ಸ್ಮೃತಿ ಮಂದಾನ
Ms. Smriti Mandhana, Arjun Awardee (Cricket), in New Delhi on July 16, 2019 (cropped).jpg
೨೦೧೯ ರಲ್ಲಿ ಸ್ಮೃತಿ ಮಂದಾನ
ವೈಯ್ಯಕ್ತಿಕ ಮಾಹಿತಿ
ಪೂರ್ಣ ಹೆಸರುಸ್ಮೃತಿ ಶ್ರೀನಿವಾಸ್ ಮಂದಾನ
ಜನನ (1996-07-18) ೧೮ ಜುಲೈ ೧೯೯೬ (ವಯಸ್ಸು ೨೬)
ಮುಂಬೈ, ಮಹಾರಾಷ್ಟ್ರ, ಭಾರತ
ಬ್ಯಾಟಿಂಗ್ ಶೈಲಿಎಡಗೈ
ಬೌಲಿಂಗ್ ಶೈಲಿಬಲಗೈ
ಪಾತ್ರಬ್ಯಾಟ್ಸ್ ವುಮನ್
International information
ದೇಶದ ಪರ
ಟೆಸ್ಟ್ ಚೊಚ್ಚಲ ಪಂದ್ಯ(cap ೭೫)೧೩ ಆಗಸ್ಟ್ ೨೦೧೪ v ಇಂಗ್ಲೆಂಡ್
ಕೊನೆಯ ಟೆಸ್ಟ್೧೬ ನವೆಂಬರ್ ೨೦೧೪ v ದಕ್ಷಿಣ ಆಫ್ರಿಕಾ
ಒಡಿಐ ಚೊಚ್ಚಲ ಪಂದ್ಯ (cap ೧೦೬)೧೦ ಎಪ್ರೀಲ್ ೨೦೧೩ v ಬಾಂಗ್ಲಾದೇಶ
ಕೊನೆಯ ಒಡಿಐ೬ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್
ಒಡಿಐ ಶರ್ಟ್ ಸಂಖ್ಯೆ೧೮
T20I debut (cap ೪೦)೫ ಎಪ್ರೀಲ್ ೨೦೧೩ v ಬಾಂಗ್ಲಾದೇಶ
ಕೊನೆಯ ಅಂ.ರಾ ಟಿ೨೦೨೦ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್
ಅಂ.ರಾ. ಟಿ೨೦ ಶರ್ಟ್ ಸಂಖ್ಯೆ೧೮
ದೇಶೀಯ ತಂಡ ಮಾಹಿತಿ
ವರ್ಷಗಳುTeam
೨೦೧೬-೧೭ಬ್ರಿಸ್ಬೇನ್ ಹೀಟ್
೨೦೧೮-ಇಂದಿನವರೆಗೆಹೊಬಾರ್ಟ್ ಚಂಡಮಾರುತಗಳು
೨೦೧೮-ಇಂದಿನವರೆಗೆಪಾಶ್ಚಾತ್ಯ ಬಿರುಗಾಳಿ
೨೦೧೮-ಇಂದಿನವರೆಗೆಟ್ರೇಲ್‌ಬ್ಲೇಜರ್‌ಗಳು
ವೃತ್ತಿ ಅಂಕಿಅಂಶಗಳು
ಸ್ಪರ್ಧೆ WTest WODI WT20I WBBL
ಪಂದ್ಯಗಳು ೫೧ ೬೬ ೨೫
ಗಳಿಸಿದ ರನ್‌ಗಳು ೮೧ ೨,೦೨೫ ೧,೪೫೧ ೪೦೭
ಬ್ಯಾಟಿಂಗ್ ಸರಾಸರಿ ೨೭.00 ೪೩.೦೮ ೨೪.೫೯ ೧೯.೩೮
100ಗಳು/50ಗಳು 0/೧ ೪/೧೭ 0/೧೦ 0/೨
ಅತ್ಯುತ್ತಮ ಸ್ಕೋರ್ ೫೧ ೧೩೫ ೮೬ ೬೯
ಬಾಲ್‌ಗಳು ಬೌಲ್ ಮಾಡಿದ್ದು ೨೭
ವಿಕೆಟ್ಗಳು
ಬೌಲಿಂಗ್ ಸರಾಸರಿ ೫.೭೦
5 ವಿಕೆಟ್‌ಗಳು ಇನ್ನಿಂಗ್ಸ್‌ಗಳಲ್ಲಿ
ಪಂದ್ಯ ಒಂದರಲ್ಲಿ 10 ವಿಕೆಟ್‌ಗಳು
ಅತ್ಯುತ್ತಮ ಬೌಲಿಂಗ್ ೨/೬
ಕ್ಯಾಚ್‌ಗಳು/ಸ್ಟಂಪ್‌ಗಳು 0/- ೧೭/- ೧೫/- ೮/-
ಮೂಲ: Cricinfo, 20 November 2019

