ಬೀಜಕಣ
ಬೀಜಕಣ


ಬೀಜಕಣ:

ಜೀವಕೋಶದ ಪ್ರಮುಖ ಅಂಗಕ ಬೀಜಕಣ. ಜೀವಕೋಶಗಳಲ್ಲಿರುವ ಬೀಜಕಣಗಳ ಸಂಖ್ಯೆ ಬದಲಾಗುತ್ತವೆ. ಒಂದು ಬೀಜಕಣವಿದ್ದರೆ ಒಂದು-ಕೋಶಕೇಂದ್ರವುಳ್ಳ (ಒಂದೇ ನ್ಯೂಕ್ಲಿಯಸ್), ಎರಡಿದ್ದರೆ ದ್ವಿ-ಕೋಶಕೇಂದ್ರವುಳ್ಳ (ಎರಡು ನ್ಯೂಕ್ಲಿಯಸ್) ಅಥವ ಅದಕ್ಕಿಂತಲೂ ಹೆಚ್ಚಿದ್ದಲ್ಲಿ ಬಹು ಕೋಶಕೇಂದ್ರವುಳ್ಳ ಜೀವಕಣಗಳೆಂದು ಕರೆಯಲಾಗುತ್ತದೆ. ಎಲ್ಲಾ ಯೂಕ್ಯಾರಿಯೋಟಿಕ್ ಜೀವಕೋಶಗಳಲ್ಲಿಯೂ ಬೀಜಕಣಗಳು ಕಂಡುಬರುತ್ತವೆ. ಅವು ಸಸ್ತನಿಗಳ ಕೆಂಪು ರಕ್ತ ಕಣಗಳಂತಹ ಕೆಲವು ಜೀವಕೋಶಗಳಲ್ಲಿ ಇಲ್ಲದಿರಬಹುದು. ಬೀಜಕಣಗಳು ಸಾಮಾನ್ಯವಾಗಿ ಅಂಡಾಕಾರದ್ದಾಗಿರುತ್ತವೆ. ಆದರೆ ಕೆಲವೊಮ್ಮೆ ಜೀವಕೋಶದ ಆಕಾರದ ಬದಲಾವಣೆಯಿಂದಾಗಿ ಡಿಸ್ಕ್ ಆಕಾರವುಳ್ಳ ಬೀಜಕಣಗಳೂ ಸಹ ಕಂಡುಬರುತ್ತವೆ. ಯೂಕ್ಯಾರಿಯೋಟಿಕ್ ಜೀವಕಣಗಳಲ್ಲಿ ಪ್ರಸ್ತುತ ಬೀಜಕಣ ಎರಡು ಸೂಕ್ಷ್ಮ ಚರ್ಮವನ್ನುಳ್ಳ ಅಂಗಕ. ಬೀಜಕಣವು ಜೀವಕೋಶದ ಆನುವಂಶಿಕ ಅಂಶಗಳೊಂದಿಗೆ ರೂಪಿಸಲ್ಪಡುತ್ತದೆ. ಬೀಜಕಣಗಳು ಜೀವಕೋಶದ ಎಲ್ಲಾ ಚಟುವಟಿಕೆಗಳನ್ನು, ಅನುವಂಶೀಯ ಸಮಗ್ರತೆಯನ್ನು ಸಹ ನಿಭಾಯಿಸುತ್ತದೆ. ಆದ್ದರಿಂದ, ಬೀಜಕಣವನ್ನು ಜೀವಕಣ ನಿಗ್ರಹಿಸುವ ಕೇಂದ್ರ ಎಂದು ಕರೆಯಲಾಗುತ್ತದೆ.

