ಸದಸ್ಯರ ಚರ್ಚೆಪುಟ:Shushruth/archive02
ಅನುಮೋದನೆಯ ಬಗ್ಗೆ ಪ್ರಶ್ನೆ
ಬದಲಾಯಿಸಿಶುಶ್ರುತ ಅವರೆ,
ನಾನು ಮಾಡುತ್ತಿರುವ ಗ್ರಹ ಪುಟಗಳ ಅನುವಾದದ ಬಗ್ಗೆ ನಿಮ್ಮ ಪ್ರೋತ್ಸಾಹದಾಯಕ ಮಾತುಗಳಿಗೆ ಧನ್ಯವಾದಗಳು. ಈ ಬಗ್ಗೆ ನನಲ್ಲೊಂದು ಪ್ರಶ್ನೆ ಇದೆ. ನಾನು ಗ್ರಹದ ಪುಟವನ್ನು ತಿಂಗಳ ಪುಟವನ್ನಗಿ ಆಯ್ಕೆ ಮಾಡಲು ಹೇಗೆ nominate ಮಾಡಬಹುದು? ಮುಖ್ಯಪುಟದಲ್ಲಿ ಒಂದು "ಮುಂದಿನ ಪುಟವನ್ನು ಆಯ್ಕೆ ಮಾಡಿ" ಎಂಬ ಸಂಪರ್ಕವಿದೆ. ನೀವು ಅಲ್ಲಿ ಪ್ರತಿಪಾದಿಸಿರುವಂತೆ ನಾನೂ ಕೆಲವು ಸಾಲುಗಳನ್ನು ಸೇರಿಸಲೋ ಅಥವಾ nominationಗಾಗಿ ನಾನು ಬೇರೇನಾದರೂ ಮಾಡಬೇಕೇ?
ನಿಮ್ಮ ಸಹಾಯ ಮತ್ತು ಆಸಕ್ತಿಗಾಗಿ ಧನ್ಯವಾದಗಳು.
Dronemvp ೨೦:೩೬, ೧೯ December ೨೦೦೬ (UTC)
ಶುಶ್ರುತ ರವರೆ,
ನಾನು ಹರಿಪ್ರಸಾದ್ ರವರಿಗೆ ಬರೆದಿದ್ದೆ. ಸಂಪದ ಸೈಟಿನಲ್ಲಿ ನನ್ನ ಅನೇಕ ಲೇಖನಗಳು ಪ್ರಕಟವಾಗಿವೆ. ನನಗೆ ವಿಕಿಪೀಡಿಯದ ಬಗ್ಗೆ ಹೆಚ್ಚಿಗೆ ತಿಳಿದಿಲ್ಲ. ಮಲ್ಲಾಡಿಹಳ್ಳಿ ಸ್ವಾಮಿಗಳ ಕನ್ನಡದ ವರ್ಷನ್ ನನ್ನದು, ಮುಗಿದಿದೆ. ಹೆಚ್ಚಿಗೆ ಏನೂ ಸೇರಿಸುವುದಿಲ್ಲ. ದಯಮಾಡಿ ಕೆಲವು ’ಫಾರ್ಮೇಟ” ಉಪಯೋಗಿಸಿ ನನ್ನ ಲೇಖನವನ್ನು ಪ್ರಕಟಿಸಿ.ಆ ಲೇಖನದ ಸಲುವಾಗಿಯೇ ನಾನು ಮಲ್ಲಾಡಿಹಳ್ಳಿಗೆ ಹೋಗಿ ಪುಸ್ತಕವನ್ನು ಖರೀದಿಸಿ, ಕೆಲವು ಮುಖ್ಯ ವಿಷಯಗಳನ್ನು ಗೆಳೆಯರಿಂದ ಶೇಖರಿಸಿ ಬರೆದಿದ್ದೇನೆ. ದಯಮಾಡಿ ಪ್ರಕಟಿಸಿ. ಧನ್ಯವಾದಗಳು. ಇಂಗ್ಲೀಷಿನ ವರ್ಷನ್ ನೋಡಿದೆ. ಅದರಲ್ಲಿ ಹಲವು ಸಂಗತಿಗಳು ಸಮರ್ಪಕವಾಗಿಲ್ಲ. ತಿದ್ದಿದ್ದೇನೆ.
