ಸದಸ್ಯ:Guru Sharan N/ನನ್ನ ಪ್ರಯೋಗಪುಟ

ಸಿ ಆರ್ ರಾವ್:

ಬದಲಾಯಿಸಿ

ಜನನ ಮತ್ತು ಕುಟುಂಬ:

ಬದಲಾಯಿಸಿ
 
ಸಿ ಆರ್ ರಾವ್‍ರವರ ಭಾವಚಿತ್ರ

ಕಾಲ್ಯಂಪುಡಿ ರಾಧಾಕೃಷ್ಣ ರಾವ್, ಇವರನ್ನು ಸಿ ಆರ್ ರಾವ್ ಎಂದೇ ಕರೆಯಲಾಗುತ್ತದೆ. ಅವರು ೧೦ನೇ ಸೆಪ್ಟೆಂಬರ್ ೧೯೨೦ ರಂದು ಹಡಹಲಿ, ಬಳ್ಳಾರಿ, ಕರ್ನಾಟಕ, ಭಾರತದಲ್ಲಿ ಕನ್ನಡ-ತೆಲುಗು ಮಾತನಾಡುವ ಕುಟುಂಬದಲ್ಲಿ ಜನಿಸಿದರು, ಅವರ ತಂದೆ ಸಿ.ದೊರಸ್ವಾಮಿ ನಾಯ್ಡು ಮತ್ತು ತಾಯಿ ಎ.ಲಕ್ಷ್ಮಿಕಾಂತಮ್ಮ. ಅವರು ತಮ್ಮ ತಂದೆ ತಾಯಿಯಯರ ಎಂಟನೇ ಮಗು. ಅವರಿಗೆ ಐದು ಅಣ್ಣ-ತಮ್ಮಂದಿರು ಮತ್ತು ನಾಲ್ಕು ಅಕ್ಕ-ತಂಗಿಯರು ಇದ್ದಾರೆ. ಅವರ ಹೆಂಡತಿ ಭಾರ್ಗವಿ ಕೂಡ ಇತಿಹಾಸ ಮತ್ತು ಮನೋವಿಜ್ಞಾನದಲ್ಲಿ ಸ್ನತಕೋತ್ತರ ಪದವಿಗಳನ್ನು ಮಾಡಿದ್ದರು. ಅವರ ಪುತ್ರಿ ತೇಜಸ್ವಿನಿ ಪೋಷಣಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಅವರು ಮಗ ವೀರೇಂದ್ರ ಒಬ್ಬ ವಿದ್ಯುತ್ ಅಭಿಯಂತರ ಮತ್ತು ಗಣಕಯಂತ್ರದ ವಿಜ್ಞಾನಿಯಾಗಿದ್ದಾರೆ.

ಅವರು ತಮ್ಮ ೧೧ನೇ ವಯಸ್ಸಿನಲ್ಲೇ ಕಷ್ಟಕರ ಗಣಿತ ಪ್ರಶ್ನೆಗಳನ್ನು ಸುಲಭವಾಗಿ ಪರಿಹರಿಸುತ್ತಿದ್ದನ್ನು ನೋಡಿ ಅವರ ತಂದೆ ಅವರಿಗೆ ಗಣಿತದಲ್ಲಿ ಆಸಕ್ತಿ ಮೂಡಿಸಿದ್ದರು. ಅವರ ತಂದೆ 'ಪ್ರಾಬ್ಲಮ್ಸ್ ಫಾರ್ ಲೀಲಾವತಿ'[] ಎಂಬ ಗಣಿತ ಪುಸ್ತಕವನ್ನು ಅವರಿಗೆ ನೀಡಿದ್ದರು. ಪ್ರತಿ ದಿನ ಪುಸ್ತಕದಲ್ಲಿರುವ ೫ ರಿಂದ ೧೦ ಪ್ರಶ್ನೆಗಳಿಗೆ ಉತ್ತರಿಸ ಬೇಕೆಂದು ಅವರು ರಾವ್‍ರವರಿಗೆ ಹೇಳಿದ್ದರು. ಆ ಪ್ರಶ್ನೆಗಳನ್ನು ಅವರು ಆನಂದವಾಗಿ ಉತ್ತರಿಸುತ್ತಿದ್ದರು. ಅವರ ಆದರ್ಶ ವ್ಯಕ್ತಿಗಳು ಸಿ.ವಿ.ರಾಮನ್ ಮತ್ತು ರಾಮಾನುಜನ್ ಆಗಿದ್ದರು. ಅವರ ತಂದೆಯ ಪ್ರೋತ್ಸಾಹ ಮತ್ತು ಸ್ವಂತ ಆಸಕ್ತಿಯಿಂದ ಅವರು ಗಣಿತ ಕ್ಷೇತ್ರವನ್ನು ಆಯ್ದುಕೊಂಡಿದ್ದರು.

