ಸಿಂಹ ಬಾಲದ ಸಿಂಗಳಿಕ
ಸಿಂಹ ಬಾಲದ ಸಿಂಗಳಿಕ | |
---|---|
![]() | |
Egg fossil classification | |
Kingdom: | |
Phylum: | |
Class: | |
Order: | |
Family: | |
Genus: | |
Species: | ಸಿಲೆನಸ್
|
Binomial nomenclature | |
ಮಕಾಕ | |
![]() | |
Lion-tailed macaque range |
ಪಕ್ಷಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುವ ಜಗತ್ತಿನ ಅತ್ಯಂತ ಹಳೆಯ ವಾನರ ಜಾತಿಯ ಪ್ರಾಣಿ ಸಿಂಹ ಬಾಲದ ಸಿಂಗಳಿಕ, ಮಾಮೂಲಿ ಕೋತಿಗಳಂತೆ ಚೆಸ್ಟೆ ಮಾಡದ,ಮಾನವನನ್ನು ಕಂಡರೆ ದೂರ ಹೋಗುವ ಸಂಕೋಚದ ಪ್ರಾಣಿ. ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ಇದು ಕಂಡು ಬರುತ್ತದೆ.
ವಾಸ ಸ್ಥಾನಸಂಪಾದಿಸಿ
ಪಕ್ಷಿಮ ಘಟ್ಟಗಳು,ಇವುಗಳ ವಾಸ ಸ್ಥಾನವು ವಿಶಿಷ್ಟವಾಗಿದೆ. ಘಟ್ಟದ ಮೇಲಿನ ಬಾಗವು ಅಲ್ಲದ, ಅತಿ ಕೆಳಗಿನ ಬಾಗವು ಅಲ್ಲದೆ,ಮದ್ಯೆ ಬಾಗದ ಇಳಿಜಾರಿನ ಬೆಟ್ಟಗಳಲ್ಲಿ ಇವು ಹೆಚ್ಚಾಗಿ ವಾಸಿಸುತ್ತವೆ , ಕರ್ನಾಟಕದ ಸಿರಸಿ-ಕುಮಟ, ಕುದುರೆಮುಖ-ಕೊಲ್ಲೂರು, ಆಗುಂಬೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇವೆ. ಕೊಡಗಿನ ಭಾಗದಲ್ಲಿ ಇವು ನಾಶವಾಗಿವೆ. ಇವುಗಳು ಪಕ್ಷಿಮ ಘಟ್ಟದ ಮಳೆ ಕಾಡುಗಳಲ್ಲಿ ಬಿಟ್ಟರೆ ಪ್ರಪಂಚದಲ್ಲಿ ಬೇರೆ ಎಲ್ಲು ಕಂಡು ಬರುವುದಿಲ್ಲ.
ಹತ್ತುವ ಕಲೆಯನ್ನು ಚೆನ್ನಾಗಿ ಬಲ್ಲ ಇವುಗಳು ತಮ್ಮ ಜೀವಿತಾವದಿಯ ಬಹು ಕಾಲ ಮರದ ಮೇಲೆಯೇ ಕಳೆಯುವವು, 10-20ಸಂಖೆಯ ಗುಂಪುಗಳಲ್ಲಿ ವಾಸಿಸುತ್ತವೇ, ಇದರಲ್ಲಿ ಗಂಡು ಕಡಿಮೆ ಹೆಣ್ಣುಗಳ ಸಂಖ್ಯೆ ಹೆಚ್ಚು , ಒಂದು ನಿರ್ದಿಷ್ಟ ಟೆರಿಟರಿ ಯಲ್ಲಿ ವಾಸಿಸುವ ಇವುಗಳು ಬೇರೆ ಸಿಂಗಳಿಕ ಗುಂಪುಗಳು ಬಂದಾಗ ಭಯಾನಕ ಶಬ್ದ ಮಾಡುತ್ತವೆ.
ದೇಹ,ಬೆಳೆಯುವಿಕೆಸಂಪಾದಿಸಿ
ಕಪ್ಪು ದೇಹದ, ಕಪ್ಪು ಮುಖದ ಈ ಪ್ರಾಣಿಯ ಮುಖದ ಸುತ್ತಲು ಬಿಳಿ ಬಣ್ಣದ ಕೂದಲುಗಳನ್ನು ಹೊಂದಿದೆ. 41ರಿಂದ 61 ಸೆಂ ಮಿ ಬೆಳೆಯುವ ಇದು 2 ರಿಂದ 10ಕೆಜಿ ತೂಕವನ್ನು ಹೊಂದಿರುತ್ತದೆ. ಬಾಲವು ಸಾದಾರಣ ಉದ್ದದ್ದಾಗಿದೆ ಮತ್ತು ಬಾಲದ ಕೊನೆಯಲ್ಲಿ ಗುಚ್ಚದ ಹಾಗೆ ಇರುವುದರಿಂದ ಇರುತ್ತದೆ ಸಿಂಹದ ಬಾಲದ ಹಾಗೆ, ಗಂಡು ಸಿಂಗಳಿಕದ ಬಾಲದ ಗುಚ್ಚ ಹೆಣ್ಣಿನದಕ್ಕಿಂತ ತುಸು ಹೆಚ್ಚಿರುತ್ತದೆ, ಗರ್ಭಧಾರಣೆಯು ಆರು ತಿಂಗಳುಗಳ ಕಾಲ, ಒಂದು ವರ್ಷದವರೆಗೂ ಮಗುವನ್ನು ನೋಡಿಕೊಳ್ಳುತ್ತವೆ, ಹೆಣ್ಣು ೪ವರ್ಷಕ್ಕೆ ಮೆಚುರ್ ಆದರೆ ಗಂಡಿಗೆ ಆರು ವರ್ಷ. ಕಾಡಿನಲ್ಲಿರುವ ಸಿಂಗಳಿಕಗಳ ಬದುಕಿನ ಅವದಿ 20ವರ್ಷ, ಬಂದಿಸಿಡುವ ಸಿಂಗಳಿಕಗಳು 30ವರ್ಷಗಳ ವರೆಗೂ ಬದುಕುತ್ತವೆ.
