ಸದಸ್ಯ:Naveenavitla/ನನ್ನ ಪ್ರಯೋಗಪುಟ3

ಕುರ್ಚಿಗಳು

ಬದಲಾಯಿಸಿ

ಪೀಠೋಪಕರಣಗಳ ಮೂಲ ತುಣುಕುಗಳಲ್ಲಿ ಕುರ್ಚಿ ಒಂದಾಗಿದೆ. ಇದು ಒಂದು ರೀತಿಯ ಆಸನ. ಇದು ಎರಡು ಬಾಳಿಕೆಗಳುಳ್ಳ ವಸ್ತುಗಳನ್ನು ತೊಂಭತ್ತು ಡಿಗ್ರಿ ಅಥವಾ ಸ್ವಲ್ಪ ಹೆಚ್ಚಿನ ಕೋನದಲ್ಲಿ ಹಿಂಭಾಗದಲ್ಲಿ ಜೋಡಿಸಿ ಅದು ಒಂದಕ್ಕೊಂದು ಹೊಂದಿಕೊಳ್ಳುವಂತೆ ಇರುವುದು ಇದು ಆಸನದ ಪ್ರಾಥಮಿಕ ಲಕ್ಷಣವಾಗಿದೆ. ಸಾಮಾನ್ಯವಾಗಿ ನಾಲ್ಕು ಕಾಲುಗಳು ಮತ್ತು ಒಂದು ಸಮತಲವಾದ ಒಂದು ವಸ್ತುವನ್ನು ಲಗತ್ತಿಸಲಾಗುತ್ತದೆ. ಇದು ಆಸನದ ಮೇಲೆ ಕುಳಿತುಕೊಳ್ಳುವ ವ್ಯಕ್ತಿಯ ತೂಕವನ್ನು ಬೆಂಬಲಿಸಲು ಸಾಕಷ್ಟು ಬಲವಾಗಿರುತ್ತದೆ. (ಸಾಮಾನ್ಯವಾಗಿ ವಿಶಾಲ ಮತ್ತು ಕೆಳಭಾಗವನ್ನು ಹಿಡಿದುಕೊಳ್ಳಲು ಸಾಕಷ್ಟು ವಿಶಾಲವಾದ ಪೃಷ್ಠದ ಮಂಡಿಗೆ) ಮತ್ತು ಲಂಬವಾದ ಹಿಂಭಾಗಕ್ಕೆ (ಸಾಮಾನ್ಯವಾಗಿ ಎತ್ತರ ಮತ್ತು ಹಿಂಭಾಗವನ್ನು ಭುಜದ ಬೆಡ್‍ಗಳಿಗೆ ಬೆಂಬಲಿಸಲು ಸಾಕಷ್ಟು) ವಿರುದ್ಧ ಒಲವನ್ನು ಹೊಂದಿರುತ್ತದೆ. ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿಯ ತೊಡೆಗಳು ಮತ್ತು ಮೊಣಕಾಲುಗಳು ತೊಂಭತ್ತು ಡಿಗ್ರಿ ಅಥವಾ ಕಡಿಮೆ ಕೋನದಲ್ಲಿರುವಂತೆ ಮರದ ಲೋಹದ ಅಥವಾ ಸಂಶ್ಲೇಷಿತ ವಸ್ತುಗಳಿಂದ ಕುರ್ಚಿಯನ್ನು ತಯಾರಿಸಬಹುದಾಗಿದೆ. ಮನೆಗಳಲ್ಲಿ ಹಲವಾರು ಕೊಠಡಿಗಳಲ್ಲಿ(ಉದಾಹರಣೆಗೆ ವಾಸಿಸುವ ಕೊಠಡಿಗಳು, ಭೋಜನದ ಕೊಠಡಿಗಳು ಮತ್ತು ಗುಹೆಗಳಲ್ಲಿ) ಕುರ್ಚಿಗಳನ್ನು ಬಳಸಲಾಗುತ್ತದೆ. ಎರಡೂ ಸೀಟುಗಳು ಅಥವಾ ಸಂಪೂರ್ಣ ಕುರ್ಚಿಗಳಿಗೆ ವಿವಿಧ ಬಣ್ಣಗಳನ್ನು ಹೊಂದಿದ ಮೆದುವಾದ ಬಟ್ಟೆಯನ್ನು ಹೊದಿಸಬಹುದು. ಕುರ್ಚಿಗಳು ವಿವಿಧ ವಿನ್ಯಾಸದಲ್ಲಿರುತ್ತವೆ. ತೋಳು ಕುರ್ಚಿಗೆ ಆಸರೆಯಗುವಂತೆ ಆಮೆಕುರ್ಚಿಯನ್ನು ತಯಾರಿಸಲಾಗುತ್ತದೆ. ಈ ಕುರ್ಚಿಯ ಹಿಂಭಾಗ ಹಿಂದಕ್ಕೆ ಭಾಗುವುದನ್ನು ಸ್ವಲ್ಪ ಪ್ರಾಮಾಣದಲ್ಲಿ ಕಡಿಮೆಮಾಡಲು ರೆಕ್ಲೈನರ್ ಎನ್ನುವ ಯಾಂತ್ರಿಕ ಅಂಶವನ್ನು ಅಳವಡಿಸಲಾಗುತ್ತದೆ. ರಾಕಿಂಗ್ ಕುರ್ಚಿಯ ಕಾಲುಗಳು ಎರಡು ಉದ್ದವಾದ ಬಾಗಿದ ಹಲಗೆಗಳನ್ನು ಸ್ಥಿರವಾಗಿ ಜೋಡಿಸಲಾಗುತ್ತದೆ. ಗಾಲಿಕುರ್ಚಿಯ ಅಡಿಭಾಗದಲ್ಲಿ ಎರಡು ಚಕ್ರಗಳನ್ನು ಅಳವಡಿಸಲಾಗಿದೆ.[]

ಕುರ್ಚಿ 13ನೆ ಶತಮಾನದ ಇಂಗ್ಲೀಷ್‍ನ ಚೆಯರ್ ಪದದಿಂದ ಬಂದಿದೆ. ಮತ್ತು ಫ್ರೆಂಚ್‍ನ ಚೆಯರ್ ಎನ್ನುವ ಪದ ಲ್ಯಾಟಿನ್‍ನ ಕ್ಯಾಥೆಡ್‍ನಿಂದ ಬಂದಿದೆ.

ಇತಿಹಾಸ

ಬದಲಾಯಿಸಿ

ಪ್ರಾಚೀನ ಕಾಲದಿಂದಲೂ ಕುರ್ಚಿಯನ್ನು ಬಳಸಲಾಗುತ್ತಿತ್ತು. ಆದರೂ ಅನೇಕ ಶತಮಾನಗಳವರೆಗೆ ಇದನ್ನು ಸಾಮಾನ್ಯ ಬಳಕೆಗಾಗಿ ಮತ್ತು ಒಂದು ಸಾಂಕೇತಿಕ ಲೇಖನಕ್ಕಾಗಿ ಮಾತ್ರ ಬಳಸಲಾಗುತ್ತಿತ್ತು. ಯುನೈಟೆಡ್ ಕಿಂಗ್‍ಡಮ್, ಕೆನಡಾ ಮತ್ತು ಇತರ ಹಲವು ವ್ಯವಸ್ಥೆಗಳಲ್ಲಿ ಹೌಸ್ ಆಫ್ ಕಾಮನ್ಸ್‍ನಲ್ಲಿ ಇನ್ನೂ ಅಧಿಕೃತ ಲಾಂಛನವಾಗಿ ಕುರ್ಚಿಯನ್ನು ಬಳಸಲಾಗುತ್ತದೆ. ಕುರ್ಚಿಯನ್ನು ಐತಿಹಾಸಿಕವಾಗಿ ಸಮಿತಿಗಳು, ನಿರ್ದೇಶಕರ ಮಂಡಳಿಗಳು ಮತ್ತು ಶೈಕ್ಷಣಿಕ ಇಲಾಖೆಗಳೆಲ್ಲವೂ ಅಧಿಕಾರದ ಸಂಕೇತವಾಗಿ ನೋಡುತ್ತಿದ್ದು. ಅಧ್ಯಕ್ಷನ ಆಸ್ಥಾನವಾಗಿ ಪರಿಗಣಿಸಲಾಗುತ್ತದೆ. ದತ್ತಿ ಫ್ರೋಪೆಸರ್ಶಿಪ್‍ಗಳನ್ನು ಕುರ್ಚಿಗಳೆಂದು ಕರೆಯಲಾಗುತ್ತದೆ. 