ಇತಿಹಾಸ

ಬದಲಾಯಿಸಿ

ಬೀಜಕಣವು ಜೀವಕೋಶದ ಅಂಗಕಗಳಲ್ಲಿ ಕಂಡುಹಿಡಿಯಲಾದ ಮೊದಲ ಅಂಗಕ. ಆಂಟೊನಿ ವಾನ್ ಲೀವೆನ್ ಹುಕ್(೧೬೩೨-೧೭೨೩) ಸುರ್ಮಾಯ್(ಸಾಲಮನ್) ಮೀನಿನ ಕೆಂಪು ರಕ್ತ ಕಣಗಳಲ್ಲಿ ಲುಮೆನ್(ಬೀಜಕಣ) ಕಂಡನು. ೧೮೩೩ರಲ್ಲಿ ರಾಬರ್ಟ್ ಬ್ರೌನ್ ರವರು ಸಸ್ಯ ಕೋಶಗಳಲ್ಲಿ ಬೀಜಕಣವನ್ನು(ನ್ಯೂಕ್ಲಿಯಸ್) ಕಂಡುಹಿಡಿದರು. ಬೀಜಕಣ(ನ್ಯೂಕ್ಲಿಯಸ್) ಎಂದರೆ ಲ್ಯಾಟಿನ್ನಲ್ಲಿ ತಿರುಳು(ಕೆರ್ನಲ್) ಎಂದರ್ಥ.

ಬೀಜಕಣಗಳ ರಚನೆ

ಬದಲಾಯಿಸಿ

ಬೀಜಕಣ ಜೀವಕೋಶದ ದೊಡ್ಡ ಅಂಗಕ. ಬೀಜಕಣ ದಟ್ಟವಾದ, ಗೋಲಾಕೃತಿಯ ಅಂಗಕದಂತೆ ಕಂಡುಬರುತ್ತದೆ. ಇದು ಜೀವಕೋಶದ ಒಟ್ಟು ಘನ ಅಳತೆಯಲ್ಲಿ ೧೦% ರಷ್ಟು ಆವರಿಸಿದೆ. ಸಸ್ತನಿಗಳ ಜೀವಕೋಶಗಳಲ್ಲಿ ಬೀಜಕಣಗಳ ಸರಾಸರಿ ವಿಸ್ತಾರವು ೬ ಮೈಕ್ರೊಮೀಟರ್ ಆಗಿದೆ. ಅರೆ ದ್ರವ ಮ್ಯಾಟ್ರಿಕ್ಸ್, ನ್ಯೂಕ್ಲಿಯೋಪ್ಲಾಸಂ ಅನ್ನು ಸ್ನಿಗ್ಧತೆಯ ದ್ರವದಂತಿರುವ ಬೀಜಕಣದೊಳಗೆ ಕಾಣಬಹುದು.

ನ್ಯೂಕ್ಲಿಯಾರ್ ಹೊದಿಕೆ

ಬದಲಾಯಿಸಿ

ನ್ಯೂಕ್ಲಿಯಾರ್ ಹೊದಿಕೆಯನ್ನು ನ್ಯೂಕ್ಲಿಯರ್ ಪೊರೆ ಎಂದು ಕರೆಯಲಾಗುತ್ತದೆ. ಇದು ಎರಡು ಪೊರೆಗಳಿಂದ ಮಾಡಲ್ಪಟ್ಟಿದೆ; ಒಂದು ಹೊರಗಿನ ಪೊರೆ ಹಾಗು ಮತ್ತೊಂದು ಒಳಗಿನ ಪೊರೆ. ನ್ಯೂಕ್ಲಿಯಸ್ ಹೊರ ಪೊರೆಯು ಒರಟು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ನಿಂದ ಆವರಿಸಿದೆ. ಈ ಪದರಗಳ ನಡುವಿನ ಸ್ಥಳವನ್ನು ಪೆರಿನ್ಯೂಕ್ಲೀಯಾರ್ ಸ್ಪೇಸ್ ಎಂದು ಕರೆಯಲಾಗುತ್ತದೆ. ನ್ಯೂಕ್ಲಿಯಾರ್ ಹೊದಿಕೆಯು ನ್ಯೂಕ್ಲಿಯಸ್ ಅನ್ನು ಸುತ್ತುವರಿದು ಜೀವಕೋಶದ ಆನುವಂಶಿಕ ಅಂಶವನ್ನು ಜೀವಕೋಶದ ಸೈಟೊಪ್ಲಾಸಮ್ ನಿಂದ ಪ್ರತ್ಯೇಕಿಸುತ್ತದೆ. ಇದು ನ್ಯೂಕ್ಲೀಯೋಪ್ಲಾಸಂ ಮತ್ತು ಸೈಟೋಪ್ಲಾಸಂನ ನಡುವೆ ಆಗುವ ಸ್ಥೂಲ ಅಣುಗಳ ಚಲನೆಯನ್ನು ತಡೆಗಟ್ಟಲು ತಡೆಗೋಡೆಯಂತೆ ಕಾರ್ಯನಿರ್ವಹಿಸುತ್ತದೆ.

