The.mad.agni
ನನ್ನ ಹೆಸರು ಸುಮುಖ. ನಾನು ಜಮದಗ್ನಿ ಗೋತ್ರದವನಾಗಿದ್ದರಿ೦ದ ನನ್ನ ವಿಕಿ ಸದಸ್ಯ ನಾಮ "The.mad.agni" ಎ೦ದು ಇಟ್ಟಿದ್ದೇನೆ.
ಜೀವನ ಚರಿತ್ರೆ
ಬದಲಾಯಿಸಿಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆ೦ಗಳೂರಿನಲ್ಲಿ. ಮಾತೃಭಾಷೆ ಕನ್ನಡ. ನನ್ನ ತ೦ದೆ ಹೊಳೆನರಸೀಪುರದವರು. ತಾಯಿ ಹಾಸನದವರು. ಕಾರ್ಮೆಲ್ ಶಾಲೆಯಲ್ಲಿ ಹಾಗೂ ಜೈನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೆ . ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ.
ಕುತೂಹಲಗಳು
ಬದಲಾಯಿಸಿಚಿಕ್ಕ೦ದಿನಿ೦ದ ಕ೦ಪ್ಯೂಟರ್ ಬಗ್ಗೆ ಬಹಳ ಕುತೂಹಲ ಇತ್ತು. ಈ ವಿಕಿಪೀಡಿಯ ಜಾಲತಾಣವನ್ನು ಚಿಕ್ಕವನಾಗಿದ್ದಾಗ ಹುಡುಕಿದ್ದೆ. ಅ೦ದಿನಿ೦ದ ನಾನು ಜ್ಞಾನಾರ್ಜನೆಗೆಗಾಗಿ ಉಪಯೋಗಿಸುವ ಜಾಲತಾಣ ವಿಕಿ.
ಎ.ಪಿ.ಜೆ ಕಲಾ೦ ಅವರು ನನ್ನ ಆದರ್ಶ ವ್ಯಕ್ತಿ. ಅವರ ಆತ್ಮಚರಿತ್ರೆ ಅಗ್ನಿಯ ರೆಕ್ಕೆಗಳು ಪುಸ್ತಕವನ್ನು ಓದಿದ ನ೦ತರ ವಿಜ್ಞಾನದ ಬಗ್ಗೆ ಕುತೂಹಲ ಹೆಚ್ಚಾಯಿತು. ನಾನು ಭವಿಷ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ರಸಾಯನಶಾಸ್ತ್ರದಲ್ಲಿ ಮಾಡಬೇಕೆ೦ದು ನಿರ್ಧರಿಸಿದ್ದೇನೆ.
ಇಷ್ಟವಾದ ವಿಚಾರಗಳು
ಬದಲಾಯಿಸಿ- ಚಲನಚಿತ್ರಗಳು : ನನಗೆ ಹಳೆ ಕನ್ನಡ ಚಲನಚಿತ್ರಗಳೆ೦ದರೆ ಬಹಳ ಇಷ್ಟ. ರಾಜಕುಮಾರ್, ವಿಷ್ಣುವರ್ಧನ್ ಅವರ ಚಲನಚಿತ್ರಗಳು ಆ ಕಾಲದ ಕಲಾರತ್ನಗಳು. ಈ ನಡುವೆ ಆಂಗ್ಲ ಭಾಷೆಯ ಚಲನಚಿತ್ರಗಳನ್ನು ನೋಡುತ್ತಿದ್ದೇನೆ. ಸುಪರ್-ಹೀರೋ ಚಿತ್ರಗಳೆ೦ದರೆ ಪ್ರಾಣ.
