ಆಮ್ಲ ಮಳೆಯು ಸಾಮಾನ್ಯವಾಗಿ ಒಂದು ರೀತಿಯ ಆಮ್ಲೀಯ ಮಳೆಯಾಗಿದೆ. ಇದರ ಅರ್ಥ ಹೆಚ್ಚಾದ ಜಲಜನಕ ಅಯಾನುಗಳನ್ನು ಹೊಂದಿರುವುದು (ಕಡಿಮೆ ಪಿಹೆಚ್ಚ್). ಇದು ಸಸ್ಯಗಳ, ಜಲವಾಸಿ ಪ್ರಾಣಿಗಳ ಮತ್ತು ಮೂಲಸೌಕರ್ಯಗಳ ಮೇಲೆ ಅಪಾಯಕಾರಿ ಪರಿಣಾಮ ಹೊಂದಿದೆ. ,.ಆಮ್ಲ ಮಳೆಯು ಗಂಧಕದ ಡೈ ಆಕ್ಸೈಡ್ ಮತ್ತು ಸಾರಜನಕದ ಆಕ್ಸೈಡ್ ಗಳ ಹೊರಸೂಸುವಿಕೆಯಿಂದ ಉಂಟಾಗಿದೆ. ಗಂಧಕದ ಡೈ ಆಕ್ಸೈಡ್ ಮತ್ತು ಸಾರಜನಕದ ಆಕ್ಸೈಡ್ ಗಳು ವಾತಾವರಣದಲ್ಲಿರುವ ನೀರಿನ ಅಣುಗಳೊಂದಿಗೆ ವರ್ತಿಸಿದಾಗ ಆಮ್ಲಯು ಉತ್ಪತ್ತಿಯಾಗುತ್ತದೆ. ಸಾರಜನಕದ ಆಕ್ಸೈಡ್ ಗಳು ಸ್ವಾಭಾವಿಕವಾಗಿಯೂ ಕೂಡ ಮಿಂಚಿನ ಹೊಡೆತಗಳಿಂದ ಮತ್ತು ಗಂಧಕದ ಡೈ ಆಕ್ಸೈಡ್ ಗಳು ಜ್ವಾಲಮುಖಿಯಿಂದಲೂ ಉತ್ಪತ್ತಿಯಾಗುತ್ತವೆ. ಆಮ್ಲ ಮಳೆಯಲ್ಲಿರುವ ರಾಸಾಯನಿಕಗಳು ಬಣ್ಣ ಸಿಪ್ಪೆಯಾಗುವಿಕೆ, ಉಕ್ಕಿನ ಪದಾರ್ಥಗಳು ತುಕ್ಕು ಹಿಡಿಯುವಿಕೆ, ಕಲ್ಲಿನ ಪ್ರತಿಮೆಗಳ ಸವೆತಕ್ಕೆ ಕಾರಣವಾಗುತ್ತವೆ.

ವ್ಯಾಖ್ಯಾನ

ಬದಲಾಯಿಸಿ

ಆಮ್ಲ ಮಳೆಯು ಒಂದು ಜನಪ್ರಿಯ ಪದವಾಗಿದ್ದು, ಒದ್ದೆ (ಮಳೆ, ಹಿಮ, ಆಲಿಕಲ್ಲು ಮಳೆ, ಮಂಜು, ಮೋಡಮಳೆ, ಮತ್ತು ಇಬ್ಬನಿ) ಮತ್ತು ಒಣ (ಆಮ್ಲೀಕರಿಸುತ್ತಿರುವ ಕಣಗಳು ಮತ್ತು ಅನಿಲಗಳು) ಆಮ್ಲೀಯ ಘಟಕಗಳ ಶೇಖರಣೆ ಎಂದು ಉಲ್ಲೇಖಿಸಲಾಗಿದೆ.
ಬಟ್ಟಿ ಇಳಿಸಿದ ನೀರಿನಿಂದ ಒಮ್ಮೆ ಇಂಗಾಲದ ಡೈ ಆಕ್ಸೈಡ್ ಹೊರ ತೆಗೆದರೆ ಇದರ ಪಿಹೆಚ್ ತಟಸ್ಥ (೭) ಕ್ಕೆ ಬರುವುದು. ಪಿಹೆಚ್ ೭ ಕ್ಕಿಂತ ಕಡಿಮೆ ಇರುವ ದ್ರವಗಳು ಆಮ್ಲೀಯವಾಗಿರುತ್ತವೆ ಹಾಗು ಪಿಹೆಚ್ ೭ ಕ್ಕಿಂತ ಹೆಚ್ಚು ಇರುವ ದ್ರವಗಳು ಕ್ಷಾರೀಯವಾಗಿರುತ್ತವೆ. ಕಲುಷಿತವಲ್ಲದ, ಶುದ್ಧವಾದ ಮಳೆ ನೀರು ಆಮ್ಲೀಯ ಪಿಹೆಚ್ ಹೊಂದಿರುತ್ತದೆ, ಆದರೆ ಸಾಮಾನ್ಯವಾಗಿ ೫.೭ ಕ್ಕಿಂತ ಕಡಿಮೆಯಿರುವುದಿಲ್ಲ. ಇದಕ್ಕೆ ಕಾರಣ ಗಾಳಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಮತ್ತು ನೀರು ಪರಸ್ಪರ ವರ್ತಿಸಿ, ದುರ್ಬಲ ಆಮ್ಲವಾದ ಕಾರ್ಬೋನಿಕಾಮ್ಲದ ರೂಪಕ್ಕೆ ಈ ಕೆಳಗಿನ ರಾಸಾಯನಿಕ ಪ್ರತಿಕಿಯೆಯ ಪ್ರಕಾರ ಬರುತ್ತವೆ.

