ಸದಸ್ಯ:Sahana vadiraj mundaragi/sandbox
ಇವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಸದಸ್ಯರಾಗಿದ್ದಾರೆ |
ಸಂಶೋದನಾ ಪ್ರಕ್ರಿಯೆ
ಬದಲಾಯಿಸಿಸಮಸ್ಯೆಯನ್ನು ರೂಪಿಸುವುದು
ಬದಲಾಯಿಸಿಸಾಮಾಜಿಕ ಸ೦ಶೊಧನೆಯಲ್ಲಿ ಸ೦ಶೊಧನಾ ಪ್ರಕ್ರಿಯೆಯು ಒ೦ದು. ವಿಚಾರಣೆಯು ಸಮಸ್ಯೆಯೆ೦ಬುವುದರಿ೦ದ ಪ್ರಾರಂಭವಾಗುತ್ತದೆ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕಿಂತ ಕೆಲವೊಮ್ಮೆ ಸಮಸ್ಯೆಯನ್ನು ಕಂಡುಕೊಳ್ಳುವುದೇ ಕಷ್ಟದ ಕೆಲಸ. ಸಮಸ್ಯೆಯನ್ನು ರೂಪಿಸಲು ವಿಜ್ಞಾನಿ ಸಾಕಷ್ಟು ಯೊಚನೆ ಮಾಡಬೆಕಾಗುತ್ತದೆ. ಸಂಶೋಧಕನು ಪದ್ಧತಿಗಳ ಅನುಸಾರ ಉತ್ತರಿಸಲಾಗದ ಪ್ರಶ್ನೆಗಳನ್ನು ತಪ್ಪಿಸುವ ಬಗ್ಗೆ ಜಾಗರೂಕನಾಗಿರಬೇಕು. ಆಯ್ಕೆ ಮಾಡಿಕೊಂಡ ವಿಷಯವು ಲಭ್ಯವಿರುವ ಸಲಕರಣೆಗಳು ಮತ್ತು ತಂತ್ರಗಲ ಮೂಲ ವೈಜ್ಞಾನಿಕ ವಿಚಾರಣೆಗೆ ತನ್ನನ್ನು ಒಡ್ಡಿಕೊಲ್ಳುವಂತೆ ಇರಬೆಕು.
ವೈಜ್ಞಾನಿಕ ವಿಚಾರಣೆಗೆ ಸಮಸ್ಯೆಯನ್ನು ಕಂಡುಕೊಂಡ ನಂತರ ಸಂಶೋಧಕನು ಅದರ ಬಗ್ಗೆ ಲಭ್ಯವಿರುವ ಪ್ರಕಟಿತ ಮತ್ತು ಅಪ್ರಕಟಿತ ಸಾಹಿತ್ಯದ ಬಗ್ಗೆ ವಿಚಾರಣೇ ನಡೇಸುತ್ತಾನೆ. ಇದೇ ರೀತಿಯ ಅಧ್ಯಯನಗಳು ಹಿಂದೆಯೇ ನಡೆದಿದ್ದಲ್ಲಿ ಅವುಗಳನ್ನು ಜಾಗರೂಕತೆಯಿಂದ ಗಣನೆಗೆ ತೆಗೆದುಕೊಳ್ಳಬೇಕು. ಮಾಹಿತಿಯನ್ನು ಸಂಗ್ರಹಣೆಯ ಎರಡು ಮೂಲಗಳು. ಅವುಯಾವುವೆಂದರೆ # ಕ್ಷೇತ್ರೀಯ ಮೂಲಗಳು ಮತ್ತು # ದಸ್ತಾವೇಜು ಮೂಲಗಳು. ಕ್ಷೇತ್ರಿಯ ಮೂಲಗಳು ಅಥವಾ ಪ್ರಾಥಮಿಕ ಮೂಲಗಳು ಸಂಶೋಧಕನು ತಾನೇ ಸ್ವತ: ವ್ಯಕ್ತಿಗಳಿಮದ ಸಂಗ್ರಹಿಸುವ ಮಾಹಿತಿಯನ್ನು ಒಲಗೊಂಡಿವೆ. ದಸ್ತಾವೇಜು ಒಟ್ಟು ಶ್ರೇಣಿಯ ಪ್ರಕಟಿತ ಮತ್ತು ಅಪ್ರಕಟಿತ, ಸಾವಜನಿಕ ಅಥವಾ ಖಾಸತಿ ದಾಖಲೆ ಪತ್ರಗಳು ಮತ್ತು ಇತರೆ ಸಾಹಿತ್ಯಕ ಮೂಲಕ ಮಾಹಿತಿಗಳು ಇತ್ಯಾದಿ.
ಪ್ರಾಕ್ಕ್ ಲ್ಪನೆಯನ್ನು ರೂಪಿಸುವುದು
ಬದಲಾಯಿಸಿಪ್ರಾಕ್ಕ್ ಲ್ಪನೆ ರೂಪಿಸುವುದು ಇನ್ನೊ೦ದು ರಿತಿಯ ಬಗೆ. ಸಮಸ್ಯೆಯ ಬಗ್ಗೆ ತಾತ್ಕಾಲಿಕವಾಗಿ ಪರಿಹಾರವನ್ನು ಅಥವಾ ಊಹೆಯನ್ನು ರೂಪಿಸಿಕೊಳ್ಳುವುದಕ್ಕೆ ಪ್ರಾಕ್ಕಲ್ಪನೆ ಎನ್ನುತ್ತಾರೆ. ಸಂಶೋಧನೆಯಲ್ಲಿ ಪ್ರಾಕ್ಕ್ ಲ್ಪನೆಗಳು ತು೦ಬಾ ಪ್ರಮುಖವಾದವು.ಅವು ಪರೀಕ್ಷಣಾ ವಿಧಾನಗಳು ಮತ್ತು ವಿಶ್ಲೇಷಣೆಗೆ ಅಗತ್ಯವಾದ ಮಾಹಿತಿಯ ಮೇಲೆ ಪರಿಣಾಮ ಬೀರುತ್ತವೆ. ಆದುದರಿಂದ ಪ್ರಾಕ್ಕ್ ಲ್ಪನೆಗಳು ಸಂಶೋಧನೆಯ ಕ್ಷೇತ್ರವನ್ನು ಸೀಮಿತಗೊಳಿಸುವುದರ ಮೂಲಕ ಸಂಶೋಧನೆಗೆ ದಾರಿ ತೊರುತ್ತವೆ. ಅವು ಸಂಶೋಧಕನನ್ನು ಸರಿಯಾದ ದಾರಿಯಲ್ಲಿ ನಿಲ್ಲಿಸುತ್ತವೆ. ಆದರೂ ಸಂಶೋಧನೆಯ ಪ್ರಾರಂಭಕ್ಕೆ ಪ್ರಾಕ್ಕ್ ಲ್ಪನೆಗಳ ಅಗತ್ಯವೇನಿಲ್ಲ ಎಂಬುದನ್ನು ನೆನಪಿಡಬೇಕು.
