ಚರ್ಚೆ ಅಥವಾ ಚರ್ಚಿಸುವಿಕೆ ಎಂಬುದು ಪರಸ್ಪರ ಚರ್ಚೆಯ ಹಾಗು ಸಾಂಕೇತಿಕ ವಾದದ ಒಂದು ವಿಧ್ಯುಕ್ತ ವಿಧಾನ. ಚರ್ಚೆಯು ತಾರ್ಕಿಕ ವಾದಕ್ಕಿಂತಲೂ ಹೆಚ್ಚಾಗಿ ವಿಸ್ತೃತ ರೂಪದ ವಾದವಾಗಿದೆ. ಇದು ಕೇವಲ ಸ್ವಪ್ರಮಾಣ ಸೂತ್ರ ಮತ್ತು ವಾಸ್ತವ ವಾದದಿಂದ ದೃಢತೆಯನ್ನು ಪರೀಕ್ಷಿಸುತ್ತದೆ. ಚರ್ಚಿಸಲ್ಪಡುವ ಸಂಗತಿಯು ವಾಸ್ತವಿಕವಾಗಿದೆಯೋ ಇಲ್ಲವೋ ಎಂಬುದನ್ನು ಅಥವಾ ಮನವೊಲಿಕೆಯ ತಂತ್ರವಾಗಿರುವ ವಾಗ್ಮಿತಾಕಲೆ. ತಾರ್ಕಿಕ ಸಾಮಂಜಸ್ಯತೆ, ವಾಸ್ತವಾಂಶದ ನಿಖರತೆ ಹಾಗೂ ಪ್ರೇಕ್ಷಕರೆಡೆಗೆ ಸ್ವಲ್ಪ ಮಟ್ಟಗಿನ ಭಾವನಾತ್ಮಕ ಸೆಳೆತ ಭಾಷಣಕಲೆಯ ಪ್ರಮುಖ ಅಂಶಗಳಾಗಿವೆ. ಚರ್ಚೆಯಲ್ಲಿ, ಒಂದು ಪಕ್ಷವು ಸಾಮಾನ್ಯವಾಗಿ ಮತ್ತೊಂದು ಪಕ್ಷದ ವಿರುದ್ಧ ಉತ್ತಮ "ಸಂದರ್ಭ" ಹಾಗು/ಅಥವಾ ವಾದವಿಚಾರದ ಚೌಕಟ್ಟನ್ನು ಹೊಂದಿರುವುದರ ಮೂಲಕ ಮೇಲುಗೈ ಸಾಧಿಸುತ್ತದೆ, ಇದು ಮಾರ್ಮಿಕವಾಗಿರುವುದರ ಜೊತೆಗೆ ಚತುರತೆಯಿಂದ ಕೂಡಿರುತ್ತದೆ.

ವಿಧ್ಯುಕ್ತ ಚರ್ಚಾ ಸ್ಪರ್ಧೆಯು, ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಜನರು ಹೇಗೆ ಪರಸ್ಪರ ಸಂವಾದಿಸುತ್ತಾರೆಂಬುದರ ಜೊತೆಗೆ ತಮ್ಮ ಭಿನ್ನಾಭಿಪ್ರಾಯಗಳ ಕುರಿತು ಚರ್ಚಿಸಿ, ನಿರ್ಣಯಿಸಲು ತನ್ನದೇ ಆದ ನಿಯಮಗಳನ್ನು ಹೊಂದಿರುತ್ತವೆ. ಅನೌಪಚಾರಿಕ ಚರ್ಚೆಯು ಒಂದು ಸಾಮಾನ್ಯ ಸಂಗತಿಯಾಗಿದೆ. ಭಾಗವಹಿಸುವವರು ಚರ್ಚೆಗಳಲ್ಲಿ ಸ್ಪರ್ಧಿಗಳಾಗಿ ತಮ್ಮ ಜ್ಞಾನ ಹಾಗು ಕುಶಲತೆಯಿಂದ ವಾದವನ್ನು ಮಂಡಿಸಿದಾಗ ಚರ್ಚಾಸ್ಪರ್ಧೆಯ ಗುಣಮಟ್ಟ ಹಾಗು ಗಹನತೆಯು ಉತ್ತಮಗೊಳ್ಳುತ್ತದೆ. ಸಂಸತ್‌, ಶಾಸನ ಸಭೆಗಳಂತಹ ಪರ್ಯಾಲೋಚಕ ಸಭೆಗಳು ಹಾಗೂ ಎಲ್ಲಾ ರೀತಿಯ ಸಭೆಗಳಲ್ಲಿ ಚರ್ಚೆಗಳು ನಡೆಯುತ್ತವೆ. ಚರ್ಚೆಯ ಫಲಿತಾಂಶವು, ಪ್ರೇಕ್ಷಕ ಸಮೀಕ್ಷೆ, ತೀರ್ಪುಗಾರರ ನಿರ್ಣಯ ಅಥವಾ ಇವೆರಡರ ಸಂಯೋಗದೊಂದಿಗೆ ನಿರ್ಧಾರವಾಗುತ್ತದೆ. ವಾಸ್ತವಾಂಶಗಳು ಒಮ್ಮತವನ್ನು ಆಧರಿಸಿವೆ ಎಂಬುದಕ್ಕೆ ಇದು ಸೂಚಿತವಾದರೂ ಸಹ, ಇದು ವಾಸ್ತವವಲ್ಲ. ಚುನಾಯಿತ ಅಧಿಕಾರಕ್ಕೆ ಅಭ್ಯರ್ಥಿಗಳ ನಡುವಿನ ವಿಧ್ಯುಕ್ತ ಚರ್ಚೆಗಳು, ಉದಾಹರಣೆಗೆ ಮುಖಂಡರ ಚರ್ಚೆಗಳು ಹಾಗೂ U.S. ರಾಷ್ಟ್ರಾಧ್ಯಕ್ಷೀಯ ಚುನಾವಣಾ ಚರ್ಚೆಗಳು ಪ್ರಜಾಪ್ರಭುತ್ವಗಳಲ್ಲಿ ಸರ್ವೇಸಾಮಾನ್ಯವಾಗಿವೆ.

ಒಂದು ವಿಧಾನವಾಗಿ ಅಥವಾ ಕಲೆಯಾಗಿ ಚರ್ಚಾ ಅಧ್ಯಯನದ ಪ್ರಮುಖ ಗುರಿಯೆಂದರೆ ಸಮಾನ ಸುಗಮತೆಯಿಂದ ಯಾವುದೇ ಸ್ಥಾನದಿಂದ ನಿಂತು ಒಬ್ಬರ ಸಾಮರ್ಥ್ಯವನ್ನು ಪ್ರದರ್ಶಿಸುವುದು. ಅನನುಭವೀ ಚರ್ಚಾಸ್ಪರ್ಧಿಗಳಿಗೆ ಕೆಲವು ಪ್ರತಿಪಾದನೆಗಳನ್ನು ಸಮರ್ಥಿಸಿಕೊಳ್ಳಲು ಅಥವಾ ನಿರರ್ಥಕಗೊಳಿಸಲು ಸುಲಭವಾಗಿ ಕಾಣುತ್ತದೆ. ಅನುಭವೀ ಚರ್ಚಾಸ್ಪರ್ಧಿಗಳು, ತಮ್ಮ ಪ್ರತಿಪಾದನೆಯನ್ನು ಸಮಾನ ಅವಧಿಯ ಪೂರ್ವಸಿದ್ಧತೆ ಕಾಲದಲ್ಲಿ,ಸಾಮಾನ್ಯವಾಗಿ ಕಡಿಮೆ ಕಾಲದಲ್ಲಿ,ಸಮರ್ಥಿಸಿಕೊಳ್ಳಬಹುದು ಅಥವಾ ನಾಶಪಡಿಸಬಹುದು. ವಾಸ್ತವಾಂಶಗಳು ಕಕ್ಷಿದಾರರಿಗೆ ವಿರುದ್ಧವಿದ್ದರೂ, ವಕೀಲರು ತಮ್ಮ ಕಕ್ಷಿದಾರರ ಪರವಾಗಿ ಒತ್ತಾಯಪೂರ್ವಕ ವಾದ ಮಾಡುತ್ತಾರೆ. ಆದರೂ, ಚರ್ಚೆಯ ಬಗೆಗಿರುವ ಒಂದು ದೊಡ್ಡ ತಪ್ಪು ಅಭಿಪ್ರಾಯವೆಂದರೆ, ಇದು ಪ್ರಬಲ ನಂಬಿಕೆಗಳನ್ನು ಆಧರಿಸಿವೆ; ಆದರೆ ಇದು ವಾಸ್ತವ ಸಂಗತಿಯಲ್ಲ.

ಸ್ಪರ್ಧಾತ್ಮಕ ಚರ್ಚೆ

ಬದಲಾಯಿಸಿ

ಸ್ಥಳೀಯ, ರಾಷ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ತಂಡಗಳ ನಡುವೆ ಆಯೋಜಿಸಲಾಗುವ ಚರ್ಚೆಗಳನ್ನು ಸ್ಪರ್ಧಾತ್ಮಕ ಚರ್ಚೆಗಳು ಎನ್ನಲಾಗಿದೆ. ವಿಶ್ವಾದ್ಯಂತ ಇಂಗ್ಲಿಷ್‌‌-ಭಾಷೆಯನ್ನು ಮಾತನಾಡುವ ವಿಶ್ವವಿದ್ಯಾಲಯಗಳು ಹಾಗು ಪ್ರೌಢಶಾಲೆಗಳಲ್ಲಿ ಇಂತಹ ಸ್ಪರ್ಧಾತ್ಮಕ ಚರ್ಚೆಗಳು ಜನಪ್ರಿಯವಾಗಿವೆ. ವಿಶೇಷವಾಗಿ ಇದರಲ್ಲಿ ದಕ್ಷಿಣ ಆಫ್ರಿಕಾ, ಕೆನಡಾ, ಅಮೆರಿಕಾ ಸಂಯುಕ್ತ ಸಂಸ್ಥಾನ, ಯುನೈಟೆಡ್‌ ಕಿಂಗ್ಡಮ್, ಐರ್ಲೆಂಡ್‌, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ ದೇಶಗಳು ಸೇರಿವೆ. ವಿವಿಧ ಸಂಘಟನೆಗಳು ಹಾಗು ನಿಯಮಗಳಡಿಯಲ್ಲಿ ಹಲವಾರು ವಿಧದ ಚರ್ಚಾ ಶೈಲಿಗಳ ನಡೆಯುತ್ತವೆ.

ಸಾಮಾನ್ಯವಾಗಿ ಶಾಲಾ ಕಾಲೇಜುಗಳಲ್ಲಿ ಕೆಲವು ಸ್ಪಷ್ಟ ನಿಯಮಗಳಡಿ ಚರ್ಚೆಗಳು ಸ್ಪರ್ಧೆಯ ರೂಪದಲ್ಲಿ ನಡೆಯುತ್ತವೆ. ಇಂತಹ ಚರ್ಚೆಗಳಲ್ಲಿ ಒಬ್ಬ ಅಥವಾ ಹಲವು ತೀರ್ಪುಗಾರರು ತಮ್ಮ ನಿರ್ಣಯವನ್ನು ನೀಡುತ್ತಾರೆ. ನಿಯಮಗಳಿಗೆ ಅನುಸಾರವಾಗಿ, ಪ್ರತಿ ತಂಡವೂ ಗೆಲ್ಲಲು ಯತ್ನಿಸುತ್ತದೆ, ಅಲ್ಲದೆ ಮಿತಿಯೊಳಗೇ ಕೆಲವು ನಿಯಮಗಳನ್ನು ಬಳಸಿ ಇತರೆ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಗೆಲುವಿಗೆ ಯತ್ನಿಸುತ್ತದೆ. ಸಾಮಾನ್ಯವಾಗಿ ತಂಡವೊಂದು 'ಪರವಾಗಿ' ('-ಗಾಗಿ', 'ಹೌದೆನ್ನುವುದು') ಅಥವಾ 'ವಿರೋಧವಾಗಿ' ('ವಿರುದ್ಧ', 'ನಕಾರಾತ್ಮಕ') ನಿಲುವು ತಾಳಬಹುದು. ಹೇಳಿಕೆಯನ್ನು (ಪ್ರತಿಪಾದನೆ, ತರಬೇತಿ ಚರ್ಚೆ ಅಥವಾ ತೀರ್ಮಾನ) ಆಯ್ದುಕೊಂಡಲ್ಲಿ,ಪ್ರತಿಪಾದನೆಯ ವ್ಯಾಪ್ತಿಯನ್ನು ವ್ಯಾಖ್ಯಾನಿಸುವುದಕ್ಕೆ ಅವಕಾಶ ನೀಡುವ ವಿನಾಯಿತಿಯೊಂದಿಗೆ, ಅದು ಅಂಗೀಕೃತವಾದರೆ ಏನಾದರೂ ಬದಲಾವಣೆ ಉಂಟುಮಾಡುತ್ತದೆ. ಅಂದರೆ ಅಂಗೀಕೃತವಾದರೆ ಅದರ ಉದ್ದೇಶವನ್ನು ಆಯ್ಕೆಮಾಡಿಕೊಳ್ಳುತ್ತಾರೆ. ನಿಯಮಾವಳಿಗಳ ಪ್ರಾಮುಖ್ಯತೆಯನ್ನು ಮತ್ತಷ್ಟು ಸ್ಪಷ್ಟಪಡಿಸಲು, ಪ್ರತಿಪಾದನೆಯನ್ನು ಆಯ್ದುಕೊಳ್ಳದಿರುವಂತೆ ಸಕಾರಣಗಳ ಸಹಿತ ವಿರೋಧಿಗಳು ಈ ವಾದಗಳನ್ನು ನಾಶಮಾಡಬೇಕು. ಅವರು ಇದಕ್ಕೆ ಪರ್ಯಾಯ ಪರಿಹಾರಗಳನ್ನು ಮಂಡಿಸುವ ಅಗತ್ಯವಿರುವುದಿಲ್ಲ.

