ವೈಯಕ್ತಿಕ ಜೀವನ ಬದಲಾಯಿಸಿ

ನನ್ನ ಹೆಸರು ಉದಯ ಚಂದ್ರಿಕ. ನಾನು ಹುಟ್ಟಿದ ಊರು ಬೆಂಗಳೂರು. ನಾನು ಜನಿಸಿದ ದಿನಾಂಕ ೨೯ನೇ ಸೆಪ್ಟೆಂಬರ್ ೧೯೯೯. ನನ್ನ ಮಾತೃ ಭಾಷೆ ಕನ್ನಡ ಮತ್ತು ನಾನು ಹಿಂದೂ ಧರ್ಮದ ದೇವಾಂಗ ಜಾತಿಗೆ ಸೇರಿದವಳು. ನನ್ನ ತಂದೆ ಷಂಮುಗರಾಜ್ ಮತ್ತು ತಾಯಿ ನಳಿನಿ. ತಂದೆಯವರು ಒಂದು ಅಂಗಡಿಯಲ್ಲಿ ಲೆಕ್ಕಿಗನಾಗಿ ಕೆಲಸಮಾಡುತ್ತಿದ್ದಾರೆ ಮತ್ತು ತಾಯಿ ಮನೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಾರೆ. ನಾನು ಮನೆಯಲ್ಲಿ ಎರಡನೆಯವಳು. ನನ್ನ ಹಿರಿಯ ಅಣ್ಣನ ಹೆಸರು ಪ್ರೇಂ ಕುಮಾರ್. ಅವರು ಕ್ಯಾಟಲಾಗ್ ತಜ್ಞರಾಗಿ ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ಎಲ್ಲಾ ಸಂಬಂಧಿಕರು ತಮಿಳುನಾಡಿನಲ್ಲಿರುವ ಸೇಲಂನಲ್ಲಿ ವಾಸಿಸುತ್ತಿದ್ದಾರೆ. ಅವರೊಂದಿಗೆ ನನ್ನ ರಜಾದಿನಗಳನ್ನು ಕಳೆಯಲು ಇಷ್ಟಪಡುತ್ತೇನೆ. ಸಾಮಾನ್ಯವಾಗಿ ಎಲ್ಲರೂ ನನ್ನನ್ನು ಉದ್ದು ಎಂದು ಕರೆಯುತ್ತಾರೆ, ಇದು ನನ್ನ ಮುದ್ದಿನ ಹೆಸರು. ನನ್ನ ಎತ್ತರ '೫.೪' ಅಡಿ ಆಗಿದೆ. ನನ್ನ ರಕ್ತದ ಗುಂಪು 'ಒ ನೆಗಟಿವ್ '. ಚಾರ್ಟೆಡ್ ಅಕ್ಕೌಂಟೆಂಟ್ (ಸಿ.ಎ) ಆಗಬೇಕೆಂಬುದು ನನ್ನ ಜೀವನದ ಗುರಿ.