ಆರಂಭಿಕ ಜೇವನ ಮತ್ತು ವಿಧ್ಯಾಭ್ಯಾಸ:

ಬದಲಾಯಿಸಿ

೧೯೪೦ರಲ್ಲಿ ಅವರು ಆಂಧ್ರ ವಿಶ್ವವಿದ್ಯಾಲಯದಲ್ಲಿ ಸಂಶೋಧಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿದ್ದರು ಆದರೆ ತನ್ನ ಮನವಿ ಗಡುವು ನಂತರ ಸ್ವೀಕರಿಸಲಾಗಿತ್ತೆಂದು ತಿರಸ್ಕರಿಸಲಾಗಿತ್ತು. ಈ ಸಮಯದಲ್ಲಿ ಅವರು ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯಲು ೧೮ ತಿಂಗಳು ಕಾಯಬೇಕಿತ್ತು. ಅವರು ನಂತರ ಸೇನಾ ಸಮೀಕ್ಷೆ ಘಟಕದಲ್ಲಿ ಒಂದು ಗಣಿತ-ತಜ್ಞದ ಕೆಲಸಕ್ಕೆ ಅರ್ಜಿ ಹಾಕಿದ್ದರು. ಅವರನ್ನು ಒಂದು ಸಂದರ್ಶನಕ್ಕೆ ಕಲ್ಕತ್ತಗೆ ಕರೆಯಲಾಯಿತು, ಆದರೆ ಕೆಲಸ ಪಡೆಯಲು ವಿಫಲವಾದರು. ನಂತರ ಐಎಸ್‍ಐ ಕಾಲೇಜಿನ ಬಗ್ಗೆ ತಿಳಿದುಕೊಂಡು, ಅಲ್ಲಿರುವ ಒಂದು ವರ್ಷದ ತರಬೇತಿಗೆ ಸೇರಿಕೊಂಡರು. ಅವರು ೧೯೪೧ರಲ್ಲಿ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್‍ಗೆ (ಐಎಸ್ಐ) ತಮ್ಮ ೨೦ನೇ ವಯಸ್ಸಿನಲ್ಲಿ ಸೇರಿದ್ದರು. ಅವರು ಆಂಧ್ರ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಎಂ.ಎಸ್.ಸಿ ಸ್ನಾತಕೋತ್ತರ ಪದವಿ ಪಡೆದರು ಮತ್ತು ೧೯೪೩ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಸ೦ಖ್ಯಾಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ಅವರು ವಿಶ್ವದಲ್ಲೆ ಸ೦ಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮೊದಲು ಪಡೆದ ಕೆಲವು ಜನರಲ್ಲಿ ಒಬ್ಬರು. ರಾವ್ ಅವರು ಐಎಸ್‍ಐ-ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್‍ನಲ್ಲಿ ಮತ್ತು ನಂತರ ಕೇಂಬ್ರಿಜ್‍ನಲ್ಲಿರುವ ಮಾನವಶಾಸ್ತ್ರದ ವಸ್ತುಸಂಗ್ರಹಾಲಯದಲ್ಲಿ ಕೆಲಸ ಮಾಡಿದರು. ಇದರ ನಂತರ ೧೯೪೮ರಲ್ಲಿ ಪಿಎಚ್‍ಡಿ ಪದವಿಯನ್ನು ಅವರು ಆರ್.ಎ.ಫಿಶರ್‍ರವರ ಅಡಿಯಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಪಡೆದರು.

