ಸರ್ ಎಡ್ವರ್ಡ್ ವಿಕ್ಟರ್ ಆಪಲ್ಟನ್


ಸರ್ ಎಡ್ವರ್ಡ್ ವಿಕ್ಟರ್ ಆಪಲ್ಟನ್ (6 ಸೆಪ್ಟೆಂಬರ್ 1892 – 21 ಎಪ್ರಿಲ್ 1965) ಬ್ರಿಟಿಷ್ ಭೌತಶಾಸ್ತ್ರಜ್ಞ[][].

ಸರ್ ಎಡ್ವರ್ಡ್ ವಿಕ್ಟರ್ ಆಪಲ್ಟನ್
ಜನನಎಡ್ವರ್ಡ್ ವಿಕ್ಟರ್ ಆಪಲ್ಟನ್
(೧೮೯೨-೦೯-೦೬)೬ ಸೆಪ್ಟೆಂಬರ್ ೧೮೯೨
Bradford, West Riding of Yorkshire, ಇಂಗ್ಲೆಂಡ್, UK
ಮರಣ21 April 1965(1965-04-21) (aged 72)
Edinburgh, Scotland, UK
ರಾಷ್ಟ್ರೀಯತೆEnglish
ಕಾರ್ಯಕ್ಷೇತ್ರಭೌತಶಾಸ್ತ್ರ
ಸಂಸ್ಥೆಗಳುKing's College London
University of Cambridge
University of Edinburgh
Cavendish Laboratory
ಅಭ್ಯಸಿಸಿದ ವಿದ್ಯಾಪೀಠBradford College
St John's College, Cambridge
ಶೈಕ್ಷಣಿಕ ಸಲಹೆಗಾರರುJ. J. Thomson
Ernest Rutherford
ಗಮನಾರ್ಹ ವಿದ್ಯಾರ್ಥಿಗಳುJ. A. Ratcliffe
Charles Oatley
ಪ್ರಸಿದ್ಧಿಗೆ ಕಾರಣIonospheric Physics[][]
Appleton layer
Demonstrating existence of Kennelly–Heaviside layer
ಗಮನಾರ್ಹ ಪ್ರಶಸ್ತಿಗಳುNobel Prize in Physics (1947)
Fellow of the Royal Society (1927)[]
Hughes Medal (1933)
Faraday Medal (1946)
Chree Medal (1947)
Royal Medal (1950)
Albert Medal (1950)
IEEE Medal of Honor (1962)

ಬಾಲ್ಯ ಮತ್ತು ಜೀವನ

ಬದಲಾಯಿಸಿ

ಜನನ ಬ್ರಾಡ್‍ಫರ್ಡ್‍ನಲ್ಲಿ ವಿದ್ಯಾಭ್ಯಾಸ ಅದೇ ಊರಿನಲ್ಲಿ ಮತ್ತು ಕೇಂಬ್ರಿಜ್‍ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ. 1924-1936ರ ವರೆಗೆ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಪ್ರಾಯೋಗಿಕ ಭೌತಶಾಸ್ತ್ರದ ವೀಟ್‍ಸ್ಟನ್ ಪ್ರಾಧ್ಯಾಪಕನಾಗಿದ್ದು 1936-39ರಲ್ಲಿ ಕೇಂಬ್ರಿಜ್‍ನಲ್ಲಿ ಜ್ಯಾಕ್ ಸೋನೀಯನ್ ಪ್ರಾಧ್ಯಾಪಕನಾದ. 1939-47ರವರೆಗೆ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನ ಇಲಾಖೆಯ ಕಾರ್ಯದರ್ಶಿಯಾಗಿದ್ದ. 1949ರಲ್ಲಿ ಎಡಿನ್‍ಬರೊ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನೇಮಕಗೊಂಡ.

ಸಂಶೋಧನೆಗಳು

ಬದಲಾಯಿಸಿ

ರೇಡಿಯೊ ತರಂಗಗಳ ಪ್ರಸಾರದ ವಿಷಯದಲ್ಲಿ ಮುಖ್ಯ ಸಂಶೋಧನೆ ನಡೆಸಿದ. ಭೂಮಿಯಿಂದ 230 ಕಿ.ಮೀ. ಈ ಎತ್ತರದಲ್ಲಿರುವ ವಿದ್ಯುತ್ಕಣಯುಕ್ತವಾದ ವಲಯವನ್ನು ಸಂಶೋಧಿಸಿದ. ಆಪಲ್ಟನ್‍ಸ್ತರ (ಪದರ)ವೆಂದೇ ಅದನ್ನು ಕರೆಯಲಾಗಿದೆ. ಅಯಾನ್‍ಗೋಳದ F ಪ್ರದೇಶದಲ್ಲಿಯ ಒಂದು ಅಯಾನೀಕೃತ ಪದರ. ಸೂರ್ಯಾಭಿಮುಖ ಗೋಳಾರ್ಧ ಕುರಿತಂತೆ ಇದರಲ್ಲಿ ಎಫ್-1 ಮತ್ತು ಎಫ್-2 ಪದರಗಳಿವೆ. ರಾತ್ರಿ ಗೋಳಾರ್ಧದಲ್ಲಿ ಕೇವಲ ಎಫ್-2 ಪದರ ಮಾತ್ರ ಇರುವುದು. 50ಮೆ. ಹಟ್ರ್ಸ್ ಆವೃತ್ತಿಗಳವರೆಗೂ ಎಫ್-ಪದರ ರೇಡಿಯೋ ತರಂಗಗಳನ್ನು ಪ್ರಸರಿಸಬಲ್ಲದು.

ಗೌರವಗಳು

ಬದಲಾಯಿಸಿ

ಇದಕ್ಕಾಗಿ 1947ರಲ್ಲಿ ನೊಬೆಲ್ (ಭೌತಶಾಸ್ತ್ರ) ಪಾರಿತೋಷಕ ಲಭಿಸಿತು. 1927ರಲ್ಲಿ ಇವನಿಗೆ ಎಫ್.ಆರ್.ಎಸ್. ಗೌರವ ಲಭಿಸಿತು.

ಉಲ್ಲೇಖಗಳು

ಬದಲಾಯಿಸಿ
  1. Appleton, E. V. (1946). "Two Anomalies in the Ionosphere". Nature. 157 (3995): 691. doi:10.1038/157691a0.
  2. Appleton, EV (1932). "Wireless Studies of the Ionosphere". J. Inst. Elec. Engrs. doi:10.1049/jiee-1.1932.0144.
  3. Ratcliffe, J. A. (1966). "Edward Victor Appleton 1892–1965". Biographical Memoirs of Fellows of the Royal Society. 12: 1–19. doi:10.1098/rsbm.1966.0001.
  4. "Sir Edward Appleton (1892–1965)".
  5. "Sir Edward Appleton". Physics Today. 18 (9): 113. 1965. doi:10.1063/1.3047706.

ಬಾಹ್ಯ ಸಂಪರ್ಕಗಳು

ಬದಲಾಯಿಸಿ