ಸದಸ್ಯ:C M Vidyashree/sandbox
ರೋಜಾ | |
---|---|
ಜನನ | ಲತಾ ನಾಗರಾಜ ೧೭ ನವಂಬರ್ ೧೯೭೨ ತಿರುಪತಿ, ಆಂದ್ರ ಪ್ರದೇಶ, ಭಾರತ |
ವೃತ್ತಿ | ರಾಜಕಾರಣಿ,ನಟಿ |
ಬಾಳ ಸಂಗಾತಿ | ಸೆಲ್ವಮಣಿ |
ಮಕ್ಕಳು | ೨ |
ರೋಜಾ
ಬದಲಾಯಿಸಿರೋಜಾ ಸೆಲ್ವಮಣಿ ಅವರು ೧೭ ನವೆಂಬರ್ ೧೯೭೨ ರಲ್ಲಿ ಜನಿಸಿದರು. ಅವರು ದmb ಕ್ಷಿಣ ಭಾರತದ ಖ್ಯಾತ ನಟಿ ಮತ್ತು ರಾಜಕಾರಣಿಯಾಗಿದ್ದಾರೆ. ಅವರು ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಜೊತೆಗೂಡಿದರು. ೨೦೧೪ ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಗರಿಯಿಂದ ಶಾಸಕರಾಗಿ ಜಯ ಗಳಿಸಿದರು.[೧]
ಆರಂಭಿಕ ಜೀವನ
ಬದಲಾಯಿಸಿರೋಜಾ ಅವರು ೧೯೭೨ ರಲ್ಲಿ ನಾಗರಾಜ ರೆಡ್ಡಿ ಮತ್ತು ಲಲಿತಾ ದಂಪತಿಗಳಿಗೆ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಬಂಗಾರಪೇಟೆಯಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಶ್ರೀ ಲತಾ. ಅವರ ತಂದೆ-ತಾಯಿಗೆ ಮೂವರು ಮಕ್ಕಳು- ರೋಜಾ ಮತ್ತು ಇಬ್ಬರು ಸಹೋದರರು (ಕುಮಾರಸ್ವಾಮಿ ಮತ್ತು ರಾಮಪ್ರಸಾದ್). ನಂತರ ಕುಟುಂಬ ಸಮೇತ ಹೈದರಾಬಾದ್ ಗೆ ತೆರಳಿದರು. ಅವರು ಶ್ರೀ ಪದ್ಮಾವತಿ ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ತನ್ನ ಸ್ನಾತಕೋತ್ತರ ಪದವಿ ಗಳಿಸಿದರು. ರೋಜಾ ಕುಚುಪುಡಿಯನ್ನು ಕೂಡ ಅಭ್ಯಸಿಸಿದರು. ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ನೃತ್ಯವನ್ನು ಪ್ರದರ್ಶಿಸುತ್ತಿದ್ದರು.
