ಸದಸ್ಯ:Divyalisha/ನನ್ನ ಪ್ರಯೋಗಪುಟ
ನೈಟ್ರೊಜನ್ ಸ್ಥಿರೀಕರಣ
ಬದಲಾಯಿಸಿಜೀವಿಗಳಿಗೆ ಕಾರ್ಬನ್,ಹೈಡ್ರೊಜನ್ ಮತ್ತು ಆಕ್ಸಿಜನ್ ಗಳಂತೆಯೇ ನೈಟ್ರೊಜನ್ ಸಹ ಅತ್ಯಾವಶ್ಯಕ.ಜೀವಿಗಳಲ್ಲಿರುವ ನೈಟ್ರೊಜನ್ ಯುಕ್ತವಾದ ಅತಿ ಮುಖ್ಯವಸ್ತುಗಳೆಂದರೆ ಪ್ರೋಟೀನ್ ಗಳು. ವಿಟಮಿನ್ ಗಳ, ಪ್ಯೂರೀನ್ ಮತ್ತು ಪಿರಿಮಿಡಿನ್ ಗಳು, ಪಾರ್ ಫೈರಿನ್ ಗಳು, ಅಮೈನೋ ಮತ್ತು ನ್ಯೂಕ್ಲಿಯಿಕ್ ಅಮ್ಲಗಳು, ಹಾಗೂ ಹಾರ್ಮೋನುಗಳು. ಸಸ್ಯಗಳಲ್ಲಿರುವ ನೈಟ್ರೊಜನ್ ಪರಿಮಾಣ ಶುಷ್ಕರೀತ್ಯಾಂಶ 1%-2%, ಪ್ರೋಟೀನ್ ಮತ್ತು ಅಮೈನೋ ಅಮ್ಲಗಳಲ್ಲಿ 12%-24%. ಜೀವಿಗಳ ಚಯಾಪಚಯ ಕ್ರಿಯೆಗಳಾದ ಕಿಣ್ವಗಳ ಉತ್ಪತ್ತಿ, ಕ್ಲೋರೋಫಿಲ್ ಮತ್ತು ನ್ಯೂಕ್ಲಿಯಿಕ್ ಆಮ್ಲಗಳ ಸಂಶ್ಲೇಷಣೆ, ಜೀವಿಗಳ ಬೆಳವಣಿಗೆ ಮತ್ತು ಸಂತಾನಾಭಿವೃದ್ಧಿ ಕಾರ್ಯಗಳಲ್ಲಿ, ಎಲ್ಲಕ್ಕೂ ಮಿಗಿಲಾಗಿ ಅನುವಂಶೀಯ ವಾಹಕತೆಯಲ್ಲಿ ನೈಟ್ರೊಜನ್ ಯುಕ್ತ ವಸ್ತುಗಳ ಪಾತ್ರ ಬಹು ಮಹತ್ತರವಾದುದು. ಪ್ರಕೃತಿ ಮತ್ತು ಭೂರಸಾಯನ ವಸ್ತುಗಳೇ ನೈಟ್ರೊಜನ್ನಿನ ಮೂಲ ಆಗರಗಳು.
