ನನ್ನ ಹಿನ್ನಲೆ 

ಬದಲಾಯಿಸಿ
 

ನನ್ನ ಹೆಸರು ಪ್ರತಿಕ ಗೌಡ. ನಾನು ಕ್ರಿಸ್ಟ್ ಕಾಲೇಜಿನಲ್ಲಿ ಬಿ.ಎಸ್.ಸಿಯ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಊರು ಚಿಕ್ಕಮಗಳೂರು.ಚಿಕ್ಕಮಗಳೂರು ಬಾಬಾ ಬುಡನ್ ಗಿರಿ , ಕುದುರೆಮುಖ , ಮುಳ್ಳಯ್ಯನ ಗಿರಿ, ಕಳಸ , ಕೊಪ್ಪಶೃಂಗೇರಿ , ಬಾಳೆಹೊನ್ನೂರು ಮತ್ತು ಮೂಡಿಗರೆ ಮುಂತಾದ ಗಿರಿಧಾಮಗಳಿಂದ ಭಾರತದಿಂದ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಭಾರತದಲ್ಲಿ ಮೊದಲ ಬಾರಿಗೆ ಕಾಫಿ ಕೃಷಿ ಪ್ರಾರಂಭವಾಗಿದ್ದು ಚಿಕ್ಕಮಗಳೂರಿನಲ್ಲಿ, ಆದ್ದರಿಂದ ಕಾಫಿ ನಾಡು ಎಂದೇ ಖ್ಯಾತಿಯಾಗಿದೆ. ನಮ್ಮ ಮನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಡ್ಡೀಕೆರೆ ಎಂಬ ಒಂದು ಸಣ್ಣ ಗ್ರಾಮದಲ್ಲಿದೆ. ಅಲ್ಲಿ ನನ್ನ ತಂದೆ-ತಾಯಿ ವಾಸವಗಿದ್ದು, ನಾನು ವ್ಯಾಸಂಗಕ್ಕೆಂದು ಬೆಂಗಳೂರಿಗೆ ಬಂದ್ದಿದ್ದೇನೆ.

ನನ್ನ ಆಸಕ್ತಿ

ಬದಲಾಯಿಸಿ

ನಾನು ಹನ್ನೊಂದನೆಯ ತರಗತಿಗೆ ಕ್ರಿಸ್ಟ್ ಕಾಲೇಜಿಗೆ ಸೆರಿದಾಗ ನನ್ನನ್ನು ಸೆಳೆದಿದ್ದು ಎನ್.ಸಿ.ಸಿ ( ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್).ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ ಸೈನ್ಯ  , ನೌಕಾಪಡೆ ಮತ್ತು ವಾಯುಪಡೆಗಳನ್ನು ಒಳಗೊಂಡಿರುವ ಟ್ರೈ-ಸರ್ವಿಸಸ್

 
177.955x177.955px

ಆರ್ಗನೈಸೇಶನ್ ಆಗಿದ್ದು, ದೇಶದ ಯುವಕರನ್ನು ಶಿಸ್ತಿನ ಮತ್ತು ದೇಶಭಕ್ತಿಯ ಪ್ರಜೆಗಳಾಗಿ ರೂಪಗೊಳಿಸುವುದು ತೊಡಗಿಸಿಕೊಂಡಿದೆ.

ಇದು ನನ್ನ ಬದುಕಿನ ದಾರಿಯನ್ನೇ ಬದಲಿಸಿತು.

 

ನನ್ನ ಚಟುವಟಿಕೆಗಳು

ಬದಲಾಯಿಸಿ

ನಾನು ಎನ್.ಸಿ.ಸಿಯ ಮೂಲಕ ಅನೇಕ ಕ್ಯಾಂಪ್ಗಳಿಗೆ ಹೋಗಿದ್ದೇನೆ. ಅದರಲ್ಲಿ ೨೦೧೬ರಲ್ಲಿ ಹಿಮಾಲಯನ್ ಪರ್ವತಸಂಸ್ಥೆ ಇನ್ಸ್ಟಿಟ್ಯೂಟ್ಗೆ(HMI ಡಾರ್ಜಿಲಿಂಗ್ ) ಕೈಗೊಂಡ ಚಾರಾಣ ಪ್ರಮೂಖವಾದದ್ದು.೧೯೫೩ರಲ್ಲಿ ಮೌಂಟ್ ಎವರೆಸ್ಟ್ನ ಮೊದಲ ಆರೋಹಣವಾದ ಟೆನ್ಜಿಂಗ್ ನೋರ್ಗೆ ಮತ್ತು ಎಡ್ಮಂಡ್ ಹಿಲರಿ ಅವರು ಪರ್ವತಾರೋಹಣವನ್ನು ಈ ಪ್ರದೇಶದ ಜನರಿಗೆ ಉತ್ತಮ ಗೌರವಾನ್ವಿತ ಪ್ರಯತ್ನವೆಂಬ ಆಸಕ್ತಿಯನ್ನು ಹುಟ್ಟುಹಾಕಿದರು.ಈ ಚಾರಣಕ್ಕಾಗಿ ೨೦ ಕ್ಯಾಡೆಟ್ಗಳನ್ನು ಆಯ್ಕೆಮಾಡಿ ಅವರಿಗೆ ೨ ತಿಂಗಳ ತರಬೇತಿ ನೀಡಲಾಗಿತ್ತು.ಅಲ್ಲಿ ನಮಗೆ ರಾಕ್ ಕ್ಲೈಂಬಿಂಗ್,ಪರ್ವತಾರೋಹಣ,ರಿವರ್ ಸಸ್ಪೆನ್ಷನ್ ಮುಂತಾದ ಸಾಹಸಗಳನ್ನು ಮಾಡಿಸಿದರು. ನಾವು ನೇಪಾಳ, ಸಿಕ್ಕಿಂ,ಗ್ಯಾಂಗ್ಟಾಕ್ ಮತ್ತು ಮುಂತಾದ ಆಕರ್ಷಕ ತಾಣಗಳಿಗೆ ಭೇಟಿ ನೀಡಿದೆವು. ಇದಾದ ಮೇಲೆ ನನ್ನ ಮುಂದಿನ ಕ್ಯಾಂಪ್ ರಾಜಸ್ಥಾನದ ಅಜ್ಮೀರ್ ನಗರದಲ್ಲಿ. ಅಲ್ಲಿನ ಅಜ್ಮೀರ್ ಶರೀಫ್ ದರ್ಗಾ,ಸೋನಿಜೀ ಕೀ ನಾಶಿಯಾನ್,ನರೇಲಿ ಜೈನ ದೇವಾಲಯ ಪ್ರಮುಖ ತಾಣಗಳು.ಇದಿಷ್ಟೇ ಅಲ್ಲದೆ ನನಗೆ ಕಾದಂಬರಿಗಲಳನ್ನು ಓದುವುದರಲ್ಲೂ ಆಸಕ್ತಿ ಇದ್ದು, ಸುಧಾಮೂರ್ತಿ ನನ್ನ ನೆಚ್ಚಿನ ಲೇಖಕಿಯಾಗಿದ್ದಾರೆ. ಇದು ನನ್ನ ಸಂಕ್ಷಿಪ್ತ ಪರಿಚಯ.