ಸಾಂದೀಪನಿ (ಸಂಸ್ಕೃತ: सान्दीपनि), ಕೆಲವೊಮ್ಮೆ ಸಂದೀಪನ ಎಂದು ನಿರೂಪಿಸಲಾಗಿದೆ. ಇವರು ಹಿಂದೂ ಧರ್ಮದಲ್ಲಿ ಕೃಷ್ಣ ಮತ್ತು ಬಲರಾಮಗುರು. ಅವರು ಎಲ್ಲಾ ವೇದಗಳು, ಚಿತ್ರಕಲೆ, ಖಗೋಳಶಾಸ್ತ್ರ, ಗಂಧರ್ವ ವೇದ, ಔಷಧ, ಆನೆಗಳು ಮತ್ತು ಕುದುರೆಗಳನ್ನು ತರಬೇತಿ ಮತ್ತು ಬಿಲ್ಲುಗಾರಿಕೆಯ ಬಗ್ಗೆ ಅವರಿಗೆ ಶಿಕ್ಷಣ ನೀಡಿದ್ದಾರೆ ಎಂದು ಪರಿಗಣಿಸಲಾಗಿದೆ.[]

ಸಾಂದೀಪನಿ
ಕೃಷ್ಣನು ಸಾಂದೀಪನಿಯ ಮಗನನ್ನು ಅವನಿಗೆ ಹಿಂದಿರುಗಿಸುತ್ತಾನೆ.
ಸಂಲಗ್ನತೆಋಷಿ
ಗ್ರಂಥಗಳುಪುರಾಣಗಳು
ಪ್ರದೇಶಅವಂತಿ

ದಂತಕಥೆ

ಬದಲಾಯಿಸಿ

ಭಾಗವತ ಪುರಾಣವು ಸಾಂದೀಪನಿಗೆ ಸಂಬಂಧಿಸಿದ ಈ ಕೆಳಗಿನ ಕಥೆಯನ್ನು ಹೇಳುತ್ತದೆ: ‘ಸಾಂದೀಪನಿ’ ಒಬ್ಬ ಬ್ರಾಹ್ಮಣ. ಮಾಳವ ದೇಶದಲ್ಲಿ ವಾಸಿಸುತ್ತಿದ್ದನು. ಇವರು ಬಲರಾಮ ಮತ್ತು ಶ್ರೀಕೃಷ್ಣರಿಗೆ ವಿದ್ಯೆಯನ್ನು ಹೇಳಿಕೊಡುತ್ತಿದ್ದರು. ಒಂದು ದಿನ ಈತನು ತನ್ನ ಪತ್ನಿಯೊಂದಿಗೆ ಪ್ರಭಾಸ ಕ್ಷೇತ್ರಕ್ಕೆ ಹೋಗಿದ್ದಾಗ, ಈತನ ಮಗನನ್ನು ಪ್ರಹ್ಲಾದನ ತಮ್ಮ ಸಂಹ್ಲಾದನ ಮಗನಾದ ಪಂಚಜನನು ಎತ್ತಿಕೊಂಡು ಸಮುದ್ರ ಪ್ರವೇಶಿಸಿದನು. ಮಗನಿಲ್ಲದ ಕೊರಗು ಸಾಂದೀಪನಿ ಋಷಿಯ ಮನದಲ್ಲಿ ನೆಲೆಸಿತ್ತು. ಶ್ರೀಕೃಷ್ಣನು ತನಗೆ ವಿದ್ಯೆ ಹೇಳಿಕೊಟ್ಟ ಗುರುವಿನಲ್ಲಿ ಒಂದು ದಿನ ಗುರುದಕ್ಷಿಣೆಯಾಗಿ ಏನು ಕೊಡಬೇಕೆಂದು ಕೇಳಿದ, ಆಗ ಗುರು ಹಾಗೂ ಗುರುಪತ್ನಿ ಇಬ್ಬರೂ ಸೇರಿಕೊಂಡು ನಮ್ಮ ಮಗನನ್ನು ಸಂಹ್ಲಾದನ ಮಗನಾದ ಪಂಚಜನನು ಕೊಂಡೊಯ್ದು ಸಮುದ್ರದ ತಳದಲ್ಲಿರಿಸಿದ್ದಾನೆ ಅವನನ್ನು ಜೀವಸಹಿತ ನಮಗೆ ತಂದೊಪ್ಪಿಸಬೇಕು, ಇದು ನಾವು ಅಪೇಕ್ಷಿಸುವ ಗುರುದಕ್ಷಿಣೆ ಎಂದರು. ಅವರ ಮಾತಿನಂತೆ ಶ್ರೀಕೃಷ್ಣನು ಗುರುವಿನ ಅಪೇಕ್ಷೆಯನ್ನು ಈಡೇರಿಸಿದನು.[]

ಹರಿವಂಶ ಪುರಾಣದಲ್ಲಿ, ಸಾಂದೀಪನಿಯ ಮಗನನ್ನು ಪಂಚಜನ ಎಂಬ ಅಸುರನು ನುಂಗಿದನು ಮತ್ತು ನಾಶವಾದನು ಎಂದು ಕೃಷ್ಣನು ತಿಳಿದುಕೊಂಡನು. ಕೃಷ್ಣ ಮತ್ತು ಅವನ ಸಹೋದರ ತನ್ನ ಗುರುವಿನ ಮಗನನ್ನು ಮರಳಿ ಬದುಕಿಸಲು, ಯಮಲೋಕಕ್ಕೆ ಪ್ರಯಾಣ ಬೆಳೆಸಿ ಯಮನ ಮನವೊಲಿಸಿ, ಗುರುವಿಗೆ ಅವರ ಮಗನನ್ನು ಹಿಂತಿರುಗಿಸಿದನು.[]

ಛಾಯಾಂಕಣ

ಬದಲಾಯಿಸಿ

ಬಾಹ್ಯ ಕೊಂಡಿ

ಬದಲಾಯಿಸಿ

ಸಾಂದೀಪನಿಗೆ ಸಂಬಂಧಿಸಿದ ಭಾಗವತ ಪುರಾಣದ ಮುಖ್ಯ ಸಾರ

ಉಲ್ಲೇಖಗಳು

ಬದಲಾಯಿಸಿ
  1. www.wisdomlib.org (2017-06-19). "Sandipani, Sāndīpani: 5 definitions". www.wisdomlib.org (in ಇಂಗ್ಲಿಷ್). Retrieved 2022-11-07.
  2. "Chapter Forty-Five".
  3. www.wisdomlib.org (2020-11-14). "Krishna Brings Back His Preceptor's Son From the Ocean [Chapter 33]". www.wisdomlib.org (in ಇಂಗ್ಲಿಷ್). Retrieved 2022-11-07.