ವಾಯುಮಂಡಲದಲ್ಲಿ ನೈಟ್ರೊಜನ್ 78% ಅಂಶ ಇದೆ . ಆದರೆ ಇದು ಸಸ್ಯಗಳಿಗೆ ಸುಲಭವಾಗಿ ದೊರೆಯುವುದಿಲ್ಲ. ಕಾರಣ ಅನಿಲರೂಪದ ನೈಟ್ರೋಜನ್ನನ್ನು ಸಸ್ಯಗಳು ಹೀರುವುದಿಲ್ಲ. ಸಸ್ಯಗಳಲ್ಲಿರುವ ನೈಟ್ರೊಜನ್ ಅಂಶವನ್ನೂ ಸಸ್ಯಗಳ ಚಟುವಟಿಕೆಯಲ್ಲಿ ನೈಟ್ರೊಜನ್ ಯುಕ್ತ ವಸ್ತುಗಳ ಪ್ರಮುಖ್ಯವನ್ನೂ ಗಮನಿಸಿದರೆ ನೈಟ್ರೊಜನ್ನನ್ನು ಬಂಧಿಸಿಡುವ ಯಾವುದೋ ಒಂದು ಕ್ಲಿಷ್ಟಕರ ವಿಧಾನ ಸಸ್ಯಗಳಲ್ಲಿದ್ದು ಅದರ ಮೂಲಕ ನೈಟ್ರೊಜನ್ನನ್ನು ಸಸ್ಯಗಳು ಪಡೆಯುವುವು ಎನ್ನಬಹುದು.ಇದೇ ಸ್ಥಿರೀಕರಣ ಕ್ರಿಯೆ (ಫಿಕ್ಸೇಷನ). ಭೂರಾಸಾಯನಿಕ ಮೂಲಗಳನ್ನು ಗಮನಿಸಿದರೆ ಹಲವಾರು ಅಗ್ನಿಶಿಲೆಗಳು ಮತ್ತು ಚರ್ಟ್ ಶಿಲೆಗಳ ಸಿಲಿಕೇಟ್ ಲವಣಾಂಶಗಳಲ್ಲಿ ಅಮೋನಿಯಮ್ ಅಯಾನ್ ಗಳು ರೂಪದಲ್ಲಿ ನೈಟ್ರೊಜನ್ ಕಾಣಬರುತ್ತದೆ. ಆದರೆ ಇದರ ಮೊತ್ತ ಅತಿ ಕಡಿಮೆ. ಮಳೆ ಗುಡುಗುಗಳು ಉಂಟಾಗುವುದರಿಂದ ಪ್ರತಿವರ್ಷ ಎಕರೆಗೆ ಸುಮಾರು 2-6 ಪೌಂಡುಗಳಷ್ಟು ನೈಟ್ರೊಜನ್ನು ನೈಟ್ರೇಟ್ ಮತ್ತು ಅಮೋನಿಯಮ್ ಲವಣಗಳ ರೂಪದಲ್ಲಿ ಭೂಮಿಯನ್ನು ತಲಪುತ್ತದೆ. ನೈಟ್ರೊಜನ್ ಮತ್ತು ಆಕ್ಸಿಜನ್ ಗಳು ಮಿಂಚುಗುಡುಗುಗಳ ಶಕ್ತಿಯಿಂದ ಸಂಯೋಗ ಹೊಂದುವುದರಿಂದ ಈ ಕ್ರಿಯೆನಡೆಯುತ್ತದೆ.ಅಲ್ಲದೆ ವಾತಾವರಣದಲ್ಲಿರುವ ಅಮೋನಿಯ ಅಂಶ ಅಗ್ನಿ ಪರ್ವತಗಳ ಕ್ರಿಯಾಚಟುವಟಿಕೆಗಳಿಂದಲೂ ಕಲ್ಲಿದ್ದಲು ಮತ್ತು ಇತರ ಜೈವಿಕೆ ವಸ್ತುಗಳ ದಹನ ಕ್ರಿಯೆಯಿಂದಲೂ ಉಂಟಾಗುತ್ತದೆ. ಭೂಮಿಯಲ್ಲಿರುವ ನೈಟ್ರೊಜನ್ ಯುಕ್ತ ವಸ್ತುಗಳು ಸಸ್ಯ ಮತ್ತು ಪ್ರಾಣಿಗಳ ಅಂಗಾಂಶಗಳು ಕೊಳೆಯುವುದರಿಂದ ಬಿಡುಗಡೆಗೊಳ್ಳುತ್ತವೆ. ಆದರೆ ವೆಲ್ಲಿವೂ ಇವುಗಳೆಲ್ಲವೂ ಸಸ್ಯಗಳಿಗೆ ತತ್ ಕ್ಷಣದ ಉಪಯೋಗಕ್ಕೆ ದೊರೆಯುವುದಿಲ್ಲ ಮತ್ತು ಅದರ ಮೊತ್ತವೂ ಬಹಳ ಕಡಿಮೆ. ಆದ್ದರಿಂದ ವಾತಾವರಣದ ಅಣುರೂಪದ ನೈಟ್ರೊಜನ್ನೇ ಅತಿಮುಖ್ಯ ವಾದ ಮೂಲವಾಗುತ್ತದೆ.[೧]
