Ambika162
ಜನನ
ಬದಲಾಯಿಸಿನನ್ನ ಹೆಸರು ಅಂಬಿಕಾ ಗೌಡ, ನನ್ನ ಜನನ ೨೪-೦೬-೨೦೦೦ ರಂದು ನಾಗಭೂಷಣ ಮತ್ತು ರುಕ್ಮಿಣಿ ಎನ್ನುವವರ ದ್ವಿತೀಯ ಮಗುವಾಗಿ ಬೆಂಗಳೂರಿನ,ಬನ್ನೇರುಘಟ್ಟದಲ್ಲಿರುವ ಅಪೊಲೊ ಆಸ್ಪತ್ರೆಯಲ್ಲಿ ಜನಿಸಿದೆ.ನನಗೆ ಒಬ್ಬ ಅಣ್ಣನಿದ್ದಾನೆ ಆತನ ಹೆಸರು ಅಭಿಷೇಕ್ ಗೌಡ. ನನ್ನ ತಂದೆ-ತಾಯಿ ಗಂಡು ಹೆಣ್ಣು ಎನ್ನುವ ಪಕ್ಷಪಾತ ತೋರಿದವರಲ್ಲ, ನಮ್ಮಿಬ್ಬರಿಗು ಸರಿಸಮಾನವಾದ ವಿದ್ಯೆಯನ್ನು ಕೊಡಲೆಂದು ದಿನ-ರಾತ್ರಿ ಶ್ರಮಿಸುತ್ತಿದ್ದಾರೆ.ನಾನು ಓದಿದ್ದು,ಬೆಳದದ್ದು ಎಲ್ಲಾ ಬೆಂಗಳೂರಿನಲ್ಲೆ ಆದ್ದರಿಂದ ನಗರದ ಜೀವನಕ್ಕಿಂತ ನನಗೆ ಹಳ್ಳಿಯ ಜೀವನವೆ ಇಷ್ಟ.
ಆಸಕ್ತಿಯ ಚಟುವಟಿಕೆಗಳು
ಬದಲಾಯಿಸಿನನಗೆ ಯೋಗ, ನೃತ್ಯ ಮಾಡುವುದರಲ್ಲಿ,ಚಿತ್ರ ಬಿಡಿಸುವುದರಲ್ಲಿ ತುಂಬಾ ಆಸಕ್ತಿ.ಚಿಕ್ಕವಳಾಗಿದ್ದಾಗ ಪುಸ್ತಕಗಳೇಂದರೆ ತುಂಬಾ ಇಷ್ಟವಿತ್ತು ಹ್ಯಾರಿ ಪಾಟರ್,ಪಂಚತಂತ್ರದ ಕಥೆಗಳು ಮುಂತಾದವುಗಳ್ಳನ್ನು ಓದುತ್ತಿದ್ದೆ. ನನ್ನ ಜೀವನದ ಮೇಲೆ ಪರಿಣಾಮ ಬೀರಿದ ಒಬ್ಬ ವ್ಯಕ್ತಿ ಎಂದರೆ ಅವರೆ ಮುನಿಬಾ ಮಜ಼ಾರಿ ಆಕೆಯ ಎದೆಗಾರಿಕೆಯ ಬಗ್ಗೆ ಮಾತನಾಡಿದರೆ ಒಂದು ಪುಸ್ತಕವೆ ಬರೆಯಬಹುದು.
ವಿದ್ಯಾಭ್ಯಾಸ
ಬದಲಾಯಿಸಿನಾನು ಸೇಂಟ್ ಮೇರಿನಾಸ್ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿಯವರೆಗಿನ ಶಿಕ್ಷಣವನ್ನು ಮುಗಿಸಿದೆನು.ನನ್ನ ಜೀವನದ ಅತಿ ಮಧುರವಾದ ಕ್ಷಣಗಳು ಯಾವುದು ಎಂದು ಕೇಳಿದರೆ ಅದು ನಾನು ೧೦ನೇ ತರಗತಿಯಲ್ಲಿ ಶೇಕಡ ೯೪.೨೪ ರಷ್ಟು ಫಲಿತಾಂಶವನ್ನು ಪಡೆದು ನನ್ನ ಕುಟುಂಬಕ್ಕೂ ಮತ್ತು ನನ್ನ ಶಾಲೆಗೂ ಹೆಮ್ಮೆಯನ್ನು ತಂದು ಕೊಟ್ಟಿದ್ದು.ಶಾಲಾ ದಿನಗಳು ನನ್ನ ಮೆಚ್ಚಿನ ದಿನಗಳು,ಆ ದಿನಗಳಲ್ಲಿ ಮಾಡಿದ ತುಂಟಾಟಗಳನ್ನು ನೆನಪಿಸಿಕೊಂಡರೆ ಮುಖದಲ್ಲಿ ಮುಗುಳುನಗೆ ಮೂಡದಿರಲು ಸಾಧ್ಯವಿಲ್ಲ.
