ಸದಸ್ಯ:NAMITHA.M036/ನನ್ನ ಪ್ರಯೋಗಪುಟ

ಗರ್ಭಿಣಿ ಮಹಿಳೆ

[]ಪುಂಸವನ (ಅಕ್ಷರಶಃ: ಒಂದು ಪುರುಷ ಸಂತತಿಯನ್ನು ಹುಟ್ಟಿಸುವುದು) ಹಿಂದೂಗಳಿಂದ ಆಚರಿಸಲಾಗುವ ೧೬ ಸಂಸ್ಕಾರಗಳ ಪೈಕಿ ಎರಡನೆಯದು. ಅದನ್ನು ಗರ್ಭಾವಸ್ಥೆಯ ಮೂರನೇ ಅಥವಾ ನಾಲ್ಕನೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಗರ್ಭಿಣಿ ಮಹಿಳೆಯು ಸ್ವಲ್ಪ ಸಗಣಿಯ ಜೊತೆಗೆ ಯವೆಯ ಒಂದು ಬಿಂದು ಮತ್ತು ಕಪ್ಪು ಧಾನ್ಯದ ಎರಡು ಬಿಂದುಗಳನ್ನು ಸೇವಿಸುತ್ತಾಳೆ, ಜೊತೆಗೆ ಧಾರ್ಮಿಕ ಪಠಣವಿರುತ್ತದೆ. ಪುಂಸವನವನ್ನು ಗಂಡು ನಕ್ಷತ್ರದ ದಿನದಂದು ಆಚರಿಸಲಾಗುತ್ತದೆ.ಈ ಆಚರಣೆಯ ಸಂದರ್ಭದಲ್ಲಿ ಬಾಳೆ ದಿಂಡಿನ ರಸದ ಕೆಲವು ಹನಿಗಳನ್ನು ಗರ್ಭಿಣಿಯ ಬಲ ಮೂಗಿನ ಸೊಳ್ಳೆಗೆ ಹಾಕುತ್ತಾರೆ.ಅದಕ್ಕೆ ಕಾರಣವೆಂದರೆ ಯೋಗ್ಯನಾದ ಗಂಡು ಮಗು ತಾಯಿಯ ಹೊಟ್ಟೆಯಲ್ಲಿ ಹುಟ್ಟುವಂತೆ ದೇವರಲ್ಲಿ ಪ್ರಾರ್ಥಿಸುವುದು.ದೊಡ್ಡ ಆಯುರ್ವೇದ ಬರಹಗಾರರಾದ ಶುಷ್ರುತ ಅವರ ಪ್ರಕಾರ ಬಾಳೆ ದಿಂಡಿನ ರಸವು ಗರ್ಭಧಾರಣೆಯ ಸಮಯದಲ್ಲಿ ಗರ್ಭಿಣಿಯನ್ನು ಎಲ್ಲಾ ರೀತಿಯ ತೊಂದರೆಗಳಿಂದ ನಿವಾರಿಸುವ ಗುಣವನ್ನು ಹೊಂದಿರುವುದಾಗಿದೆ.ಇದರ ಜೊತೆಗೆ ಗರ್ಭಿಣಿಗೆ ಹೆರಿಗೆಯ ಸಮಯದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಆಕೆಯ ಎಡ ಮಣಿಕಟ್ಟಿಗೆ ಪರಿಶುದ್ಧವಾದ ಅಂತ್ರವನ್ನು ಕಟ್ಟುತ್ತಾರೆ.http://www.hknet.org.nz/seX-files-PUMSAVANA.html

