Deepa365
ನನ್ನ ಹೆಸರು ದೀಪ.ಕೆ.
ಪರಿಚಯ
ಬದಲಾಯಿಸಿನಾನ್ನ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ, ಬೀರೂರು. ನನ್ನ ತಂದೆಯ ಹೆಸರು ಗೊವಿಂದಪ್ಪ.ಬಿ.ಹೆಚ್. ನನ್ನ ತಾಯಿಯ ಹೆಸರು ಕುಸುಮ.ಜಿ. ಶ
ಪ್ರಾಥಮಿಕ ಶಿಕ್ಷಣ ವನ್ನು ಬ್ರೈಟ್ ಪೋಚರ್ ಶಾಲೆಯಲ್ಲಿ ಮುಗಿಸಿದೆ. ಹೈಸ್ಕೂಲ್ ಶಿಕ್ಷಣವನ್ನು ಕಾಮೆ೯ಲ್ ಕಾನ್ವೆಂಟ್ ಹೈಸ್ಕೂಲ್ (ಜಯನಗರ ಬೆಂಗಳೂರು)ದಲ್ಲಿ ಮುಗಿಸಿದೆ. ಪಿ.ಯು ಶಿಕ್ಷಣವನ್ನು ಆಳ್ವಾಸ್ ಪಿ. ಯು ಕಾಲೇಜು (ಮೂಡಬಿದರೆ,ಧಕ್ಷಿಣ ಕನ್ನಡ ಜಿಲ್ಲೆ)ಯಲ್ಲಿ ಮುಗಿಸಿದೆ. ಪ್ರಥಮ ಧಜೆ ಕಾಲೇಜನ್ನು ಕ್ರೈಸ್ಟ್ ಕಾಲೇಜಿನಲ್ಲಿ ಮಾಡುತ್ತಿದ್ದೆನೆ. (ಬೆಂಗಳೂರು) ಶಾಲೆ ಯಲ್ಲಿ ಇದ್ದಾಗ ಚಿತ್ರ ಬಿಡಿಸುವುದು ,ರಂಗೋಲಿ,ವುಲ್ಲನ್ ಯೆಣೆಯುವುದು ಮತ್ತು ಕರಾಟೆ ಮಾಡುವ ಹಭ್ಯಾಸಗಳಿದ್ದವು. ಪಿ ಯು ಕಾಲೇಜಿನಲ್ಲಿ ಇದ್ದಾಗ ಯೇನು ಆಸಕ್ತಿ ಇರಲಿಲ್ಲ. ಡಿಗ್ರೀ ಕಾಲೆಜಿನಲ್ಲಿ ಓದು ವುದರ ಜೊತೆಯಲ್ಲಿ ಕಾಲೇಜಿನಲ್ಲಿ ಇರುವ ಇತರೆ ಚಟುವಟಿಕೆಗಳಲ್ಲಿ ಆಸಕ್ತಿ ತೋರುತ್ತೆನ
ನನ್ನ ಸ್ವಭಾವ
ಬದಲಾಯಿಸಿನಾನು ತುಂಬ ನಾಚಿಕೆ ಸ್ವಭಾವದ ಹುಡುಗಿ ,ಜಾಸ್ತಿ ಯಾರ ಹತ್ತಿರನು ಮಾತನಾಡುವುದಿಲ್ಲ.ಪಿ,ಯು ಕಾಲೇಜಿಗೆ ಸೇರಿಕೊಂಡಾಗ ಎನೂ ತಿಳಿಯುತ್ತಿರಲಿಲ್ಲ.ನಾನು ವಿನಾಕಾರಣ ಯಾರ ಹತ್ತಿರನು ಜಗಳ ಆಡುವುದಿಲ್ಲ
ನನ್ನ ಸ್ನೆಹಿತರು
ಬದಲಾಯಿಸಿನನ್ನ ಕ್ಲಾಸ್ ನಲ್ಲಿ ಒಬ್ಬ ರಕೇಶ್ ಗೌಡ ಎಂದು ಒಬ್ಬ ಹುಡುಗನಿದ್ದ.ಅವನನ್ನ ಕಂಡರೆ ಎಲ್ಲಾರು ಹೆದರುತ್ತಿದ್ದರು.ನೊಡುವುದಕ್ಕೆ ಪಕ್ಕ ರೌಡಿ ತರಹನೆ ಇದ್ದ.ಆದರೆ ಮನಸ್ಸು ಒಳ್ಳೆಯದು.ನಾನು ಯಾವತ್ತು ಅವನನ್ನು ಮಾತನಾಡಿಸಲು ಹೊಗಲಿಲ್ಲ,ಏಕೆಂದರೆ ಅವನ ಮೇಲಿರುವ ಭಯ.