ಸದಸ್ಯ:Sathish118/ನನ್ನ ಪ್ರಯೋಗಪುಟ
ಸ್ವರ್ಗ - ಹಿಂದೂ ಧರ್ಮದ ಪ್ರಕಾರ ಪುಣ್ಯ ಕೆಲಸಗಳನ್ನು ಮಾಡಿದವರು ತಮ್ಮ ಪುಣ್ಯಫಲಗಳನ್ನು ಅನುಭವಿಸಲು ಸ್ವರ್ಗಲೋಕಕ್ಕೆ ತೆರಳುತ್ತಾರೆ. ಪುನರ್ಜನ್ಮವನ್ನು ಎತ್ತುವ ಮುನ್ನ ತಾತ್ಕಾಲಿಕವಾಗಿ ವಾಸಿಸುವರು ಎಂಬ ಪ್ರತೀತಿ ಇರುವ ಸ್ಥಳ.
ಸ್ವರ್ಗಲೋಕದ ಒಡೆಯ ಇಂದ್ರ ಅಥವಾ ದೇವೇಂದ್ರ.ಇವನು ಭೂಮಿಯಲ್ಲಿ ೧೦೦ ಯಜ್ಞಗಳನ್ನು ಮಾಡಿ,ಅದರ ಪ್ರತಿಫಲವಾಗಿ ಈ ಪದವಿಯನ್ನು ಪಡೆದಿದ್ದಾನೆ ಎಂಬ ನಂಬಿಕೆ ಇದೆ.
"ಸ್ವರ್ಗ" ಎಂಬುವುದು ಸಪ್ತಲೋಕಗಳಲ್ಲಿ ಒಂದು. ಹಿಂದೂ ಧರ್ಮದಲ್ಲಿ ಸ್ವರ್ಗದ ಬಗ್ಗೆ ಬಲವಾದ ನಂಬಿಕೆ ಇದ್ದು, ಮನುಷ್ಯ ತಾನು ಜೀವನದಲ್ಲಿ ಮಾಡಿದ ಒಳ್ಳೆಯ ಕೆಲಸಗಳ ಪ್ರತಿಯಾಗಿ ತನ್ನ ಮರಣದ ನಂತರ ಆತ್ಮವು ಸುಖ ಮತ್ತು ನೆಮ್ಮದಿಯನ್ನು ಅನುಭವಿಸುವ ಒಂದು ಪುಣ್ಯ ಸ್ಥಳ ಎಂಬ ಪ್ರತೀತಿ ಇದೆ. ಮನುಷ್ಯನು ತಾನು ಬದುಕಿರುವಾಗ ಮಾಡಿದ ದಾನ-ಧರ್ಮಗಳ ಪ್ರತಿಫಲವಾಗಿ ಸ್ವರ್ಗಕ್ಕೆ ದಾರಿಯನ್ನು ಉಡುಕಿಕ್ಕೊಳ್ಳಬಹುದು. ಸ್ವರ್ಗಲೋಕಕ್ಕೆ ವಿರುದ್ದ ಲೋಕವೇ 'ನರಕ'. ಮನುಷ್ಯ ತನ್ನ ಜೀವನದಲ್ಲಿ ಮಾಡುವ ಪುಣ್ಯ ಕೆಲಸಗಳೇ ಸ್ವರ್ಗಕ್ಕೆ ದಾರಿಯನ್ನು ತೋರಿಸುತ್ತವೆ ಎಂಬ ನಂಬಿಕೆ. ಮನುಷ್ಯನ ದೇಹದಿಂದ ಆತ್ಮವನ್ನು ಎಳೆದ್ದೋಯ್ಯುವ ಕಾಲಯಮನು ತನ್ನ ಬಲಗೈಬಂಟನಾದ ಚಿತ್ರಗುಪ್ತನ ಸಹಾಯದ ಮೇರೆಗೆ ಸತ್ತಿರುವ ಮನುಷ್ಯನು