ಉದ್ಯೋಗ ಇತಿಹಾಸ:

ಬದಲಾಯಿಸಿ

ಅವರು ೪೦ ವರ್ಷಗಳ ಕಾಲ ಐಎಸ್‍ಐ[]-ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕರಾಗಿ ಮತ್ತು 'ಜವಾಹರಲಾಲ್ ನೆಹರೂ ಪ್ರಾಧ್ಯಾಪಕರಾಗಿ' ಮತ್ತು ರಾಷ್ಟ್ರೀಯ ಪ್ರಾಧ್ಯಾಪಕರಾಗಿ ಭಾರತದಲ್ಲಿರುವ ಮುಖ್ಯವಾದ ಹಲವು ಸ್ಥಾನಗಳಲ್ಲಿ ಕೆಲಸ ಮಾಡಿದ್ದರು. ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಇದರ ನಂತರ ಪೆನ್ಸಿಲ್ವೇನಿಯಾ ರಾಜ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಮತ್ತು ಸ೦ಖ್ಯಾಶಾಸೃದ ಕೇಂದ್ರ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಈಗಿನ ಉದ್ಯೋಗ:

ಬದಲಾಯಿಸಿ

ಇವರು ಇಂಗ್ಲೆಂಡಿನ ರಾಯಲ್ ಸೊಸೈಟಿಯ ಒಬ್ಬ ಸದಸ್ಯರಾಗಿದ್ದರು. ಅವರು ಪ್ರಸ್ತುತ ಪೆನ್ಸಿಲ್ವೇನಿಯ ರಾಜ್ಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಬಫೆಲೋ ವಿಶ್ವವಿದ್ಯಾಲಯದಲ್ಲಿ ಗಣಿತ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳು:

ಬದಲಾಯಿಸಿ

ಸಿ ಆರ್ ರಾವ್‍ರವರಿಗೆ ಹಲವಾರು ಗೌರವ ಪದವಿಗಳನ್ನು ಮತ್ತು ಅಭಿನಂದನ ಗ್ರಂಥಗಳನ್ನು ನೀಡುವ ಮೂಲಕ ವಿವಿಧ ವಿಶ್ವವಿದ್ಯಾಲಯಗಳು ಅವರನ್ನು ಪುರಸ್ಕರಿಸಿದೆ. ಅವರಿಗೆ ೨೦೦೨ರಲ್ಲಿ ಅಮೇರಿಕ ತನ್ನ ದೇಶದ ರಾಷ್ಟ್ರೀಯ ವಿಜ್ಞಾನ ಪದಕ ನೀಡಿ ಗೌರವಿಸಲಾಯಿತು. ಇದರ ನಂತರ 'ಡಾಕ್ಟರ್ ಅಫ್ ಸೈನ್ಸ್' ಎಂಬ ಅಪರೂಪದ ಪದವಿಯನ್ನು ಕೇಂಬ್ರಿಜ್‍ನಲ್ಲಿ ೧೯೬೫ರಲ್ಲಿ ಪಡೆದರು.