ಭೂಮಿಯಲ್ಲಿರುವ ಇತರ ಅಜೈವಿಕಾ ಮೂಲಗಳಲ್ಲಿ ನೈಟ್ರೇಟ್,ನೈಟ್ರೈಡ್,ಅಮೋನಿಯ ಲವಣಾಂಶಗಳು ಬಹುಮುಖ್ಯವಾದುವು. ಸಾಮಾನ್ಯವಾಗಿ ಸಸ್ಯಗಳು ನೈಟ್ರೊಜನ್ನನ್ನು ನೈಟ್ರೇಟ್ ರೂಪದಲ್ಲಿ ಹೀರುತ್ತವೆ. ಈ ರಿತಿ ಹೀರಿದ ನೈಟ್ರೆಟ್ ಲವಣ ಅಮೋನಿಯ ರೂಪಕ್ಕೆ ಬದಲುಗೊಂಡು ಇತರ ಕಾರ್ಯಗಳಿಗೆ ಬಳಕೆಯಾಗುತ್ತದೆ. ಈ ಕ್ರಿಯೆಗೆ ನೈಟ್ರೇಟ್ ಅಪಕರ್ಷಣಕ್ರಿಯೆ ಎಂದು ಹೆಸರು. ಇದರಲ್ಲಿ ನೈಟ್ರೇಟ್ ರಿಡಕ್ಟೇಸ್ ಕಿಣ್ವದ ಕ್ರಿಯೆ ಬಹು ಮುಖ್ಯವಾದ್ದು. ಈ ಕಿಣ್ವದ ಕ್ರಿಯೆಗೆ ಸಹವರ್ತಿಗಳಾದ ಅಂಶಗಳೆಂದರೆ ಎನ್. ಎ. ಡಿ. ಎಚ್. ಎಪ್. ಎ. ಡಿ ಮತ್ತು ಮಾಲಿಬ್ಡಿನಮ್ ಅಯಾನುಗಳು. ಈ ಕಿಣ್ವ ಹೆಚ್ಚಾಗಿ ಕ್ಲೋರೋಪ್ಲಾಸ್ಟುಗಳಲ್ಲಿ ಕಾಣಬರುತ್ತದೆ. ಈ ಕ್ರಿಯಾಸರಣಿಯ ಉತ್ಪನ್ನ ನೈಟ್ರೇಟ್ . ನೈಟ್ರೇಟ್ ನಿಂದ ಅಮೋನಿಯ ಉಂಟಾಗುವ ಕ್ರಿಯಾಸರಣಿಯ ಇತರ ಮಧ್ಯವರ್ತಿ ವಸ್ತುಗಳೆಂದರೆ ಹೈಪೋನೈಟ್ರೈಟ್ (HNO) ಮತ್ತು ಹೈಡ್ರಾಕ್ಸಿಲ್ ಅಮೈನ್ . ಅಮೋನಿಯ ರೂಪವನ್ನು ತಳೆದ ನೈಟ್ರೊಜನ್ ಜೈವಿಕಾಂಶವಸ್ತುವಾಗಿ ಜಯಾಪಚಯ ಕ್ರಿಯೆಗಳಲ್ಲಿ ಭಾಗವಹಿಸುತ್ತದೆ. ಅಣುರೂಪದ ನೈಟ್ರೊಜನ್ ಮೂರು ಬಂಧಕಗಳುಳ್ಳ ಹಾಗೂ ರಾಸಾಯನಿಕವಾಗಿ ಜಡವಾದ ವಸ್ತು. ಇಂಥದನ್ನು ಕ್ರಿಯಾತ್ಮಕ ವಸ್ತುವಾಗಿ ಪಟುಗೊಳಿಸುವ ಸಾಮರ್ಥ್ಯ ಯಾವುದೇ ಅಪಕರ್ಷಣ ಅಥವಾ ಉತ್ಕರ್ಷಣ ವಸ್ತುವಿಗೆ ಸಂಪೂರ್ಣವಾಗಿ ಇಲ್ಲ . ಆದರೆ ಅತಿ ಪ್ರಬಲವಾದ ಎಲೆಕ್ಟ್ರಾನ್ ಗ್ರಾಹಿಗಳು ಮತ್ತು ಎಲೆಕ್ಟ್ರಾನ್ ದಾತೃಗಳಿಂದ ಮಾತ್ರ ಇದು ಸಾಧ್ಯ. ಇಂಥ ಸಾಮರ್ಥ್ಯ ಇಡೀ ಜೀವರಾಶಿಗಳಲ್ಲಿ ಕೇವಲ ಕೆಲವೇ ಸಸ್ಯಗಳಿಗೆ ಮಾತ್ರ ಅದರಲ್ಲೂ ಕೆಲವು ಗುಂಪಿನ ಸೂಕ್ಷ್ಮಜೀವಿಗಳಿಗೆ ಮಾತ್ರ ಉಂಟು.