16ನೇ ಶತಮಾನದವರೆಗೂ ಕುರ್ಚಿಗಳು ಸಾಮಾನ್ಯವಾಗಿದ್ದವು. ಅಲ್ಲಿಯವೆರೆಗೆ ಜನರು ಪೆಟ್ಟಿಗೆಗಳು, ಬೆಂಚುಗಳು ಮತ್ತು ಸ್ಟೂಲುಗಳ ಮೇಲೆ ಕುಳಿತಿದ್ದರು. ಅವುಗಳು ದೈನಂದಿನ ಜೀವನದ ಸಾಮಾನ್ಯ ಸ್ಥಾನಗಳಾಗಿವೆ. ಮುಂಚಿನಿಂದಲೂ ಕುರ್ಚಿಗಳನ್ನು ಬಳಸುವವರ ಸಂಖ್ಯೆ ಸಂಖ್ಯೆಯು ಸೀಮಿತವಾಗಿತ್ತು. ಉದಾಹರಣೆಗಳು ಚರ್ಚಿನ ಸಯನ್ಯುರಿಯಾರಿಯಲ್ ಅಥವಾ ಊಳಿಗಮಾನ್ಯ ಮೊದಲಾದವುಗಳಾಗಿವೆ. ಕನಿಷ್ಠ ಈಜಿಪ್ಟ್ ಪ್ರಾಚೀನ ರಾಜವಂಶದ ಅವಧಿ(ಕ್ರಿ.ಪೂ.3100)ಯಿಂದ ಕುರ್ಚಿ ಅಸ್ತಿತ್ವದಲ್ಲಿದ್ದವು. ಅವುಗಳನ್ನು ಬಟ್ಟೆ ಅಥವಾ ತೊಗಲಿನೊಂದಿಗೆ ಕೆತ್ತಲಾಗಿದೆ, ಇದನ್ನು ಕರತ್ತಿದ ಮರದಿಂದ ಮಾಡಲಾಗಿದೆ. ಇಂದಿನ ದಿನಗಳಲ್ಲಿ ಇಂತಹ ಪೃಕೃತಿ ಪ್ರೀಯ ಕುರ್ಚಿ ಸಿಗುವುದು ಮೊದಲಿಗಿಂತ ಬಹಳ ಕಡಿಮೆಯಾಗಿದೆ. ಈ ಕುರ್ಚಿ ಸೀಟ್‍ಗಳು 25ಸೆಂ.ಮೀ ಎತ್ತರವಾಗಿರುತ್ತಿತ್ತು. ಪ್ರಾಚೀನ ಈಜಿಪ್ಟ್‍ನಲ್ಲಿ ಕುರ್ಚಿಯು ಮಹಾನ್ ಶ್ರೀಮಂತಿಕೆ ಮತ್ತು ವೈಭವದಿಂದ ಕಂಡುಬಂದಿದೆ. ಕಸೂತಿ ಮತ್ತು ದಂತದಿಂದ ಅಲಂಕರಿಸಲ್ಪಟ್ಟ ಅಥವಾ ಕೆತ್ತಿದ ದುಬಾರಿ ವಸ್ತುಗಳನ್ನು ಉಪಯೋಗಿಸಿ ಗಿಲ್ಡೆಡ್ ಮರದ ಮಾದರಿಯಲ್ಲಿ ಅವುಗಳನ್ನು ತಯಾರಿಸಲಾಗಿದ್ದು ಈ ಕುರ್ಚಿಯಲ್ಲಿ ರಾಜನು ಬಳಸುತ್ತಿದ್ದ ವಸ್ತುಗಳು ಮತ್ತು ಮೃಗಗಳ ಕಾಲುಗಳ ಚಿತ್ರಣ ಮತು ರಾಜನ ಬೆಂಬಲಿಸುವ ಕಲಾಕೃತಿಗಳನ್ನು ಕಾಣಬಹುದು. ಸಾಮಾನ್ಯವಾಗಿ ಹೇಳುವುದಾದರೆ ಒಬ್ಬ ವ್ಯಕ್ತಿಯು ಉನ್ನತ ಸ್ಥಾನದಲ್ಲಿದ್ದರೆ ಅವನು ಬಳಸುತ್ತಿದ್ದ ಕುರ್ಚಿಗೂ ಗೌರವವನ್ನು ಕೊಡುತಿತ್ತದರು. ಅರಮನೆಯಲ್ಲಿ ರಾಜನು ಸಿಂಹಾಸನದ ಮೇಲೆ ಕುಳಿತುಕೊಂಡಾಗ ಅದರ ಮುಭಾಂಗದಲ್ಲಿ ಕಾಲುಮನೆ ಇರುತ್ತಿತ್ತು. ಸರಾಸಾರಿ ಈಜಿಪ್ಟಿನ ಕುಟುಂಬವು ಕುರ್ಚಿಗಳನ್ನು ಹೊಂದಿರಲಿಲ್ಲ ಮತ್ತು ಅವರು ಸಾಮಾನ್ಯವಾಗಿ ಮಾಡಿರುವ ಕುರ್ಚಿಯ ಮೇಲೆ ಕುಳಿತಿದ್ದ ಮನೆಯ ಮುಖ್ಯಸ್ಥರಾಗಿದ್ದರು. ಅವರು ಬಳಸುತ್ತಿದ್ದ ಕುರ್ಚಿಗಳು ಶ್ರೀಮಂತರು ಬಳಸುತ್ತಿರುವ ಅಲಂಕೃತವಾದ ಕುರ್ಚಿಗಳಂತೆ ಕಂಡುಬಂದರೂ ಅವುಗಳ ಗುಣಮಟ್ಟ ಕಲೆಗಾರಿಕೆಗೆ ಸಾಮಾನ್ಯವಾಗಿ ಕಳಪೆಯಾಗಿತ್ತು.[] ಚೀನಾದಲ್ಲಿ ಆರನೆಯ ಶತಮಾನದ ಆರಂಭದಲ್ಲಿ ಭೌದ್ಧ ಭಿತ್ತಿಚಿತ್ರಗಳು ಇರುವ ಸ್ಟೀಲ್ ಕುರ್ಚಿಗಳು ಬಂದವು. ಆದರೆ ಆ ಸಮಯದಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅಭ್ಯಾಸ ಅಪರೂಪವಾಗಿತ್ತು. ಹನ್ನೆರಡೆನೆಯ ಶತಮಾನದ ಹೊತ್ತಿಗೆ ಚೀನಾದಲ್ಲಿ ಕುರ್ಚಿಗಳು ವ್ಯಾಪಕವಾಗಿ ಹರಡಿತು. ವಿದ್ವಾಂಸರು ಕುರ್ಚಿಗಳ ಅಳವಡಿಕೆಯನ್ನು ಒಪ್ಪುವುದಿಲ್ಲ. ಚೀನದಲ್ಲಿ ಸ್ಥಳೀಯ ಚೀನಿ ಪೀಠೋಪಕರಣಗಳ ಬೆಳವಣಿಗೆಯಾಗಿದ್ದು ಮಧ್ಯ ಏಷ್ಯಾದಿಂದ ಆಮದು ಮಾಡಿಕೊಂಡ ಕ್ಯಾಂಪ್ ಸ್ಟೂಲ್‍ನಿಂದ ವಿಕಸನಗೊಂಡಿತು. ಇದು ಏಳನೆಯ ಶತಮಾನದಲ್ಲಿ ಕ್ರಿಶ್ಚಿಯನ್ ಮಿಷನರಿಗಳಿಂದ ಚೀನಾಕ್ಕೆ ಪರಿಚಯಿಸಲ್ಪಟ್ಟಿದೆ ಮತ್ತು ಈ ಕುರ್ಚಿಗಳು ಭಾರತದ ಬೌದ್ಧ ಕ್ರಿಸ್ತ ಮಿಷನರಿಗಳಿಂದ ಬಂದಿದೆ ಎಂದು ಹೇಲಾಗುತ್ತದೆ. ಇನ್ನು ಮುಂದೆ ಆಧುನಿಕ ಚೀನಾದಲ್ಲಿ, ಕೊರಿಯಾ ಅಥವಾ ಜಪಾನಿನಂತಲ್ಲದೇ ನೆಲದ ಮಟ್ಟದಲ್ಲಿ ಕುಳಿತುಕೊಳ್ಳಲು ಸಾಧ್ಯವಗುವುದಿಲ್ಲ.. ಯುರೋಪಿನ ಪುನರುಜ್ಜೀವನ ಕಾಲದ ಹಿಂದೆ ಶ್ರೀಮಂತರು ಮಾತ್ರ ಕುರ್ಚಿ ಬಳಸಬೇಕು ಎಂಬಂತಿದ್ದ ನೀತಿಯನ್ನು ನಿಲ್ಲಿಸಲಾಯಿತು. ನಂತರ ಪೀಠೋಪಕರಣಗಳನ್ನು ಖರೀದಿಸಲು ಸಾಧ್ಯವಾಗುವ ಪ್ರತಿಯೊಬ್ಬರಿಗೂ ಇದು ಸಾಮಾನ್ಯ ವಸ್ತುವಾಗಿ ಮಾರ್ಪಾಡಾಯಿತು. ಸವಲತ್ತುಗಳ ಕಲ್ಪನೆಯಲ್ಲಿ ಕುರ್ಚಿಯು ಮರೆಯಾದಾಗ ಶೀಘ್ರವಾಗಿ ಸಾಮಾನ್ಯ ಬಳಕೆಗೆ ಬಂದಿತು. ಪ್ರತೀ ಕೆಲವು ವರ್ಷಗಳಲ್ಲಿ ಫ್ಯಾಶನ್‍ಗಳನ್ನು ಪ್ರತಿಬಿಂಬಿಸಲು ಆರಂಭಿಸಿ ವಿನ್ಯಾಸಗಳಲ್ಲಿ ಬದಲಾವಣೆಗಳು ಕಂಡುಬರಲು ಪ್ರಾರಂಭವಾಯಿತು. 1880ರ ದಶಕದಲ್ಲಿ ಅಮೇರಿಕನ್ ಕುಟುಂಬಗಳಲ್ಲಿ ಕುರ್ಚಿಗಳು ಹೆಚ್ಚು ಸಾಮಾನ್ಯವಾಗಿದ್ದವು ಮತ್ತು ಸಾಮಾನ್ಯವಾಗಿ ಪ್ರತಿ ಕುಟುಂಬದ ಸದಸ್ಯರಿಗೂ ಭೋಜನಕ್ಕೆ ಕುಳಿತುಕೊಳ್ಳಲು ಒಂದು ಕುರ್ಚಿ ಇತ್ತು. 1830ರ ಹೊತ್ತಿಗೆ ರೋಬಕ್ ಮತ್ತು ಸಂಸ್ಥೆಯ ಸಿಯರ್ಸ್ ಕಾರ್ಖಾನೆ ತಯಾರಿಸಿದ ಅಲಂಕಾರಿಕ ಕುರ್ಚಿಗಳನ್ನು ಮತ್ತು ಯಂತ್ರದ ಸೆಟ್‍ಗಳನ್ನು ಎಲ್ಲಾ ಕುಟುಂಬದವರು ಖರೀದಿಸಲು ಪ್ರಾರಂಭಿಸಿದರು.. ಕೈಗಾರಿಕಾ ಕ್ರಾಂತಿಯೊಂದಿಗೆ ಕುರ್ಚಿಗಳು ಹೆಚ್ಚು ಲಭ್ಯವಾಯಿತು. 