ಹಿನ್ನೆಲೆ

ಬದಲಾಯಿಸಿ

ಪುಂಸವನವು ಹಿಂದೂ ಧರ್ಮದಲ್ಲಿ ಆಚರಿಸುವ ೧೬ ಸಂಸ್ಕಾರಗಳಲ್ಲಿ ಒಂದಾಗಿದೆ,ಅಂದರೆ ವಿಧಿಗಳನ್ನು ಅಂಗೀಕರಿಸುವುದು.ಅದು ಒಂದು ಮಗುವಿನ ಜನನದ ಮೂಲಕ ಆರಂಭಗೊಂಡು ಅದರ ಬೆಳವಣಿಗೆ ಹಾಗು ಬಂಧು-ಮಿತ್ರರ ಸಮ್ಮುಖದಲ್ಲಿ ಮಗುವನ್ನು ಭೂಮಿಯ ಮೇಲೆ ಸ್ವಾಗತ ಕೋರುವ ವಿಧಿ ವಿಧಾನಗಳಿವೆ.ನಂತರ ಆ ಮಗುವು ಜೀವನದಲ್ಲಿ ವಿವಿಧ ರೀತಿಯ ಹಂತಗಳ ಅನುಭವ ಪಡೆಯುತ್ತದೆ.ಅಂದರೆ ಬ್ರಹ್ಮಚರ್ಯ,ಗೃಹಸ್ತ,ವಾನಪ್ರಸ್ತ ಹಾಗು ಸನ್ಯಾಸ ಎಂಬ ಆಶ್ರಮಗಳನ್ನು ಮಗುವು ತನ್ನ ಜೀವನದಲ್ಲಿ ಹಂತ ಹಂತವಾಗಿ ಅನುಭವಿಸುತ್ತದೆ.ಈ ಎಲ್ಲಾ ವಿಧಿ-ವಿಧಾನಗಳು ಒಂದೇ ರೀತಿಯಲ್ಲಿ ಇರುವುದಿಲ್ಲ,ಹಿಂದೂಗಳು ಅನುಸರಿಸುವ ಸಂಪ್ರದಾಯಗಳ ಮೂಲಕ ಅವು ಬದಲಾಗುತಿರುತ್ತವೆ.ಕೆಲವರು ಯಜ್ಞಾದಿಗಳನ್ನು ಮಾಡಿ ವೈದಿಕ ಶ್ಲೋಕಗಳ ಪಠಣವನ್ನು ಮಾಡುತ್ತಾರೆ.ಇನ್ನೂ ಕೆಲವರು ಸರಳವಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ.ಈ ರೀತಿಯ ವಿಧಿ-ವಿಧಾನಗಳು ಹಲವಾರು ಧರ್ಮಸೂತ್ರಗಳು ಹಾಗು ಗೃಹಸೂತ್ರಗಳಲ್ಲಿ ಕಂಡುಬರುತ್ತದೆ.

ವಿವರಣೆ

ಬದಲಾಯಿಸಿ

ಪುಂಸವನ ಎಂಬುದು ಒಂದು ಸಂಯುಕ್ತ ಪದದಿಂದ ಮಿಶ್ರಿತಗೊಂಡಿದ್ದು ಅದೇನೆಂದರೆ ಪುಂಸ್+ಸವನ ಪುಂಸ್ ಅಂದರೆ ಬೀಸುವ,ಚಲಿಸುವ ಮತ್ತು ಮನಷ್ಯ ಅಥವಾ ಆತ್ಮ ಎಂದರ್ಥ.ಹಾಗೆ ಸವನ ಎಂದರೆ ಆಚರಣೆ.ಇದನ್ನು ಕೂಡಿಸಿ ಹೇಳಬೇಕಾದರೆ ಒಂದು ಪುರುಷ ಸಂತತಿಯನ್ನು ಹುಟ್ಟಿಸುವುದು ಎಂದರ್ಥ.ಪುಂಸವನ ಎಂಬ ಆಚರಣೆಯನ್ನು ಗರ್ಭಧಾರಣೆಯ ೩ರನೇಯ ಅಥವಾ ೩ನೇ ತಿಂಗಳ ನಂತರ ಆಚರಿಸುತ್ತಾರೆ.ಗರ್ಭದಲ್ಲಿರುವ ಭ್ರೂಣವು ಚಲಿಸಲು ಪ್ರಾರಂಭ ಮಾಡಿದಾಗ ಪುಂಸವನವನ್ನು ಆಚರಿಸುತ್ತಾರೆ.ಈ ಆಚರಣೆಯು ಮಗುವಿನ ಬೆಳವಣಿಗೆಯಲ್ಲಿ ಮೈಲಿಗಲ್ಲಾಗಿ ನಿಲ್ಲುತ್ತದೆ.