ಆರಂಭಿಕ ಜೀವನಸಂಪಾದಿಸಿ

ಸ್ಮೃತಿಯವರು ಜುಲೈ ೧೮, ೧೯೯೬ರಂದು ಮುಂಬೈಯಲ್ಲಿ ಸ್ಮಿತಾ ಹಾಗು ಶ್ರೀನಿವಾಸ ದಂಪತಿಗೆ ಜನಿಸಿದರು. ಇವರು ಎರಡು ವರ್ಷದವರಿದ್ದಾಗ ಇವರ ಕುಟುಂಬ ಸಾಂಗಲಿ ಜಿಲ್ಲೆಯಲ್ಲಿ ವಾಸಿಸಲಾರಂಭಿಸಿತು. ಇವರು ತಮ್ಮ ಸಂಪೂರ್ಣ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದರು. ಇವರ ತಂದೆ ಶ್ರೀನಿವಾಸ ಹಾಗು ಸಹೋದರ ಶ್ರವಣ್ ಇಬ್ಬರೂ ಸಾಂಗಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಆಟಗಾರರು. ಇವರ ಸಹೋದರ, ಶ್ರವಣ್ ಮಹಾರಾಷ್ಟ್ರದ ೧೬ರ ವಯೋಮಿತಿ ತಂಡದಲ್ಲಿ ಆಟವಾಡಿದ್ದು ಇವರಿಗೆ ಪ್ರೇರಣೆ ಆಯಿತು. ಇವರು ತಮ್ಮ ಒಂಬತ್ತನೇ ವಯಸ್ಸಿನಲ್ಲೇ ಮಹಾರಾಷ್ಟ್ರದ ೧೫ರ ವಯೋಮಿತಿ ತಂಡಕ್ಕೆ ಆಯ್ಕೆಯಾದರು. ಹಾಗೆಯೇ ತಮ್ಮ ೧೧ನೇ ವಯಸ್ಸಿನಲ್ಲೇ ಮಹಾರಾಷ್ಟ್ರದ ೧೯ರ ವಯೋಮಿತಿ ತಂಡಕ್ಕೆ ಆಯ್ಕೆಯಾದರು. ಸ್ಮೃತಿಯವರಿಗೆ ತಮ್ಮ ಕುಟುಂಬದಿಂದ ಸಾಕಷ್ಟು ಬೆಂಬಲ ಸಿಕ್ಕಿತು.[೧]