ಚರ್ಚೆಯ ವಿಧಗಳು

ಬದಲಾಯಿಸಿ

ಸಂಸತ್‌ (ಪಾರ್ಲಿ) ಚರ್ಚೆ

ಬದಲಾಯಿಸಿ

ಬ್ರಿಟಿಷ್‌ ಸಂಸತ್‌ ಕಾರ್ಯವಿಧಾನದಿಂದ ತೆಗೆದುಕೊಂಡಂತಹ ನಿಯಮಗಳನ್ನು ಆಧರಿಸಿ ಸಂಸತ್‌ ಚರ್ಚೆಗಳನ್ನು (ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇದನ್ನು "ಪಾರ್ಲಿ"ಎನ್ನಲಾಗಿದೆ) ನಡೆಸಲಾಗುತ್ತದೆ. ಇದು ಹಲವು ಜನರ ಸಂಯೋಜನೆಯಲ್ಲಿ ವ್ಯಕ್ತಿಗಳ ನಡುವೆ ಸ್ಪರ್ಧೆಯನ್ನು ಒಳಗೊಂಡಿರುತ್ತದೆ. 'ಗವರ್ನಮೆಂಟ್' (ಸರ್ಕಾರ) ಹಾಗೂ 'ಅಪೋಸಿಶನ್' (ಪ್ರತಿಪಕ್ಷ) ಎಂಬ ಪದಗಳನ್ನು ಬ್ರಿಟಿಷ್‌ ಸಂಸತ್‌ನಿಂದ ಎರವಲು ಪಡೆಯುತ್ತದೆ (ಆದರೂ ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಚರ್ಚೆ ನಡೆಸುವಾಗ 'ಸರ್ಕಾರ' ಎಂಬ ಪದಕ್ಕಿಂತಲೂ ಹೆಚ್ಚಾಗಿ 'ಪ್ರತಿಪಾದನೆ' ಎಂಬ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ).

ವಿಶ್ವಾದ್ಯಂತ, ಸಂಸತ್‌ ಚರ್ಚೆಯನ್ನೇ ಹಲವು ದೇಶಗಳಲ್ಲಿ 'ಚರ್ಚೆ' ಎಂದು ಚಿರಪರಿಚಿತವಾಗಿದೆ. ಯುನೈಟೆಡ್‌ ಕಿಂಗ್ಡಮ್‌, ಆಸ್ಟ್ರೇಲಿಯಾ, ಭಾರತ, ಗ್ರೀಸ್‌ ಹಾಗೂ ಇತರೆ ಹಲವು ರಾಷ್ಟ್ರಗಳು ಸೇರಿದಂತೆ, ಈ ರೀತಿಯಾದ ಚರ್ಚಾ ಶೈಲಿಯು ಬಳಕೆಯಲ್ಲಿದೆ. ವಿಶ್ವ ಮಟ್ಟದ ಸಂಸತ್‌ ಚರ್ಚೆಯಲ್ಲಿ ಅತಿ ದೊಡ್ಡ ಸ್ಪರ್ಧೆಯಾದ ವರ್ಲ್ಡ್‌ ಯುನಿವರ್ಸಿಟೀಸ್‌ ಡಿಬೇಟಿಂಗ್‌ ಚ್ಯಾಂಪಿಯನ್ಶಿಪ್ ‌ (ವಿಶ್ವ ವಿಶ್ವವಿದ್ಯಾನಿಲಯಗಳ ಚರ್ಚಾ ಸ್ಪರ್ಧಾವಳಿ)ನ್ನು ಬ್ರಿಟಿಷ್‌ ಸಂಸತ್‌ ಶೈಲಿಯಲ್ಲಿ ಆಯೋಜಿಸಲಾಗಿದೆ.

ಆದಾಗ್ಯೂ, ಯುನೈಟೆಡ್‌ ಕಿಂಗ್ಡಮ್‌‌ನೊಳಗೇ, ಬ್ರಿಟಿಷ್‌ ಸಂಸತ್‌ ಶೈಲಿಯನ್ನು ಪ್ರತ್ಯೇಕವಾಗಿ ಬಳಸಲಾಗಿಲ್ಲ. ಇಂಗ್ಲಿಷ್‌-ಸ್ಪೀಕಿಂಗ್‌ ಯುನಿಯನ್‌ ಶಾಲೆಗಳಿಗಾಗಿ ರಾಷ್ಟ್ರೀಯ ಸ್ಪರ್ಧಾವಳಿಗಳನ್ನು ವಿಶಿಷ್ಟ ಮಾದರಿಯಾದ 'ಮೇಸ್‌' ಮಾದರಿಯಲ್ಲಿ ಆಯೋಜಿಸುತ್ತದೆ, ಈ ನಡುವೆ ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಸ್ಪರ್ಧಾವಳಿಗಳಿಗಾಗಿ ಬ್ರಿಟಿಷ್‌ ಸಂಸತ್‌ ಮಾದರಿಯಲ್ಲಿ ಏಕಕಾಲಕ್ಕೆ ನಡೆಸುತ್ತದೆ.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಅಮೆರಿಕನ್‌ ಪಾರ್ಲಿಯಮೆಂಟರಿ ಡಿಬೇಟ್‌ ಅಸೊಸಿಯೇಷನ್‌ ಒಂದು ಹಳೆಯ ರಾಷ್ಟ್ರೀಯ ಸಂಸತ್‌ ಚರ್ಚಾ ಸಂಘಟನೆಯಾಗಿದೆ. ಇದು ಪೂರ್ವ ತೀರದಲ್ಲಿ ನೆಲೆಗೊಂಡಿದ್ದು, ಎಲ್ಲ ಈವಿ ಲೀಗ್‌ನ್ನು ಒಳಗೊಂಡಿದೆ. ಆದರೂ ಇತ್ತೀಚೆಗೆ ಸಂಸ್ಥಾಪಿಸಲಾದ ನ್ಯಾಷನಲ್‌ ಪಾರ್ಲಿಯಮೆಂಟರಿ ಡಿಬೇಟ್‌ ಅಸೊಸಿಯೇಷನ್‌ (NPDA) (ರಾಷ್ಟ್ರೀಯ ಸಂಸತ್ತಿನ ಚರ್ಚಾ ಸಂಘಟನೆ) ಈಗ ಅತಿ ದೊಡ್ಡ ಕಾಲೇಜು ಮಟ್ಟದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರೌಢಶಾಲಾ ಮಟ್ಟದ ಎಲ್ಲಾ ಸಂಸತ್‌ ಚರ್ಚೆಗಳಿಗೆ ರಾಷ್ಟ್ರೀಯ ಸಂಸತ್ ಚರ್ಚಾ ಲೀಗ್(NPDL) ಆಶ್ರಯ ಸಂಘಟನೆಯಾಗಿದೆ. ಕೆನಡಾದಲ್ಲಿ, ಕೆನಡಿಯನ್ ಯುನಿವರ್ಸಿಟಿಸ್‌ ಸೊಸೈಟಿ ಫಾರ್‌ ಇಂಟರ್‌ಕಾಲೇಜಿಯೆಟ್‌ ಡಿಬೇಟಿಂಗ್‌ (CUSID) ವಿಶ್ವವಿದ್ಯಾನಿಲಯ ಮಟ್ಟದ ಎಲ್ಲಾ ಚರ್ಚಾ ಸ್ಪರ್ಧೆಗಳಿಗೂ ಆಶ್ರಯವಾಗಿದೆ. ಇದೇ ರೀತಿ, ಕೆನಡಿಯನ್‌ ಸ್ಟೂಡೆಂಟ್‌ ಡಿಬೇಟಿಂಗ್‌ ಫೆಡರೇಷನ್‌ (CSDF) ಪ್ರೌಢಶಾಲಾ ಮಟ್ಟದ ಚರ್ಚಾಸ್ಪರ್ಧೆಗಳಿಗೆ ಆಶ್ರಯವಾಗಿದೆ.

ಸಂಸತ್ ಚರ್ಚೆಗಳಲ್ಲಿನ ವಿಷಯಗಳನ್ನು ಪಂದ್ಯಾವಳಿ ನಿರ್ಣಯಿಸಬಹುದು ಅಥವಾ, "ಸರ್ಕಾರದ" ಪರವಾಗಿ ಚರ್ಚೆಯು ಆರಂಭಗೊಳ್ಳುವಾಗ, ಸ್ವತಃ ಚರ್ಚಾಸ್ಪರ್ಧಿಗಳೇ ಆಯ್ಕೆ ಮಾಡಬಹುದು. ಉದಾಹರಣೆಗೆ, "ದಿಸ್ ಹೌಸ್ ವುಡ್ ಬಾಂಬ್ ಕಲ್ಚರಲ್ ಸೈಟ್ಸ್" ಎಂಬುದು ಚರ್ಚೆಯ ವಿಷಯವಾಗಿದ್ದಲ್ಲಿ, ಸರ್ಕಾರದ ಪರವಾಗಿ ಚರ್ಚಿಸುವವರು ಸೂಕ್ತವಾಗುವ ಯಾವುದೇ ರೀತಿಯಲ್ಲಿ ವ್ಯಾಖ್ಯಾನಿಸಬಹುದು, ಉದಾಹರಣೆಗೆ, ಕೇವಲ ಯುದ್ಧದ ಸಮಯದಂದು, ಹಾಗೂ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳನ್ನು ಹೊರತುಪಡಿಸಿ ವ್ಯಾಖ್ಯಾನಿಸಬಹುದು. ವ್ಯಾಖ್ಯಾನದಿಂದಾಗಿ ತಮ್ಮ ಅಧಿಕಾರಕ್ಕೆ ಅನನುಕೂಲವಾಗದಂತೆ 'ಸರ್ಕಾರ'ವು ಖಚಿತಪಡಿಸಿಕೊಳ್ಳಬೇಕು. ನ್ಯಾಯಯುತ ಸ್ಪರ್ಧೆಗೆ ವಿರುದ್ಧವಾದಲ್ಲಿ ಪ್ರತಿಪಕ್ಷದ ಪರ ವಾದಿಗಳು ಈ ವ್ಯಾಖ್ಯಾನದ ವಿರುದ್ಧ ಧ್ವನಿಯೆತ್ತಬಹುದಾಗಿದೆ. ಸಕ್ರಿಯ ಭಾಷಣಕಲೆ ಹಾಗು ಶೈಲಿಯ ಹಲವು ರೂಪಗಳಲ್ಲಿ, ಜೊತೆಗೆ ಹೆಚ್ಚಿನ ಸಾಂಪ್ರದಾಯಿಕ ಜ್ಞಾನ ಹಾಗು ಸಂಶೋಧನೆಯು, ಸ್ಪರ್ಧೆಯ ವಿಷಯ ಹಾಗು ಅವರು ವಾದ ಮಂಡಿಸಿದ ರೀತಿ ಎರಡನ್ನೂ ಆಧರಿಸಿ ಅಂಕಗಳನ್ನು ನೀಡುವುದರ ಜೊತೆಗೆ ಸ್ಪರ್ಧೆಯಲ್ಲಿ ಗೆದ್ದವರಾರೆಂದು ತೀರ್ಮಾನಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದನ್ನು ವ್ಯಾಪಕವಾಗಿ ಅತ್ಯಂತ ಪ್ರಜಾಸತ್ತೀಯ ರೂಪದ ಚರ್ಚೆಯೆಂದು ಪಟ್ಟಿ ಮಾಡಲಾಗಿದೆ.

ಮೇಸ್‌ ಚರ್ಚೆ

ಬದಲಾಯಿಸಿ

ಈ ಶೈಲಿಯು ಬ್ರಿಟನ್‌ನ ಶಾಲಾ ಮಟ್ಟದಲ್ಲಿ ಪ್ರಮುಖವಾಗಿದೆ. ಎರಡು ತಂಡಗಳಿಗೆ ಸೇರಿದ ಇಬ್ಬರು ಸಮರ್ಥಿಸುವ ನಿರ್ಣಯದ ಬಗ್ಗೆ ವಾದಿಸುತ್ತಾರೆ.(ಉದಾಹರಣೆಗೆ, 'ಈ ಸದನವು ಕೈದಿಗಳಿಗೆ ಮತದಾನದ ಹಕ್ಕು ನೀಡಲಿದೆ'). ಒಂದು ಚರ್ಚಾ ತಂಡವು ಇದನ್ನು ಪ್ರತಿಪಾದಿಸಿದರೆ, ಇನ್ನೊಂದು ತಂಡವು ಇದನ್ನು ವಿರೋಧಿಸುತ್ತದೆ. ಕ್ರಮವಾಗಿ ಪ್ರತಿಯೊಬ್ಬ ಭಾಷಣಕಾರನು ಏಳು ನಿಮಿಷಗಳ ಭಾಷಣವನ್ನು ಮಾಡುತ್ತಾನೆ; ಮೊದಲ ಪರ, ಮೊದಲ ವಿರೋಧಿ, ಎರಡನೇ ಪರ, ಎರಡನೇ ವಿರೋಧಿ...ಹೀಗೆ ಕ್ರಮವಾಗಿ ಭಾಷಣ ಮಾಡುತ್ತಾರೆ. ಪ್ರತಿ ಭಾಷಣದ ಮೊದಲ ನಿಮಿಷವಾದ ನಂತರ ವಿರೋಧ ತಂಡದ ಸದಸ್ಯರು 'ಪಾಯಿಂಟ್‌ ಆಫ್‌ ಇನ್ಫರ್ಮೇಷನ್‌'(POI) ಗೆ ಕೋರಿಕೆ ಸಲ್ಲಿಸಬಹುದು. ಭಾಷಣಕಾರ ಒಪ್ಪಿದಲ್ಲಿ, ಅವರಿಗೆ ಪ್ರಶ್ನೆ ಕೇಳಲು ಅನುಮತಿ ನೀಡಲಾಗುತ್ತದೆ. ಯಾವುದೋ ಒಂದು ಸಡಿಲ ಅಂಶ ಅಥವಾ ಅವರು ಮಾತನಾಡಿದ ವಿಚಾರದ ವಿರುದ್ಧ ವಾದ ಮಾಡಲು POIಗಳನ್ನು ಬಳಸಲಾಗುತ್ತದೆ. ಆರು ನಿಮಿಷಗಳಾದ ನಂತರ, ಯಾವುದೇ POIಗೆ ಅನುಮತಿಯಿರುವುದಿಲ್ಲ. ನಾಲ್ವರೂ ಭಾಷಣಕಾರರು ಮಾತು ಮುಗಿಸಿದ ನಂತರ, ಚರ್ಚೆಯನ್ನು ಇಡೀ ಸಭೆಗೆ ಮುಕ್ತಗೊಳಿಸಲಾಗುವುದು. ಇದರಲ್ಲಿ ಪ್ರೇಕ್ಷಕವೃಂದದ ಸದಸ್ಯರು ಎರಡೂ ಪಕ್ಷಗಳ ಸದಸ್ಯರಿಗೆ ಪ್ರಶ್ನೆ ಕೇಳುವರು. ಸಭಾ ಚರ್ಚೆಯ ನಂತರ, ಪ್ರತಿಯೊಂದು ತಂಡದಿಂದ ಒಬ್ಬ ಭಾಷಣಕಾರ (ಸಾಂಪ್ರದಾಯಿಕವಾಗಿ ಮೊದಲನೆಯ ಭಾಷಣಕಾರ) ನಾಲ್ಕು ನಿಮಿಷಗಳ ಕಾಲ ಮಾತನಾಡುತ್ತಾನೆ. ಇಂತಹ ಸಂಕ್ಷಿಪ್ತ ಭಾಷಣಗಳಲ್ಲಿ, ಸಭೆಯಲ್ಲಿ ಕೇಳಲಾದ ಪ್ರಶ್ನೆಗಳು, ಅಥವಾ ವಿರೋಧಿಗಳು ಕೇಳುವ ಪ್ರಶ್ನೆಗಳಿಗೆ ಭಾಷಣಕಾರರು(ಚರ್ಚಾಪಟು) ಉತ್ತರಿಸಬೇಕಾಗುವುದು. ಆನಂತರ ತಮ್ಮದೇ ಆದ ಪ್ರಮುಖ ಅಂಶಗಳನ್ನು ಸಂಕ್ಷಿಪ್ತಗೊಳಿಸಬಹುದು. ಮೇಸ್‌ ಮಾದರಿಯಲ್ಲಿ, ವಿಶ್ಲೇಷಣಾ ಕುಶಲತೆ, ಮನರಂಜನೆ, ಶೈಲಿ ಮತ್ತು ವಾದದ ಪ್ರಾಬಲ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇವೆಲ್ಲ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ತಂಡವು ವಿಜಯಿಯಾಗುವುದು.