ತಿನ್ನುವುದುಸಂಪಾದಿಸಿ
ವಿವಿದ ರೀತಿಯ ಹಣ್ಣುಗಳು, ಎಲೆಗಳು, ಮೊಗ್ಗು, ಕೀಟಗಳು, ಚಿಕ್ಕ ಕಶೇರುಕಗಳು(vertebrates), ಮರದ ಮೇಲಿನ ಪಾರಿವಳದಂತಹ ಹಕ್ಕಿಗಳ ಮೊಟ್ಟೆಗಳು ಇವುಗಳ ಆಹಾರವಾಗಿದೆ.
ಸಂಶೋದನೆಸಂಪಾದಿಸಿ
ಇವುಗಳ ಬಗ್ಗೆ ಚಿಕ್ಕಮಗಳೂರಿನ ವಿಜ್ಞಾನಿ ಎಚ್ ಏನ್ ಕುಮಾರ ಅವರು ಕೊಯಮತ್ತೂರಿನಲ್ಲಿರುವ ಸಲಿಂ ಅಲಿ ಸಂಶೋದನ ಸಂಸ್ತೆಯ ಮೂಲಕ ಕಳೆದ 20 ವರ್ಷಗಳಿಂದ ಅದ್ಯಯನ ನಡೆಸುತ್ತಿದ್ದಾರೆ.
ಅಳಿವಿನ ಅಂಚಿನಲ್ಲಿಸಂಪಾದಿಸಿ
ಅಂದಾಜು 3000-3500 ಇವುಗಳ ಒಟ್ಟು ಸಂಖೆ, ಸಿರಸಿ ಕಾಡುಗಳಲ್ಲಿ 32 ಗುಂಪುಗಳು ಇವೆ, ಹಾಗೆ ಕೊಲ್ಲೂರು ಕುದುರೆಮುಖ ಕಾಡುಗಳಲ್ಲೂ ಗಣನೀಯ ಪ್ರಮಾಣದಲ್ಲಿ ಕಂಡು ಬರುತ್ತವೆ. ಕೊಡಗಿನ ಕಡೆ ಇವುಗಳು ಬೇಟೆ, ಕಾಡನ್ನು ಕಾಫಿ ತೋಟಗಳನ್ನಾಗಿ ಬದಲಾಯಿಸಿದ ಪರಿಣಾಮದಿಂದ ಸಂಪೂರ್ಣ ನಾಶವಾಗಿವೆ ಎಂದು ಹೇಳಬಹುದು, ಅಣೆಕಟ್ಟುಗಳ ನಿರ್ಮಾಣ, ವಿದ್ಯುತ್ ಉದ್ಪಾದನೆ ಯೋಜನೆಗಳು, ರಸ್ತೆಗಳು, ವ್ಯವಸಾಯ ಇನ್ನು ಮುಂತಾದವುಗಳು ಇವುಗಳ ಅವಸಾ ಸ್ಥಾನವನ್ನು ನಾಶ ಮಾಡುತ್ತಿವೆ.
ಅಘನಾಶಿನಿ ಸಿಂಹಬಾಲದ ಸಿಂಗಳಿಕ ಕಾಯ್ದಿಟ್ಟ ಕಾಡುಸಂಪಾದಿಸಿ
ಸುಮಾರು 300ಚದರ ಕಿಮೀ ನಷ್ಟು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟ, ಸಿರಸಿ ಮತ್ತು ಸಿದ್ದಾಪುರ ತಾಲೂಕುಗಳ ಪ್ರದೇಶವನ್ನು ಸಿಂಹ ಬಾಲದ ಸಿಂಗಳಿಕಗಳ ರಕ್ಷಣೆಗಾಗಿ ಕಾಯ್ದಿರಸಲಾಗಿದೆ. ಇದನ್ನು ಮಾಡುವಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆಯಲ್ಲಿರುವ ಹಿರಿಯ ಅಧಿಕಾರಿಗಳಾದ ವಿಜಯ್ ಮೋಹನ್ ರಾಜ್, ಸಂತೋಷ್ ಕುಮಾರ್ ಮತ್ತು ವಿಜ್ಞಾನಿ ಎಚ್ ಏನ್ ಕುಮಾರ ಅವರ ಶ್ರಮ ದೊಡ್ಡದು.ಇಲ್ಲಿ ಸುಮಾರು 650 ಸಿಂಗಳಿಕಗಳು 32 ಗುಂಪುಗಳಲ್ಲಿ ವಾಸಿಸುತ್ತಿವೆ.
External linksಸಂಪಾದಿಸಿ
Wikimedia Commons has media related to Macaca silenus. |
Macaca silenus: ಇದಕ್ಕೆ ಸಂಬಂಧಿಸಿದಂತೆ ವಿಕಿಸ್ಪೀಸೀಸ್ ಮಾಹಿತಿಯನ್ನು ಹೊಂದಿದೆ. |
- ARKive - Images and movies of the lion-tailed macaque (Macaca silenus) Archived 2007-04-05 at the Wayback Machine.
- The Knights of the Forest - Photo-essay of the lion-tailed macaque
- Documentary Film - A Call in the Rainforest - [೧]
- Video of Lion-tailed Macaque - Save Earth Series - Lion-tailed Macaque