ಆದರೆ ಒಂದು ದಿನ ಅವನೆ ನನ್ನ ಹತ್ತಿರ ಮಾತನಾಡಲು ಬಂದ ಏಕೆಂದರೆ ಕ್ಲಾಸಿನಲ್ಲಿ ಇರುವ ಹುಡುಗಿ ಯರಲ್ಲಿ ನಾನೊಬ್ಬಳೆ ಗೌಡ.ಅಲ್ಲಿಂದ ನಮ್ಮ ಸ್ನೆಹ ಶುರುವಾಯಿತು.ನನ್ನ ಜೊತೆ ಹಾಸ್ಟಲ್ ನಲ್ಲಿ ಪಾರ್ವತಿ ಮತ್ತು ಲಾವಣ್ಯ ಇದ್ದರು.ಲಾವಣ್ಯ ನನ್ನ ರೂಮ್ ಮೇಟ್ ಆಗಿದ್ದಳು ಪಾರ್ವತಿ ನನ್ನ ಎಲ್ಲಾದಕ್ಕು ಜೊತೆಗಿದ್ದಳು.ನಾವು ಒಟ್ಟಿಗೆ ಕೂತು ಒದುತಿದ್ದೆವು.ನಾನು ಪಾರು ರಾಕೇಶ್ ಒಳ್ಳೆ ಸ್ನೆಹಿತರು.ಮೃದು ಸ್ವಭಾವ ಇದ್ದಿದ್ದಾ ನನಗೆ ಅವನ ಜೊತೆ ಸೇರಿ ಬಲ ಬಂದಿತು.
ನನ್ನ ಕುಟುಂಬ
ಬದಲಾಯಿಸಿನನ್ನ ಮನೆಯವರು ನನಗೆ ಎಲ್ಲಾ ವಿಷಯದಲ್ಲೂ ಸಹಾಯ ಮಾಡಿದ್ದಾರೆ.ನನ್ನ ತಾತ ಎಲ್ಲರಿಗಿಂತ ಹೆಚ್ಚು ಪ್ರೀತಿ ಕೊಟ್ಟು ಬೆಳೆಸಿದ್ದಾರೆ.ಅಜ್ಜಿ,ಅಮ್ಮ,ಅತ್ತೆ. ತಾತ ನನು ಎನು ಕೇಳಿದರು ಕೊಡಿಸಿದ್ದಾರೆ.ತಾತ ಇದ್ದಾಗ ನಾವು ಸಕುಟುಂಬ ಸಮೇತ ವರುಷಕ್ಕೊಮ್ಮೆ ಧಮ೯ಸ್ತಳಕ್ಕೆ ಹೊಗುತ್ತಿದ್ದೆವು.ಮಂತ್ರಾಲಯ ನಮ್ಮಕೊನೆಯ ಕುಟುಂಬ ಯಾತ್ರೆ. ಎಲ್ಲಾ ಹಂತದಲ್ಲು ನನ್ನ ಜೊತೆ ಇರುವುದು ನನ್ನ ಅಕ್ಕ.ನನಗೆ ಏನೇ ಕಷ್ಟ ಬಂದರು, ತೊಂದರೆ ಬಂದರು ಸಹಾಯ ಮಾಡುವುದು ಅವಳೆ.ನನ್ನ ಎಲ್ಲಾ ಸಂತೋಷದ ವಿಷಯ ಅವಳೊಂದಿಗೆ ಹಂಚಿಕೊಳ್ಳುತ್ತೇನೆ.ನನ್ನ ಸ್ನೆಹಿತೆ ಅವಳೆ.ನನಗೆ ದು:ಖಕ್ಕೆ ಸಾಂತ್ವಾನ ಹೇಳುತ್ತಾಳೆ. ನಾನು ೧೦ನೇ ತರಗತಿ ಯಾಲ್ಲಿ ಓದುತ್ತಿರುವಾಗ ತುಂಬಾ ಕೋಪವಿತ್ತು. ಸಣ್ಣ ಸಣ್ಣ ವಷಯಕ್ಕು ಕೋಪ ಬರುತ್ತಿತ್ತು ಆದ್ದರಿಂದ ಅಮ್ಮ ನನ್ನನ್ನು ಹಾಸ್ಟಲ್ ಗೆ ಹಾಕಿದ್ದರು ,ಎರಡು ವರುಷ ಹಾಸ್ಟಲ್ ನಲ್ಲಿ ಇದ್ದ ಪ್ರಭಾವ ಈಗ ಕೋಪ ಕಮ್ಮಿಯಾಗಿದೆ.ಆಳ್ವಾಸ್ ನಲ್ಲಿ ನಾನು ತುಂಬಾ ವಿಷಯಗಳನ್ನ ಕಲಿತಿದ್ದೇನೆ.ಮೊದಲು ಮನೆಯಲ್ಲಿ ಎಶ್ಟೂ ಹೇಳಿದ್ರು ಓದುತ್ತಿರಲಿಲ್ಲ,ಆದರೆ ಆಳ್ವಾಸ್ ಗೆ ಹೋದ ಮೇಲೆ ಓದೊಕೆ ಶುರು ಮಾಡಿದ್ದೆನೆ.