ಜೆಸ್‌ ಚರ್ಚೆ

ಬದಲಾಯಿಸಿ

This style of debate is particularly popular in Ireland at Secondary School level. Developed in Coláiste Iognáid over the last ten years, the format has five speakers: two teams and a single 'sweep speaker' on each side. Speaches last 4'30' with 30' seconds protected from POIs at either end of the debate. Adjudication will depend on BP marking, but with particular recognition of principled debating.A ten minute open house will also be adjudicated. Traditionally, the motion is always opposed in the final vote.[citation needed]

ಸಾರ್ವಜನಿಕ ಚರ್ಚೆ

ಬದಲಾಯಿಸಿ

ದಿನಾಂಕ 15 ಫೆಬ್ರವರಿ 1997ರಂದು, ಟೆಕ್ಸಸ್‌ನ ಸಾನ್ ಆಂಟೊನಿಯೊದಲ್ಲಿರುವ ಸೇಂಟ್‌ ಮೇರಿಸ್‌ ವಿಶ್ವವಿದ್ಯಾನಿಲಯ (ಟೆಕ್ಸಸ್‌) ನಲ್ಲಿ ದಿ ಇಂಟರ್ನ್ಯಾಷನಲ್ ಪಬ್ಲಿಕ್ ಡಿಬೇಟ್ ಅಸೋಸಿಯೇಶನ್ (IPDA)ನನ್ನು ಉದ್ಘಾಟಿಸಲಾಯಿತು. ಸಕ್ರಿಯ ಚಟುವಟಿಕೆಯಲ್ಲಿ ತೊಡಗಿರುವ ಇದು ಒಂದು ರಾಷ್ಟ್ರೀಯ ಚರ್ಚಾ ಲೀಗ್ ಆಗಿದೆ. ಇದರಲ್ಲಿ ಅರ್ಕನ್ಸಾಸ್‌, ಲೂಯಿಸಿಯಾನಾ, ಕನ್ಸಾಸ್‌, ಅಲಬಾಮಾ, ಟೆಕ್ಸಸ್‌, ಮಿಸ್ಸಿಸ್ಸಿಪ್ಪಿ, ಟೆನ್ನೆಸೀ, ವಾಷಿಂಗ್ಟನ್‌, ಒರೆಗಾನ್‌, ಇಡಾಹೊ, ಫ್ಲಾರಿಡಾ ಹಾಗೂ ಒಕ್ಲಾಹೊಮಾ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ IPDA, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಚರ್ಚಾ ಸಂಘವಾಗಿದೆ. ಸಾಕ್ಷ್ಯಗಳನ್ನು ಬಳಸಿದ್ದರೂ ಸಹ, ಸಾಕ್ಷ್ಯ ಮತ್ತು ವೇಗಕ್ಕಿಂತ ಹೆಚ್ಚಾಗಿ, ಸಾರ್ವಜನಿಕ ಭಾಷಣ ಹಾಗು ವಾಸ್ತವ-ಜಗತ್ತಿಗೆ ಮನವೊಲಿಸುವ ಕೌಶಲ್ಯವನ್ನು ಉತ್ತೇಜಿಸುವುದು IPDAನ ಮುಖ್ಯ ಧ್ಯೇಯವಾಗಿದೆ. ಈ ಗುರಿಯನ್ನು ಮತ್ತಷ್ಟು ಹೆಚ್ಚಿಸಲು, ಪ್ರೇಕ್ಷಕರ ಸುತ್ತಲೂ ಕೇಂದ್ರೀಕೃತವಾದ ಚರ್ಚಾ ಶೈಲಿಯನ್ನು ಪ್ರೋತ್ಸಾಹಿಸಲು IPDA ಸಾಮಾನ್ಯ ತೀರ್ಪುಗಾರರನ್ನು ನೇಮಿಸುತ್ತದೆ. ಇನ್ನೂ ಹೆಚ್ಚಿಗೆ, ತೀರ್ಪುಗಾರರ ಮನವೊಲಿಸುವುದು ಚರ್ಚಾಸ್ಪರ್ಧಿಯ ಗುರಿಯಾಗಿದ್ದರೂ, IPDA ಪ್ರತಿ ಸ್ಪರ್ಧಾವಳಿಯಲ್ಲೂ ಅತ್ಯುತ್ತಮ ಭಾಷಣಕಾರರನ್ನು ಸನ್ಮಾನಿಸುತ್ತದೆ.

IPDA ತನ್ನ ಚರ್ಚೆಗಳಲ್ಲಿ ಎರಡೂ ತಂಡಗಳ ನಡುವೆ ಚರ್ಚೆ ಹಾಗು ವೈಯಕ್ತಿಕ ಚರ್ಚೆ ಎರಡನ್ನೂ ಆಯೋಜಿಸುತ್ತದೆ. ತಂಡದ ಹಾಗೂ ವೈಯಕ್ತಿಕ ಚರ್ಚೆಗಳೆರಡರಲ್ಲೂ, ಎರಡೂ ತಂಡಗಳಿಗೆ ವಿಷಯಗಳ ಪಟ್ಟಿಯನ್ನು ಸ್ಪರ್ಧೆ ಆರಂಭವಾಗುವ 30 ನಿಮಿಷಗಳ ಮುಂಚೆ ನೀಡಲಾಗುತ್ತದೆ. ಒಂದು ವಿಷಯವನ್ನು ಆಯ್ಕೆ ಮಾಡಲು ಅನುಕ್ರಮವಾಗಿ ಗಮನಾರ್ಹ ಸಮಾಲೋಚನೆಗಳು ನಡೆಯುತ್ತದೆ. ಒಂದು ಪಕ್ಷವು ನಿರ್ಣಯವನ್ನು ಅಂಗೀಕರಿಸಿದರೆ ಮತ್ತೊಂದು ನಿರಾಕರಿಸುತ್ತದೆ. ನಂತರ ಒಂದು ಆರಂಭಿಕ ಭಾಷಣದ ತಯಾರಿ ನಡೆಯತ್ತದೆ, ಮತ್ತೊಂದು ಭಾಗದಲ್ಲಿ ಅದರ ಪಾಟಿಸವಾಲು ನಡೆಯುತ್ತದೆ, ಹಾಗು ಆ ಸುತ್ತಿನ ಮುಕ್ತಾಯದಲ್ಲಿ ಅಂತಿಮ ಅಭಿಪ್ರಾಯ ನೀಡಲಾಗುತ್ತದೆ.

ಇಂಟರ್ನ್ಯಾಷನಲ್ ಪಬ್ಲಿಕ್ ಡಿಬೇಟ್ ಅಸೋಸಿಯೇಶನ್ ಆಯೋಜಿಸುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಹೆಚ್ಚಿನ ಸದಸ್ಯರು ಕಾಲೇಜುಗಳು ಅಥವಾ ವಿಶ್ವವಿದ್ಯಾಲಯದವರಾಗಿರುತ್ತಾರೆ. IPDA ಸ್ಪರ್ಧಾವಳಿಗಳು ಏಳನೆಯ ಗ್ರೇಡ್‌ ಅಥವಾ ಅದಕ್ಕಿಂತಲೂ ಉನ್ನತ ವ್ಯಾಸಂಗ ಮಾಡಿರುವ ಎಲ್ಲರಿಗೂ ಮುಕ್ತವಾಗಿದೆ.

ಆಸ್ಟ್ರಲಾಸಿಯ ಚರ್ಚೆ

ಬದಲಾಯಿಸಿ

ಆಸ್ಟ್ರಲೇಷ್ಯಾ ಶೈಲಿಯ ಚರ್ಚೆಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಎರಡು ತಂಡಗಳ ನಡುವೆ ಚರ್ಚೆ ನಡೆಯುತ್ತದೆ. ಇದನ್ನು ಸಾಮಾನ್ಯವಾಗಿ ವಿಷಯ ಅಥವಾ ಪ್ರತಿಪಾದನೆ ಎನ್ನಲಾಗಿದೆ. ಸಂಪ್ರದಾಯದಂತೆ, ಈ ವಿಚಾರವನ್ನು ದಟ್ ಅಥವಾ ದಿಸ್ ಎಂಬ ಸಮರ್ಥನೀಯ ಹೇಳಿಕೆಯೊಂದಿಗೆ ಆರಂಭಿಸಲಾಗುತ್ತದೆ. ಉದಾಹರಣೆಗೆ (ಕ್ರಮವಾಗಿ), 'ದಟ್ ಕ್ಯಾಟ್ಸ್ ಆರ್ ಬೆಟರ್ ದ್ಯಾನ್ ಡಾಗ್ಸ್'; 'ದಿಸ್ ಹೌಸ್ ವುಡ್ ಎಸ್ಟಾಬ್ಲಿಶ್ ಏ ವರ್ಲ್ಡ್ ಗವರ್ನಮೆಂಟ್.' ಚರ್ಚೆಯ ವಿಷಯಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಆದಾಗ್ಯೂ ಹೆಚ್ಚಿನ ವಿಷಯಗಳು, ಸಾಮಾನ್ಯವಾಗಿ ಪ್ರದೇಶಕ್ಕೆ ನಿರ್ದಿಷ್ಟವಾಗಿರುತ್ತದೆ. ಇದು ಚರ್ಚಾಸ್ಪರ್ಧಿಗಳು ಮತ್ತು ಪ್ರೇಕ್ಷಕರಲ್ಲಿ ಆಸಕ್ತಿ ಹೆಚ್ಚಿಸುವ ಕಾರಣಕ್ಕಾಗಿ ಪ್ರದೇಶವನ್ನು ಆಧರಿಸಿದ ವಿಷಯಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರತಿ ತಂಡದಲ್ಲೂ ಮೂರು ಜನ ಸದಸ್ಯರಿರುತ್ತಾರೆ, ತಂಡದಲ್ಲಿ ಆತ/ಆಕೆಯ ವಾಕ್ಪಟುತ್ವವನ್ನು ಅವಲಂಬಿಸಿ ಪ್ರತಿಯೊಬ್ಬರನ್ನು ಅವರ ತಂಡದ ಪ್ರಕಾರ ಹೆಸರಿಸಲಾಗಿರುತ್ತದೆ. ಉದಾಹರಣೆಗೆ, ಪರಿಭಾಷಾ ಶಾಸ್ತ್ರವನ್ನು ಅವಲಂಬಿಸಿ ಸಮರ್ಥಕ ಪಕ್ಷದ ಎರಡನೇ ಭಾಷಣಕಾರನನ್ನು 'ಸೆಕೆಂಡ್ ಅಫರ್ಮಟಿವ್ ಸ್ಪೀಕರ್' ಅಥವಾ 'ಸೆಕೆಂಡ್ ಪ್ರೊಪೋಸಿಶನ್ ಸ್ಪೀಕರ್' ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬ ಭಾಷಣಕಾರರ ಸ್ಥಿತಿಗಳು ವಿಶಿಷ್ಟ ಪಾತ್ರವನ್ನು ಆಧರಿಸಿರುತ್ತದೆ. ಉದಾಹರಣೆಗೆ, ತಮ್ಮ ನಿಲುವನ್ನು ಸಮರ್ಥಿಸಲೆಂದು ಹೊಸ ಸಾಕ್ಷ್ಯವನ್ನು ಪರಿಚಯಿಸುವ, ವಿರೋಧಿ ತಂಡಗಳ ವಾದವನ್ನು ವಿರುದ್ಧ ನಿರಾಕರಿಸುವ ಅವಕಾಶ ಮೂರನೆಯ ಭಾಷಣಕಾರನಿಗಿದೆ. ಕೊನೆಯಲ್ಲಿ ಭಾಷಣ ಮಾಡುವವರನ್ನು 'ತಂಡದ ಸಲಹೆಗಾರ/ನಾಯಕ' ಎನ್ನಲಾಗುತ್ತದೆ. ಈ ಶೈಲಿಯನ್ನು ಬಳಸಿ, ಪ್ರತಿಯೊಂದು ತಂಡದ ಮೊದಲ ಭಾಷಣಕಾರರಿಂದ ಮುಕ್ತಾಯದ ವಾದದೊಂದಿಗೆ ಚರ್ಚೆಯು ಅಂತ್ಯಗೊಳ್ಳುತ್ತದೆ. ಇದರಲ್ಲಿ ಯಾವುದೇ ಹೊಸ ಸಾಕ್ಷ್ಯವನ್ನು ಪರಿಚಯಿಸುವ ಅಗತ್ಯವಿರುವುದಿಲ್ಲ. ಆರು ಭಾಷಣಕಾರರಲ್ಲಿ ಪ್ರತಿಯೊಬ್ಬರೂ (ಮೂರು ಸಮರ್ಥನೆ ಮತ್ತು ಮೂರು ನಕಾರಾತ್ಮಕ) ಒಬ್ಬರ ನಂತರ ಒಬ್ಬರು ಮಾತನಾಡುವರು; ಮೊದಲಿಗೆ ಪರತಂಡದಿಂದ ಚರ್ಚೆ ಆರಂಭವಾಗುತ್ತದೆ. ಚರ್ಚೆಯ ಸರದಿಯು ಹೀಗಿದೆ: ಮೊದಲನೆ ಪರ, ಮೊದಲನೆ ವಿರೋಧ, ಎರಡನೇ ಪರ, ಎರಡನೇ ವಿರೋಧ ಭಾಷಣಕಾರ, ಮೂರನೇ ಪರ, ಅಂತಿಮವಾಗಿ ಮೂರನೇ ಪರ.