20ನೇ ಶತಮಾನದಲ್ಲಿ ಕುರ್ಚಿ ನಿರ್ಮಾಣದಲ್ಲಿ ತಂತ್ರಜ್ಞಾನದ ಹೆಚ್ಚಿನ ಬಳಕೆಯು ಆಲ್-ಮೆಟಲ್ ಫೋಲ್ಟಿಂಗ್ ಕುರ್ಚಿ, ಮೆಟಲ್ ಫೋಲ್ಡಿಂಗ್ ಕುರ್ಚಿಗಳು, ಸ್ಲಂಬರ್ ಕುರ್ಚಿ, ಪ್ಲಾಸ್ಟಿಕ್ ಕುರ್ಚಿಗಳು ಮತ್ತು ದಕ್ಷತಾಶಾಸ್ತ್ರದ ಕುರ್ಚಿಗಳು ಬಳಕೆಯಾಯಿತು. ಕನಿಷ್ಠ ಭಾಗಶಃ ರೇಡಿಯೋ ಮತ್ತು ದೂರದರ್ಶನದಿಂದ ರೆಕ್ಲೈನರ್ ಕುರ್ಚಿ ಜನಪ್ರೀಯ ರೂಪವಾಯಿತು. 1960ರ ದಶಕದ ಆಧುನಿಕ ಚಳುವಳಿಯ ಹೊಸ ರೂಪದ ಕುರ್ಚಿಗಳನ್ನು ತಯಾರಿಸಿತು. ಚಿಟ್ಟೆ ಕುರ್ಚಿ( ಮೂಲತಃ ಹಾರ್ಡೊಯ್ ಕುರ್ಚಿ), ಬೀನ್ ಚೀಲಗಳು ಮತ್ತು ಮೊಟ್ಟೆ ಆಕಾರದ ಪಾಡ್ ಕುರ್ಚಿ. ಇದು 1966ರಲ್ಲಿ ಬೊಫಿಂಜರ್ ಕುರ್ಚಿನಂತಹ ಮೊಟ್ಟಮೊದಲ ಬೃಹತ್ ನಿರ್ಮಿತ ಪ್ಲಾಸ್ಟಿಕ್ ಕುರ್ಚಿಗಳನ್ನು ಸಹ ಪರಿಚಯಿಸಿತು. ತಾಂತ್ರಿಕ ಪ್ರಗತಿಗಳು ಮೊಲ್ಡ್ ಮಾಡಿದ ಪ್ಲೈವುಡ್ ಮತ್ತು ಮರದ ಲ್ಯಾಮಿನೆಟ್ ಕುರ್ಚಿಗಳಿಗೆ ಕಾರಣವಾಯಿತು. ಜೊತೆಗೆ ಚರ್ಮದ ಅಥವಾ ಪಾಲಿಮರ್‍ಗಳಿಂದ ತಯಾರಿಸಲಾದ ಕುರ್ಚಿಗಳಾಗಿದ್ದವು. ಯಾಂತ್ರಿಕ ತಂತ್ರಜ್ಞಾನವು ಕುರ್ಚಿಯಲ್ಲಿ ಹೊಂದಾಣಿಕೆಯ ಕುರ್ಚಿಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ಕಚೇರಿ ಬಳಕೆಗೆ ಕುರ್ಚಿಯಲ್ಲಿ ಮೋಟಾರ್ಸ್ ಮಸಾಜ್‍ನ್ನು ಅಳವಡಿಸಲಾಯಿತು.[]

ವಸ್ತುಗಳು

ಬದಲಾಯಿಸಿ

ಮರ, ಲೋಹದ ಅಥವಾ ಇತರ ಬಲವಾದ ವಸ್ತುಗಳಿಂದ ಕಲ್ಲು ಅಥವಾ ಅಕ್ರಿಲಿಕ್‍ನಂತಹ ಕುರ್ಚಿಗಳನ್ನು ತಯಾರಿಸಬಹುದು. ಕೆಲವು ಸಂದರ್ಭಗಳಲ್ಲಿ ಅನೇಕ ವಸ್ತುಗಳನ್ನು ಒಂದು ಕುರ್ಚಿ ನಿರ್ಮಿಸಲು ಬಳಸಲಾಗುತ್ತದೆ. ಉದಾಹರಣೆಗೆ ಕಾಲುಗಳು ಮತ್ತು ಚೌಕಟ್ಟನ್ನು ಲೋಹದಿಂದ ಮತ್ತು ಪ್ಲಾಸ್ಟಿಕ್‍ನಿಂದ ತಯಾರಿಸಬಹುದು. ಕುರ್ಚಿಗಳು ಮರದ, ಲೋಹದ, ಪ್ಲಾಸ್ಟಿಕ್ ಅಥವಾ ಇತರ ವಸ್ತುಗಳ ಹಾರ್ಡ್ ಮೇಲ್ಮೈಗಳನ್ನು ಹೊಂದಿರಬಹುದು. ಅಥವಾ ಇತರ ವಸ್ತುಗಳ ಹಾರ್ಡ್ ಮೇಲ್ಮೈಗಳನ್ನು ಸಜ್ಜು ಅಥವಾ ಪ್ಯಾಡಿಂಗ್‍ನೊಂದಿಗೆ ಮುಚ್ಚಲಾಗುತ್ತದೆ. ವಿನ್ಯಾಸವನ್ನು ಸರಂಧ್ರ ವಸ್ತುಗಳಿಂದ ತಯಾರಿಸಬಹುದು ಅಥವಾ ಅಲಂಕರಣಕ್ಕಾಗಿ ರಂಧ್ರಗಳಿಂದ ಕೊರೆಯಬಹುದು ಕುರ್ಚಿಯ ಹಿಂಭಾಗವು ಕುಳಿತುಕೊಳ್ಳುವವರ ತಲೆಯ ಎತ್ತರಕ್ಕಿಂತ ವಿಸ್ತಾರವಾಗಿರಬಹುದು. ಇದು ಐಚ್ಛಿಕವಾಗಿ ಹೆಡ್ ರೆಸ್ಟ್‍ಗಳನ್ನು ಒಳಗೊಂಡಿರುತ್ತದೆ. ಚಾಕು ಕತ್ತರಿಗಳು ಮತ್ತು ಮರದ ಆಟದ ಇಟ್ಟಿಗೆಗಳು, ಪೆನ್ಸಿಲ್‍ಗಳು, ಕೊಳಾಯಿ ಟ್ಯೂಬ್‍ಗಳು, ಹಗ್ಗ, ಸುಕ್ಕುಗಟ್ಟಿದ ಕಾಡ್ಬೋರ್ಡ್ ಮತ್ತು ಪಿವಿಸಿ ಪೈಪ್‍ನಂತಹ ಮರುಬಳಕೆ ಮಾಡುವ ವಸ್ತುಗಳು ಸೇರಿದಂತೆ ಹೆಚ್ಚಿನ ಸೃಜನಶೀಲ ವಸ್ತುಗಳಿಂದ ಕುರ್ಚಿಗಳನ್ನು ತಯಾರಿಸಬಹುದು. ಅಪರೂಪದ ಸಂದರ್ಭಗಳಲ್ಲಿ ಕುರ್ಚಿಗಳನ್ನು ಅಸಾಮಾನ್ಯ ವಸ್ತುಗಳಿಂದ ತಯಾರಿಸಲಾಗುತ್ತದೆ. ವಿಶೇಷವಾಗಿ ಕಲೆಯ ಅತವಾ ಪ್ರಯೋಗದ ರೂಪ. ಲಟ್ವಿಯನ್ ಒಳಾಂಗಣ ವಿನ್ಯಾಸಗಾರ ರೈಮಂಡ್ಸ್ ಸಿರುಲಿಸ್, ಜ್ವಾಲಾಮುಖಿ ಶಿಲೆಗಳಿಂದ ನೇತಾಡುವ ಕುರ್ಚಿಯನ್ನು ಸೃಷ್ಟಿಸಿದರು. ಡಚ್ ಮೂಲದ ಜರ್ಮನ್ ಡಿಸೈನರ್ ಪೀಟರ್ ಬ್ರೆನರ್, ಲಾಲಿಪಪ್ ಸಕ್ಕರೆಯಿಂದ ತಯಾರಿಸಿದ ಕುರ್ಚಿಯನ್ನು ಸೃಷ್ಟಿಸಿದ್ದಾರೆ. 60 ಪೌಂಡ್‍ಗಳ ಮಿಠಾಯಿಗಾರರ ಸಕ್ಕರೆಯನ್ನು ಉಪಯೋಗಿಸಲಾಯಿತು.