ಸ೦ಖ್ಯಾಶಾಸ್ತ್ರಕ್ಕೆ ಮತ್ತು ವಿಜ್ಞಾನಕ್ಕೆ ಅವರು ನೀಡಿದ ಕೊಡುಗೆಗಳಿಂದ ವಿಶ್ವದ ೧೯ ವಿವಿಧ ದೇಶದ ವಿಶ್ವವಿದ್ಯಾಲಯಗಳಿಂದ ಅವರು ೩೮ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಇದಲ್ಲದೆ ಅವರು ಹಲವಾರು ವಿಜ್ಞಾನ ಪ್ರಶಸ್ತಿಗಳನ್ನು ಮತ್ತು ಪದಕಗಳನ್ನು ಪಡೆದಿದ್ದಾರೆ. ೧೯೬೫ರಲ್ಲಿ ಅವರಿಗೆ ರಾಯಲ್ ಸ್ಟಾಟಿಸ್ಟಿಕಲ್ ಸೊಸೈಟಿ ಬೆಳ್ಳಿಯ ಗೈ ಪದಕವನ್ನು ಮತ್ತು ೨೦೧೧ರಲ್ಲಿ ಚಿನ್ನದ ಗೈ ಪದಕವನ್ನು ನೀಡಿ ಗೌರವಿಸಿತು. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು. ನಂತರ ಜೆಸಿ ಬೋಸ್ ಚಿನ್ನದ ಪದಕವನ್ನು ಬೋಸ್ ಇನ್ಸ್ಟಿಟ್ಯೂಟ್ ನೀಡಿತು. ಇವರು ಭಾರತ, ಇಂಗ್ಲೆಂಡ್, ಅಮೇರಿಕಾ ಮತ್ತು ಇಟಲಿಯಲ್ಲಿರುವ ಎಂಟು ವಿವಿಧ ರಾಷ್ಟ್ರೀಯ ಅಕಾಡೆಮಿಗಳ ಸದಸ್ಯರು. ಅವರಿಗೆ ಭಾರತ ಸರ್ಕಾರ ೨೦೦೧ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇವರಿಗೆ ೨೦೧೦ರಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ 'ಭಾರತ ವಿಜ್ಞಾನ ಪ್ರಶಸ್ತಿ'ಯನ್ನು ಭಾರತ ಸರ್ಕಾರ ನೀಡಿ ಗೌರವಿಸಿತು. ಮೇ ೨೦೧೩ರಲ್ಲಿ ರಾವ್‍ರವರ ೩೭ನೇ ಗೌರವ ಡಾಕ್ಟರೇಟ್ ಪದವಿಯನ್ನು ನ್ಯೂಯಾರ್ಕ್ ರಜ್ಯ ವಿಶ್ವವಿದ್ಯಾಲಯ ಅವರಿಗೆ ನೀಡಿತು. ಇತ್ತೀಚೆಗೆ ೨೬ ಜುಲೈ ೨೦೧೪ರಂದು ಖರಗ್ಪುರದಲ್ಲಿರುವ ಭಾರತೀಯ ತಂತ್ರಜ್ಞಾನ ವಿದ್ಯಾಲಯ (ಐಐಟಿ-ಕೆಜಿಪಿ) ರಾವ್‍ರವರಿಗೆ ೩೮ನೇ ಗೌರವ ಡಾಕ್ಟರೇಟ್ ಪದವಿಯನ್ನು ಅವರ ರಾವ್ ಮಿತಿ ಮತ್ತು ರಾವ್ ಅಳತೆಗೆ ನೀಡಿದ ಕೊಡುಗೆಗೆ ನೀಡಿ ಅಭಿನಂದಿಸಲಾಯಿತು. ಭಾರತದ ಸರ್ದಾರ್ ಪಟೇಲ್ ಸಂಘವು 'ಸರ್ದಾರ್ ರತ್ನ'[]ಯನ್ನು ರಾವ್‍ರವರ ಜೀವಮಾನ ಸಾಧನೆಗೆ ಪ್ರಶಸ್ತಿಯನ್ನು ನೀಡಿತು.

ಅಮೆರಿಕಾದ ಸಂಖ್ಯಾಶಾಸ್ತ್ರ ಸಂಸ್ಥೆಯು ಅವರನ್ನು: "ಅವರ ಆವಿಷ್ಕಾರ ಕೇವಲ ಸಂಖ್ಯಾಶಾಸ್ತ್ರದಲ್ಲಿ ಮಾತ್ರ ಅಲ್ಲದೆ ಅರ್ಥಶಾಸ್ತ್ರ, ತಳಿಶಾಸ್ತ್ರ, ಮಾನವಶಾಸ್ತ್ರ, ಭೂವಿಜ್ಞಾನ, ರಾಷ್ಟ್ರೀಯ ಯೋಜನೆ, ಜನಸಂಖ್ಯಾಶಾಸ್ತ್ರದ, ಜೀವಶಾಸ್ತ್ರ ಮತ್ತು ಔಷಧಶಾಸ್ತ್ರಗಳಂತೆ ವಿಭಿನ್ನ ಕ್ಷೇತ್ರಗಳಲ್ಲಿ ಪ್ರಭಾವ ಮೂಡಿಸಿದೆ." ಎಂದು ಹೊಗಳಿದೆ.