ಆಸ್ಟ್ರಲೇಷ್ಯಾ ಶೈಲಿಯ ಚರ್ಚೆಗೆ ಬಳಸಲಾದ ಸನ್ನಿವೇಶಗಳು ಭಿನ್ನವಾಗಿವೆ. ಆದರೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ಇದನ್ನು ಬಹುಮಟ್ಟಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದಲ್ಲಿ ಬಳಸಲಾಗಿದೆ. ಇದರಲ್ಲಿ ಸಣ್ಣ-ಪ್ರಮಾಣದ ಒಂದೇ ಸುತ್ತಿನ ಆಂತರಿಕ ಶಾಲಾ ಚರ್ಚೆಗಳಿಂದ ಹಿಡಿದು, ದೊಡ್ಡ-ಪ್ರಮಾಣದ, ಇನ್ನಷ್ಟು ವಿಧ್ಯುಕ್ತ, ಅಂತರ-ಶಾಲಾ ಸ್ಪರ್ಧೆಗಳೂ ಸೇರಿವೆ. ಇದರಲ್ಲಿ ಹಲವು ಸುತ್ತುಗಳು ಹಾಗೂ ಅಂತಿಮ ಸ್ಪರ್ಧೆಗಳಿವೆ. ಇದು ವರ್ಷಪೂರ್ತಿ ನಡೆಯುತ್ತದೆ.

ವರ್ಲ್ಡ್ ಯುನಿವರ್ಸಟೀಸ್ ಪೀಸ್ ಇನ್ವಿಟೇಷನಲ್ ಡಿಬೇಟ್ (WUPID)

ಬದಲಾಯಿಸಿ

WUPID ಎಂಬುದು BP ಅಥವಾ ಚರ್ಚೆಯ ವಿಶ್ವ ಮಾದರಿಯನ್ನು ಬಳಸುವ ಆಮಂತ್ರಣಾ ಚರ್ಚಾ ಸ್ಪರ್ಧೆಯಾಗಿದೆ. ಕೊಲ್ಮ್‌ ಫ್ಲಿನ್‌ ಆಡಳಿತದ ವರ್ಲ್ಡ್‌ ಡಿಬೇಟ್‌ ವೆಬ್ಸೈಟ್ ನಲ್ಲಿ ಪ್ರಕಟಿಸಲಾದ ಪಟ್ಟಿಯಂತೆ, ಅಗ್ರ 30 ಪ್ರಮುಖ ಚರ್ಚಾ ಸಂಘಗಳನ್ನು ಆಮಂತ್ರಿಸುತ್ತದೆ.

ಯಾವುದಾದರೂ ಒಂದು ತಂಡ, ಅಥವಾ ಕೆಲವು ತಂಡಗಳು ಭಾಗವಹಿಸಲಾಗದಿದ್ದಲ್ಲಿ, ಇವುಗಳ ಸ್ಥಾನಗಳನ್ನು ತುಂಬಲು, ವಿಶ್ವವಿದ್ಯಾನಿಲಯ ಚರ್ಚಾ ಸಮುದಾಯದ ವರಿಷ್ಠ ಸದಸ್ಯರ ಶಿಫಾರಸ್ಸಿನ ಮೇರೆಗೆ, ಅಗ್ರ 60 ತಂಡಗಳ ಪಟ್ಟಿಯಿಂದ ತಂಡಗಳನ್ನು ಆಮಂತ್ರಿಸಲಾಗುತ್ತದೆ.

WUPID ಮೊದಲ ಬಾರಿಗೆ ಡಿಸೆಂಬರ್‌ 2007ರಲ್ಲಿ ಆಯೋಜಿಸಲಾಯಿತು. ಇದರಲ್ಲಿ ಸಿಡ್ನಿ ವಿಶ್ವವಿದ್ಯಾಲಯವು ಸ್ಪರ್ಧೆಯಲ್ಲಿ ವಿಜಯಿಯಾಯಿತು.

ಇಸವಿ 2008ರಲ್ಲಿ ನಡೆದ ಎರಡನೆಯ ಸ್ಪರ್ಧೆಯಲ್ಲಿ ಮೊನಾಷ್‌ ತಂಡವು ಪಾರಿತೋಷಕವನ್ನು ತನ್ನದಾಗಿಸಿಕೊಂಡಿತು.  ಮೂರನೆಯ WUPID ಸ್ಪರ್ಧೆಯು ಡಿಸೆಂಬರ್‌ 2009ರಲ್ಲಿ ಯುನಿವರ್ಸಿಟಿ ಪುತ್ರ ಮಲೇಷ್ಯಾ (UPM)ದಲ್ಲಿ ನಡೆಯಿತು.  ಮೊದಲ ಎರಡು ಸ್ಪರ್ಧಾವಳಿಗಳ ಸಹ-ಆತಿಥ್ಯವನ್ನು ಯುನಿವರ್ಸಿಟಿ ಕೌಲಾಲಂಪುರ್‌ (UNIKL) ವಹಿಸಿತ್ತು.

WUPID ಡೇನಿಯಲ್‌ ಹಸನಿ ಮುಸ್ತಫಾ, ಸಯಿಫುಲ್‌ ಅಮೀನ್‌ ಜಲುನ್‌ ಮತ್ತು ಮಹಮ್ಮದ್ ಯೂನಸ್‌ ಝಕಾರಿಯಾ ಅವರ ಚಿಂತನೆ ಫಲ.

ಈ ಮೂವರೂ ಮುಂಚೆ UPMನಲ್ಲಿ ಮಾಜಿ ಚರ್ಚಾಸ್ಪರ್ಧಿಗಳು. ಮಲೇಷ್ಯನ್‌ ನ್ಯಾಷನಲ್ಸ್‌ನಿಂದ ಹಿಡಿದು ವಿಶ್ವ ಸ್ಪರ್ಧಾವಳಿಯ ತನಕ ಎಲ್ಲಾ ಮಟ್ಟದ ಚರ್ಚಾಸ್ಪರ್ಧೆಗಳಲ್ಲಿಯೂ ಇವರು ಭಾಗವಹಿಸಿದ್ದರು.

ಏಷ್ಯನ್‌ ಯುನಿವರ್ಸಿಟೀಸ್ ಡಿಬೇಟಿಂಗ್ ಚ್ಯಾಂಪಿಯನ್‌ಷಿಪ್

ಬದಲಾಯಿಸಿ

ಇದು ಏಷ್ಯಾದ ಅತಿ ದೊಡ್ಡ ಚರ್ಚಾ ಸ್ಪರ್ಧಾವಳಿಯಾಗಿದೆ. ಇದರಲ್ಲಿ ಭಾಗವಹಿಸಲು ಮಧ್ಯಪ್ರಾಚ್ಯದಿಂದ ಹಿಡಿದು ಜಪಾನ್‌ ವರೆಗೂ ತಂಡಗಳು ಆಗಮಿಸುತ್ತವೆ. ಸಾಂಪ್ರದಾಯಿಕವಾಗಿ, ಇದನ್ನು ಆಗ್ನೇಯ ಏಷ್ಯಾದಲ್ಲಿ ಆಯೋಜಿಸಲಾಗುತ್ತದೆ. ಏಷ್ಯಾದ ಇತರೆ ಭಾಗಗಳಿಗೆ ಹೋಲಿಸಿದರೆ, ಈ ವಲಯದಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯು ಅತಿ ಹೆಚ್ಚು.

ಏಷ್ಯಾದಲ್ಲಿ ನಡೆಯುವ ಚರ್ಚಾಸ್ಪರ್ಧೆಗಳು ಬಹುಮಟ್ಟಿಗೆ ಆಸ್ಟ್ರಲೇಷ್ಯನ್‌ ಮಾದರಿಯನ್ನು ಅನುಸರಿಸುತ್ತವೆ. ಒಂದೇ ಒಂದು ವ್ಯತ್ಯಾಸವೆಂದರೆ, ಪ್ರತಿಯೊಬ್ಬ ಭಾಷಣಕಾರರಿಗೆ ಏಳು ನಿಮಿಷಗಳ ಭಾಷಣ ಅವಧಿ ನೀಡಲಾಗುತ್ತದೆ. ಭಾಷಣದ ಎರಡನೆಯ ನಿಮಿಷದಿಂದ ಆರನೆಯ ನಿಮಿಷದ ವರೆಗೆ ವಿರೋಧ ಪಕ್ಷದಿಂದ ಪಾಯಿಂಟ್ಸ್‌ ಆಫ್‌ ಇನ್ಫರ್ಮೇಷನ್‌ (POI) ನೀಡಲಾಗುತ್ತದೆ. ಇದರ ಅರ್ಥ, ಮೊದಲ ಹಾಗೂ ಏಳನೆಯ ನಿಮಿಷವನ್ನು 'ರಕ್ಷಿತ' ಅವಧಿಗಳು ಎಂದು ಪರಿಗಣಿಸಲಾಗಿದೆ; ಇಲ್ಲಿ ಭಾಷಣಕಾರರಲ್ಲಿ ಯಾವುದೇ POI ಕೋರಿಕೆಗೆ ಅವಕಾಶವಿರುವುದಿಲ್ಲ.

ಚರ್ಚೆಯು ಪ್ರಧಾನಿಯ ಭಾಷಣದೊಂದಿಗೆ ಆರಂಭವಾಗುತ್ತದೆ (ಮೊದಲ ಪ್ರತಿಪಾದನೆ), ಈ ಭಾಷಣ ಮುಗಿದ ಕೂಡಲೆ ವಿರೋಧ ಪಕ್ಷದ ಮೊದಲ ಭಾಷಣಕಾರನು ಮಾತನಾಡುವನು. ಈ ರೀತಿ ವಿರೋಧ ಪಕ್ಷದ ಮೂರನೆಯ ಭಾಷಣಕಾರರ ತನಕ ಪರ್ಯಾಯ ಸರದಿಯಲ್ಲಿ ಭಾಷಣವು ಮುಂದುವರೆಯುತ್ತದೆ. ಇದಾದ ನಂತರ, ವಿರೋಧ ಪಕ್ಷವು ತನ್ನ ಉತ್ತರ ಭಾಷಣ ನೀಡುತ್ತದೆ.

ಉತ್ತರ ನೀಡುವ ಭಾಷಣದಲ್ಲಿ, ವಿರೋಧ ಪಕ್ಷದವರು ಮೊದಲು ಮಾತನಾಡಿ, ನಂತರ ಪರಪಕ್ಷದವರು ಮಾತನಾಡುವರು. ಪ್ರತಿಪಾದನೆಯ ಕೊನೆಯ ಸದಸ್ಯರು ಉತ್ತರ ಭಾಷಣ ಮಾಡುವುದರೊಂದಿಗೆ ಚರ್ಚೆಯು ಅಂತ್ಯಗೊಳ್ಳುತ್ತದೆ. ಉತ್ತರ ಭಾಷಣಕ್ಕೆ ನಾಲ್ಕು ನಿಮಿಷಗಳನ್ನು ನಿಗದಿಪಡಿಸಲಾಗುತ್ತದೆ; ಯಾವುದೇ POIಗೆ ಅವಕಾಶವಿರುವುದಿಲ್ಲ.

ನೀತಿ ಚರ್ಚೆ (ಪಾಲಿಸಿ ಡಿಬೇಟ್)

ಬದಲಾಯಿಸಿ

'ಸರ್ಕಾರದ ನೀತಿಯಲ್ಲಿ ಬದಲಾವಣೆ ತರಬೇಕು' ಎಂದು ಮಂಜೂರಾದ ನಿರ್ಣಯವೊಂದರಿಂದ ಆಯ್ದುಕೊಳ್ಳಲಾದ ನೀತಿಯ ಕುರಿತು, ಇಬ್ಬರು ಚರ್ಚಾಸ್ಪರ್ಧಿಗಳುಳ್ಳ ಎರಡು ತಂಡಗಳ ನಡುವಿನ ಚರ್ಚೆಯ ಶೈಲಿಗೆ 'ನೀತಿ ಚರ್ಚೆ' ಎನ್ನಲಾಗಿದೆ. ತಂಡಗಳು ಸಮಾನ್ಯವಾಗಿ ಪರ್ಯಾಯ ಸರದಿಯಲ್ಲಿ ಸ್ಪರ್ಧಿಸಿ, 'ಪರ' ಅಥವಾ 'ವಿರೋಧ'ವಾಗಿ ವಾದವನ್ನು ಮಂಡಿಸುತ್ತವೆ. ಚರ್ಚಾಸ್ಪರ್ಧೆಯ ಹಲವು ರೂಪಗಳಲ್ಲಿ, ಇಡೀ ವರ್ಷಕ್ಕೇ ಅಥವಾ ಮತ್ತೊಂದು ಅವಧಿಗೆ ಒಂದು ರೂಪಿಸಲಾದ ನಿಗದಿತ ವಿಷಯಗಳಿರುತ್ತವೆ. ಸಂಸತ್ ಚರ್ಚೆಗೆ ಹೋಲಿಸಿದರೆ, ನೀತಿ ಚರ್ಚೆಯು ಹೆಚ್ಚಾಗಿ ಸಂಶೋಧಿತ ಸಾಕ್ಷ್ಯವನ್ನು ಅವಲಂಬಿಸುತ್ತದೆ ಹಾಗು ನ್ಯಾಯಸಮ್ಮತ ವಾದವೆಂದು ಪರಿಗಣಿಸಲಾದ ವಾದವು ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುತ್ತದೆ. ಇದರಲ್ಲಿ ಪ್ರತಿ-ತಂತ್ರಗಳು, ಕ್ರಾಂತಿ ಸಿದ್ಧಾಂತ ಹಾಗು ಚರ್ಚಾ-ಚಟುವಟಿಕೆಗಳ ಕುರಿತು ಸೈದ್ಧಾಂತಿಕ ಪ್ರಮಾಣಗಳ ಚರ್ಚೆಗಳು ಸೇರಿರುತ್ತವೆ. ಪ್ರತಿಯೊಬ್ಬ ಚರ್ಚಾಸ್ಪರ್ಧಿ ಮಾತನಾಡುವ ಭಾಷಣದಲ್ಲಿ 'ಭಾಷಣಾ ಅಂಕಗಳು' ಆತನ ಭಾಷಣ ಕಲೆಯಿಂದ ಪ್ರತಿಬಿಂಬಿತವಾಗುತ್ತದೆ. ಪ್ರತಿ ಸುತ್ತಿನಲ್ಲಿ ಮಂಡಿಸಲಾದ ಸಾಕ್ಷ್ಯ ಹಾಗು ತರ್ಕವನ್ನು ಆಧರಿಸಿ ಸಾಮಾನ್ಯವಾಗಿ ಯಾರು "ಜಯ" ಗಳಿಸಿದರು ಎಂಬುದನ್ನು ನಿರ್ಣಯಿಸಲಾಗುತ್ತದೆ. ಇದಲ್ಲದೆ, ಚರ್ಚೆಯ ಇನ್ನೂ ಕೆಲವು ಭಾಗಗಳಲ್ಲಿ, ಹೆಚ್ಚಿನ ಸಾಕ್ಷ್ಯ ಹಾಗು ಮಾಹಿತಿಯನ್ನು ಒದಗಿಸುವ ಸಲುವಾಗಿ ಹಾಗು ಪ್ರತಿಪಕ್ಷವನ್ನು ಎದುರಿಸುವ ಸಲುವಾಗಿ ಚರ್ಚಾಸ್ಪರ್ಧಿಗಳು "ವೇಗವಾಗಿ" (ಶೀಘ್ರವಾಗಿ ಮಾತನಾಡುವುದು) ಮಾತನಾಡಬಹುದು. ಪ್ರತಿಸ್ಪರ್ಧಿಯನ್ನು ಮಾತಿನಲ್ಲಿ "ಮೀರಿಸಲೆಂದು" ಜನರು ಈ ರೀತಿ ವೇಗವಾಗಿ ಮಾತನಾಡುವರು. ಒಟ್ಟಾರೆ, ಚರ್ಚಾಸ್ಪರ್ಧಿಯು ಅಲ್ಪಾವಧಿಯಲ್ಲಿ ಹಲವು ವಿಷಯಗಳ ಕುರಿತು ಬಹಳ ಮಾಹಿತಿಯನ್ನು ಒದಗಿಸುತ್ತಾರೆ; ಹಲವು ವಿಷಯಗಳ ಕುರಿತು ಪ್ರಸ್ತಾಪಿಸುತ್ತಾರೆ, ಇದರಿಂದಾಗಿ ಪ್ರತಿಸ್ಪರ್ಧಿಗೆ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಲು ಸಾಧ್ಯವಾಗದಿರಬಹುದು ಜೊತೆಗೆ ಕೆಲವೊಂದು ವಾದಗಳನ್ನು ಉಪೇಕ್ಷಿಸಿ ಮುಂದಿನದಕ್ಕೆ ಗಮನ ಹರಿಸಬೇಕು. ಇಂತಹ ವಿಷಯಗಳ ಮೇಲೆ ಮೂಲ ತಂಡವು ನಂತರ ಕೇಂದ್ರೀಕರಿಸುತ್ತದೆ.

