ನನ್ನ ಪರಿಚಯ

ಬದಲಾಯಿಸಿ
 
ಕ್ರೈಸ್ಟ್ ಯೂನಿವರ್ಸಿಟಿ

ನನ್ನ ಹೆಸರು ಸ್ನೇಹ. ನನ್ನ ಊರು ಕೇರಳದ ತ್ರಿಷೂರ್. ನನ್ನ ತಂದೆಯ ಹೆಸರು ರವೀಂದ್ರನ್. ಅವರು ವ್ಯವಹಾರಸ್ಥರು. ತಾಯಿಯ ಹೆಸರು ಉಷ. ಅವರು ಎ.ವಿ. ಎಜುಕೇಷನ್ ಸೊಸೈಟಿ ಎಂಬ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ನನಗೆ ಒಬ್ಬ ಅಣ್ಣ ಇದಾನೆ. ಅವನ ಹೆಸರು ಸುದರ್ಶನ್. ಆತ ಆಕ್ಸ್ಫರ್ಡ್ ಇನ್ಸ್ಟಿಟ್ಯೂಟ್ ಆಫ್ ಮಾನೆಜ್ಮೆ೦ಟಿನಲ್ಲಿ ಬಿ ಬಿ ಎಂ ಓದುತ್ತಿದ್ದಾನೆ. ನಾನು ಬೆ೦ಗಳೂರಿನ ಕ್ರಿಸ್ಟ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ವ್ಯಾಸ೦ಗ ಮಾಡುತ್ತಿದ್ದೆನೆ. ನಾನು ೫ನೇ ನವೆ೦ಬರ್ ೧೯೯೮ದಲ್ಲಿ ಬೆ೦ಗಳೂರಿನಲ್ಲಿ ಜನಿಸದ್ದೆ. ನನ್ನ ತ೦ದೆ ತಾಯಿ ಮೂಲತಃ ಕೇರಳದವರು. ನಾನು ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ನಾನು ನನ್ನ ಪ್ರಾಥಮಿಕ ಹಾಗು ಪ್ರೌಢಶಾಲೆಯನ್ನು ಜೆ.ಪಿ. ನಗರದ ಎ.ವಿ. ಎಜುಕೇಷನ್ ಸೊಸೈಟಿ ಎ೦ಬ ಶಾಲೆಯಲ್ಲಿ ಮಾಡಿದೆ. ನಂತರ ನನ್ನ ಪಿ.ಯು.ಸಿ ಯನ್ನು ಆರ್ ವಿ ಪಿ.ಯು ಕಾಲೇಜ್ ಫಾರ್ ವುಮೆನ್ ಅಲ್ಲಿ ಪೂರ್ಣಗೊಳಿಸಿದೆ. ಈಗ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿಯ ಸಿ.ಎಂ.ಇ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಿನಿ.

ನನ್ನ ಹವ್ಯಾಸಗಳು

ಬದಲಾಯಿಸಿ

ನನಗೆ ಹಲವಾರು ಹವ್ಯಾಸಗವೆ. ಪುಸ್ತಕ ಓದುವುದು, ಪ್ರಯಾಣ ಮಾಡುವುದು, ಆಟಗಳನ್ನು ಆಡುವುದು ಹಾಗು ನೋಡುವುದು, ಚಿತ್ರಗಳನ್ನು ನೋಡುವುದು ಹಾಗು ಅಮ್ಮನ ಜೊತೆ ಕಾಲ ಕಳೆಯುವುದು ನನ್ನ ಹವ್ಯಾಸಗಳು. ಪುಸ್ತಕ ಓದುವುದು ನನಗೆ ಬಹಳ ಇಷ್ಟ. ಅದರಲ್ಲು ಕುವೆಂಪುರವರ ಕೃತಿಗಳು ಓದಲು ನನಗೆ ಬಹಳ ಇಷ್ಟ.