H2O(ದ್ರ) + CO2(ಅ)   H2CO3(ಜ)

ಕಾರ್ಬೋನಿಕಾಮ್ಲವು ಮತ್ತೆ ನೀರಿನಲ್ಲಿ ಅಯಾನೀಕೃತಗೊಂಡು ಕಡಿಮೆ ಸಾಂದ್ರತೆಯುಳ್ಳ ಹೈಡ್ರೋನಿಯಮ್ ಮತ್ತು ಕಾರ್ಬೊನೇಟ್ ಅಯಾನುಗಳಾಗಿ ಮಾರ್ಪಡುತ್ತವೆ.[]

H2O(ದ್ರ) + H2CO3 (ಜ)   HCO3-(ಜ) + H3O+(ಜ)

 
ಆಮ್ಲ ಮಳೆಯಿಂದ ಹಾನಿಗೊಳಗಾದ ಗಾರ್ಗೋಯಿಲ್ ಪ್ರತಿಮೆ

ಇತಿಹಾಸ

ಬದಲಾಯಿಸಿ

ಸುಣ್ಣದ ಕಲ್ಲು ಮತ್ತು ಅಮೃತಶಿಲೆಗಳ ಮೇಲೆ ಕಲುಶಿತ ನಗರದ ಆಮ್ಲೀಯ ವಾಯುವಿನ ನಾಶಲಕಾರಿ ಪರಿಣಾಮವನ್ನು ೧೭ನೇ ಶತಮಾನದಲ್ಲಿ ಜಾನ್ ಎವಿಲಿನ್ ಎಂಬುವವರು ಗಮನಿಸಿದರು ಹಾಗು ಅರುಂಡೆಲ್ ಅಮೃತಶಿಲೆಯ ದುಸ್ಥಿತಿ ಗುರುತುಸಿದರು. ಕೈಗಾರಿಕಾ ಕ್ರಾಂತೀಕರಣದಿಂದ, ವಾತಾವರಣದಲ್ಲಿ ಗಂಧಕದ ಡೈ ಆಕ್ಸೈಡ್ ಮತ್ತು ಸಾರಜನಕದ ಆಕ್ಸೈಡ್ ಗಳ ಹೊರಸೂಸುವಿಕೆ ಹೆಚ್ಚಾಯಿತು. ೧೮೫೨ರಲ್ಲಿ ರಾಬರ್ಟ್ ಆಂಗಸ್ ಸ್ಮಿತ್ ಎಂಬುವವರು ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಗರದಲ್ಲಿ ಆಮ್ಲ ಮಳೆ ಮತ್ತು ವಾತಾವರಣದಲ್ಲಿಯ ಮಾಲಿನ್ಯತೆ ನಡುವೆ ಇರುವ ಸಂಬಂಧವನ್ನು ತೋರಿಸಿಕೊಟ್ಟವರಲ್ಲಿ ಪ್ರಥಮರೆನಿಸಿಕೊಂಡರು.
ಆಮ್ಲ ಮಳೆಯನ್ನು ೧೮೫೩ರಲ್ಲೇ ಕಂಡುಹಿಡಿದರೂ ಕೂಡ ೧೮೬೦ರ ನಂತರ ವಿಜ್ಞಾನಿಗಳು ಈ ವಿದ್ಯಮಾನವನ್ನು ವ್ಯಾಪಕವಾಗಿ ವೀಕ್ಷಿಸುವುದಕ್ಕೆ ಮತ್ತು ಅಧ್ಯಯನ ಮಾಡುವುದಕ್ಕೆ ಪ್ರಾರಂಭಿಸಿದರು. ಹಾರೊಲ್ಡ್ ಹಾರ್ವೆ ಎಂಬ ಕೆನಡ ವಿಜ್ಞಾನಿಯು 'ಸತ್ತ ಸರೋವರ' (ಡೆಡ್ ಲೇಕ್) ಬಗ್ಗೆ ಸಂಶೋಧನೆ ನಡೆಸಿದ ಹಲವರಲ್ಲಿ ಪ್ರಥಮರೆನಿಸಿದರು. ಹಬ್ಬರ್ಡ್ ಬ್ರೂಕ್ ಎ‍ಕ್ಸ್ಪೆರಿಮೆಂಟಲ್ ಫಾರೆಸ್ಟ್ ಪ್ರಯೋಗಾಲಯದ ವರದಿಯನ್ನು 'ದಿ ನ್ಯುಯಾರ್ಕ್ ಟೈಮ್ಸ್' ಪತ್ರಿಕೆಯು ಪ್ರಕಟಿಸಿದ ನಂತರ 'ಯುನೈಟೆಡ್ ಸ್ಟೇಟ್'ನಲ್ಲಿ ಆಮ್ಲ ಮಳೆಯ ಬಗ್ಗೆ ಸಾರ್ವಜನಿಕ ಅರಿವು ಹೆಚ್ಚಾಯಿತು.[]