ವಿನ್ಯಾಸ ಮತ್ತು ದಕ್ಷತಾಶಾಸ್ತ್ರ

ಬದಲಾಯಿಸಿ
ಕುರ್ಚಿ ವಿನ್ಯಾಸವು ಉದ್ದೇಶಿತ ಬಳಕೆ  ಅಲ್ಲದೇ ಗಾತ್ರ ಪ್ರೇರಿಸುವ ಸಾಮಥ್ರ್ಯ, ತೂಕ, ಬಾಳಿಕೆ,  ಮತ್ತು ಕಲಾತ್ಮಕ ವಿನ್ಯಾಸ ಗುಣಮಟ್ಟದ ಕ್ರೀಯಾತ್ಮಕ ಅವಶ್ಯಕತೆಗಳನ್ನು ಪರಿಗಣಿಸುತ್ತದೆ. “ಟಾಸ್ಕ್ ಕುರ್ಚಿಗಳು” ಅಥವಾ ಯಾವುದೇ ಕುರ್ಚಿಗಳು ಸೇರಿದಂತೆ ಮೇಜಿನ ಅಥವಾ ಟೇಬಲ್‍ನೊಂದಿಗೆ ಬಳಸಲು ಉದ್ದೇಶಿಸಿರುವ ಯಾವುದೇ ಕುರ್ಚಿಗಳು ಸ್ವಲ್ಪವೇ ಇಳಿಮುಖವಾಗಿರುತ್ತದೆ. ಡೆಂಟಲ್ ಕುರ್ಚಿಗಳನ್ನು ಅಗತ್ಯವಾಗಿ ಒರಗಿಕೊಳ್ಳಬೆಕು. ಪರದೆಯ ಎತ್ತರವನ್ನು ಅವಲಂಬಿಸಿ ದೂರದರ್ಶನ ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಸುಲಭವಾದ ಕುರ್ಚಿಗಳೆಲ್ಲವೂ ಇವೆ. ಪ್ರತಿಯೊಂದು ರೀತಿಯ ಕೆಲಸಗಳಿಗೂ ಅನುಕುಲವಾಗುವ ರೀತಿಯಲ್ಲಿನ ಕುರ್ಚಿಗಳು ಈಗ ಮಾರುಕಟ್ಟೆಯಲ್ಲಿ ಹಾಗೂ ಎಲ್ಲಾ ರೀತಿಯ ವಸ್ತುಗಳಿಂದ ತಯಾರಿಸಿದ ವಿವಿಧ ವಿನ್ಯಾಸದ ಕುರ್ಚಿಗಳನ್ನು ಕೂಡ ನೋಡಬಹುದು.

ಉಲ್ಲೇಖ

ಬದಲಾಯಿಸಿ
  1. https://en.wikipedia.org/wiki/Chair
  2. https://www.encyclopedia.com/literature-and-arts/art-and-architecture/architecture/bench
  3. http://www.nprillinois.org/topic/radio-information-service