ಕಾಲೇಜಿನ ದಿನಗಳು
ಬದಲಾಯಿಸಿಶಾಲಾ ಮುಗಿದ ನಂತರ ತಂದೆ-ತಾಯಿಯ ಗೂಡಿನಲ್ಲಿ ಗುಬ್ಬಚ್ಚಿಯಂತೆ ಅಡ್ಡಗಿದ್ದ ನನಗೆ ಜೀವನವನ್ನು ಅನ್ವೇಷಿಸುವ ಅವಕಾಶ ಸಿಕ್ಕಿದ್ದು ಕಾಲೇಜಿಗೆ ಸೇರುವ ಮೂಲಕ.ನಾನು ಕ್ರೈಸ್ಟ್ ಜೂನಿಯರ್ ಕಾಲೆಜಿಗೆ ಸೇರಿಕೊಂಡೆನು,ಕಾಲೇಜಿನಲ್ಲಿ ಒಳ್ಳೆಯ ಸ್ನೇಹಿತರು ಸಿಕ್ಕರು,ನನ್ನ ಆಸಕ್ತಿಯ ಕ್ಷೇತ್ರ ಯಾವುದು ಎಂದು ಕಂಡುಕೊಳ್ಳುವಲ್ಲಿ ಕಾಲೇಜು ದಿನಗಳು ಬಹಳ ಸಹಾಯ ಮಾಡಿತು.ಕಾಲೇಜಿಗೆ ಸೇರಿದ ನಂತರವೇ ನನಗೆ ಬೆಂಗಳೂರಿನ ಪರಿಚಯವಾದದ್ದು ಎನ್ನುವುದರಲ್ಲಿ ಹಿಂಜರಿಕೆ ಇಲ್ಲ, ಏಕೆಂದರೆ ದಿನನಿತ್ಯ ಸರ್ಕಾರಿ ಬಸ್ಸಿನಲ್ಲಿ ಸಂಚರಿಸುವ ಮೂಲಕ ಬೆಂಗಳೂರಿನ ಟ್ರಾಫಿಕ್ ಜಾಮ್, ಬೇರೆ ಬೇರೆ ವ್ಯಕ್ತಿತ್ವವುಳ್ಳ ಜನರ ಪರಿಚಯವಾಯಿತು.ದ್ವಿತೀಯ ಪಿ.ಯು.ಸಿ ಯಲ್ಲೂ ಒಳ್ಳೆಯ ಅಂಕಗಳು ದೊರೆಯಿತು.
ಕ್ರೈಸ್ಟ್ ಯೂನಿವರ್ಸಿಟಿಯಲ್ಲಿನ ಅನುಭವ
ಬದಲಾಯಿಸಿಪಿ.ಯು. ಮುಗಿದ ನಂತರ ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಪ್ರವೇಶ ದೊರೆಯಿತು. ಪ್ರತಿಯೊಂದು ಉಪನ್ಯಾಸಕ, ಉಪನ್ಯಾಸಕಿಯರ ಮಾತು ಕೂಡ ಪ್ರೆರಣೀಯ,ನನ್ನ ಜೀವನವನ್ನ ಬದಲಾಯಿಸಿದ ಘಟ್ಟ ಎಂದೆ ಹೇಳಬಹುದು. ಈ ಹಿಂದಿನ ೬ ತಿಂಗಳುಗಳಲ್ಲಿ ನನ್ನ ಮುಂದೆ ಬಹಳಷ್ಟು ಅವಕಾಶಗಳು ಬಂದವು,ಅವೆಲ್ಲವನ್ನು ಶ್ರದ್ದೆ ಮತ್ತು ನಿಷ್ಟೆಯಿಂದ ಸ್ವೀಕರಿಸಿ ಮುಂದೆ ಸಾಗುತ್ತಿದ್ದೆನೆ, ಭಾಷಾ ಉತ್ಸವದಲ್ಲಿ, ನಮ್ಮ ನಾಡಿನ ಸೊಗಸಾದ ಜನಪದ ಗೀತೆಗೆ ಸಾವಿರಾರು ಜನರ ಮುಂದೆ ನರ್ತಿಸುವ ಅವಕಾಶ ಸಿಕ್ಕಿತು,೧೦ ಕಿ.ಮಿ.ಮ್ಯಾರಥಾನ್ ನಲ್ಲಿ ಭಾಗವಹಿಸಿದೆನು.ಪುಸ್ತಕದ ವಿದ್ಯೆಯಲ್ಲದೆ,ಜೀವನ ನಡೆಸಲು ಪ್ರಪಂಚದ ತಿಳಿವಳಿಕೆ ಮುಖ್ಯ ಎನ್ನುವುದನ್ನು ಅರಿವಾಯಿತು.ಇಲ್ಲಿಯವರೆಗು ನನ್ನ ಜೀವನದಲ್ಲಿ ಅಷ್ಟೊಂದು ಅಡೆ-ತಡೆಗಳು ಎದುರಾಗದಿದ್ದರು,ಮುಂದೆ ಬರುವ ಕಷ್ಟಗಳ್ಳನ್ನು ಎದುರಿಸುವ ಛಲ ನನ್ನಲ್ಲಿ ಇದೆ.
ಮುಂದಿನ ಗುರಿ
ಬದಲಾಯಿಸಿಮುಂದೆ ಚಾರ್ಟರ್ಡ್ ಅಕೌಂಟೆಂಟ್(ಸಿ.ಎ.) ಆಗಬೇಕು ಎನ್ನುವ ಗುರಿ ಇದೆ.
ಧನ್ಯವಾದಗಳು...