ಕಾರ್ಯಕ್ರಮ

ಬದಲಾಯಿಸಿ

ಈ ಆಚರಣೆಯನ್ನು ಹಲವು ರೀತಿಯಲ್ಲಿ ಆಚರಿಸುತ್ತಾರೆ,ಆದರೆ ಎಲ್ಲಾ ಆಚರಣೆಗಳಲ್ಲೂ ಗಂಡ ತನ್ನ ಹೆಂಡತಿಯ ಆರೈಕೆ ಮಾಡುವಂತದಾಗಿದೆ.ಗರ್ಭಧಾರಣೆಯ ಸಮಯದಲ್ಲಿ ಹೆಂಡತಿಗೆ ಹಲವಾರು ಬಯಕೆಗಳು ಹಾಗು ನಿರೀಕ್ಷೆಗಳು ಇರುತ್ತವೆ.ಇವೆಲ್ಲವನ್ನು ನೀಗಿಸುವುದು ಗಂಡನ ಜವಾಬ್ದಾರಿಯಾಗಿರುತ್ತದೆ.ಒಂದು ಆವೃತ್ತಿಯಲ್ಲಿ ಗಂಡ ತನ್ನ ಹೆಂಡತಿಗೆ ಮೊಸರು,ಹಾಲು ಮತ್ತು ತುಪ್ಪವನ್ನು ತಿನ್ನಿಸಿ ಆರೈಕೆ ಮಾಡಿದರೆ,ಇನ್ನೊಂದು ಆವೃತ್ತಿಯಲ್ಲಿ ಪುಂಸವನವು ತುಂಬ ವಿಸ್ತಾರವಾಗಿದ್ದು ಯಜ್ಞ,ವೈದಿಕ ಗಾಯನಗಳ ಸಮ್ಮುಖದಲ್ಲಿ ಆಚರಿಸಲಾಗುತ್ತದೆ.ಈ ಸಮಯದಲ್ಲಿ ಗಂಡನು ತನಗೆ ಗಂಡು ಮಗು ಹುಟ್ಟಬೇಕೆಂಬ ಆಸೆಯಿದ್ದರೆ ತನ್ನ ಹೆಂಡತಿಯ ಬಲ ಮೂಗಿನ ಸೊಳ್ಳೆಗೆ ಬಾಳೆ ದಿಂಡಿನ ರಸವನ್ನು ಹಾಕುತ್ತಾನೆ.ಹೆಣ್ಣು ಮಗು ಹುಟ್ಟಬೇಕೆಂಬ ಆಸೆಯಿದ್ದಲ್ಲಿ ಎಡ ಮೂಗಿನ ಸೊಳ್ಳೆಗೆ ಬಾಳೆಯ ದಿಂಡಿನ ರಸವನ್ನು ಹಾಕುತ್ತಾನೆ.ಹೀಗೆ ಪುಂಸವನ ಎಂಬ ಆಚರಣೆಯು ಹಬ್ಬದ ವಾತಾವರಣವನ್ನು ಮೂಡಿಸುತ್ತದೆ.