ನೀತಿ ಚರ್ಚೆಯನ್ನು ಸಾಮಾನ್ಯವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ನಡೆಸಲಾಗುತ್ತದೆ (ಇದನ್ನು ಇಲ್ಲಿ ಕೆಲವೊಮ್ಮೆ ಪಾಟಿಸವಾಲು (ಕ್ರಾಸ್-ಎಕ್ಸಾಮಿನೆಶನ್) ಅಥವಾ CX ಚರ್ಚೆ ಎನ್ನಲಾಗಿದೆ). ಆದಾಗ್ಯೂ, ಯುರೋಪ್‌ ಮತ್ತು ಜಪಾನ್‌ನಲ್ಲಿಯೂ ಸಹ ಈ ರೀತಿಯ ಚರ್ಚೆಗೆ ಯತ್ನಿಸಲಾಗಿದೆ; ಇದು ನಿಸ್ಸಂಶಯವಾಗಿ ಚರ್ಚೆಯ ಇತರ ವಿಧಾನಗಳ ಮೇಲೆ ಪ್ರಭಾವ ಬೀರಿದೆ. ಇದರ ವಿಕಸನವನ್ನು ಕೆಲವರು ಒಂದು ಹೆಚ್ಚಿದ ಗಹನ ಶೈಲಿಯೆಂದು ಪರಿಗಣಿಸುತ್ತಾರೆ.

ಶಾಸ್ತ್ರೀಯ ಚರ್ಚೆ

ಬದಲಾಯಿಸಿ

ಶಾಸ್ತ್ರೀಯ ಚರ್ಚೆಯೆಂಬುದು ತುಲನಾತ್ಮಕವಾಗಿ ಹೊಸ ಮಾದರಿಯ ಚರ್ಚೆಯಾಗಿದೆ. ಇದನ್ನು ಮೊದಲ ಬಾರಿಗೆ ಮಿನೆಸೊಟಾ ರಾಜ್ಯದಲ್ಲಿ ರೂಪಸಿ, ರೂಢಿಸಿಕೊಳ್ಳಲಾಯಿತು. ನೀತಿ ಚರ್ಚೆಗೆ ಪರ್ಯಾಯವಾಗಿ ಈ ಮಾದರಿಯನ್ನು ರೂಪಿಸಲಾಯಿತು. ನೀತಿ ಚರ್ಚೆಯ ಅಭಿವೃದ್ಧಿಯಿಂದಾಗಿ, ಚರ್ಚೆಯ ಒಂದು ತೀವ್ರವಾದ ವಿಶಿಷ್ಟ ರೂಪವಾಗಿ ಹೊರಹೊಮ್ಮಿದೆ ಎಂದು ಕೆಲವು ತೀರ್ಪುಗಾರರು ಹಾಗು ತರಬೇತುದಾರರು ಅಭಿಪ್ರಾಯ ಪಡುತ್ತಾರೆ. ಇದು ಯಾರಿಗೂ ಅರ್ಥವಾಗದ ವೇಗದ ಭಾಷಣದ ಮೇಲೆ ಅತ್ಯಂತ ಅವಲಂಬನೆಯನ್ನು ಹೊಂದಿರುವುದರ ಜೊತೆಗೆ ಸಾಮಾನ್ಯವಾಗಿ ನಿರರ್ಥಕವೆನಿಸುವಂತಹ ನೈಜ-ಪ್ರಪಂಚದ ವಾದಗಳ ಬದಲಿಗೆ 'ರೂಪು-ರೇಖೆಯ' ವಾದಗಳೆಡೆಗೆ ಕಡಿಮೆ ಒಟ್ಟು ನೀಡುತ್ತವೆ. ನೀತಿ ಚರ್ಚೆಗೆ ಸಮಾನಾಗಿರುವ ರಚನೆ ಹೊಂದಿರುವ ಶಾಸ್ತ್ರೀಯ ಚರ್ಚೆಯು ತರ್ಕ ಮತ್ತು ನೈಜ-ಪ್ರಪಂಚದ ಚರ್ಚೆಗೆ ಒತ್ತು ನೀಡುತ್ತದೆ. ಈ ಕಾರಣಕ್ಕಾಗಿ, ಇದನ್ನು 'ಪಾಲಿಸಿ ಲೈಟ್' (ಹಗುರಗೊಳಿಸಲಾದ/ತಿಳಿಗೊಳಿಸಲಾದ ನೀತಿ ಚರ್ಚೆ)‌ ಎನ್ನಲಾಗಿದೆ.

ಪ್ರತಿಪಾದಿಸುವ ಪರಪಕ್ಷವು ಹೊಸ ನೀತಿಯನ್ನು ಪ್ರತಿಪಾದಿಸುವ ನೀತಿ ಚರ್ಚೆಗೆ ವ್ಯತಿರಿಕ್ತವಾಗಿ, ಶಾಸ್ತ್ರೀಯ ಚರ್ಚೆಯು ಇನ್ನಷ್ಟು ಸರಳವಾಗಿದೆ: ಋತುವಿನ ಆರಂಭದಲ್ಲಿ ಒಂದು ನಿರ್ಣಯವನ್ನು ಆಯ್ದುಕೊಳ್ಳಲಾಗಿದೆ, ಇದರಲ್ಲಿ ಪ್ರತಿಪಾದನಾ ಪಕ್ಷವು ದೃಢೀಕರಿಸುತ್ತದೆ, ವಿರೋಧ ಪಕ್ಷವು ನಿರಾಕರಿಸುತ್ತದೆ. ನಿರ್ಬಂಧಗಳಿಂದ ಉಂಟಾಗುವ ವಿಸ್ತಾರಕ್ಕಿಂತ ವಿಷಯದ ಆಳಕ್ಕೆ ಹೆಚ್ಚು ಒತ್ತು ನೀಡಲಾಗಿದೆ, ಇದು ಚರ್ಚೆಯಲ್ಲಿ ಒಂದು ಆಸಕ್ತಿಕರ ಸುತ್ತಾಗಿ ಪರಿಣಮಿಸುತ್ತದೆ, ಇಲ್ಲವಾದಲ್ಲಿ ಇತರ ಮಾದರಿಗಳಂತೆ ಇದು ನೀರಸವಾದ ವಾದ ಸರಣಿಯನ್ನು ಉಂಟುಮಾಡಬಹುದು.

ಪುರ್ವಸಿದ್ಧತೆಯಿಲ್ಲದ ಚರ್ಚೆ

ಬದಲಾಯಿಸಿ

ಯಾವುದೇ ಪೂರ್ವಸಿದ್ಧತೆಯಿಲ್ಲದೆ ಮಾತನಾಡುವ ಚರ್ಚೆಗಳಿಗೆ ಪೂರ್ವಸಿದ್ಧತೆಯಿಲ್ಲದ ಚರ್ಚೆಗಳು ಎನ್ನಲಾಗಿದೆ. ಇದರಲ್ಲಿ ಮೊದಲ ಮತ್ತು ಎರಡನೆಯ ಭಾಷಣಕಾರರ ಎರಡು ತಂಡಗಳುಂಟು. ಪ್ರಚಲಿತ ವಿದ್ಯಮಾನಗಳು ಹಾಗೂ ವಿವಿಧ ಅಂಕಿ-ಅಂಶಗಳನ್ನು ಉಲ್ಲೇಖಿಸಲು ಹಲವು ತೀರ್ಪುಗಾರರು ಅವಕಾಶ ನೀಡುವರು. (ಈ ಉಲ್ಲೇಖಗಳನ್ನು ವಿರೋಧ ಪಕ್ಷದವರು ಪ್ರಶ್ನಿಸುವ ಸಾಧ್ಯತೆಯಿದೆ). ಚರ್ಚೆಗೆ ಅಲ್ಪಸಮಯವಿರುವಾಗ ಚರ್ಚಾಸ್ಪರ್ಧಿಗಳಿಗೆ ನೀಡಲಾದ ಒಂದು ಅಥವಾ ಹಲವು ಲೇಖನ ಹಾಗೂ ನಿರ್ಣಯಗಳು ಮಾತ್ರ ಸಂಶೋಧನಾ ವಸ್ತುವೆಂದು ಅವಕಾಶ ನೀಡಲಾಗಿದೆ. ಪರಪಕ್ಷದ ಮೊದಲ ಭಾಷಣಕಾರರು ಸಮರ್ಥನಾ ವಾದದೊಂದಿಗೆ ಚರ್ಚೆಯು ಆರಂಭವಾಗುವುದು. ಇದರ ನಂತರ ವಿರೋಧ ಪಕ್ಷದ ಭಾಷಣಕಾರರು ಇದಕ್ಕೆ ಪ್ರತಿಯಾಗಿ ಭಾಷಣ ಮಾಡುವರು; ನಂತರ ಕ್ರಮವಾಗಿ ಪರಪಕ್ಷದ ಸಮರ್ಥನಾ ಭಾಷಣ, ನಂತರ ವಿರೋಧ ಪಕ್ಷದ ಭಾಷಣಕಾರರ ಪ್ರತಿವಾದ ಭಾಷಣ ಮಾಡುವರು. ಇಂತಹ ಪ್ರತಿಯೊಂದು ಭಾಷಣವೂ ಆರು ನಿಮಿಷ ಅವಧಿಯದ್ದಾಗಿರುತ್ತದೆ. ನಂತರ ಎರಡು ನಿಮಿಷಗಳ ಕಾಲ ಪಾಟಿಸವಾಲು ನಡೆಯುತ್ತದೆ. ಆನಂತರ, ಪರಪಕ್ಷದ ಮೊದಲ ಭಾಷಣಕಾರರು ಮತ್ತು ವಿರೋಧ ಪಕ್ಷದ ಮೊದಲ ಭಾಷಣಕಾರರು ಕ್ರಮವಾಗಿ ಸಮರ್ಥನ ಹಾಗೂ ನಿರಾಕರಣ ವಾದ ಮಾಡುವರು. ಆನಂತರ ಉಭಯ ಪಕ್ಷಗಳ ಎರಡನೆಯ ಭಾಷಣಕಾರರು ಇದೇ ರೀತಿಯ ವಾದ ನಡೆಸುವರು. ಈ ರೀತಿಯ ಭಾಷಣಗಳು ತಲಾ ನಾಲ್ಕು ನಿಮಿಷಗಳ ಕಾಲ ನಡೆಯುತ್ತವೆ. ನಿರಾಕರಣದ ಸಮಯ ಹೊಸ ಅಂಶಗಳನ್ನು ಮಂಡಿಸಲು ಅವಕಾಶವಿರುವುದಿಲ್ಲ.

ಈ ರೀತಿಯ ಚರ್ಚೆಯು ಸಾಮಾನ್ಯವಾಗಿ ಮೂರು ಮುಖ್ಯ ವಾದಾಂಶಗಳನ್ನು ಆಧರಿಸಿರುತ್ತವೆ, ಆದರೂ ತಂಡವೊಂದು ಆಗೊಮ್ಮೆ-ಈಗೊಮ್ಮೆ ಎರಡು ಅಥವಾ ನಾಲ್ಕು ವಾದಾಂಶಗಳನ್ನು ಬಳಸಬಹುದಾಗಿದೆ. ಪರಪಕ್ಷವು ಗೆಲ್ಲಬೇಕಾದರೆ, ಎಲ್ಲಾ ನಕಾರಾತ್ಮಕ ವಾದಗಳನ್ನು ತಳ್ಳಿಹಾಕಿ, ತಮ್ಮ ಎಲ್ಲಾ ವಾದಗಳನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಈ ವಾದಾಂಶಗಳ ಪೈಕಿ ಒಂದನ್ನು ಸಮರ್ಥಿಸಲು ಚರ್ಚೆಯಲ್ಲಿ ಪ್ರಸ್ತುತಪಡಿಸಲಾದ ಮಾಹಿತಿಗಳನ್ನು ಒಟ್ಟುಗೂಡಿಸಬೇಕು, ಅಥವಾ 'ಸ್ಥಾಪಿಸ'ಬೇಕು. ಪೂರ್ವಸಿದ್ಧತೆಯಿಲ್ಲದ ಚರ್ಚೆಯಲ್ಲಿ ಬಹಳಷ್ಟು ನೀತಿ ಚರ್ಚೆಗೆ ಸದೃಶವಾಗಿದೆ. ಆದಾಗ್ಯೂ, ಒಂದು ಪ್ರಮುಖ ಭಿನ್ನತೆಯೆಂದರೆ, ಪೂರ್ವಸಿದ್ಧತೆಯಿಲ್ಲದ ಚರ್ಚೆಯು ನಿರ್ಣಯದ ಅಳವಡಿಕೆಗೆ ಕಡಿಮೆ ಗಮನವನ್ನು ಹರಿಸುತ್ತದೆ.