-ರಾಧಾತನಯ. ಶುಶ್ರುತ ರವರೆ, ನಿಮ್ಮನ್ನು ನಾನು ಪ್ರಾರ್ಥಿಸಿಕೊಂಡಾಗಲು ನೀವು ಇನ್ನೂ ಉತ್ತರಕೊಟ್ಟಿಲ್ಲ. ಏಕೆ ಎಂದು ತಿಳಿಯಲಿಲ್ಲ. ನನ್ನ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇದನ್ನು ಬರೆದು ಬಹಳ ಸಮಯವಾಯಿತು. ನನಗೆ ಇ-ಮೈಲ್ ಮಾಡಿ ತಿಳಿಸಿ; ಸಮಸ್ಯೆ ಏನು ಎಂದು. ನನ್ನ ಇ-ಮೈಲ್ ವಿಳಾಸ ಹೀಗಿದೆ : hrl.venkatesh@gmail.com
ನಿಮ್ಮ ಪತ್ರದ ಉತ್ತರಕ್ಕೆ ಕಾಯುತ್ತಿರುವ, -ರಾಧಾತನಯ.
ಧನ್ಯವಾದಗಳು
ಬದಲಾಯಿಸಿನಮಸ್ಕಾರ.ಇಂದಿನ ಹಾಗೂ ಮುಂದಿನ ಜನತೆಗೆ ಅಚ್ಚ,ಸ್ವಚ್ಛ ಕನ್ನಡದ ಪರಿಚಯವಾಗಬೇಕೆಂಬುದು ನನ್ನ ಆಶಯ.ಕನ್ನಡ ಸಮುದಾಯವನ್ನು ಕಟ್ಟುವ ತಮ್ಮ ಕೆಲಸಕ್ಕೆ ನನ್ನ ಅಳಿಲುಸೇವೆಗೆ ತಮ್ಮಗಳಿಂದ ಸಿಗುತ್ತಿರುವ ಪ್ರೋತ್ಸಾಹಕ್ಕೆ ನಾನು ಆಭಾರಿ.--Raja bv ೧೦:೧೬, ೨೨ December ೨೦೦೬ (UTC)
ಬಿ ವಿ ಕಾರಂತ
ಬದಲಾಯಿಸಿWhile browsing through ಬೇಕಾಗಿರುವ ಪುಟಗಳು found ಬಿ ವಿ ಕಾರಂತ in red link. I remembered , there is already an article on ಬಿ ವಿ ಕಾರಂತ . Found that article and corrected all the red links accordingly.
Please go ahead and correct if there is any mistake in the spelling. Or you can tell me so that I can correct them myself.
ವಂದನೆಗಳು
Narayana ೦೩:೨೦, ೨೪ December ೨೦೦೬ (UTC)
duplicate pages
ಬದಲಾಯಿಸಿನಮಸ್ಕಾರ ಶುಶ್ರತ ಅವರೇ,
ತಾವು ನನ್ನ ಚರ್ಚಾ ಪುಟದಲ್ಲಿ ರಂಜಾನ್ ಮತ್ತು ರಮಾದಾನ್ ಹಾಗೂ ವರ್ಗ:ಇಸ್ಲಾಂ ಮತ್ತು ವರ್ಗ:ಇಸ್ಲಾಂ ಧರ್ಮ ಲೇಖನಗಳು Duplicate ಆಗಿರುವ ಕುರಿತು ನನ್ನ ಗಮನ ಸೆಳೆದದ್ದಕ್ಕೆ ಧನ್ಯವಾದಗಳು.
ಸದರಿ ಲೇಖನಗಳ ಮಾಹಿತಿಯನ್ನು ಅತ್ಯಂತ ಸೂಕ್ತ ಶಿರೋನಾಮೆಯುಳ್ಳ ಲೇಖನದಲ್ಲಿ ಅಳವಡಿಸಿ, ಉಳಿದ ಲೇಖನದಲ್ಲಿ ಮಾಹಿತಿಯೊಳಗೊಂಡ ಪುಟಕ್ಕೆ ಸಂಪರ್ಕ (ರೀಡೈರೈಕ್ಟ್) ಕಲ್ಪಿಸಬಹುದು.
ಇದರ ಬಗ್ಗೆ ನೀವೇನು ಅಂತೀರಿ?. --ರಾಜಾ ಹುಸೇನ್ ೦೬:೧೬, ೨೬ December ೨೦೦೬ (UTC)
ಮಂಗಳ ಗ್ರಹ
ಬದಲಾಯಿಸಿ- ಶುಶ್ರುತ ಅವರೆ,
- ಲೇಖನದಲ್ಲಿ ಕನ್ನಡ ಅಂಕಿಗಳನ್ನು ನಾನು ಬಳಸದಿರುವುದಕ್ಕೆ ಒಂದೇ ವೈಯಕ್ತಿಕ ಕಾರಣವೆಂದರೆ ನನಗೆ ಇಂಗ್ಲಿಷ್ ಅಂಕಿಗಳನ್ನು ಓದಲು ಸುಲಭವೆನ್ನಿಸುತ್ತದೆ. ಬೇರೆ ಭಾರತೀಯ ಭಾಷೆಗಳ ಲೇಖನದಲ್ಲಿ ಅವರದೇ ಅಂಕಿಗಳನ್ನು ಉಪಯೋಗಿಸಿರುವುದನ್ನು ನಾನು ನೋಡಿದ್ದೇನೆ. ಆದರೆ, ಕನ್ನಡ ಅಂಕಿಗಳ ಬಳಕೆಯ ಬಗ್ಗೆ ವಿಕಿಪೀಡಿಯಾ ಅಧಿಕೃತವಾಗಿ ಯಾವುದೇ policyಯನ್ನು ಹೊಂದಿದೆಯೇ ಅಥವಾ ವಿಕಿಪೀಡಿಯಾ ಹಿರಿಯರಲ್ಲಿ ಈ ಬಗ್ಗೆ ಅನಧಿಕೃತವಾದ ಸಮ್ಮತವಿದೆಯೇ ಎಂದು ನನಗೆ ಗೊತ್ತಿಲ್ಲ. ನಾನು ಇನ್ನು ಮುಂದೆಯೂ ಕೆಲವು ಲೇಖನಗಳನ್ನು ಆಂಗ್ಲದಿಂದ ಅನುವಾದ ಮಾಡುವ ಉದ್ದೇಶವನ್ನು ಹೊಂದಿರುವುದರಿಂದ, ಈ ವಿಷಯದ ಬಗ್ಗೆ ತಿಳುವಳಿಕೆಯು ನನಗೆ ಸಹಾಯಕಾರಿಯಾಗುತ್ತದೆ. ಈ ಬಗ್ಗೆ ನಿಮಗೇನಾದರೂ ಗೊತ್ತಿದ್ದರೆ ದಯವಿಟ್ಟು ನನಗೆ ತಿಳಿಸುವಿರಾ?