ಸಂಶೋಧನಾ ವಿನ್ಯಾಸದ ತಯಾರಿಕೆ
ಬದಲಾಯಿಸಿಸಂಶೋಧನಾ ವಿನ್ಯಾಸದ ತಯಾರಿಕೆ ಸ೦ಶೊಧನೆಯಲ್ಲಿ ಬಹಳ ಪ್ರಮುಖವಾದುದು. ಸಂಶೋಧನಾ ವಿನ್ಯಾಸವು ಕಾಯವಿಧಾನಗಳ ಬಗ್ಗೆ ಸಂಶೋಧಕನ ತೀಮಾನಗಳನ್ನು ಒಳಗೊಂಡಿರುವ 'ನೀಲಿನಕ್ಷೆ' ಅಥವಾ ಯೋಜನೆ ಎನ್ನಬಹುದು. ಇದು ಅಧ್ಯಯನವೊಂದಕ್ಕೆ ಹೊಂದಿಕೊಂಡಂತೆ ಸಂಶೋಧನೆಯ ಕಾಯವಿಧಾನಗಳು, ನಮೂನೆ, ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆಯ ಬಗ್ಗೆ ಸಂಶೋಧಕನ ತೀಮಾನಗಳ ಬಗ್ಗೆ ತಿಳೀಸುತ್ತದೆ. ಸಂಶೋಧನೆಯ ಧ್ಯೇಯವನ್ನು ನಾಲ್ಕು ವಿಧಾನಗಳನ್ನಾಗಿ ವಿಸ್ತರಿಸಬಹುದು.ಅವುಗಳೇ೦ದರೆ:
- ಪರಿಶೋಧನೆ
- ವಿವರಣೆ
- ಪರೀಕ್ಷಣೆ ಮತ್ತು
- ಪ್ರಯೋಗ
ಸಂಶೋಧನೆಯ ವಿನ್ಯಾಸವು ಕನಿಷ್ಠ ಶ್ರಮ, ವೇಳೆ ಮತ್ತು ಹಣದ ವೆಚ್ಚದಿಂದ ಗರಿಷ್ಟ ಮಾಹಿತಿ ಸಿಗುವ೦ತೆ ಸಂಶೋಧನೆಯನ್ನು ಹೆಚ್ಚು ದಕ್ಷವನ್ನಾಗಿಸುತ್ತದೆ. ಸಂಶೋಧನೆಯ ವಿನ್ಯಾಸವು ಅಂದಾಜು ಮಾಡಲಾಗದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಗತ್ಯವಾದ ಉದ್ದೇಶಪೂವಕವಾಗಿ ನಿರೀಕ್ಷೆಯ ಅವಕಾಶವನ್ನು ಹೆಚ್ಚಿಸುತ್ತದೆ.
ಮಾದರಿ ಅಥವಾ ನಮೂನೆ ವಿನ್ಯಾಸವನ್ನು ನಿಧರಿಸುವುದು
ಬದಲಾಯಿಸಿಸಂಶೋಧಕನು ಜನಸಂಖ್ಯೆಯಲ್ಲಿನ ಎಲ್ಲಾ ಅಂಶಗಳನ್ನೂ ಅಧ್ಯಯನ ಮಾಡಿ ಅವುಗಳ ಬಗ್ಗೆ ನಿಖರವಾದ ಮತ್ತು ನಂಬಿಕಾಹ ಲಕ್ಷಣಗಳನ್ನು ತಿಳಿಯುವ ಅಗತ್ಯವಿಲ್ಲ. ಆದ್ದರಿಂದ ಅವನು ಮಾದರಿ ಅಥವಾ ನಮೂನೆ ವಿನ್ಯಾಸ ಪದ್ದತಿಯನ್ನು ಅನುಸರಿಸುತ್ತಾನೆ. ಅಧ್ಯಯನಕ್ಕಾಗಿ ಸಂಶೋಧಕನು ಆಯ್ಕೆ ಮಾಡಿಕೊಳ್ಳುವ ಜನಸಂಖ್ಯೆಯ ಒ೦ದು ಭಾಗವನ್ನು 'ಮಾದರಿ ಅಥವಾ ನಮೂನೆ' ಎನ್ನುತ್ತಾರೆ. ಮಾದರಿ ಸಿದ್ದಾಂತದಲ್ಲಿನ ಮೂಲಭೂತ ವ್ಯತ್ಯಾಸಗಳೆಂದರೆ ಸಂಭವನೀಯ ಮಾದರಿ ಮತ್ತು ಸಂಭವನೀಯವಲ್ಲದ ಮಾದರಿ.