ಆದ್ದರಿಂದ ಸ್ಥಿರೀಕರಣ ಎಂದರೆ ನಿರವಯವ ರೂಪದ ನೈಟ್ರೊಜನನ್ನು ಸಾವಯವ ರೂಪಕ್ಕೆ ತರುವಕ್ರಿಯೆ ಎನ್ನ ಬಹುದು. ಈ ಕ್ರಿಯೆಯಲ್ಲಿ ನೈಟ್ರೊಜನ್ನಿನ ಮೂರು ಬಂಧಕಗಳು ಕಸಿದುಹೋಗಿ ಅಲ್ಲಿನ ಎರಡು ಪರಮಾಣುಗಳು ಬೇರ್ಪಟ್ಟು ಮೊದಲು ನಿರವಯವ ರೂಪದ (ಅಪಕರ್ಷಕ ರೂಪದ) ಲವಣಾಂಶಗಳಾಗಿ ಅನಂತರ ಅಮೋನಿಯವಾಗಿ ಮಾರ್ಪಡುತ್ತದೆ. ಸ್ಥಿರೀಕರಣ ಕ್ರಿಯೆ ಸಸ್ಯಗಳಲ್ಲಿ ಮಾತ್ರ ಕಂಡುಬಂದರೂ ಇದರ ಪಾತ್ರ ಮಹತ್ತರವಾದುದು. ಎಕೆಂದರೆ ಅಣುರೂಪದ ಹಾಗೂ ಅನಿಲ ರೂಪದ ನೈಟ್ರೊಜನ್ ಸಸ್ಯಗಳಿಗೆ ದೊರೆಯುವಂತಾಗಿ ಅವುಗಳ ಚಯಾಪಚಯಕ್ರಿಯೆಗಳಲ್ಲಿ ಭಾಗವಹಿಸುತ್ತದೆ. ಇವನ್ನು ಆಹಾರವಾಗಿ ಬಳಸುವ ಪ್ರಾಣಿಗಳಿಗೂ ದೊರೆಯೂವಂತಾಗುತ್ತದೆ.ಕೊನೆಯಲ್ಲಿ ಸಸ್ಯ ಮತ್ತು ಪ್ರಾಣಿಗಳನ ಅಂಗಾಂಶಗಳು ಕೊಳೆಯುವುದರಿಂದ ನೈಟ್ರೊಜನ್ ಭೂಮಿಗೆ ಹಿಂತಿರುಗುತ್ತದೆ.ಕೊಂಚ ಭಾಗ ಅಲ್ಲಿ ನಿರವಯವ ರೂಪಕ್ಕೆ ತಿರುಗಿ ಮತ್ತು ಸಸ್ಯಗಳಿಂದ ಹೀರಲ್ಪಡುತ್ತದೆ. ಮತ್ತಷ್ಟು ಭಾಗ ವಾತಾವರಣವನ್ನು ಸೇರುತ್ತದೆ. ಇದೇ ನೈಟ್ರೊಜನ್ ಚಕ್ರ. ಇಂಥ ಮೂಲಭೂತಕ್ರಿಯೆಯಲ್ಲಿ ಮಣ್ಣಿನಲ್ಲಿರುವ ಮತ್ತು ಬೇರಿನ ಗಂಟುಗಳಲ್ಲಿರುವ ಸೂಕ್ಷ್ಮಾಣುಜೀವಿಗಳ ಪಾತ್ರ ಬಹುಮುಖ್ಯವಾದುದು. ಪ್ರತಿವರ್ಷ ನೈಸರ್ಗಿಕವಾಗಿ ಸ್ಥಿರೀಕರಣ ಗೊಳ್ಳುವ ಸುಮಾರು 100 ಮಿಲಿಯನ್ ಟನ್ ಗಳಷ್ಟು ನೈಟ್ರೊಜನ್ನಿನಲ್ಲಿ 10% ಗುಡುಗು ಮಿಂಚುಗಳ ಶಕ್ತಿಯಿಂದಲೂ 90% ಜೈವಿಕ ಕ್ರಿಯೆಯಿಂದಲೂ ದೊರೆಯುತ್ತವೆ ಸ್ಥಿರೀಕರಣ ಕ್ರಿಯೆಯಲ್ಲಿ ಅಜೈವಿಕ ಸ್ಥಿರೀಕರಣ ಮತ್ತು ಜೈವಿಕ ಸ್ಥಿರೀಕರಣ ಎಂದು ಎರಡು ವಿಧ.