- ಕೆಂಪು ಸಂಪರ್ಕಗಳಿಂದ ಸಂಪಾದಕರಿಗೆ ಹುಮ್ಮಸ್ಸು ಬಂದು ಹೊಸ ಲೇಖನಗಳನ್ನು ಬರೆಯುವ ಬಗ್ಗೆ ನಿಮ್ಮ ಅಭಿಪ್ರಾಯವು ನನಗೆ ಬಹಳ ಸಮಂಜಸವೆನ್ನಿಸಿತು. ಆದರೆ, ಪ್ರತಿ ಸಂಪರ್ಕದ ನಂತರವೂ bracketನಲ್ಲಿ ಆಂಗ್ಲ ಪದದ ಸಂಪರ್ಕವನ್ನು ಹಾಕಿದರೆ, ಲೇಖನದ ನೋಟ ಕೆಟ್ಟುಹೋಗುತ್ತದೇನೋ ಎಂದು ನಾನು ಯೋಚಿಸುತ್ತಿದ್ದೇನೆ. ನನಗೆ ಬಂದ ಇನ್ನೊಂದು ವಿಚಾರವೆಂದರೆ, ಎಲ್ಲಾ ಸಂಪರ್ಕಗಳನ್ನೂ redlinkಗೆ ಬದಲಾಯಿಸುವ ಬದಲು, ಕೆಲವು ಮೂಲಭೂತ ಸಂಪರ್ಕಗಳನ್ನು ಮಾತ್ರ ಆ ರೀತಿಯಲ್ಲಿ ಬದಲಾಯಿಸಿ, ಮಿಕ್ಕ ಕೆಲವು ಸಣ್ಣ ಪುಟ್ಟ ಲೇಖನಗಳ ಸಂಪರ್ಕಗಳನ್ನು english articlesಗೇ ಇಟ್ಟುಕೊಳ್ಳಬಹುದೇನೋ ಅಂತ.
- ಕೊನೆಯದಾಗಿ, ನೀವು ಅನುಮಾನಿಸಿದಂತೆ, ಜನವರಿ 1ಕ್ಕೆ ಮುಂಚೆ ನನಗೆ ಅಂತರ್ಜಾಲವನ್ನು ಉಪಯೋಗಿಸಲು ಆಗುವುದಿಲ್ಲ. ಆದ್ದರಿಂದ, ತಿಂಗಳ ಕೊನೆಯಲ್ಲಿ ನೀವೇ ಮುಖ್ಯಪುಟದಿಂದ ಮಂಗಳದ ಲೇಖನಕ್ಕೆ ಸಂಪರ್ಕವನ್ನು ಕಲ್ಪಿಸುವಿರಾ? ನಿಮ್ಮ ಮೇಲಿನೆರಡು ಸಲಹೆಗಳ ಬಗ್ಗೆ, ನಾನು ಜನವರಿಯಲ್ಲಿ ಮರಳಿ ಬಂದಮೇಲೆ ಇವುಗಳನ್ನು ಬದಲಾಯಿಸಬಹುದು ಎಂದು ನಿಮಗನ್ನಿಸಿದರೆ ನಾನೇ ಬದಲಾವಣೆಗಳನ್ನು ಮಾಡುತ್ತೇನೆ. ಆದರೆ, ಅಷ್ಟು ಹೊತ್ತಿಗೆ ಬಹಳ ತಡವಾಗುತ್ತದೆಂದು ಎನಿಸಿದರೆ, ಮಂಗಳ ಗ್ರಹದ ಪುಟದಲ್ಲಿ ನೀವೇ ದಯವಿಟ್ಟು ಬದಲಾವಣೆಗಳನ್ನ್ನು ಮಾಡಿ.
ನಿಮ್ಮ ಸಹಾಯಕ್ಕಾಗಿ ನನ್ನ ಧನ್ಯವಾದಗಳು.
