Vinaykumar14
ನಾನು ನನ್ನ ಊರು
ಬದಲಾಯಿಸಿನನ್ನ ಹೆಸರು ವಿನಯ್ ಕುಮಾರ್ ಎಂ. ನಾನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದವನು. ನನಗೆ ನನ್ನ ಊರು ಬಹಳ ಅಚ್ಚು ಮೆಚ್ಚು. ಹತ್ತಾರು ಜನ ಗೆಳೆಯರ ಬಳಗವನ್ನು ಅಲ್ಲಿ ಹೊಂದಿರುವೆನು. ಯಾವುದೇ ಗದ್ದಲವಿಲ್ಲದೆ ಶಾಂತವಾಗಿ ಪ್ರಕೃತಿಯ ಸೊಬಗನ್ನು, ಸುಂದರವಾದ ಅಡಿಕೆಯ ತೋಟವನ್ನು ಹೊಂದಿರುವ ಊರು ನಲ್ಲೂರು. ನನಗೆ ನನ್ನ ಊರು ಎಂದರೆ ಎಲ್ಲಿಲ್ಲದ ಪ್ರೀತಿ. ನನ್ನ ಊರಿನ ಸ್ನೇಹಿತರು ನಾನು ತುಂಬ ಅನ್ಯೋನ್ಯವಾದ ಸಂಬಂಧವನ್ನು ಹೊಂದಿದ್ದೇವೆ. ನಮ್ಮ ದೇಶದಲ್ಲಿ ಒಂದು ಹಳ್ಳಿ ಒಂದು ಮನೆಯಾಗಿರುತ್ತದೆ. ಅಂತೆಯೇ ನಮ್ಮ ಹಳ್ಳಿಯು ಒಂದು ಮನೆಯಂತೆ ಭಾಸವಾಗುತ್ತದೆ. ಅಂತಹ ಒಂದು ಮನೆಯ ಒಳಗೆ ನಾನು ಒಬ್ಬ ಸದಸ್ಯ.
ನನ್ನ ಅಂತರಾಳ
ಬದಲಾಯಿಸಿನನಗೆ ಕುವೆಂಪುರವರ ಸಾಹಿತ್ಯವು ಇಷ್ಟವಾಗುತ್ತದೆ. ಅವರ ಭಾಷ ಕೌಶಲ್ಯ ನನಗೆ ತುಂಬಾ ಇಷ್ಟದ ಸಂಗತಿ. ನನಗೆ ಮಲೆನಾಡಿನ ಸೊಬಗು ಚಂದವೆನಿಸುತ್ತದೆ. ಕುವೆಂಪುರವರ ಜೊತೆಗೆ ದ.ರಾ.ಬೇಂದ್ರೆಯವರ ಸಾಹಿತ್ಯವು ಸೊಗಸಾಗಿರುತ್ತವೆ. ಅವರ ನಾಕುತಂತಿ ಎಂಬ ಚಿಕ್ಕ ಪುಸ್ತಕ ಜ್ಞಾನಪೀಠದಂತಹ ದೊಡ್ಡ ಪ್ರಶಸ್ತಿಯನ್ನು ಸಂಪಾದಿಸಿರುವುದು ಅವರ ಸಾಹಿತ್ಯ ಜ್ಞಾನ ಹಾಗು ಭಾಷೆಯ ಮೇಲಿನ ಹಿಡಿತವನ್ನು ಸೂಚಿಸುತ್ತದೆ. ನನಗೆ ದಾವಣಗೆರೆ ಬೆಣ್ಣೆ ದೋಸೆಯು ತುಂಬಾ ಇಷ್ಟದ ತಿಂಡಿ. ನಾನು ದೇಶದ ರಾಜಧಾನಿ ದೆಹಲಿ, ಕೊಲ್ಕತ್ತಾ, ಚೆನ್ನೈ, ಗುಜುರಾತ್, ರಾಜಸ್ಥಾನ್, ಹೀಗೆ ಹಲವಾರು ರಾಜ್ಯ ಸುತ್ತಬೇಕು ಎಂದುಕೊಂಡಿದ್ದೇನೆ. ಆದರೂ ನನಗೆ ಕರ್ನಾಟಕವೇ ಅಚ್ಚು ಮೆಚ್ಚು.
ನನ್ನ ಹವ್ಯಾಸ
ಬದಲಾಯಿಸಿನನಗೆ ಕ್ರಿಕೆಟ್ ಆಡುವ ಅಭ್ಯಾಸವಿದೆ. ನನ್ನ ಊರಿನಲ್ಲಿ ನಾನು ನನ್ನ ಗೆಳೆಯರೊಡನೆ ಬೆಳಗಿನಿಂದ ಸಂಜೆಯ ತನಕ ಊಟ ತಿಂಡಿಯ ಪರಿವೆಯೇ ಇಲ್ಲದೆ ಕ್ರಿಕೆಟ್ ಆಡುತ್ತೇನೆ. ನನಗೆ ಕಾರೊಂ ಬೋರ್ಡ್ ಆಟವು ಕೂಡ ಇಷ್ಟ. ಚೆಸ್ ಆಡುವುದೆಂದರೆ ನನಗೆ ಪಂಚಪ್ರಾಣ. ನನಗೆ ನಮ್ಮ ಊರಿನ ತೋಟವನ್ನು ಸುತ್ತುವುದು ಚೆಂದವಿನಿಸುತ್ತದೆ. ಗದ್ದೆಯ ನಡುವೆ ಓಡಾಡುವುದು ತುಂಬಾ ಹಿತಕರವೆನಿಸುತ್ತದೆ. ಆದರೆ ಬೆಂಗಳೂರಿಗೆ ಬಂದು ಆ ಸವಿಯನ್ನು ಅನುಭವಿಸುವ ಭಾಗ್ಯ ಕಡಿಮೆಯಾಗಿದೆ. ಜೊತೆಗೆ ಸ್ನೇಹಿತರೊಂದಿಗೆ ಸುತ್ತುವುದು, ಆಡುವುದು, ಹರಟುವುದು, ಇತ್ಯಾದಿಯಾಗಿ ನನ್ನ ಹವ್ಯಾಸವಿದೆ.