ಅಜೈವಿಕ ಸ್ಥಿರೀಕರಣ
ಬದಲಾಯಿಸಿಈ ಕ್ರಿಯೆಯಲ್ಲಿ ಜೀವಿಗಳ ಪಾತ್ರವೇನೂ ಇಲ್ಲ.ಪ್ರಕೃತಿಯಲ್ಲಿಮಿಂಚು ಗುಡುಗುಗಳು ಉಂಟಾದಾಗ ಉತ್ಪತ್ತಿಯಾಗುವ ವಿದ್ಯುತ್ ಪ್ರವಹಣಾಶಕ್ತಿ ಯಿಂದ ಅಣುರೂಪದ ನೈಟ್ರೊಜನ್ ಉತ್ಕರ್ಷಣ ಗೊಂಡು ನೈಟ್ರೊಜನ್ ಆಕ್ಸೈಡ್ ಆಗುತ್ತದೆ. ಅನಂತರ ಇದು ನೈಟ್ರೇಟ್ ಮತ್ತು ನೈಟ್ರೈಟುಗಳಾಗಿ ಮಾರ್ಪಡುತ್ತದೆ. ಇದಲ್ಲದೆ ಮೊದಲನೆಯ ಮಹಾಯುದ್ಥದ ಕಾಲದಲ್ಲಿ ಮದ್ದು ತಮ್ಮ ಗುಂಡುಗಳಿಗೆ ಆವಶ್ಯಕವಾಗಿದ್ದ ನೈಟ್ರೇಟ್ ಲವಣಾಂಶವಿರುವ ಬಯಲುಗಳನ್ನು ಪತ್ತೆಹಚ್ಚಿ, ಹೇಬರನ ವಿಧಾನದಿಂದ ಅತಿ ಹೆಚ್ಚಿನ ಉಷ್ಣತೆ ಮತ್ತು ಒತ್ತಡದಲ್ಲಿ ನೈಟ್ರೊಜನ್ ಮತ್ತು ಹೈಡ್ರೊಜನ್ ಗಳನ್ನು ಸಂಯುಕ್ತಗೊಳಿಸಿ ಅಮೋನಿಯ ಪಡೆದ ಅದರ ಉತ್ಕರ್ಷಣದಿಂದ ನೈಟ್ರಿಕ್ ಆಮ್ಲವನ್ನು ಜರ್ಮನರು ತಯಾರಿಸಿ ಕೊಳ್ಳುತ್ತಿದ್ದರು. ಇದು ಒಂದು ರೀತಿಯ ಕೃತಕ ಸ್ಥಿರೀಕರಣ ಕ್ರಿಯೆ. ಕೃತಕ ಗೊಬ್ಬರಗಳ ತಯಾರಿಕೆಯಲ್ಲಿ ಇದನ್ನೇ ಹೆಚ್ಚುಕಡಿಮೆ ಬಳಸುವುದಿದೆ. ಅಲ್ಲದೆ ಹಲವಾರು ಕೈಗಾರಿಕೆಯಲ್ಲಿ ಉತ್ಪತ್ತಿಯಾಗುವ ಆಕ್ಸೈಡುಗಳು, ಸಯನೈಡ್, ನೈಟ್ರೈಟ್ ಮತ್ತು ಸಯನ ಮೈಡುಗಳು ಸ್ಥಿರೀಕರಣಗೊಂಡು ನೈಟ್ರೊಜನ್ ಇತರ ರೂಪಗಳು.ಈ ಮೂಲಕ ಸ್ಥಿರೀಕರಿಸಿದ ನೈಟ್ರೊಜನ್ ಸಸ್ಯಗಳಿಗೆ ಒದಗುವುದಾದರೂ ಅವುಗಳ ಬೇಡಿಕೆಯನ್ನು ಪೂರೈಸುವಷ್ಟು ದೊಡ್ಡ ಮೊತ್ತದಲ್ಲಿ ಸಿಕ್ಕುವುದಿಲ್ಲ.