ಹಾಸ್ಟೆಲ್ ನ ಜೀವನ
ಬದಲಾಯಿಸಿನನಗೆ ನನ್ನ ತಾತ ಅಂದ್ರೆ ತುಂಬಾನೆ ಇಷ್ಟ.ಎಕೆಂದರೆ ನನಗೆ ಚಿಕ್ಕ ವಯಸ್ಸಿನಿಂದಲು ಅಪ್ಪ ಇಲ್ಲ ಅನ್ನೊ ಕೊರತೆನ ನೀಗಿಸಿದ್ದಾರೆ.ಅವರ ಮಾತು ಅಂದ್ರೆ ನನಗೆ ವೇದ ವಾಕ್ಯ.ಅವರಿಗೆ ನನ್ನ ಹಾಸ್ಟೆಲ್ ಗೆ ಕಳುಹಿಸಲು ಇಶ್ತ ಇರಲಿಲ್ಲ.ಆದ್ರೆ ಅವರು ನಾನು ೧೦ನೇ ತರಗತಿ ಯಲ್ಲಿ ಇರುವಾಗಲೆ ತೀರಿಕೊಂಡಿದ್ದರು.ಆದ್ದರಿಂದ ನನ್ನ ಯಾರು ತಡಿಯಲಿಲ್ಲ.ಆಳ್ವಾಸ್ ಗೆ ಹೂದೆ.ಹೊಗಿ ಬಂದಾಗ ನನ್ನ ಸ್ವಭಾವದಲ್ಲಿ ಸಂಪೂರ್ಣ ಬದಲಾವಣೆ ಇತ್ತು.ಎಲ್ಲಾದಕ್ಕು ಹೆದರು ತಿದ್ದ ನಾನು ಎಲ್ಲಾವನ್ನು ನಿಭಾಯಿಸುವ ಶಕ್ತಿ ಬಂದಿತು.ನನಗೆ ಅಲ್ಲಿಗೆ ಹೊಗುವ ಮೊದಲ ಕಾರಣ ಅಲ್ಲಿನ ಪರಿಸರ.ತಂಪಾದ ವಾತಾವರಣ ನನ್ನನ್ನು ಆಕಶಿ೯ಸಿತು.ಸ್ವತಂತ್ರ್ಯವಾಗಿ ಬದುಕಬೇಕು ಎಂದು ಹೊದೆ.ಅಲ್ಲಿಂದ ಬಂದಾಗ ಆಳ್ವಾಸ್ ಗೆ ಹೊಗುವ ಮುಂಚೆ ಅಮ್ಮನ,ಅಕ್ಕನ ,ಅಣ್ಣನ ಮತ್ತು ಸಂಭದದ ಬೆಲೆ ನನಗೆ ಜಾಸ್ತಿ ಗೊತ್ತಿರಲಿಲ್ಲ .ಈಗ ಅವರ ಬೆಲೆ ತಿಳಿದಿದೆ .
ಗೊಂಬೆಯ ಮತ್ತು ನನ್ನ ಪ್ರೀತಿ
ಬದಲಾಯಿಸಿನನಗೆ ಗೊಂಬೆಗಳೆಂದರೆ ತುಂಬಾ ಇಶ್ಶ್ಃಟಾ.ನಮ್ಮ ಮನೆಯಲ್ಲಿ ಒಟ್ಟು ೫೩ ಕರಡಿ ಗೊಂಬೆಗಳಿವೆ.ಯಾರಾದರು ಮನೆಗೆ ಬಂದರೆ ಮನೆಯಲ್ಲಿ ಚಿಕ್ಕ ಮಗು ಇದಿಯ ಎಂದು ಕೇಳುತ್ತಾರೆ.ನನಗೆ ತುಂಬಾ ನೋವಿನ ಸಂಗತಿ ,ಆನಂದದ ಸಂಗತಿಯೆಲ್ಲವನ್ನು ಅದರ ಹತ್ತಿರ ಹಂಚಿಕೊಳ್ಳುತ್ತೇನೆ. ಬೆಕ್ಕು ಎಂದರು ತುಂಬ ಅಚ್ಚು ಮೆಚ್ಚು ಬಾಲ್ಯ ದಿಂದ ಅದಕ್ಕು ನನಗು ಏನೋ ಸಂಬಂದ.
