ಸದಸ್ಯ:ಅನಿಲ್ ಗುಮ್ಮಘಟ್ಟ/ನನ್ನ ಪ್ರಯೋಗಪುಟ

ಡಾ.ರಾಜ್ ಕುಮಾರ್

ಪಾವಗಡ ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಪಾವಗಡ ತಾಲ್ಲೂಕು ಕೇಂದ್ರವಾಗಿದೆ. ಆಂಧ್ರದ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಭೌಗೋಳಿಕವಾಗಿ ಚಿತ್ರದುರ್ಗ ಜಿಲ್ಲೆಗೆ ಸೇರಿಕೊಂಡಿದ್ದರೂ, ರಾಜಕೀಯವಾಗಿ ತುಮಕೂರು ಜಿಲ್ಲ್ಗೆಗೆ ಸೇರುತ್ತದೆ. ಮಳೆಯ ಅಭಾವದಿಂದ ಇಲ್ಲಿ ಕುಡಿಯುವ ನೀರಿಗೆ ಬಹಳ ತೊಂದರೆ ಇದೆ. ಇಲ್ಲಿನ ಬಹು ಮುಖ್ಯ ಬೆಳೆ ನೆಲಗಡಲೆಯಾಗಿದ್ದು, ಮಳೆಯ ಮೇಲೆ ಅವಲಂಬಿತವಾಗಿದೆ. ಪಟ್ಟಣವು ಬೆಟ್ಟದ ತಪ್ಪಲಲ್ಲಿದ್ದು, ಸುತ್ತಲೂ ಬೆಟ್ಟ ಪ್ರದೇಶಗಳಿಂದ ಕೂಡಿದೆ. ಹಿಂದೆ ಈ ಪ್ರದೇಶವೆಲ್ಲಾ ಗೋಂಡಾರಣ್ಯಕ್ಕೆ ಸೇರಿತ್ತೆಂದು, ಪುರಾಣದಲ್ಲಿ ಉಲ್ಲೇಖನವಿದೆ. ಪಾವಗಡ ಈ ಹೆಸರು ಬರಲು ಇಲ್ಲಿನ ಬೆಟ್ಟವು ಹಾವಿನ ಆಕಾರದಲ್ಲಿ ಇರುವುದೇ ಕಾರಣವೆಂದು ತಿಳಿದು ಬರುತ್ತದೆ

    ಹಿಂದೆ ಇದಕ್ಕೆ 'ಪಾಮುಕೊಂಡ' ಎಂದು ಹೆಸರಿದ್ದು ನಂತರ ಪಾವುಕೊಂಡ>ಪಾವುಕೊಡವಾಗಿ ಈಗ ಪಾವಗಡ ಆಗಿದೆ. ನಗರದಲ್ಲಿ ಶನಿ ಮಹಾತ್ಮ ದೇವರ ದೇವಸ್ಥಾನವಿದ್ದು ಸುತ್ತಮುತ್ತಲೂ ಬಹಳ ಪ್ರಸಿದ್ಧಿ ಪಡೆದಿದೆ.

ಮೂಲಭೂತ ಸಮಸ್ಯೆಗಳು

ಬದಲಾಯಿಸಿ

ನೀರಿಗಾಗಿ ಪರಿಪಾಟಲು ಹೌದು ಈ ತಾಲೂಕಿನ ಉದ್ದಗಲಕ್ಕೂ ಸಿಗೋದು ಉಪ್ಪು ನೀರು. ಅದು ಫ್ಲೋರೈಡ್ ಮಿಶ್ರಿತ ನೀರು. ನೀರಿಗಾಗಿ ಪರಿತಪಿಸುವ ಇವರು ಇಲ್ಲಿ ಸಿಗುವ ಫ್ಲೋರೈಡ್ ನೀರನ್ನೇ ಕುಡಿದು ಬದುಕು ದೂಡುತ್ತಿದ್ದಾರೆ. ಹಾಗಾಗಿ ಇಲ್ಲಿನ ಬಹುಪಾಲು ಜನ ಫ್ಲೋರೈಡ್​ ಪೀಡಿತರಾಗಿದ್ದಾರೆ. ಪಾವಗಡ ತಾಲೂಕಿನಲ್ಲಿ ಕಳೆದ ಎರಡು ದಶಕಗಳಿಂದ ಫ್ಲೋರೈಡ್‌ಯುಕ್ತ ನೀರು ಸೇವಿಸಿ ಹಲವರು ವಿವಿಧ ರೋಗಗಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇಲ್ಲಿ ಯಾವುದೇ ನದಿ ಮತ್ತು ಕಾಲುವೆಯ ಸಂಪರ್ಕವಿಲ್ಲ. ಹಾಗಾಗಿ ಭೂಮಿಯನ್ನು ಕೊರೆದು ಕೊರೆದು ಬೋರ್ ಹಾಕಿಸಿಕೊಳ್ಳಲಾಗುತ್ತಿದೆ. ಇದರಿಂದ ಅಂತರ್ಜಲದ ಮಟ್ಟದಲ್ಲಿ ಕುಸಿತ ಕಂಡು ಬಂದು, ಅದು ಗಿಡಮರಗಳ ಉಳಿವಿಗೂ ಕುತ್ತಾಗಿದೆ. ಬಿರುಬಿಸಿಲಿಗೆ ಇದು ಹೆಸರಾಗಿದ್ದು, ರೈತರ ಬೆಳೆ ಮಳೆಯನ್ನೇ ಅವಲಂಬಿಸಿದೆ. ಕುಡಿಯುವ ನೀರಿಗಾಗಿ ಆಗ್ರಹಿಸಿ ಫೆಬ್ರವರಿ 8, 2012ರಂದು ಪಾವಗಡದಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಮಾಡಲಾಗಿತ್ತು. ಆದ್ರೆ ಪಾದಯಾತ್ರೆಗೆ ಸಿಕ್ಕಿದ್ದು ಬರಿ ಭರವಸೆ ಮಾತ್ರ.

  ರಾಜಕೀಯವಾಗಿಯೂ ಇದು ಬಹಳ ಹಿಂದೂಳಿದಿದ್ದು, ಯಾವುದೇ ರಾಜಕೀಯ ನಾಯಕರೂ ಈ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸಲೇ ಇಲ್ಲ. 2008ರಲ್ಲಿ ಈ ತಾಲೂಕಿನ ಶಾಸಕ ವೆಂಕಟರಮಣಪ್ಪನವರು ಮೊದಲ ಬಾರಿಗೆ ಮಂತ್ರಿ ಪದವಿ ಅಲಂಕರಿಸಿದ್ದರು. ಆದ್ರೆ ಇವರೆಗೂ ಈ ತಾಲೂಕಿನ ಜನರಿಗೆ ಶಾಶ್ವತ ಕುಡಿಯುವ ನೀರಿನ ಪರಿಹಾರ ಮಾತ್ರ ಸಿಗಲೇ ಇಲ್ಲ. ಐತಿಹಾಸಿಕ ಹಿನ್ನೆಲೆ ಹೊಂದಿರೋ ಈ ತಾಲೂಕಿಗೆ ಯಾವ ಮುಖ್ಯಮಂತ್ರಿಯೂ ಭೇಟಿ ಕೊಡುವುದಿಲ್ಲ. ಯಾಕೆಂದರೆ ಇಲ್ಲಿಗೆ ಬಂದರೆ ಶನಿ ವಕ್ಕರಿಸುತ್ತದೆ ಮತ್ತು ಅಧಿಕಾರ ಕಳೆದುಕೊಳ್ಳಬೇಕಾಗುತ್ತೆ ಅನ್ನೋದು ಅವರ ನಂಬಿಕೆ. ಈ ಮೊದಲು ಬಂಗಾರಪ್ಪ ಮತ್ತು ಕುಮಾರಸ್ವಾಮಿ ಭೇಟಿ ಕೊಟ್ಟಿದ್ದು ಬಿಟ್ಟರೇ, ಬೇರೆ ಯಾವ ಮುಖ್ಯಮಂತ್ರಿಯೂ ಇಲ್ಲಿಗೆ ಭೇಟಿ ಕೊಟ್ಟಿಲ್ಲ. ಹಾಗಾಗಿ ಈ ತಾಲೂಕು ರಿಮೋಟ್ ಆಗೇ ಉಳಿದಿದೆ.


  1. ರಾಜಕೀಯ
    1. ನೀರಿಗಾಗಿ
        1. ಬೋರ್
  2. ಆನಿಲ್
        1. ಗುಮ್ಮಘಟ್ಱ