ಮಾಹಿತಿ ಸಂಗ್ರಹಣೆ
ಬದಲಾಯಿಸಿಸಂಶೋಧಕನು ಅಗತ್ಯ ಪ್ರಮಾಣದ ಮಾದರಿಯನ್ನು 'ವಿಶ್ವ' ದಿಂದ ಪಡೆದುಕೊಂಡ ನಂತರ ಮಾಹಿತಿಯನ್ನು ಸಂಗ್ರಹಿಸಲು ಪ್ರಾರ೦ಭಿಸುತ್ತಾನೆ. ಪ್ರತ್ಯುತ್ತರರಾದ ಸಂಶೋಧಕನೇ ನೇರವಾಗಿ ಪಡೆದುಕೊಂಡ ಪ್ರಾಥಮಿಕ ಮಾಹಿತಿಯನ್ನು ಅವಲೋಕನೆ, ಪ್ರಶ್ನಾವಳಿ ಮತ್ತು ಸಂಧಶನದ ಮೂಲಕ ಸಂಗ್ರಹಿಸಲಾಗುತ್ತದೆ. ಸಾಂಕೇತಿಕ ವತನೆಯನ್ನು ವೈಜ್ಞಾನಿಕ ಮಾಹಿತಿಯನ್ನಾಗಿ ಪರಿವತಿಸುವ ಪ್ರಯತ್ನವೇ ವಿಷಯ ವಿಶ್ಲೇಷಣೆ. ಇದು ಅಧ್ಯಯನದ ಉದ್ದೇಶಕ್ಕೆ ಹೊಂದಿಕೊಂಡಂತೆ ಮಾಹಿತಿಯನ್ನು ವಗೀಕರಿಸುವ ಪದ್ಧತಿಯಾಗಿದೆ. ಕೋಷ್ಟಕಗಳನ್ನು ತಯಾರಿಸುವುದೆ ವಿಶ್ಲೇಷಣೆಯಲ್ಲಿನ ಮು೦ದಿನ ಹ೦ತ. ವಗೀಕೃತ ಮಾಹಿತಿಗಳನ್ನು ಕೋಷ್ಟಕಗಳ ರೂಪದಲ್ಲಿ ನೀಡುವ ತಾಂತ್ರಿಕ ಕ್ರಮದ ಭಾಗವೇ ಕೋಷ್ಟಕಗಳ ತಯಾರಿಕೆ.
ಪ್ರಾಕ್ಕ್ ಲ್ಪನೆಯನ್ನು ಪರೀಕ್ಷಿಸಿಕೊಳ್ಳುವುದು
ಬದಲಾಯಿಸಿಮಾಹಿತಿಯ ವಿಶ್ಲೇಷಣೆಯ ನ೦ತರ ಸಂಶೋಧಕ ಪ್ರಾಕ್ಕ್ ಲ್ಪನೆಯನ್ನು, ಈ ಮೊದಲೇ ಹೊಂದಿದ್ದರೆ, ಪರೀಕ್ಷಿಸಿಕೊಳ್ಳಲು ಮುಂದಾಗುತ್ತಾನೆ. ವಿಶ್ಲೇಷಿತ ಮಾಹಿತಿಯ ಬೆಳಕಿನಲ್ಲಿ ಪ್ರಾಕ್ಕ್ ಲ್ಪನೆ ಸ್ವೀಕೃತವಾಗಬಹುದು ಅಥವಾ ತಿರಸ್ಕೃತವಾಗಬಹುದು.
ವರದಿ ಬರೆಯುವಿಕೆ
ಬದಲಾಯಿಸಿಸಂಶೋಧನಾ ಪ್ರಕ್ರಿಯೆ ಅದರ ಮೇಲೆ ವರದಿಯನ್ನು ಬರೆದಲ್ಲದೇ ಪೂಣವಾಗುವುದಿಲ್ಲ. ಸಂಶೋಧನೆಗೆ ಅಥವಾ ನಿದಿಷ್ಟ ವಸ್ತು ವಿಷಯ ಅಥವಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏನನ್ನು, ಹೇಗೆ ಮಾಡಲಾಗಿದೆ ಎಂಬುದರ ವಿಸ್ತೃತ ವಿವರಣೆಯೇ ವರದಿ.
ವಸ್ತುನಿಷ್ಠತೆಯ ಸಮಸ್ಯೆಗಳು
ಬದಲಾಯಿಸಿಸಾಮಾಜಿಕ ಸಂಶೋಧನೆಯಲ್ಲಿ ವಸ್ತುನಿಷ್ಠತೆಯನ್ನು ವ್ಯಕ್ತಿಯ ಅಥವಾ ಸಮೂಹವೊಂದರ ಸಾಪೇಕ್ಷವಾಗಿ ತಾತ್ಕಾಲಿಕವಾದ ಸಾಮಾಜಿಕ ಅಥವಾ ಮಾನಸಿಕವಾದ ಪಕ್ಷಪಾತಗಳಿಂದಾದ ಗ್ರಹಿಕೆಗಳು ಅಥವಾ ವಿವರಣೆಗಳ ವಿಕಾರಗಳನ್ನು ತೊಡೆದು ಹಾಕುವ ಪ್ರಯತ್ನಗಳಲ್ಲಿ ಪ್ರಕಟವಾಗುವ ಗುಣಲಕ್ಷಣಗತಳನ್ನು ಸೂಚಿಸಲು ಉಪಯೊಗಿಸಲಾಗಿದೆ.
ವಸ್ತುನಿಷ್ಟತೆಯನ್ನು ಪ್ರಭಾವಿಸುವ ಅಂಶಗಳು
ಬದಲಾಯಿಸಿಲಭ್ಯವಿರುವ ಪುರಾವೆಗಳ ಪೂಣ ವಿವರಣೆ ಪಡೆದುಕೊಳ್ಳವುದರಿಂದ ಸಮಾಜ ವಿಜ್ಞಾನಿಯನ್ನು ತಡೆಯುವ ಅನೇಕ ಪ್ರಭಾವೀ ಅಂಶಗಳು. ಅವುಗಳೇ೦ದರೆ:
- ವೈಯುಕ್ತಿಕ ಪ್ರೇರಣೆ.
- ಪದ್ಧತಿ
- ಸಾಮಾಜಿಕ ಸನ್ನವೇಶದ ಪ್ರತೀಕೂಲ ಪ್ರಭಾವಗಳನ್ನಾಗಿ ಸಾರಾಂಶಿಸಬಹುದು.
- ವಸ್ತುನಿಷ್ಠತೆಯನ್ನು ಪ್ರಭಾವಿಸುವ ಇತರೆ ಅಂಶಗಳ೦ದರೇ:
- ವೈಯಕ್ತಿಕ ಭಾವನೆಗಳು.
- ಮೂಢನಂಬಿಕೆಗಳು
- ಸ್ವ-ಹಿತಾಶಕ್ತಿ
- ವಸ್ತುವಿಷಯದ ಸಂಕೀಣತೆ
- ವಸ್ತು ವಿಷಯದ ವ್ಯಕ್ತಿನಿಷ್ಟ ಸ್ವಭಾವ
- ಏಕರೂಪತೆಯ ಕೊರತೆ.
- ಜ್ಞಾನದ ಕೊರತೆಯಿಂದಾದ ತಪ್ಪು ತಿಳುವಳಿಕೆ
- ತರಾತುರಿಯ ಕಾಯನಿವಹಣೆ,
- ನೈತಿಕ ಮೌಲ್ಯಗಳು
- ಸ್ವಕುಲ ಅತ್ಯಾಭಿಮಾನ
- ಬಾಹ್ಯ ಒತ್ತಡ
- ಅಜ್ಞಾನ
ವಸ್ತುನಿಷ್ಟತೆಯ ಯಾವುದೇ ಅವಲಂಬನಾಹ ಸೂಚಿಯ ಅನುಪಸ್ಥಿತಿಯಲ್ಲಿ ಸಾಮಾನ್ಯವಾಗಿ ಪರಿಗಣಿಸಲಾಗುವ ಕ್ರಮವೆಂದರೆ ಸಿದ್ಧಾಂತ ಎಷ್ಟರ ಮಟ್ಟಿಗೆ ವಿವೇಚನಾಯುಕ್ತವಾಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳವುದಾಗಿದೆ. ಹಾಗೆ ಅದು ಸಮಂಜಸವಾಗಿದ್ದರೆ ಅದನ್ನು ವಸ್ತುನಿಷ್ಠ ಎನ್ನುತ್ತಾರೆ. ವಸ್ತುನಿಷ್ಠತೆಯನ್ನು ಹೊಂದಲು ಈ ಕೆಳಗಿನ ಕ್ರಮಗಳು ಉಪಯೊಗವಾಗಬಹುದು.
- ಪ್ರಮಾಣಬದ್ಧ ಪದಗಳು ಮತ್ತು ಕಲ್ಪನೆಗಳ ಬಳಕೆ
- ಪ್ರಾಯೋಗಿಕ ಪದ್ಧತಿಯ ಬಳಕೆ.
- ಪರಿಮಾಣಾತ್ಮಕ ಪದ್ಧತಿಯ ಬಳಕೆ
- ಸಮೂಹ ಸಂಶೋಧನೆ
- ಪ್ರಯೋಗಾತ್ಮಕ ಪದ್ಧತಿಯ ಬಳಕೆ
- ಯಾದೃಚ್ಚಿಕ ನಮೂನೆ ಪದ್ಧತಿಯ ಬಳಕೆ
- ಯಾಂತ್ರಿಕ ಸಾಧನಗಳ ಬಳಕೆ
- ಅಂತರ ವಿಜ್ಞಾನ ತಂತ್ರದ ಬಳಕೆ
- ಸಂಶೋಧನಾ ನಕ್ಷೆ, ವಿನ್ಯಾಸ
ಜ್ಞಾನ ಸಂಪಾದನೆಯ ಬಯಕೆ ಅಥವಾ ಸಮಸ್ಯೆಯೊಂದನ್ನು ವೈಜ್ಞಾನಿಕವಾಗಿ ಬಗೆಹರಿಸುವ ಅಗತ್ಯವೊಂದರಿಂದ ನಿದೇಶಿತನಾದ ಸಾಮಾಜಿಕ ಸಂಶೋಧಕನೊಬ್ಬ ಅಧ್ಯಯನದ ನಕ್ಷೆಯೊಂದನ್ನು ತಯಾರಿಸುತ್ತಾನೆ.
ವ್ಯಾಖ್ಯೆಗಳು
ಬದಲಾಯಿಸಿಸಂಶೋಧನಾ ವಿನ್ಯಾಸವನ್ನು ಅನೇಕ ಜನ ಸಮಾಜ ವಿಜ್ಞಾನಿಗಳು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಈ ಎಲ್ಲಾ ವ್ಯಾಖ್ಯೆಗಳೂ ಕ್ರಮದಲ್ಲಿ ಮಿತಿವ್ಯಯದೊಂದಿಗೆ ವಿಶ್ಲೇಷಣೆಗೆ ನಿಕರವಾದ ಮಾಹಿತಿಗಳನ್ನು ಸಂಗ್ರಹಿಸುವಾಗ ವ್ಯವಸ್ಥಿತವಾದ ಪದ್ಧತಿಗಳನ್ನು ಬಳಸುವುದರ ಮೇಲೆ ಒತ್ತು ಹೇರಿವೆ.
ಸಂಶೋಧನಾ ವಿನ್ಯಾಸದ ಮಹತ್ವ
ಬದಲಾಯಿಸಿಸಂಶೋಧನಾ ವಿನ್ಯಾಸವೊಂದು ಸಂಶೋಧನಾ ಸಮಸ್ಯೆ ಮತ್ತು ಅಧ್ಯಯನದ ನಿದಿಷ್ಟ ಉದ್ದೇಶಗಳನ್ನು ಒಳಗೊ೦ದಿದೆ. ವಿನ್ಯಾಸ ಪೂಣ ಸಂಶೋಧನಾ ಕಾಯಕ್ರಮದ ಪ್ರಕ್ರಿಯೆ ಮತ್ತು ಸಂರಚನೆಯ ರೂಪುರೇಶೆಯಾಗಿದೆ. ಇಂತಹ ನಿದಿಷ್ಟ ಹಾಗೂ ಸ್ಪಷ್ಟವಾಗಿ ನಮುದಿಸಿದ ಕ್ರಿಯಾಯೋಜನೆಯ ಹೊರತಾಗಿ ಯಾವುದೇ ವೈಜ್ಞಾನಿಕ ಅಧ್ಯಯನ ಸಾಧ್ಯವಿಲ್ಲ ಮತ್ತು ಪಡೆದುಕೊಂಡ ಫಲಿತಾಂಶಗಳು ಕೂಡ ಸಪ್ರಮಾಣಿತ ಹಾಗೂ ಅವಲಂಬನಾಹಯವಾದವುಗಳು ಇರುವುದಿಲ್ಲ. ಇಂಡಿಯನ್ ಕೌನ್ಸಿಲ್ ಫಾರ್ ಸೈಮಟಿಫಿಕ್ ಸೋಷಿಯಲ್ ರಿಸಚ್ ಮಾಗದಶನ ಮಾಗದಶಿಕೆಯ ಪ್ರಕಾರ ಸಂಶೋಧನಾ ವಿನ್ಯಾಸ ಈ ಕೆಳಗಿನ ಹಂತಗಳನ್ನು ಒಳಗೊಳ್ಳಬೇಕು.
- ಕಾಯಯೋಜನೆಯ ಶೀಷಿಕೆ.