ವೃತ್ತಿ ಜೀವನಸಂಪಾದಿಸಿ

ಪ್ರಥಮ ದರ್ಜೆ ಕ್ರಿಕೆಟ್ಸಂಪಾದಿಸಿ

ಅಕ್ಟೋಬರ್ ೨೦೧೩ರಲ್ಲಿ ಮಂದಾನಾ, ಮಹಾರಾಷ್ಟ್ರ ತಂಡದ ಪರವಾಗಿ ಗುಜರಾತ್ ವಿರುದ್ದ ನಡೆದ ಏಕದಿನ ಪಂದ್ಯವೊಂದರಲ್ಲಿ ದ್ವಿಶತಕವನ್ನು ಬಾರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಧಾಖಲೆಯನ್ನು ಬರೆದರು. ೨೦೧೬ರಲ್ಲಿ ನಡೆದ ಉಮೆನ್ಸ್ ಚಾಲೆಂಜರ್ ಟ್ರೋಫೀಯಲ್ಲಿ ಮಂದಾನ ಇಂಡಿಯಾ ರೆಡ್ ತಂಡದ ಪರವಾಗಿ ಇಂಡಿಯಾ ಬ್ಲೂ ವಿರುದ್ಧ ನಡೆದ ಫೈನಲ್‌ನಲ್ಲಿ ಅಜೇಯ ೬೨ ರನ ಗಳಿಸಿ ಗೆಲುವಿನ ರುವಾರಿಯಾದರು ಹಾಗೆ ಆ ಸರಣಿಯಲ್ಲಿ ಮೂರು ಅರ್ಧ ಶತಕಗಳನ್ನು ಬಾರಿಸಿದರು.[೨][೩]

ಅಂತರರಾಷ್ಟ್ರೀಯ ಕ್ರಿಕೆಟ್ಸಂಪಾದಿಸಿ

ಏಪ್ರಿಲ‍್ ೦೫, ೨೦೧೩ರಲ್ಲಿ ವಡೋದರಾದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಟಿ-೨೦ ಪಂದ್ಯದ ಮೂಲಕ ಮಂದಾನಾ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಏಪ್ರಿಲ್ ೧೦, ೨೦೧೩ರಲ್ಲಿ ಅಹ್ಮದಾಬಾದ್ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ಧ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ನಂತರ ಆಗಸ್ಟ್ ೧೩, ೨೦೧೪ರಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ನಡೆದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[೪][೫][೬]


ಪಂದ್ಯಗಳುಸಂಪಾದಿಸಿ

  • ಏಕದಿನ ಕ್ರಿಕೆಟ್ : ೪೪ ಪಂದ್ಯಗಳು[೭]
  • ಟೆಸ್ಟ್ ಕ್ರಿಕೆಟ್ : ೦೨ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೫೦ ಪಂದ್ಯಗಳು


ಅರ್ಧ ಶತಕಗಳುಸಂಪಾದಿಸಿ

  1. ಟಿ-೨೦ ಪಂದ್ಯಗಳಲ್ಲಿ : ೦೫
  2. ಟೆಸ್ಟ್ ಪಂದ್ಯಗಳಲ್ಲಿ : ೦೧
  3. ಏಕದಿನ ಪಂದ್ಯಗಳಲ್ಲಿ : ೧೩

ಶತಕಗಳುಸಂಪಾದಿಸಿ

  1. ಏಕದಿನ ಪಂದ್ಯಗಳಲ್ಲಿ : ೦೩

ಗ್ಯಾಲರಿಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. http://www.espncricinfo.com/women/content/story/984993.html
  2. "ಆರ್ಕೈವ್ ನಕಲು". Archived from the original on 2018-12-24. Retrieved 2018-11-16.
  3. https://www.cricbuzz.com/profiles/10012/smriti-mandhana
  4. http://www.espncricinfo.com/series/12157/scorecard/625900/india-women-vs-bangladesh-women-3rd-t20i-bangladesh-women-tour-of-india-2012-13
  5. http://www.espncricinfo.com/series/11662/scorecard/722387/england-women-vs-india-women-only-test-india-women-tour-of-england-2014
  6. http://www.espncricinfo.com/series/12157/scorecard/625902/india-women-vs-bangladesh-women-2nd-odi-bangladesh-women-tour-of-india-2012-13
  7. http://www.espncricinfo.com/india/content/player/597806.html