ರೋಜಾ ತೆಲುಗು ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪ್ರವೇಶ ನೀಡಿದರು. ಅವರ ಮೊದಲನೇ ಚಿತ್ರ ಪ್ರೇಮ ತಪಸ್ಸು. ಅದರಲ್ಲಿ ನಾಯಕ ರಾಜೇಂದ್ರ ಪ್ರಸಾದ್ ಗೆ ನಾಯಕಿಯಾಗಿ ನಟಿಸಿದರು. ಈ ಇಡೀ ಚಿತ್ರವನ್ನು ತಿರುಪತಿಯಲ್ಲಿ ಶೂಟಿಂಗ್ ಮಾಡಲಾಗಿತ್ತು. ನಿರ್ದೇಶಕ ಆರ್.ಕೆ.ಸೆಲ್ವಮಣಿ, ಚೆಂಬರುತಿ ಮತ್ತು ನಟ ಪ್ರಶಾಂತ್ ರವರು ತಮಿಳು ಚಿತ್ರರಂಗಕ್ಕೆ ರೋಜಾರವರನ್ನು ಪರಿಚಯಿಸಿದರು. ಆಕೆಯು ಮಮ್ಮೂಟಿಯ ಜೊತೆ ನಟಿಸಿದ "ವೇಲೂರ್ ಮೆಮಾನ್" ಮತ್ತು ಪ್ರಭುದೇವ ಜೊತೆ ನಟಿಸಿದ "ಮಸ್ತಾನಾ ಮಸ್ತಾನಾ" ಎಂಬ ಹಾಡುಗಳು ಜನಪ್ರಿಯವಾದವು. ರಜನೀಕಾಂತ್(ವೀರ) ಮತ್ತು ಅರ್ಜುನ್ ಸರ್ಜ(ಅಯುಧ ಪೂಜ) ಮುಂತಾದವರ ಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆಯನ್ನು ಪಡೆದಿದ್ದಾರೆ. ವಿಕ್ರಮ ನಿರ್ದೇಶನದ ಚಲನಚಿತ್ರ "ಉನ್ನಿದಯತಿಲ್ ಎನ್ನೈ ಕೊಡುತೇನ್"ದಲ್ಲಿ ರೋಜಾ ಪ್ರಮುಖ ವೃತ್ತಿ ಪ್ರಗತಿಯನ್ನು ಗಳಿಸಿದರು. ಅವರ ೧೦೦ನೇಯ ಚಿತ್ರ ಪೊಟ್ಟು ಅಮ್ಮನ್ ಆಗಿತ್ತು. ನಂತರ ರೋಜಾ ಅರಸು(೨೦೦೩), ಪಾರಿಜಾತಂ(೨೦೦೬), ಶಂಭೋ ಶಿವ ಶಂಭೋ(೨೦೧೦), ಗೋಲಿಮಾರ್(೨೦೧೦), ಮೊಗುಡು(೨೦೧೧), ಕೋಡಿಪುಂಜು(೨೦೧೧), ವೀರಾ, ಕಾವಲನ್(೨೦೧೧), ಮತ್ತು ಸಗುನಿ(೨೦೧೨) ಮೊದಲಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು.
ರಾಜಕೀಯ ಜೀವನ
ಬದಲಾಯಿಸಿರೋಜಾ ತೆಲುಗು ದೇಶಂ ಪಾರ್ಟಿಗೆ (ಟಿಡಿಪಿ)ಸೇರಿದರು ಮತ್ತು ತೆಲುಗು ಮಹಿಳಾ ಪಕ್ಷದ ಮಹಿಳೆ ಪಾರ್ಶ್ವದ ಅಧ್ಯಕ್ಷರಾಗಿದ್ದರು. ೨೦೦೯ರಲ್ಲಿ ನಡೆದ ರಾಜ್ಯ ಚುನಾವಣೆಗಳಲ್ಲಿ ರೋಜಾ ಸತತ ಎರಡನೇ ಬಾರಿಗೆ ಸೋಲನ್ನು ಅಪ್ಪಿದರು. ಇದರ ಅಂತಿಮವಾಗಿ ತನ್ನ ಪ್ರತಿಸ್ಪರ್ಧಿ ವಿರೋಧ ಪಕ್ಷದ ನಾಯಕರು, ಎದುರಿಸಿ ಮತ್ತು ರಾಜಕೀಯ ವರ್ತನೆಗಳನ್ನು ಒಳಗೊಂಡಿದ್ದರು.[೨] ಆಗಸ್ಟ್ 2009ರಲ್ಲಿ, ಅವರು ಟಿಡಿಪಿ ತ್ಯಜಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿದರು.[೩] ನಂತರ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ವೈ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.[೪] ೧೬ ಮೇ ೨೦೧೪ರಂದು ಅವರು ನಗರಿಯಿಂದ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜಯವನ್ನು ಗಳಿಸಿದರು.
