ಸದಸ್ಯ:Nidhi Hegde Kageri/ನನ್ನ ಪ್ರಯೋಗಪುಟ1
ಜೇಡ ಕೋತಿ
ಬದಲಾಯಿಸಿಸ್ಪೈಡರ್ ಮಂಕಿ ಇದೊಂದು ಅಪರೂಪದ ಕೋತಿ ಜಾತಿ. ಸ್ಪೈಡರ್ ಮಂಗಗಳು ನ್ಯೂ ವರ್ಲ್ಡ್ ಕೋತಿಗಳಾಗಿವೆ. ‘ಅಟೇಲಿನಾಯೆ’ ಕುಟುಂಬಕ್ಕೆ ಸೇರಿದ ಅದು ಉಷ್ಣವಲಯದ ಮಳೆಕಾಡುಗಳ ನಿವಾಸಿ.[೧] ದಕ್ಷಿಣ ಅಮೇರಿಕಾದ ಮೆಕ್ಸಿಕೋದಿಂದ ಬ್ರೆಜಿಲ್ ತನಕ, ಫ್ರೆಂಚ್ ಗಯಾನಾ, ಸುರಿನಾಮ್‌ವರೆಗೆ ಇದರ ಏಳು ಜಾತಿಗಳು ಹರಡಿಕೊಂಡಿವೆ. ಈ ಪ್ರಭೇದವು ಏಳು ಪ್ರಭೇದಗಳನ್ನು ಒಳಗೊಂಡಿದೆ. ಕಾಡುಗಳ ಅಳಿವು ಮತ್ತು ಮಾಂಸಕ್ಕಾಗಿ ಈ ದೈತ್ಯ ದೇಹಗಳ ಕೋತಿಗಳ ಸತತ ಬೇಟೆಯ ಕಾರಣದಿಂದ ಇವುಗಳಲ್ಲಿ ಎರಡು ಜಾತಿ ಅಳಿವಿನಂಚಿನಲ್ಲಿದೆ. ೨೫ ರಿಂದ ೩೦ ಅಡಿ ಎತ್ತರದ ಮರಗಳೇ ಇವುಗಳ ಮನೆ. ಕೆಳಗಿಳಿಯುವುದು ತೀರಾ ಅಪರೂಪ. ಉದ್ದ, ಮೃದುವಾದ ತುಪ್ಪಳದ ಆನೆ ಸೊಂಡಿಲಿನಂತಿರುವ ದಪ್ಪ ಬಾಲ ಈ ಕೋತಿಗಳಿಗೆ ಐದನೆಯ ಕಾಲಿದ್ದಂತೆ. ಮರದ ಕೊಂಬೆಗಳಿಗೆ ಬಾಲವನ್ನು ಸುತ್ತಿ ಎರಡೂ ಕೈಗಳಿಂದ ಹಣ್ಣುಗಳನ್ನು ಕೊಯ್ಯುವ ಕರಾಮತ್ತು ಇವುಗಳಿಗಿವೆ.ಅವುಗಳ ದೊಡ್ಡ ಗಾತ್ರದ ಕಾರಣ, ಸ್ಪೈಡರ್ ಮಂಗಗಳು ತೇವಾಂಶವುಳ್ಳ ನಿತ್ಯಹರಿದ್ವರ್ಣದ ಕಾಡುಗಳ ದೊಡ್ಡ ಪ್ರದೇಶಗಳನ್ನು ಬಯಸುತ್ತವೆ, ಮತ್ತು ತೊಂದರೆಗೊಳಗಾದ ಪ್ರಾಥಮಿಕ ಮಳೆಕಾಡುಗಳನ್ನು ಆದ್ಯತೆ ನೀಡುತ್ತವೆ. ಪ್ರೈಮೇಟ್ ಅರಿವಿನ ಅಧ್ಯಯನದ ಇತ್ತೀಚಿನ ಮೆಟಾ-ವಿಶ್ಲೇಷಣೆಗಳು