ನನ್ನ ಮತ್ತು ಮೊಬೈಲ್ ಸಂಬಂದ
ಬದಲಾಯಿಸಿನಾನು ೮ನೇ ತರಗತಿ ಯಲ್ಲಿ ಇದ್ದಾಗ ಮೊಬೈಲ್ ಅನ್ನು ಬಿಟ್ಟು ಇರಲು ಸಾಧ್ಯ ವಾಗುತ್ತಿರಲಿಲ್ಲ ,ಆದರೆ ಆಳ್ವಾಸ್ ಗೆ ಹೋದಾಗ ಮೊದ ಮೊದಲು ತುಂಬಾನೆ ಹಿಂಸೆ ಎನಿಸಿತು.ಆದರೆ ಹೇಗೊ ೨ವರುಷ ಕಳೆದೆ.ಈಗ ಮತ್ತೆ ಮೊಬೈಲು ಸಿಕ್ಕಿದೆ.
ನನ್ನ ಬದಲಾವಣೆಗಳು
ಬದಲಾಯಿಸಿಮೊದಲು ಅಮ್ಮ ಯಾವ ಅಡುಗೆ ಮಾಡಿದರು ಬೆಡ ಯೆನ್ನುತಿದ್ದೆ ಆದರೆ ಈಗ ಏನನ್ನಾದರು ಸರಿ ತಿನ್ನುತ್ತೇನೆ. ನನಗೆ ಸ್ವಂತ ಅಕ್ಕತಮ್ಮ,ಅಣ್ಣ,ತಂಗಿ ಇಲ, ಯೆಲ್ಲಕ್ಕಿಂತ ಹೆಚಾಗಿ ನನಗೆ ಅಪ್ಪನು ಇಲ್ಲ. ಅಮ್ಮ ಮತ್ತೆ ಅತ್ತೆ ನನ್ನನ್ನು ಸಾಕಿ ಬೆಳೆಸಿದ್ದು.ಅತ್ತೆಗೆ ೩ಜನ ಮಕ್ಕಳು.೨ ಅಕ್ಕಂದಿರು,ಒಬ್ಬ ಅತ್ತೆ ಮಗ.ನಾನು ಮರೆಯಲಾರದ ವಿಶಯ ಎಂದರೆ ಅದು ನಮ್ಮ ಊರು.ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ ಆದರೆ ಬೆಳೆದಿದ್ದು ಚಿಕ್ಕಮಂಗಳೂರಿನ ಕಡೂರು ತಾಲ್ಲೂಕಿನ ಬಿರೂರಿನಲ್ಲಿ.ಕಡೂರು ಸುತ್ತ ಮಲೆನಾಡು ಪ್ರದೇಶವಾಗಿರುತ್ತದೆ.ಕುದುರೆಮುಖ ಮತ್ತು ಬಾಬಾ ಬುಡಂಗಿರಿ ಇಲ್ಲಿದೆ.ಶ್ರಿ ರಂಗನಾಥ ಸ್ವಾಮಿ ದೇವಾಲಯವಿದೆ.ಇದು ಕಡೂರಿಗೆ ೧೦ ಕಿ.ಮಿ. ಅಶ್ಃಟೂ ದೂರವಿದೆ.ಇದು ಒಂದೇ ಬಂಡೆ ಕಲ್ಲಿನ ದೇವಾಲಯ.ಬೆಂಗಳೂರಿನಲ್ಲಿ ರುವ ಕಲುಶಿತ ವಾತಾವರಣ ಇಲ್ಲಿ ಇಲ್ಲ. ಜೀವನದಲ್ಲಿ ಯಾವುದೆ ಗುರಿ ಇರಲಿಲ್ಲ ನನಗೆ.ಆದರೆ ಕ್ರಿಷ್ಟ್ ಕಾಲೇಜಿಗೆ ಬಂದಮೇಲೆ ಎನನ್ನಾದರು ಮಾಡಬೇಕು ಎಂದು ನಿಧ೯ರಿಸಿದ್ದೇನೆ.ನನ್ನ ಗುರಿ ಏನೆಂದು ಅರಿತು ಕೊಂಡಿದ್ದೇನೆ, ನಾನು ಕ್ರ್ಯ್ ಸ್ಟ್ ಕಾಲೇಜಿಗೆ ಜೀವನದಲ್ಲಿ ಯೆನನ್ನಾದರು ಸಾಧಿಸಬೇಕೆಂಬ ಆಸೆ ಇಂದ ಸೇರಿಕೊಂಡಿದ್ದೇನೆ. ಅದರಂತೆ ಒಳ್ಳಯ ರೀತಿಯಲ್ಲಿ ,ಉತ್ತಮ ಅಂಕಗಳಲ್ಲಿ ಉತ್ತೀಣ೯ವಾಗುತ್ತೇನೆ.