ರಾಜಕೀಯ ವಿವಾದಗಳು
ಬದಲಾಯಿಸಿಆರ.ಕೆ.ರೋಜಾ ಅವರು ಮಹಿಳಾ ಶಾಸಕರ ನಡುವೆ ಸಕ್ರಿಯ ಸ್ಪೀಕರ್ ಆದರು. ಅವರು ಪ್ರದೋಚನಕಾರಿ ಭಾಷೆಗೆ ಹೆಸರಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ವಿಧಾನಸಭೆ ವಿಚಾರಣೆಯ ಸಮಯದಲ್ಲಿ ಅವರ ದುರ್ವರ್ತನೆಯ ಕಾರಣದಿಂದಾಗಿ ಅವರನ್ನು ವಿಧಾನಸಭೆಯಲ್ಲಿ ಹಾಜರಾಗದಂತೆ ನಿಷೇಧಿಸಲಾಗಿತ್ತು. ೧೮ ಡಿಸೆಂಬರ್ ೨೦೧೫ರಂದು, ಶಾಸಕಾಂಗ ಸಭೆಯ ಎಲ್ಲಾ ಸದಸ್ಯರು ಹಾಗು ಮುಖ್ಯಸ್ಥ-ಸ್ಪೀಕರ್ ಒಟ್ಟುಗೂಡಿ ಈ ನಿರ್ಧಾರವನ್ನು ತೆಗೆದುಕೊಂಡರು. ವಿಧಾನಸಭೆ ಚಟುವಟಿಕೆಗಳು ಮತ್ತು ಸಭೆಯ ಶಿಸ್ತು ಸಂಬಂಧಿಸಿದಂತೆ ವರ್ತನೆಯನ್ನು ಹಾಗೂ ತನ್ನ ಭಾಷೆಯ ಆಯ್ಕೆಯ ಬಗ್ಗೆ ವಿವಿಧ ರಾಜಕಾರಣಿಗಳು, ರಾಜಕೀಯ ವಿಶ್ಲೇಷಕರು ಮತ್ತು ಕಾರ್ಯಕರ್ತರು ಟೀಕಿಸಿದರು. ಇದೆಲ್ಲ ಹೊರತಾಗಿಯೂ Y.S.ಜಗನ್ ಮೋಹನ್ ರೆಡ್ಡಿ,[೫] ವಿರೋಧ ಪಕ್ಷದ ಗೌರವಾನ್ವಿತ ನಾಯಕ, ಅವರ ಬೆಂಬಲಿತನಾಗಿ ಹಾಗು ಅವರ ನಡತೆಗೆ ಬೆಂಬಲ ನೀಡಿದರು. ಅಂತಹ ನಡವಳಿಕೆಯನ್ನು ಬೆಂಬಲಿಸಲು ಕಾರಣವೇನೆಂದು ಹಲವು ವಿಶ್ಲೇಷಕರು ಪ್ರಶ್ನಿಸಿದಾಗ, ಇದು ರಾಜ್ಯ ಒಳಿತಿಗೇ ಎಂದು ಪರಿಗಣಿಸಲಾಯಿತು. ರೋಜಾ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸುವ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗಿತ್ತು[೬]. ಇಂತಹ ಅನುಮಾನಗಳು ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವಂತೆ ಮಾಡಿತು. ಅಸೆಂಬ್ಲಿಯ (ಅಥವಾ ವಿಧಾನಸಭೆಯ) ಆಸ್ತಿಯಾದ ವೀಡಿಯೋ ವಿವರಗಳನ್ನು ಮಾಧ್ಯಮದವರು ಸಭಾಪತಿಯವರ ಅನುಮತಿಯಿಲ್ಲದೆ ಹೇಗೆ ಮಾಧ್ಯಮದಲ್ಲಿ ಪ್ರಕಟಿಸಿದರು? ಎಂಬುದನ್ನು ಸಭಾಸದಸ್ಯರೆಲ್ಲರೂ ಪ್ರತಿಭಟಿಸಿದಾಗ ಸಭಾಪತಿಯವರು ಇದನ್ನು ವಿಚಾರಿಸಲು ಒಂದು ಆಯೋಗವನ್ನು ರಚಿಸಿ ಅವರ ವರದಿಯನ್ನು ಮುಂದಿನ ಸಭೆಯಲ್ಲಿ ಹಾಜರು ಪಡಿಸುವವುದಾಗಿ ಭರವಸೆಯಿತ್ತರು.[೭]