ನ್ಯೂಕ್ಲಿಯಾರ್ ರಂಧ್ರಗಳು

ಬದಲಾಯಿಸಿ

ನ್ಯೂಕ್ಲೀಯಾರ್ ಹೊದಿಕೆಯ ಮೇಲೆ ನ್ಯೂಕ್ಲೀಯರ್ ರಂಧ್ರ(ಪೋರ್) ಎಂಬ ಹಲವಾರು ಕಣಗಳಿವೆ. ನ್ಯೂಕ್ಲೀಯಾರ್ ರಂಧ್ರಗಳು ನ್ಯೂಕ್ಲಿಯೋ ಪ್ರೋಟೀನ್ ಎಂಬ ಹಲವಾರು ಪ್ರೋಟೀನ್ ಗಳಿಂದ ರಚಿತವಾಗಿವೆ. ನ್ಯೂಕ್ಲೀಯಾರ್ ರಂಧ್ರಗಳು ನ್ಯೂಕ್ಲಿಯಸ್ ಮತ್ತು ಸೈಟೋಪ್ಲಾಸಂ ನಡುವೆ ಅಣುಗಳ ಚಲನೆಯನ್ನು ನಿಯಂತ್ರಿಸುತ್ತವೆ. ರಂಧ್ರಗಳು ಕೇವಲ ೯ (ನ.ಮ) ವ್ಯಾಪಕವುಳ್ಳ ಅಣುಗಳಿಗೆ ಮಾತ್ರ ಚಲನೆಗಾಗಿ ಅವಕಾಶ ನೀಡುತ್ತವೆ. ದೊಡ್ಡ ಕಣಗಳನ್ನು ಸಕ್ರಿಯ ಸಾರಿಗೆ ಮೂಲಕ ವರ್ಗಾಯಿಸಲಾಗುತ್ತದೆ. ಡಿ.ಎನ್.ಎ ಮತ್ತು ಆರ್.ಎನ್.ಎ ಯಂತಹ ಅಣುಗಳನ್ನು ಬೀಜದೊಳಗೆ ಅನುಮತಿಸಲಾಗಿದೆ. ಆದರೆ ಶಕ್ತಿಯ ಕಣಗಳು (ಎಟಿಪಿ), ನೀರು ಮತ್ತು ಅಯಾನು(ಐಂನ್ಸ್)ಗಳಿಗೆ ಮುಕ್ತವಾಗಿ ಅನುಮತಿಸಲಾಗಿದೆ.

ವರ್ಣತಂತುಗಳು

ಬದಲಾಯಿಸಿ
ಹಿಸ್ಟೋನ್
 
ಹಿಸ್ಟೋನ್

ಜೀವಕೋಶದ ಬೀಜಕಣದಲ್ಲಿ ಆನುವಂಶಿಕ ಅಂಶಗಳು ಅನೇಕ ರೇಖೀಯ ಡಿ.ಎನ್.ಎ.ರೂಪದಲ್ಲಿವೆ. ಈ ಡಿ.ಎನ್.ಎ ಕಣಗಳು ವರ್ಣತಂತುಗಳ ರಚನೆಯನ್ನು ಆಯೋಜಿಸುತ್ತವೆ. ಡಿ.ಎನ್.ಎ ಕಣಗಳು ಹಾಗು ವರ್ಣತಂತು ರೂಪಿಸುವ ಪ್ರೋಟೀನ್ (ಹಿಸ್ಟೋನ್) ನಡುವೆ ವಿವಿಧ ಸಂಕೀರ್ಣತೆಗಳಿವೆ. ಜೀವಕೋಶದಲ್ಲಿನ ಡಿ.ಎನ್.ಎ ಪ್ರೋಟೀನ್ ಸಂಕೀರ್ಣವನ್ನು ಕ್ರೊಮ್ಯಾಟಿನ್ ಎಂದು ಕರೆಯಲಾಗುತ್ತದೆ. ಜೀವಕೋಶದ ವಿಭಜನೆಯಲ್ಲಿ ಕ್ರೊಮ್ಯಾಟಿನ್ ಗಳಿಂದ ವರ್ಣತಂತುಗಳ ಸುಸ್ಪಷ್ಟ ರೀತಿಯನ್ನು ಕಾಣಬಹುದು. ಜೀವಕೋಶವು ಮೈಟೊಕಾಂಡ್ರಿಯದ ಜೀನ್‌ಗಳ ಒಂದು ಭಾಗವನ್ನು ಹೊಂದಿರುತ್ತದೆ. ಮಾನವ ಜೀವಕೋಶಗಳು ಸುಮಾರು 6 ಅಡಿಗಳಷ್ಟಿದ್ದು, ಅವುಗಳನ್ನು ೪೬ ಅಣುಗಳಾಗಿ ವಿಂಗಡಿಸಲಾಗಿದೆ.