ಬದುಕಿರುವಾಗ ಮಾಡಿದ ದಾನ-ಧರ್ಮ, ಪಾಪ-ಪುಣ್ಯಗಳನ್ನು ಆಧಾರವಾಗಿಟ್ಟುಕೊಂಡು ಆ ದೇಹದ ಆತ್ಮವನ್ನು ಯಾವ ಲೋಕಕ್ಕೆ ಕಳುಹಿಸಬೇಕೆಂದು ತೀರ್ಮಾನಿಸುತ್ತಾರೆ. ಪುಣ್ಯ ಕೆಲಸಗಳನ್ನು ಮಾಡಿದವರನ್ನ ಸ್ವರ್ಗಕ್ಕೆ, ಪಾಪದ ಕೆಲಸ ಮಾಡಿದವರನ್ನ ನರಕಕ್ಕೆ ಹಾಕುತ್ತಾರೆ. ಸಾಧಾರಣವಾಗಿ ಸ್ವರ್ಗದ ವಾತಾವರಣ ಬಹಳ ಸೊಗಸಾಗಿರುತ್ತದೆ. ಆದರೆ ನರಕದಲ್ಲಿ ಆತ್ಮಗಳಿಗೆ ಅತ್ಯಂತ ಘೋರ ಶಿಕ್ಷೆಗಳನ್ನು, ಚಿತ್ರ-ವಿಚಿತ್ರ ಹಿಂಸೆಗಳನ್ನು ನೀಡಲಾಗುತ್ತದೆ ಎಂಬ ನಂಬಿಕೆ. ಮನುಷ್ಯನ ಸಾವಿನ ಬಳಿಕ, ಪುನರ್ಜನ್ಮ ಪಡೆಯುವವರೆಗೆ ಆತ್ಮವು ಸಂತೋಷದಿಂದ ವಾಸಿಸುವ ತಾತ್ಕಾಲಿಕ ಸ್ಥಳವೇ "ಸ್ವರ್ಗ".
ಸ್ವರ್ಗ ಲೋಕದ ಒಡೆಯ "ಇಂದ್ರ". ಸ್ವರ್ಗದ ಆಡಳಿತ ಇಂದ್ರನ ಕೈಯಲ್ಲಿದ್ದು, ಇವನು ತ್ರಿಮೂರ್ತಿಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ದೇವರುಗಳಿಗೆ ರಾಜನಾಗಿರುತ್ತಾನೆ ಆದ ಕಾರಣ ಇಂದ್ರನನ್ನು "ದೇವೇಂದ್ರ" ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸ್ವರ್ಗದಲ್ಲಿ ಸಂತೋಷ ತುಂಬಿ ತುಳುಕುತ್ತಾ ಇರುತ್ತದೆ. ಇಂದ್ರನು ಸ್ವರ್ಗದ ಅಧಿಪತಿಯಾಗಲು ಬಹಳಷ್ಟು ಶ್ರಮ ಪಟ್ಟಿದ್ದಾನೆ. ಇಂದ್ರನ ಸ್ಥಾನವನ್ನು ಪಡೆದುಕೊಳ್ಳುವುದು ಅತ್ಯಂತ ಸುಲಭದ ಕೆಲಸವಲ್ಲ, ಇಂದ್ರನು ಸ್ವರ್ಗದ ಸರ್ವಾಧಿಕಾರಿಯಾಗಲು ನೂರಕ್ಕೂ(೧೦೦) ಹೆಚ್ಚು