- ಸಮಸ್ಯೆಯನ್ನು ಸ್ಪಷ್ಟಪಡಿಸುವುದು
- ಸಾಹಿತ್ಯದ ಪೂವಾವಲೋಕನ
- ಕಲ್ಪನೆಗಳ ಚೌಕಟ್ಟು.
- ಸಂಶೋಧನಾ ಪ್ರಶ್ನೆ ಅಥವಾ ಪ್ರಾಕ್ಕ್ ಲ್ಪನೆ.
- ಹರವು ಅಥವಾ ಸಂಶೋಧನೆ ಒಳಗೊಳ್ಳುವ ಕ್ಷೇತ್ರ.
- ಮಾಹಿತಿ ಸಂಗ್ರಹಣೆ.
- ಮಾಹಿತಿ ಪರಿಷ್ಕರಣೆ
- ಕಾಲ ತೀಮಾನ.
- ಸಂಘಟನೆಯ ಚೌಕಟ್ಟು
- ವೆಚ್ಚದ ಅಂದಾಜು
ಪ್ರಾಯೋಗಿಕ ಸಂಶೋಧನಾ ವಿನ್ಯಾಸವನ್ನು ನಾಲ್ಕು ಭಾಗಗಳನ್ನಾಗಿ ವಿ೦ಗಡೀಸಬಹುದು:
- ನಮೂನೆ ವಿನ್ಯಾಸ
- ಅವಲೋಕನಾ ವಿನ್ಯಾಸ
- ಸಾಂಖ್ಯಿಕ ನಮೂನೆ
- ಕಾಯಾತ್ಮಕ ವಿನ್ಯಾಸ
ಸಂಶೋಧನಾ ವಿನ್ಯಾಸದ ಪ್ರಕಾರಗಳು. ಅವು:
ಬದಲಾಯಿಸಿ- ಪರಿಶೋಧಕ ಅಧ್ಯಯನ ನಕಾಶೆ
- ವಿವರಣಾತ್ಮಕ ಅಧ್ಯಯನ ನಕಾಶೆ
- ಚಿಕಿತ್ಸಕ ಅಧ್ಯಯನ ನಕಾಶೆ
- ಪ್ರಾಯೋಗಿಕ ಅಧ್ಯಯನ ನಕಾಶೆ.
ಪರಿಶೋಧಕ ಅಧ್ಯಯನದ ಕ್ರಮಗಳು
ಬದಲಾಯಿಸಿಪರಿಶೋಧಕ ಅಧ್ಯಯನಕ್ಕೆ ಈ ಕೆಳಗಿನವು ಬಹಳ ಪ್ರಮುಖವಾದ ಕ್ರಮಗಳು
ಸಾಹಿತ್ಯದ ಸಮೀಕ್ಷೆ
ಬದಲಾಯಿಸಿಸಂಶೋಧನೆಗಳ ನಡುವಿನ ಅಂತರವನ್ನು ಕಂಡುಕೊಳ್ಳಲು ಸಾಹಿತ್ಯ ಸಮೀಕ್ಷೆ ಸಹಾಯ ಮಾಡುತ್ತದೆ. ಸಾಹಿತ್ಯದ ಅವಲೋನಕನದಿಂದ ಸಂಶೋಧಕ ನಿದಿಷ್ಟ ಸಮಸ್ಯೆಯ ಮೇಲೆ ಈಗಾಗಲೇ ಏನು ಆಗಿದೆ ಮತ್ತು ಇನ್ನು ಮಾಡಬೇಕಾದುದು ಏನು ಎಂಬುದನ್ನು ತಿಳಿದುಕೊಳ್ಲುತ್ತೇವೆ.
ಅನುಭವ ಸಮೀಕ್ಷೆ
ಬದಲಾಯಿಸಿಸಮಸ್ಯೆಯ ವಾಸ್ತವಿಕ ಅನುಭವ ಇರುವ ವ್ಯಕ್ತಿಗಳ ಸಮೀಕ್ಷೆ ಬಹಳಷ್ಟು ಫಲಕಾರಿಯಾಗಬಹದು. ಜ್ಞಾನಿಗಳು ಮತ್ತು ಅನುಭವಸ್ಥರನ್ನು ಸಂಶೋಧಕ ಕಡೆಗಣಿಸಲಾಗದು. ಸಂದಶನಕ್ಕೆ ಮೊದಲು ಸಂಶೋಧಕನಿಗೆ ಸಮಸ್ಯೆಯ ಸಾಕಷ್ಟು ಅರಿವು ಇರಬೇಕು. ಬಹಳ ಎಚ್ಚರಿಕೆಯಿಂದ ಸಂದಶಿತನಲ್ಲಿರಬಹುದಾದ ವ್ಯಕ್ತಿಗತ ಪೂವಾಗ್ರಹಗಳನ್ನು ಸಂಶೋಧಕ ಬಿಟ್ಟುಬಿಡುವ ಸಾಮಥ‍್ಯ ಹೊಂದಿರಬೇಕು. ಅನುಭವ ಸಮೀಕ್ಷೆ ಪ್ರಾಕ್ಕ್ ಲ್ಪನೆಯನ್ನು ಹುಟ್ಟು ಹಾಕುವುದರ ಜೊತೆಗೆ ಇನ್ನೂ ಅನೇಕ ಕೊಡುಗೆಗಳನ್ನು ನೀಡುತ್ತದೆ.
ವಿಷಯ ಅಧ್ಯಯನಗಳು
ಬದಲಾಯಿಸಿವಿಷಯ ಅಧ್ಯಯನ ಪದ್ಧತಿಯನ್ನು ವೈಜ್ಞಾನಿಕ ಸಾಮಾಜಿಕ ಸಂಶೋಧನೆಯಲ್ಲಿ ಪರಿಚಯಿಸಿದ ಕೀತಿ ಫೆಡ್ರಿಕ್ ಲೀಪ್ಲೆಯವರಿಗೆ ಸಲ್ಲುತ್ತದೆ.ವಿಷಯ ಅಧ್ಯಯನ ಪದ್ಧತಿ ಎ೦ದರೆ ಸಾಮಾಜಿಕ ಘಟಕದ ಅಥವಾ ವಸ್ತುವಿಷಯದ ಅಂಶಿಕ ಲಕ್ಷಣವನ್ನು ಜೋಪಾನ ಮಾಡುವ ಸಲುವಾಗಿ ಸಾಮಾಜಿಕ ಮಾಹಿತಿಯನ್ನು ಸಂಘಟಿಸುವುದು . ವಿಷಯ ಅಧ್ಯಯನ ಪದ್ಧತಿಯು ತನ್ನದೇ ಆದ ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿದೆ. ಈ ಪದ್ಧತಿಯ ಸಾಮಾನ್ಯ ವಿಷಯಗಳಲ್ಲಿ ಹೊರಬರುವ ಮಾಹಿತಿಯೊಡನೆ ಹೋಲಿಸದ ಮತ್ತು ಅಪವತೀ, ಅಂಚಿನಲ್ಲಿರುವ ಅಂಶಗಳನ್ನು ಕಂಡುಹಿಡಿಯಲು ಸಹಕರಿಸುತ್ತದೆ.