ಜೇಡ ಕೋತಿಗಳು ಅತ್ಯಂತ ಬುದ್ಧಿವಂತ ನ್ಯೂ ವರ್ಲ್ಡ್ ಮಂಗಗಳಾಗಿವೆ ಎಂದು ಸೂಚಿಸುತ್ತವೆ. ಅವರು ವಿಶಾಲ ವ್ಯಾಪ್ತಿಯ ಶಬ್ದಗಳನ್ನು ಉತ್ಪಾದಿಸಬಹುದು ಮತ್ತು ಬೆದರಿಕೆಗೊಳಗಾದಾಗ "ತೊಗಟೆ" ಆಗಬಹುದು; ಇತರ ಧ್ವನಿಯು ಒಂದು ಕುದುರೆ ಮತ್ತು ದೀರ್ಘಕಾಲದ ಕಿರಿಚುವಂತೆ ಹೋಲುತ್ತದೆ.[೨] ಸಂಘ ಜೀವಿಗಳಾದ ಈ ಕೋತಿಗಳು ಒಂದು ಗುಂಪಿನಲ್ಲಿ ೩೫ರ ತನಕ ಇರುತ್ತವೆ. ಆದರೆ ಆಹಾರ ಸಂಗ್ರಹಿಸಲು ಹೋಗುವಾಗ ಒಂಬತ್ತರ ತನಕ ಸದಸ್ಯರಿರುವ ಗುಂಪುಗಳು ಪ್ರತ್ಯೇಕವಾಗಿ ಹೋಗಿ ರಾತ್ರಿ ಎಲ್ಲವೂ ಒಟ್ಟಾಗಿ ಒಂದೇ ಮರದಲ್ಲಿ ಮಲಗುತ್ತವೆ.
ಆಹಾರ ಸಂಗ್ರಹಣೆ
ಬದಲಾಯಿಸಿಐದು ಕಿಲೋಮೀಟರ್ ತನಕ ಆಹಾರ ಸಂಗ್ರಹಣೆಯ ಇದರ ವ್ಯಾಪ್ತಿ. ಬೆಳಗ್ಗೆ ಹತ್ತು ಗಂಟೆಯವರೆಗೆ ಆಹಾರ ಸಂಗ್ರಹಣೆ, ಬಳಿಕ ವಿಶ್ರಾಂತಿ ಅವುಗಳ ಜೀವನ ಪದ್ಧತಿ. ಆಹಾರ ಸಂಗ್ರಹಣೆಯ ದಾರಿ ಹೆಣ್ಣಿನ ನಿರ್ದೇಶನದಂತೆ ನಡೆಯುವುದು ವಾಡಿಕೆ. ೧೫೦ ಕ್ಕೂ ಹೆಚ್ಚು ವಿಧದ ಎಲೆಗಳು, ಜೇಡದಂಥ ಕೀಟಗಳು, ಹಕ್ಕಿಗಳ ಮೊಟ್ಟೆಗಳು, ಜೇನುತುಪ್ಪ ಇವೆಲ್ಲಾ ಆಹಾರದ ಪಟ್ಟಿಗೆ ಬರುತ್ತವೆ. ಅಧಿಕ ಕ್ಯಾಲೋರಿಗಳಾದ ಆಹಾರವೇ ಅವುಗಳ ಪ್ರಬಲ ದೇಹದ ಗುಟ್ಟು, ಸಸ್ಯಗಳ ಬೀಜಗಳನ್ನು ನುಂಗಿ ಅವು ಮಲ ವಿಸರ್ಜಿಸುವ ಮೂಲಕ ಸಸ್ಯದ ವಂಶ ವಿಸ್ತರಣೆಗೂ ಸಹಕಾರಿಯಾಗಿವೆ. ಸಸ್ಯಗಳಿಗೆ ಈ ಮಲ ಉತ್ತಮ ಗೊಬ್ಬರವೂ ಹೌದು.