-Dronemvp ೨೨:೦೮, ೨೭ December ೨೦೦೬ (UTC)
ಮಂಗಳ ಮತ್ತು image upload
ಬದಲಾಯಿಸಿಶುಶ್ರುತ ಅವರೆ:
- ನಾವು ಡಿಸೆಂಬರ್‌ನಲ್ಲಿ ಮಾಡಿದ ಮಾತುಕತೆಗಳ ಆಧಾರದ ಮೇಲೆ, ಮಂಗಳ (ಗ್ರಹ) ಲೇಖನದಲ್ಲಿ ನಾನು ಕೆಲವು ಬದಲಾವಣೆಗಳನ್ನು ಮಾಡಿದ್ದೇನೆ:
- ಕನ್ನಡ ಅಂಕಿಗಳು: ಮುಖ್ಯ ಲೇಖನದಲ್ಲಿ ಮತ್ತು planet infobox templateನಲ್ಲಿ ಬಹುತೇಕ ಎಲ್ಲ ಅಂಕಿಗಳನ್ನೂ ಕನ್ನಡಕ್ಕೆ ಬದಲಾಯಿಸಿದ್ದೇನೆ. ಆದರೆ, ಕೆಲವು ರಾಸಾಯನಿಕ ಸೂತ್ರಗಳು ಮತ್ತು ಉಲ್ಲೇಖಗಳಲ್ಲಿ ಕಂಡುಬರುವ ಅಂಕಿಗಳನ್ನು englishನಲ್ಲೇ ಉಳಿಸಿದ್ದೇನೆ. (ಉದಾ: H2O).
- ಕನ್ನಡ ವಿಕಿಗೆ ಸಂಪರ್ಕಗಳು: ಕೆಲವು ಸಣ್ಣಪುಟ್ಟ ಲೇಖನಗಳನ್ನು ಬಿಟ್ಟು, ಉಳಿದ linkಗಳನ್ನು ಕನ್ನಡ ವಿಕಿಗೆ ಬದಲಾಯಿಸಿ, ನನಗೆ ಸಮಂಜಸವೆನ್ನಿಸಿದ ಕಡೆಗಳಲ್ಲಿ bracket ಹಾಕಿ english wikiಗೆ ಸಂಪರ್ಕ ಕಲ್ಪಿಸಿದ್ದೇನೆ.
- infoboxನ ಸಂಪರ್ಕಗಳು: infobox ಬಹಳ ಸಂಕ್ಷಿಪ್ತವಾಗಿ format ಆಗಿರುವುದರಿಂದ, ಅದರಲ್ಲಿ bracket ಹಾಕಿ ಪ್ರತ್ಯೇಕವಾಗಿ english wikiಗೆ link ಮಾಡುವಷ್ಟು ಜಾಗ ಇರಲಿಲ್ಲ. ಆದ್ದರಿಂದ ಅವನ್ನು ಸಧ್ಯಕ್ಕೆ ಹಾಗೆಯೇ ಬಿಟ್ಟಿದ್ದೇನೆ.
- ಮಂಗಳ (ಗ್ರಹ)ವನ್ನು ಇನ್ನೊಮ್ಮೆ ನೋಡಿ ನನ್ನ ಬದಲಾವಣೆಗಳ ಬಗ್ಗೆ ನಿಮಗೇನನ್ನಿಸಿತೆಂದು ತಿಳಿಸುವಿರಾ?
- ನಾನು ಇತ್ತೀಚೆಗೆ ವಿಕಿಪೀಡಿಯ ಸಂಪಾದನೆ ಮಾಡಲು ಶುರುಮಾಡಿರುವುದರಿಂದ, ನಿಮ್ಮ ಸಲಹೆಗಳು ನನಗೆ ಬಹಳ ಉಪಯುಕ್ತವಾಗಿವೆ. ಇನ್ನು ಮುಂದೆಯೂ ನಿಮ್ಮಿಂದ ಸಲಹೆ/ಮಾರ್ಗದರ್ಶನಗಳು ನನಗೆ ಸಿಗುತ್ತವೆಂದು ಆಶಿಸುತ್ತೇನೆ. image upload ಬಗ್ಗೆ ನೀವು ಸೂಚಿಸಿರುವ ಮಾಹಿತಿಯನ್ನೂ ನಾನು check ಮಾಡಿ ನೋಡುತ್ತೇನೆ.