ವಿವರಣಾತ್ಮಕ ಮತ್ತು ರೋಗಪರೀಕ್ಷಕ ಅಧ್ಯಯನಕ್ಕೆ ವಿನ್ಯಾಸ
ಬದಲಾಯಿಸಿವಿವರಣಾತ್ಮಕ ಮತ್ತು ಚಿಕಿತ್ಸಕ ಅಧ್ಯಯನ ಕ್ರಮಗಳಲ್ಲಿ ವ್ಯತ್ಯಾಸಗಳಿದ್ದಾಗ್ಯೂ ಅವು ಪರಸ್ಪರ ಸಂಬಂಧಿಸಿವೆ. ಅಧ್ಯಯನದ ವಿನ್ಯಾಸಕ್ಕೆ ಸಂಬಂಧಿಸಿದಂತೆ ಅವು ಕೆಲವೊಂದು ಸಾಮಾನ್ಯ ಅಂಶಗಳನ್ನು ಹಂಚಿಕೊಂಡಿವೆ. ಹಾಗಾಗಿಯೇ ಇವೆರಡೂ ಪ್ರಕಾರದ ಅಧ್ಯಯನಗಳನ್ನು ಒಂದೇ ಪ್ರಕಾರದ ಸಂಶೋದನಾ ವಿನ್ಯಾಸದಡಿಯಲ್ಲಿ ಸೇರಿಸಿರುವುದು. ಮಾಹಿತಿ ಸಂಗ್ರಹಣೆಯ ನಿದಿಷ್ಟ ಕ್ರಮದ ಔಚಿತ್ಯ ಅಧ್ಯಯನದ ಉದ್ದೇಶವನ್ನು ಆಧರಿಸುತ್ತದೆ. ಸಂಗ್ರಹಿತ ಮಾಹಿತಿಯನ್ನು ಸೂಕ್ತವಾಗಿ ಪರಿಷ್ಕರಿಸಿ ವಿಶ್ಲೇಷಿಸಬೇಕು. ಸಂಗ್ರಹಿತ ಮಾಹಿತಿಯನ್ನು ಯಾಂತ್ರಿಕವಾಗಿ ಪರಿಷ್ಕರಿಸಲಾಗುವುದೇ ಅಥವಾ ವ್ಯಕ್ತಿಗತ ನೆಲೆಯಲ್ಲಿ ಪರಿಷ್ಕರಿಸಲಾಗುವುದೇ ಎನ್ನುವುದನ್ನು ಮೊದಲಿಗೇ ನಿಧರಿಸಬೇಕು. ಪರಿಶೋಧಕ ಅಧ್ಯಯನ ವಿನ್ಯಾಸಕ್ಕೆ ಹೋಲಿಸಿದರೆ ವಿವರಣಾತ್ಮಕ ಚಿಕಿತ್ಸಕ ವಿನ್ಯಾಸ ಬಹಳ ಕ್ಲಿಷ್ಟಕರವಾದುದು.
ಪ್ರಯೋಗಾತ್ಮಕ ಅಧ್ಯಯನ
ಬದಲಾಯಿಸಿಪ್ರಯೋಗಾತ್ಮಕ ಅಧ್ಯಯನವನ್ನು ಕಾರಣೀಯ ಅಧ್ಯಯನ ಎನ್ನುತ್ತಾರೆ. ಎರಡು ಅಥವಾ ಹೆಚ್ಚು ವ್ಯತ್ಯಯಗಳ ನಡುವಿನ ಕಾರಣೀಯ ಸಂಬಂಧಗಳನ್ನು ಪರೀಕ್ಷಿಸಿಕೊಲ್ಳುವುದೇ ಇದರ ಮುಖ್ಯ ಉದ್ದೇಶ. ಇದನ್ನು ಸಾಮಾಜಿಕ ಸಂಶೋಧನೆಯ ಉತ್ತಮ ಹಂತ ಎ೦ದು ಪರಿಗಣಿಸಲಾಗುತ್ತದೆ. ಪ್ರಾಯೋಗಿಕ ಪದ್ಧತಿ ವೈಯುಕ್ತಿಕ ಪಕ್ಷಪಾತವನ್ನು ತಗ್ಗಿಸುವುದಷ್ಟೇ ಅಲ್ಲದೆ ಕಾರಣೀಯ ಸಂಬಂಧಗಳ ಬಗ್ಗೆ ಅನುಮಿತಿಸಲು ಸಹಾಯ ಮಾಡುತ್ತದೆ.
ಕಾರಣ ಎಂದರೇನು
ಬದಲಾಯಿಸಿಕಾರಣ ಎನ್ನುವುದು ಘಟನೆಯೊಂದರ ಅನಿವಾಯವಾದ ಪೂವಗಾಮಿ ಅಂಶವಾಗಿದೆ. ಕಾರಣಗಳು ಅನೇಕ. ಈ ಪದ್ಧತಿಯಲ್ಲಿ ನಿಯಂತ್ರಿತ ಸಮೂಹ ಮತ್ತು ಪ್ರಾಯೋಗಿಕ ಸಮೂಹಗಳೆರಡೆರ ಪ್ರಯೋಗಕ್ಕೆ ಮೊದಲಿನ ಮತ್ತು ನಂತರದ ಅಳತೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ನಂತರ ಉಂಟಾದ ಎಲ್ಲಕ್ಕೂ ಮೊದಲಿನ ಅಂಶಗಳೇ ಕಾರಣವೆಂದು ಅನುಮಿತಿಸಲಾಗದು.
