ಸದಸ್ಯ:Pranavshivakumar/10

(ಸದಸ್ಯ:Pranavs17/10 ಇಂದ ಪುನರ್ನಿರ್ದೇಶಿತ)

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಜಸ್ಬೀರ್ ಸಿಂಗ್ ಬುಮ್ರಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗಿ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.

ಆರಂಭಿಕ ಜೀವನ

ಬದಲಾಯಿಸಿ

ಬುಮ್ರಾ ರವರು ಡಿಸೆಂಬರ್ ೦೬,೧೯೯೩ರಂದು ಅಹೆಮ್ದಬಾದ್, ಗುಜರಾತ್ನಲ್ಲಿ ಜನಿಸಿದರು. ಗುಜರಾತ್ ನ ೧೯ರ ವಯ್ಯೋಮಿತಿ ಕ್ರಿಕೆಟ್ ತಂಡಕ್ಕೆ ಆಡಲು ಆರಂಭಿಸಿದರು. ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಥಾನ ಪಡೆದರು.[]

ವೃತ್ತಿ ಜೀವನ

ಬದಲಾಯಿಸಿ

ಐಪಿಎಲ್ ಕ್ರಿಕೆಟ್

ಬದಲಾಯಿಸಿ

ಏಪ್ರಿಲ್ ೦೪, ೨೦೧೩ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರಲ್ಲಿರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾದಾರ್ಪಣೆ ಮಾಡಿದರು.ಇಂಡಿಯನ್ ಪ್ರೀಮಿಯರ್ ಲೀಗ್ ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ೩೨ ರನ್ ನೀಡಿದರು.ಇಲ್ಲಿಯವರೆಗೆ ಐಪಿಎಲ್ ನಲ್ಲಿ ೪೬ ವಿಕೆಟ್ ಗಳನ್ನ ಪಡೆದಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡುತ್ತಾರೆ.[][][]

ಅಂತರರಾಷ್ಟ್ರೀಯ ಕ್ರಿಕೆಟ್

ಬದಲಾಯಿಸಿ

ಜನವರಿ ೨೩, ೨೦೧೬ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಐದನೇ ಹಾಗು ಕೊನೆಯ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಈ ಪಂದ್ಯದಲ್ಲಿ ತಮ್ಮ ೧೦ ಓವರ್ ಗಳಲ್ಲಿ ಕೇವಲ ೪೦ರನ್ ನೀಡಿ ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್ ಹಾಗು ಆಲರೌಂಡರ್ ಜೇಮ್ಸ್ ಫಲ್ಕನರ್ ರವರ ವಿಕೆಟ್ ಪಡೆದರು. ಜನವರಿ ೨೬, ೨೦೧೬ರಂದು ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಟಿ-೨೦ ಪಂದ್ಯದಲ್ಲಿ ಕೇವಲ ೨೩ ರನ್ ನೀಡಿ ೩ ವಿಕೆಟ್ ಪಡೆದರು.[][]

ಶ್ರೇಯಾಂಕ

ಬದಲಾಯಿಸಿ
  • ಪ್ರಸ್ತುತ ಉಮೇಶ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ[] ಪ್ರಕಟಿಸುವ ಬಾಲಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
    • ಟಿ-೨೦ ಕ್ರಿಕೆಟ್ ಶ್ರೇಯಾಂಕದಲ್ಲಿ ೦೧ನೇ ಸ್ಥಾನವನ್ನು ಹೊಂದಿದ್ದಾರೆ.[]
    • ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೦೩ನೇ ಸ್ಥಾನವನ್ನು ಹೊಂದಿದ್ದಾರೆ.[]


ಪಂದ್ಯಗಳು

ಬದಲಾಯಿಸಿ
  • ಏಕದಿನ ಕ್ರಿಕೆಟ್ : ೨೮ ಪಂದ್ಯಗಳು[೧೦][೧೧]
  • ಟಿ-೨೦ ಕ್ರಿಕೆಟ್ : ೩೦ ಪಂದ್ಯಗಳು
  • ಐಪಿಎಲ್ ಕ್ರಿಕೆಟ್ : ೪೭ ಪಂದ್ಯಗಳು


ವಿಕೆಟ್ ಗಳು

ಬದಲಾಯಿಸಿ
  1. ಏಕದಿನ ಪಂದ್ಯಗಳಲ್ಲಿ : ೫೨
  2. ಟಿ-೨೦ ಪಂದ್ಯಗಳಲ್ಲಿ  : ೪೦
  3. ಐಪಿಎಲ್ ಪಂದ್ಯಗಳಲ್ಲಿ  : ೪೬


ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Jasprit_Bumrah
  2. http://www.cricbuzz.com/live-cricket-scorecard/11867/royal-challengers-bangalore-vs-mumbai-indians-2nd-match-indian-premier-league-2013
  3. http://www.mumbaiindians.com/team/jasprit-bumrah/
  4. http://www.iplt20.com/teams/mumbai-indians/squad/1124/Jasprit-Bumrah/
  5. http://www.cricbuzz.com/live-cricket-scorecard/14881/australia-vs-india-5th-odi-india-tour-of-australia-2016
  6. http://www.cricbuzz.com/live-cricket-scorecard/14882/australia-vs-india-1st-t20i-india-tour-of-australia-2016
  7. https://www.icc-cricket.com/
  8. https://www.icc-cricket.com/rankings/mens/player-rankings/t20i/bowling
  9. https://www.icc-cricket.com/rankings/mens/player-rankings/odi/bowling
  10. http://www.espncricinfo.com/india/content/player/625383.html
  11. http://www.cricbuzz.com/profiles/9311/jasprit-bumrah#profile