ಜೈವಿಕ ಸ್ಥಿರೀಕರಣ
ಬದಲಾಯಿಸಿಸಸ್ಯಗಳಿಗೆ ಬೇಕಾಗುವ ನೈಟ್ರೊಜನ್ ಜೀವಿಗಳ ಮತ್ತು ಜೈವಿಕ ಕ್ರಿಯೆಗಳಿಂದ ಒದಗುತ್ತದೆ. ಇದರಿಂದಾಗಿ ಪ್ರತಿವರ್ಷ ಹಲವು ಮಿಲಿಯನ್ ಟನ್ ಗಳಷ್ಟು ಸ್ಥಿರೀಕರಿಸಿದ ನೈಟ್ರೊಜನ್ ಪೂರೈಕೆಯಾಗುತ್ತದೆ. ಸ್ಥಿರೀಕರಿಸುವ ಸಾಮರ್ಥ್ಯವುಳ್ಳ ಜೀವಿಗಳಲ್ಲಿ ಬ್ಯಾಕ್ಟೀರಿಯ,ಈಸ್ಟ್'ಗಳು ಕೆಲವು ಶಿಲೀಂಧ್ರಗಳು ಮತ್ತು ಹಲವಾರು ಬಗೆಯ ನೀಲಿ-ಹಸಿರು ಪಾಚಿಗಳು ಮುಖ್ಯವಾದುವು.
ಜೈವಿಕ ಸ್ಥಿರೀಕರಣದಲ್ಲಿ ಎರಡು ವಿಧ:
ಬದಲಾಯಿಸಿ1) ಸ್ವತಂತ್ರ ಜೀವಿಗಳಿಂದ ನೈಟ್ರೋಜನ್ ಸ್ಥಿರೀಕರಣ : ಮಣ್ಣಿನಲ್ಲಿರುವ ಹಲವಾರು ಬಾಕ್ಟೀರಿಯಗಳು, ಪಾಚಿಗಳು(ನೀಲಿ ಹಸುರು) ಮತ್ತು ಶಿಲೀಂಧ್ರಗಳು ನೈಟ್ರೋಜನ್ನನ್ನು ಸ್ವತಂತ್ರವಾಗಿ ಸ್ಥಿರೀಕರಿಸುತ್ತವೆ. ಈ ನೈಟ್ರೋಜನ್ ಈ ಜೀವಿಗಳ ಕೊಳೆಯುವಿಕೆಯಿಂದ ಬಿಡುಗಡೆಯಾಗಿ ಮಣ್ಣಿನಲ್ಲಿ ವಿಲೀನಗೊಳ್ಳುತ್ತದೆ. ಉದಾಹರಣೆಗಳು : ನೀಲಿ ಹಸುರು ಪಾಚಿಗಳು : ನಾಸ್ಟಾಕ್ ಪಂಕ್ಟಿಫಾರ್ಮೆ, ನಾ. ಮಸ್ಕೋರಮ್, ಗನಬೀನ ಸಿಲಿಡ್ರಿಕಂ, ಕ್ಯಾಲೋತ್ರಿಕ್ಸ್ ಪರೈಟಿನ,ಸಿಲಿಂಡ್ರೋಸ್ಪರ್ಮಮ್ ಮತ್ತು ಮ್ಯಾಸ್ಟಿಗೋಕ್ಲಾಡಸ್ ಪ್ರಭೇದಗಳು. ಈಸ್ಟ್ ಗಳು: ರೋಡೋಟಾರುಲ ಪ್ರಭೇದ, ಆಕ್ಟಿನೋಮೈಸೀಟ್ ಶಿಲೀಂಧ್ರಗಳು, ಬಾಕ್ಟೀರಿಯಗಳು ಅವಾಯುಶ್ವಸಕ: ದ್ಯುತಿಸಂಶ್ಲೇಷಕ : ರೋಡೊಸ್ಪೈರಿಲ್ಲಮ್ ರೂಬ್ರಮ್, ರೋಡೋಸೂಡೋಮೊನಾಸ್, ಕ್ರೋಮೇಷಿಯಮ್ ಮತ್ತು ಕ್ಲೋರೋಬಿಯಮ್ ಪ್ರಭೇದಗಳು ಇತ್ಯದಿ. ದ್ಯುತಿಸಂಶ್ಲೇಷಣೆ ರಹಿತ : ಕ್ಲಾಸ್ಟ್ರೀಡಿಯಮ್ ಪಾಸ್ಟೊರಿಯಾನಮ್ ಡಿಸಲ್ಪೋವಿಬ್ರಿಯೋಡೀಸಲ್ಫೂ ರಿಕನ್ಸ್ ಇತ್ಯಾದಿ, ವಾಯುಶ್ವಸಕ: ಅಜ಼ಟೋಬ್ಯಾಕ್ಟರ್ ಇಂಡಿಕಮ್, ಅ ವೈನ್ ಲ್ಯಾಂಡಿ ,ಬ್ಯಾಸಿಲಸ್ ಪಾಲಿಮಿಕ್ಸ್, ಏರೋಬ್ಯಾಕ್ಟರ್ ಏರೋಜೀನ್ಸ್ ಇತ್ಯಾದಿ. ಇವೆಲ್ಲದೆ ತೊಗಟೆಯಮೇಲೆ ವಾಸಿಸುವ ಕೆಲುವು ಕಲ್ಲುಹೂಗಳು(ಲೈಕನ್ಸ್) ನೈಟ್ರೋಜನ್ನನ್ನು ಸ್ಧಿರೀಕರಿಸುವುದುಂಟು.
2) ಜೀವಿಗಳ ಸಹಜೀವನದಿಂದ ನೈಟ್ರೋಜನ್ ಸ್ಧಿರೀಕರಣ :
ಫ್ಯಾಬೇಸೀ ಮತ್ತು ಇತರ ಕೆಲವು ಕುಟುಂಬಗಳ ಸಸ್ಯಗಳ ಬೇರಿನ ಗಂಟುಗಳಲ್ಲಿರುವ ರಜ಼ೋಬಿಯಮ್ ಜಾತಿಯ ಬ್ಯಾಕ್ಟೀರಿಯಗಳಿಂದ ನೈಟ್ರೊಜನ್ ಸ್ಧಿರೀಕರಣಗೊಳ್ಳುತ್ತದೆ. ಇಲ್ಲಿ ಬ್ಯಾಕ್ಟೀರಿಯಕ್ಕೂ[೨] ಉನ್ನತ ಸಸ್ಯಗಳಿಗೆ ದೊರೆಯುತ್ತದೆ. ಪ್ರತಿಯಾಗಿ ಬ್ಯಾಕ್ಟೀರಿಯಾಗಳಿಗೆ ಬೇಕಾಗುವ ಹಲವು ಅವಶ್ಯ ವಸ್ತುಗಳು ಮತ್ತು ಸ್ಥಳಾವಕಾಶ ಸಸ್ಯಗಳಿಂದ ದೊರೆಯುತ್ತದೆ. ಸಹಜೀವನಕ್ರಮದಲ್ಲಿ ಸ್ಥಿರೀಕರಣಕ್ರಿಯೆ ದೀರ್ಘವಾಗಿ ನಡೆಯುವುದರಿಂದ (೩೦ ರಿಂದ ೪೦ ದಿನಗಳು) ಬೇರಿನ ಗಂಟುಗಳಿಂದ ಸಸ್ಯದ ಇತರ ಭಾಗಗಳಿಗೆ ಸತತವಾಗಿ ನೈಟ್ರೊಜನ್ ದೊರೆಯುತ್ತದೆ.