ಆಮ್ಲ ಮಳೆಯ ಪ್ರತಿಕೂಲ ಪರಿಣಾಮಗಳು

ಬದಲಾಯಿಸಿ

ಆಮ್ಲ ಮಳೆಯು ಕಾಡುಗಳ, ತಾಜಾನೀರಿನ ಮತ್ತು ಮಣ್ಣಿನ, ಕೀಟ ಮತ್ತು ಜಲಚರ ವಾಶಿಗಳ, ಕಟ್ಟಡಗಳ ಹಾಗು ಮಾನವರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ತೋರಿಸಲಾಗಿದೆ.

ಮೇಲ್ಮೈನೀರಿನ ಮತ್ತು ಜಲಚತರ ಪ್ರಾಣಿಗಳ ಮೇಲಿನ ಪರಿಣಾಮ

ಬದಲಾಯಿಸಿ

ಆಮ್ಲ ಮಳೆಯ ಪರಿಣಾಮದಿಂದಾದ ಮೇಲ್ಮೈನೀರಿನ ಕಡಿಮೆ ಪಿಹೆಚ್ ಮತ್ತು ಹೆಚ್ಚಾದ ಅಲ್ಯುಮಿನಿಯಮ್ ಸಾರತೆಯು ಮೀನು ಮತ್ತು ಇತರೆ ಜಲಚರ ಪ್ರಾಣಿಗಳ ಮೇಲೆ ಹಾನಿಯನ್ನುಂಟುಮಾಡುತ್ತವೆ.ಪಿಹೆಚ್ ಮಟ್ಟ ೫ಕ್ಕಿಂತ ಕಡಿಮೆಯಾದಾಗ ಸಾಮಾನ್ಯವಾಗಿ ಮೀನುಗಳ ಮೊಟ್ಟೆ ಒಡೆಯುದಿಲ್ಲ ಮತ್ತು ವಯಸ್ಕ ಮೀನುಗಳು ಸಾಯುತ್ತವೆ. ಸರೋವರಗಳು ಮತ್ತು ನದಿಗಳು ಹೆಚ್ಚು ಹೆಚ್ಚು ಆಮ್ಲೀಯವಾದಂತೆ ಜೀವ ವೈವಿಧ್ಯತೆ ಕುಂಠಿತಗೊಳ್ಳುವುದು. ಆಮ್ಲ ಮಳೆಯು ಭೌಗೋಳಿಕವಾಗಿ ಸೂಕ್ಷ್ಮ ಪ್ರದೇಶಗಳಾದ ಯುನೈಟೆಡ್ ಸ್ಟೇಟ್ ಆಫ್ ಆಡಿರೋಂಡಾಕ್ ಪರ್ವತಗಳ ಕೆಲವು ಸರೋವರಗಳಲ್ಲಿ, ಹೊಳೆಗಳಲ್ಲಿ, ಕುಂಟೆಗಳಲ್ಲಿ ಬ್ರೂಕ್ ಟ್ರೌಟ್ ಸೇರಿದಂತೆ ಕೆಲವು ಮೀನುಗಳ ಕೀಟ ಜೀವನಗಳ ನಾಶ ಮಾಡಿದೆ.