ಇತರ ಕಾರ್ಯಗಳು
ಬದಲಾಯಿಸಿಮೋಡರ್ನ್ ಮಹಾಲಕ್ಷ್ಮಿ ಎಂಬ ಕಾರ್ಯಕ್ರಮದಲ್ಲಿ ಅನುಸೂಯರವರ ಬದಲು ನಿರೂಪಕಿಯಾಗಿ ರೋಜಾ ಅವರು ಕಾರ್ಯ ನಿರ್ವಹಿಸಿದರು.ಈ ಕಾರ್ಯಕ್ರಮವು ಮಾ ಟಿವಿಯಲ್ಲಿ ಪ್ರಸಾರವಾಗಿತ್ತು. ಜಬರ್ದಸ್ತ್ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದರು.ಈ ಕಾರ್ಯಕ್ರಮವು ಈ ಟಿವಿಯಲ್ಲಿ ಪ್ರಸಾರವಾಗುತಿತ್ತು. ಜೀ ತಮಿಳ್ ನಲ್ಲಿ ಲಕ್ಕಾ-ಕಿಕ್ಕಾ ಎಂಬ ಕಾರ್ಯಕ್ರಮವನ್ನು ನಿರ್ವಹಿಸಿದರು.
ವಯಕ್ತಿಕ ಜೀವನ
ಬದಲಾಯಿಸಿರೋಜಾ ಅವರು ಆರ್.ಕೆ.ಸೆಲ್ವಮಣಿ ಅವರನ್ನು ೧೦ ಆಗಸ್ಟ್ ೨೦೦೨ ರಂದು ವಿವಾಹವಾದರು. ಈ ದಂಪತಿಗಳಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ.[೮]
ಚಲನಚಿತ್ರಗಳ ಪಟ್ಟಿ
ಬದಲಾಯಿಸಿತೆಲುಗು ಚಿತ್ರಗಳು
ಬದಲಾಯಿಸಿವರ್ಷ | ಚಿತ್ರ | ಸಹ ನಟ | ಭಾಷೆ | ಪಾತ್ರ | |
---|---|---|---|---|---|
೧೯೯೧ | ಸರ್ಪಯಾಗಂ | ಶ್ರೀನಿವಾಸ ವರ್ಮ | ತೆಲುಗು | ||
೧೯೯೧ | ಪ್ರೇಮ ತಪಸ್ಸು | ರಾಜೇಂದ್ರ ಪ್ರಸಾದ್ | ತೆಲುಗು | ||
೧೯೯೨ | ಸೀತರತ್ನಂ ಗಾರಿ ಅಬ್ಬಾಯಿ | ವಿನೋಧ್ ಕುಮಾರ್ | ತೆಲುಗು | ||
೧೯೯೨ | ಅಟಾಕು ಕೊಡಕು ಮಾಮಕು ಅಲ್ಲುಡು | ವಿನೋಧ್ | ತೆಲುಗು | ||
೧೯೯೩ | ರಕ್ಷಣಾ | ನಾಗಾರ್ಜುನ್ | ತೆಲುಗು | ||
೧೯೯೩ | ಮುಠಾ ಮೇಸ್ತ್ರಿ | ಚಿರಂಜೀವಿ | ತೆಲುಗು | ||
೧೯೯೩ | ಅತ್ತಾ ಸೊಮ್ಮು ಅಲ್ಲುಡಿ ದಾನಂ | ವಿನೋಧ್ ಕುಮಾರ್ | ತೆಲುಗು | ||
೧೯೯೩ | ಮೊಗುಡುಗಾರು | ವಿನೋಧ್ ಕುಮಾರ್ | ತೆಲುಗು | ||
೧೯೯೪ | ಮುಗ್ಗುರು ಮೊನಗಾಲ್ಲು | ಚಿರಂಜೀವಿ | ತೆಲುಗು | ||
೧೯೯೪ | ಭೈರವ ದ್ವೀಪಂ | ಬಾಲಕೃಷ್ಣ | ತೆಲುಗು | ರಾಜಕುಮಾರಿ ಪದ್ಮಾವತಿ | |
೧೯೯೪ | ಗಾಂಡೀವಂ | ಬಾಲಕೃಷ್ಣ | ತೆಲುಗು | ||
೧೯೯೪ | ಬೊಬ್ಬಿಲಿ ಸಿಂಹಂ | ಬಾಲಕೃಷ್ಣ | ತೆಲುಗು | ||