ನನ್ನ ಮೆಚ್ಚಿನ ಕವಿ

ಬದಲಾಯಿಸಿ

ಕುವೆಂಪುರವರು ಕನ್ನಡದ ಅಗ್ರಮಾನ್ಯ ಕವಿ. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇಂತಃ ಮಹಾಕವಿಯ ಕೃತಿಗಳು ಓದುವಾಗ ನನಗೆ ಬಹಳ ಹೆಮ್ಮೆ ಅನಿಸುತ್ತದೆ.

ನನ್ನ ಪ್ರವಾಸ

ಬದಲಾಯಿಸಿ
 
ಓಂಕಾರೇಶ್ವರ ದೇವಸ್ಥಾನವು

ನಾನು ಎಂಟನೆಯ ತರಗತಿಯಲ್ಲಿ ಓದುತ್ತಿರುವಾಗ ನಾನು ಮಡಿಕೇರಿಗೆ ಪ್ರವಾಸಕ್ಕೆ ಹೋದೆ. ಅಲ್ಲಿ ಅನೇಕ ಸ್ಥಳಗಳಿವೆ. ಅಲ್ಲಿಯ ಓಂಕಾರೇಶ್ವರ ದೇವಸ್ಥಾನವು ಒಂದು ಪ್ರಮುಖ ದೇವಸ್ಥಾನವಾಗಿದ್ದು, ಪ್ರವಾಸಿ ತಾಣವೂ ಅಗಿದೆ. ಅದೇ ರೀತಿ ರಾಜಾಸೀಟ್, ಅರಮನೆ,ಗದ್ದಿಗೆಯು ಸಹ ಇಂದಿನ ಪ್ರವಾಸಿ ತಾಣಗಳಲ್ಲಿ ಹೆಸರಾಗಿದೆ.ಅಬ್ಬಿ ಜಲಪಾತವು ಮೈ ತುಂಬಿದಾಗ ಸಂಭ್ರಮದ ನೋಟವೇ ಆಗಿತ್ತು. ಇದೆಲ್ಲವನ್ನು ಹೊರತುಪಡಿಸಿ ಮಡಿಕೇರಿಯ ದಸರಾ ನೋಡಲು ತುಂಬಾ ಆನಂದಕರವಾಗಿತ್ತು. ಮಡಿಕೇರಿಯಲ್ಲಿ ದಸರಾ ಆಚರಣೆ ಬಹಳ ವಿಭಿನ್ನವಾಗಿರುತ್ತದೆ. ಮಹಾಲಯ ಅಮವಾಸ್ಯೆಯ ಮಾರನೆಯ ದಿನದಂದು ಕರಗ ಹೊರಡುವುದರೊಂದಿಗೆ ದಸರಾ ಉಥ್ಸವ ಅರಂಭವಾಯಿತು. ಮಡಿಕೇರಿ ದಸರಾಕ್ಕೆ ಸುಮಾರು ಇನ್ನೂರು ವರುಶದ ಇಥಿಹಾಸವಿದೆಯೆಂದು ತಿಳಿಯಿತು.ನವರಾತ್ರಿಯ ಮೊದಲೆನೆಯ ದಿನದಂದು ನಾಲಕ್ಕು ಮಾರಿಯಮ್ಮ ದೇವಾಲಯದ ಪೂಜಾರಿಗಳು ಕರಗ ಕಟ್ಟುವ ಸಲಕರಣೆಗಳೊಂದಿಗೆ ನಗರದ ಹೊರವಲಯದಲ್ಲಿರುವ ಪಂಪಿನ ಕೆರೆ ಬಳಿ ಥೆರಳಿ ಕರಗವನ್ನು ಕಟ್ಟಲಾಗುತ್ತದೆ. ಬಳಿಕ ಓಂಬತ್ತು ದಿನಗಳ ಕಾಲ ನಗರಪ್ರದಷ್ಕಿಣೆ ಮಾಡಿ ಪೂಜೆ ಸ್ವೀಕರಿಸುತ್ತದೆ.ಇಲ್ಲಿಯ ಕರಗ ಕುಣಿಥವು ನೊಡಲು ಬಲು ಅಂದ.ದಸರೆಯ ದಿನದಂದು ಬನ್ನಿ ಮಂಟಪಕ್ಕೆ ಥೆರಳಿ ಬನ್ನಿ ಕಡಿಯುವುದರರೊಂದಿಗೆ ಕರಗ ಉತ್ಸವ ಮುಕ್ತಾಯಗೊಳ್ಳುವುದು. ದಸರೆಯ ದಿನ ರಾತ್ರಿ ನಡೆಯುವ ದಶ ಮಂಟಪಗಳ ಮೆರವಣಿಗೆಯಂತೂ ದೇವ ಲೊಕವನ್ನೇ ಧರೆಗಿಳಿಸಿದಂತೆ ಭಾಸವಾಗುವುದು. ಪ್ರತಿ ಮಂಟಪವು ದೇವತೆಗಳಿಂದ ರಕ್ಕಸರನ್ನು ಸಂಹರಿಸುವ ಕಲಾಕ್ರತಿಯನ್ನು ಹೊಂದಿರುತ್ತವೆ.