ಮಣ್ಣಿನ ಮೇಲಿನ ಪರಿಣಾಮ

ಬದಲಾಯಿಸಿ

ಆಮ್ಲ ಮಳೆಯು ಮಣ್ಣಿನ ಜೀವ ಶಾಸ್ತ್ರ, ರಸಾಯನ ಶಾಸ್ತ್ರದ ಮೇಲೆ ಗಂಭೀರವಾಗಿ ಪರಿಣಾಮ ಬೀರಿದೆ. ಕೆಲವು ಸೂಕ್ಷ್ಮ ಜೀವಿಗಳು ಕಡಿಮೆ ಪಿಹೆಚ್ ಬದಲಾವಣೆಯನ್ನು ಸಹಿಸುವುದಿಲ್ಲ. ಈ ಸೂಕ್ಷ್ಮ ಜೀವಿಗಳಲ್ಲಿರುವ ಕಿಣ್ವಗಳು ಆಮ್ಲ ಮಳೆಯ ಕಾರಣದಿಂದಾಗಿ ತಮ್ಮ ಗುಣ ಸ್ವಭಾವ ಕಳೆದುಕೊಳ್ಳುತ್ತವೆ. ಆಮ್ಲ ಮಳೆಯ ಹೈಡ್ರೋನಿಯಮ್ ಅಯಾನುಗಳು ಅಲ್ಯುಮಿನಿಯಂ ನಂತಹ ಜೀವಾಣುಗಳನ್ನು ಸಜ್ಜುಗೊಳಿಸಲು ಹಾಗು ಮೆಗ್ನೀಶಿಯಂ ನಂತಹ ಅತ್ಯಾವಶ್ಯಕ ಪೋಷಕಾಂಶಗಳನ್ನು, ಖನಿಜಗಳನ್ನು ಪ್ರತ್ಯೇಕಿಸುವುದು.

2H+(ಜ) + Mg2+(ಮಣ್ಣು)   2H+(ಮಣ್ಣು) + Mg2+(ಜ)

ಕಾಡು ಮತ್ತು ಇತರೆ ಸಸ್ಯಗಳ ಮೇಲಿನ ಪರಿಣಾಮ

ಬದಲಾಯಿಸಿ

ಮೋಡ ಮತ್ತು ಮಂಜಿನಿಂದ ಸುತ್ತುವರೆದ ಎತ್ತರದ ಕಾಡುಗಳು ಆಮ್ಲ ಮಳೆಯಿಂದಾಗಿ ಹೆಚ್ಚು ಹಾನಿಗೊಳಗಾಗುತ್ತವೆ. ಇತರೆ ಸಸ್ಯಹಗಳೂ ಸಹ ಆಮ್ಲ ಮಳೆಯಿಂದ ಹಾಳಾಗಬಹುದು.[]

 
ಕಾಡಿನ ಮೇಲೆ ಆಮ್ಲ ಮಳೆಯ ಪರಿಣಾಮ

ಮನುಷ್ಯನ ಆರೋಗ್ಯದ ಮೇಲಿನ ಪರಿಣಾಮ

ಬದಲಾಯಿಸಿ

ಆಮ್ಲ ಮಳೆ ನೇರವಾಗಿ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಆಮ್ಲ ಮಳೆಯಲ್ಲಿರುವ ಆಮ್ಲವು ಪ್ರತಿಕೂಲ ಪರಿಣಾಮ ಬೀರಲು ತುಂಬ ದುರ್ಬಲವಾಗಿದೆ. ಆದರೆ ಆಮ್ಲ ಮಳೆಗೆ ಕಾರಣವಾಗುವ ಕಣಗಳ ಸಂಖ್ಯೆ ಗಾಳಿಯಲ್ಲಿ ಹೆಚ್ಚಾದಾಗ ಅಸ್ತಮ ಮತ್ತು ಬ್ರಾಂಕೈಟಿಸ್ ಸೇರಿದಂತೆ ಹೃದಯ ಹಾಗು ಶ್ವಾಸಕೋಶದ ಸಮಸ್ಯೆಗಳು ಉದ್ಭವಿಸಬಹುದು.[]

ಉಲ್ಲೇಖಗಳು

ಬದಲಾಯಿಸಿ
  1. Likens, Gene E.; Keene, William C.; Miller, John M.; Galloway, James N. (1987). "Chemistry of precipitation from a remote, terrestrial site in Australia". Journal of Geophysical Research. 92: 13299. doi:10.1029/JD092iD11p13299.{{cite journal}}: CS1 maint: multiple names: authors list (link)
  2. "Art Under Wraps", Harvard Magazine, March–April 2000
  3. Lazarus, Brynne E.; Schaberg, Paul G.; Hawley, Gary J.; DeHayes, Donald H. (2006). "Landscape-scale spatial patterns of winter injury to red spruce foliage in a year of heavy region-wide injury" (PDF). Can. J. For. Res. 36: 142–152. doi:10.1139/x05-236.{{cite journal}}: CS1 maint: multiple names: authors list (link) highbeam copy
  4. Effects of Acid Rain – Human Health. Epa.gov (2006-06-02). Retrieved on 2013-02-09.