VaishnaviShobaRani
ನನ್ನ ಪರಿಚಯ
ಬದಲಾಯಿಸಿನನ್ನ ಹೆಸರು ವೈಷ್ಣವಿ.ಪಿ. ನಾನು ಹುಟ್ಟಿದ್ದು ಬೆಂಗಳೂರು, ರಾಮಯ್ಯ ಆಸ್ಪತ್ರೆಯಲ್ಲಿ. ನಾನು ಹುಟ್ಟಿದ ದಿನಾಂಕ [೨೪- ೧೦ - ೧೯೯೯] ರಂದು. ನನ್ನ ತಂದೆಯ ಹೆಸರು ಪುಂಡರೀಶ ಮತ್ತು ತಾಯಿ ಶೋಭಾ ರಾಣಿ. ನನ್ನ ಅಕ್ಕನ ಹೆಸರು ಲಕ್ಷ್ಮಿ. ನನ್ನ ಅತ್ಯುತ್ತಮ ಸ್ನೇಹಿತೆ ನನ್ನ ಅಕ್ಕ. ನನಗೆ ಎಲ್ಲಾ ರೀತಿಯಲ್ಲೂ, ಎಲ್ಲಾ ವಿಷಯದಲ್ಲೂ ನನ್ನ ಜೊತೆಯಲ್ಲೇ ಇದ್ದು ನನಗೆ ದಾರಿ ತೋರಿಸಿ ರಕ್ಷಣೆಮಾಡುತ್ತಾಳೆ.ನನ್ನ ಅಕ್ಕ ನನಗಿಂತ ೧ವರ್ಷ ಹಿರಿಯಳು.ನಾನೆ ನನ್ನ ಕುಟುಂಬದಲ್ಲಿ ಕೊನೆಯ ಮಗಳು. ನಮ್ಮ ಮನೆಯಲ್ಲಿ ಒಟ್ಟು ೧೩ ಜನ ಇರುವೆವು.
ವಿದ್ಯಾಭ್ಯಾಸ
ಬದಲಾಯಿಸಿನನ್ನ ೧೦ನೇ ತರಗತಿಯನ್ನು ಎ.ಪಿ.ಎಸ್ ಶಾಲೆಯಲ್ಲಿ ೮೫.೬೫% ಅಂಕಗಳಿಂದ ಉತೀರ್ಣಳಾದೆ. ನನ್ನ ಶಾಲೆಯಲ್ಲಿ ನಡೆಯುವ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೆ.ಬ್ಯಾಡ್ಮಿಂಟನ್ ಆಟದಲ್ಲಿ ಬೇರೆ ತರಗತಿಯವರೊಡನೆ ಆಡಿ ಮೊದಲನೆಯ ಪ್ರಶಸ್ತಿ ಪಡೆದಿದ್ದೆ. ನನ್ನ ಪಿ.ಯು.ಸಿ ಯನ್ನು ಜೈನ್ ಕಾಲೇಜಿನಲ್ಲಿ ಓದಿ ೯೬.೩೨% ಅಂಕಗಳಿಂದ ಉತೀರ್ಣಳಾದೆ.
ನನ್ನ ಹವ್ಯಾಸಗಳು
ಬದಲಾಯಿಸಿನನಗೆ ಸಂಗೀತ ಮತ್ತು ಹಾಡು ಕೇಳಲು ಇಷ್ಟ. ಪ್ರತಿ ದಿನ ನಾನು ಯೋಗಾಭ್ಯಾಸ ಮಾಡುತ್ತೇನೆ. ಯೋಗ ಮಾಡುವುದರಿಂದ ನನಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ನನಗೆ ನಾನಾ ಬಗೆಯ ತಿಂಡಿಗಳನ್ನು ಸವಿಯಲು ಇಷ್ಟ.ನನಗೆ ನನ್ನ ಗೆಳತಿಯರೊಂದಿಗೆ ತಿರುಗಾಡಲು ತುಂಬಾ ಇಷ್ಟ. ಕನ್ನಡ ಚಿತ್ರಗಳನ್ನು ನೋಡಲು ನನಗೆ ಇಷ್ಟ. ನನಗೆ ಯಾತ್ರೆಗಳನ್ನು ಮಾಡಲು ಇಷ್ಟ. ನನಗೆ ಎಚ್ಚು ಪುಸ್ತಕಗಳನ್ನು ಓದಲು ಇಷ್ಟ. ಅಲವಾರು ಭಾಷೆಯನ್ನು ಕಲಿಯಬೇಕೆಂದು ನನಗೆ ತುಂಬಾ ಆಸೆ.ನನಗೆ ಪುಟ್ಟ ಮಕ್ಕಳೊಂದಿಗೆ ಆಟವಾಡಲು ಇಷ್ಟ. ನನಗೆ ಕುವೆಂಪುರವರ ಸಾಹಿತ್ಯವಂದರೆ ತುಂಬಾ ಇಷ್ಟ.