ಹವ್ಯಾಸಗಳು ಮತ್ತು ಆಸಕ್ತಿಗಳು ಬದಲಾಯಿಸಿ

 
ಚದುರಂಗ ಆಟ

ಹವ್ಯಾಸವು ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾದುದು, ಅದು ನಮ್ಮ ಮನಸ್ಸನ್ನು ಹುದುಗಿಸಲು ನಮಗೆ ಸಹಾಯ ಮಾಡುತ್ತದೆ. ನನ್ನ ನೆಚ್ಚಿನ ಹವ್ಯಾಸಗಳನ್ನು ಮಾಡುವುದರ ಮೂಲಕ ನನ್ನ ವಿರಾಮವನ್ನು ನಾನು ಕಳೆಯುತ್ತೇನೆ. ನನ್ನ ಹವ್ಯಾಸಗಳು ಎಂದರೆ ಚಿತ್ರಕಲೆ, ದಿನಪತ್ರಿಕೆ ಓದುವುದು, ನಾಣ್ಯ ಸಂಗ್ರಹಿಸುವುದು, ಚದುರಂಗ ಆಟಾದುವುದು, ಥ್ರೋಬಾಲ್ ಆಡುವುದು, ಸಂಗೀತವನ್ನು ಕೇಳುವುದು ಮತ್ತು ಕೆಲವೊಮ್ಮೆ ಹಾಡುವುದು. ಇವುಗಳಲ್ಲಿ ನನ್ನ ನೆಚ್ಚಿನ ಹವ್ಯಾಸವೆಂದರೆ ಪೆನ್ಸಿಲ್ ಸ್ಕೆಚಿಂಗ್, ಚದುರಂಗ ಆಟ ಮತ್ತು ಹಲವಾರು ರೀತಿಯ ಹಾಡುಗಳನ್ನು ಕೇಳುವುದು. ನನ್ನ ನೆಚ್ಚಿನ ಬಣ್ಣ ಗುಲಾಬಿ. ನನಗೆ ಮಸಾಲೆಯುಕ್ತ ಆಹಾರವನ್ನು ತಿನ್ನಲು ತುಂಬ ಪ್ರಿಯೆ ಹಾಗೂ ನನಗೆ ಚಾಕ್ಲೇಟುಗಳು ಮತ್ತು ಐಸ್ ಕ್ರೀಮ್ಗಳನ್ನು ಕಂಡರೆ ತುಂಬ ಇಷ್ಟ.

ಶಾಲಾ ಶಿಕ್ಷಣ ಬದಲಾಯಿಸಿ

 
ಲಾರೆನ್ಸ್ ಪ್ರೌಢ ಶಾಲೆ, ಕೋರಮಂಗಳ ೮ನೇ ಬ್ಲಾಕ್,ಬೆಂಗಳೂರು.

ಶಾಲೆಯ ಜೀವನವು ಮಾನವ ಜೀವನದ ಅತ್ಯುತ್ತಮ ಅವಧಿಯಾಗಿದೆ. ನಾನು ಬೆಂಗಳೂರಿನ ಕೊರಮಂಗಳದಲ್ಲಿ ನೆಲೆಗೊಂಡಿದ್ದ 'ಲಾರೆನ್ಸ್ ಪ್ರೌಢ ಶಾಲೆ'ಯಲ್ಲಿ ನನ್ನ ಶಾಲಾ ಶಿಕ್ಷಣವನ್ನು ಮಾಡಿದೆ. ಬಾಲ್ಯದ ನೆನಪುಗಳು ನನ್ನ ಹೃದಯದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿವೆ. ನನ್ನ ಶಾಲೆಯ ದಿನಗಳಲ್ಲಿ, ನಾನು ಅನೇಕ ಸ್ನೇಹಿತರನ್ನು ಹೊಂದಿದ್ದೆ. ನಾವೆಲ್ಲರೂ ಬಹಳ ಸಂತೋಷದಿಂದ ಒಟ್ಟಾಗಿ ಆಡುತ್ತಿದ್ದೆವು. ನನಗೆ ಹಲವಾರು ಮರೆಯಲಾಗದ ನೆನಪುಗಳನ್ನು ನನ್ನ ಶಾಲೆಯ ದಿನಗಳು ಕೊಟ್ಟಿವೆ. ಅವುಗಳಲ್ಲಿ ಒಂದೆಂದರೆ ನನ್ನ ಕೊನೆಯ ಶಾಲಾ ವರ್ಷದಲ್ಲಿ ನಮ್ಮ ತರಗತಿಯವರೆಲ್ಲರ ಜೊತೆ ಪ್ರವಾಸಕ್ಕೆ ಹೋದ ದಿನ. ನನ್ನ ಎಲ್ಲಾ ಶಾಲೆಯ ವರ್ಷಗಳಲ್ಲಿ ನಾನು ಯಾವಾಗಲೂ ತರಗತಿಯಲ್ಲಿನ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿದ್ದೆ. ನಾನು ಯಾವಾಗಲೂ ಉತ್ತಮ ಅಂಕಗಳನ್ನು ಹೊಂದಿದ್ದೆ ಮತ್ತು ನನಗೆ ಗೌರವ ಪ್ರತಿಫಲ ಸಿಕ್ಕಿತು. ಚರ್ಚೆ, ರಸಪ್ರಶ್ನೆ, ಮುಂತಾದ ಅನೇಕ ಸ್ಪರ್ಧೆಗಳಲ್ಲಿ ನಾನು ಭಾಗವಹಿಸುತ್ತಿದ್ದೆ. ನಾನು ಥ್ರೋಬಾಲ್, ಬ್ಯಾಡ್ಮಿಂಟನ್ ಮತ್ತು ಅಂತಹ ಅನೇಕ ಆಟಗಳನ್ನು ಆಡುತ್ತಿದ್ದೆ. ನನ್ನ ಮೆಚ್ಚಿನ ವಿಷಯವೆಂದರೆ ಗಣಿತಶಾಸ್ತ್ರ ಏಕೆಂದರೆ ನನಗೆ ಸಂಖ್ಯೆಗಳೊಂದಿಗೆ ಆಡಲು ಇಷ್ಟ. ನನ್ನ ಎಲ್ಲ ಶಿಕ್ಷಕರಿಗೆ ನಾನು ನೆಚ್ಚಿನ ವಿದ್ಯಾರ್ಥಿಯಳಾಗಿದ್ದೆ. ನನ್ನ ಶಿಕ್ಷಕರು ನನ್ನನ್ನು ಪರಿಪೂರ್ಣ ವಿದ್ಯಾರ್ಥಿಯಾಗಿ ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಾನು ಹತ್ತನೆ ತರಗತಿಯಲ್ಲಿ ೯೭% ಹೊಂದಿದೆ.