೧೯೯೪ | ಅಣ್ಣ | ರಾಜಶೇಖರ್ | ತೆಲುಗು | ||
೧೯೯೪ | ಪೊಲೀಸ್ ಬ್ರದರ್ಸ್ | ವಿನೋಧ್ ಕುಮಾರ್ | ತೆಲುಗು | ||
೧೯೯೪ | ಶುಭ ಲಗ್ನಂ' | ಜಗಪತಿ ಬಾಬು | ತೆಲುಗು | ||
೧೯೯೪ | ಸಮರಂ | ಸುಮನ್,ರಘು | ತೆಲುಗು | ||
೧೯೯೫ | ಬಿಗ್ ಬಾಸ್ | ಚಿರಂಜೀವಿ | ತೆಲುಗು | ||
೧೯೯೫ | ಇಲ್ಲು ಪೆಲ್ಲಿ | ನರೇಶ್ | ತೆಲುಗು | ||
೧೯೯೫ | ಮಾತೋ ಪೆಟ್ಟುಕೋಕು | ಬಾಲಕೃಷ್ಣ | ತೆಲುಗು | ||
೧೯೯೫ | ದಸರಿ ಮಾಯಾ ಬಜಾರ್ | ಅಕ್ಕಿನೇನಿ ನಾಗೇಶ್ವರ ರಾವ್ | ತೆಲುಗು | ||
೧೯೯೫ | ತೆಲುಗುವೀರಲೇವರ | ಕೃಷ್ಣ | ತೆಲುಗು | ||
೧೯೯೫ | ಪೋಕಿರಿ ರಾಜ | ವೆಂಕಟೇಶ್ | ತೆಲುಗು | ||
೧೯೯೫ | ಘಟೋತ್ಕಚುಡು | ಆಲಿ | ತೆಲುಗು | ರೋಜಾ | |
೧೯೯೬ | ವಜ್ರಂ | ನಾಗಾರ್ಜುನ್ | ತೆಲುಗು | ಕೌಲಿ | |
೧೯೯೭ | ಪೆದ್ದಣ್ಣಯ್ಯ | ಬಾಲಕೃಷ್ಣ | ತೆಲುಗು | ಸೀತಾ | |
೧೯೯೭ | ಅಡವಿಲೋ ಅಣ್ಣ | ಮೋಹನ್ ಬಾಬು | ತೆಲುಗು | ||
೧೯೯೭ | ಅಣ್ಣಮಯ್ಯ | ಮೋಹನ್ ಬಾಬು | ತೆಲುಗು | ||
೧೯೯೮ | ಸ್ವರ್ನಕ್ | ತೆಲುಗು | |||
೧೯೯೯ | ಸುಲ್ತಾನ್ | ಬಾಲಕೃಷ್ಣ | ತೆಲುಗು | ||
೨೦೦೦ | ಕ್ಷೇಮಂಗಾ ವೆಳ್ಳಿ ಲಾಭಂಗಾ ರಂಡಿ | ಶ್ರೀಕಾಂತ್ | ತೆಲುಗು | ||
೨೦೦೦ | ಮೀ ಆಯ್ನ ಜಾಗ್ರತಾ | ತೆಲುಗು | |||
೨೦೦೦ | ತಿರುಮಲ ತಿರುಪತಿ ವೆಂಕಟೇಶ | ಶ್ರೀಕಾಂತ್ | ತೆಲುಗು | ||
೨೦೦೦ | ಫ್ಯಾಮಿಲಿ ಸರ್ಕಸ್ | ಜಗಪತಿ ಬಾಬು | ತೆಲುಗು | ||
೨೦೦೧ | ದುರ್ಘ | ವೇಣು | ತೆಲುಗು | ||
೨೦೦೮ | ಸಮ್ಮಕ್ಕ ಸಾರಕ್ಕ | ತೆಲುಗು | |||
೨೦೧೦ | ಶಂಭೋ ಶಿವ ಶಂಭೋ | ರವಿತೇಜ | ತೆಲುಗು | ಗೃಹ ಸಚಿವ | |
೨೦೧೦ | ಗೋಲಿಮಾರ್ | ಗೋಪಿಚಂದ್ | ತೆಲುಗು | ಅರುಂಧತಿ | |
೨೦೧೧ | ಪರಮವೀರ ಚಕ್ರ | ಬಾಲಕೃಷ್ಣ | ತೆಲುಗು | ಚಿತ್ರಕಲಾವಿದ | |
