ಸದಾಶಿವ ಬ್ರಹ್ಮಾವರ

ಭಾರತೀಯ ನಟ

ಸದಾಶಿವ ಬ್ರಹ್ಮಾವರ್ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ಪೋಷಕ ನಟ. [℅ಕೆ ಎಸ್ ಅಶ್ವಥ್]] ಅವರ ನಂತರ ತಂದೆ, ಮೇಷ್ಟ್ರು ಪಾತ್ರಗಳಿಂದ ಜನಪ್ರಿಯತೆ ಮತ್ತು ಗೌರವ ಪಡೆದ ನಟ.

ಸದಾಶಿವ ಬ್ರಹ್ಮಾವರ
Born
ಸದಾಶಿವ ಬ್ರಹ್ಮಾವರ

1929
ಬೆಳಗಾವಿ ಭಾರತ.
Diedಸಪ್ಟೆಂಬರ್ 20, 2018
Other namesಸದಾಶಿವ ಬ್ರಹ್ಮಾವರ, ಬ್ರಹ್ಮಾವರ್
Occupationನಟ
Years active1975–2005

ಚಿತ್ರರಂಗದ ಮುಂಚಿನ ಬದುಕು

ಬದಲಾಯಿಸಿ

ಸದಾಶಿವ ಬ್ರಹ್ಮಾವರ್ ಮೂಲತಃ ಬೆಳಗಾವಿಯವರು. ಬೈಲಹೊಂಗಲದಲ್ಲಿನ ಪರಿಸರದಲ್ಲಿದ್ದ ಸದಾಶಿವ ಬ್ರಹ್ಮಾವರ ಉಡುಪಿಯಲ್ಲಿ ಬೆಳೆದರು. ಚಿಕ್ಕಂದಿನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಹುಲಿಮನೆ ಸೀತಾರಾಮಶಾಸ್ತ್ರಿ ಒಡೆತನದ[] ಜಯ ಕರ್ನಾಟಕ ನಾಟಕ ಸಂಘ ನಾಟಕ []ಕಂಪನಿಯಲ್ಲಿ[] ಬಾಲನಟನಾಗಿ ಅಭಿನಯ ಶುರುವಿಟ್ಟರು.
ಎಂ ಪಿ ಶಂಕರ್, ಕೆ ಎಸ್ ಅಶ್ವಥ್, ಏಣಗಿ ಬಾಳಪ್ಪ ಮುಂತಾದ ನುರಿತ ಕಲಾವಿದರು ಜಯ ಕರ್ನಾಟಕ ನಾಟಕ ಸಂಘದ ಅಡಿಯಲ್ಲಿ ದುಡಿಯುತ್ತಿದ್ದರು.[]

ಚಿತ್ರರಂಗದ ಬದುಕು

ಬದಲಾಯಿಸಿ

ನಾಟಕಗಳಲ್ಲಿ ನಟಿಸಲು ಮನೆ ತೊರೆದ ಬ್ರಹ್ಮಾವರ್, ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಲು ಶುರುಮಾಡಿದರು.೧೯೭೭ರ ಕರಾವಳಿ, ಬ್ರಹ್ಮಾವರ್ ನಟನೆಯ ಮೊದಲ ಚಿತ್ರ.[]
ರಂಗನಾಯಕಿ ಚಿತ್ರದಲ್ಲಿ ಆರತಿ ಮನೆಯ ವಾಚ್ ಮನ್ ಆಗಿ ಗಮನ ಸೆಳೆದ ಬ್ರಹ್ಮಾವರ್, ಜ್ವಾಲಾಮುಖಿ ಚಿತ್ರದಲ್ಲಿ ಮತ್ತೆ ವಾಚ್‍ಮನ್ ಪಾತ್ರದಲ್ಲಿ ಗಮನ ಸೆಳೆದರು. ತದನಂತರ ಪೋಷಕ ಪಾತ್ರಗಳಿಗೆ ಬಡ್ತಿ ಪಡೆದರು. ಡಾ. ರಾಜ್ ಕುಮಾರ್ ನಟನೆಯ ಧ್ರುವತಾರೆ ಚಿತ್ರದಲ್ಲಿ ರಂಗಣ್ಣ ಮೇಷ್ಟ್ರು ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ಬ್ರಹ್ಮಾವರ್, ರಾಜ್ ಬ್ಯಾನರ್ ಚಿತ್ರಗಳಲ್ಲಿ ಖಾಯಂ ನಟರಾದರು. ಮುಖ್ಯವಾಗಿ ಸದ್ಗುಣಸಂಪನ್ನ ಪಾತ್ರಗಳಲ್ಲಿ ನಟಿಸುತ್ತಿದ್ದ ಬ್ರಹ್ಮಾವರ್, ಗರುಡಧ್ವಜ ಮತ್ತು ನಿಗೂಢ ರಹಸ್ಯ ಚಿತ್ರಗಳಲ್ಲಿ ಖಳನಟನಾಗಿಯೂ ನಟಿಸಿದ್ದಾರೆ.
ಹಾಲುಂಡ ತವರು ಚಿತ್ರದಲ್ಲಿ ಅರ್ಚಕನ ಚಿಕ್ಕ ಪಾತ್ರ ಬಲು ಜನಪ್ರಿಯವಾಗಿತ್ತು. ಡಾ. ರಾಜ್ ಜೊತೆಗೆ ಶ್ರುತಿ ಸೇರಿದಾಗ, ಅನುರಾಗ ಅರಳಿತು, ಶಿವರಾಜ್ ಕುಮಾರ್ ನಟನೆಯ ಪುರುಷೋತ್ತಮ ಚಿತ್ರಗಳಲ್ಲಿ ನಟಿಸಿದ ಬ್ರಹ್ಮಾವರ್, ೨೦೦೫ರ ವರೆಗೆ ನಟನೆಯಲ್ಲಿ ಸಕ್ರಿಯರಾಗಿದ್ದರು. ರವಿಚಂದ್ರನ್, ಅಂಬರೀಷ್, [[ಅನಂತ್_ನಾಗ್] ಹೀಗೆ ಎಲ್ಲಾ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು.

ಸೆಪ್ಟೆಂಬರ್ ೨೦ರಂದು ವಯೋಸಹಜ ರೋಗಗಳಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಸದಾಶಿವ ಬ್ರಹ್ಮಾವರ ನಿಧನ ಹೊಂದಿದರು.

ಉಲ್ಲೇಖಗಳು

ಬದಲಾಯಿಸಿ
  1. https://www.thehindu.com/2005/11/14/stories/2005111407160400.htm
  2. "ಆರ್ಕೈವ್ ನಕಲು". Archived from the original on 2018-09-24. Retrieved 2018-09-22.
  3. https://chiloka.com/celebrity/hulimane-seetharama-shastry
  4. https://www.thestate.news/entertainment/2018/09/20/actor-sadashiva-bhramhavara-passed-away
  5. https://chiloka.com/movie/karavali-1977


  1. "ಆರ್ಕೈವ್ ನಕಲು". Archived from the original on 2018-09-21. Retrieved 2018-09-21.
  2. "ಆರ್ಕೈವ್ ನಕಲು". Archived from the original on 2017-12-24. Retrieved 2018-09-21.
  3. "ಆರ್ಕೈವ್ ನಕಲು". Archived from the original on 2017-12-25. Retrieved 2018-09-21.