ಲಿಂಕನ್‌-ಡಗ್ಲಸ್‌ ಚರ್ಚೆ

ಬದಲಾಯಿಸಿ

ಲಿಂಕನ್‌-ಡಗ್ಲಸ್ ನಡುವಿನ ಚರ್ಚೆಯು ಪ್ರಾಥಮಿಕವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರೌಢಶಾಲಾ ಚರ್ಚೆಯ ಒಂದು ಮಾದರಿಯಾಗಿದೆ (ಆದಗ್ಯೂ, ಇದು ಒಂದು ಕಾಲೇಜು ಮಾದರಿಯಾದ NFA LD ಯನ್ನು ಒಳಗೊಂಡಿದೆ) ಇದನ್ನು 1858ರ ಲಿಂಕನ್‌-ಡಗ್ಲಸ್‌ ಡಿಬೇಟ್ಸ್ ಎಂದು ಹೆಸರಿಸಲಾಗಿದೆ. ಈ ಸ್ಪರ್ಧೆಯು ತಾತ್ತ್ವಿಕ ಸಿದ್ಧಾಂತಗಳನ್ನು ಹಿಡಿದು ನೈಜ ಪ್ರಪಂಚದ ವಿಚಾರಗಳ ತನಕ ಪರಸ್ಪರ ಚರ್ಚೆಗಳಿಗೆ ಕೇಂದ್ರೀಕರಿಸಿದೆ. ಚರ್ಚಾಸ್ಪರ್ಧಿಗಳು ಸಾಮಾನ್ಯವಾಗಿ ಸುತ್ತಿನಿಂದ ಸುತ್ತಿನವರೆಗೆ, ನಿರ್ಣಯವನ್ನು "ಸಮರ್ಥಿಸುವ" ಪಕ್ಷವಾಗಿ ಅಥವಾ ಅದನ್ನು ತಿರಸ್ಕರಿಸುವ "ವಿರೋಧಿ" ಪಕ್ಷವಾಗಿ ವಾದ ಮಂಡಿಸುತ್ತಾರೆ. ಎರಡು ತಿಂಗಳಿಗೊಮ್ಮೆ ಬದಲಾಗುವ ನಿರ್ಣಯವು, ಯಾವುದಾದರೂ ಕೆಲವು ನೀತಿ ಅಥವಾ ಕ್ರಮವು ಒಂದು ನಿರ್ದಿಷ್ಟ ಮೌಲ್ಯಕ್ಕೆ ಹೊಂದಿಕೊಳ್ಳುತ್ತದೆಯೇ ಎಂಬುದನ್ನು ಪ್ರಶ್ನಿಸುತ್ತದೆ.

ನೀತಿ ಚರ್ಚೆಗೆ ಪರ್ಯಾಯವೆಂದು ಸ್ಥಾಪಿಸಲಾಗಿದ್ದರೂ, ನೀತಿ ಚರ್ಚೆಯಲ್ಲಿ ಆರಂಭಗೊಂಡ ಕೆಲವು ತಂತ್ರಗಳನ್ನು ಒಳಗೊಳ್ಳಲು ಒಂದು ತೀವ್ರವಾದ ಚಟುವಟಿಕೆಗಳಿರುತ್ತವೆ(ಜೊತೆಗೆ, ಅದಕ್ಕೆ ಅನುಗುಣವಾಗಿ ಒಂದು ತೀವ್ರವಾದ ಪ್ರತಿಕ್ರಿಯಾ ಚಟುವಟಿಕೆಗಳಿರುತ್ತವೆ) ತಂತ್ರಗಳು, ಪ್ರತಿ-ತಂತ್ರಗಳು, ಕ್ರಾಂತಿ ಸಿದ್ಧಾಂತ, ಅತ್ಯಾಧುನಿಕ ಸಿದ್ಧಾಂತ, ಸೈದ್ಧಾಂತಿಕ ಆಧಾರದ ಬಗೆಗಿನ ಚರ್ಚೆಗಳು ಹಾಗೂ ಸ್ವತಃ ನಿಯಮಾವಳಿಗಳ ಕುರಿತಾದ ಚರ್ಚೆ ಹಾಗೂ ಟೀಕೆ-ವಿಮರ್ಶೆಗಳು ಇವೆಲ್ಲವೂ ಸಾಂಧರ್ಬಿಕವಾಗಿ ಎನ್ನುವುದಕ್ಕಿಂತಲೂ ಹೆಚ್ಚು ಬಾರಿ ಬಳಕೆಯಾಗಿದೆ, ಅಲ್ಲದಿದ್ದರೂ ಸಾರ್ವತ್ರಿಕವಾಗಿ ಬಳಕೆಯಾಗಿದೆ. ಸಾಂಪ್ರದಾಯಿಕ L-D ಚರ್ಚೆಯು, ನೀತಿ ಚರ್ಚೆಯ "ಪರಿಭಾಷೆ"ಯಿಂದ ಮುಕ್ತವಾಗಲು ಯತ್ನಿಸುತ್ತವೆ. ಲಿಂಕನ್‌-ಡಗ್ಲಸ್‌ ಭಾಷಣಗಳು ಸಂವಾದದ ಗತಿಯು, ನಿಮಿಷಕ್ಕೆ 300 ಪದಗಳಿಗಿಂತಲೂ ಹೆಚ್ಚಿನ ವೇಗದಲ್ಲಿರುತ್ತವೆ (ವಾದಗಳ ಸಂಖ್ಯೆ ಹಾಗೂ ಪ್ರತಿಯೊಂದು ವಾದದ ಬೆಳವಣಿಗೆಯನ್ನು ಗರಿಷ್ಠಗೊಳಿಸುವ ಯತ್ನದಲ್ಲಿ). ಈ ತಂತ್ರಕ್ಕೆ ವೇಗದ ತಂತ್ರ ಎನ್ನಲಾಗಿದೆ. ಮೊದಲೇ ಯೋಚಿಸಿ ಗುಟ್ಟಾಗಿಟ್ಟುಕೊಂಡ ಸಾಕ್ಷ್ಯದ ಮೇಲೆ ಈಗ ಹೆಚ್ಚು ಒತ್ತು ನೀಡಲಾಗಿದೆ; ಆದರೂ, ನೀತಿ ಚರ್ಚೆಗೆ ಹೋಲಿಸಿದರೆ ಲಿಂಕನ್‌-ಡಗ್ಲಸ್‌ ಚರ್ಚೆಯಲ್ಲಿ ಇದು ಕಡಿಮೆಯಿದೆ.

ಈ ವಿದ್ಯಮಾನಗಳು ಚರ್ಚಾಸ್ಪರ್ಧಿಗಳು, ತೀರ್ಪುಗಾರರು ಹಾಗೂ ತರಬೇತುದಾರರ ನಡುವಿನ ಚಟುವಟಿಕೆಗಳಲ್ಲೇ ತೀವ್ರ ಬಿರುಕಿಗೆ ಕಾರಣವಾಗಿದೆ. ಇವರಲ್ಲಿ ಕೆಲವರು ಈ ಬದಲಾವಣೆಗಳನ್ನು ಸಮರ್ಥಿಸಿ ಅಂಗೀಕರಿಸಿದರೆ, ಇನ್ನು ಕೆಲವರು ಅದನ್ನು ಉತ್ಕಟವಾಗಿ ವಿರೋಧಿಸುತ್ತಾರೆ.

ನೀತಿ ಹಾಗೂ ಲಿಂಕನ್‌-ಡಗ್ಲಸ್‌ ಚರ್ಚಾ ಸ್ಪರ್ಧಾವಳಿಗಳು ಏಕಕಾಲೀನವಾಗಿ ಒಂದೇ ಶಾಲೆಯಲ್ಲಿ ಸಾಮಾನ್ಯವಾಗಿ ನಡೆಸಲಾಗುತ್ತದೆ.

ಕಾರ್ಲ್‌ ಪಾಪ್ಪರ್ ಮಾದರಿಯ‌ ಚರ್ಚೆ

ಬದಲಾಯಿಸಿ

ಖ್ಯಾತ ತತ್ತ್ವಶಾಸ್ತ್ರಜ್ಞ ಕಾರ್ಲ್‌ ಪಾಪ್ಪರ್‌ ಅವರ ಗೌರವಾರ್ಥ ಆರಂಭಿಸಲಾದ ಈ ಚರ್ಚಾ ಮಾದರಿಯನ್ನು, ಪೂರ್ವ ಯುರೋಪಿಯನ್‌ ಹಾಗೂ ಮಧ್ಯ ಏಷ್ಯನ್‌ ವಲಯದ ಪ್ರೌಢ ಶಾಲೆಗಳಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಒಪನ್‌ ಸೊಸೈಟಿ ಇನ್ಸ್ಟಿಟ್ಯೂಟ್ ಮೂಲತಃ ಇದನ್ನು ಸಂದರ್ಭಕ್ಕೆ ತಕ್ಕಂತೆ ತಂಡ ಚರ್ಚಾ ಮಾದರಿಯನ್ನು ರೂಪಿಸಿತು. ಕಾರ್ಲ್‌ ಪಾಪ್ಪರ್‌ ಚರ್ಚಾ ಮಾದರಿಯು ಪ್ರೌಢಶಾಲಾ ವಿದ್ಯಾರ್ಥಿಗಳ ಕಲಿಕಾ ಮಾದರಿಯಾಗಿ ಜನಪ್ರಿಯತೆಯನ್ನು ಗಳಿಸಿದೆ. ಈ ಮಾದರಿಯು ಸಂಗತವಾದ ಹಾಗು ಸಾಮಾನ್ಯವಾಗಿ ಗಹನವಾದ ವಿಶ್ಲೇಷಕ ಪ್ರತಿಪಾದನೆಗಳ ಮೇಲೆ ಕೇಂದ್ರೀಕೃತವಾಗಿದೆ. ಅತ್ಯಂತ-ಗಹನವಾಗಿ ಆಲೋಚಿಸುವ ನೈಪುಣ್ಯ ಹಾಗೂ ಭಿನ್ನಾಭಿಪ್ರಾಯಗಳನ್ನು ಅಂಗೀಕರಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತದೆ.

ಈ ಗುರಿಗಳನ್ನು ಸುಲಭವಾಗಿ ತಲುಪಲು, ಚರ್ಚಾಸ್ಪರ್ಧಿಗಳು ಮೂರು ಜನರುಳ್ಳ ತಂಡಗಳಲ್ಲಿ ಒಟ್ಟಿಗೆ ಕೆಲಸ ಮಾಡಿ, ವಿಚಾರವೊಂದರ ಎರಡೂ ಬದಿಗಳನ್ನು ಸಂಶೋಧಿಸಬೇಕು.  ಲಿಂಕನ್‌-ಡಗ್ಲಸ್‌ ಚರ್ಚಾ ಮಾದರಿಯಂತೆ ರಚನೆಯಾದ ಈ ಮಾದರಿಯಲ್ಲಿ, ಪ್ರತಿ ತಂಡಕ್ಕೂ ವಾದ ಮಂಡಿಸಲು ಹಾಗು ವಿರೋಧ ಪಕ್ಷಕ್ಕೆ ನೇರವಾಗಿ ಪ್ರಶ್ನೆ ಒಡ್ಡಲು ಅವಕಾಶ ನೀಡಲಾಗುವುದು.  ತಮ್ಮ ಸಕಾರಾತ್ಮಕ ವಾದವನ್ನು ಪ್ರಸ್ತಾಪಿಸಲು, ಅಥವಾ ನಕಾರಾತ್ಮಕ/ನಿರಾಕರಣಾ ವಾದ ಮಾಡಲು, ಪ್ರತಿ ತಂಡದ ಮೊದಲ ಭಾಷಣಕಾರರಿಗೆ ಆರು ನಿಮಿಷಗಳ ಕಾಲಾವಧಿ  ನೀಡಲಾಗುತ್ತದೆ.  ತಮ್ಮ ತಂಡದ ಮುಖ್ಯ ವಾದಗಳನ್ನು ಸಮರ್ಥಿಸಿಕೊಳ್ಳಲು ಪ್ರತಿ ತಂಡದ ಇತರೆ ನಾಲ್ಕು ಭಾಷಣಕಾರರಿಗೆ ಐದು ನಿಮಿಷಗಳ ಕಾಲಾವಕಾಶವಿರುತ್ತದೆ.  ಮೊದಲ ನಾಲ್ಕು ಭಾಷಣೆಗಳಲ್ಲಿ ಪ್ರತಿಯೊಂದರ ನಂತರವೂ ನಿಗದಿಯಾದ ಮೂರು ನಿಮಿಷಗಳನ್ನು ಪಾಟಿಸವಾಲಿಗಾಗಿ ನೀಡಲಾಗಿದೆ. ಈ ಅವಧಿಯಲ್ಲಿ ವಿರೋಧ ಪಕ್ಷವು ತನ್ನ ಸದಸ್ಯರ ಭಾಷಣಗಳಲ್ಲಿ ಏನು ಪ್ರಸ್ತಾಪವಾಗಿದೆ ಎನ್ನುವುದರ ಕುರಿತು ಸ್ಪಷ್ಟನೆ ನೀಡಲು ಅವಕಾಶವಿದೆ.

ಪ್ರತಿ ವರ್ಷವೂ, ಇಂಟರ್ನ್ಯಾಷನಲ್ ಡಿಬೇಟ್ ಎಜುಕೇಶನ್ ಅಸೋಸಿಯೇಶನ್ ವಾರ್ಷಿಕ ಯೂತ್ ಫೋರಮ್ ನ ಆತಿಥ್ಯ ವಹಿಸುತ್ತದೆ. ಇದೇ ಸಮಯದಲ್ಲಿ ಕಾರ್ಲ್‌ ಪಾಪ್ಪರ್‌ ವರ್ಲ್ಡ್ ಚ್ಯಾಂಪಿಯನ್ಶಿಪ್ಸ್ ನ್ನು ಆಯೋಜಿಸಲಾಗುತ್ತದೆ. ಚರ್ಚಾಸ್ಪರ್ಧೆಗಾಗಿ ಈ ಫೋರಮ್ ನಲ್ಲಿ ವಿಶ್ವದೆಲ್ಲೆಡೆಯಿಂದ ಬಂದಂತಹ ರಾಷ್ಟ್ರಗಳು ಭಾಗವಿಸುವುದರ ಜೊತೆಗೆ 2 ವಾರಗಳ ಚರ್ಚಾ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಾರೆ.

ಶಾಸನಸಭೆಯ ಅನುಕರಣೆ

ಬದಲಾಯಿಸಿ

ಪ್ರೌಢಶಾಲಾ ಚರ್ಚಾಸ್ಪರ್ಧೆಗಳು, ಉದಾಹರಣೆಗೆ ಸ್ಟೂಡೆಂಟ್ ಕಾಂಗ್ರೆಸ್ಸ್, ಮಾಡೆಲ್ ಯುನೈಟೆಡ್ ನೇಶನ್ಸ್, ಯುರೋಪಿಯನ್ ಯೂತ್ ಪಾರ್ಲಿಮೆಂಟ್, ಜೂನಿಯರ್ ಸ್ಟೇಟ್ ಆಫ್ ಅಮೆರಿಕ ಹಾಗು ಅಮೆರಿಕನ್ ಲೆಜಿಯನ್'ಸ್ ಬಾಯ್ಸ್ ಸ್ಟೇಟ್ ಅಂಡ್ ಗರ್ಲ್ಸ್ ಸ್ಟೇಟ್ ಗಳು, ಒಂದು ಅಣಕು ಶಾಸನಸಭೆಯನ್ನು ರೂಪಿಸಿ ಅದನ್ನು ಆಧರಿಸಿ ಚರ್ಚೆಗಳನ್ನು ನಡೆಸುತ್ತವೆ.

