜರುಗಳಿಗೆ ಸೋತ. ಅಲ್ಲದೇ, ಬಹು ಕಠುಕನಾಗಿದ್ದನು ಮತ್ತು "ಮದಿರೆ ಮತ್ತು ಮಹಿಳೆಯರ ಜೊತೆ ಮೈಮರೆಯುತ್ತಿದ್ದ" ಎಂದೂ ಬರೆದಿದ್ದಾನೆ.
ಬಾಹ್ಯ ಕೊಂಡಿಗಳು
ಬದಲಾಯಿಸಿಈ ಲೇಖನವನ್ನು ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೮ರ ಅಂಗವಾಗಿ ಸೃಷ್ಟಿಸಲಾಗಿದೆ ಅಥವಾ ಸಂಪಾದಿಸಲಾಗಿದೆ. |