ಗ್ರಂಥಗಳು

ಬದಲಾಯಿಸಿ

ಪುಂಸವನ ಆಚರಣೆಯ ಬೇರುಗಳು ಅಥರ್ವ ವೇದದ ವಿಭಾಗ ೪.೩.೨೩ ಮತ್ತು ೪.೬.೨ರಲ್ಲಿ ಇದೆ.ಅಲ್ಲಿ ಗಂಡು ಮಗುವಿನ ಜನನಕ್ಕಾಗಿ ಯಂತ್ರಗಳ ಪಠಣವನ್ನು ಮಾಡುತ್ತಾರೆ.ಅಥರ್ವ ವೇದದಲ್ಲಿ ಗರ್ಭಪಾತಗಳನ್ನು ತಡೆಗಟ್ಟುವ ಯಂತ್ರಗಳ ಪಠಣೆಗಳೂ ಇವೆ.ಅಥರ್ವ ವೇದದಲ್ಲಿ ಸಾವಿರಾರು ಅಧ್ಯಾಯಗಳು ಇದ್ದು ಅವುಗಳು ವೈವಿಧ್ಯಮಯವಾದ ವ್ಯಾಪ್ತಿಯಿಂದ ಹಾಗು ಪ್ರಾರ್ಥನೆಯಿಂದ ಕೂಡಿವೆ.ಬೃಹದರನ್ಯಾಕ ಉಪನಿಷತ್ತಿನ ಪಠ್ಯದ ಕೊನೆಯ ಅಧ್ಯಾಯ ವಿದ್ಯಾರ್ಥಿಯ ಶಿಕ್ಷಣದ ಬದುಕನ್ನು ವಿವರಿಸುತ್ತದೆ.ಇದರಲ್ಲಿ ಗೃಹಸ್ತ ಆಶ್ರಮದ ಬದುಕಿನ ಪಾಠಗಳೂ ಇವೆ.ಇದರಲ್ಲಿ ವಿದ್ಯಾರ್ಥಿಗೆ ಒಬ್ಬ ಗಂಡನಾಗಿ ಅವನು ಯಾವ್ಯಾವ ಕರ್ತವ್ಯಗಳನ್ನು ನಿಭಾಯಿಸಬೇಕೆಂಬ ಪಾಠಗಳು ಇವೆ.ಗಂಡನಾಗಿ ಅವನು ತನ್ನ ಹೆಂಡತಿಗೆ ಅನ್ನ ಹಾಕಬೇಕು,ಇಬ್ಬರೂ ಒಟ್ಟಾಗಿ ಕೂಡಿ ಊಟ ಮಾಡಬೇಕು. ಗಂಡ-ಹೆಂಡತಿ ತಮಗೆ ಹೆಣ್ಣು ಮಗು ಹುಟ್ಟಬೇಕೆಂದು ಆಶಿಸಿದರೆ,ಬಿಸಿಯಾದ ಅನ್ನದ ಜೊತೆಗೆ,ಎಳ್ಳು ಮತ್ತುಬೆಣ್ಣೆಯನ್ನು ಒಟ್ಟಿಗೆ ಕೂತು ಊಟ ಮಾಡಬೇಕಾಗಿ ಉಪನಿಷತ್ತು ತಿಳಿಸುತ್ತದೆ.ಈ ರೀತಿ ಮಾಡುವುದರಿಂದ ಮಗುವಿನ ಆಯಸ್ಸು ವೃದ್ಧಿಯಾಗಿ ಆರೋಗ್ಯವಾದ ಮಗು ಹುಟ್ಟುತ್ತದೆ.ಗಂಡ-ಹೆಂಡತಿ ತಮಗೆ ಗಂಡು ಮಗು ಹುಟ್ಟಬೇಕೆಂದು ಆಶಿಸಿದರೆ,ಬಿಸಿಯಾದ ಅನ್ನದ ಜೊತೆ ಮಾಂಸವನ್ನು ನಂತರ ಬೆಣ್ಣೆಯನ್ನು ಇಬ್ಬರೂ ಜೊತೆಯಾಗಿ ಕೂಡಿ ತಿನ್ನಬೇಕೆಂದು ಉಪನಿಷತ್ತು ತಿಳಿಸುತ್ತದೆ.http://www.hknet.org.nz/seX-files-PUMSAVANA.html[]

ಪುಂಸವನ ವಿಧಿ

ಬದಲಾಯಿಸಿ
 
ಪುಂಸವನದಲ್ಲಿ ತಯಾರಿಸುವ ಹಲವು ರೀತಿಯ ಸಿಹಿ ತಿನಿಸುಗಳು

ಪ್ರಕಾರ ಪರಿಭಾಷ:ಈ ವಿಧಾನದ ಗುರಿಯೆಂದರೆ ತಮ್ಮ ಬಯಕೆಯ ಸಂತಾನಕ್ಕೆ ಜನ್ಮವೀಯುವುದು.ಈ ವಿಧಾನವನ್ನು ಗರ್ಭಧಾರಣೆಯ ಶೀಘ್ರ ಹಂತಗಳಲ್ಲಿ ಅಂದರೆ ಗರ್ಭಧಾರಣೆಯ ದೃಡೀಕರಣವಾದ ಏಂಟರಿಂದ ಒಂಭತ್ತು ವಾರಗಳೊಳಗೆ ಆಚರಿಸಬೇಕು;ಇಲ್ಲವಾದಲ್ಲಿ ಈ ಆಚರಣೆ ನಿರರ್ಥಕವಾಗುತ್ತದೆ.ಈ ಆಚರಣೆಯನ್ನು ಪುಷ್ಯ ನಕ್ಷತ್ರದ ಸೂರ್ಯೋದಯದಂದು ಆಚರಿಸಲಾಗುತ್ತದೆ.