ಸಮಯಸ್ಪೂರ್ತಿಯ ಚರ್ಚೆ

ಬದಲಾಯಿಸಿ

ಇತರ ಅತ್ಯಂತ ವಿಧ್ಯುಕ್ತ ವಿಧಾನದ ಚರ್ಚೆಗಳಿಗೆ ಹೋಲಿಸಿದರೆ ಸಮಯಸ್ಪೂರ್ತಿಯ ಚರ್ಚೆಗಳು ತುಲನಾತ್ಮಕವಾಗಿ ಅನೌಪಚಾರಿಕ ಚರ್ಚಾ ಮಾದರಿಯಾಗಿದೆ. ಚರ್ಚೆಯಲ್ಲಿ ಭಾಗವಹಿಸುವವರಿಗೆ ಚರ್ಚೆಯ ವಿಷಯವನ್ನು ಸ್ಪರ್ಧೆಯ ಆರಂಭಕ್ಕೆ ಹದಿನೈದು-ಇಪ್ಪತ್ತು ನಿಮಿಷಗಳ ಆರಂಭ ಮುಂಚೆ ನೀಡಲಾಗುತ್ತದೆ. ಚರ್ಚೆಯ ಮಾದರಿಯು ತುಲನಾತ್ಮಕವಾಗಿ ಸರಳವಾಗಿದೆ. ಪ್ರತಿ ತಂಡದ ಪ್ರತಿ ಸದಸ್ಯರೂ ಪರ್ಯಾಯ ಸರದಿಯಲ್ಲಿ ಐದು ನಿಮಿಷಗಳ ಕಾಲ ಮಾತನಾಡುವರು. ಇತರ ಮಾದರಿಗಳಂತೆ ಹತ್ತು ನಿಮಿಷಗಳ ಚರ್ಚಾ ಅವಧಿಯ ನಂತರ "ಮುಕ್ತ ಪಾಟಿಸವಾಲಿಗೆ" ಅವಧಿಯಿರುತ್ತದೆ, ಹಾಗು ನಂತರ ಐದು ನಿಮಿಷಗಳ ವಿರಾಮವನ್ನು ನೀಡಲಾಗುತ್ತದೆ(ಇದನ್ನು ಇತರ ಮಾದರಿಗಳ ತಯಾರಿ ಸಮಯಕ್ಕೆ ಹೋಲಿಸಬಹುದಾಗಿದೆ). ವಿರಾಮದ ನಂತರ, ನಿರಾಕರಣಾ ವಾದ ಮಾಡಲು ಪ್ರತಿ ತಂಡಕ್ಕೆ ನಾಲ್ಕು ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ.

ಅಣಕ-ನ್ಯಾಯಾಲಯ ಮತ್ತು ಅಣಕು-ವಿಚಾರಣೆ

ಬದಲಾಯಿಸಿ

ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಇಂಗ್ಲಿಷ್‌-ಸ್ಪೀಕಿಂಗ್ ಯೂನಿಯನ್ವು ರಾಷ್ಟ್ರೀಯ ಚರ್ಚಾ(ಮೂಟಿಂಗ್‌) ಸ್ಪರ್ಧಾವಳಿಗಳನ್ನು ಆಯೋಜಿಸುತ್ತದೆ.

ಸಾರ್ವಜನಿಕ ವೇದಿಕೆ (Po Fo) ಚರ್ಚೆ

ಬದಲಾಯಿಸಿ

ಸಾರ್ವಜನಿಕ ವೇದಿಕೆ ಚರ್ಚೆಯು ನೀತಿ ಚರ್ಚೆ ಹಾಗೂ ಲಿಂಕನ್‌-ಡಗ್ಲಸ್‌ ಚರ್ಚೆಯ ಅಂಶಗಳೆರಡನ್ನೂ ಒಟ್ಟುಗೂಡಿಸುತ್ತದೆ. ಇದರಲ್ಲಿ ಭಾಷಣದ ಉದ್ದವು ಕಡಿಮೆಯಿರುತ್ತದೆ, ಆದರೆ ಚರ್ಚಾ ಅವಧಿಯು ದೀರ್ಘವಾಗಿರುತ್ತದೆ, ಇದನ್ನು "ಕ್ರಾಸ್-ಫೈರ್ಸ್" ಎಂದು ಕರೆಯಲಾಗುತ್ತದೆ, ಇದು ಚರ್ಚಾಸ್ಪರ್ಧಿಗಳ ನಡುವೆ ಪರಸ್ಪರ ಚರ್ಚೆಯ ಅವಧಿ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ನ್ಯಾಷನಲ್ ಫೋರೆನ್ಸಿಕ್ ಲೀಗ್‌ನಿಂದ ಪ್ರೌಢಶಾಲೆಗಳಲ್ಲಿ ಪರಿಚಯಗೊಂಡ ನಂತರ ಈ ಚರ್ಚಾ ಮಾದರಿಯು, ಬಹಳಷ್ಟು ಜನಪ್ರಿಯವಾಗಿದೆ. ತಾರ್ಕಿಕ ಮಂಡನೆಯ ಮೇಲೆ ಅದು ಸರಳವಾಗಿ ಒತ್ತುಕೊಡುವ ರೀತಿಯಿಂದಾಗಿ ಚರ್ಚಾಸ್ಪರ್ಧಿಗಳು ಹಾಗು ಪ್ರೇಕ್ಷಕರಲ್ಲಿ ಜನಪ್ರಿಯತೆ ಗಳಿಸಿದೆ (ಸೂಕ್ತವೆಂದು ಸಾಕ್ಷ್ಯಗಳು ಬೆಂಬಲಿಸಿವೆ) ಜೊತೆಗೆ ನೈಜ ಪ್ರಪಂಚದ ವಾದ ಮತ್ತು ಭಾಷಣಾ ನೈಪುಣ್ಯಗಳನ್ನು ಬೆಳೆಸುವ ಕ್ಷಮತೆಯಿಂದಾಗಿಯೂ ಸಹ ಅತ್ಯಂತ ಜನಪ್ರಿಯವಾಗಿದೆ.

ಪ್ಯಾರಿಸ್‌ ಶೈಲಿಯ ಚರ್ಚೆ

ಬದಲಾಯಿಸಿ

ಇದು ಒಂದು ಹೊಸತಾದ, ನಿರ್ದಿಷ್ಟವಾದ ಫ್ರೆಂಚ್‌ ಮಾದರಿಯಾಗಿದೆ. ತಲಾ ಐದು ಜನರನ್ನು ಹೊಂದಿರುವ ಎರಡು ತಂಡಗಳು ಪ್ರಸ್ತಾಪವೊಂದರ ಕುರಿತು ಚರ್ಚೆ ನಡೆಸುತ್ತವೆ. ಒಂದು ತಂಡವು ಪ್ರಸ್ತಾಪವನ್ನು ಸಮರ್ಥಿಸಿದರೆ; ವಿರೋಧ ಪಕ್ಷವು ಅದನ್ನು ವಿಫಲಗೊಳಿಸಲು ಯತ್ನಿಸುತ್ತದೆ. ವಾದಗಳ ಗುಣಮಟ್ಟ, ಭಾಷಣಕಲೆ, ಭಾಷಣಕಾರನ ವೈಯಕ್ತಿಕ ಗುಣ, ಅವನ ಹಾಸ್ಯಪ್ರಜ್ಞೆ, ತನ್ನದೇ ಆದ ರೀತಿಯಲ್ಲಿರುವ ಅವನ ಯೋಚನಾ ಸಾಮಾರ್ಥ್ಯ, ಇದೆಲ್ಲದರ ಜೊತೆಗೆ ನಿಸ್ಸಂದೇಹವಾಗಿ ತಂಡದ ಕೆಲಸವೆಲ್ಲವನ್ನು ಆಧರಿಸಿ ಒಂದು ಚರ್ಚೆಯ ಮಟ್ಟವನ್ನು ನಿರ್ಣಯಿಸಲಾಗುತ್ತದೆ.

ಪ್ರತಿಪಾದನೆಯ ಮೊದಲ ಭಾಷಣಕಾರ (ಪ್ರಧಾನ ಮಂತ್ರಿ) ಚರ್ಚೆಯನ್ನು ಆರಂಭಿಸುವರು. ನಂತರ ವಿರೋಧ ಪಕ್ಷದ ಮೊದಲ ಭಾಷಣಕಾರರು (ಚುನಾವಣೆಯಲ್ಲಿ ಗೆದ್ದಾಗ ಪ್ರಧಾನಿಯಾಗುವವರು), ಆಮೇಲೆ ಪರಪಕ್ಷದ ಎರಡನೆಯ ಭಾಷಣಕಾರ.... ಹೀಗೆ ಚರ್ಚೆಯು ಮುಂದುವರೆಯುವುದು.

ಪ್ರತಿಯೊಬ್ಬ ಭಾಷಣಕಾರರೂ ಆರು ನಿಮಿಷಗಳ ಕಾಲ ಮಾತನಾಡುವರು. ಮೊದಲ ನಿಮಿಷ ಮುಗಿದಾಗ ಹಾಗೂ ಕೊನೆಯ ನಿಮಿಷಕ್ಕೆ ಮುಂಚೆ, ವಿರೋಧ ಪಕ್ಷದ ಚರ್ಚಾಸ್ಪರ್ಧಿಗಳು ಮಾಹಿತಿ ಅಂಶಗಳಿಗೆ ಕೋರಿಕೆಯನ್ನು ಮುಂದಿಡಬಹುದು. ಇದಕ್ಕೆ ಸಭೆಯ ಅಧ್ಯಕ್ಷರು ಅಂಗೀಕರಿಸಬಹುದು ಅಥವಾ ನಿರಾಕರಿಸಬಹುದು (ಆದರೂ ಅವರು ಕನಿಷ್ಠಪಕ್ಷ 2 POI ಗಳನ್ನು ಅಂಗೀಕರಿಸಬೇಕಾಗುತ್ತದೆ).

ಫ್ರೆಂಚ್ ಡಿಬೇಟಿಂಗ್ ಅಸೋಸಿಯೇಶನ್ [] ತನ್ನ ರಾಷ್ಟ್ರೀಯ ಚರ್ಚಾ ಸ್ಪರ್ಧಾವಳಿಯನ್ನು ಈ ಮಾದರಿಯಲ್ಲಿ ಆಯೋಜಿಸುತ್ತದೆ.

ಚರ್ಚೆಯ ಇತರೆ ರೂಪಗಳು

ಬದಲಾಯಿಸಿ

ಆನ್ಲೈನ್‌ ಚರ್ಚೆ

ಬದಲಾಯಿಸಿ

ಹೆಚ್ಚುತ್ತಿರುವ ಅಂತರಜಾಲದ ಲಭ್ಯತೆ ಮತ್ತು ಜನಪ್ರಿಯತೆಯಿಂದಾಗಿ, ಭಿನ್ನ ಅಭಿಪ್ರಾಯಗಳು ನಿರಂತರವಾಗಿ ಉದ್ಭವಿಸುತ್ತಿವೆ. ಆದಾಗ್ಯೂ ಇವುಗಳನ್ನು ಸಾಮಾನ್ಯವಾಗಿ ತೀವ್ರ ಜಗಳಹಾಗು ವಾದಸರಣಿಯ ಇತರ ರೂಪಗಳ ಮೂಲಕ ವ್ಯಕ್ತಪಡಿಸಲಾಗುತ್ತದೆ. ಇದು ಪ್ರಾಥಮಿಕವಾಗಿ ಸಮರ್ಥನೆಗಳನ್ನು ಒಳಗೊಂಡಿದೆ, ಇದರಲ್ಲಿ ವಿಧ್ಯುಕ್ತಗೊಳಿಸಲಾದ ಚರ್ಚಾ ಅಂತರಜಾಲಗಳು, ವಿಶೇಷವಾಗಿ ಆನ್ಲೈನ್ ವೇದಿಕೆಗಳು ಅಥವಾ ಸಮಾಚಾರ ಫಲಕಗಳ ರೂಪಗಳು ಒಳಗೊಂಡಿವೆ. ಚರ್ಚೆಯ ಶೈಲಿಯು ಸಹ ಬಹಳ ಕುತೂಹಲಕಾರಿಯಾಗಿದೆ. ಸಂಶೋಧನೆ ಮತ್ತು ಸರಿಯಾಗಿ ಆಲೋಚಿಸಲಾದ ಅಂಶಗಳು ಮತ್ತು ವಿರುದ್ಧವಾದ ಅಂಶಗಳು ಇದರಲ್ಲಿ ಒಳಗೊಳ್ಳುತ್ತವೆ, ಏಕೆಂದರೆ ಇಲ್ಲಿ ಸ್ಪಷ್ಟವಾಗಿ ಸಮಯದ ಅಭಾವವಿರುತ್ತದೆ (ಆದಾಗ್ಯೂ, ಪ್ರಾಯೋಗಿಕ ಸಮಯ ನಿರ್ಬಂಧಗಳು ಸಾಮಾನ್ಯವಾಗಿ ವಾಸ್ತವದ ಸಂಗತಿಯಾಗಿರುತ್ತದೆ, ಉದಾಹರಣೆಗೆ, ಫಲಕದ ನಮೂದನೆಗಳಲ್ಲಿ ಬರೆದಂತೆ ಐದು ದಿನಗಳ ಅಂತರವಿರಬಾರದು ಇತ್ಯಾದಿ.) ವೇದಿಕೆಗಳು ಉತ್ತಮ ಮಟ್ಟದಲ್ಲಿರುವುದರ ಜೊತೆಗೆ ಒಂದು ಸ್ನೇಹಪೂರ್ವಕ ಮಾದರಿಯಲ್ಲಿ ಆನ್ಲೈನ್ ಚರ್ಚಾಸ್ಪರ್ಧಿಗಳನ್ನು ಆಮಂತ್ರಿಸುತ್ತದೆ, ಈ ರೀತಿಯಾಗಿ ಅವರು ತಮ್ಮ ಪರ ಹಾಗು ವಿರೋಧ ನಿಲುವನ್ನು ಮಂಡಿಸಬಹುದಾಗಿದೆ. ಹಲವರು ತಮ್ಮ ನಿಲುವನ್ನು ಬಲಪಡಿಸಲು, ಅಥವಾ ವಿಷಯದ ಮೇಲಿನ ಬಲಹೀನ ಅಭಿಪ್ರಾಯಗಳನ್ನು ಮಂಡಿಸಲು ಬಳಸುತ್ತಾರೆ, ಹಲವು ಬಾರಿ ವಿದ್ಯುಕ್ತ ಚರ್ಚೆಗಳಂತಹ ಚರ್ಚೆಗಳು(ಮೇಲೆ ನೀಡಲಾಗಿರುವ ಪಟ್ಟಿಗಳ ಮಾದರಿಯಂತೆ) ಅಥವಾ ಸ್ನೇಹಿತರೊಂದಿಗಿನ ವಿನೋದಭರಿತ ಚರ್ಚೆಗಳು. ಸುಲಭವಾದ ಬಳಕೆ ಹಾಗು ಸ್ನೇಹಪೂರ್ವಕ ಪರಿಸರವು ಹೊಸ ಚರ್ಚಾಸ್ಪರ್ಧಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹಲವು ಆನ್ಲೈನ್ ಸಮುದಾಯಗಳು ವ್ಯವಸ್ಥೆ ಕಲ್ಪಿಸುತ್ತವೆ.