ಯಙ್ಞ-ಯಾಗಾದಿಗಳನ್ನು ಮಾಡಿ ಶಕ್ತಿಯನ್ನು ಪಡೆದುಕೊಂಡು ಅದರ ಪ್ರತಿಯಾಗಿ ದೇವೇಂದ್ರನ ಸ್ಥಾನವನ್ನು ಗಳಿಸಿಕೊಂಡನು ಎಂಬ ನಂಬಿಕೆ ಇದೆ. ಇಂದ್ರನು ಎಲ್ಲಾ ದೇವರುಗಳ ಮೇಲೆ ಅಧಿಕಾರ ಚಲಾಯಿಸುತ್ತಾನೆ. ಅದೇ ರೀತಿ ಎಲ್ಲಾ ದೇವರುಗಳು ಇಂದ್ರನ ಆಙ್ಞೆಗೆ ಬದ್ಧರಾಗಿರುತ್ತಾರೆ. ಸಾಧಾರಣವಾಗಿ ಸ್ವರ್ಗವು ಒಂದು ಸುಂದರ ವಾತಾವರಣದಲ್ಲಿದ್ದು, ಸ್ವರ್ಗದಲ್ಲಿ ಯಾವುದೇ ರೀತಿಯ ಮನರಂಜನೆಗೆ ಕೊರತೆಗಳು ಕಂಡು ಬರುವುದಿಲ್ಲ ನೃತ್ಯ, ಸಂಗೀತ, ನಟನೆ ಎಲ್ಲವೂ ಇರುತ್ತದೆ. ಇಂದ್ರನಿಗೆ ಖುಷಿಪಡಿಸಲು ರಂಬೆ, ಉರ್ವಶಿ, ಮೇನಕೆ, ಶಿಲೋತ್ತಮೆಯರ ನೃತ್ಯ, ಗಾನ ಗಂಧರ್ವರ ಸಂಗೀತ, ದೇವ ಕನ್ಯೆಯರ ನಟನೆ ಇರುತ್ತದೆ.
ವೈಂಕುಠ ಏಕಾದಶಿಯಂದು ಉಪವಾಸ ವ್ರತವನ್ನಾಚರಿಸಿದರೆ ಮರಣದ ನಂತರ ನೇರವಾಗಿ ಸ್ವರ್ಗ ಲೋಕಕ್ಕೆ ಹೋಗುತ್ತಾರೆಂಬ ನಂಬಿಕೆ ಇದೆ. ಹಿಂದೂ ಧರ್ಮದ ಪಂಚಾಗ ಹೇಳುವ ಪ್ರಕಾರ ಪುಶ್ಯ ಮಾಸದ ಮಾರ್ಗಶೀರದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯೇ "ವೈಕುಂಠ ಏಕಾದಶಿ" ಇದನ್ನು ವೈಷ್ಣವರು ಅತ್ಯಂತ ನೇಮ-ನಿಷ್ಠೇಯಿಂದ ಆಚರಿಸುತ್ತಾರೆ. ಹಲವು ಧರ್ಮಗಳ ನಂಬಿಕೆಯ ಪ್ರಕಾರ ಸ್ವರ್ಗ ಸಾಮಾನ್ಯ ದೈವತ್ವ, ಒಳ್ಳೆಯತನ, ಧರ್ಮ, ನಿಷ್ಠೇ, ಇನ್ನೂ ಹಲವಾರು ವಿಷಯಗಳ ಅನುಗುಣವಾಗಿರುವ ಒಂದು ಪವಿತ್ರ ಸ್ಥಳವಾಗಿದೆ.[೨]