ನನ್ನ ಮುಂದಿನ ಗುರಿ
ಬದಲಾಯಿಸಿನಾನು ಮುಂದೆ ಹೂಡಿಕೆ ಬ್ಯಾಂಕರ್ ಆಗಬೇಕೆಂದು ನಿರ್ಧರಿಸಿದ್ದೇನೆ. ನಾನು ಮುಂದೆ ಸಮಾಜ ಸೇವಕಿ ಆಗಬೇಕೆಂದು ಕೊಂಡಿದ್ದೇನೆ.ಸಮಾಜ ಸೇವೆಯ ಮೂಲಕ ಬಡಜನರಿಗೆ, ಹಿಂದುಳಿದ ವರ್ಗಗಳಿಗೆ ಸಹಾಯ ಮಾಡಬೇಕೆಂಬುದು ನನ್ನ ಆಸೆ.
ನನ್ನ ನೆಚ್ಚಿನ ಪ್ರವಾಸದ ತಾಣಗಳು
ಬದಲಾಯಿಸಿನನಗೆ ಪ್ರವಾಸ ಮಾಡುವುದೆಂದರೆ ತುಂಬಾ ಇಷ್ಟ.ಪ್ರವಾಸ ಮಾಡುವುದರ ಮೂಲಕ ನನ್ನ ಮನಸ್ಸು ಬಹಳ ಪ್ರಶಾಂತವಾಗುತ್ತದೆ.ನನ್ನ ನೆಚ್ಚಿನ ಪ್ರವಾಸಿ ತಾಣಗಳೆಂದರೆ : ಮೈಸೂರು, ತೀರ್ಥಹಳ್ಳಿ, ಗುಜರಾತ್, ಚಿಕ್ಕಮಗಳೂರು, ಕುದುರೆಮುಖ, ಕನ್ಯಾಕುಮಾರಿ ಹಾಗು ಮುಂತಾದವು.ಒಟ್ಟಿನಲ್ಲಿ ನನಗೆ ಪ್ರವಾಸ ಮಾಡುವುದೆಂದರೆ ತುಂಬಾ ಖುಷಿ.
ನನ್ನ ನೆಚ್ಚಿನ ಬರಹಗಾರರು
ಬದಲಾಯಿಸಿನನ್ನ ನೆಚ್ಚಿನ ಪುಸ್ತಕಗಳೆಂದರೆ ಕುವೆಂಪುರವರ ಕಾವ್ಯಗಳು ಅಗು ಕವಿತೆಗಳು.ನನಗೆ ವಿಲಿಯಂ ಷೇಕ್ಸ್‌ಪಿಯರ್ ಅವರ ಕಥೆಗಳನ್ನು ಓದಲು ತುಂಬಾ ಇಷ್ಟ.ಲಿಯೋ ಟಾಲ್ಸ್ಟಾಯ್ ಅವರ ಸಣ್ಣ ಕಥೆಗಳನ್ನು ಓದಲು ನನಗೆ ತುಂಬಾ ಇಷ್ಟ.ಸಮಯ ಸಿಕ್ಕಾಗೆಲ್ಲ ಹಲವಾರು ಇಂಗ್ಲಿಷ್ ಕಾದಂಬರಿಗಳನ್ನು ಓದುತ್ತೇನೆ.