೨೦೧೧ | ಮೊಗುಡು | ಗೋಪಿಚಂದ್ | ತೆಲುಗು | ರಾಜಕರಣಿ ಚಾಮುಂಡೇಶ್ವರಿ | |
೨೦೧೧ | ಕೊಡಿಪುಂಜು | ತನಿಷ್ | ತೆಲುಗು | ಸೀತಾರತ್ನಂ,ತನಿಷ್ ನ ತಾಯಿ | |
೨೦೧೧ | ವೀರಾ | ರವಿ ತೇಜ | ತೆಲುಗು | ರವಿ ತೇಜ ಅವರ ಸಾಕುತಾಯಿ | |
೨೦೧೧ | ಶ್ರೀ ರಾಮ ರಾಜ್ಯಂ | ನಂದಮೂರಿ ಬಾಲಕೃಷ್ಣ | ತೆಲುಗು/ತಮಿಳ್ | ಭೂದೇವಿ | |
೨೦೧೨ | ಲಕ್ಕಿ | ಶ್ರೀಕಾಂತ್ | ತೆಲುಗು | ||
೨೦೧೩ | ಪವಿತ್ರ | ತೆಲುಗು | |||
೨೦೧೩ | ಶ್ರೀ ಜಗದ್ಗುರು ಆದಿ ಶಂಕರ | ಉಪೇಂದ್ರ | ತೆಲುಗು | ಲಕ್ಷ್ಮಿ ದೇವಿ | |
೨೦೧೩ | ಕಮೀನ | ಶ್ರಿಹರಿ | ತೆಲುಗು | ||
೨೦೧೩ | D/O ರಾಮಗೋಪಾಲ ವರ್ಮ | ತೆಲುಗು | |||
೨೦೧೪ | ದೂಸುಕೆಲ್ತ | ವಿಷ್ಣು ಮಂಚು | ತೆಲುಗು |
ತಮಿಳು ಚಿತ್ರಗಳು
ಬದಲಾಯಿಸಿಮಲಯಾಲಮ್ ಚಿತ್ರಗಳು
ಬದಲಾಯಿಸಿವರ್ಷ | ಚಿತ್ರ | ಪಾತ್ರ | ಭಾಷೆ |
---|---|---|---|
೧೯೯೭ | ಗಂಗೋತ್ರಿ | ನಂದನ ಮೆನನ್ | ಮಲಯಾಳಂ |
೨೦೦೨ | ಮಲಯಾಳಿ ಮಾಮನು ವಣಕ್ಕಂ | ಪಾರ್ವತಿ | ಮಲಯಾಳಂ |
೨೦೧೫ | ಜಮ್ನ ಪ್ಯಾರಿ | ನೀಲಾಂಬಾರಿ | ಮಲಯಾಳಂ |
ಕನ್ನಡ ಚಿತ್ರಗಳು
ಬದಲಾಯಿಸಿವರ್ಷ | ಚಿತ್ರ | ಪಾತ್ರ |
---|---|---|
೧೯೯೩ | ಗಡಿಬಿಡಿ ಗಂಡ | ನೀಲಾಂಬರಿ |
೧೯೯೭ | ಕಲಾವಿಧ | |
೧೯೯೯ | ಪ್ರೇಮೋತ್ಸವ | |
೨೦೦೦ | ಸ್ವಾತಂತ್ರ ದಿನ | |
೨೦೦೧ | ಗ್ರಾಮ ದೇವತೆ | ಪಾರ್ವತಿ |
೨೦೦೧ | ಸುಂದರ ಕುಂಡ | |
೨೦೦೨ | ಪರ್ವ | ಸುಧಾ |
೨೦೦೪ | ಮೌರ್ಯ | |
೨೦೧೨ | ಶ್ರೀಚೌಡೇಶ್ವರಿ ದೇವಿ ಮಹಿಮೆ |
ದೂರದರ್ಶನ
ಬದಲಾಯಿಸಿವರ್ಷ | ದಾರಾವಾಹಿ / ಕಾರ್ಯಕ್ರಮ | ಪಾತ್ರ | ಭಾಷೆ | ಚಾನೆಲ್ | ಸೂಚನೆ |
---|---|---|---|---|---|
೨೦೦೨-೨೦೦೩ | ನದಿ ಎಂಗೆ ಪೋಗಿರದು | ಸಿಂಧು | ತಮಿಳು | ಸ್ಟಾರ್ ವಿಜಯ್ | ದಾರಾವಾಹಿ |
೨೦೦೪ | ಉತ್ತರಾಯಣ | ಕನ್ನಡ | ಉದಯಾ ಟಿವಿ | ||