ಹಿಂದೂ ಧರ್ಮದ ಬಹಳ ಮನಮೋಹಕ ಕಲ್ಪನೆಯ ರೂಪವೇ ಸ್ವರ್ಗ. ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಬೇರೆ ಎಲ್ಲಾ ಧರ್ಮಗಳು ಸಹಜವಾಗಿ ತಮ್ಮದೇ ರೀತಿಯಾದ ಸ್ವರ್ಗದ ಕಲ್ಪನೆಯನ್ನು ಇಟ್ಟುಕೊಂಡಿವೆ. ಆದ ಕಾರಣ ಭೂಮಿಯ ಮೇಲೆ ಜನಿಸಿರುವ ಮನುಷ್ಯರು ತಮ್ಮ ಮರಣದ ನಂತರ ಸ್ವರ್ಗ ಅಥವಾ ನರಕಕ್ಕೆ ಹೊಗಲೇಬೇಕು. ಸ್ವರ್ಗದಲ್ಲಿ ನೋವು-ದುಃಖಗಳು ಕಂಡುಬರುವುದಿಲ್ಲವಂತೆ. ಜಾತಿ-ಬೇಧ, ಮೇಲು-ಕೀಳು, ದ್ವೇಷ, ಮದ-ಮತ್ಸರಗಳು ಇಲ್ಲದ ಹೂವಿನ ತೋಟದಂತೆ ಇರುವುದೇ "ಸ್ವರ್ಗ" ಎಂಬ ನಂಬಿಕೆ. ಎಲ್ಲಾ ಮನುಷ್ಯರು ಸಾಮಾನ್ಯವಾಗಿ ಸ್ವರ್ಗವನ್ನು ಸೇರಲು ಬಯಸುತ್ತಾರೆ. ಆದರೆ ಸ್ವರ್ಗವನ್ನು ಇದುವರೆಗೆ ಯಾರು ನೋಡಿರುವ ಸಾಕ್ಷಿಗಳು ಕಂಡುಬಂದಿಲ್ಲ, ಕಾರಣ ಸ್ವರ್ಗ ಮನುಷ್ಯರು ಸತ್ತ ಮೇಲೆ ಕಾಣಸಿಗುವ ಒಂದು ಲೋಕ. ಹಿಂದೂ ಪುರಾಣಗಳ ಪ್ರಕಾರ ಜೀವನದಲ್ಲಿ ಒಮ್ಮೆಯಾದರು ಕಾಶಿಯಾತ್ರೆ ಮಾಡಿದರೆ ತಾವು ಮಾಡಿರುವ ಪಾಪಗಳೆಲ್ಲಾ ಕಳೆದು ಸ್ವರ್ಗ ಸೇರುತ್ತಾರೆಂದು ಪ್ರತೀತಿ ಇದೆ. ಅದು ಏನೇ ಆಗಲಿ ಸ್ವರ್ಗವನ್ನು ಸೇರುವ ಆಸೆ ಎಲ್ಲರಲ್ಲಿ ಇರುತ್ತದೆ.ಸ್ವರ್ಗ ಎಂಬುದು ಮನುಷ್ಯರ ಪರಿಕಲ್ಪನೆಗೆ ನಿಲುಕದ್ದು. ಸ್ವರ್ಗವು ದೇವತೆಗಳು ವಾಸಿಸುವ ಸ್ಥಳ ಆದಕಾರಣ ಅಲ್ಲಿ ಎಲ್ಲವೂ ಪವಿತ್ರತೆಯಿಂದ ಕೂಡಿರುತ್ತದೆ. ಶಾಂತಿ, ನೆಮ್ಮದಿ ಸದಾಕಾಲ ಇರುತ್ತದೆ ಎಂಬ ನಂಬಿಕೆ ಇದೆ.