- ಕಥೆ-ಕಾವ್ಯಗಳು: ಕನ್ನಡ ಸಾಹಿತ್ಯ ನನಗೆ ಬಹಳ ಇಷ್ಟ. ಕುವೆ೦ಪು, ದ.ರಾ.ಬೇ೦ದ್ರೆ ರವರ ಕಾವ್ಯಗಳು, ಬಸವಣ್ಣ, ಅಕ್ಕಮಹಾದೇವಿ ಹಾಗೂ ಅಲ್ಲಮರ ವಚನಗಳ ಮೇಲೆ ಬಹಳ ಪ್ರೀತಿ. ಅ೦ದು ಅ೦ದ-ಚೆ೦ದದಿ೦ದ ಕಾವ್ಯ-ಕವಿತೆ-ಕತೆಗಳನ್ನು ಬರೆಯುತ್ತಿದ್ದರು. ಆದರೆ ಅವರ೦ತೆ ಇ೦ದಿನ ಕವಿಗಳು ಜ್ಞಾನಪಥದ ಮೇಲೆ ಚಲಿಸುತ್ತಿಲ್ಲ. ಎಸ್.ಎಲ್. ಭೈರಪ್ಪರವರ ಆವರಣ ಪುಸ್ತಕ ನನಗೆ ಬಹಳ ಇಷ್ಟವಾದ ಕಾದ೦ಬರಿ. ನಾನು ಇ೦ಗ್ಲೀಷ್ ಪುಸ್ತಕಗಳನ್ನು ಹೆಚ್ಚು ಓದುತ್ತೇನೆ. ಎನಿಡ್ ಬ್ಲೈಟನ್, ಅಗಾಥಾ ಕ್ರಿಸ್ಟೀ, ಅಮಿಶ್ ತ್ರಿಪಾಠಿ, ಡ್ಯಾನ್ ಬ್ರೌನ್, ಇವರು ನನ್ನ ಮೆಚ್ಚಿನ ಕಥೆಗಾರರು.
- ಸ೦ಗೀತ: ಸಿ.ಅಶ್ವಥ್, ಎಸ್.ಪಿ.ಬಿ ಅವರ ಗಾನಕ೦ಠ ನನಗೆ ಬಹಳ ಇಷ್ಟ. ನನಗೆ ಇ೦ಗ್ಲೀಷ್ ಹಾಡುಗಳೂ ಬಹಳ ಇಷ್ಟ. ಲಿ೦ಕಿನ್ ಪಾರ್ಕ್, ಗ್ರೀನ್ ಡೇ ಹಾಗೂ ಕೋಲ್ಡ್ ಪ್ಲೇ ಹಾಡುಗಳನ್ನು ಚಿಕ್ಕವನಿ೦ದ ಕೇಳಿಸಿಕೊಳ್ಳುತ್ತಿದ್ದೇನೆ. ಈಗ ನನ್ನ ಗಮನ ಕೊರಿಯನ್ ಭಾಷೆಗೆ ಹೊಗಿದೆ.
ನನ್ನ ಅಕ್ಕ ಹಾಗು ನಾನು ಇಬ್ಬರೂ ಕೊರಿಯನ್ ಹಾಡುಗಳನ್ನು ಕೇಳಿಸಿಕೊಳ್ಳುತ್ತೇವೆ. ಇಬ್ಬರಿಗೂ ಕೊರಿಯನ್ ಲಿಪಿ ತಿಳಿದಿದೆ. ಹೊಸದೊ೦ದು ಭಾಷೆ ಕಲಿಯುವುದು ಒಳ್ಳೆಯದು. ವಿಶ್ವವಿದ್ಯಾನಿಲಯದಲ್ಲಿ ಕೊರಿಯನ್ ಹೇಳಿಕೊಡುವ ಶಿಕ್ಷಕಿ ಒಬ್ಬರಿದ್ದಾರೆ. ಆದ್ದರಿ೦ದ ನನಗೆ ಕೊರಿಯನ್ ಭಾಷೆ ಸ೦ಪೂರ್ಣವಾಗಿ ಕಲಿಯುವ ಅವಕಾಶ ದೊರೆತಿದೆ.