೨೦೧೦-೨೦೧೨ | ಮಾಡ್ರನ್ ಮಹಾಲಕ್ಷ್ಮಿ | ಕಾರ್ಯಕ್ರಮ ನಿರ್ವಹಣೆ | ತೆಲುಗು | ಮಾ ಟಿವಿ | |
೨೦೧೩ | ಜಬರ್ದಸ್ತ್ | ತೀರ್ಪುಗಾರ್ಥಿ | ತೆಲುಗು | ಈ ಟಿವಿ | ಸಾಪ್ತಾಹಿಕ |
೨೦೧೪ | ಎಕ್ಸ್ಟ್ರಾ ಜಬರ್ದಸ್ತ್ | ತೀರ್ಪುಗಾರ್ಥಿ | ತೆಲುಗು | ಈ ಟಿವಿ | ಸಾಪ್ತಾಹಿಕ |
೨೦೧೪ | ಲಕ್ಕಾ ಕಿಕ್ಕಾ | ಕಾರ್ಯಕ್ರಮ ನಿರ್ವಹಣೆ | ತಮಿಳು | ಜೀ ತಮಿಳು | |
೨೦೧೪-೨೦೧೫ | ರೇಸ್ | ಕಾರ್ಯಕ್ರಮ ನಿರ್ವಹಣೆ | ತೆಲುಗು | ಜೀ ತೆಲುಗು |
ಉಲ್ಲೇಖಗಳು
ಬದಲಾಯಿಸಿ- ↑ http://www.gulte.com/news/27099/Roja-wins-in-Nagari-but-Iron-Leg-tag-intact
- ↑ http://www.deccanherald.com/content/518381/actor-roja-suspended-ap-assembly.html
- ↑ http://www.thehindu.com/todays-paper/tp-national/tp-andhrapradesh/article216434.ece
- ↑ http://www.thehansindia.com/posts/index/2015-12-23/Kamineni-faults-YSRCP-for-backing-MLA-Roja-195099
- ↑ http://www.newindianexpress.com/states/andhra_pradesh/YSRC-Gives-No-trust-Notice-against-Speaker/2015/12/24/article3193603.ece
- ↑ http://www.financialprospect.com/politics/ysrcp-mla-roja-suspended-from-assembly-for-one-year-15551.html
- ↑ http://www.thehindu.com/news/national/andhra-pradesh/ysrc-charges-speaker-with-bias-towards-ruling-tdp-serves-no-trust-notice-against-the-chair/article8021838.ece
- ↑ http://cinema.maalaimalar.com/2013/04/10230039/roja-selvamani-love-13-years-w.html