ಕಾಲೇಜು ಹಾಗು ಪದವಿ ಶಿಕ್ಷಣ ಬದಲಾಯಿಸಿ

ಬೆಂಗಳೂರಿನಲ್ಲಿರುವ 'ಕ್ರೈಸ್ಟ್ ಜೂನಿಯರ್ ಕಾಲೇಜಿ'ನಲ್ಲಿ ನಾನು ನನ್ನ ಪಿ.ಯು.ಸಿ ಶಿಕ್ಷಣವನ್ನು ಮಾಡಿದೆ. ಕಾಲೇಜಿನಲ್ಲಿ ನನ್ನ ಮೊದಲ ದಿನವನ್ನು ನಾನು ಇನ್ನೂ ಸ್ಪಷ್ಟವಾಗಿ ನೆನಪಿಸುತ್ತೇನೆ. ಹೊಸ ಜನರನ್ನು ಭೇಟಿಯಾಗಲು ನಾನು ತುಂಬಾ ಉತ್ಸಾಹದಿಂದ ಇದ್ದೆ. ಅಲ್ಲಿರುವಾಗ ನಾನು ಅನೇಕ ಸ್ಪರ್ಧೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಎರಡನೇ ಪಿ.ಯು.ಸಿ ನಲ್ಲಿ ೯೮% ಹೊಂದಿದೆ. ಈಗ ನಾನು 'ಕ್ರೈಸ್ಟ್ ಡೀಮ್ಡ್ (ಟು ಬಿ ಯೂನಿವರ್ಸಿಟಿ)'ದಲ್ಲಿ ನನ್ನ ಒಂದನೇ ವರ್ಷದ 'ಬಿ.ಕಾಮ್' ಪದವಿಯನ್ನು ಮಾಡುತ್ತಿದ್ದೇನೆ. ನಾನು ಈ ಕಾಲೇಜನ್ನು ಸೇರಲು ಕಾರಣವೇನೆಂದರೆ ಇಲ್ಲಿನ ಪರಿಸರದ ಸೌಂದರ್ಯ, ಎಲ್ಲಾ ತರದ ಅವಕಾಶಗಳು ಹಾಗೂ ಮುಖ್ಯವಾಗಿ ಇಲ್ಲಿ ಸಿಗುವ ಪ್ಲೇಸ್ಮೆಂಟ್ ಅವಕಾಶಗಳಿಂದಾಗಿ. ನಾನು ಕ್ರೈಸ್ಟ್ನ ಪರಿಸರವನ್ನು ಮುಂಚೆಯೆ ತಿಳಿದಿರುವ ಕಾರಣದಿಂದಾಗಿ, ನನ್ನ ಪದವಿ ಜೀವನವನ್ನು ಮುನ್ನಡೆಸಲು ಹಾಗೂ ಎಲ್ಲರ ಜೊತೆ ಹೊಂದುಕೊಳ್ಳಲು ನನಗೆ ಸುಲಭವಾಗಿದೆ. ಶಾಲೆಯ ಮತ್ತು ಕಾಲೇಜಿನ ಜೀವನದ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ನಾನು ಕಂಡುಕೊಂಡಿದ್ದೇನೆ. ಶಾಲೆಯ ಪ್ರಪಂಚವು ಕಿರಿದಾದ ಮತ್ತು ಸೀಮಿತವಾಗಿದೆ. ಕಾಲೇಜಿನ ಜಗತ್ತು ದೊಡ್ಡದಾಗಿದೆ. ಇಲ್ಲಿ ನಾನು ಸಾಧ್ಯವಾದಷ್ಟು ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದ್ದೇನೆ. ಇಲ್ಲಿ ಶಿಕ್ಷಕರು ನಮ್ಮ ಶೈಕ್ಷಣಿಕ ವಿಷಯಕ್ಕೆ ಮಾತ್ರವಲ್ಲದೆ ಸಮಗ್ರವಾಗಿಯೂ ತರಬೇತಿ ನೀಡುತ್ತಿದ್ದಾರೆ. ಅದರ ಕಾರಣದಿಂದಾಗಿ ನನ್ನ ವಿಶ್ವಾಸ ಮತ್ತು ಧೈರ್ಯವನ್ನು ಬೆಳೆಸಲು ಸಾಧ್ಯವಾಗುತ್ತಿದೆ. ನನ್ನ ಮೊದಲನೆ ಸೆಮೆಸ್ಟರ್ನಲ್ಲಿ ೮೧% ಹೊಂದಿದೆ. ನಾನು ಕಾಲೇಜಿನಲ್ಲಿ ನಡೆದ ರಂಗೋಲಿ ಸ್ಪರ್ಧೆಯ ಈವೆಂಟ್ ಮುಖ್ಯಸ್ಥೆಯಳಾಗಿದ್ದೆ.

ಬಹುಮಾನಗಳು ಬದಲಾಯಿಸಿ

ನಾನು ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ ಮತ್ತು ಅನೇಕ ಬಹುಮಾನಗಳನ್ನು, ಪ್ರಮಾಣಪತ್ರಗಳನ್ನು, ಪದಕಗಳನ್ನು ಗೆದ್ದಿದ್ದೇನೆ. ನನ್ನ ಎಂಟನೇ ತರಗತಿಯಲ್ಲಿ ನನಗೆ ಗಣಿತಶಾಸ್ತ್ರದಲ್ಲಿ ಜಿಲ್ಲೆಯ ಎರಡನೆಯ ಸ್ಥಾನದ ಪ್ರಶಸ್ತಿ ಸಿಕ್ಕಿತು. ಹತ್ತನೇ ತರಗತಿಯಲ್ಲಿ ನನಗೆ 'ಆಲ್ ರೌಂಡರ್ ಪ್ರಶಸ್ತಿ' ಹಾಗು 'ಸ್ಕೂಲ್ ಟಾಪರ್ ಪ್ರಶಸ್ತಿ' ಸಿಕ್ಕಿತು. ನನ್ನ ಎಲ್ಲಾ ಸಾಧನೆಗಳಿಗೆ ಕಾರಣ ನನ್ನ ಕುಟುಂಬ ಮತ್ತು ನನ್ನ ಉತ್ತಮ ಶಿಕ್ಷಕರು.