U.S. ಅಧ್ಯಕ್ಷೀಯ ಚರ್ಚೆಗಳು

ಬದಲಾಯಿಸಿ

ಕಳೆದ 1976ರಲ್ಲಿ ಸಾರ್ವತ್ರಿಕ ಚುನಾವಣೆಗಳ ನಂತರ, ಅಧ್ಯಕ್ಷಾಕಾಂಕ್ಷಿ ಅಭ್ಯರ್ಥಿಗಳ ನಡುವಿನ ಚರ್ಚೆಗಳು U.S. ರಾಷ್ಟ್ರಾಧ್ಯಕ್ಷೀಯ ಚುನಾವಣಾ ಪ್ರಚಾರಗಳ ಅಂಗವೆನಿಸಿದೆ. ಪ್ರೌಢಶಾಲೆ ಅಥವಾ ಕಾಲೇಜ್‌ ಮಟ್ಟದಲ್ಲಿ ಆಯೋಜಿಸಲಾದ ಚರ್ಚೆಗಳಿಗಿಂತಲೂ ಭಿನ್ನವಾಗಿ, ಚರ್ಚೆಯಲ್ಲಿ ಪಾಲ್ಗೊಳ್ಳುವವರು, ಅದರ ಮಾದರಿ, ಹಾಗು ನಿಯಮಗಳನ್ನು ಸ್ವತಂತ್ರವಾಗಿ ನಿರೂಪಿಸಲಾಗಿಲ್ಲ. ಆದಾಗ್ಯೂ, ದೂರದರ್ಶನ ಜಾಹಿರಾತುಗಳು, ರೇಡಿಯೊ ಸಂವಾದಗಳು, ಸುದ್ದಿ ತುಣುಕುಗಳು ಹಾಗೂ ಚುರುಕು ಸುದ್ದಿಗಳು ಪ್ರಬಲವಾಗಿರುವ ಚುನಾವಣಾ ಪ್ರಚಾರದಲ್ಲಿ, ಪ್ರಮುಖ ಅಭ್ಯರ್ಥಿಗಳನ್ನು ಎದುರು ಬದುರಾಗಿ ನೋಡಲು ಹಾಗು ಕೇಳಲು ಜನತೆಗೆ ಒಂದು ಅಪರೂಪದ ಅವಕಾಶ ದೊರೆಯುತ್ತದೆ. ರಾಷ್ಟ್ರಾಧ್ಯಕ್ಷೀಯ ಚರ್ಚೆಗಳ ಮಾದರಿಗಳು ಪ್ರತಿ ಚುನಾವಣೆಯಲ್ಲಿಯೂ ವಿಭಿನ್ನವಾಗಿ ನಿರೂಪಿಸಲಾದರೂ, ವಿಶಿಷ್ಟವಾಗಿ ಪರಿಮಿತಿಗೊಳಪಟ್ಟು ಹಲವು ಸಾಂಪ್ರದಾಯಿಕ ಮಾದರಿಗಳಿಗಿಂತ ಭಿನ್ನವಾಗಿದೆ. ಇಂತಹ ಚರ್ಚೆಗಳಲ್ಲಿ ಸ್ಪರ್ಧಿಗಳು ಪರಸ್ಪರ ಪ್ರಶ್ನೆ ಕೇಳುವುದು ಹಾಗೂ ನಿರ್ದಿಷ್ಟ ವಿಷಯಗಳ ಮೇಲೆ ಸಮಯದ ನಿರ್ಬಂಧವನ್ನು ಹೇರಲಾಗುತ್ತದೆ.

ರಾಷ್ಟ್ರಾಧ್ಯಕ್ಷೀಯ ಚರ್ಚೆಗಳಿಗೆ ಮದೊಅಲ ಬಾರಿಗೆ, 1976, 1980 ಹಾಗೂ 1984ರಲ್ಲಿ, ಲೀಗ್‌ ಆಫ್‌ ವುಮೆನ್‌ ವೋಟರ್ಸ್‌ ಮಧ್ಯಸ್ಥಿಕೆ ವಹಿಸುತ್ತಿತ್ತು. ಆದರೆ 1987ರಲ್ಲಿ ರಿಪಬ್ಲಿನಕ್‌ ಹಾಗೂ ಡೆಮೊಕ್ರಾಟ್‌ ಪಕ್ಷದವರು ಒಗ್ಗೂಡಿ, ಕಮಿಷನ್‌ ಆನ್‌ ಪ್ರೆಸಿಡೆಂಷಿಯಲ್‌ ಡಿಬೇಟ್ಸ್‌ ಸ್ಥಾಪಿಸಿದರು. 'ಚರ್ಚೆಗಳು ಇನ್ನು ಮುಂದೆ ನಡೆಯುವ ಪ್ರತಿ ಸಾರ್ವತ್ರಿಕ ಚುನಾವಣೆಯ ಅಂಗವಾಗಿರುವಂತೆ ನೋಡಿಕೊಂಡು, ತನ್ಮೂಲಕ ಪ್ರೇಕ್ಷಕರಿಗೆ ಹಾಗೂ ಶ್ರೋತೃಗಳಿಗೆ ಸಾಧ್ಯವಾದಷ್ಟು ಉತ್ತಮ ರೀತಿಯ ಮಾಹಿತಿ ಲಭಿಸುವಂತೆ ಮಾಡುವುದು' ಇದರ ಧ್ಯೇಯವಾಗಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಹಾಗು ಉಪಾಧ್ಯಕ್ಷೀಯ ಅಭ್ಯರ್ಥಿಗಳಿಗಾಗಿ ಚರ್ಚೆಗಳನ್ನು ಏರ್ಪಡಿಸಿ, ಪ್ರಾಯೋಜಿಸುವುದು ಹಾಗೂ ಚರ್ಚೆಗಳಿಗೆ ಸಂಬಂಧಿತ ಸಂಶೋಧನೆ ಮತ್ತು ಶಿಕ್ಷಣಾ ಚಟುವಟಿಕೆಗಳನ್ನು ನಡೆಸುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು. ಯಾವುದೇ ಲಾಭೋದ್ದೇಶವಿಲ್ಲದ, ಪಕ್ಷಪಾತವಿಲ್ಲದ ಈ ನಿಗಮವು, 1988, 1992, 1996, 2000 ಹಾಗೂ 2004ರಲ್ಲಿ ನಡೆದ ಎಲ್ಲಾ ರಾಷ್ಟ್ರಾಧ್ಯಕ್ಷೀಯ ಚುನಾವಣೆಗಳನ್ನು ಪ್ರಾಯೋಜಿಸಿತ್ತು. ಆದಾಗ್ಯೂ, ಲೀಗ್‌ ಆಫ್‌ ವುಮೆನ್‌ ವೋಟರ್ಸ್‌ ಸಂಘಟನೆಯು ಈ ಚರ್ಚೆಗಳ ಪ್ರಾಯೋಜಕತ್ವದಿಂದ ಹಿಂದೆ ಸರಿಯಿತು. 'ಎರಡು ಚುನಾವಣಾ ಪ್ರಚಾರ ಸಂಘಟನೆಗಳ ಬೇಡಿಕೆಗಳು ಅಮೆರಿಕಾದ ಮತದಾರರ ಮೇಲೆ ವಂಚನೆಯನ್ನು ಎಸಗುತ್ತವೆ' ಎಂಬ ಕಾರಣವನ್ನು ಮುಂದಿಟ್ಟಿತು.

ಕಳೆದ 2004ರಲ್ಲಿ, ಅಧ್ಯಕ್ಷೀಯ ಚರ್ಚೆಗಳಿಗೆ ಸ್ವತಂತ್ರ ಪ್ರಾಯೋಜಕರನ್ನು ತರುವ ಆಶಯದಿಂದ ಸಿಟಿಜೆನ್ಸ್‌' ಡಿಬೇಟ್‌ ಕಮಿಷನ್‌ ನ ಸ್ಥಾಪನೆಯಾಯಿತು.   ಚರ್ಚಾಸ್ಪರ್ಧಿಗಳು, ಮಾದರಿ ಹಾಗೂ ನಿಯಮಗಳನ್ನು ವ್ಯಾಖ್ಯಾನಿಸುವಲ್ಲಿ ಮತದಾರರಿಗೆ ಇನ್ನಷ್ಟು ಪ್ರಾಮುಖ್ಯತೆ ದೊರಕಿಸಿಕೊಡುವುದು ಸಹ ಇದರ ಆಶಯವಾಗಿತ್ತು.

ವಿಡಂಬನಾತ್ಮಕ ಚರ್ಚೆ

ಬದಲಾಯಿಸಿ

ಜನಸಾಮಾನ್ಯರಲ್ಲಿ ಚರ್ಚೆಯು ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದ್ದು, ಸಾಮಾನ್ಯವಾಗಿ ಶೈಕ್ಷಣಿಕ ಅಂಶಗಳನ್ನು ವಿಡಂಬಿಸುವ ವಿಡಂಬನಾತ್ಮಕ ಚರ್ಚೆಗಳು ಮನರಂಜನೆಯ ಒಂದು ರೂಪವಾಗಿ ಅಭಿವೃದ್ಧಿ ಹೊಂದುತ್ತಿವೆ. ವಿಡಂಬನಾತ್ಮಕ ಚರ್ಚೆಗಳು ಸಾಮಾನ್ಯವಾಗಿ ಮುಖ್ಯವಾಹಿನಿಯ ಕಾರ್ಯಕ್ರಮವಲ್ಲದಿದ್ದರೂ, ಮೆಲ್ಬರ್ನ್‌ ಇಂಟರ್ನ್ಯಾಷನಲ್ ಕಾಮೆಡಿ ಫೆಸ್ಟಿವಲ್‌ನಂತಹ ಸಂದರ್ಭಗಳಲ್ಲಿ ಗಮನಾರ್ಹ ಜನಪ್ರಿಯತೆ ಗಳಿಸಿವೆ, ಹಾಗು ಇದು ಸಾಮಾನ್ಯವಾಗಿ ಅನುಭವಿ ಚರ್ಚಾಸ್ಪರ್ಧಿಗಳಲ್ಲಿ ಜನಪ್ರಿಯ ಸ್ಪರ್ಧೆಯಾಗಿದೆ.

ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಲ್ಲವೋ, ಎಲ್ಲಾ ರೀತಿಯ ಚರ್ಚೆಗಳು ವಾದ ಸಿದ್ಧಾಂತದ ಕುರಿತು ಕೆಲವು ಕಲ್ಪನೆಗಳನ್ನು ಹೊಂದಿವೆ. ವಾದ ಸಿದ್ಧಾಂತದ ಮೂಲ ಪರಿಕಲ್ಪನೆಯು ಸಮರ್ಥನೆಯ ವಿಚಾರವಾಗಿದೆ. ಹಲವು ವಿಚಾರಗಳಲ್ಲಿ, ಚರ್ಚೆಯಲ್ಲಿ ಕನಿಷ್ಠಪಕ್ಷ ಒಂದು ಪಕ್ಷವಾದರೂ ಪ್ರತಿಪಾದನೆಯ ನಿಜಾಂಶವನ್ನು ಕಾಯ್ದುಕೊಳ್ಳುವ, ಅಥವಾ ಯಾವುದೇ ರೀತಿಯ ವೈಯಕ್ತಿಕ ಅಥವಾ ರಾಜಕೀಯ ಬದಲಾವಣೆ ಅಥವಾ ಕ್ರಮವನ್ನು ಸಮರ್ಥಿಸುವ ಅಗತ್ಯವಿದೆ. ಚರ್ಚೆಯೊಂದು ಸಂಭಾವ್ಯವಾಗಿ, ಸ್ಪರ್ಧಿಸುತ್ತಿರುವ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪ್ರತಿಪಾದನೆಗಳು ಅಥವಾ ಕ್ರಿಯೆಗಳ ನಡುವೆ ನಡೆಯಬಹುದು. ಅಥವಾ ಚರ್ಚೆಯು ಶುದ್ಧವಾಗಿ ಪ್ರಭಾವೀ ವ್ಯಕ್ತಿತ್ವ ಮತ್ತು ಭಾವುಕತೆಯ ಆಚರಣೆಯಾಗಿದ್ದು, ಇದರಲ್ಲಿ ಯಾವುದೇ ನಿರ್ದಿಷ್ಟ ಸಮರ್ಥನೆಯ ಕಲ್ಪನೆ ಇರುವುದಿಲ್ಲ, ಆದರೆ ಅದು ತನ್ನ ಸುಸಂಬದ್ಧತೆಯ ಬಹಳಷ್ಟು ಅಂಶವನ್ನು ಕಳೆದುಕೊಳ್ಳಬಹುದು.

ಇವನ್ನೂ ನೋಡಿ

ಬದಲಾಯಿಸಿ
ಅಂತರರಾಷ್ಟ್ರೀಯ ಪ್ರೌಢಶಾಲಾ ಚರ್ಚೆ
ಅಂತರರಾಷ್ಟ್ರೀಯ ವಿಶ್ವವಿದ್ಯಾನಿಲಯ ಚರ್ಚೆ

ಆಕರಗಳು

ಬದಲಾಯಿಸಿ
  1. "FDA's ವೆಬ್ ಪೇಜ್ - Pectus est quod disertos facit (Quintilien)". Archived from the original on 2011-07-20. Retrieved 2010-07-01.


ಬಾಹ್ಯಕೊಂಡಿಗಳು

ಬದಲಾಯಿಸಿ
ಚರ್ಚಾ ವಿಧಾನದ ಕಲಿಕೆಗೆ ಇರುವ ಅಂತರಜಾಲ ಪಠ್ಯಪುಸ್ತಕಗಳು
"https://kn.wikipedia.org/w/index.php?title=ಚರ್ಚೆ&oldid=1239801" ಇಂದ ಪಡೆಯಲ್ಪಟ್ಟಿದೆ