ಸಾಪೇಕ್ಷತ ಸಿದ್ಧಾಂತ

'ಸಾಪೇಕ್ಷ ಸಿದ್ಧಾಂತ' ವಿಜ್ಞಾನದಲ್ಲಿ ಬಹು ಚರ್ಚಿತ ಸಿದ್ಧಾಂತಗಳಲ್ಲಿ ಪ್ರಮುಖವಾದುದು.ಇದು ಮೂಲಭೂತವಾಗಿ ಎರಡು ವಿಭಾಗಗಳಲ್ಲಿ ಪ್ರಕಟಗೊಂಡಿದೆ. ಪ್ರಥಮವಾಗಿ ಐನ್‍ಸ್ಟೈನ್ರವರು ೧೯೦೫ ರಲ್ಲಿ 'ವಿಶೇಷ ಸಾಪೇಕ್ಷ ಸಿದ್ಧಾಂತ' ಎಂದು ಪ್ರಕಟಿಸಿದರು,ಎರಡನೆಯದಾಗಿ ೧೯೧೫ರಲ್ಲಿ 'ಸಾಮಾನ್ಯ ಸಾಪೇಕ್ಷ ಸಿದ್ಧಾಂತ' ಎಂದು ಪ್ರಕಟಿಸಿದರು.ಸಾಪೇಕ್ಷ ಸಿದ್ಧಾಂತವು ಪ್ರಕೃತಿಯ ಸಕಲ ಘಟನೆಗಳ ಹಿಂದಿನ ಮೂಲಭೂತ ವಿಚಾರಗಳಿಗೆ ಸಮರ್ಪಕ ಉತ್ತರವನ್ನು ನೀಡುತ್ತದೆ.ಈ ವಿಚಾರಗಳೆಂದರೆ,ಕಾಲ,ಚಲನೆ,ದ್ರವ್ಯರಾಶಿ,ಅವಕಾಶ(space)ಮತ್ತು ಗುರುತ್ವಶಕ್ತಿ.ಆರನೇಯ ಶತಮಾನದಲ್ಲಿ ಜಗದ್ಗುರು ರೇಣುಕಾಚಾಯ೯ರು ಉಲ್ಲೇಖಿಸಿದ್ದಾರೆ ಸಿದ್ಧಾಂತ ಸಿಖಾಮನಿ ಎಂಬ ಗ್ರಂಥವನ್ನು

ವಿಶೇಷ ಸಾಪೇಕ್ಷ ಸಿದ್ಧಾಂತಸಂಪಾದಿಸಿ

ವಿಶೇಷ ಸಾಪೇಕ್ಷ ಸಿದ್ಧಾಂತವು ಭೌತಶಾಸ್ತ್ರದಲ್ಲಿ ಸರ್ವಸಮ್ಮತವಾದ ಸಿದ್ಧಾಂತವಾಗಿದ್ದು, ಇದನ್ನು ಆಲ್ಬರ್ಟ್ ಐನ್ಸ್‍ಟೀನ್ ಅವರು 1905ರಲ್ಲಿ On the Electrodynamics of Moving Bodies ಎಂಬ ಬರಹದಲ್ಲಿ ಪ್ರತಿಪಾದಿಸಿದರು.ಈ ಸಿದ್ಧಾಂತವು ೨ ತತ್ವಗಳನ್ನು ಆಧರಿಸಿದೆ

೧. ಒಂದು ಜಡ ಪ್ರದೇಶಕ್ಕೆ (Inertial reference frame) ಅನ್ವಯಿಸಿದಾಗ ಭೌತಶಾಸ್ತ್ರದ ಎಲ್ಲಾ ನಿಯಮಗಳು ಸಮಾನವಾಗಿರುತ್ತವೆ.

೨. ನಿರ್ವಾತದಲ್ಲಿ ಬೆಳಕಿನ ವೇಗ ಯಾವಾಗಲೂ ಸಮಾನವಾಗಿರುತ್ತದೆ, ಇದು ವೀಕ್ಷಕ ಅಥವಾ ಬೆಳಕಿನ ಮೂಲದ ಚಲನೆಯನ್ನು ಅವಲಂಬಿಸಿಲ್ಲ.

ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತಸಂಪಾದಿಸಿ

ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತವನ್ನು ಆಲ್ಬರ್ಟ್ ಐನ್ಸ್‍ಟೀನ್ ಅವರು ೧೯೧೫ರಲ್ಲಿ ಪ್ರತಿಪಾದಿಸಿದರು.ಈ ಸಿದ್ಧಾಂತವು ನ್ಯೂಟನ್ನನ ಗುರುತ್ವಾಕರ್ಷಣೆಯ ಆಧುನಿಕ ಹಾಗೂ ಸಾರ್ವತ್ರಿಕ ವಿಶ್ಲೇಷಣೆಯಾಗಿದೆ. ಇದರಲ್ಲಿ ಗುರುತ್ವಾಕರ್ಷಣೆಯು ಹಿಂದೆ ನಾವಂದುಕೊಂಡಂತೆ ೨ ವಸ್ತುಗಳ ನಡುವಿನ ಪರಸ್ಪರ ಆಕರ್ಷಣೆಯಷ್ಟೇ ಅಲ್ಲ, ಇದನ್ನು ಅರ್ಥೈಸಿಕೊಳ್ಳಲು ನಾವು ಆಕಾಶ ಹಾಗೂ ಕಾಲ ಇವುಗಳ ಗುಣವನ್ನು ಮೊದಲು ತಿಳಿದುಕೊಳ್ಳಬೇಕು. ಖಾಲಿ ಜಾಗವು ಆಕಾಶ ಹಾಗೂ ಕಾಲವನ್ನು ಒಟ್ಟಾಗಿ ನೇಯ್ದು ನಿರ್ಮಿಸಿದ ನಯವಾದ ಬಟ್ಟೆಯಂತೆ ಬ್ರಹ್ಮಾಂಡದೆಲ್ಲೆಡೆ ಹರಡಿಕೊಂಡಿದೆ. ಯಾವುದೇ ಕಾಯವು ಈ ಆಕಾಶ-ಕಾಲದಲ್ಲಿ ತನ್ನ ದ್ರವ್ಯರಾಶಿಗನುಗುಣವಾಗಿ ಒಂದು ಕುಳಿಯನ್ನು ಉಂಟುಮಾಡುತ್ತದೆ ಅಥವಾ ಆಕಾಶ-ಕಾಲದ ಮೇಲ್ಮೈಯನ್ನು ಬದಲಿಸುತ್ತದೆ ಎನ್ನಬಹುದು. ಈ ಬದಲಾದ ಮೇಲ್ಮೈನಲ್ಲೇ ಬೆಳಕು ಸೇರಿದಂತೆ ಇತರ ಕಣಗಳು ಸಂಚರಿಸುತ್ತವೆ. ಇದನ್ನು ಕಲ್ಪಿಸಿಕೊಳ್ಳುವುದು ಸ್ವಲ್ಪ ವಿಚಿತ್ರವೆನಿಸಿದರೂ, ಈವರೆಗೆ ನಡೆಸಲ್ಪಟ್ಟ ಪ್ರಯೋಗಗಳಿಂದ ಈ ಸಿದ್ಧಾಂತವು ನಿಜವೆಂದು ಸಾಬೀತಾಗಿದೆ. ಈ ಸಿದ್ದಾಂತವು ನಮ್ಮ ಅರಿವಿನ ಅಡಿಪಾಯವನ್ನೇ ಬದಲಿಸಿದೆ. ಇದೇ ಸಾರ್ವತ್ರಿಕ ಸಿದ್ಧಾಂತದ ಸಹಾಯದಿಂದ ಬೆಳಕಿನ ಚಲನೆ, ಗ್ರಹ ನಕ್ಷತ್ರಗಳ ಚಲನೆ ಮಾತ್ರವಲ್ಲದೇ ಕಪ್ಪುರಂಧ್ರದ ಅಸ್ತಿತ್ವವನ್ನೂ ವಿವರಿಸಲಾಗಿದೆ.

ಈ ಸಿದ್ಧಾಂತದ ಪ್ರಕಾರ ಸಮಯವು, ಗುರುತ್ವಬಲದೊಂದಿಗೆ ಸಂಕುಚಿತಗೊಳ್ಳುತ್ತದೆ. ಅಂದರೆ ಭೂಮಿಯ ಮೇಲಿಗಿಂತ ಬಾಹ್ಯಾಕಾಶದ ಶೂನ್ಯ ಗುರುತ್ವದಲ್ಲಿ ಸಮಯವು ನಿಧಾನವಾಗಿ ಓಡುತ್ತದೆ.