ಪ್ರಾಯೋಗಿಕ ಮತ್ತು ನಿಯಂತ್ರಿತ ಸಮೂಹಗಳ ಆಯ್ಕೆ
ಬದಲಾಯಿಸಿಪ್ರಯೋಗದ ಸಪ್ರಮಾಣತೆಯು ಇವೆರಡು ಸಮೂಹಗಳ ನಡುವಿನ ಏಕರೂಪತೆಯ ಪ್ರಮಾಣವನ್ನು ಆಧರಿಸಿದೆ. ಪ್ರಯೋಗದ ಕೊನೆಯಲ್ಲಿ ಪ್ರಯೋಗದಿಂದಾದ ಪರಿಣಾಮವನ್ನು ಕಂಡುಕೊಳ್ಳಲು ಇವೆರಡೂ ಸಮೂಹಗಳನ್ನು ಹೋಲಿಸಿನೋಡಲಾಗುವುದು. ಇತರೆ ಸಾಧ್ಯ ವ್ಯತ್ಯಯಗಳ ಪ್ರಭಾವವನ್ನು ಪ್ರಯೋಗದ ಮೂಲಕ ನಾವು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇ ಎರಡು ಗುಂಪುಗಳ ನಡುವಿನ ವ್ಯತ್ಯಾಸವನ್ನು ಸ್ವತಂತ್ರ ವ್ಯತ್ಯಯದಿಂದ ಉಂಟಾದುದು ಎಂದು ತಿಳಿಯಲಾಗುತ್ತದೆ.
ಸ್ವತಂತ್ರ ಮತ್ತು ಅವಲಂಬಿತ ವ್ಯತ್ಯಯಗಳು
ಬದಲಾಯಿಸಿಕಾರಣೀಯ ಅಂಶವನ್ನು ಸ್ವತಂತ್ರ ವ್ಯತ್ಯಯವೆಂದೂ ಅದರಿಂದಾಗುವ ಪರಿಣಾಮವನ್ನು ಅವಲಂಬಿತ ವ್ಯತ್ಯಯವೆಂದು ಕರೆಯಲಾಗುತ್ತದೆ. ಮಧ್ಯೆ ಪ್ರವೇಶಿಸುವ ಮತ್ತೂ ಒಂದು ಪ್ರಕಾರದ ವ್ಯತ್ಯಯವಿದೆ. ಇದನ್ನು ಮಧ್ಯೆ ಹಾಯುವ ಅಥವಾ ಮಧ್ಯಸ್ಥಿಕೆಯ ವ್ಯತ್ಯಯ ಎನ್ನಲಾಗಿದೆ. ಇವು ಸ್ವತಂತ್ರ ಮತ್ತು ಅವಲಂಬಿತ ವ್ಯತ್ಯಯಗಳ ನಡುವಿನ ಸಂಬಂಧವನ್ನು ವಿರೂಪಗೊಳಿಸುವ ವ್ಯತ್ಯಯಗಳಾಗಿವೆ. ಆದ್ದರಿಂದ ಸ್ವತಂತ್ರ ಮತ್ತು ಅವಲಮಬಿತ ವ್ಯತ್ಯಯಗಳ ನಡುವಿನ ನಿಜವಾದ ಸಂಬಂಧವನ್ನು ಕಂಡುಕೊಳ್ಳಲು ಮಧ್ಯೆ ಪ್ರೌಏಶಿಸುವ ವ್ಯತ್ಯಯದ ಪ್ರಭಾವನ್ನು ನಿಯಂತ್ರಿಸಬೇಕು. ಹೀಗ ಪ್ರಯೋಗವೊಂದನ್ನು ನಡೆಸಲಾಗುತ್ತದೆ.
ಯಾದೃಚ್ಚೀಕರಣ ಮತ್ತು ಹೊಂದಿಸುವಿಕೆ
ಬದಲಾಯಿಸಿಪ್ರಯೋಗವೊಂದನ್ನು ನಡೆಸಲು ಪ್ರಯೋಗಿಕ ಮತ್ತು ನಿಯಂತ್ರಿತ ಸಮೂಹಗಳು ಒಮದೇ ರೀತಿ ಇರುವುದು ಅತ್ಯಗತ್ಯ. ಇವುಗಳನ್ನು ಒಮದೇ ರಿತಿ ಕಾಣುವಂತೆ ಮಾಡಲು ಎರಡು ತಂತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಅವುಗಳೆಮದರೆ ಯಾದೃಚ್ಚೀಕರಣ ಮತ್ತು ಹೊಂದಿಕೆ. ಸಂಶೋಧನಾ ಸಮಸ್ಯೆಗೆ ಸಂಬಂಧಿಸಿದ ವಿಶ್ವದಿಂದ ಆಯ್ಕೆಯಾಗಿ ಪ್ರಯೋಗಿಕ ಗು೦ಪಿನಲ್ಲಿ ಸೇಫಡೆಯಾಗುವ ಅವಕಾಶವನ್ನು ಪ್ರತಿಯೊಂದು ಘಟಕವೂ ಹೊಂದುವಂತೆ ನೋಡಿಕೊಳ್ಳವು ತಂತ್ರವೇ ಯಾದೃಚ್ಚೀಕರಣ. ಎಲ್ಲ ಸಾಧ್ಯ ಪರಿಗಣೆಯ ಮೇಲೆ ವ್ಯವಸ್ಥಿತವಾಗಿ ಸಮನಾಗಿಸುವ ಮೂಲಕ ಎರಡು ಸಮೂಹಗಳಿಗೆ ವ್ಯಕ್ತಿಗಳನ್ನು ಹಾಕುವ ಪ್ರಕ್ರಿಯೆಯನ್ನು ಹೊಂದಿಸುವಿಕೆ ಎನ್ನಲಾಗಿದೆ. ಹೊಂದಿಸಲು ನಿನಾಯಕ ಗುಣ ಅಥವಾ ವ್ಯತ್ಯಯದ ಆಧಾರದಲ್ಲಿ ಜನಸಂಖ್ಯೆನ್ನು ಸಮನಾಗಿ ವಿಭಜಿಸಬೇಕು.