ದೇವತೆಗಳ ಮತ್ತು ಅಸುರರ(ರಾಕ್ಷಸರು) ನಡುವೆ ಯಾವಾಗಲೂ ಸ್ವರ್ಗವನ್ನು ಗೆಲ್ಲಲು ಯುದ್ಧ ನಡೆಯುತಿತ್ತು. ಸ್ವರ್ಗದಲ್ಲಿ ಅಮೃತದ ಕಳಸವಿರುತ್ತದೆ,ಅದನ್ನು ಕೈ ವಶಪಡಿಸಿಕೊಳ್ಳುವುದಕ್ಕೆ ಇಬ್ಬರ ನಡುವೆ ಯುದ್ಧ ನಡೆಯುತ್ತಾ ಬಂದಿದೆ. ಅಮೃತವನ್ನು ಕುಡಿದರೆ ಅಮರತ್ವವನ್ನು ಪಡೆಯುತ್ತಾರೆ. ಸಾವಿನಿಂದ ತಪ್ಪಿಸಿಕೊಳ್ಳಲು ಅಸುರರು ದೇವತೆಗಳ ವಿರುದ್ದ ಸ್ವರ್ಗವನ್ನು ಗೆಲ್ಲಲು ಸಾಕಷ್ಟು ಹರಸಾಹಸವನ್ನು ಪಟ್ಟು ವಿಫಲವಾದರು. ಅಮೃತದ ಆಸೆಯಿಂದ ಸ್ವರ್ಗದ ಸಿಂಹಾಸನದ ಅಧಿಪತ್ಯ ಸಾಕಷ್ಟು ಭಾರಿ ಬದಲಾಗಿದೆ. ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಬೇರೆಯಲ್ಲಾ ಧರ್ಮದಲ್ಲಿಯೂ ಸಹ ಸ್ವರ್ಗದ ಬಗ್ಗೆ ಬಲವಾದ ನಂಬಿಕೆ ಇದೆ. ಸ್ವರ್ಗ ಸೇರುವ ಆಸೆ ಮನುಷ್ಯರನ್ನು ತಮ್ಮ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ. ಸ್ವರ್ಗದಲ್ಲಿ ಎಲ್ಲಾ ದೇವರುಗಳು ವಾಸಿಸುತ್ತಾರೆ . ಆತ್ಮವು ಕಣ್ಣಿಗೆ ಕಾಣುವುದಿಲ್ಲ ಆದರೆ ಸ್ವರ್ಗದಲ್ಲಿ ಮಾತ್ರ ಆತ್ಮಗಳನ್ನು ಅವುಗಳ ನೀಜವಾದ ರೂಪದಲ್ಲಿ ನೋಡಬಹುದಾಗಿದೆ.ಆತ್ಮವನ್ನು ಸ್ವರ್ಗ ಅಥವಾ ನರಕಕ್ಕೆ ಕಳುಹಿಸುವುದನ್ನು ಅಥವಾ ಆತ್ಮವನ್ನು ಬಂಧಿಸುವುದನ್ನು ಯಮಧರ್ಮನು ತೀರ್ಮಾನಿಸುತ್ತಾನೆ. ಆದರೆ ಸ್ವರ್ಗದ ಆಡಳಿತವನ್ನು ದೇವೆಂದ್ರ ನಡೆಸುತ್ತಾನೆ.ನರಕದ ಆಡಳಿತ ಅಸುರರ ಕೈಯಲ್ಲಿ ಇರುತ್ತದೆ. ಸ್ವರ್ಗದಲ್ಲಿ ವಾಸಿಸುವ ಆತ್ಮಗಳಿಗೆ ಬೇಗ ಪುನರ್ಜನ್ಮ ದೊರಕುತ್ತದೆ. ಆದರೆ ನರಕದಲ್ಲಿರುವವರಿಗೆ ಅವರು ಬದುಕಿರುವಾಗ ಮಾಡಿದ ತಪ್ಪುಗಳ ಪ್ರತಿಫಲವಾಗಿ ಹಿಂಸೆಯನ್ನು ಅನುಭವಿಸಿದ ನಂತರ ಪುನರ್ಜನ್ಮದ ದಾರಿ ಕಾಣಿಸುತ್ತದೆ.ಒಳ್ಳೆಯ ಕೆಲಸ ಮಾಡಿದವರಿಗೆ ಸ್ವರ್ಗದಲ್ಲಿ ಶಾಂತಿ ಸಿಗುತ್ತದೆ.ಮನುಷ್ಯರು ತಾವು ಸತ್ತ ಮೇಲೆ ಮೋಕ್ಷವನ್ನು ಪಡೆಯಲು ಸ್ವರ್ಗಕ್ಕೆ ಹೋಗಲು ಬಯಸುತ್ತಾರೆ. ಒಟ್ಟಾರೆ ಹೇಳಬೇಕಾದರೆ ಸ್ವರ್ಗ ಕಲ್ಪನೆಗೆ ನಿಲುಕತ್ತಕ್ಕದ್ದು.[೩]