ಸಂಶೋಧನೆ ಮತ್ತು ಕಾಣಿಕೆಗಳು :

ಬದಲಾಯಿಸಿ

ಅವರ ಇತರ ಮುಖ್ಯ ಕಾಣಿಕೆಗಳು ಫಿಶರ್‍-ರಾವ್ ಪ್ರಮೇಯ ಮತ್ತು ರಾವ್ ಅಳತೆ. ಇವರು ೧೪ ವಿವಿಧ ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ೪೦೦ ವಿಜ್ಞಾನ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿತು. ಅವರು ಸಂಶೋಧಿಸಿ ಕೊಡುಗೆಗಳನ್ನು ನೀಡಿದ ಕ್ಷೇತ್ರಗಳಲ್ಲಿ ಕೆಲವು ಅಂದಾಜು ಸಿದ್ಧಾಂತ, ರೇಖೀಯ ಮಾದರಿಗಳು ಮತ್ತು ಅದರ ಸಂಖ್ಯಾಶಾಸ್ತ್ರದ ತರ್ಕ, ಸಂಖ್ಯಾಶಾಸ್ತ್ರದ ವಿಭಿನ್ನ ವಿಶ್ಲೇಷಣೆ, ಸಂಯೋಗ ವಿನ್ಯಾಸ, ಸಮಕೋನದಲ್ಲಿರುವ ರಚನೆಗಳು, ಸಂಖ್ಯಾಶಾಸ್ತ್ರದ ತಳಿಶಾಸ್ತ್ರ, ಸಾಮಾನ್ಯ ಮ್ಯಾಟ್ರಿಕ್ಸ್‍ಗಳ ವಿಲೋಮಗಳು, ವಿವಿಧ ಕ್ರಿಯಾತ್ಮಕ ಸಮೀಕರಣಗಳನ್ನು ಕಂಡುಹಿಡಿದಿದ್ದಾರೆ. ಅವರ ಪ್ರಸಿದ್ಧ ಸಂಶೋಧನೆಗಳು ಕ್ರ್ಯಾಮರ್-ರಾವ್ ಮಿತಿ ಮತ್ತು ರಾವ್-ಬ್ಲ್ಯಾಕ್ವೆಲ್ ಪ್ರಮೇಯ. ಇವೆರಡು ಪ್ರಮೇಯಗಳ ಮೂಲಕ ಅವರು ಅಂದಾಜನ್ನು ಕಂಡುಹಿಡಿಯುವ ವಿಧಾನದ ಗುಣಮಟ್ಟವನ್ನು ಉತ್ತಮಗೊಳಿಸಿದರು. ಕ್ವಾಂಟಮ್ ಕ್ರ್ಯಾಮರ್ ಎಂಬ ತಾಂತ್ರಿಕ ಪದದ ಅಡಿಯಲ್ಲಿ ಕ್ರ್ಯಾಮರ್-ರಾವ್ ಮಿತಿಯು ವಿಶೇಷ ಉಪಯೋಗಗಳನ್ನು ಹೊಂದಿದೆ, ರಾವ್ ಮಿತಿಯು ಕ್ವಾಂಟಮ್ ಭೌತಶಾಸ್ತ್ರದಲ್ಲಿ ಕಾಣಿಸಿಕೊಂಡಿದೆ. ವಿಶ್ಲೇಷಣೆಯಲ್ಲಿ ರಾವ್‍ರವರ ಎಫ್ ಮತ್ತು ಯು ಪರೀಕ್ಷೆಗಳು ಒಂದು ಮ್ಯಾಟ್ರಿಕ್ಸ್ನ ಸಾಮಾನ್ಯ ವಿಲೋಮವನ್ನು ಗಮನಕ್ಕೆ ತಂದಿತು. ರಾವ್ ವರ್ಗ ಜಡೋಷ್ಣ, ಕ್ರಾಸ್ ಜಡೋಷ್ಣವನ್ನು ಕಂಡುಹಿಡಿದಿದ್ದಾರೆ. ಸಂಭವನೀಯತೆಯ ಹಂಚಿಕೆಯನ್ನು ಮೇಲೆ ಲಾವ್-ರಾವ್-ಶಾನಭಾಗ್, ರಾವ್-ರುಬಿನ್ ಮತ್ತು ಕಗನ್-ಲಿನ್ನಿಕ್-ರಾವ್ ಪ್ರಮೇಯಗಳು ಬಹು ದೊಡ್ಡ ಪ್ರಭಾವ ಬೀರಿವೆ. ರಾವ್‍ರವರ ಕನಿಷ್ಠ ಚೌಕಗಳು ಗಾಸ್-ಮಾರ್ಕ್‍ಫ್‍ರ ಕನಿಷ್ಠ ಚೌಕಗಳ ಸಿದ್ಧಾಂತವನ್ನು ಸುಲಭ ಮಾಡಿತು.