ಧನ್ಯವಾದಗಳು
-Dronemvp ೧೬:೩೨, ೫ January ೨೦೦೭ (UTC)
ಧನ್ಯವಾದಗಳು
ಬದಲಾಯಿಸಿನಮಸ್ಕಾರ, ನಿಮ್ಮ ಸಂದೇಶಕ್ಕೆ ನಾನು ಅಭಾರಿ. ನಿಜಜೀವನದಲ್ಲಿ ಕೊಂಚ ವ್ಯಸ್ತನಾಗಿದ್ದೇನೆ. ಸಮಯ ಸಿಕ್ಕಾಗ, ಖಂಡಿತ ಮರಳಿ ಬರುವೆ. ಧನ್ಯವಾದಗಳು! - ಮನ|Mana Talk - Contribs ೨೨:೩೬, ೧೬ January ೨೦೦೭ (UTC)
ಎರಡು ಪ್ರಶ್ನೆಗಳು
ಬದಲಾಯಿಸಿಶುಶ್ರುತ ಅವರೆ,
- ನಾನು ಕೆಲವು ದಿನಗಳ ಹಿಂದೆ ಕ್ಷೀರ ಪಥದ ಬಗ್ಗೆ stub ಲೇಖನವನ್ನು ಶುರುಮಾಡಿದ ಮೇಲೆ ಅದರಲ್ಲಿ ನೀವೂ ಕೆಲವು ಬದಲಾವಣೆಗಳನ್ನು ಮಾಡಿರುವುದನ್ನು ಗಮನಿಸಿದೆ. ಇವುಗಳ ಬಗ್ಗೆ ನನ್ನ ಎರಡು ಪ್ರಶ್ನೆಗಳಿವೆ:
- ನಾನು ಲೇಖನದ ಹೆಸರನ್ನು "ಕ್ಷೀರಪಥ" ಎಂದು ಪ್ರಾರಂಭಿಸಿದ್ದರೂ, "ಕ್ಷೀರ ಪಥ" (ಎರಡು ಪದಗಳ ನಡುವೆ spaceನೊಂದಿಗೆ) ಎಂದು ಹುಡುಕಿದರೂ, ಅದು ಮೊದಲ ಲೇಖನವನ್ನೇ ತೋರಿಸಿ, "Redirected from 'ಕ್ಷೀರಪಥ'" ಎಂದು ಹೇಳುತ್ತದೆ. ನೀವು ಇದನ್ನು ಹೇಗೆ ಮಾಡಿದಿರಿ? ಈ redirection ನನ್ನ ಬೇರೆ ಲೇಖನಗಳಲ್ಲೂ ಉಪಯುಕ್ತವಾಗುತ್ತದೆ. ಆದರೆ ಇದನ್ನು ಹೇಗೆ ಮಾಡುವುದೆಂದು ನನಗೆ ತಿಳಿಯುತ್ತಿಲ್ಲ.
- Inter-wiki linkಗಳನ್ನು ಕಲ್ಪಿಸಲು ನಿಮ್ಮ ಹತ್ತಿರ ಸುಲಭವಾಗಿ ಉಪಯೋಗಿಸಬಹುದಾದಂತಹ script ಏನಾದರೂ ಇದೆಯೆ? ಅಥವಾ ನೀವೂ ಇದನ್ನು manual ಆಗೇ ಮಾಡುತ್ತೀರಾ?
-ಧನ್ಯವಾದಗಳು.