ಪ್ರಯೋಗ ನಡೆಸುವುದು
ಬದಲಾಯಿಸಿಈಗಾಗಲೇ ನಾವು ಹೇಳಿರುವಂತೆ ಪ್ರಯೋಗವೆಂದರೆ ನಿಯಂತ್ರಿತ ಸನ್ನವೇಶದಲ್ಲಿ ಮಾಡಲಾಗುವ ಅವಲೋಕನೆ. ಅದರ ಹಲವು ವಿಧಾನಗಳು.
- ಒಪ್ಪಂದ ಪದ್ಧತಿ
- ವ್ಯತ್ಯಾಸದ ಪದ್ಧತಿ
- ಒಪ್ಪಂದ ಮತ್ತು ವ್ಯತ್ಯಾಸದ ಒಟ್ಟು ಪದ್ಧತಿ
- ಉಳಿಕೆ ಪದ್ಧತಿ
- ಸಹಗಾಮೀ ವ್ಯತ್ಯಾಸದ ಪದ್ಧತಿ
- ಪ್ರಯೋಗಾತ್ಮಕ ವಿನ್ಯಾಸದ ಪ್ರಕಾರಗಳು
- ಕೇವಲ ನಂತರದ ಪ್ರಾಯೋಗಿಕ ವಿನ್ಯಾಸ.
- ಪೂವಾದ ಪ್ರಾಯೋಗಿಕ ವಿನ್ಯಾಸ
- ಹಿಂದೆ ನಡೆದದ್ದಕ್ಕೂ ಅನ್ವಯಿಸುವ ವಿನ್ಯಾಸ.
- ಅಂಕಣ ಅಧ್ಯಯನ ವಿನ್ಯಾಸ.
ಕೇವಲ ಪ್ರಯೋಗಾತ್ಮಕ ಸಮೂಹ ಮಾತ್ರ ಕಲ್ಪಿತ ಕಾರಣಿಯ ವ್ಯತ್ಯಯಕ್ಕೆ ತೆರೆದುಕೊಂಡಿದೆಯಾದರೂ ನಿಯಂತ್ರಿತ ಸಮೂಹ ಇದರಿಂದ ಕೊನೆಗೊ೦ಡದೆ. ಪ್ರಯೋಗದ ನ೦ತರ ಎರಡೂ ಗುಂಪುಗಳನ್ನು ಹೋಲಿಸಿ ನೋಡಲಾಗುತ್ತದೆ. ಕೇವಲ ನಮತರದ ವಿನ್ಯಾಸದಲ್ಲಿ ಎರಡೂ ಸಮೂಹಗಳನ್ನು ಏಕಪ್ರಕಾರವಾಗಿ ಸಮನಾದವು ಎಂದು ತಿಳಿಯಲಾಗಿದೆ. ಪೂವಾಪರ ಪ್ರಾಯೋಗಿಕ ವಿನ್ಯಾಸದಲ್ಲಿ ಅವಲಂಬಿತ ವ್ಯತ್ಯಯವನ್ನು ಅಂದರೆ ಪರಿಣಾಮವನ್ನು ಪ್ರಯೋಗಕ್ಕೆ ಸಮೂಹವನ್ನು ಅಥವಾ ಸಮೂಹಗಳನ್ನಜು ಒಳಪಡಿಸುವುದಕ್ಕೆ ಮೊದಲು ಮತ್ತು ಓಲಪಡಿಸಿದ ನಂತರ ಅಳೆಯಲಾಗುತ್ತದೆ. ಪ್ರಸಕ್ತದ ಸಮಸ್ಯೆಯೊಂದರಿಂದ ಈ ಮೊದಲಿನ ಕಲ್ಪಿತ ಕಾರಣವೊಂದಕ್ಕೆ ಅನ್ವಯಿಸಲು ಬಳಸಲಾಗುವ ವಿನ್ಯಾಸವನ್ನು ಎಕ್ಸ್ - ಪೋಸ್ಟ್ ಫ್ಯಾಕ್ಟೋ ವಿನ್ಯಾಸ ಎನ್ನುತ್ತಾರೆ. ಈ ವಿಧಾನದಲ್ಲಿ ಪ್ರಸಕ್ತದ ಮೂಲಕ ಗತಕಾಲವನ್ನು ಅಭ್ಯಸಿಸಲಾಗುತ್ತದೆ. ಈ ಪದ್ಧತಿ ಕೆಲವೊಂದು ಮಿತಿಗಳನ್ನು ಹೊಂದಿದೆ. ಹೋಲಿಸಬಹುದಾದ ಎರಡು ಏಕರೂಪದ ಸಮೂಹಗಳು ಅಥವಾ ದೇಶಗಳನ್ನು ಕಂಡುಕೊಳ್ಳುವುದು ಈ ಪದ್ಧತಿಯ ಮಿತಿಗಳಲ್ಲಿ ಒಂದಾಗಿದೆ. ಅಂತೆಯೇ ಹೋಲಿಕೆಗೆ ವಸ್ತುನಿಷ್ಠ ಆದಾರವೊಂದನ್ನು ಕಂಡುಕೊಳ್ಳುವುದು ಕೂಡಾ ಬಹಳ ಕಷ್ಟ. ಎರಡನೆಯದಾಗಿ ಅಧ್ಯಯನಕ್ಕಾಗಿ ನಿಯಂತ್ರಿತ ಪರಿಸ್ಥಿತಿಗಳನ್ನು ಹೊಂದುವುದು ಅಥವಾ ಕೃತಕ ಪರಿಸ್ಥಿತಿಗಳನ್ನು ನಿಮಾಣ ಮಾಡುವುದು ಸಾಧ್ಯವಿಲ್ಲ. ಈ ಪ್ರಕಾರದ ಅಧ್ಯಯನದಲ್ಲಿ ಪೂವಾಪರ ಪ್ರಕಾರದ ಅಧ್ಯಯನ ಸಾಧ್ಯವಿಲ್ಲ.
</ref> ಜಿ.ಸುಬ್ರಹ್ಮಣ್ಯ,(2007),ಸಾಮಾಜಿಕ ಸಂಶೋಧನೆ ಪದತಿಗಳು ಮತ್ತು ತಂತ್ರಗಳು,ಸಪ್ನಾ ಪಬ್ಲಿಷರ್ಸ್
https://kn.wikipedia.org/wiki/%E0%B2%B8%E0%B2%82%E0%B2%B6%E0%B3%8B%E0%B2%A7%E0%B2%A8%E0%B3%86