ಪುಸ್ತಕಗಳು:

ಬದಲಾಯಿಸಿ

ಅವರು ಅಮೇರಿಕಾಗೆ ಸ್ಥಳಾಂತರಗೊಂಡ ನಂತರ ಪ್ರಕಟಿಸಿದ್ದ ಪುಸ್ತಕಗಳು ಜೆ ಕ್ಲೆಫ್ಫೆ ಜೊತೆ- ವ್ಯತ್ಯಾಸದ ಭಾಗಗಳು ಮತ್ತು ಅದರ ಅನ್ವಯಗಳ ಅಂದಾಜು (೧೯೮೮), ಅಂಕಿಅಂಶ ಮತ್ತು ಸತ್ಯ (೧೯೮೯), ಡಿ ಎನ್ ಶಾನಭಾಗ್ ಜೊತೆ- ಅನ್ವಯಗಳೊಂದಿಗೆ ಸಂಭವನೀಯ ಮಾದರಿಗಳು, ಚೊಕೆಟ್-ಡಿನೈ ರೀತಿಯ ಕ್ರಿಯಾತ್ಮಕ ಸಮೀಕರಣಗಳು ಮತ್ತು ಅದರ ಅನ್ವಯಗಳು (೧೯೯೪), ಎಚ್ ಟೊಟೆಂಬರ್ಗ್ ಜೊತೆ- ಲೀನಿಯರ್ ಮಾದರಿಗಳು, ಕನಿಷ್ಠ ಚೌಕಗಳು ಮತ್ತು ಪರ್ಯಾಯ (೧೯೯೫) ಮತ್ತು ಎಂ ಬಿ ರಾವ್ ಜೊತೆ- ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಮ್ಯಾಟ್ರಿಕ್ಸ್ ಬೀಜಗಣಿತದ ಅನ್ವಯಗಳು (೧೯೯೮).

ಪ್ರಾರಂಭಿಸಿದ ಸಂಸ್ಥೆಗಳು:

ಬದಲಾಯಿಸಿ

ಸಿಆರ್ ರಾವ್ ಸಂಖ್ಯಾಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ಆಧುನಿಕನ ಸಂಸ್ಥೆಯು (ಎಐಎಮ್‍ಎ‍ಸ್‍ಸಿಎ‍ಸ್[] ಎಂದು ಸಹ ಕರೆಯಲಾಗುತ್ತದೆ) ಗಣಿತ, ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತ ಅಂಕಿಯ ಸಂಶೋಧನೆ ಮಾಡುವ ಒಂದು ಪ್ರಮುಖ ಸಂಸ್ಥೆಯಾಗಿ ೨೦೦೭ ರಲ್ಲಿ ಸ್ಥಾಪಿಸಲಾಯಿತು. ಅವರ ಸಲಹೆಯಿಂದ ಕಟ್ಟಲಾಗಿದ್ದರಿಂದ ಸಿಆರ್ ರಾವ್‍ರವರ ಹೆಸರಿಡಲಾಯಿತು. ಇದು ರಾಜ್ಯ ಸರ್ಕಾರ ಮತ್ತು ವೈಯಕ್ತಿಕ ದಾನಿಗಳಿಂದ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಪಡೆದಿದೆ.

ಉಲ್ಲೇಖನೆಗಳು:

ಬದಲಾಯಿಸಿ
  1. https://www.researchgate.net/publication/272680672_SOME_PROBLEMS_ON_LILAVATI_GANITHAM
  2. http://www.isical.ac.in/
  3. http://sardarpatelaward.org/
  4. http://www.crraoaimscs.org/