ಸದಸ್ಯ:Rijin Joel/ನನ್ನ ಪ್ರಯೋಗಪುಟ1

ಬಿಳಿ ಬಣ್ಣದ ಸಂಯೋಜನೆ

ಬಿಳಿಯು ಒಂದು ಪ್ರಕೃತಿಯಲ್ಲಿ ಕಂಡುಬರುವ ಒಂದು ಸಾಧಾರಣ ಬಣ್ಣ. ಸೂರ್ಯಬೆಳಕು ಹಾಗೂ ಸೂರ್ಯನ ಬೆಳಕಿನ ಬಣ್ಣ ಹಾಲು, ಹಿಮ, ಸುಣ್ಣದ ಕಲ್ಲುಗಳ ಮೇಲೆ ಬಿದ್ದಾಗ ಈ ಬಿಳಿಯ ಬಣ್ಣವನ್ನು ಕಾಣಬಹುದು. ನಮ್ಮ ಹಲವಾರು ಸಂಸ್ಕೃತಿಗಳಲ್ಲಿ ಬಿಳಿ ಬಣ್ಣಕ್ಕೆ ತನ್ನದೇ ಆದ ವಿಶೇಷತೆಗಳಿವೆ. ಬಿಳಿಯು ಶಾಂತಿ, ಮುಗ್ಧತೆ ಹಾಗೂ ಬೆಳಕನ್ನು ಸೂಚಿಸುತ್ತದೆ. ಯೂರೋಪ್ ಹಾಗೂ ಅಮೇರಿಕ ಖಂಡಗಳಲ್ಲಿ ನಡೆಸಿದ ಸಮೀಕ್ಷೆಗಳಲ್ಲಿ ಬಿಳಿ ಬಣ್ಣವು ಘನತೆ, ಪರಿಪೂರ್ಣತೆ, ಒಳ್ಳೆಯತನ, ಪ್ರಾಮಾಣಿಕತೆ, ಶುದ್ಧತೆ, ಒಳ್ಳೆಯ ಕೆಲಸದ ಪ್ರಾರಂಭ, ಹೊಸತು, ತಟಸ್ಥತೆ ಹಾಗೂ ನಿಖರತೆಯನ್ನು ಸೂಚಿಸುತ್ತದೆ ಎಂದು ತಿಳಿಯಬಂದಿದೆ.

ಪ್ರಾಚೀನ ಈಜಿಪ್ಚ್ ಹಾಗೂ ರೋಮ್ ಮಹಾ ನಗರಗಳಲ್ಲಿ ಪುರೋಹಿತರು ಹಾಗೂ ದೇವರ ಸೇವಕರು ಬಿಳಿಯ ಬಣ್ಣವನ್ನು ಅತೀ ಶುದ್ಧ ಬಣ್ಣವೆಂದು ಭಾವಿಸಿ ಪೂಜೆಯ ಸಮಯದಲ್ಲಿ ಬಿಳಿಯ ಬಣ್ಣದ ವಸ್ತ್ರಗಳನ್ನೇ ಧರಿಸುತ್ತಾರೆ. ವಿಶ್ವದ ಬಹುತೇಕ ಧರ್ಮಗಳಿಗೆ ಬಿಳಿಯು ಪ್ರಮುಖ ಬಣ್ಣವಾಗಿದೆ. ರೋಮನ್ ಕ್ಯಾಥೋಲಿಕ್ ಧರ್ಮಗುರುಗಳು ಹಾಗೂ ಪೋಪ್ ಬಿಳಿಯ ಬಣ್ಣವನ್ನು ಶುದ್ಧತೆ ಹಾಗೂ ಶಾಂತಿಯ ಸಂಕೇತವಾಗಿ ಧರಿಸುತ್ತಾರೆ. ಇಸ್ಲಾಂ ಹಾಗು ಜಪಾನ್ಶಿಂಟೋ ಧರ್ಮದ ತೀರ್ಥಯಾತ್ರಿಗಳು ತೀರ್ಥಯಾತ್ರೆಯ ಸಂದರ್ಭದಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಉಡುತ್ತಾರೆ. ಭಾರತದಲ್ಲಿ ಬ್ರಾಹ್ಮಣರು ಈ ಬಣ್ಣವನ್ನು ಪವಿತ್ರವೆಂದು ತಿಳಿದು ಅದನ್ನು ಉಡುತ್ತಾರೆ.[] [೧]

ಬಿಳಿಯ ಬಣ್ಣವನ್ನು ಪಡೆಯುವುದು ಹೇಗೆ?

ಬದಲಾಯಿಸಿ

ಕೆಂಪು, ನೀಲಿ ಹಾಗೂ ಹಸಿರು ಬಣ್ಣಗಳನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡುವುದರಿಂದ ಬಿಳಿಯ ಬಣ್ಣವನ್ನು ಪಡೆಯಬಹುದು.

ಬಾಹ್ಯ ಕೊಂಡಿ

ಬದಲಾಯಿಸಿ

https://en.wikipedia.org/wiki/RGB_color_model

ಉಲ್ಲೇಖ

ಬದಲಾಯಿಸಿ
  1. Eva Heller (2000), Psychologie de la couleur – effets ets symboliques, pp. 130–46