Dronemvp ೦೩:೫೪, ೧೯ January ೨೦೦೭ (UTC)
Thanks
ಬದಲಾಯಿಸಿThanks for the welcome. I have developed an input transliteration for Kannada from my limited knowledge of Kannada here which can be incorporated into Monobook.js (with modifications). If you type in the search box of Nepal Bhasa or edit a page there, you will find output in Devnagari. A similar effect with Kannada script will be observed once the script is enabled. If you people are interested, please let me know about it. Thank you.--Eukesh ೧೬:೪೬, ೧೪ February ೨೦೦೭ (UTC)
Could you please write a stub http://kn.wikipedia.org/wiki/Kur%C3%B3w - just a few sentences based on http://en.wikipedia.org/wiki/Kur%C3%B3w ? Only 2-5 sentences enough. Please.
PS. Article about Kurów is already on 133 languages. Pietras1988 ೨೧:೪೬, ೬ March ೨೦೦೭ (UTC)
Splitting the moon article lead content
ಬದಲಾಯಿಸಿHi,
- I thought that your suggestion of splitting the lead content to make future edits easier was very good. I was about the do the same today and noticed that you had already done so :-). Thanks for your help. As per making it the month's article, I am planning to do it around the 30th or the 31st. I am not sure if the main page should reflect next month's article by the 22nd itself (I'm assuming not). Please let me know if I need to change it immediately.
-Dronemvp ೧೭:೪೨, ೨೧ March ೨೦೦೭ (UTC)
ಚಲನಚಿತ್ರ ಪುಟಗಳ ಕೆಲಸ ಕೈಗೆತ್ತಿಕೊಳ್ಳಿ
ಬದಲಾಯಿಸಿಚಲನಚಿತ್ರ ಪುಟಗಳ ಶೀರ್ಷಿಕೆ "ಮುತ್ತು ಒಂದು ಮುತ್ತು", "ಅಳಿಯ ಮನೆ ತೊಳಿಯ" ಎಂದೆಲ್ಲ ಇದ್ದಾಗ ವಿಶ್ವಕೋಶವೊಂದರ ಅಕಾಡೆಮಿಕ್ ಸದಭಿರುಚಿಗೆ ಸರಿಹೊಂದದಂತಾಗುತ್ತದೆಂದು ನನ್ನ ಅನಿಸಿಕೆ. ಆಂಗ್ಲರ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸ ಇರುವಾಗ ವಿಕಿಯ ಸದಭಿರುಚಿ ಕಾಪಾಡಿಕೊಂಡು ಹೋಗಲು ಕೆಲವೆಡೆ ಆಂಗ್ಲ ವಿಕಿಯಂತಾಗದೆ ಹೊಸ ಪದ್ಧತಿಗಳನ್ನವಳಿಡಿಸಿಕೊಂಡು ನಡೆಯುವುದು ಬೇಕೇಬೇಕಾಗುತ್ತದೆ.