ಸ್ವರ ಪ್ರವೀಣರು
ಬದಲಾಯಿಸಿಎರಡು ಅಡಿ ಉದ್ದ, ಮೂರೂವರೆ ಅಡಿ ಎತ್ತರವಾಗುವ ಜೇಡ ಕೋತಿಗಳು ಹನ್ನೊಂದು ಕಿಲೋವರೆಗೆ ತೂಗುತ್ತವೆ. ಹೆಣ್ಣಿನ ಗರಿಷ್ಠ ತೂಕ ಒಂಭತ್ತೂವರೆ ಕಿಲೋ, ಜೀವಿತಾವಧಿ ೨೫ ವರ್ಷ ಎನ್ನಲಾಗಿದ್ದರೂ ಪ್ರಾಣಿ ಸಂಗ್ರಹಾಲಯದಲ್ಲಿ ೩೫ ವರ್ಷ ಬದುಕಿದ ದಾಖಲೆಯಿದೆ. ಮಿದುಳಿನ ತೂಕ ೧೦೭ ಗ್ರಾಮ್ ಇರುವ ಅತಿ ಬುದ್ಧಿವಂತರೆಂಬ ಖ್ಯಾತಿಗೂ ಪಾತ್ರವಾಗಿವೆ. ಸಂದರ್ಭಕ್ಕೆ ತಕ್ಕಂತೆ ಹಲವು ಪ್ರಾಣಿಗಳ ಧ್ವನಿಯನ್ನು ಅನುಕರಿಸಬಲ್ಲವು. ನಾಯಿಯಂತೆ ಬೊಗಳಿದರೆ ಬೇಟೆಗಾರ ಮನುಷ್ಯ ಬರುತ್ತಿರುವ ಸಂಕೇತ. ಕುದುರೆಯಂತೆಯೂ ಕೆನೆಯಬಲ್ಲವು. ಶತ್ರುಗಳ ಮೇಲೆ ಪ್ರತೀಕಾರವಾಗಿ ಮರದ ಕೊಂಬೆಗಳನ್ನು ಮುರಿದು ಎಸೆಯುತ್ತವೆ, ತಮ್ಮ ‘ಮಲ’ವನ್ನು ಎರಚುತ್ತವೆ. ಮರದಿಂದ ಮರಕ್ಕೆ ಜಿಗಿಯುವಲ್ಲಿ ಅದ್ಭುತ ಕೌಶಲವಿದೆ. ತಮ್ಮದೇ ಬೇರೆ ತಂಡಗಳು ಎದುರಾದಾಗ ಹೋರಾಟವನ್ನು ತಪ್ಪಿಸಲು ಗಾಢಾಲಿಂಗನ ಮಾಡಿ ಸ್ನೇಹ ಪ್ರಕಟಿಸುತ್ತವೆ. ತಜ್ಞ ವೈದ್ಯರೂ ಹೌದು. ಆರೋಗ್ಯ ಹದಗೆಟ್ಟಾಗ ಯಾವ ಎಲೆ ಸೇವಿಸಿದರೆ ಗುಣವಾಗುತ್ತದೆಂದೂ ತಿಳಿದಿವೆ. ಆದರೂ ಮಲೇರಿಯಾ ರೋಗದಿಂದ ಸಾವನ್ನಪ್ಪುತ್ತವೆ. ಈ ಜ್ವರದ ಅಧ್ಯಯನಕ್ಕೆ ತಜ್ಞರು ಇವುಗಳನ್ನೇ ಉಪಯೋಗಿಸುತ್ತಾರೆ.
ಸಂತಾನೋತ್ಪತ್ತಿ
ಬದಲಾಯಿಸಿಜೇಡ ಕೋತಿಗಳಿಗೆ ಕಂದು ಅಥವಾ ಕಪ್ಪು ಕೂದಲಿದೆ. ಎದೆಯಲ್ಲಿ ಬಿಳಿ ಇಲ್ಲವೇ ಹಳದಿ ವರ್ಣವಿರುತ್ತವೆ. ಹೆಣ್ಣು ಗಂಡಿನ ಭೇದವೇ ಫಕ್ಕನೆ ಗೊತ್ತಾಗದು. ಒಂದು ಹೆಣ್ಣು ಜೀವನವಿಡೀ ಒಂದೇ ಗಂಡಿನ ಜೊತೆಗಿರುವುದಾದರೂ ಋತುಕಾಲದಲ್ಲಿ ಹೆಣ್ಣಿನೊಂದಿಗೆ ಬೆರೆಯುವ ಹಕ್ಕನ್ನು ನಿರ್ಧರಿಸಿ ಬದಲಾಯಿಸಿಕೊಳ್ಳುವುದೂ ಇದೆ. ಗಂಡು ಐದು, ಹೆಣ್ಣು ನಾಲ್ಕನೆಯ ವರ್ಷದಲ್ಲಿ ಪ್ರಬುದ್ಧಾವಸ್ಥೆ ತಲುಪುತ್ತವೆ. ಮಿಲನಕ್ಕೆ ಋತು ಭೇದಗಳಿಲ್ಲ. ಗರ್ಭಾವಧಿ ೨೩೦ ದಿನಗಳು, ನಾಲ್ಕು ವರ್ಷಕ್ಕೊಮ್ಮೆ ಮರಿಯಿಡುತ್ತದೆ. ಒಮ್ಮೆಗೆ ಒಂದೇ ಮರಿಗೆ ಜನ್ಮವೀಯುತ್ತದೆ. ಮರಿ ಒಂದು ತಿಂಗಳು ತಾಯಿಯ ಹೊಟ್ಟೆ ಕೆಳಗೆ ರಕ್ಷಣೆ ಪಡೆಯುತ್ತದೆ. ಮತ್ತೆ ಐದು ತಿಂಗಳು ತಾಯಿ ಬೆನ್ನಿನ ಮೇಲೇರಿಸಿಕೊಂಡು ತಿರುಗಾಡುತ್ತದೆ. ಆಗ ಬಾಲದಿಂದ ಬಿಗಿಯಾಗಿ ಬಂಧಿಸಿ ಮರಿಗೆ ರಕ್ಷಣೆ ಕೊಡುತ್ತದೆ. ಆರು ತಿಂಗಳ ಬಳಿಕ ಮರಿ ಸ್ವತಂತ್ರವಾಗುತ್ತದೆ. ಚಿರತೆ, ಹೆಬ್ಬಾವು, ಬೆಕ್ಕಿನ ಜಾತಿಯ ಕೆಲವು ಪ್ರಾಣಿಗಳು ಮರಿಗಳಿಗೆ ಶತ್ರುಗಳಾಗಿ ತಿಂದು ಹಾಕುತ್ತವೆ.
ಮೆಸೊಅಮೆರಿಕನ್ ಸಂಸ್ಕೃತಿಗಳಲ್ಲಿ
ಬದಲಾಯಿಸಿಮೆಸೊಅಮೆರಿಕನ್ ಸಂಸ್ಕೃತಿಗಳಲ್ಲಿ ಮೆಸೊಅಮೆರಿಕನ್ ಸಂಸ್ಕೃತಿಗಳ ಅನೇಕ ಅಂಶಗಳಲ್ಲಿ ಸ್ಪೈಡರ್ ಮಂಗಗಳು ಕಂಡುಬರುತ್ತವೆ. ಅಜ್ಟೆಕ್ 260-ದಿನದ ಕ್ಯಾಲೆಂಡರ್ನಲ್ಲಿ, ಸ್ಪೈಡರ್ ಮಂಕಿ 11 ನೇ ದಿನಕ್ಕೆ ಹೆಸರಾಗಿದೆ. ಅನುಗುಣವಾದ ಮಾಯಾ ಕ್ಯಾಲೆಂಡರ್ನಲ್ಲಿ, ಸ್ಪೈಲರ್ ಮಂಕಿಗಾಗಿ ಹೌವ್ಲರ್ ಮಂಕಿ (ಬ್ಯಾಟ್ಜ್) ಅನ್ನು ಬದಲಿಸಲಾಗುತ್ತದೆ. ಇಂದಿನ ಮಾಯಾ ಧಾರ್ಮಿಕ ಹರಿದಿನಗಳಲ್ಲಿ, ಸ್ಪೈಡರ್ ಮಂಕಿ ಅನುಕರಣಕಾರರು ಒಂದು ರೀತಿಯ ದುಷ್ಟ ವಿದೂಷಕಗಳಾಗಿ ಸೇವೆ ಸಲ್ಲಿಸುತ್ತಾರೆ. ಕ್ಲಾಸಿಕಲ್ ಮಾಯಾ ಕಲೆಯಲ್ಲಿ, ಅವರು ಸರ್ವತ್ರವಾಗಿದ್ದು, ಸಾಮಾನ್ಯವಾಗಿ ಕೋಕೋ ಬೀಜಕೋಶಗಳನ್ನು ಸಾಗಿಸುತ್ತಿದ್ದಾರೆಂದು ತೋರಿಸಲಾಗಿದೆ.