ನ್ಯೂಕ್ಲಿಯೋಲಸ್

ಬದಲಾಯಿಸಿ
ಆರ್ ಆರ್.ಎನ್.ಎ
 
ಆರ್ ಆರ್.ಎನ್.ಎ

ನ್ಯೂಕ್ಲಿಯೊಲಸ್ ಪೊರೆಯಿಂದ ಸುತ್ತುವರಿದಿದೆ ಮತ್ತು ಕಲುಷಿತವಾಗಿದೆ. ನ್ಯೂಕ್ಲಿಯಾರ್ ಆರ್ಗನೈಜರ್ ಪ್ರದೇಶಗಳ ಸುತ್ತಲೂ ಸುಮಾರು ನ್ಯೂಕ್ಲಿಯೋಲೈಗಳು ರಚನೆಯಾಗುತ್ತವೆ. ಇದು ಆರ್.ಆರ್.ಎನ್.ಎ ಗಳನ್ನು ಸಂಯೊಜಿಸಿ, ರೈಬೋಸೋಮ್ ಗಳನ್ನು ಮತ್ತು ಆರ್.ಆರ್.ಎನ್.ಎ ಗಳನ್ನು ಒಟ್ಟುಗೂಡಿಸುತ್ತದೆ. ನ್ಯೂಕ್ಲಿಯೋಲೈಗಳ ಸಂಖ್ಯೆಯು ಜಾತಿ(ಜೀವಿಗಳು)ಯಿಂದ ಜಾತಿ(ಜೀವಿಗಳು)ಗೆ ಭಿನ್ನವಾಗಿವೆ. ಜೀವಕೋಶ ವಿಭಜನೆಯ ಸಮಯದಲ್ಲಿ ನ್ಯೂಕ್ಲೀಯೋಲಸ್ ಕಣ್ಮರೆಯಾಗುತ್ತದೆ. ನ್ಯೂಕ್ಲಿಯೋಲಸ್ ಕೋಶದ ವೃದ್ಧಾಪ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಬೀಜಕಣಗಳ ಕಾರ್ಯಗಳು: ೧) ಇದು ಜೀವಿಯೊಂದರ ಅನುವಂಶಿಕತೆ ಗುಣಲಕ್ಷಣಗಳನ್ನು ನಿಯಂತ್ರಿಸುತ್ತದೆ. ೨) ಇದು ಪ್ರೋಟೀನ್ ಸಂಶ್ಲೇಷಣೆ, ಜೀವಕೋಶದ ವಿಭಜನೆ ಹಾಗು ಬೆಳವಣಿಗೆಗೆ ಕಾರಣವಾಗಿದೆ. ಅನುವಂಶಿಕತೆಯ ಅಂಶವನ್ನು ಇದು ಡಿ.ಎನ್.ಎ ರೂಪದಲ್ಲಿ ಸಂಗ್ರಹಿಸಿಡುತ್ತದೆ. ೩) ಇದು ರೈಬೋಸೋಮ್ (ಪ್ರೋಟೀನ್ ಕಾರ್ಖಾನೆಗಳು)ಗಳನ್ನು ಉತ್ಪಾದಿಸುತ್ತದೆ.

ಹೊರಗಿನ ಸಂಪರ್ಕ

ಬದಲಾಯಿಸಿ