ಸ್ವತಂತ್ರಜೀವಿಗಳಿಂದ ಸ್ಥಿರೀಕರಣ
ಬದಲಾಯಿಸಿನೀಲಿ ಹಸಿರು ಪಾಚಿಗಳಲ್ಲಿ ೪೦ಕ್ಕೂ ಹೆಚ್ಚು ಪ್ರಭೇದಗಳಿಗೆ ಈ ಸಾಮರ್ಥ್ಯವಿದೆ. ಇವು ಹೆಚ್ಚಾಗಿ ತೇವಪೂರಿತ ಮಣ್ಣಿನಲ್ಲಿ ಮತ್ತು ಬತ್ತದ ಗದ್ದೆಗಳಲ್ಲಿ ಲೋಳೆಯಂಥ ಗುಂಪು ಗುಂಪುಗಳಾಗಿ ಕಾಣಬರುತ್ತವೆ.ಇವುಗಳಲ್ಲಿ ನಾಸ್ಟಾಕ್ ಮತ್ತು ಅನಬೀನ ಪ್ರಭೇದಗಳು ಮುಖ್ಯವಾದವು. ಇವು ಸ್ಥಿರೀಕರಿಸಿದ ನೈಟ್ರೊಜನ್ ಹೆಚ್ಚಾಗಿ ಸಾವಯವ ರೂಪದಲ್ಲಿ ಬಿಡುಗಡೆಯಾಗುವುದು. ಇವುಗಳಲ್ಲಿ ಕೆಲವು ಅಮೈನೋ ಆಮ್ಲಗಳು ಮತ್ತು ಅಮೈಡ್ ಗಳು ಅತಿ ಮುಖ್ಯವಾದ ಮಧ್ಯವರ್ತಿಗಳೆನಿಸಿವೆ.ಈ ಪಾಚಿಗಳು ಏಷ್ಯದ ಬಯಲುಗಳಲ್ಲಿ ನೈಟ್ರೊಜನ್ ನಿರಂತರ ಸರಬರಾಜನ್ನು ಮಾಡುತ್ತವೆ. ಉದಾಹರಣೆಗೆ ಬತ್ತದ ಬಯಲಿನಲ್ಲಿ ನೀರು ನಿಂತಿರುವಾಗ ಈ ಪಾಚಿಗಳು ಉಂಡೆಯಂತೆ ಕಾಣಬಹುದು ನೈಟ್ರೊಜನ್ನನ್ನು ಸ್ಥಿರೀಕರಿಸುತ್ತವೆ. ನೀರು[೩] ಆವಿಯಾದಗ ಇಲ್ಲವೆ ಇಲ್ಲವೆ ಗುಡಗಳು ನೀರನ್ನು ಹೀರಿ ಕೊಂಡಾಗ, ಪಾಚಿಗಳು ಮಣ್ಣಿನ ಮೇಲೆ ಶೇಖರಣೆಗೊಂಡು ಅವುಗಳ ಕೊಳೆಯುವಿಕೆಯಿಂದ ಸ್ಥಿರೀಕರಿಸಿದ ನೈಟ್ರೊಜನ್ ಬಿಡುಗಡೆಯಾಗಿ ಬತ್ತಕ್ಕೆ ದೊರೆಯುವಂತಾಗುತ್ತದೆ. ಈ ಸ್ಥಿರೀಕರಣ ಪಾಚಿಗಳ ಜಯಾಪಚಯ ಕ್ರಿಯೆಗಳನ್ನು ಅದರಲ್ಲಿಯೂ ದ್ಯುತಿಸಂಶ್ಲೇಷಣ ಕ್ರಿಯೆಯನ್ನು ಅವಲಂಬಿಸಿರುತ್ತದೆ.
ಉಲ್ಲೇಖಗಳು
ಬದಲಾಯಿಸಿ