ಜೊತೆಗೆ "ಚಲಚ್ಚಿತ್ರ ಚುಟುಕ" ಎಂಬ ಹೊಸ ಟೆಂಪ್ಲೇಟೊಂದನ್ನು ಕ್ರಿಯೇಟ್ ಮಾಡಿರುವೆ. ದಯವಿಟ್ಟು ಅದನ್ನ ಚುಟುಕು ಚಲನಚಿತ್ರ ಪುಟಗಳಿಗೆ ಸೇರಿಸಿ. ಚುಟುಕು ಪುಟಗಳು ಓದುಗನ ಸಂಪಾದನೆಯ ಆಸಕ್ತಿಯನ್ನು ಕಡಿಮೆ ಮಾಡಿಬಿಡುತ್ತದೆ. ಹೋದ ವರುಷ ಮನ ಸೇರಿಸಿದ ಚಲನಚಿತ್ರ ಪುಟಗಳ ಮಹಾಪೂರ ಒಂದಿಷ್ಟೂ ಬೆಳೆಯದಿರುವುದು ಇದಕ್ಕೆ ಪ್ರಮಾಣ. ಹೊಸ ಮಾಹಿತಿ ಓದುತ್ತ, ತನಗೆ ತಿಳಿದುದ್ದನ್ನು ಸೇರಿಸುತ್ತ ಹೋಗುವಂತಹ ಪರಿಸರ ನಿರ್ಮಾಣವಾದಾಗಲೆ ಹೆಚ್ಚಿನ ಸಕ್ರಿಯ ಸದಸ್ಯರು ಹುಟ್ಟಿಕೊಳ್ಳುವುದು. ಕನ್ನಡ ವಿಕಿಪೀಡಿಯದಲ್ಲಿ ನಾನಿಲ್ಲದಿದ್ದ ಸಮಯದಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಂಡು (ನಾನು ಹಲವು ವರ್ಷ ಒಬ್ಬಿಬ್ಬರನ್ನು ಬಿಟ್ಟರೆ ಏಕಾಂಗಿಯಾಗಿ ನಡೆಸಿಕೊಂಡುಬಂದಂತೆ) ನಡೆಸಿಕೊಂಡು ಬಂದಿರುವ ನಿಮಗೆ ಮತ್ತು ಉಳಿದ ಕೆಲವು ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸುತ್ತ ನಿಮಗುಪಯೋಗವಾಗಬಹುದೆಂದು ನನ್ನ ಅನುಭವದಿಂದ ಬಂದ ಅನಿಸಿಕೆಯನ್ನು ತಿಳಿಸಬಯಸುತ್ತೇನೆ. ಹೆಚ್ಚು ಸಕ್ರಿಯ ಸದಸ್ಯರಾಗುವಂತೆ ನೋಡಿಕೊಳ್ಳುವುದರಲ್ಲಿ ಕನ್ನಡ ವಿಕಿಪೀಡಿಯದ ಏಳಿಗೆ ಇದೆ. ಒಬ್ಬಿಬ್ಬರು ಎಷ್ಟು ಮಾಹಿತಿ ಸೇರಿಸಿದರೂ ಅದು (ಐದು ಅಂಕಿ ದಾಟಿದರೂ) ಹೆಚ್ಚು ದೂರ ತೆಗೆದುಕೊಂಡು ಹೋಗುವುದಿಲ್ಲವೆಂಬುದನ್ನು ನಾವುಗಳು ಅರಿತುಕೊಳ್ಳಬೇಕು ಎಂದು ನನಗನಿಸುತ್ತದೆ.
ಉತ್ತರವನ್ನು ಸಾಧ್ಯವಾದರೆ ಇ-ಮೇಯ್ಲ್ ರೂಪದಲ್ಲಿ ನನ್ನ ಸದಸ್ಯ ಪುಟದಿಂದ ಮೇಯ್ಲ್ ಮಾಡಿ. ನಿರ್ವಹಣೆ ಕುರಿತ ಝರೂರತ್ತುಗಳಿದ್ದಲ್ಲಿ feel free to contact me using the same contact form. Cheers, -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೦೫:೪೦, ೨೪ April ೨೦೦೭ (UTC)
- ಇದೇ ಮೇಲಿನ ವಾಕ್ಯಗಳನ್ನು ಮೇಯ್ಲಿಂಗ್ ಲಿಸ್ಟಿಗೂ ಹಾಕಿರುವೆ. ದಯವಿಟ್ಟು ಅಭಿಪ್ರಾಯದೊಂದಿಗೆ ಚರ್ಚೆಯನ್ನು ಮುಂದುವರೆಸಿಕೊಂಡು ಹೋಗಿ. ಸಾಧ್ಯವಾದಷ್ಟು ಹೆಚ್ಚು ಆಸಕ್ತರು ಈ ತರಹದ ಗಮನದಿಂದಲೂ ವಿಕಿಪೀಡಿಯದ ಕಡೆಗೆ ಬಂದು ತೊಡಗಿಕೊಳ್ಳುವಂತಾಗಲಿ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೦೫:೫೨, ೨೪ April ೨೦೦೭ (UTC)