ಪೂರ್ವಕರ್ಮ

ಬದಲಾಯಿಸಿ

ರೋಗಿಯ ತಯಾರಿಗಳು:ಸಲಹೆ,ಮನಸ್ಸಿನ ಶುದ್ಧಿ(ಇದನ್ನು ಬ್ರಹ್ಮಚರ್ಯದ ಮೂಲಕ ಸಾಧಿಸಲಾಗುತ್ತದೆ.),ಶರೀರ ಶುದ್ಧಿ(ಇದನ್ನು ಶೋಧನ ಚಿಕಿತ್ಸೆಯ ಆಡಳಿತದಿಂದ ಸಾಧಿಸಲಾಗುತ್ತದೆ.)

ಪ್ರಧಾನಕರ್ಮ

ಬದಲಾಯಿಸಿ
ಗರ್ಭಿಣಿ ಮಹಿಳೆಯು ಮೌಖಿಕವಾದ ಮದ್ದನ್ನು ಸೇವಿಸುತ್ತಾಳೆ.

ವೈದ್ಯರು ಉಲ್ಲೇಖಿಸಲಾದ ಅಂದರೆ ಮೂಗಿಗೆ ಅನ್ವಯಿಸುವ ಔಷಧಿಗಳು ನಾಸ್ಯ ವಿಧಾನದ್ಧಾಗಿರುತ್ತದೆ. ಗಂಡು ಮಗುವಿನ ಬಯಕೆ ಇದ್ದಲ್ಲಿ ಬಲ ಮೂಗಿನ ಸೊಳ್ಳೆಗೆ ಅಥವಾ ಹೆಣ್ಣು ಮಗುವಿನ ಬಯಕೆ ಇದ್ದಲ್ಲಿ ಎಡ ಮೂಗಿನ ಸೊಳ್ಳೆಗೆ ಔಷಧಿಯನ್ನು ಹಾಕಲಾಗುತ್ತದೆ. ಕೆಲವು ಶ್ರೇಷ್ಠರ ಪ್ರಕಾರ ಗರ್ಭಿಣಿ ಮಹಿಳೆಯು ತನ್ನ ಮೂಗಿನ ಸೊಳ್ಳೆಗೆ ಔಷಧಿಯನ್ನು ಹಾಕಿಕೊಳ್ಳುವಾಗ ತನ್ನ ತಲೆಯನ್ನು ಮನೆಯ ಬಾಗಿಲ ಹೊಸ್ತಿಲ ಮೇಲೆ ಇಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ.ಒಟ್ಟಾರೆ ಹೇಳಬೇಕಾದರೆ ಪುಂಸವನ ಎಂಬ ಆಚರಣೆಯು ತಾಯಿಯ ಹೊಟ್ಟೆಯೊಳಗಣ ಭ್ರೂಣಕ್ಕೆ ಅಂದರೆ ಮಗುವಿಗೆ ತನ್ನ ಜನನದ ಸಮಯದಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದಂತೆ ದೇವರಲ್ಲಿ ಪ್ರಾರ್ಥಿಸುವಂತದ್ದಾಗಿದೆ.ಇದರ ಜೊತೆಗೆ ಮಗು ಆರೋಗ್ಯವಾಗಿಯೂ ಯಾವುದೇ ಲೋಪದೋಷಗಳಿಲ್ಲದಂತೆ ಹುಟ್ಟಲು ಪ್ರಾರ್ಥಿಸುವಂತದು.ಪುಂಸವನವನ್ನು ಆಚರಿಸಿದರೆ ಮಗುವಿಗೆ ಶ್ರೇಯಸ್ಸು ಉಂಟಾಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ ಗರ್ಭಿಣಿಯು ತನ್ನ ಮೂಗಿನ ಸೊಳ್ಳೆಗೆ ಹಾಕಿಕೊಳ್ಳುವ ಔಷಧಿಯು ಗಂಟಲಿಗೆ ತಲುಪಿದ್ದಲ್ಲಿ;ಯಾವುದೇ ಕರಣಕ್ಕೂ ಅದನ್ನು ಉಗುಳಬಾರದು.ಇಲ್ಲವಾದಲ್ಲಿ ಆಚರಣೆಯಿಂದ ಯಾವುದೇ ಫಲ ಸಿಗುವುದಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Pumsavana
  2. http://www.hknet.org.nz/seX-files-PUMSAVANA.html