ಸುಸ್ವಾಗತ!!ಸಂಪಾದಿಸಿ

ನಮಸ್ಕಾರ Pragsrao,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಅಭಿರಾಮ ೧೮:೧೪, ೨೪ ಮಾರ್ಚ್ ೨೦೧೨ (UTC)

ಅಂತರರಾಷ್ತ್ರೀಯ - ಅಂತಾರಾಷ್ಟ್ರೀಯ ಬಗ್ಗೆಸಂಪಾದಿಸಿ

ನಮಸ್ಕಾರ. ಅಂತರರಾಷ್ಟ್ರೀಯ ಬ್ಯಾಂಕ್‌ ಖಾತೆ ಸಂಖ್ಯೆ‎ ಈ ಲೇಖನದಲ್ಲಿ ನೀವು ಅಂತರರಾಷ್ತ್ರೀಯ ಎಂಬ ಪದವನ್ನು ಅಂತಾರಾಷ್ಟ್ರೀಯ ಎಂದು ಬದಲಾಯಿಸಿದ್ದೀರಿ. ಆದರೆ inter-national ಎಂಬ ಪದಕ್ಕೆ ಅಂತರ-ರಾಷ್ಟ್ರೀಯ ಪದವೇ ಸಮಂಜಸ ಎಂಬುದು ನನ್ನ ಅನಿಸಿಕೆ. ಅಂತಾರಾಷ್ಟ್ರೀಯ ಎಂಬ ಪದದ ಅರ್ಥ ತಿಳಿಯುತ್ತಿಲ್ಲ. ಕೆಲವು ಕಡೆ ಅಂತರಾಷ್ಟ್ರೀಯ ಎಂದು ಉಪಯೋಗಿಸುತ್ತಾರಾದರೂ ಅದು "intra" national ಆಗುತ್ತದೆ. ~ ಹರೀಶ / ಚರ್ಚೆ / ಕಾಣಿಕೆಗಳು ೧೯:೩೯, ೨೮ ಮಾರ್ಚ್ ೨೦೧೨ (UTC)

ಶ್ರೀ ಹರೀಶರಿಗೆ ನಮಸ್ಕಾರಗಳು, ನಿಮ್ಮ ಪಶ್ನೆ ಸಮಂಜಸವಾಗಿಯೇ ಇದೆ.

ಅಂತರರಾಷ್ಟ್ರೀಯ ಪದದ ಬಳಕೆ ಕನ್ನಡದಲ್ಲಿ ಹಾಸು ಹೊಕ್ಕ್ಕಾಗಿದೆ. ಹಾಗೆಯೇ, ಹಲವೆಡೆ ಅಂತರ್ ರಾಷ್ಟ್ರೀಯ ರೂಪದಲ್ಲಿ ಬಳಕೆಯಲ್ಲಿದೆ. ಇವೆರಡು ಕೂದ ತಪ್ಪು ರೂಪಗಳು. ಸಂಸ್ಕೃತದಲ್ಲಿ, ವಿಸರ್ಗ ಸಂಧಿ ಎಂಬ ಒಂದು ವ್ಯಾಕರಣ ಕ್ರಿಯೆಯಿದೆ. ಸಂಧಿಯಾಗುವಾಗ, ರೇಫಕ್ಕೆ ರಕಾರವೇ ಪರವಾದರೆ ರೇಫವು ಲೋಪಗೊಳ್ಳುತ್ತದೆ. ಅಲ್ಲದೆ ಈ ರೇಫದ ಹಿಂದೆ ಹ್ರಸ್ವಸ್ವರವಿದ್ದರೆ ಅದು ದೀರ್ಘವಾಗುತ್ತದೆ. ಇದು ವ್ಯಾಕರಣ ನಿಯಮ. ಇದರ ಪ್ರಕಾರ ಅಂತರ್ + ರಾಷ್ಟ್ರೀಯ ಎನ್ನುವುದು ಅಂತಾರಾಷ್ಟ್ರೀಯ ಎಂದಾಗಬೇಕು. ಇದೇ ರೀತಿ, ಪುನರ್ + ರಚನೆ ಎನ್ನುವುದು ಪುನಾರಚನೆ ಎಂದಾಗಬೇಕು.