ನನ್ನ ಗುರಿ

ಬದಲಾಯಿಸಿ
 
ವಾಲಿಬಾಲ್

ಇನ್ನು ನನಗೆ ಆಟ ಆಡಲು ಬಹಳ ಇಷ್ಟ. ನಾನು ವಾಲಿಬಾಲ್ ಹಾಗು ತ್ರೋಬಾಲ್ ಆಟಗಾರ್ತಿ. ನಾನಗೆ ಕ್ರಿಕಟ್ ನೋಡಲು ಬಹಳ ಇಷ್ಟ. ಅದು ಮಾತ್ರವಲ್ಲ ಇನು ಹಲವಾರು ಪ್ರಕಾರಗಳ ಆಟಗಳು ನೋಡಲು ನನಗೆ ಬಹಳ ಇಷ್ಟ. ಎಂ.ಏಸ್ ಧೋನಿ ನನ್ನ ಮೆಚ್ಚುಗೆಯ ಆಟಗಾರ. ಇನ್ನೊಂದು ಅದ್ಭುತ ಸಂಗತಿಯೆಂದರೆ ನನ್ನ ಹಾಗು ಭಾರತದ ಕ್ರಿಕೆಟಿನ ನಾಯಕನಾದ ವಿರಾಟ್ ಕೋಹ್ಲಿ ಅವರ ಹುಟ್ಟು ಹಬ್ಬ ಒಂದೇ ದಿನಾಂಕದಂದು ಬರುತ್ತದೆ. ಇದು ನನಗೆ ಖುಷಿಯಿನ ಸಂಗತಿ. ಆದುದರಿಂದ ಒಂದಲ್ಲಾ ಒಂದು ದಿನ ಆತನ ಹಾಗೆ ನಾನು ಕೂಡ ಜೀವನದಲ್ಲಿ ದೊಡ್ಡ ಸಾದನೆಯನ್ನು ಮಾಡುತ್ತೇನೆ ಎಂದು ಆಶಾವಾದಿಯಾಗಿದ್ದೇನೆ. ನನ್ನ ತಂದೆ ತಾಯಿಯರು ಹೆಮ್ಮೆ ಪಡುವ ಮಗಳಾಗಿರಬೇಕು ಎಂಬುದು ನನ್ನ ಆಸೆ. ನನ್ನ ನಾಡಿಗೆ ಹಾಗು ಜನಗಳಿಗೆ ಉಪಯೋಗವಾಗುವಹಾಗೆ ಏನಾದರೂ ಒಂದು ಕೊಡುಗೆ ನೀಡಬೇಗು ಎನ್ನುವುದು ನನ್ನ ಜೀವನದ ಗುರಿ.